ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19: ಒಂದೇ ದಿನ ಅತಿ ಹೆಚ್ಚು, 30ಸಾವಿರ ಮಂದಿ ಸೋಂಕಿನಿಂದ ಗುಣಮುಖ

Posted On: 23 JUL 2020 2:21PM by PIB Bengaluru

ಕೋವಿಡ್-19: ಒಂದೇ ದಿನ ಅತಿ ಹೆಚ್ಚು, 30ಸಾವಿರ ಮಂದಿ ಸೋಂಕಿನಿಂದ ಗುಣಮುಖ

ಒಟ್ಟು ಗುಣಮುಖರಾದವರ ಸಂಖ್ಯೆ 7.82 ಲಕ್ಷಕ್ಕೂ ಅಧಿಕ

 

ಸತತ ಎರಡನೇ ದಿನ ಗುಣಮುಖರಾದವರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆಕಳೆದ 24 ಗಂಟೆಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಅಂದರೆ 29,557 ಸೋಂಕಿತರು  ಒಂದೇ ದಿನ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆಇದರಿಂದಾಗಿ ಒಟ್ಟು ಗುಣಮುಖರಾದವರ ಸಂಖ್ಯೆ 7,82,606ಕ್ಕೆ ಏರಿಕೆಯಾಗಿದ್ದುಇದು ಪ್ರಶಂಸನೀಯ ಬೆಳವಣಿಗೆಯಾಗಿದ್ದುಗುಣಮುಖರಾದವರ ಪ್ರಮಾಣ ಶೇ.63.18 ತಲುಪಿದೆಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಗುಣಮುಖರಾಗಿಬಿಡುಗಡೆಯಾಗುತ್ತಿರುವುದು ಒಟ್ಟು ಸಕ್ರಿಯ ಪ್ರಕರಣಗಳು ಮತ್ತು ಗುಣಮುಖರಾದವರ ನಡುವಿನ ಅಂತರವನ್ನು ಹೆಚ್ಚಿಸಿದೆಇಂದು  ಅಂತರ 3,56,439ರಷ್ಟು ಹೆಚ್ಚಾಗಿದೆ.

ಕೇಂದ್ರ ಸರ್ಕಾರದ ನೇತೃತ್ವದಲ್ಲಿ ಕೈಗೊಂಡಿರುವ ಕೋವಿಡ್-1ನಿಯಂತ್ರಣ ಕಾರ್ಯತಂತ್ರಗಳಿಂದಾಗಿ  ಯಶಸ್ಸು ಸಾಧಿಸಲಾಗಿದೆಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸುಸ್ಥಿರ ಪ್ರಯತ್ನಗಳಿಂದಾಗಿ ಹಾಗೂ ಪರಿಣಾಮಕಾರಿ ನಿಯಂತ್ರಣಹೆಚ್ಚಿನ ಪರೀಕ್ಷೆ ಮತ್ತು ಪ್ರಾಮಾಣಿಕ ಹಾಗೂ ದಕ್ಷ ಚಿಕಿತ್ಸಾ ನಿರ್ವಹಣಾ ಕಾರ್ಯತಂತ್ರದಿಂದಾಗಿ  ಫಲಿತಾಂಶ ಕಂಡುಬರುತ್ತಿದೆಇವುಗಳಿಗೆಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ತಜ್ಞರ ತಂಡಗಳುಜಂಟಿ ನಿಗಾ ಸಮಿತಿ(ಜೆಎಂಜಿ)  ಮತ್ತು ನವದೆಹಲಿಯ ಏಮ್ಸ್  ತಾಂತ್ರಿಕ ಪರಿಣಿತರ ಪೂರಕ ನೆರವುಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಜೇಷ್ಠತಾ ಕೇಂದ್ರಗಳುಐಸಿಎಂಆರ್ ಮತ್ತು ಎನ್ ಸಿಡಿಸಿ ಇವುಗಳ ಸಂಘಟಿತ ಪ್ರಯತ್ನ ಕಾರಣವಾಗಿದೆಕೇಂದ್ರ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರ ಸಂಪರ್ಕ ಕಾಯ್ದುಕೊಂಡು ಸಮನ್ವಯದಿಂದ ಅಧಿಕ ಪ್ರಕರಣಗಳು ಹೆಚ್ಚಿರುವ ರಾಜ್ಯಗಳಿಗೆ ತಜ್ಞರ ತಂಡಗಳನ್ನು ಕಳುಹಿಸುತ್ತಿದೆ ಮತ್ತು ರಾಜ್ಯಗಳಲ್ಲಿನ ಕೋವಿಡ್ ಆಸ್ಪತ್ರೆಗಳಿಗೆ ನವದೆಹಲಿಯ ಏಮ್ಸ್ ನೇತೃತ್ವದಲ್ಲಿ ಟೆಲಿ ಸಮಾಲೋಚನೆ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಸಂಘಟಿತ ಪ್ರಯತ್ನಗಳ ಪರಿಣಾಮವಾಗಿ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಅತ್ಯಂತ ಕಡಿಮೆಯಾಗುವ ರೀತಿ ನಿರ್ವಹಿಸಲಾಗುತ್ತಿದೆಸದ್ಯ ಸಾವಿನ ಪ್ರಮಾಣ ಶೇ.2.41ರಷ್ಟಿದ್ದುಅದು ಕ್ರಮೇಣ ಇನ್ನೂ ಇಳಿಮುಖವಾಗುತ್ತಿದೆ.

ಇದರಿಂದಾಗಿ ವಾಸ್ತವವಾಗಿ ಕೋವಿಡ್-19 ಪ್ರಕರಣಗಳ ಸಂಖ್ಯೆಯೂ ತಗ್ಗುತ್ತಿದೆಸಕ್ರಿಯ ಪ್ರಕರಣಗಳು ಕೇವಲ 4,26,167 ಮಾತ್ರ.

ಕೋವಿಡ್-19 ಕುರಿತಂತೆ ಎಲ್ಲಾ ಅಧಿಕೃತ ಹಾಗೂ ತಾಜಾ ಮಾಹಿತಿಗಾಗಿ ಮತ್ತು ತಾಂತ್ರಿಕ ವಿಷಯಗಳುಮಾರ್ಗಸೂಚಿಗಳು ಹಾಗೂ ಸಲಹೆಗಳಿಗಾಗಿ ನಿರಂತರವಾಗಿ ಇಲ್ಲಿ ಭೇಟಿ ನೀಡಿಪರಿಶೀಲಿಸಬಹುದಾಗಿದೆvisit: https://www.mohfw.gov.in/ ಮತ್ತು @MoHFW_INDIA.

ಕೋವಿಡ್-19 ಕುರಿತ ತಾಂತ್ರಿಕ ಪ್ರಶ್ನೆಗಳನ್ನು ಇಲ್ಲಿಗೆ ಕಳುಹಿಸಬಹುದು technicalquery.covid19[at]gov[dot]in ಮತ್ತು ಇತರೆ ಪ್ರಶ್ನೆಗಳನ್ನು ncov2019[at]gov[dot]in ಮತ್ತು @CovidIndiaSeva ಇಲ್ಲಿಗೆ ಕಳುಹಿಸಬಹುದು.

ಕೋವಿಡ್-19 ಕುರಿತ ಯಾವುದೇ ಪ್ರಶ್ನೆಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆ  +91-11-23978046 ಅಥವಾ 1075 (ಉಚಿತ ಸಹಾಯವಾಣಿ)ಗೆ ಕರೆ ಮಾಡಬಹದುಕೋವಿಡ್-19 ಕುರಿತಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆಗಳು ಇಲ್ಲಿ ಲಭ್ಯ.

 https://www.mohfw.gov.in/pdf/coronvavirushelplinenumber.pdf .      

***



(Release ID: 1641081) Visitor Counter : 226