ಪ್ರಧಾನ ಮಂತ್ರಿಯವರ ಕಛೇರಿ
ಜೈಪುರದಲ್ಲಿ ಪತ್ರಿಕಾ ದ್ವಾರ ಉದ್ಘಾಟಿಸಲಿರುವ ಪ್ರಧಾನಮಂತ್ರಿ
Posted On:
07 SEP 2020 4:42PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜೈಪುರದಲ್ಲಿ 2020ರ ಸೆಪ್ಟೆಂಬರ್ 8ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪತ್ರಿಕಾ ಗೇಟ್ (ದ್ವಾರ) ಉದ್ಘಾಟಿಸಲಿದ್ದಾರೆ.
ಈ ದ್ವಾರವನ್ನು ಜೈಪುರದ ಜವಾಹರಲಾಲ್ ನೆಹರು ಮಾರ್ಗದಲ್ಲಿ ಪತ್ರಿಕಾ ವಾರ್ತಾಪತ್ರಿಕೆಗಳ ಸಮೂಹವು ನಿರ್ಮಿಸಿದೆ.
ಈ ಸಂದರ್ಭದಲ್ಲಿ ಸಮೂಹದ ಅಧ್ಯಕ್ಷರು ಬರೆದಿರುವ ಎರಡು ಪುಸ್ತಕಗಳನ್ನು ಶ್ರೀ ಮೋದಿ ಬಿಡುಗಡೆ ಮಾಡಲಿದ್ದಾರೆ.
ಡಿಡಿ ನ್ಯೂಸ್ ನಲ್ಲಿ ಈ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ.
***
(Release ID: 1652018)
Visitor Counter : 149
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam