ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಪರೀಕ್ಷೆಯಲ್ಲಿ ಭಾರೀ ಹೆಚ್ಚಳ, ಭಾರತದಲ್ಲಿ 4.23 ಕೋಟಿಗೂ ಹೆಚ್ಚು ಪರೀಕ್ಷೆ
ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶದ ಮೂರು ರಾಜ್ಯಗಳಲ್ಲಿ ಶೇ.43 ರಷ್ಟು ಪ್ರಕರಣಗಳು ದಾಖಲು
Posted On:
31 AUG 2020 12:24PM by PIB Bengaluru
ಭಾರತವು ಕೋವಿಡ್-19 ಪರೀಕ್ಷೆಯನ್ನು ವ್ಯಾಪಕವಾಗಿ ನಡೆಸುತ್ತಿದ್ದು ಇದರಿಂದಾಗಿ ಪರೀಕ್ಷೆಯ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ. 2020ರ ಜನವರಿಯಲ್ಲಿ ಪುಣೆಯ ಪ್ರಯೋಗಾಲಯದಲ್ಲಿ ಒಂದು ಪರೀಕ್ಷೆಯಿಂದ ಪ್ರಾರಂಭವಾದ ಕೋವಿಡ್-19 ಪರೀಕ್ಷೆಯು, 2020 ರ ಆಗಸ್ಟ್ನಲ್ಲಿ ದೈನಂದಿನ ಪರೀಕ್ಷಾ ಸಾಮರ್ಥ್ಯವು 10 ಲಕ್ಷಕ್ಕೂ ಹೆಚ್ಚಾಗಿದೆ.
ದೇಶದ ಒಟ್ಟಾರೆ ಪರೀಕ್ಷೆಗಳು ಇಂದು 4.23 ಕೋಟಿ ದಾಟಿವೆ. ಕಳೆದ 24 ಗಂಟೆಗಳಲ್ಲಿ 8,46,278 ಪರೀಕ್ಷೆಗಳನ್ನು ನಡೆಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 78,512 ಪ್ರಕರಣಗಳು ದಾಖಲಾಗಿವೆ (2020 ರ ಆಗಸ್ಟ್ 30, ಭಾನುವಾರ). ಆದ್ದರಿಂದ ಕಳೆದ 24 ಗಂಟೆಗಳಲ್ಲಿ ಸುಮಾರು 80,000 ಪ್ರಕರಣಗಳು ವರದಿಯಾಗಿವೆ ಎಂಬ ಕೆಲವು ಮಾಧ್ಯಮ ಸಂಸ್ಥೆಗಳ ವರದಿಯು ನಿರಾಧಾರವಾಗಿದೆ.
ಕಳೆದ 24 ಗಂಟೆಗಳಲ್ಲಿ ವರದಿಯಾದ ಹೊಸ ಪ್ರಕರಣಗಳಲ್ಲಿ ಶೇ.70 ರಷ್ಟು ಏಳು ರಾಜ್ಯಗಳಿಂದ ದಾಖಲಾಗಿವೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಗರಿಷ್ಠ ಸುಮಾರು ಶೇ.21 ರಷ್ಟು ಪ್ರಕರಣಗಳು ವರದಿಯಾಗಿವೆ. ಆಂಧ್ರಪ್ರದೇಶ (ಶೇ.13.5), ಕರ್ನಾಟಕ (ಶೇ.11.27) ಮತ್ತು ತಮಿಳುನಾಡಿನಲ್ಲಿ ಶೇ.8.27 ರಷ್ಟು ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಉತ್ತರ ಪ್ರದೇಶ ಶೇ.8.27, ಪಶ್ಚಿಮ ಬಂಗಾಳ ಶೇ.3.85 ಮತ್ತು ಒಡಿಶಾದಲ್ಲಿ ಶೇ.3.84 ಪ್ರಕರಣಗಳು ವರದಿಯಾಗಿವೆ.
ದೇಶದ ಒಟ್ಟು ಪ್ರಕರಣಗಳಲ್ಲಿ ಶೇ.43 ಪ್ರಕರಣಗಳು ಕೇವಲ ಮೂರು ರಾಜ್ಯಗಳಲ್ಲಿ ಅಂದರೆ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ದಾಖಲಾಗಿವೆ. ಒಟ್ಟು ಪ್ರಕರಣಗಳಲ್ಲಿ ಶೇ.11.66 ರಷ್ಟು ತಮಿಳುನಾಡಿನಲ್ಲಿ ವರದಿಯಾಗಿವೆ.
ಕೋವಿಡ್-19 ರಿಂದಾಗಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಸಾವುಗಳಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಸುಮಾರು ಶೇ.50 ರಷ್ಟಿವೆ. ಮಹಾರಾಷ್ಟ್ರವು ಶೇ.30.48 ರಷ್ಟು ಸಾವುಗಳನ್ನು ದಾಖಲಿಸಿದೆ.
ಕೇಂದ್ರ ಸರ್ಕಾರವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಸತತವಾಗಿ ಕೆಲಸ ಮಾಡುತ್ತಿದೆ. ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆಗಳನ್ನು ಕೈಗೊಳ್ಳಲು, ಮರಣ ಪ್ರಮಾಣವನ್ನು ಕಡಿಮೆ ಮಾಡಲು ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆ ಮಾಡಲು ಮತ್ತು ವಿವಿಧ ಹಂತಗಳಲ್ಲಿ ಸಮರ್ಥ ಮೇಲ್ವಿಚಾರಣೆಯೊಂದಿಗೆ ಜೀವಗಳನ್ನು ಉಳಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಪರೀಕ್ಷೆಗಳ ಹೆಚ್ಚಳದಿಂದಾಗಿ ಪ್ರಕರಣಗಳಲ್ಲಿಯೂ ಏರಿಕೆ ಕಂಡುಬರುತ್ತಿದೆ ಮತ್ತು ಹೆಚ್ಚಿನ ಸಾವುಗಳು ವರದಿಯಾಗುತ್ತಿವೆ.
ಕೋವಿಡ್-19 ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಇತ್ತೀಚಿನ ಮಾಹಿತಿಗಾಗಿ https://www.mohfw.gov.in/ ಮತ್ತು oMoHFW_INDIA ಜಾಲತಾಣಗಳಿಗೆ ದಯವಿಟ್ಟು ಭೇಟಿ ನೀಡಿ.
ಕೋವಿಡ್-19ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technicalquery.covid19[at]gov[dot]in ಗೆ ಮತ್ತು ಇತರ ಪ್ರಶ್ನೆಗಳನ್ನು ncov2019[at]gov[dot]in ಮತ್ತು ovCovidIndiaSeva ಗೆ ಕಳುಹಿಸಬಹುದು.
***
(Release ID: 1650130)
Visitor Counter : 247
Read this release in:
Punjabi
,
Malayalam
,
English
,
Urdu
,
Marathi
,
Hindi
,
Bengali
,
Assamese
,
Manipuri
,
Gujarati
,
Odia
,
Tamil
,
Telugu