ಪ್ರಧಾನ ಮಂತ್ರಿಯವರ ಕಛೇರಿ
ಲಡಾಖ್ ನ ನಿಮುಗೆ ಪ್ರಧಾನಿ ಭೇಟಿ, ಭಾರತೀಯ ಸೇನಾ ಪಡೆಗಳೊಂದಿಗೆ ಸಂವಾದ
Posted On:
03 JUL 2020 2:59PM by PIB Bengaluru
ಲಡಾಖ್ ನ ನಿಮುಗೆ ಪ್ರಧಾನಿ ಭೇಟಿ, ಭಾರತೀಯ ಸೇನಾ ಪಡೆಗಳೊಂದಿಗೆ ಸಂವಾದ
ನಮ್ಮ ಪಡೆಗಳ ಕಿಚ್ಚು ಮತ್ತು ಕೆಚ್ಚನ್ನು ಶತ್ರುಗಳು ಕಂಡಿದ್ದಾರೆ: ಪ್ರಧಾನಿ
ಇತ್ತೀಚಿನ ವಾರಗಳಲ್ಲಿ ನಮ್ಮ ಸಶಸ್ತ್ರ ಪಡೆಗಳು ತೋರಿದ ಅಸಾಧಾರಣ ಶೌರ್ಯ,
ಸಾಹಸದಿಂದ ವಿಶ್ವಕ್ಕೆ ಭಾರತದ ಶಕ್ತಿಯ ದರ್ಶನವಾಗಿದೆ: ಪ್ರಧಾನಿ
ಭಾರತದ ಶಾಂತಿಯ ಬದ್ಧತೆ, ಭಾರತದ ದೌರ್ಬಲ್ಯವೆಂದು ಪರಿಗಣಿಸಬಾರದು: ಪ್ರಧಾನಿ
ವಿಸ್ತರಣಾವಾದ ಅಂತ್ಯ, ಇದು ವಿಕಾಸದ ಯುಗ: ಪ್ರಧಾನಿ
ಗಡಿ ಮೂಲಸೌಕರ್ಯದ ವೆಚ್ಚ ಮೂರು ಪಟ್ಟು ಹೆಚ್ಚಳ:ಪ್ರಧಾನಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ಲಡಾಖ್ ನ ನಿಮುಗೆ ತೆರಳಿ, ಭಾರತೀಯ ಪಡೆಗಳೊಂದಿಗೆ ಸಂವಾದ ನಡೆಸಿದರು. ಜಂಸ್ಕಾರ್ ಶ್ರೇಣಿಯಿಂದ ಸುತ್ತುವರಿದ ಮತ್ತು ಸಿಂಧು ನದಿ ತಟದಲ್ಲಿ ಈ ನಿಮು ಇದೆ. ಪ್ರಧಾನಮಂತ್ರಿಯವರು ಭಾರತೀಯ ಸೇನಾಪಡೆಯ ಉನ್ನತ ನಾಯಕರುಗಳನ್ನು ಭೇಟಿ ಮಾಡಿದರು ಮತ್ತು ಸೇನೆ, ವಾಯುಪಡೆ ಮತ್ತು ಐಟಿಬಿಪಿಯ ಯೋಧರೊಂದಿಗೆ ಸಂವಾದ ನಡೆಸಿದರು.
ಶೌರ್ಯಶಾಲಿ ಯೋಧರಿಗೆ ನಮನ
ಪ್ರಧಾನಮಂತ್ರಿಯವರು ಸಶಸ್ತ್ರ ಪಡೆಗಳ ಶೌರ್ಯಶಾಲಿ ಯೋಧರಿಗೆ ನಮನ ಸಲ್ಲಿಸಿ, ಅವರ ಶೌರ್ಯ ಮತ್ತು ಭಾರತ ಮಾತೆಗೆ ಅವರ ಸಮರ್ಪಣಾಭಾವ ಅನುಪಮವಾದ್ದು ಎಂದರು. ನಮ್ಮ ಸಶಸ್ತ್ರ ಪಡೆಗಳು ಸ್ಥಿರವಾಗಿ ನಿಂತಿದ್ದಾರೆ, ದೇಶವನ್ನು ರಕ್ಷಿಸುತ್ತಿದ್ದಾರೆ ಎಂದು ಭಾರತೀಯರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದರು.
ಇತ್ತೀಚಿನ ವಾರದಲ್ಲಿ ನಮ್ಮ ಸಶಸ್ತ್ರ ಪಡೆಗಳು ತೋರಿದ ಶೌರ್ಯ ಸಾಹಸ, ಇಡೀ ವಿಶ್ವಕ್ಕೆ ಭಾರತದ ಬಲದ ಪರಿಚಯ ಮಾಡಿಸಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಗ್ಯಾಲ್ವಾನ್ ಕಣಿವೆಯ ಯೋಧರ ಬಲಿದಾನದ ಸ್ಮರಣೆ
ಪ್ರಧಾನಮಂತ್ರಿಯವರು ಗ್ಯಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಭಾರತ ಮಾತೆಯ ವೀರ ಪುತ್ರರನ್ನು ಸ್ಮರಿಸಿದರು, ಹುತಾತ್ಮರಾದವರು ಭಾರತದ ಎಲ್ಲ ಭಾಗಕ್ಕೂ ಸೇರಿದವರಾಗಿದ್ದು, ನಮ್ಮ ನೆಲದ ಶೌರ್ಯವನ್ನು ಎತ್ತಿ ಹಿಡಿದಿದ್ದಾರೆ ಎಂದರು.
ಅದು ಲೇಹ್ – ಲಡಾಖ್ ಇರಲಿ, ಕಾರ್ಗಿಲ್ ಅಥವಾ ಸಿಯಾಚಿನ್ ನೀರ್ಗಲ್ಲೇ ಇರಲಿ, ಎತ್ತರದ ಪರ್ವತವೇ ಇರಲಿ ಅಥವಾ ಹಿಮದಿಂದ ಕೂಡಿ ನದಿಯಲ್ಲಿ ಹರಿಯುವ ತಣ್ಣನೆಯ ನೀರೇ ಆಗಿರಲಿ ಇವೆಲ್ಲವೂ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯಕ್ಕೆ ಸಾಕ್ಷಿಯಾಗಿವೆ ಎಂದರು. ಭಾರತದ ಶತ್ರುಗಳು ನಮ್ಮ ಪಡೆಗಳ ಕಿಚ್ಚು ಮತ್ತು ಕೆಚ್ಚನ್ನು ಕಂಡಿದ್ದಾರೆ ಎಂದು ಪ್ರಧಾನಮಂತ್ರಿ ತಿಳಿಸಿದರು.
ಪ್ರಧಾನಮಂತ್ರಿಯವರು ಇಬ್ಬರು ಮಾತೆಯರಿಗೆ ನಮನ ಸಲ್ಲಿಸಿದರು: ಮೊದಲನಿಗೆ ಭಾರತ ಮಾತೆಗೆ ಎರಡನೆಯದಾಗಿ ಶೌರ್ಯಶಾಲಿ ಯೋಧರಿಗೆ ಮತ್ತು ಭಾರತದ ಭದ್ರತಾ ಪಡೆಗಳ ಸಿಬ್ಬಂದಿಗೆ ಜನ್ಮ ನೀಡಿದ ವೀರ ಮಾತೆಯರಿಗೆ ನಮಿಸಿದರು.
ಶಾಂತಿಯ ನಮ್ಮ ಬದ್ಧತೆ ನಮ್ಮ ದೌರ್ಬಲ್ಯವಲ್ಲ
ಪ್ರಧಾನಮಂತ್ರಿ ಅವರು ಶಾಂತಿ, ಸ್ನೇಹ ಮತ್ತು ಶೌರ್ಯದ ಸ್ವರೂಪದ ಬಗ್ಗೆ ಸುದೀರ್ಘವಾಗಿ ಮಾತನಾಡಿ, ಇದು ಅನಾದಿಕಾಲದಿಂದಲೂ ಭಾರತದ ಸಂಸ್ಕೃತಿಯ ಭಾಗವಾಗಿದೆ ಎಂದರು. ಭಾರತ ಸದಾ ಶಾಂತಿ ಮತ್ತು ಪ್ರಗತಿಯ ವಾತಾವರಣ ಕದಡಲು ಪ್ರಯತ್ನಿಸಿದ ಎಲ್ಲರಿಗೂ ತಕ್ಕ ಉತ್ತರ ನೀಡಿದೆ ಎಂದು ತಿಳಿಸಿದರು.
ಭಾರತ ಶಾಂತಿ ಮತ್ತು ಸ್ನೇಹಕ್ಕೆ ಬದ್ಧವಾಗಿದೆ ಆದರೆ, ಇದನ್ನು ನಮ್ಮ ದೌರ್ಬಲ್ಯ ಎಂದು ಪರಿಗಣಿಸುವುದು ಸರಿಯಲ್ಲ ಎಂದರು. ಇಂದು ಭಾರತ ಅದು ನೌಕಾ ಶಕ್ತಿ, ವಾಯು ಶಕ್ತಿ, ಬಾಹ್ಯಾಕಾಶ ಶಕ್ತಿ ಮತ್ತು ನಮ್ಮ ಸೈನ್ಯದಲ್ಲಿ ಬಲಿಷ್ಠವಾಗಿದೆ. ಶಸ್ತ್ರಾಸ್ತ್ರಗಳ ಆಧುನೀಕರಣ ಮತ್ತು ಮೂಲಸೌಕರ್ಯಗಳ ಉನ್ನತೀಕರಣವು ನಮ್ಮ ರಕ್ಷಣಾ ಸಾಮರ್ಥ್ಯಗಳನ್ನು ಬಹುಪಟ್ಟು ಹೆಚ್ಚಿಸಿದೆ ಎಂದರು.
ಎರಡು ವಿಶ್ವಯುದ್ಧವೂ ಸೇರಿದಂತೆ ಜಾಗತಿಕ ಸೇನಾ ಶಕ್ತಿಯ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು ಶೌರ್ಯ ಸಾಹಸಕ್ಕೆ ಸುದೀರ್ಘ ಇತಿಹಾಸ ಹೊಂದಿದ್ದಾರೆ ಎಂದು ಸ್ಮರಿಸಿದರು.
ಅಭಿವೃದ್ಧಿಯ ಯುಗ
ಪ್ರಧಾನಮಂತ್ರಿ ಈಗ ವಿಸ್ತರಣಾ ಯುಗ ಮುಗಿದಿದೆ. ಇದು ವಿಕಾಸವಾದದ ಯುಗ ಎಂದು ಹೇಳಿದರು. ವಿಸ್ತರಣಾವಾದ ದೊಡ್ಡ ಹಾನಿ ಮಾಡಿದೆ ಎಂಬುದನ್ನು ಸ್ಮರಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಪಡೆಗಳ ಕ್ಷೇಮಕ್ಕಾಗಿ ಮತ್ತು ಭಾರತದ ಭದ್ರತೆಯ ಸನ್ನದ್ಧತೆಯನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಇಜಕಸ್ಸಿ ಆಧುನಿಕ ಶಸ್ತ್ರಾಸ್ತ್ರಗಳ ಲಭ್ಯತೆ, ಗಡಿ ಮೂಲಸೌಕರ್ಯ ವರ್ಧನೆ, ಗಡಿ ಪ್ರದೇಶಗಳ ಅಭಿವೃದ್ಧಿ ಮತ್ತು ರಸ್ತೆ ಸಂಪರ್ಕ ಜಾಲ ವಿಸ್ತರಣೆ ಸೇರಿದೆ ಎಂದರು. ಗಡಿ ಮೂಲಸೌಕರ್ಯ ವೆಚ್ಚವನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ ಎಂದೂ ತಿಳಿಸಿದರು.
ರಾಷ್ಟ್ರೀಯ ಭದ್ರತಾ ಉಪಕರಣವನ್ನು ಬಲಪಡಿಸುವ ಮತ್ತು ನಮ್ಮ ಸಶಸ್ತ್ರ ಪಡೆಗಳ ಯೋಗಕ್ಷೇಮವನ್ನು ಖಾತ್ರಿಪಡಿಸುವ ಪ್ರಯತ್ನಗಳನ್ನೂ ಪ್ರಧಾನಿ ಪ್ರಸ್ತಾಪಿಸಿದರು. ಸಿಡಿಎಸ್ ರಚನೆ, ಭವ್ಯವಾದ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಾಣ, ದಶಕಗಳ ನಂತರ ಒಂದು ಶ್ರೇಣಿ ಒಂದು ಪಿಂಚಣಿಯ ಬೇಡಿಕೆ ಈಡೇರಿಕೆ ಮತ್ತು ಸಶಸ್ತ್ರ ಪಡೆಗಳ ಕುಟುಂಬಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಕೈಗೊಂಡ ಕ್ರಮಗಳು ಸರ್ಕಾರದ ಇತ್ತೀಚಿನ ಉಪಕ್ರಮಗಳನ್ನು ಅವರು ಒತ್ತಿ ಹೇಳಿದರು.
ಲಡಾಖ್ ಸಂಸ್ಕೃತಿಗೆ ಗೌರವಾರ್ಪಣೆ
ತಮ್ಮ ಸಂವಾದದ ವೇಳೆ ಪ್ರಧಾನಮಂತ್ರಿಯವರು ಲಡಾಖ್ ಸಂಸ್ಕೃತಿಯ ಹಿರಿಮೆಯನ್ನು ಮತ್ತು ಕೌಶುಕ್ ಬಕುಲ, ರಿಂಪೋಚೆ ಅವರ ಶ್ರೇಷ್ಠ ಬೋಧನೆ ಸ್ಮರಿಸಿದರು, ಲಡಾಖ್ ತ್ಯಾಗದ ಭೂಮಿ ಎಂದು ಬಣ್ಣಿಸಿದ ಅವರು, ಈ ಭೂಮಿ ಹಲವು ದೇಶಭಕ್ತರಿಗೆ ಜನ್ಮ ನೀಡಿದೆ ಎಂದರು.
ಪ್ರಧಾನಮಂತ್ರಿಯವರು ಭಾರತದ ಜನರು ಗೌತಮ ಬುದ್ಧರ ಬೋಧನೆಯಿಂದ ಪ್ರೇರಿತರಾಗಿದ್ದಾರೆ, ಅವರಿಗೆ ಧೈರ್ಯ ಎಂಬುದು ಸಂಕಲ್ಪಕ್ಕೆ ಮತ್ತು ಸಹಾನುಭೂತಿಗೆ ಸಂಬಂಧಿಸಿದ್ದಾಗಿದೆ ಎಂದರು..
***
(Release ID: 1636182)
Visitor Counter : 342
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam