ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 19 JUN 2020 3:21PM by PIB Bengaluru

ಕೋವಿಡ್-19 ಹೊಸ ಮಾಹಿತಿ

ಭಾರತದಲ್ಲಿ ಕೋವಿಡ್-19ರಿಂದ 2 ಲಕ್ಷಕ್ಕೂ ಹೆಚ್ಚು ಜನ ಗುಣಮುಖ

ಚೇತರಿಕೆಯ ಪ್ರಮಾಣ 53.79% ಕ್ಕೆ ಹೆಚ್ಚಳ

 

ಕಳೆದ 24 ಗಂಟೆಗಳಲ್ಲಿ 10,386 ರೋಗಿಗಳು ಕೋವಿಡ್-19ರಿಂದ ಚೇತರಿಸಿಕೊಂಡಿದ್ದಾರೆ ಎಂಬ ದೃಢೀಕರಣದೊಂದಿಗೆ, ಚೇತರಿಸಿಕೊಂಡ ರೋಗಿಗಳ ಒಟ್ಟು ಸಂಖ್ಯೆ ಈಗ 2,04,710 ಆಗಿದೆ. ಚೇತರಿಕೆಯ ಪ್ರಮಾಣವವು 53.79% ಕ್ಕೆ ಏರಿದೆ. ಪ್ರಸ್ತುತ, 1,63,248 ಸಕ್ರಿಯ ಪ್ರಕರಣಗಳು ವೈದ್ಯಕೀಯ ಮೇಲ್ವಿಚಾರಣೆಯಲ್ಲಿವೆ.

ದೈನಂದಿನ ಸಂಖ್ಯೆಯಲ್ಲಿನ ಪ್ರವೃತ್ತಿಯು ಹೆಚ್ಚುತ್ತಿರುವ ಚೇತರಿಕೆಯ ಪ್ರಮಾಣವನ್ನು ತೋರಿಸುತ್ತದೆ ಮತ್ತು ಸಕ್ರಿಯ ಮತ್ತು ಚೇತರಿಸಿಕೊಂಡ ಪ್ರಕರಣಗಳ ನಡುವೆ ಹೆಚ್ಚುತ್ತಿರುವ ಅಂತರವನ್ನು ತೋರಿಸುತ್ತದೆ. ಚೇತರಿಸಿಕೊಂಡ ಪ್ರಕರಣಗಳ ಅನುಪಾತದಲ್ಲಿನ ಹೆಚ್ಚಳವು ಕೋವಿಡ್-19 ಸಮಯೋಚಿತ ನಿರ್ವಹಣೆಯ ಭಾರತದ ಕಾರ್ಯತಂತ್ರವನ್ನು ತೋರಿಸುತ್ತದೆ.

ಲಾಕ್ಡೌನ್ ಅನುಷ್ಠಾನ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಮನ್ವಯದೊಂದಿಗೆ ಭಾರತ ಸರ್ಕಾರದ ಕೋವಿಡ್ನ ಬಗ್ಗೆ ಸಾರ್ವಜನಿಕರ ಮನಮುಟ್ಟುವಲ್ಲೆಡೆ ಮುಂತಾದ ಪೂರ್ವಭಾವಿ ಕ್ರಮಗಳು ಹರಡುವಿಕೆಯನ್ನು ಗಮನಾರ್ಹವಾಗಿ ನಿರ್ಬಂಧಿಸಿವೆ. ಲಾಕ್ಡೌನ್ ಸರ್ಕಾರವು ಪರೀಕ್ಷಾ ಸೌಲಭ್ಯಗಳು ಮತ್ತು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಅಗತ್ಯವಾದ ಸಮಯವನ್ನು ಒದಗಿಸಿತು, ಇದು ಕೋವಿಡ್-19 ಪ್ರಕರಣಗಳ ಸಮಯೋಚಿತ ಪತ್ತೆ ಮತ್ತು ಕ್ಲಿನಿಕಲ್ ನಿರ್ವಹಣೆಯ ಮೂಲಕ ಸುಧಾರಿತ ಚೇತರಿಕೆಯ ಪ್ರಮಾಣವನ್ನು ಖಾತ್ರಿಪಡಿಸಿತು. ಹೆಚ್ಚುತ್ತಿರುವ ಅಂತರವು ಕೋವಿಡ್19 ಅನ್ನು ನಿಯಂತ್ರಿಸಲು ಕೈಗೊಂಡಿರುವ ಸರ್ಕಾರದ ಸಮಯೋಚಿತ, ಶ್ರೇಣೀಕೃತ, ಪೂರ್ವಭಾವಿ ವಿಧಾನದ ಪರಿಣಾಮವಾಗಿದೆ ಮತ್ತು ಅಸಂಖ್ಯಾತ ಮುಂಚೂಣಿ ಕಾರ್ಮಿಕರಿಂದ ಅದರ ಅನುಷ್ಠಾನವಾಗಿದೆ.

ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆಯನ್ನು 703 ಕ್ಕೆ ಮತ್ತು ಖಾಸಗಿ ಪ್ರಯೋಗಾಲಯಗಳ ಸಂಖ್ಯೆಯನ್ನು 257 ಕ್ಕೆ ಹೆಚ್ಚಿಸಲಾಗಿದೆ (ಒಟ್ಟು 960). ಇದರ ವಿವರಣೆಗಳನ್ನು ಹೀಗೆ ನೀಡಲಾಗಿದೆ:

ರಿಯಲ್-ಟೈಮ್ ಆರ್ಟಿ ಪಿಸಿಆರ್ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು: 541 (ಸರ್ಕಾರಿ: 349 + ಖಾಸಗಿ: 192)

ಟ್ರೂನಾಟ್ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು: 345 (ಸರ್ಕಾರಿ: 328 + ಖಾಸಗಿ: 17)

ಸಿಬಿಎನ್ಎಟಿ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು: 74 (ಸರ್ಕಾರಿ: 26 + ಖಾಸಗಿ: 48)

ಕಳೆದ 24 ಗಂಟೆಗಳಲ್ಲಿ 1,76,959 ಮಾದರಿಗಳನ್ನು ಪರೀಕ್ಷಿಸಲಾಯಿತು. ಇಲ್ಲಿಯವರೆಗೆ ಒಟ್ಟು 64,26,627 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಆಸ್ಪತ್ರೆಯ ಕೋವಿಡ್ ಮತ್ತು ಕೋವಿಡ್ ಅಲ್ಲದ ಪ್ರದೇಶಗಳಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರನ್ನು ನಿರ್ವಹಿಸಲು ಸಚಿವಾಲಯವು ಸಲಹೆಯನ್ನು ಬಿಡುಗಡೆ ಮಾಡಿದೆ. ಅವುಗಳನ್ನು ಇಲ್ಲಿ ನೋಡಬಹುದು Page 1 of 4 Dated 18th June, 2020 Ministry of Health & Family Welfare Directorate General of Health Services (EMR Division)

ಕೋವಿಡ್ ಗೆ ಸಂಬಂಧಿಸಿದ ಸೂಕ್ತ ನಡವಳಿಕೆಗಾಗಿ ಸಚಿವಾಲಯವು ಸಚಿತ್ರ ಮಾರ್ಗದರ್ಶಿಯನ್ನು ಸಹ ಬಿಡುಗಡೆ ಮಾಡಿದೆ

https://www.mohfw.gov.in/pdf/Illustrativeguidelineupdate.pdf

ಕೋವಿಡ್-19ಕ್ಕೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿರಿ: https://www.mohfw.gov.in

ಕೋವಿಡ್-19ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ.: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಕ್ಕೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1633503) Visitor Counter : 203