ಪ್ರಧಾನ ಮಂತ್ರಿಯವರ ಕಛೇರಿ

ವಾರಾಣಾಸಿಯ  ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ  ಪ್ರಧಾನಮಂತ್ರಿ ಸಂವಾದ

Posted On: 08 JUL 2020 2:17PM by PIB Bengaluru

ವಾರಾಣಾಸಿಯ  ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ  ಪ್ರಧಾನಮಂತ್ರಿ ಸಂವಾದ

ಲಾಕ್ ಡೌನ್ ವೇಳೆ ಆಹಾರ ವಿತರಣೆ ಮತ್ತು ಇತರೆ ನೆರವಿನ ಕ್ರಮಗಳನ್ನು ಕೈಗೊಂಡಿರುವ ಸರ್ಕಾರೇತರ ಸಂಸ್ಥೆಗಳೊಂದಿಗೆ ಸಮಾಲೋಚನೆ ಹಾಗೂ ವೀಕ್ಷಣೆ

 

ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಧಿಸಲಾದ ಸಮಯದಲ್ಲಿ, ವಾರಾಣಾಸಿ ನಿವಾಸಿಗಳು ಮತ್ತು ಹಲವು ಸಾಮಾಜಿಕ ಸಂಘಟನೆಗಳ ಸದಸ್ಯರು ತಮ್ಮದೇ ಸ್ವಂತ ಪ್ರಯತ್ನಗಳ ಮೂಲಕ ಜಿಲ್ಲಾಡಳಿತಕ್ಕೆ ನೆರವು ನೀಡಿದ್ದೇ ಅಲ್ಲದೆ, ಅಗತ್ಯವಿರುವ ಪ್ರತಿಯೊಬ್ಬರಿಗೂ ಸಕಾಲದಲ್ಲಿ ಆಹಾರ ಲಭ್ಯವಾಗುವಂತೆ  ಮಾಡಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತಹ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸಂವಾದ ನಡೆಸುವರು, ಅವರ ಅನುಭವ ಆಲಿಸುವರು ಮತ್ತು ಅವರ ಪ್ರಯತ್ನಗಳನ್ನು ವೀಕ್ಷಿಸಲಿದ್ದಾರೆ.

ಲಾಕ್ ಡೌನ್ ವೇಳೆ ವಾರಾಣಾಸಿಯ ನೂರಕ್ಕೂ ಅಧಿಕ ಸಂಸ್ಥೆಗಳು ಆಹಾರ ಘಟಕಗಳ ಮೂಲಕ ಜಿಲ್ಲಾಡಳಿತ ಮತ್ತು ವೈಯಕ್ತಿಕ ಪ್ರಯತ್ನಗಳ ನೆರವಿನಿಂದ ಸುಮಾರು 20ಲಕ್ಷ ಆಹಾರ ಪ್ಯಾಕೆಟ್ ಮತ್ತು 2 ಲಕ್ಷ  ಒಣ ಆಹಾರ ಧಾನ್ಯಗಳ ಪಡಿತರ ಕಿಟ್ ಅನ್ನು ವಿತರಿಸಿವೆ

ಆಹಾರ ವಿತರಣೆಯಲ್ಲದೆ, ಸಂಸ್ಥೆಗಳು ಮಾಸ್ಕ್, ಸ್ಯಾನಿಟೈಸರ್ ವಿತರಣೆಯಲ್ಲೂ ಸಹ ರಚನಾತ್ಮಕ ಕೆಲಸ ಮಾಡಿವೆ. ಜಿಲ್ಲಾಡಳಿತ ಅವರನ್ನುಗುರುತಿಸಿಕೊರೊನಾ ವಾರಿಯರ್ಸ್ ‘’ಎಂದು ಗೌರವಿಸಲಾಗಿದೆ.

ಸಂಸ್ಥೆಗಳು ಶಿಕ್ಷಣ, ಸಾಮಾಜಿಕ, ಧಾರ್ಮಿಕ, ಆರೋಗ್ಯ, ಹೋಟೆಲ್/ ಸಾಮಾಜಿಕ ಕ್ಲಬ್ ಮತ್ತು ಇತರೆ ವೃತ್ತಿಪರ ವಲಯ ಸೇರಿದಂತೆ ನಾನಾ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿವೆ.

***


(Release ID: 1637254) Visitor Counter : 202