ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವ ಯುವ ಕೌಶಲ್ಯ ದಿನವನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ

Posted On: 14 JUL 2020 9:05PM by PIB Bengaluru

ವಿಶ್ವ ಯುವ ಕೌಶಲ್ಯ ದಿನವನ್ನುದ್ದೇಶಿಸಿ ಭಾಷಣ ಮಾಡಲಿರುವ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಶ್ವ ಯುವ ಕೌಶಲ್ಯ ದಿನವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ. ಯುವ ಭಾರತ ಮಿಷನ್ ಆರಂಭಿಸಿದ ಐದನೇ ವಾರ್ಷಿಕೋತ್ಸವದ ದಿನವಾಗಿ ಇದನ್ನು ಆಚರಿಸಲಾಗುತ್ತಿದೆ. ಸಂದರ್ಭದ ಅಂಗವಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯ ಡಿಜಿಟಲ್ ಸಮಾವೇಶವನ್ನು ಆಯೋಜಿಸಿದೆ.

ಹಿನ್ನಲೆ

ಭಾರತ ಸರ್ಕಾರ ದೇಶದಲ್ಲಿನ ಯುವಜನರನ್ನು ಕೌಶಲ್ಯ ಮತ್ತು ಉದ್ಯೋಗಕ್ಕೆ ಅರ್ಹವಾದ ಕೌಶಲ್ಯ ಹೊಂದಿದವರನ್ನಾಗಿ ಸಬಲೀಕರಣ ಮಾಡಲು ಮತ್ತು ಅವರನ್ನು ಹೆಚ್ಚು ಉಪಯುಕ್ತವನ್ನಾಗಿ ಮಾಡಲು ಮತ್ತು ದುಡಿಯಲು ಸೂಕ್ತ ವಾತಾವರಣ ನಿರ್ಮಿಸುವ ಉದ್ದೇಶದಿಂದ ಸ್ಕಿಲ್ ಇಂಡಿಯಾ (ಕೌಶಲ್ಯ ಭಾರತ) ಕಾರ್ಯಕ್ರಮವನ್ನು ಆರಂಭಿಸಿದೆ. ಸ್ಕಿಲ್ ಇಂಡಿಯಾ ಅಡಿಯಲ್ಲಿ ರಾಷ್ಟ್ರೀಯ ಕೌಶಲ್ಯ ಅರ್ಹತಾ ನೀತಿಗೆ ಅನುಗುಣವಾಗಿ ಉದ್ಯಮ ಮತ್ತು ಸರ್ಕಾರದ ಎರಡೂ ಮಾನದಂಡಗಳನ್ನು ಅನುಸರಿಸಿ ಹಲವು ವಲಯಗಳಲ್ಲಿ ನಾನಾ ಬಗೆಯ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ಕೋರ್ಸ್ ಗಳು ವಾಸ್ತವಿಕವಾಗಿ ಕೆಲಸವನ್ನು ಪೂರ್ಣಗೊಳಿಸಲು ವ್ಯಕ್ತಿಗೆ ಹೆಚ್ಚಿನ ಗಮನಹರಿಸಲು ನೆರವಾಗುವುದಲ್ಲದೆ, ಆತನ ತಾಂತ್ರಿಕ ಪರಿಣಿತಿಯನ್ನು ಹೆಚ್ಚಿಸಿಕೊಳ್ಳಲು ಮೂಲಕ ಆತ ತನ್ನ ಉದ್ಯೋಗಕ್ಕೆ ಅರ್ಹವಾದ ಕೌಶಲ್ಯದೊಂದಿಗೆ ಸಿದ್ಧವಾಗಲು ಸಹಾಯಕವಾಗುತ್ತದೆ ಮತ್ತು ಇದರಿಂದ ಕಂಪನಿಗಳು ಉದ್ಯೋಗಿಗಳ ವೃತ್ತಿ ತರಬೇತಿ ನೀಡಲು ಹೆಚ್ಚಿನ ಹಣ ಹೂಡಿಕೆ ಮಾಡಬೇಕಾಗಿಲ್ಲ.

***



(Release ID: 1638685) Visitor Counter : 150