ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ ಕಳೆದ 3 ದಿನಗಳಿಂದ ಕೋವಿಡ್-19 ಒಟ್ಟು ಪ್ರಕರಣಗಳ ಶೇಕಡ 10ಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು
ಪಾಸಿಟಿವ್ ಪ್ರಕರಣಗಳ ದರ 5% ಮಟ್ಟಕ್ಕಿಂತ ಕೆಳಕ್ಕೆ ಇಳಿಕೆ
Posted On:
22 OCT 2020 11:44AM by PIB Bengaluru
ಭಾರತದಲ್ಲಿ ಕೋವಿಡ್-19 ಸಕ್ರಿಯ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಕೆಯ ಸ್ಥಿರ ಪ್ರವೃತ್ತಿ ಯಾವುದೇ ಅಡೆತಡೆ ಇಲ್ಲದೆ ಮುಂದುವರಿದಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು ಕಳೆದ ಮೂರು ದಿನಗಳಿಂದ ದೇಶದ ಒಟ್ಟು ಪ್ರಕರಣಗಳ ಶೇಕಡ 10ರ ಮಟ್ಟದಿಂದ ಕೆಳಕ್ಕೆ ತಗ್ಗಿದೆ. 10 ಪ್ರಕರಣಗಳ ಪೈಕಿ ಒಬ್ಬರಲ್ಲಿ ಮಾತ್ರ ಸೋಂಕು ಹರಡುತ್ತಿರುವುದನ್ನು ಇದು ಸೂಚಿಸುತ್ತಿದೆ.
ಪ್ರಸ್ತುತ, ದೇಶದಲ್ಲಿ ಕಾಣಿಸಿಕೊಂಡಿರುವ ಒಟ್ಟು ಕೊರೊನಾ ಪ್ರಕರಣಗಳ ಪ್ರಮಾಣದ ಶೇಕಡ 9.29ರಷ್ಟು ಮಾತ್ರ ಸಕ್ರಿಯ ಪ್ರಕರಣಗಳು ವರದಿಯಾಗುತ್ತಿದ್ದು, ಅದೀಗ 7,15,812ಕ್ಕೆ ಇಳಿಕೆ ಕಂಡಿದೆ.
ಕೋವಿಡ್-19 ನಿಯಂತ್ರಣದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಗಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಳೆದ ಮೂರು ದಿನಗಳಿಂದ ಶೆಕಡ 5ರ ಮಟ್ಟದಿಂದ ಕೆಳಕ್ಕೆ ಇಳಿದಿದೆ. ಜನರಿಗೆ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯಲು ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಳವಡಿಸಿಕೊಂಡಿರುವ ಕೇಂದ್ರೀಕೃತ ಕಾರ್ಯತಂತ್ರಗಳು ಸಕಾಲಿಕ ಕ್ರಮಗಳೇ ಕಾರಣ. ಪಾಸಿಟಿವ್ ಪ್ರಕರಣಗಳ ಪ್ರಮಾಣ ಇಂದು ಶೇಕಡ 3.8 ದಾಖಲಾಗಿದೆ.
ದೈನಂದಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಕೆಗೆ ಸಕ್ರಿಯ ಪ್ರಕರಣಗಳ ಪ್ರಮಾಣ ತಗ್ಗುತ್ತಿರುವುದೇ ಕಾರಣ. ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 7,15,812ಕ್ಕಿ ಇಳಿಕೆಯಾಗಿದೆ.
ದೇಶಾದ್ಯಂತ ಒಟ್ಟು ಗುಣಮುಖ ಪ್ರಕರಣಗಳ ಸಂಖ್ಯೆ 68,74,518ಕ್ಕೆ ಏರಿಕೆ ಕಂಡಿದೆ. ಸಕ್ರಿಯ ಮತ್ತು ಗುಣಮುಖ ಪ್ರಕರಣಗಳ ನಡುವಿನ ವ್ಯತ್ಯಾಸದಲ್ಲಿ ಸ್ಥಿರ ಏರಿಕೆ ಕಾಣುತ್ತಿದ್ದು, ಅದೀಗ 61,58,706ರಷ್ಟಿದೆ.
ಕಳೆದ 24 ತಾಸುಗಳಲ್ಲಿ 79,415 ಸೋಂಕಿತರು ಚೇತರಿಸಿಕೊಂಡಿದ್ದು, ಒಂದೇ ದಿನದಲ್ಲಿ 55,839 ಹೊಸ ಪ್ರಕರಣಗಳು ದೃಢಪಟ್ಟಿವೆ. ರಾಷ್ಟ್ರೀಯ ಚೇತರಿಕೆ ದರ ಶೇಕಡ 89.20ಕ್ಕೆ ಸುಧಾರಣೆ ಕಂಡಿದೆ.
10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇಕಡ 81ರಷ್ಟು ಹೊಸ ಗುಣಮುಖ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಕಳೆದ 24 ತಾಸುಗಳಲ್ಲಿ 23 ಸಾವಿರಕ್ಕಿಂತ ಅಧಿಕ ಸೋಂಕಿತರು ಗುಣಮುಖರಾಗಿದ್ದಾರೆ.
ದೇಶಾದ್ಯಂತ 24 ತಾಸುಗಳಲ್ಲಿ 55,839 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ.
ಅದರಲ್ಲಿ ಶೇಕಡ 78 ಪ್ರಕರಣಗಳು 10 ರಾಜ್ಯಗಳಿಂದ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ವರದಿಯಾಗಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಗರಿಷ್ಠ ಸಂಖ್ಯೆಯ ಕೊವಿಡ್-19 ಪ್ರಕರಣಗಳು ಪತ್ತೆಯಾಗುತ್ತಿವೆ. ಎರಡೂ ರಾಜ್ಯಗಳಲ್ಲಿ ತಲಾ 8 ಸಾವಿರಕ್ಕಿಂತ ಅಧಿಕ ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಕರ್ನಾಟಕದಲ್ಲಿ 5 ಸಾವಿರಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾಗಿವೆ.
ದೇಶಾದ್ಯಂತ ಕಳೆ 24 ತಾಸುಗಳಲ್ಲಿ 702 ಸಾವುಗಳು ಸಂಭವಿಸಿವೆ. ಅವುಗಳಲ್ಲಿ 82% ಸಾವು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದಲೇ ವರದಿಯಾಗಿದೆ.
ಮಹಾರಾಷ್ಟ್ರ ರಾಜ್ಯವೊಂದರಲ್ಲೇ 25%ಗಿಂತ ಅಧಿಕ ಅಂದರೆ 180 ಸಾವುಗಳು ವರದಿಯಾಗಿವೆ.
***
(Release ID: 1666720)
Visitor Counter : 214
Read this release in:
Punjabi
,
English
,
Urdu
,
Marathi
,
Hindi
,
Bengali
,
Assamese
,
Manipuri
,
Gujarati
,
Odia
,
Tamil
,
Telugu
,
Malayalam