ಪ್ರಧಾನ ಮಂತ್ರಿಯವರ ಕಛೇರಿ

ಎಲ್ಲಾ ಕ್ಷೇತ್ರಗಳಾದ್ಯಂತ ಮೂಲಸೌಕರ್ಯಗಳನ್ನು ಹೆಚ್ಚಿಸಲು ಕೇಂದ್ರ ಸಂಪುಟ ಸಭೆಯಲ್ಲಿ ಐತಿಹಾಸಿಕ ನಿರ್ಧಾರ


ರೂ. 15000 ಕೋಟಿ ಮೊತ್ತದ ಪಶು ಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪನೆ

ಕುಶಿನಗರ ವಿಮಾನ ನಿಲ್ದಾಣವನ್ನು 'ಅಂತರರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಘೋಷಿಸಲಾಗಿದೆ -

ಪ್ರವಾಸೋದ್ಯಮವನ್ನು ಹೆಚ್ಚಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆಯನ್ನು ನೀಡುತ್ತದೆ.

ಮ್ಯಾನ್ಮಾರ್‌ ನಲ್ಲಿ ಶ್ವೇ ತೈಲ ಮತ್ತು ಅನಿಲ ಯೋಜನೆಯ ಮತ್ತಷ್ಟು ಅಭಿವೃದ್ಧಿಗೆ ಹೆಚ್ಚುವರಿ ಹೂಡಿಕೆಯ ಅನುಮೋದನೆ

-  ನೆರೆಹೊರೆಯ ದೇಶಗಳೊಂದಿಗೆ ಇಂಧನ /ಶಕ್ತಿ ಸಂಪರ್ಕ ಸೇತುವೆಗಳನ್ನು ಬಲಪಡಿಸುವುದಕ್ಕೆ ಸಹಾಯವಾಗುತ್ತದೆ

Posted On: 24 JUN 2020 4:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜೂನ್ 24, 2020 ರಂದು ಜರುಗಿದ ಕೇಂದ್ರ ಸಚಿವ ಸಂಪುಟ ಸಭೆಯು ಹಲವಾರು ಮಹತ್ತರ ನಿರ್ಧಾರಗಳನ್ನು ತೆಗೆದುಕೊಂಡಿತು, ಇದು ಸಾಂಕ್ರಾಮಿಕ ಸಮಯದಲ್ಲಿ ನಿರ್ಣಾಯಕವಾದ ಹಲವಾರು ಕ್ಷೇತ್ರಗಳಾದ್ಯಂತ ಮೂಲಸೌಕರ್ಯಗಳಿಗೆ ಅಗತ್ಯವಾದ ಉತ್ತೇಜನವನ್ನು ನೀಡಲಿದೆ.

1 ಪಶುಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪನೆ

 ಹಿನ್ನೆಲೆ:

 ಇತ್ತೀಚೆಗೆ ಘೋಷಿಸಿದ ಆತ್ಮ ನಿರ್ಭಾರ ಭಾರತ್ ಅಭಿಯಾನ್ ಪ್ರೋತ್ಸಾಹಕ ಪ್ಯಾಕೇಜ್ ಅನುಸಾರವಾಗಿ, ರೂ. 15000 ಕೋಟಿ ಮೊತ್ತದ ಪಶು ಸಂಗೋಪನೆ ಮೂಲಸೌಕರ್ಯ ಅಭಿವೃದ್ಧಿ ನಿಧಿ (.ಎಚ್‌..ಡಿ.ಎಫ್) ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ.

ಡೈರಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಹಕಾರಿ ವಲಯದ ಹೂಡಿಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಹಿಂದೆ ರೂ.10,000 ಕೋಟಿಗಳ ಡೈರಿ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ (ಡಿ..ಡಿ.ಎಫ್) ಅನುಮೋದಿಸಿತ್ತು. ಆದಾಗ್ಯೂ, ಎಂ.ಎಸ್‌.ಎಂ..ಗಳು ಮತ್ತು ಖಾಸಗಿ ಕಂಪೆನಿಗಳು ಪಶುಸಂಗೋಪನಾ ಕ್ಷೇತ್ರದಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮೂಲಸೌಕರ್ಯಗಳಲ್ಲಿ ಭಾಗವಹಿಸುವುದಕ್ಕಾಗಿ ಉತ್ತೇಜನ ಮತ್ತು ಪ್ರೋತ್ಸಾಹವನ್ನು ನೀಡಬೇಕಾಗಿದೆ.

 ಡೈರಿ, ಮಾಂಸ ಸಂಸ್ಕರಣೆ ಮತ್ತು ಪಶು ಆಹಾರ ಘಟಕಗಳಲ್ಲಿ ಮೂಲಸೌಕರ್ಯ ಹೂಡಿಕೆಗೆ ಇಂದು .ಎಚ್‌..ಡಿ.ಎಫ್. ಅನುಮೋದಿಸಿದ ಮೊತ್ತವು ಉತ್ತೇಜನ ನೀಡಲಿದೆ. ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳು, ರೈತ ಉತ್ಪಾದಕ ಸಂಸ್ಥೆಗಳು (ಎಫ್‌.ಪಿ..ಗಳು), ಎಂ.ಎಸ್‌.ಎಂ..ಗಳು, ವಿಭಾಗ (ಸೆಕ್ಶನ್) 8 ಕಂಪನಿಗಳು, ಖಾಸಗಿ ಕಂಪನಿಗಳು ಮತ್ತು ವೈಯಕ್ತಿಕ ಉದ್ಯಮಿಗಳು ಕೇವಲ 10% ಅಂಶ ಹಣದ ಕೊಡುಗೆಯನ್ನು ಹೊಂದಿಸಿದರೆ ಸಾಕಾಗುತ್ತದೆಲಭ್ಯವಾಗಬೇಕಾದ ಉಳಿದ 90% ಅವರಿಗೆ ಶೆಡ್ಯೂಲ್ಡ್ ಬ್ಯಾಂಕುಗಳು ನೀಡುವ ಸಾಲದ ಅಂಶವಾಗಿದೆ.

ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅರ್ಹ ಫಲಾನುಭವಿಗಳಿಗೆ 4% ಮತ್ತು ಇತರ ಜಿಲ್ಲೆಗಳ ಫಲಾನುಭವಿಗಳಿಗೆ 3% ಬಡ್ಡಿಯ ಆರ್ಥಿಕ ಸಹಾಯವನ್ನು ಭಾರತ ಸರ್ಕಾರ ನೀಡುತ್ತದೆಸಾಲವನ್ನು ಮರುಪಾವತಿಸಲು 2 ವರ್ಷಗಳ ವಿರಾಮ ಅವಧಿ, ಹಾಗೂ ಜೊತೆಗೆ 6 ವರ್ಷಗಳ ಮರುಪಾವತಿಯ ಕಾಲಾವಕಾಶದ ಅವಧಿ ಇರುತ್ತದೆಭಾರತ ಸರ್ಕಾರವು ಎಂ.ಎಸ್‌.ಎಂ. ವ್ಯಾಖ್ಯಾನಿತ ಮಿತಿಯ ವ್ಯಾಪ್ತಿಗೆ ಬರುವ ಯೋಜನೆಗಳಿಗೆ ಖಾತರಿಯಾಗಿ ಸಾಲ ನೀಡಲು ರೂ.750 ಕೋಟಿಗಳ ಕ್ರೆಡಿಟ್ ಗ್ಯಾರಂಟಿ ಫಂಡ್ ಅನ್ನು ಸ್ಥಾಪಿಸಲಿದೆ ಮತ್ತು ನಬಾರ್ಡ್ ಇದನ್ನು ನಿರ್ವಹಿಸಲಿದೆ. ಗ್ಯಾರಂಟಿ ವ್ಯಾಪ್ತಿಯು ಸಾಲಗಾರನ ಸಾಲ ಸೌಲಭ್ಯದ ಒಟ್ಟು ಮೊತ್ತದ 25% ವರೆಗೆ ಇರುತ್ತದೆ

 ಪ್ರಯೋಜನಗಳು:

 ಪಶುಸಂಗೋಪನಾ ಕ್ಷೇತ್ರದಲ್ಲಿ ಖಾಸಗಿ ವಲಯದ ಹೂಡಿಕೆಯು, ಮೂಲಕ ತೆರೆಯುವ ಹೆಬ್ಬಾಗಿಲು ಆಗುವ ನಿರೀಕ್ಷೆಯಿದೆಖಾಸಗಿ ಹೂಡಿಕೆದಾರರಿಗೆ ನೀಡುವ ಬಡ್ಡಿಯ ಆರ್ಥಿಕ ಸಹಾಯ ಯೋಜನೆಯೊಂದಿಗೆ ಯೋಜನೆಗಳಿಗೆ ಅಗತ್ಯವಾದ ಮುಂಗಡ ಹೂಡಿಕೆಯನ್ನು ಪೂರೈಸಲು ಬೇಕಾದ ಬಂಡವಾಳದ ಲಭ್ಯತೆಯನ್ನು .ಎಚ್‌..ಡಿ.ಎಫ್ ಖಚಿತಪಡಿಸುತ್ತದೆ ಮತ್ತು ಒಟ್ಟಾರೆ ಆದಾಯವನ್ನು ಹೆಚ್ಚಿಸಲು / ಹೂಡಿಕೆದಾರರಿಗೆ ಮರುಪಾವತಿ ಮಾಡಲು ಸಹಾಯ ಮಾಡುತ್ತದೆ. ಅರ್ಹ ಫಲಾನುಭವಿಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮೂಲಸೌಕರ್ಯದಲ್ಲಿ ಇಂತಹ ಹೂಡಿಕೆಗಳು ರಫ್ತುಗಳನ್ನು ಕೂಡಾ ಉತ್ತೇಜಿಸುತ್ತವೆ.

 ಭಾರತದಲ್ಲಿ ಡೈರಿ ಉತ್ಪಾದನೆಯ ಅಂತಿಮ ಮೌಲ್ಯದ ಸುಮಾರು 50-60% ಮತ್ತೆ ಪುನಃ ರೈತರಿಗೆ ಹರಿಯುವುದರಿಂದ, ವಲಯದ ಬೆಳವಣಿಗೆಯು ರೈತನ ಆದಾಯದ ಮೇಲೆ ಗಮನಾರ್ಹವಾದ ನೇರ ಪರಿಣಾಮವನ್ನು ಬೀರುತ್ತದೆಡೈರಿ ಮಾರುಕಟ್ಟೆಯ ಗಾತ್ರ ಮತ್ತು ಹಾಲು ಮಾರಾಟದಿಂದ ರೈತರ ಸಾಕ್ಷಾತ್ಕಾರವು, ಸಹಕಾರಿ ಮತ್ತು ಖಾಸಗಿ ಡೈರಿಗಳಿಂದ ಸಂಘಟಿತ ಸಾಲ ಮೊತ್ತ (ಆಫ್-ಟೇಕ್) ಅಭಿವೃದ್ಧಿಯೊಂದಿಗೆ ನಿಕಟ ಸಂಬಂಧ ಹೊಂದಿದೆಹೀಗಾಗಿ.ಎಚ್‌..ಡಿ.ಎಫ್. ಮೂಲಕ ರೂ. 15,000 ಕೋಟಿ  ಹೆಚ್ಚಿನ ಖಾಸಗಿ ಹೂಡಿಕೆಯ ಮೇಲೆ ಹತೋಟಿ ಸಾಧಿಸುವುದಲ್ಲದೆ, ಒಳಹರಿವಿನ ಮೇಲೆ ಹೆಚ್ಚು ಹೂಡಿಕೆ ಮಾಡಲು ರೈತರನ್ನು ಪ್ರೇರೇಪಿಸುತ್ತದೆ ಮತ್ತು ಇದರಿಂದಾಗಿ ಹೆಚ್ಚಿನ ಉತ್ಪಾದಕತೆಯು ರೈತರ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ.ಎಚ್‌..ಡಿ.ಎಫ್. ಮೂಲಕ ಇಂದು ಅನುಮೋದಿಸಲಾದ ಕ್ರಮಗಳು ಸುಮಾರು 35 ಲಕ್ಷ ಮಂದಿ ಜನರಿಗೆ/ರೈತರಿಗೆ ನೇರ ಮತ್ತು ಪರೋಕ್ಷ ಜೀವನೋಪಾಯವನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

 2 ಉತ್ತರಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲಾಗಿದೆ

ಹಿನ್ನೆಲೆ:

ಗೌತಮ ಬುದ್ಧನು ಮಹಾಪರಿನಿರ್ವಾಣವನ್ನು ಪಡೆದ ಕುಶಿನಗರವು ಒಂದು ಪ್ರಮುಖ ಬೌದ್ಧ ಯಾತ್ರಾ ಸ್ಥಳವಾಗಿದೆಇದು ಅತ್ಯಂತ ಪವಿತ್ರ ಬೌದ್ಧ ಯಾತ್ರಾ ಕೇಂದ್ರವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಪ್ರಪಂಚದಾದ್ಯಂತ ವಿವಿಧ ರಾಷ್ಟ್ರಗಳ ಬೌದ್ಧ ಯಾತ್ರಾರ್ಥಿಗಳು ಲ್ಲಿಗೆ ತೀರ್ಥಯಾತ್ರೆಗೆ ಬರುತ್ತಾರೆಕುಶಿನಗರವು ಹತ್ತಿರದ ಸುತ್ತಮುತ್ತಲಿನ ಪ್ರದೇಶಗಳಾದ ಶ್ರಾವಸ್ತಿ (238 ಕಿಮೀ), ಕಪಿಲ್ವಾಸ್ತು (190 ಕಿಮೀ) ಮತ್ತು ಲುಂಬಿನಿ (195 ಕಿಮೀ) ಗಳಲ್ಲಿ ಹಲವಾರು ಇತರ ಬೌದ್ಧ ತಾಣಗಳಿವೆ, ಹಾಗೂ ಅನುಯಾಯಿಗಳು ಮತ್ತು ಸಂದರ್ಶಕರಿಗೆ ಕೇಂದ್ರಗಳು ಸದಾ ಆಕರ್ಷಣೆಯನ್ನು ನೀಡುತ್ತವೆಕುಶಿನಗರ ಈಗಾಗಲೇ ಭಾರತ ಮತ್ತು ನೇಪಾಳದಾದ್ಯಂತ ಬೌದ್ಧ ತೀರ್ಥಯಾತ್ರೆಗಳ ಪ್ರಸ್ತುತ ಪ್ರಧಾನ ತಾಣವಾಗಿ ಕಾರ್ಯನಿರ್ವಹಿಸುತ್ತಿದೆ. ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

 ಪ್ರಯೋಜನಗಳು:

 ಬೌದ್ಧ ತೀರ್ಥಯಾತ್ರ ಪ್ರವಾಸ ಕ್ಷೇತ್ರಗಳು ವಿಶ್ವದಾದ್ಯಂತ 530 ದಶಲಕ್ಷ ಬೌದ್ಧರಿಗೆ ಧಾರ್ಮಿಕ ಅಭ್ಯಾಸ ಮಾಡುವ ಪ್ರಮುಖ ಯಾತ್ರಾ ತಾಣವಾಗಿದೆಆದ್ದರಿಂದ ಕುಶಿನಗರ ವಿಮಾನ ನಿಲ್ದಾಣವನ್ನು 'ಅಂತರರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಘೋಷಿಸುವುದರಿಂದ ಸುಧಾರಿತ ಸಂಪರ್ಕ, ವಾಯು-ಪ್ರಯಾಣಿಕರಿಗೆ ಸ್ಪರ್ಧಾತ್ಮಕ ವೆಚ್ಚದಲ್ಲಿ ವ್ಯಾಪಕವಾದ ಸೇವೆಗಳನ್ನು ಒದಗಿಸುತ್ತದೆ, ಇದರ ಪರಿಣಾಮವಾಗಿ ದೇಶೀಯ / ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮತ್ತು ಪ್ರದೇಶದ ಆರ್ಥಿಕ ಅಭಿವೃದ್ಧಿ ಹೆಚ್ಚಾಗುತ್ತದೆ.

ಪ್ರತಿದಿನ, ಥೈಲ್ಯಾಂಡ್, ಕಾಂಬೋಡಿಯಾ, ಜಪಾನ್, ಬರ್ಮಾ ಮುಂತಾದ ದೇಶಗಳ ಸುಮಾರು 200-300 ಭಕ್ತರು ಕುಶಿನಗರದಲ್ಲಿ ಬಂದು ತಮ್ಮ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆಆದಾಗ್ಯೂ, ಅಂತರರಾಷ್ಟ್ರೀಯ ಪ್ರವಾಸಿ ತಾಣವು ಯಾವುದೇ ನೇರ ಸಂಪರ್ಕವನ್ನು ಹೊಂದಿಲ್ಲ, ಇದು ಸಂದರ್ಶಕರ ಬಹುದಿನಗಳ ಬೇಡಿಕೆಯಾಗಿದೆ.

ಕುಶಿನಗರಕ್ಕೆ ನೇರ ಅಂತರರಾಷ್ಟ್ರೀಯ ಸಂಪರ್ಕ ಏರ್ಪಡಿಸುವ ಮೂಲಕ ಕುಶಿನಗರಕ್ಕೆ ಭೇಟಿ ನೀಡುವ ವಿದೇಶಿಯರು ಮತ್ತು ದೇಶೀಯ ಪ್ರವಾಸಿಗರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಾಗಲಿದೆ, ಹಾಗೂ ಇದು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆಯನ್ನು ನೀಡಲಿದೆಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದಲ್ಲಿ ಈಗಾಗಲೇ ಬೆಳೆಯುತ್ತಿರುವ ಪ್ರವಾಸೋದ್ಯಮ ಮತ್ತು ಆತಿಥ್ಯ ಪರಿಸರ ವ್ಯವಸ್ಥೆಗಳನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.

 

 3.ಮ್ಯಾನ್ಮಾರ್ನಲ್ಲಿ ಶ್ವೇ ತೈಲ ಮತ್ತು ಅನಿಲ ಯೋಜನೆಯ ಮತ್ತಷ್ಟು ಅಭಿವೃದ್ಧಿಗೆ .ವಿ.ಎಲ್ ಹೆಚ್ಚುವರಿ ಹೂಡಿಕೆಗೆ ಅನುಮೋದನೆ

 ಹಿನ್ನೆಲೆ:

 ದಕ್ಷಿಣ ಕೊರಿಯಾ, ಭಾರತ ಮತ್ತು ಮ್ಯಾನ್ಮಾರ್ ಕಂಪನಿಗಳ ಒಕ್ಕೂಟದ ಭಾಗವಾಗಿ 2002 ರಿಂದ .ಎನ್‌.ಜಿ.ಸಿ. ವಿದೇಶ್ (.ವಿ.ಎಲ್) ಸಂಸ್ಥೆಯು ಮ್ಯಾನ್ಮಾರ್ನಲ್ಲಿ ಶ್ವೇ ಅನಿಲ ಯೋಜನೆಯ ಪರಿಶೋಧನೆ ಮತ್ತು ಅಭಿವೃದ್ಧಿ ಕಾರ್ಯಯೋಜನೆಯಲ್ಲಿ ತೊಡಗಿಸಿಕೊಂಡಿದೆಭಾರತೀಯ ಸಾರ್ವಜನಿಕ ಕ್ಷೇತ್ರದ ಘಟಕ, ಗೇಲ್ ಸಹ ಯೋಜನೆಯಲ್ಲಿ ಸಹ ಹೂಡಿಕೆದಾರ ಸಂಸ್ಥೆಯಾಗಿದೆ ಯೋಜನೆಯಲ್ಲಿ ಮಾರ್ಚ್ 31, 2019 ರವರೆಗೆ .ವಿ.ಎಲ್. ಯುಎಸ್ $ 722 ದಶಲಕ್ಷ (ಸುಮಾರು ರೂ. 3949 ಕೋಟಿ, ಸರಾಸರಿ ವಾರ್ಷಿಕ ವಿನಿಮಯ ದರದ ಪ್ರಕಾರ) ಹೂಡಿಕೆ ಮಾಡಿದೆ. ಮ್ಯಾನ್ಮಾರ್ ಶ್ವೆ ಪ್ರಾಜೆಕ್ಟ್ನಿಂದ ಮೊದಲ ಅನಿಲವನ್ನು ಜುಲೈ 2013 ರಲ್ಲಿ ಪಡೆಯಲಾಯಿತು ಮತ್ತು ಉತ್ಪಾದನೆ ಕ್ಷೇತ್ರವನ್ನು 2014 ಡಿಸೆಂಬರ್ನಲ್ಲಿ ತಲುಪಿಸಲಾಯಿತು. ಯೋಜನೆಯು 2014-15ನೇ ಹಣಕಾಸು ವರ್ಷದಿಂದ ಸಕಾರಾತ್ಮಕ ಹಣದ ಹರಿವನ್ನು ಸೃಷ್ಠಿಸಿದೆಮ್ಯಾನ್ಮಾರ್ನಲ್ಲಿ ಶ್ವೇ ತೈಲ ಮತ್ತು ಅನಿಲ ಯೋಜನೆಯ ಮತ್ತಷ್ಟು ಅಭಿವೃದ್ಧಿಗೆ .ಎನ್‌.ಜಿ.ಸಿ ವಿದೇಶ್ ಲಿಮಿಟೆಡ್ (.ವಿ.ಎಲ್) 121.27 ದಶಲಕ್ಷ ಯು.ಎಸ್ ಡಾಲರ್ (ಸುಮಾರು ರೂ.909 ಕೋಟಿ  /  1 ಯುಎಸ್ $ = 75 ರೂ ಲೆಕ್ಕಾಚಾರದಲ್ಲಿ ) ಹೆಚ್ಚುವರಿ ಹೂಡಿಕೆಗೆ ಕೇಂದ್ರ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ ಅನುಮೋದನೆ ನೀಡಿದೆ.  

 ಪ್ರಯೋಜನಗಳು:

 ನೆರೆಯ ರಾಷ್ಟ್ರಗಳಲ್ಲಿನ ತೈಲ ಮತ್ತು ಅನಿಲ ಪರಿಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಭಾರತೀಯ ಸಾರ್ವಜನಿಕ ಕ್ಷೇತ್ರದ ಘಟಕಗಳ ಭಾಗವಹಿಸುವಿಕೆಯು ಭಾರತದಆಕ್ಟ್ ಈಸ್ಟ್ ಪಾಲಿಸಿಯೊಂದಿಗೆ ಅನುಯೋಜ್ಯವಾಗಿದೆ ಮತ್ತು ಭಾರತದ ಇಂಧನ ಸುರಕ್ಷತೆಯ ಅಗತ್ಯಗಳನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ ತನ್ನ ನೆರೆಹೊರೆಯವರೊಂದಿಗೆ ಇಂಧನ/ಶಕ್ತಿ ಸಂಪರ್ಕ  ಸೇತುವೆಗಳನ್ನು ಅಭಿವೃದ್ಧಿಪಡಿಸುವ ಭಾರತದ ವ್ಯೂಹಾತ್ಮಕ ಕಾರ್ಯತಂತ್ರದ ಒಂದು ಭಾಗವಾಗಿದೆ.

***


(Release ID: 1654988) Visitor Counter : 360