ಪ್ರಧಾನ ಮಂತ್ರಿಯವರ ಕಛೇರಿ

ಹೈಪರ್ಸಾನಿಕ್ ಪರೀಕ್ಷಾ ಪ್ರಾತ್ಯಕ್ಷಿಕೆ ವಾಹಕವನ್ನು ಯಶಸ್ವಿಯಾಗಿ ಹಾರಿಸಿದ ಡಿಆರ್‌.ಡಿಒಗೆ ಪ್ರಧಾನಮಂತ್ರಿ ಅಭಿನಂದನೆಗಳು

ಪ್ರಕಟಣಾ ದಿನಾಂಕ: 07 SEP 2020 8:16PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್.ಡಿ.ಓ.) ಹೈಪರ್ಸಾನಿಕ್ ಪರೀಕ್ಷಾ ಪ್ರಾತ್ಯಕ್ಷಿಕೆ ವಾಹಕವನ್ನು ಯಶಸ್ವಿಯಾಗಿ ಹಾರಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು “ಹೈಪರ್ಸಾನಿಕ್ ಪರೀಕ್ಷಾ ಪ್ರಾತ್ಯಕ್ಷಿಕೆ ವಾಹಕವನ್ನು ಇಂದು ಯಶಸ್ವಿಯಾಗಿ ಹಾರಿಸಿರುವ ಡಿಆರ್.ಡಿ.ಓಗೆ ಅಭಿನಂದನೆಗಳು. ನಮ್ಮ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ಸ್ಕ್ರಾಮ್ ಜೆಟ್ ಎಂಜಿನ್ ವಾಹಕಕ್ಕೆ ’ಶಬ್ದಕ್ಕಿಂತಲೂ 6 ಪಟ್ಟು ವೇಗವನ್ನು ಸಾಧಿಸಲು ನೆರವಾಗಿದೆ! ಕೆಲವೇ ದೇಶಗಳು ಇಂದು ಇಂಥ ಸಾಮರ್ಥ್ಯ ಹೊಂದಿವೆ." ತಿಳಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1652148) ವಿಸಿಟರ್ ಕೌಂಟರ್ : 289