ಸಂಪುಟ

2019-20ನೇ ಸಾಲಿಗೆ ಉತ್ಪಾದಕತೆ ಸಂಯೋಜಿತ ಬೋನಸ್ ಮತ್ತು ಉತ್ಪಾದಕತೆ ಸಂಯೋಜಿತವಾಗದ ಬೋನಸ್ ನೀಡಲು ಕೇಂದ್ರ ಸಂಪುಟ ಅನುಮೋದನೆ

प्रविष्टि तिथि: 21 OCT 2020 3:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ 2019-20ನೇ ಸಾಲಿನಲ್ಲಿ ರೈಲ್ವೆ, ಅಂಚೆ ಇಲಾಖೆ, ರಕ್ಷಣಾ ಇಲಾಖೆ, ಇಪಿಎಫ್ಒ, ಇಎಸ್ಐಸಿ ಮತ್ತಿತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 16.97 ಲಕ್ಷ ನಾನ್-ಗೆಜೆಟೆಡ್ (ಪತ್ರಾಂಕಿತವಲ್ಲದ) ಸಿಬ್ಬಂದಿಗೆ ಉತ್ಪಾದಕತೆ ಸಂಯೋಜಿತ ಬೋನಸ್ (ಪಿ ಎಲ್ ಬಿ) ನೀಡಲು ಅನುಮೋದನೆ ನೀಡಿದೆ. ಇದರಿಂದ ಸಿಬ್ಬಂದಿಗೆ ಅನುಕೂಲವಾಗುವುದಲ್ಲದೆ, 2,791 ಕೋಟಿ ರೂ. ಆರ್ಥಿಕ ಹೊರೆಯಾಗಲಿದೆ.

ನಾನ್ ಪಿ ಎಲ್ ಬಿ ಅಥವಾ ಹಂಗಾಮಿ ಬೋನಸ್ ಅನ್ನು ಕೇಂದ್ರ ಸರ್ಕಾರದ ಪತ್ರಾಂಕಿತವಲ್ಲದ ಸಿಬ್ಬಂದಿಗೆ ನೀಡಲಾಗುವುದು. ಇದರಿಂದ 13.70 ಲಕ್ಷ ಉದ್ಯೋಗಿಗಳಿಗೆ ಲಾಭವಾಗುವುದಲ್ಲದೆ, ಅದಕ್ಕಾಗಿ 946 ಕೋಟಿ ರೂ. ಆರ್ಥಿಕ ಹೊರೆಯಾಗಲಿದೆ.

ಬೋನಸ್ ಪಾವತಿಯಿಂದ ಒಟ್ಟಾರೆ 30.67 ಲಕ್ಷ ಸಿಬ್ಬಂದಿಗೆ ಪ್ರಯೋಜನವಾಗಲಿದೆ ಮತ್ತು ಒಟ್ಟು 3,737 ಕೋಟಿ ರೂ. ಆರ್ಥಿಕ ವೆಚ್ಚವಾಗಲಿದೆ.

ಸಾಮಾನ್ಯವಾಗಿ ದುರ್ಗಾಪೂಜಾ ಅಥವಾ ದಸರಾ ಋತುವಿಗೆ ಮುನ್ನ ನಾನ್-ಗೆಜೆಟೆಡ್ ಸಿಬ್ಬಂದಿಗೆ ಅವರ ಹಿಂದಿನ ವರ್ಷಗಳ ಕಾರ್ಯ ಸಾಧನೆಯನ್ನು ಆಧರಿಸಿ ಬೋನಸ್ ನೀಡಲಾಗುವುದು. ಸರ್ಕಾರ ತನ್ನ ಪತ್ರಾಂಕಿತವಲ್ಲದ ಸಿಬ್ಬಂದಿಗೆ ತಾತ್ಕಾಲಿಕ ಬೋನಸ್ ಮತ್ತು ಉತ್ಪಾದನೆ ಆಧರಿತ ಬೋನಸ್ (ಪಿ ಎಲ್ ಬಿ)ಯನ್ನು ತಕ್ಷಣವೇ ವಿತರಣೆಯಾಗುವಂತೆ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ.

***


(रिलीज़ आईडी: 1666426) आगंतुक पटल : 258
इस विज्ञप्ति को इन भाषाओं में पढ़ें: Malayalam , Odia , Marathi , Telugu , Tamil , Manipuri , Bengali , Assamese , English , Urdu , हिन्दी , Punjabi , Gujarati