ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಆಟಿಕೆ (ಗುಣಮಟ್ಟ ನಿಯಂತ್ರಣ) ಆದೇಶ, 2020 ರ ಅನುಷ್ಠಾನದ ದಿನಾಂಕ ವಿಸ್ತರಣೆ

ಪ್ರಕಟಣಾ ದಿನಾಂಕ: 16 SEP 2020 10:48AM by PIB Bengaluru

ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ,  ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಇಲಾಖೆ (ಡಿಪಿಐಐಟಿ) ಯು  ಆಟಿಕೆ (ಗುಣಮಟ್ಟ ನಿಯಂತ್ರಣ) ಆದೇಶ,  2020 ರ ಅನುಷ್ಠಾನದ ದಿನಾಂಕವನ್ನು 1.9.2020 ರ ಬದಲಿಗೆ 1.1.2021 ಎಂದು ವಿಸ್ತರಿಸಿದೆ.

ಈ ನಿರ್ಧಾರವು ದೇಶೀಯ ತಯಾರಕರಿಗೆಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಮಾನದಂಡಗಳ ಅನುಸರಣೆಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಲು  ನಾಲ್ಕು ತಿಂಗಳ ಹೆಚ್ಚುವರಿ ಸಮಯವನ್ನು ನೀಡುತ್ತದೆ.

***


(ಪ್ರಕಟಣೆ ಐ.ಡಿ.: 1655081) ವಿಸಿಟರ್ ಕೌಂಟರ್ : 247
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , English , Urdu , Marathi , हिन्दी , Manipuri , Punjabi , Gujarati , Odia , Tamil , Telugu , Malayalam