PIB Headquarters

ಕೋವಿಡ್-19 ಪಿ ಐ ಬಿ ದೈನಿಕ ವರದಿ

Posted On: 19 JUN 2020 6:31PM by PIB Bengaluru

ಕೋವಿಡ್-19 ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

ಕೋವಿಡ್-19 ಕ್ಕೆ ಸಂಬಂಧಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ಡೇಟ್ : ಭಾರತದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಕೋವಿಡ್-19 ರಿಂದ ಗುಣಮುಖರಾಗಿದ್ದಾರೆ; ಗುಣಮುಖ ಪ್ರಮಾಣ 53.79% ಗೆ ಸುಧಾರಣೆಯಾಗಿದೆ

ಕಳೆದ 24 ಗಂಟೆಗಳಲ್ಲಿ 10,386 ರೋಗಿಗಳು ಕೋವಿಡ್ -19 ರಿಂದ ಗುಣಮುಖರಾಗುವುದರೊಂದಿಗೆ , ಒಟ್ಟು ಗುಣಮುಖರಾದವರ ಸಂಖ್ಯೆ ಈಗ 2,04,710 ಕ್ಕೇರಿದೆ . ಗುಣಮುಖ ದರ ಇದಕ್ಕನುಗುಣವಾಗಿ 53.79 % ಗೇರಿದೆ. ಪ್ರಸ್ತುತ 1,63,248 ಸಕ್ರಿಯ ಪ್ರಕರಣಗಳು ವೈದ್ಯಕೀಯ ನಿಗಾದಲ್ಲಿವೆ. ದಿನನಿತ್ಯ ಗುಣಮುಖರಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಮತ್ತು ಅಂಕೆ ಸಂಖ್ಯೆಗಳು ಸಕ್ರಿಯ ಹಾಗು ಗುಣಮುಖರಾದ ಪ್ರಕರಣಗಳ ನಡುವಣ ಅಂತರ ಹೆಚ್ಚುತ್ತಿರುವುದನ್ನು ತೋರಿಸುತ್ತವೆ. ಗುಣಮುಖರಾಗುತ್ತಿರುವವರ ಅನುಪಾತ ಹೆಚ್ಚಳವು ಭಾರತವು ಸಕಾಲಿಕವಾಗಿ ಕೈಗೊಂಡ ಕೋವಿಡ್ -19 ನಿರ್ವಹಣಾ ವ್ಯೂಹವನ್ನು ಪ್ರತಿನಿಧಿಸುತ್ತದೆ.  

https://static.pib.gov.in/WriteReadData/userfiles/image/image001TJU2.jpg

ಸರಕಾರಿ ಪ್ರಯೋಗಾಲಯಗಳ ಸಂಖ್ಯೆ 703  ಕ್ಕೇರಿದೆ ಮತ್ತು ಖಾಸಗಿ ಪ್ರಯೋಗಾಲಯಗಳ ಸಂಖ್ಯೆ 257 ಕ್ಕೇರಿದೆ. (ಒಟ್ಟು 960)

ವಿವರಗಳಿಗೆ : : https://pib.gov.in/PressReleseDetail.aspx?PRID=1632590

ಕರ್ನಾಟಕದ ಮಾಹಿತಿ ತಂತ್ರಜ್ಞಾನ ಆಧಾರಿತ ಸಮಗ್ರ ಸಂಪರ್ಕ ಪತ್ತೆ ಮಾದರಿ ಮತ್ತು ಮನೆ ಮನೆ ಸಮೀಕ್ಷೆಗೆ ಕೇಂದ್ರದ ಶ್ಲ್ಯಾಘನೆ

ಕೋವಿಡ್ -19 ಪಾಸಿಟಿವ್ ಪ್ರಕರಣಗಳ  ಸಮಗ್ರ ಸಂಪರ್ಕ ಶೋಧನೆ ಮತ್ತು ಸುಮಾರು 1.5 ಕೋಟಿ ಮನೆಗಳನ್ನು ಒಳಗೊಂಡ ಭೌತಿಕ/ದೂರವಾಣಿ  ಆಧಾರಿತ ಮನೆ ಮನೆ ಸಮೀಕ್ಷೆಯ ಸಹಿತ ಕೋವಿಡ್ -19 ನಿರ್ವಹಣೆಗಾಗಿ ಕರ್ನಾಟಕ ಅನುಸರಿಸಿದ ಉತ್ತಮ ಪದ್ದತಿಗಳನ್ನು ಕೇಂದ್ರ ಸರಕಾರವು ಶ್ಲಾಘಿಸಿದೆ. ರಾಜ್ಯ ಸರಕಾರವು ಕೈಗೊಂಡ ಎರಡು ಉಪಕ್ರಮಗಳು ಬಹು ವಲಯದ ಏಜೆನ್ಸಿಗಳ ಭಾಗೀದಾರಿಕೆ ಮೂಲಕ ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಹಾಗು ಮಧ್ಯಪ್ರವೇಶಗಳನ್ನು ಒಳಗೊಂಡು ಕೋವಿಡ್ ನಿಭಾವಣೆಗಾಗಿ ಇಡೀ  ಸರಕಾರದ ಅನುಸರಿಸಿದ ಯಶಸ್ವೀ ಕ್ರಮಗಳಾಗಿ ಮೂಡಿ ಬಂದಿವೆ. ಕೋವಿಡ್ -19  ಜಾಗತಿಕ ಸಾಂಕ್ರಾಮಿಕ ನಿಭಾವಣೆಗಾಗಿ ಇತರ ರಾಜ್ಯ ಸರಕಾರಗಳಿಗೆ ಅವುಗಳ ಸ್ಥಳೀಯ ಪರಿಸ್ಥಿತಿಗಳಲ್ಲಿ ಉತ್ತಮ ಪದ್ದತಿಗಳನ್ನು ಅನುಸರಿಸುವಂತೆ ಕೇಂದ್ರವು ಸಲಹೆ ಮಾಡಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1632556

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ನಿರ್ದೇಶನಗಳ ಹಿನ್ನೆಲೆ- ದಿಲ್ಲಿಯಲ್ಲಿ ಕೋವಿಡ್ -19 ನಿರ್ವಹಣಾ ವಿಧಾನದಲ್ಲಿ ಅಮೂಲಾಗ್ರ ಬದಲಾವಣೆ, ಆರೋಗ್ಯ ಸಮೀಕ್ಷೆಗಳಿಂದ ಹಿಡಿದು ಪರೀಕ್ಷೆಗಳವರೆಗೆ ಬದಲಾವಣೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿಗಳ ವೆಚ್ಚದ ಮೇಲೂ  ಕಡಿವಾಣ

ದಿಲ್ಲಿಯ ಜನತೆಗೆ ಪರಿಹಾರ ಒದಗಿಸುವ ಮೋದಿ ಸರಕಾರದ ಬದ್ದತೆಯನ್ನು ಪ್ರದರ್ಶಿಸಿರುವ , ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ದಿಲ್ಲಿಯ ಪರಿಸ್ಥಿತಿಯ ಮೇಲೆ  ಸ್ವತಹ ನಿಗಾ ಇರಿಸಿದ್ದಾರೆ. ಪ್ರಧಾನ ಮಂತ್ರಿ ಅವರ ಸಲಹೆಯ ಮೇರೆಗೆ ಅವರು ಮೇಲುಸ್ತುವಾರಿ ಮಾಡುತ್ತಿದ್ದಾರೆ. ದಿಲ್ಲಿಯಲ್ಲಿ ಕೋವಿಡ್ -19 ಪರಿಸ್ಥಿತಿಗೆ ಸಂಬಂಧಿಸಿ  ಶ್ರೀ ಅಮಿತ್ ಶಾ ಅವರು ತಾವು ಅಧ್ಯಕ್ಷತೆ ವಹಿಸಿ ನಡೆಸಿದ ಸರಣಿ ಸಭೆಗಳಲ್ಲಿ ನೀಡಿದ ನಿರ್ದೇಶನಗಳನ್ನು ಜಾರಿಗೆ ತರುತ್ತಿರುವ ಅಧಿಕಾರಿಗಳು  ದಿಲ್ಲಿಯ 242 ಕಂಟೈನ್ ಮೆಂಟ್ ವಲಯಗಳಲ್ಲಿ ಮನೆ ಮನೆ ಆರೋಗ್ಯ ಸಮೀಕ್ಷೆಯನ್ನು ನಿನ್ನೆ ಪೂರ್ಣಗೊಳಿಸಿದ್ದಾರೆ. ಒಟ್ಟು 2.3 ಲಕ್ಷ ಜನರನ್ನು ಸಮೀಕ್ಷಿಸಲಾಗಿದೆ. ಜೊತೆಗೆ ದಿಲ್ಲಿಯಲ್ಲಿ ಪರೀಕ್ಷೆಗಳನ್ನು ಹೆಚ್ಚಿಸುವ  ಮತ್ತು ತ್ವರಿತವಾಗಿ ಫಲಿತಾಂಶ ನೀಡುವ ಅವರ ನಿರ್ದೇಶನದನ್ವಯ ತ್ವರಿತ ಆಂಟಿಜೆನ್ ಪರೀಕ್ಷಾ ವಿಧಾನದ ಮೂಲಕ ಪರೀಕ್ಷೆಗಳನ್ನು ನಿನ್ನೆ ಆರಂಭಿಸಲಾಗಿದ್ದು, ಒಟ್ಟು 7,040 ಮಂದಿ 193 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಗಾಗಿದ್ದಾರೆ. ಬರಲಿರುವ ದಿನಗಳಲ್ಲಿ ಪರೀಕ್ಷೆಗಳು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಲಿವೆ. ಶ್ರೀ ಅಮಿತ್ ಶಾ ಅವರು ಕೈಗೊಂಡ ನಿರ್ಧಾರಗಳ ಅನ್ವಯ  ಸ್ಯಾಂಪಲ್ ಪರೀಕ್ಷೆಗಳನ್ನು ತಕ್ಷಣದಿಂದಲೇ ದುಪ್ಪಟ್ಟು ಮಾಡಲಾಗಿದೆ. ದಿಲ್ಲಿಯಲ್ಲಿ 2020 ಜೂನ್ 15 ರಿಂದ 17 ನಡುವೆ  ಒಟ್ಟು 27,263 ಪರೀಕ್ಷಾ ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದೆ. ಮೊದಲು ದಿನನಿತ್ಯದ ಸಂಗ್ರಹ ಮೊದಲು 4,000-4,500 ರಷ್ಟಿತ್ತು .

ವಿವರಗಳಿಗೆ : https://pib.gov.in/PressReleseDetail.aspx?PRID=1632589

ಎನ್.ಸಿ.ಆರ್. ಹಿರಿಯ ಅಧಿಕಾರಿಗಳ ಜೊತೆ ಕೋವಿಡ್ -19 ಸಿದ್ದತೆಗಳ ಬಗ್ಗೆ ಕೇಂದ್ರ ಗೃಹ ಸಚಿವರಿಂದ ಪರಾಮರ್ಶಾ ಸಭೆ

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ದಿಲ್ಲಿ-ಎನ್.ಸಿ.ಆರ್. ವಲಯದಲ್ಲಿ ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ನಿಭಾವಣೆಗಾಗಿ ಏಕೀಕೃತ ವ್ಯೂಹದ ಅವಶ್ಯಕತೆಯನ್ನು ಪ್ರತಿಪಾದಿಸಿದ್ದಾರೆ. ನಿನ್ನೆ ಕೋವಿಡ್ -19 ನಿರ್ವಹಣೆಯನ್ನು  ಕುರಿತ ಸಿದ್ದತೆಗಳ  ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಅಮಿತ್ ಶಾ ಎನ್.ಸಿ.ಆರ್. ವಲಯದ ದಟ್ಟ ನಗರ ಪರಿಸರದ ಹಿನ್ನೆಲೆಯಲ್ಲಿ ,ದಿಲ್ಲಿಯಲ್ಲಿರುವ ಮತ್ತು ಎನ್.ಸಿ.ಆರ್. ವಲಯದಲ್ಲಿರುವ ಎಲ್ಲಾ ಸಂಬಂಧಿತ ಅಧಿಕಾರಿಗಳು ವೈರಸ್ ನಿಭಾವಣೆಗೆ ಒಗ್ಗೂಡಬೇಕು ಎಂದರು. ಇನ್ನಷ್ಟು ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಅವರು ರೋಗ ಪತ್ತೆಯಲ್ಲಿ ಪಾಸಿಟಿವ್ ಆಗಿರುವವರನ್ನು ಚಿಕಿತ್ಸೆಗೆ ಒಳಪಡಿಸಬೇಕು ಎಂದೂ ಹೇಳಿದರು. ಹಂತದಲ್ಲಿ ಆಂದೋಲನದೋಪಾದಿಯಲ್ಲಿ ಕೆಲಸ ಮಾಡಬೇಕಾದ ಅಗತ್ಯವನ್ನು ಗೃಹ ಸಚಿವರು ಒತ್ತಿ ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1632370

ಹವಾನಿಯಂತ್ರಿತ ಕೊಳವೆಗಳ (ಡಕ್ಟ್ )  ಮೂಲಕ ಕೋವಿಡ್ -19 ವೈರಸ್ ಹರಡುವ ಅಪಾಯದ ಹಿನ್ನೆಲೆಯಲ್ಲಿ ಹವಾನಿಯಂತ್ರಿತ ಬೋಗಿಗಳು ಸೂಕ್ತವಲ್ಲ

ಕೋವಿಡ್ -19 ವಿರುದ್ದ ಸಾಮರ್ಥ್ಯ ವರ್ಧನೆಯ ಅಂಗವಾಗಿ , ಭಾರತೀಯ ರೈಲ್ವೇಯು 5231 ಹವಾನಿಯಂತ್ರಿತವಲ್ಲದ ಬೋಗಿಗಳನ್ನು ಐಸೋಲೇಶನ್ ಬೋಗಿಗಳಾಗಿ ಪರಿವರ್ತಿಸಿದೆ. ಇವು ಕೋವಿಡ್ ಶುಶ್ರೂಷಾ ಕೇಂದ್ರಗಳ (ಸಿ.ಸಿ.ಸಿ.) ಲ್ಲಿ ಲಭ್ಯವಿರುವ ಸವಲತ್ತುಗಳನ್ನು ಒಳಗೊಂಡಿರುತ್ತವೆ. ಎಂ..ಎಚ್.ಎಫ್.ಡಬ್ಲ್ಯು. ಮತ್ತು ನೀತಿ ಆಯೋಗಗಳು ರೂಪಿಸಿದ   ಸಮಗ್ರ ಕೋವಿಡ್ ಯೋಜನೆಯ ಭಾಗವಾಗಿರುವ ಸೌಲಭ್ಯಗಳನ್ನು ಸಾಮಾನ್ಯವಾಗಿ ರಾಜ್ಯದಲ್ಲಿರುವ ಸೌಲಭ್ಯಗಳು ಸಾಕಾಗದೇ ಇದ್ದಾಗ ಬಳಸಬಹುದಾಗಿದೆ. ಸೌಲಭ್ಯಗಳು ಉತ್ತಮ ಗಾಳಿ ಬೆಳಕಿನ ಅವಕಾಶವನ್ನು ಹೊಂದಿರಬೇಕಾಗುತ್ತದೆ ಮತ್ತು ನೈಸರ್ಗಿಕ ಬೆಳಕಿಗೆ ಸಾಕಷ್ಟು ಅವಕಾಶಗಳನ್ನು ಒಳಗೊಂಡಿರಬೇಕಾಗುತ್ತದೆ. ಹವಾನಿಯಂತ್ರಿತ ಸೌಲಭ್ಯಗಳನ್ನು ಒದಗಿಸಲಾಗಿದ್ದರೆ ಅವುಗಳಿಗೆ ಕೊಳವೆಗಳಿರಬಾರದು. ಇದರಿಂದಾಗಿ ಅಲ್ಲಿ ಹವಾನಿಯಂತ್ರಿತ ಸೌಲಭ್ಯ ಒದಗಿಸಲು ಸಾಧ್ಯವಿಲ್ಲ. ಹವಾನಿಯಂತ್ರಿತ ಮತ್ತು ಹವಾನಿಯಂತ್ರಿತವಲ್ಲದ ಬೋಗಿಗಳನ್ನು ಕುರಿತ ವಿಷಯ ನೀತಿ ಆಯೋಗ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳ ಜೊತೆಯಲ್ಲಿ ಬೋಗಿಗಳನ್ನು ಕೋವಿಡ್ ರೋಗಿಗಳಿಗಾಗಿ ಪರಿವರ್ತಿಸುವುದಕ್ಕೆ ಮೊದಲೇ ಚರ್ಚಿಸಲಾಗಿದೆ, ಮತ್ತು ಹವಾನಿಯಂತ್ರಕದ ಕೊಳವೆಗಳ ಮೂಲಕ ಕೋವಿಡ್ -19  ವೈರಸ್ ಗಳು ಹರಡುವ ಅಪಾಯ ಇರುವುದರಿಂದ ಹವಾನಿಯಂತ್ರಿತ ಬೋಗಿಗಳು ಸೂಕ್ತವಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು ಹಾಗು ಹೆಚ್ಚಿನ ಸಾಮಾನ್ಯ ನೈಸರ್ಗಿಕ ಉಷ್ಣಾಂಶ ವೈರಸ್ ವಿರುದ್ದ ಹೋರಾಟಕ್ಕೆ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಕಿಟಕಿಗಳ ಮೂಲಕ ಗಾಳಿಯ ಪ್ರಸರಣವು ರೋಗಿಗಳಿಗೆ ಪ್ರಯೋಜನಕಾರಿ ಎಂದು ಭಾವಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1632563

ಬೀದಿ ವ್ಯಾಪಾರಿಗಳಿಗೆ ವಿಶೇಷ ಕಿರು ಸಾಲ ಸೌಲಭ್ಯ ಯೋಜನೆ ಆರಂಭ - ಆತ್ಮ ನಿರ್ಭರ ಭಾರತದತ್ತ ಹೆಜ್ಜೆ

ಬೀದಿ ವ್ಯಾಪಾರಿಗಳಿಗೆ ವಿಶೇಷ ಕಿರು ಸಾಲ ಸೌಲಭ್ಯವಾಗಿರುವ ಪ್ರಧಾನ ಮಂತ್ರಿ ಅವರ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ ನಿಧಿ (ಪ್ರಧಾನ ಮಂತ್ರಿ ಸ್ವ ನಿಧಿ) ಅನುಷ್ಟಾನಕ್ಕೆ ಸಿಡ್ಬಿಯನ್ನು ಬಳಸಿಕೊಳ್ಳುವ ಕ್ರಮವಾಗಿ ಇಂದು ವಸತಿ ಮತ್ತು ನಗರಾಭಿವೃದ್ದಿ ಸಚಿವಾಲಯ ಹಾಗು ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ದಿ ಬ್ಯಾಂಕ್ (ಎಸ್..ಡಿ.ಬಿ..-ಸಿಡ್ಬಿ) ನಡುವೆ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಲಾಯಿತು. ಎಂ..ಎಚ್.ಯು.. ಮಾರ್ಗದರ್ಶನದ ಅಡಿಯಲ್ಲಿ ಸಿಡ್ಬಿಯು ಪಿ.ಎಂ. ಸ್ವ ನಿಧಿ ಯೋಜನೆಯನ್ನು ಅನುಷ್ಟಾನಿಸಲಿದೆ. ಮಾತ್ರವಲ್ಲ ಅದು ಸಾಲ ನೀಡುವ ಸಂಸ್ಥೆಗಳಿಗೆ ಕಿರು ಮತ್ತು ಸಣ್ಣ ಉದ್ಯಮಗಳಿಗೆ ಸಾಲ ಖಾತ್ರಿ ನಿಧಿ ಟ್ರಸ್ಟಿನ ಮೂಲಕ ಸಾಲ ಖಾತ್ರಿಯನ್ನೂ ನಿಭಾಯಿಸುತ್ತದೆ. ಅದು ಗ್ರಾಹಕರಿಗಾಗಿ ಮತ್ತು ಸಮಗ್ರ .ಟಿ. ವೇದಿಕೆಯನ್ನು ಅಭಿವೃದ್ದಿಪಡಿಸಿ ನಿರ್ವಹಿಸುತ್ತದೆ. ಇದರಿಂದ ತುದಿಯಿಂದ ಕೊನೆಯವರೆಗೂ ಮಾಹಿತಿ ತಂತ್ರಜ್ಞಾನ ಪರಿಹಾರಗಳು ಲಭ್ಯವಾಗುತ್ತವೆ. ಎಲ್ಲಾ ಪ್ರಕ್ರಿಯೆಗಳ ದಾಖಲೀಕರಣ  ಮತ್ತು ಕೆಲಸದ ಪ್ರವಹಿಸುವಿಕೆ/ಚಲನೆಯನ್ನು ಪರಿಹಾರಗಳಲ್ಲಿ ಪೋರ್ಟಲ್ ಅಥವಾ ಮೊಬೈಲ್ ಆಪ್ ಮೂಲಕ ನಿಭಾಯಿಸಬಹುದಾಗಿದೆ. ನಗರ ಸ್ಥಳೀಯಾಡಳಿತ ಸಂಸ್ಥೆಗಳು, ಸಾಲ ನೀಡಿಕೆ ಸಂಸ್ಥೆಗಳು , ಡಿಜಿಟಲ್ ಪಾವತಿ ಅಗ್ರಿಗೇಟರುಗಳು ಮತ್ತು ಇತರ ಭಾಗೀದಾರರು ನಡುವೆ ಸಂವಹನವನ್ನು ಇದು ಸಾಧಿಸಲಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1632543

ವಾರಾಣಾಸಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನ ಮಂತ್ರಿ ಶ್ರೀ ಮೋದಿ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ  ವಾರಾಣಾಸಿಯಲ್ಲಿ ಅನುಷ್ಟಾನಿಸಲಾಗುತ್ತಿರುವ ವಿವಿಧ ಅಭಿವೃದ್ದಿ ಯೋಜನೆಗಳ ಪ್ರಗತಿ ಪರಿಶೀಲನೆಯನ್ನು  ನಡೆಸಿದರು. ಪ್ರಗತಿ ಪರಿಶೀಲನಾ  ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರಿಗೆ ಕಾಶಿ ವಿಶ್ವನಾಥ ಮಂದಿರ ಸಂಕೀರ್ಣದಲ್ಲಿ ನಡೆಸಲಾಗುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಡ್ರೋನ್ ಕ್ಯಾಮರಾದ ಪ್ರದರ್ಶಿಕೆ ಮೂಲಕ ಪ್ರಧಾನವಾಗಿ ವಿವರಿಸಲಾಯಿತು. ಕೋವಿಡ್ -19 ಸಮರ್ಪಕ ನಿಭಾವಣೆಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಯಿತು. ಪ್ರಧಾನ ಮಂತ್ರಿ ಅವರು ಆರೋಗ್ಯ ಸೇತು ಆಪ್ ಅನ್ನು ಪರೀಕ್ಷೆ, ಪತ್ತೆ ಹಚ್ಚುವಿಕೆ ಮತ್ತು ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ವ್ಯಾಪಕವಾಗಿ ಮತ್ತು ಸಮರ್ಪಕವಾಗಿ ಬಳಸಲಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ಜಿಲ್ಲಾಡಳಿತಗಳು ಆಹಾರ ಒದಗಣೆ , ವಸತಿ ಮತ್ತು ಕ್ವಾರಂಟೈನ್ ವ್ಯವಸ್ಥೆಗಳನ್ನು ಮಾಡುವಲ್ಲಿ ನಡೆಸಿದ ಪ್ರಯತ್ನಗಳನ್ನು ಶ್ಲಾಘಿಸಲಾಯಿತು. ಹಿಂತಿರುಗಿ ಬಂದಿರುವ ವಲಸೆ ಕಾರ್ಮಿಕರ ಕೌಶಲ್ಯಗಳ ನಕ್ಷೆಯನ್ನು ಆದ್ಯತೆಯ ಮೇಲೆ ರೂಪಿಸುವಂತೆ ನಿರ್ದೇಶನ ನೀಡಿದ ಅವರು ಕಾರ್ಮಿಕರಿಗೆ ಅವರ ಕೌಶಲ್ಯಗಳನ್ನು ಆಧರಿಸಿ ಆದಾಯ ಒದಗಿಸುವ ಉದ್ಯೋಗ ನೀಡಬೇಕು ಎಂದೂ ಹೇಳಿದರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾದ ಧನಾತ್ಮಕ ಪರಿಣಾಮ  ಮತ್ತು ಸಂಕಷ್ಟದ ಸಮಯದಲ್ಲಿ ರಾಜ್ಯ ಸರಕಾರದ ಕೋವಿಡ್ ಪರಿಹಾರ ಯೋಜನೆಗಳ ಬಗ್ಗೆ ಹಿಮ್ಮಾಹಿತಿ ಪಡೆದುಕೊಳ್ಳಲಾಯಿತು.

ವಿವರಗಳಿಗೆ: https://pib.gov.in/PressReleseDetail.aspx?PRID=1632595

ಅಂತಾರಾಷ್ಟ್ರೀಯ ಯೋಗ ದಿನ (.ಡಿ.ವೈ.) ಕುರಿತ ಪ್ರಧಾನ ಮಂತ್ರಿ ಅವರ ಹೇಳಿಕೆ ಟೆಲಿವಿಶನ್ ಗಳಲ್ಲಿ ಪ್ರಸಾರವಾಗಲಿದೆ

2020   ಅಂತಾರಾಷ್ಟ್ರೀಯ ಯೋಗ ದಿನದಂದು  ಪ್ರಮುಖ ಕಾರ್ಯಕ್ರಮವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಸಂದೇಶ ನೀಡಲಿದ್ದಾರೆ. ಪ್ರಧಾನ ಮಂತ್ರಿ ಅವರ ಸಂದೇಶ 2020 ಜೂನ್ 21 ರಂದು ಬೆಳಿಗ್ಗೆ 6.30 ಗಂಟೆಗೆ ಟೆಲಿವಿಶನ್ನಿನಲ್ಲಿ ಪ್ರಸಾರವಾಗಲಿದೆ. ವರ್ಷ .ಡಿ.ವೈ. ಯನ್ನು ಆಯುಷ್ ಸಚಿವಾಲಯವು ಇಲೆಕ್ಟ್ರಾನಿಕ್ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಬೃಹತ್ ಪ್ರಮಾಣದಲ್ಲಿ ಆಚರಿಸಲಿದೆ. ಹಿಂದಿನ ವರ್ಷಗಳಲ್ಲಿ .ಡಿ.ವೈಯನ್ನು ಸಾವಿರಾರು ಜನರು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡು ಸಾರ್ವಜನಿಕ ಸ್ಥಳಗಳಲ್ಲಿ ಯೋಗದ ಪ್ರದರ್ಶನ ನೀಡುವ ಮೂಲಕ ಆಚರಿಸಲಾಗುತ್ತಿತ್ತು. ಈಗ ಕೋವಿಡ್ -19  ರಿಂದುಂಟಾಗಿರುವ ಜಾಗತಿಕ ಆರೋಗ್ಯ ತುರ್ತು ಸ್ಥಿತಿಯಿಂದಾಗಿ ವರ್ಷ ಅಂತಹ ಆಚರಣೆಗಳ ಮೇಲೆ ಗಮನ ಅಷ್ಟಾಗಿ ಇಲ್ಲ, ಮತ್ತು ಜನರು ತಮ್ಮ ಮನೆಗಳಲ್ಲಿ ತಮ್ಮ ಇಡೀ ಕುಟುಂಬದ ಜೊತೆ ಯೋಗ ಮಾಡುವುದರತ್ತ ಗಮನ ಕೇಂದ್ರೀಕರಿಸಲಾಗಿದೆ. ಜಾಗತಿಕ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಯೋಗವು ಪ್ರಸ್ತುತವಾದುದಾಗಿದೆ, ಅದರ ಅನುಷ್ಟಾನ ದೈಹಿಕ ಮತ್ತು ಮಾನಸಿಕ ಕ್ಷೇಮಕ್ಕೆ ದಾರಿ ಮಾಡಿಕೊಡುತ್ತದೆ ಹಾಗು ರೋಗದ ವಿರುದ್ದ ಹೋರಾಡಲು ವೈಯಕ್ತಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ವಿವರಗಳಿಗಾಗಿ: https://pib.gov.in/PressReleasePage.aspx?PRID=1632360

ಬಾಕಿ ಉಳಿದಿರುವ 14 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ  ಒಂದು ದೇಶ ಒಂದು ರೇಶನ್ ಕಾರ್ಡ್ ಯೋಜನೆ ಜಾರಿಗೆ ಸಂಬಂಧಿಸಿ ಚರ್ಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಸಚಿವರ ಜೊತೆ ಶ್ರೀ ರಾಂ ವಿಲಾಸ್ ಪಾಸ್ವಾನ್ ವೀಡಿಯೋ ಕಾನ್ಫರೆನ್ಸ್

ಕೇಂದ್ರ  ಗ್ರಾಹಕ ವ್ಯವಹಾರಗಳು , ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವರಾದ ಶ್ರೀ ರಾಂ ವಿಲಾಸ್ ಪಾಸ್ವಾನ್ ಅವರು ಎನ್.ಎಫ್.ಎಸ್.. ಪಡಿತರ ಕಾರ್ಡುದಾರರಿಗೆ  “ಒಂದು ದೇಶ, ಒಂದು ರೇಶನ್ ಕಾರ್ಡ್”  ಕಾರ್ಯಕ್ರಮದ ಮೂಲಕ ರಾಷ್ಟ್ರೀಯ ಮಟ್ಟದ ಪೊರ್ಟೆಬಿಲಿಟಿ ಒದಗಿಸುವುದಕ್ಕೆ ಸಂಬಂಧಿಸಿದ ಪ್ರಗತಿ ಪರಿಶೀಲನೆಗಾಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. 14 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿಒಂದು ರಾಷ್ಟ್ರ, ಒಂದು ರೇಶನ್ ಕಾರ್ಡ್ಸೌಲಭ್ಯವನ್ನು ಅನುಷ್ಟಾನಿಸಲು ಸಿದ್ದತಾ ಸ್ಥಿತಿ, ಕ್ರಿಯಾ ಯೋಜನೆಗಳು, ಮತ್ತು ತಾತ್ಕಾಲಿಕ ಸಮಯದ ಗಡುವಿನ ಕುರಿತು ತಿಳಿದುಕೊಳ್ಳುವುದು ಸಭೆಯ ಉದ್ದೇಶ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ,   ಯೋಜನೆಯು ವಲಸೆ ಕಾರ್ಮಿಕರಿಗೆ ಸಾಕಷ್ಟು ಪ್ರಯೋಜನಕಾರಿಯಾಗಿದೆ, ವಿವಿಧೆಡೆ ಸಿಲುಕಿ ಹಾಕಿಕೊಂಡವರಿಗೆ, ಅವಶ್ಯಕತೆ ಇರುವವರಿಗೆ ಅವರ ಆಹಾರ ಧಾನ್ಯಗಳ ಕೋಟಾವನ್ನು ಪಡೆದುಕೊಳ್ಳಲು ಇದರಿಂದ ಸಹಾಯವಾಗಿದೆ ಎಂದು ಶ್ರೀ ಪಾಸ್ವಾನ್ ಹೇಳಿದರು. 2020 ಆಗಸ್ಟ್ ವೇಳೆಗೆ ಮತ್ತೆ ಮೂರು ರಾಜ್ಯಗಳು ಉತ್ತರಾಖಂಡ , ನಾಗಾಲ್ಯಾಂಡ್ ಮತ್ತು ಮಣಿಪುರ ಗಳು ರಾಷ್ಟ್ರೀಯ ಗುಚ್ಚಕ್ಕೆ ಸೇರ್ಪಡೆಗೊಳ್ಳಲಿವೆ ಮತ್ತು ಇಲಾಖೆಯು ವರ್ಷಾಂತ್ಯದೊಳಗೆ ಉಳಿದ ಎಲ್ಲಾ 14 ರಾಜ್ಯಗಳನ್ನು ಒಂದು ದೇಶ ಒಂದು ರೇಶನ್ ಕಾರ್ಡ್ ಅಡಿಯಲ್ಲಿ ತರಲು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದೂ ಶ್ರೀ ಪಾಸ್ವಾನ್ ಹೇಳಿದರು. ಕಾಪು ದಾಸ್ತಾನಿನಲ್ಲಿ ಸಾಕಷ್ಟು ಆಹಾರ ಧಾನ್ಯಗಳು ಲಭ್ಯ ಇವೆ ಎಂದ ಅವರು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಯಾರೂ ಹಸಿವೆಯಿಂದ ಕಂಗೆಡುವ ಪರಿಸ್ಥಿತಿ ಇಲ್ಲ ಎಂದರು.

ವಿವರಗಳಿಗೆ: https://pib.gov.in/PressReleasePage.aspx?PRID=1632376

ಕಿರು ಅರಣ್ಯ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯಿಂದಾಗಿ ಬುಡಕಟ್ಟು ಆರ್ಥಿಕತೆಗೆ 2000 ಕೋ.ರೂ.ಗಳಿಗೂ ಅಧಿಕ ಹಣಕಾಸು ಸೇರ್ಪಡೆ

ಕಿರು ಅರಣ್ಯ ಉತ್ಪನ್ನಗಳ ಖರೀದಿಯನ್ನು 17 ರಾಜ್ಯಗಳಲ್ಲಿ ಆರಂಭಿಸಲಾಯಿತು ಮತ್ತು ಕೇಂದ್ರ ಸರಕಾರದ  ಮೂಲಕ ಹಾಗು  ರಾಜ್ಯಗಳ ನಿಧಿಯ ಮೂಲಕ 835  ಕೋ.ರೂ.ಗಳ ಖರೀದಿಯನ್ನು ಮಾಡಲಾಯಿತು. ಖಾಸಗಿ ವ್ಯಾಪಾರದ ಮೂಲಕ 2020 ಏಪ್ರಿಲ್ ನಿಂದ ಇದುವರೆಗೆ ಒಟ್ಟು 1200  ಕೋ.ರೂ.ಗಳ ಖರೀದಿ ಮಾಡಲಾಗಿದೆ. ಚಾಲ್ತಿಯಲ್ಲಿರುವ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಾರಣದಿಂದಾಗಿ ಉದ್ಭವಿಸಿರುವ ಅಭೂತಪೂರ್ವ ಪರಿಸ್ಥಿತಿಯಲ್ಲಿ ಬುಡಕಟ್ಟು ಜನತೆಯಲ್ಲಿ ಗಂಭೀರ ಸಮಸ್ಯೆಗಳುಂಟಾಗಿದ್ದವು ಮತ್ತು ಅವರು ಹೊಸ ಸವಾಲುಗಳನ್ನು ಎದುರಿಸಬೇಕಾದ  ಸ್ಥಿತಿಯೊದಗಿತು. ಬುಡಕಟ್ಟು ಜನರ ಹಿಮ್ಮುಖ ವಲಸೆ ಇಡೀ ಬುಡಕಟ್ಟು ಆರ್ಥಿಕತೆಯನ್ನು ಹಳಿ ತಪ್ಪಿಸಿತು. ಇಂತಹ ಸ್ಥಿತಿಯಲ್ಲಿ ಎಂ.ಎಫ್. ಪಿ.ಗಾಗಿ ಎಂ.ಎಸ್.ಪಿನಿಗದಿ ಮತ್ತು ಖರೀದಿ ಎಲ್ಲಾ ರಾಜ್ಯಗಳಿಗೆ ಒಂದು ಅವಕಾಶವನ್ನು ಒದಗಿಸಿತು.

ವಿವರಗಳಿಗಾಗಿ: https://pib.gov.in/PressReleasePage.aspx?PRID=1632397

ಕೋವಿಡ್ -19 ಪತ್ತೆಗೆ ..ಟಿ. ಗುವಾಹಟಿಯಿಂದ ಕೈಗೆಟಕುವ ದರದಲ್ಲಿ ಕಿಟ್ ಗಳ ಅಭಿವೃದ್ದಿ

ನೊವೆಲ್ ಕೊರೊನಾವೈರಸ್ ಕಪಿಮುಷ್ಟಿಯಿಂದ ಹೊರಬರಬೇಕಾದರೆ ನಿಖರ ಪರೀಕ್ಷೆ ಬಹಳ ಮುಖ್ಯ. ನಿಟ್ಟಿನಲ್ಲಿ ಪ್ರಯತ್ನಗಳನ್ನು ಹೆಚ್ಚಿಸಿರುವ ಗುವಾಹಟಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ ( ..ಟಿ.) ಯು ಆರ್.ಆರ್. ಪಶು ಆರೋಗ್ಯ ಲಿಮಿಟೆಡ್ ಮತ್ತು ಗುವಾಹಟಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ (ಜಿ.ಎಂ.ಸಿ.ಎಚ್.) ಜೊತೆಗೂಡಿ ಕಡಿಮೆ ಖರ್ಚಿನ ರೋಗ ಪತ್ತೆ ಕಿಟ್ ಗಳನ್ನು ಅಭಿವೃದ್ದಿಪಡಿಸಿದೆ. ಅದು  ವೈರಲ್ ಟ್ರಾನ್ಸ್ ಪೋರ್ಟ್ ಮೀಡಿಯಾ (ವಿ.ಟಿ.ಎಂ.)  ಕಿಟ್ , ಆರ್.ಟಿ. –ಪಿ.ಸಿ.ಆರ್. ಕಿಟ್ ಮತ್ತು ಆರ್.ಎನ್.. ಪ್ರತ್ಯೇಕಿಸುವ ಕಿಟ್ ಗಳನ್ನು ಅಭಿವೃದ್ದಿಪಡಿಸಿದೆ.  

ವಿವರಗಳಿಗೆ: https://pib.gov.in/PressReleasePage.aspx?PRID=1632576

 

ಸಾಕಷ್ಟು/ ಹೆಚ್ಚುವರಿ ದಾಸ್ತಾನನ್ನು ದೇಶೀಯ ಮಾರುಕಟ್ಟೆಗೆ ಒದಗಿಸಿದ ಬಳಿಕ ಎಚ್.ಸಿ.ಕ್ಯೂ. ರಪ್ಥು ಮೇಲಿನ ನಿಷೇಧ ತೆರವು

ಸರಕಾರವು ತಕ್ಷಣದಿಂದಲೇ ಜಾರಿಗೆ ಬರುವಂತೆ ಮಲೇರಿಯಾ ನಿರೋಧಿ ಔಷಧಿ ಹೈಡ್ರೋಕ್ಸಿ ಕ್ಲೋರೋಕ್ವಿನ್  (ಎಚ್.ಸಿ.ಕ್ಯು.)  .ಪಿ.. ಮತ್ತು ಸಂಬಂಧಿ ಫಾಮ್ಯುಲಾಗಳ ರಫ್ತು ಮೇಲಣ ನಿರ್ಬಂಧವನ್ನು ತೆರವು ಮಾಡಿದೆ. ವಿದೇಶೀ ವ್ಯಾಪಾರಗಳ ಮಹಾ ನಿರ್ದೇಶನಾಲಯ ಬಗ್ಗೆ ನಿನ್ನೆ ಔಪಚಾರಿಕ ಅಧಿಸೂಚನೆಯನ್ನು ಹೊರಡಿಸಿದೆ. ಅಂತರ ಸಚಿವಾಲಯ ಉನ್ನತಾಧಿಕಾರದ ಸಮಿತಿಯು ದೇಶದಲ್ಲಿ ಔಷಧಿ ಲಭ್ಯತೆಯ ಬಗ್ಗೆ ಪರಾಮರ್ಶೆ ನಡಿಸಲು ಪ್ರತೀ ಹದಿನೈದು ದಿನಗಳಿಗೊಮ್ಮೆ ಸಭೆ ಸೇರಿ ಪರಿಸ್ಥಿತಿಯ ಮೇಲೆ ನಿಗಾ ಇರಿಸುತ್ತದೆ. ಮತ್ತು ಪರಿಸ್ಥಿತಿಯ ಮೌಲ್ಯಮಾಪನ ಮಾಡುತ್ತದೆ.ಕೋವಿಡ್ ನಿಭಾಯಿಸಲು  12.22 ಕೋಟಿ ಎಚ್.ಸಿ.ಕ್ಯೂ. 200 ಎಂ.ಜಿ. ಮಾತ್ರೆಗಳ ಗುರಿಯನ್ನು ಕೇಂದ್ರೀಯ ಸಾರ್ವಜನಿಕ ರಂಗದ ಉದ್ಯಮವಾದ ಎಚ್.ಎಲ್.ಎಲ್. ಲೈಫ್ ಕೇರ್ ಲಿಮಿಟೆಡ್ ಗೆ ನೀಡಲಾಗಿತ್ತು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೈಡ್ರೋಕ್ಲೋರೋಕ್ವಿನ್ ಆವಶ್ಯಕತೆ ಪೂರೈಸಲ್ಪಟ್ಟಿದೆ. ಪ್ರಸ್ತುತ ಎಂ..ಎಚ್. ಎಫ್.ಡಬ್ಲ್ಯುಸಾಕಷ್ಟು ಪ್ರಮಾಣದಲ್ಲಿ ಎಚ್.ಸಿ.ಕ್ಯೂ. ಕಾಪು ದಾಸ್ತಾನನ್ನು ದೇಶೀಯ ಬೇಡಿಕೆ ಪೂರೈಸುವಷ್ಟು  ಪ್ರಮಾಣದಲ್ಲಿ ಹೊಂದಿದೆ. ಇದರ ಜೊತೆಗೆ 7.58  ಕೋಟಿ ಎಚ್. ಸಿ.ಕ್ಯೂ. 200 ಎಂ.ಜಿಮಾತ್ರೆಗಳನ್ನು ರಾಜ್ಯ ಸರಕಾರಗಳಿಗೆ, ಇತರ ಸಂಸ್ಥೆಗಳಿಗೆ, ಬಿ.ಪಿ.ಪಿ../ ಜನ ಔಷಧಿ ಕೇಂದ್ರಗಳಿಗೆ ಅವುಗಳ ಅವಶ್ಯಕತೆಯನುಸಾರ  ಪೂರೈಸಲಾಗಿದೆ. ಹಾಗು ಸುಮಾರು 10.86 ಕೋಟಿ ಎಚ್.ಸಿ.ಕ್ಯೂ. 200 ಎಂ.ಜಿ. ಮಾತ್ರೆಗಳನ್ನು ಸ್ಥಳೀಯ ಔಷಧಾಲಯಗಳಿಗೆ ದೇಶೀಯ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಒದಗಿಸಲಾಗಿದೆ. ಹೀಗೆ ಒಟ್ಟು 30.66  ಕೋಟಿ ಎಚ್.ಸಿ.ಕ್ಯೂ. 200 ಎಂ.ಜಿ. ಮಾತ್ರೆಗಳನ್ನು  ದೇಶೀಯ ಮಾರುಕಟ್ಟೆಯಲ್ಲಿ ದೇಶದ ಬೇಡಿಕೆ ಪೂರೈಕೆಗಾಗಿ ಒದಗಿಸಲಾಗಿದೆ. ಎಚ್.ಸಿ.ಕ್ಯೂ. ಗೆ ಸಂಬಂಧಿಸಿ ಯಾವುದೇ ಬೇಡಿಕೆ ಪೂರೈಕೆಯಾಗದೆ ಬಾಕಿ ಉಳಿದಿಲ್ಲ.

ವಿವರಗಳಿಗೆ : https://pib.gov.in/PressReleasePage.aspx?PRID=1632608

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಚಂಡೀಗಢ: ನಗರದ ವಿವಿಧ ಕಡೆಗಳಲ್ಲಿ ಹೊರಗಿನಿಂದ ಬಂದವರು ಅನಗತ್ಯವಾಗಿ ಓಡಾಡುತ್ತಿರುವುದನ್ನು ನಿರ್ಬಂಧಿಸಲು ಬರೇ ಸ್ವಯಂ ಕ್ವಾರಂಟೈನ್ ಗೆ ಬದಲು ಸ್ವಯಂ ಗೃಹ ಕ್ವಾರಂಟೈನ್ ಅಳವಡಿಸಿಕೊಳ್ಳುವ ಪ್ರಸ್ತಾವದ ಬಗ್ಗೆ ಪರಿಶೀಲಿಸುವಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ   ಕೇಂದ್ರಾಡಳಿತ ಪ್ರದೇಶ ಚಂಡೀಗಢದ ಆಡಳಿತಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಸ್ವಯಂ ಕ್ವಾರಂಟೈನ್ ಸೂಚನೆಗಳನ್ನು ಉಲ್ಲಂಘಿಸುವ ವ್ಯಕ್ತಿಗಳನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಿ ದಂಡಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸುವಂತೆಯೂ ಆಡಳಿತಾಧಿಕಾರಿಗಳು ಸಲಹೆಗಾರರನ್ನು ಕೋರಿದ್ದಾರೆ.
  • ಪಂಜಾಬ್: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಚಿಕಿತ್ಸಾ ವೆಚ್ಚವು ಕೈಗೆಟಕುವ ಮಟ್ಟದಲ್ಲಿರುವಂತೆ ಮಾಡಲು ರಾಜ್ಯ ಸರಕಾರವು ಅದನ್ನು ಶೀಘ್ರವೇ ನಿಯಂತ್ರಿಸಲಿದೆ ಎಂದು ಪಂಜಾಬ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹೇಳಿದ್ದಾರೆ. ಸಂದರ್ಭದಲ್ಲಿ ಕೋವಿಡ್ -19  ರೋಗಿಗಳಿಗೆ ನ್ಯಾಯೋಚಿತ ದರದಲ್ಲಿ ಚಿಕಿತ್ಸೆ ನೀಡಲು ಮುಂದೆ ಬರಬೇಕು ಎಂದು ಅವರು ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳಿಗೆ ಕರೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗಳು ನಷ್ಟ ಅನುಭವಿಸುವಂತೆ ಮಾಡುವ ಉದ್ದೇಶ ಸರಕಾರಕ್ಕಿಲ್ಲ ಎಂಬುದನ್ನು ಪುನರುಚ್ಚರಿಸಿರುವ ಅವರು ಇದೇ ವೇಳೆ ಆಸ್ಪತ್ರೆಗಳಲ್ಲಿ ಕೆಲವೇ ದಿನಗಳ ವಾಸ್ತವ್ಯಕ್ಕೆ ಲಕ್ಷಾಂತರ ರೂಪಾಯಿ ಬಿಲ್ ನೀಡಿ ಅಸಹಾಯಕ ರೋಗಿಗಳನ್ನು ಲೂಟುವುದಕ್ಕೆ ಅವಕಾಶ ನೀಡಲಾಗದು ಎಂದಿದ್ದಾರೆ.
  • ಕೇರಳ: ಕೇರಳ ಹೈಕೋರ್ಟಿಗೆ ಸಲ್ಲಿಸಿದ ಅಫಿದಾವಿತ್ ನಲ್ಲಿ ರಾಜ್ಯ ಸರಕಾರವು ದೃಢ ನಿಲುವನ್ನು ವ್ಯಕ್ತಪಡಿಸಿದ್ದು, ಹೊರ ದೇಶಗಳಿಂದ ಬರುವವರು ಕೇರಳಕ್ಕೆ ವಿಮಾನದಲ್ಲಿ ಬರುವುದಕ್ಕೆ ಮೊದಲೇ ಕೋವಿಡ್ ಪರೀಕ್ಷೆಗೆ ಒಳಗಾಗಿರಬೇಕು ಎಂದು ಸ್ಪಷ್ಟಪಡಿಸಿದೆ. ವಿದೇಶಗಳಿಂದ ರಾಜ್ಯಕ್ಕೆ ಮರಳಿರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಸವಲತ್ತುಗಳನ್ನು ನೀಡಲಾಗದು ಎಂದೂ ಹೇಳಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ , ಸರಕಾರದ ಕಚೇರಿಗಳಲ್ಲಿ 50 ಶೇಕಡಾ ಹಾಜರಾತಿಯ ಮಿತಿಯನ್ನು ಜಾರಿ ಮಾಡಲು ನಿರ್ಧರಿಸಿದೆ. ಇತರ 50 ಶೇಕಡಾ ಮಂದಿ ಮನೆಯಿಂದಲೇ ಕಾರ್ಯನಿರ್ವಹಿಸಬಹುದಾಗಿದೆ.ರಾಜ್ಯದಲ್ಲಿ ನಿನ್ನೆ 97 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು 89 ಮಂದಿ ರೋಗದಿಂದ ಚೇತರಿಸಿಕೊಂಡಿದ್ದಾರೆ.  1,358 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ರಾಜ್ಯಾದ್ಯಂತ ಒಟ್ಟು  1,27,231 ಮಂದಿ ನಿಗಾದಲ್ಲಿದ್ದಾರೆ.
  • ತಮಿಳುನಾಡು: ಇಂದಿನಿಂದ ಚೆನ್ನೈ ಮತ್ತು ನೆರೆಯ ಮೂರು ಜಿಲ್ಲೆಗಳಲ್ಲಿ 12 ದಿನಗಳ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗಿದೆ. ರಾಜ್ಯ ಉನ್ನತ ಶಿಕ್ಷಣ ಸಚಿವ ಕೆ. ಪಿ. ಅನ್ಬಜಗನ್ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಕೋವಿಡ್ -19 ಸಂಪನ್ಮೂಲಗಳು ಬರಿದಾಗುವಂತೆ ಮಾಡುತ್ತಿರುವಾಗ ಸರಕಾರವು ವೈದ್ಯರ ನಿವೃತ್ತಿ ವೇತನವನ್ನು ಕಡಿತ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ವೇತನವನ್ನು ಸಕಾಲದಲ್ಲಿ ಒದಗಿಸುವಂತೆ ಕಾಲೇಜು ಅತಿಥಿ ಉಪನ್ಯಾಸಕರು ರಾಜ್ಯ ಸರಕಾರಕ್ಕೆ  ಮನವಿ ಮಾಡಿದ್ದಾರೆ. ನಿನ್ನೆ 2141 ಹೊಸ ಪ್ರಕರಣಗಳು, 1017 ಚೇತರಿಕೆ ಪ್ರಕರಣಗಳು ಮತ್ತು 49 ಸಾವುಗಳು ವರದಿಯಾಗಿವೆ. ಇದರಲ್ಲಿ ಚೆನ್ನೈ ಪ್ರಕರಣಗಳು; 1276. ಒಟ್ಟು ಪ್ರಕರಣಗಳ ಸಂಖ್ಯೆ 52,334. ಸಕ್ರಿಯ ಪ್ರಕರಣಗಳು: 23065 ಸಾವುಗಳು: 625 , ಗುಣಮುಖರಾದವರು 28641. ಚೆನ್ನೈಯಲ್ಲಿ ಸಕ್ರಿಯ ಪ್ರಕರಣಗಳು 16067.
  • ಕರ್ನಾಟಕ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿ ಎಂಟು ಸದಸ್ಯರ ಸಮಿತಿಯು ಶಿಫಾರಸು ಮಾಡಿರುವ ಪರಿಷ್ಖೃತ ಚಿಕಿತ್ಸಾ ವೆಚ್ಚವನ್ನು ರಾಜ್ಯ ಕೋವಿಡ್ ಕಾರ್ಯ ಪಡೆಯು ಅನುಮೋದಿಸಿದ್ದು, ಅದನ್ನು ದೃಢೀಕರಣಕ್ಕಾಗಿ ರಾಜ್ಯ ಸಂಪುಟಕ್ಕೆ  ಕಳುಹಿಸಿಕೊಡಲಾಗಿದೆ. ಕೋವಿಡ್ -19 ನ್ನು ನಿಯಂತ್ರಿಸಲು ಬಿ.ಬಿ.ಎಂ.ಪಿ.ಯು ನಾಗರಿಕ ಕ್ವಾರಂಟೈನ್ ದಳಗಳನ್ನು ರಚಿಸಿದೆ. ಇದು ಗೃಹ ಕ್ವಾರಂಟೈನ್ ನಲ್ಲಿರುವವರು ನಿಯಮಗಳನ್ನು ಅನುಸರಣೆ ಮಾಡುವುದನ್ನು ಖಾತ್ರಿಪಡಿಸಲಿದೆ. ನಡುವೆ ಬಿ.ಬಿ.ಎಂ.ಪಿ.ಯು ಕ್ವಾರಂಟೈನ್ ನಿಗಾ ಆಪ್ ನಿಂದ ಅನಗತ್ಯ ದತ್ತಾಂಶಗಳನ್ನು ತೆಗೆದು ಹಾಕುವ ಪ್ರಕ್ರಿಯೆಗಾಗಿ ಸಹಾಯ ಮಾಡಲು ಕಾಲ್ ಸೆಂಟರ್ ಸ್ಥಾಪಿಸಿದೆ. ನಿನ್ನೆ 210 ಹೊಸ ಪ್ರಕರಣಗಳು ವರದಿಯಾಗಿವೆ, 179 ಮಂದಿ ಬಿಡುಗಡೆಯಾಗಿದ್ದಾರೆ, ಮತ್ತು 12 ಸಾವುಗಳು ಸಂಭವಿಸಿವೆ. ಒಟ್ಟು ಪಾಸಿಟಿವ್ ಪ್ರಕರಣಗಳು 7944, ಸಕ್ರಿಯ ಪ್ರಕರಣಗಳು: 2843, ಸಾವುಗಳು: 114, ಬಿಡುಗಡೆಯಾದವರು: 4983. 
  • ಆಂಧ್ರ ಪ್ರದೇಶ: ನದಿ ತೀರಗಳಲ್ಲಿ ಮತ್ತು ಕಡಲಕಿನಾರೆಗಳಲ್ಲಿ ಸುರಕ್ಷಿತ ದೋಣಿ ಯಾನಕ್ಕಾಗಿ ರಾಜ್ಯಾದ್ಯಂತ ಪ್ರವಾಸೀ ನಿಯಂತ್ರಣ ಕೊಠಡಿಗಳನ್ನು ಮುಖ್ಯಮಂತ್ರಿ ಕಾರ್ಯಾರಂಭಗೊಳಿಸಿದರು. ಕಡಪಾದ ಪುಲಿವೆಂಡುಲದಲ್ಲಿ ಲಸಿಕೆ ಉತ್ಪಾದನಾ ಘಟಕ ಸ್ಥಾಪಿಸಲು .ಜಿ.ವೈ. ಇಮ್ಯುನೋಲಾಜಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಜೊತೆ ತಿಳುವಳಿಕಾ ಒಡಂಬಡಿಕೆಗೆ ಆಂಧ್ರ ಪ್ರದೇಶವು ಅಂಕಿತ ಹಾಕಿದೆ. ಕಳೆದ 24 ಗಂಟೆಗಳಲ್ಲಿ 17,609 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗಿದ್ದು, 376 ಹೊಸ ಪ್ರಕರಣಗಳು ಪತ್ತೆಯಾಗಿವೆ. ನಾಲ್ಕು ಮಂದಿ ಮೃತಪಟ್ಟಿದ್ದಾರೆ. 82 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ಪ್ರಕರಣಗಳು: 6230, ಸಕ್ರಿಯ ಪ್ರಕರಣಗಳು: 3069, ಗುಣಮುಖರಾದವರು: 3065 , ಸಾವುಗಳು :96.
  • ತೆಲಂಗಾಣ: ಕೋವಿಡ್ -19 ಪ್ರಕರಣಗಳು ಹೆಚ್ಚುತ್ತಿವೆ. ಆದರೆ ತೆಲಂಗಾಣದಾದ್ಯಂತ ಕಂಟೈನ್ ಮೆಂಟ್ ವಲಯಗಳು ಕಡಿಮೆಯಾಗುತ್ತಿವೆ. ವಲಯಗಳನ್ನು ಮೇಲುಸ್ತುವಾರಿ ಮಾಡಲಾಗುತ್ತಿರುವ ವಿವರಗಳ ಬಗ್ಗೆ ಸರಕಾರವು ತುಟಿಬಿಚ್ಚುತ್ತಿಲ್ಲ. ಅಲ್ಲಿ ನೀತಿಯಲ್ಲಿ ಬದಲಾವಣೆ ಮಾಡಲಾಗಿದೆ ಮತ್ತು ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಆಗುತ್ತಿದ್ದರೂ, ಯಾವುದೇ ಹೊಸ ಕಂಟೈನ್ ಮೆಂಟ್ ವಲಯಗಳನ್ನು ರೂಪಿಸಲಾಗುತ್ತಿಲ್ಲ. ಇದುವರೆಗೆ ಒಟ್ಟು ಪ್ರಕರಣಗಳು: 6027 ; ಸಕ್ರಿಯ ಪ್ರಕರಣಗಳು: 2,531; ಗುಣಮುಖರಾದವರು : 3301
  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 1,20,504. ಕಳೆದ 24 ಗಂಟೆಗಳಲ್ಲಿ 3,752 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ. ಮುಂಬಯಿಯಲ್ಲಿ 1,298 ಪ್ರಕರಣಗಳು ವರದಿಯಾಗಿವೆ. ಮುಂಬಯಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಆಮ್ಲಜನಕಕ್ಕೆ ಬೇಡಿಕೆ ಹೆಚ್ಚುತ್ತಿರುವಂತೆಯೇ , ಈಗಿರುವ ಸೌಲಭ್ಯಗಳು ಬೇಡಿಕೆಯನ್ನು ಈಡೇರಿಸುವಷ್ಟು ಪ್ರಮಾಣದಲ್ಲಿ ಇಲ್ಲದಿರುವುದರಿಂದ, . ಬೃಹನ್ಮುಂಬಯಿ ಮಹಾನಗರ ಪಾಲಿಕೆಯು (ಬಿ.ಎಂ.ಸಿ.) 20 ಸ್ಥಳಗಳಲ್ಲಿ ಬೃಹತ್ ದ್ರವ ಆಮ್ಲಜನಕ ಟಾಂಕಿಗಳನ್ನು ನಿರ್ಮಾಣ ಮಾಡುತ್ತಿದ್ದು, ಅದು ಮುಕ್ತಾಯದ ಹಂತ ತಲುಪಿದೆ. ಸರಕಾರಿ ಸ್ವಾಮ್ಯದ ಕೆ..ಎಂ. , ನಾಯರ್, ಸಯಾನ್ ಆಸ್ಪತ್ರೆಗಳು  ಇದರಲ್ಲಿ ಸೇರಿವೆ. ಸಿಲಿಂಡರುಗಳ ಸ್ಥಾಪನೆಗೆ ವೇದಿಕೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಮತ್ತು ಸ್ಥಾಪನಾ ಕಾರ್ಯ ಮುಂದಿನ ವಾರ ಪೂರ್ಣಗೊಳ್ಳಲಿದೆ.
  • ಗುಜರಾತ್: ಕಳೆದ 24 ಗಂಟೆಗಳಲ್ಲಿ ಪತ್ತೆಯಾದ 510 ಹೊಸ ಪ್ರಕರಣಗಳೊಂದಿಗೆ ರಾಜ್ಯದಲ್ಲಿ  ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 25,660 ಕ್ಕೆ ತಲುಪಿದೆ. 22 ಮಂದಿ ರೋಗಿಗಳು ಜೀವ ಕಳೆದುಕೊಳ್ಳುವುದರೊಂದಿಗೆ ರಾಜ್ಯದಲ್ಲಿ ಸಾಂಕ್ರಾಮಿಕಕ್ಕೆ ಬಲಿಯಾದವರ ಒಟ್ಟು ಸಂಖ್ಯೆ 1,592 ಕ್ಕೇರಿದೆ. ಗುರುವಾರದಂದು 389 ರೋಗಿಗಳು ಬಿಡುಗಡೆಯಾಗಿದ್ದಾರೆ, ಇದರೊಂದಿಗೆ ಕೋವಿಡ್ -19 ರಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 17,829 ಕೇರಿದೆ. ಇದರಲ್ಲಿ 6,239  ಸಕ್ರಿಯ ಪ್ರಕರಣಗಳು. 6,178  ಪ್ರಕರಣಗಳಲ್ಲಿ ದೇಹಸ್ಥಿತಿ ಸ್ಥಿರವಾಗಿದೆ. 61 ಮಂದಿ ವೆಂಟಿಲೇಟರಿನಲ್ಲಿದ್ದಾರೆ. 510 ಹೊಸ ಪ್ರಕರಣಗಳ ಪೈಕಿ ಗರಿಷ್ಟ ಅಂದರೆ 317  ಪ್ರಕರಣಗಳು ಅಹ್ಮದಾಬಾದ್ ಒಂದರಿಂದಲೇ ವರದಿಯಾಗಿವೆ. 82 ಹೊಸ ಪ್ರಕರಣಗಳು ಸೂರತ್ತಿನಿಂದ ಮತ್ತು 43 ಪ್ರಕರಣಗಳು ವಡೋದರಾದಿಂದ ವರದಿಯಾಗಿವೆ. ರಾಜ್ಯದಲ್ಲಿ ಮುಂಜಾಗರೂಕತಾ ಕ್ರಮವಾಗಿ 2 ಲಕ್ಷದ ಆರು ಸಾವಿರಕ್ಕೂ ಅಧಿಕ ಮಂದಿಯನ್ನು ಗೃಹ ಕ್ವಾರಂಟೈನ್ ನಲ್ಲಿಡಲಾಗಿದೆ.
  • ಮಧ್ಯ ಪ್ರದೇಶ: ಕಳೆದ 24 ಗಂಟೆಗಳಲ್ಲಿ 182 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 11,426. ಸಕ್ರಿಯ ಪ್ರಕರಣಗಳ ಸಂಖ್ಯೆ 2308 . ರಾಜ್ಯದ ಅತಿ ಬಾಧಿತ ಜಿಲ್ಲೆಯಾದ ಇಂದೋರಿನಲ್ಲಿ ಪ್ರಕರಣಗಳ ಸಂಖ್ಯೆ 4191 ಕ್ಕೇರಿದೆ. ರಾಜ್ಯದಲ್ಲಿ ಜಾಗತಿಕ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಸತತ ಸುಧಾರಣೆಯಾಗುತ್ತಿದೆ. ದೇಶದಲ್ಲಿ ಗುಣಮುಖ ದರ 53 ಶೇಕಡಾ ಇದ್ದಾಗ್ಯೂ, ರಾಜ್ಯದಲ್ಲಿ ಗುಣಮುಖ ದರ 75.5 ಶೇಕಡಾ ಆಗಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದುಪ್ಪಟ್ಟಾಗುವ ಅವಧಿ 43.2 ದಿನಗಳು. ರಾಜ್ಯದ ಆರು ಜಿಲ್ಲೆಗಳು ಕೊರೊನಾ ಮುಕ್ತವಾಗಿವೆ ಮತ್ತು 24 ಜಿಲ್ಲೆಗಳಲ್ಲಿ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಕ್ಕಿಂತ ಕಡಿಮೆ.
  • ಛತ್ತೀಸ್ ಗಢ: ಗುರುವಾರದಂದು 82 ಪಾಸಿಟಿವ್ ಪ್ರಕರಣಗಳು ಗುರುತಿಸಲ್ಪಟ್ಟಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 1,946 ಕ್ಕೇರಿದೆ. 46 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 1202 ಕ್ಕೇರಿದೆ, ಅಲ್ಲಿ 735 ಸಕ್ರಿಯ ಪ್ರಕರಣಗಳಿವೆ
  • ರಾಜಸ್ಥಾನ : ಇಂದು ರಾಜ್ಯದಲ್ಲಿ 84 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 13,626 ಕ್ಕೇರಿದೆ. ಕೋವಿಡ್ -19 ಗುಣಮುಖ ದರ 77 ಶೇಕಡಾಕ್ಕಿಂತ ಅಧಿಕವಾಗಿದೆ. 10,582 ರೋಗಿಗಳು ಇದುವರೆಗೆ ಗುಣಮುಖರಾಗಿದ್ದಾರೆ, ರಾಜ್ಯದಲ್ಲಿ  323 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
  • ಗೋವಾ : ಕಳೆದ 24  ಗಂಟೆಗಳಲ್ಲಿ 49 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ರಾಜ್ಯದ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 705 ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ -596

ವಾಸ್ತವ ಪರಿಶೀಲನೆ

***



(Release ID: 1633512) Visitor Counter : 242