ಆಯುಷ್

ಅಂತಾರಾಷ್ಟ್ರೀಯ ಯೋಗ ದಿನ (IDY) ಸಂದರ್ಭದಲ್ಲಿ ಪ್ರಸಾರವಾಗಲಿರುವ ಪ್ರಧಾನಮಂತ್ರಿಯವರ ಹೇಳಿಕೆ

Posted On: 18 JUN 2020 6:32PM by PIB Bengaluru

ಅಂತಾರಾಷ್ಟ್ರೀಯ ಯೋಗ ದಿನ (IDY) ಸಂದರ್ಭದಲ್ಲಿ ಪ್ರಸಾರವಾಗಲಿರುವ ಪ್ರಧಾನಮಂತ್ರಿಯವರ ಹೇಳಿಕೆ

2020 ಜೂನ್ 21 ರಂದು ಐಡಿವೈ ಆಚರಣೆಗಾಗಿ ಆಯುಷ್ ಸಚಿವಾಲಯವದಿಂದ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮ ಬಳಕೆ

 

2020 ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದ ಪ್ರಧಾನ ಅಂಶ ಪ್ರಧಾನಮಂತ್ರಿಯವರ ಶ್ರೀ ನರೇಂದ್ರ ಮೋದಿ ಅವರ ಸಂದೇಶವಾಗಿದೆ. ಪ್ರಧಾನಮಂತ್ರಿಯವರ ಸಂದೇಶ 2020 ಜೂನ್ 21ರಂದು ಬೆಳಗ್ಗೆ 6.30ಕ್ಕೆ ಪ್ರಸಾರವಾಗಲಿದೆ. ವರ್ಷ ಐಡಿವೈ ಅನ್ನು ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ಆಯುಷ್ ಸಚಿವಾಲಯ ದೊಡ್ಡಮಟ್ಟದಲ್ಲಿ ಆಚರಿಸುತ್ತಿದೆ.

ಪ್ರಧಾನಮಂತ್ರಿಯವರ ಹೇಳಿಕೆ ಡಿಡಿ ನ್ಯಾಷನಲ್, ಡಿಡಿ ನ್ಯೂಸ್, ಡಿಡಿ ಭಾರತಿ, ಡಿಡಿ ಇಂಡಿಯಾ, ಡಿಡಿ ಉರ್ದು, ಡಿಡಿ ಸ್ಪೋರ್ಟ್ಸ್, ಡಿಡಿ ಕಿಸಾನ್, ಎಲ್ಲ ಆರ್.ಎಲ್.ಎಸ್.ಎಸ್. ವಾಹಿನಿಗಳು ಮತ್ತು ಎಲ್ಲ ಪ್ರಾದೇಶಿಕ ಕೇಂದ್ರಗಳ ವಾಹಿನಿಗಳಲ್ಲಿ ಪ್ರಸಾರವಾಗಲಿದೆ. ಹಿಂದೆ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿನ ರೂಢಿಯಂತೆ ಸಂದೇಶದ ಬಳಿಕ 45 ನಿಮಿಷಗಳ ಕಾಲ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ (ಎಂಡಿಎನ್ಐವೈ) ತಂಡದಿಂದ ಸಾಮಾನ್ಯ ಯೋಗ ಶಿಷ್ಟಾಚಾರ (ಸಿವೈಪಿ) ಪ್ರದರ್ಶನ ನೇರ ಪ್ರಸಾರವಾಗಲಿದೆ. ಸಿವೈಪಿ ವಿನ್ಯಾಸವನ್ನು ವಿಭಿನ್ನ ವಯೋಮಾನದ ಗುಂಪಿನ ಜನರು ಮತ್ತು ವಿವಿಧ ಕ್ಷೇತ್ರಗಳ ಜನರನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ಸಿವೈಪಿಯಲ್ಲಿ ತರಬೇತಿ ಪಡೆಯುವವರು ಯೋಗದ ಬಗ್ಗೆ ಅಭಿರುಚಿ ಮತ್ತು ಮನೋಭಾವವನ್ನು ಬೆಳೆಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಅದನ್ನು ದೀರ್ಘಾವಧಿಯಲ್ಲಿ ಮುಂದುವರಿಸಬಹುದಾಗಿದೆ.

ಹಿಂದೆ ಆಚರಿಸಲಾದ ಅಂತಾರಾಷ್ಟ್ರೀಯ ಯೋಗ ದಿನಗಳಂದು ಸಾವಿರಾರು ಜನರು ಸೌಹಾರ್ದವಾಗಿ ಸಾರ್ವಜನಿಕ ಸ್ಥಳದಲ್ಲಿ ಕಲೆತು ಯೋಗ ಪ್ರದರ್ಶನ ನಡೆಸುತ್ತಿದ್ದರು. ಆದರೆ ಪ್ರಸಕ್ತ ಕೋವಿಡ್ -19 ಮಹಾಮಾರಿಯ ಜಾಗತಿಕ ಆರೋಗ್ಯ ಸನ್ನಿವೇಶದ ಹಿನ್ನೆಲೆಯಲ್ಲಿ ಬಾರಿ ಅಂತ ಆಚರಣೆಗಳ ಬಗ್ಗೆ ಕಡಿಮೆ ಗಮನ ಹರಿಸಿ, ಎಲ್ಲರೂ ತಮ್ಮ ಮನೆಗಳಲ್ಲೇ ತಮ್ಮ ಕುಟುಂಬದ ಸದಸ್ಯರೊಂದಿಗೆ ಯೋಗ ಆಚರಿಸುವಂತೆ ಮಾಡುವತ್ತ ಹೆಚ್ಚಿನ ಗಮನ ಹರಿಸಲಾಗಿದೆ. ಮಹಾಮಾರಿಯ ಸಂದರ್ಭದಲ್ಲಿ ಯೋಗ ಅತ್ಯಂತ ಪ್ರಸ್ತುತವಾಗಿದೆ, ಯೋಗಾಭ್ಯಾಸ ಮಾನಸಿಕ ಮತ್ತು ದೈಹಿಕ ಸಮತೋಲನಕ್ಕೆ ಕಾರಣವಾಗಲಿದೆ ಮತ್ತು ಅದು ರೋಗದ ವಿರುದ್ಧ ಹೋರಾಡಲು ವೈಯಕ್ತಿಕ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ದೇಶದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯ ನೋಟಲ್ ಸಚಿವಾಲಯವಾಗಿರುವ ಆಯುಷ್ ಸಚಿವಾಲಯ ಕಳೆದ ಮೂರು ತಿಂಗಳುಗಳಲ್ಲಿ ವಿವಿಧ ಆನ್ಲೈನ್ ಮತ್ತು ಹೈಬ್ರಿಡ್-ಆನ್ಲೈನ್ ಉಪಕ್ರಮಗಳ ಮೂಲಕ ಕೋವಿಡ್- 19 ಬಿಕ್ಕಟ್ಟಿನ ಸಂದರ್ಭದಲ್ಲಿ ಮನೆಯಲ್ಲಿ ಯೋಗಾಭ್ಯಾಸ ಮಾಡುವ ಪ್ರವೃತ್ತಿಯನ್ನು ಉತ್ತೇಜಿಸುತ್ತಿದೆ ಮತ್ತು ಸುಗಮಗೊಳಿಸುತ್ತಿದೆ. ಹಲವು ಪ್ರಮುಖ ಯೋಗ ಸಂಸ್ಥೆಗಳು ಪ್ರಯತ್ನದಲ್ಲಿ ಸಚಿವಾಲಯದೊಂದಿಗೆ ಕೈಜೋಡಿಸಿವೆ. ಇಂಥ ಚಟುವಟಿಕೆಗಳು ಕಳೆದ ಒಂದು ತಿಂಗಳಲ್ಲಿ ಯೋಗದ ಸಾಮೂಹಿಕ ಪ್ರದರ್ಶನಗಳಲ್ಲಿ ಸಾಮರಸ್ಯವನ್ನು ಖಚಿತಪಡಿಸಿಕೊಳ್ಳಲು ಪ್ರತಿವರ್ಷ ಐಡಿವೈನಲ್ಲಿ ಭಾಗವಹಿಸುವವರು ಅನುಸುವ ಸಾಮಾನ್ಯ ಯೋಗ ಶಿಷ್ಟಾಚಾರ (ಸಿವೈಪಿ) ಸೇರ್ಪಡೆಯೊಂದಿಗೆ ಚುರುಕಾಗಿದೆ.

ಆಯುಷ್ ಸಚಿವಾಲಯ ಜನರಿಗೆ ಸಾಮಾನ್ಯ ಯೋಗ ಶಿಷ್ಟಾಚಾರ ಕಲಿಸಲು ಡಿಡಿ ಭಾರತಿಯಲ್ಲಿ ನಿತ್ಯ ಬೆಳಗ್ಗೆ ಸಿವೈಪಿ ಕಾರ್ಯಕ್ರಮ ಸೇರಿದಂತೆ ವಿವಿಧ ಆನ್ ಲೈನ್ ವೇದಿಕೆಗಳಲ್ಲಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ. ಆಯುಷ್ ಸಚಿವಾಲಯದ ವೆಬ್ಸೈಟ್, ಯೋಗ ಪೋರ್ಟಲ್ ಮತ್ತು ಅದರ ಸಾಮಾಜಿಕ ಮಾಧ್ಯಮ ಚಾನೆಲ್ಗಳಲ್ಲಿ ನಿತ್ಯ ಹೆಸರಾಂತ ಯೋಗ ತಜ್ಞರ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮದ ಮೂಲಕ ಹೆಚ್ಚುವರಿ ಸಂಪನ್ಮೂಲ ಲಭ್ಯವಾಗುವಂತೆ ಮಾಡಿದೆ. ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು, ವ್ಯಾಪಾರ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಸೇರಿದಂತೆ ಹಲವಾರು ವ್ಯಕ್ತಿಗಳು ಮತ್ತು ಸಂಸ್ಥೆಗಳು ತಮ್ಮ ನೌಕರರು, ಸದಸ್ಯರು ಅಥವಾ ಇತರ ಬಾಧ್ಯಸ್ಥರ ಅನುಕೂಲಕ್ಕಾಗಿ ತಮ್ಮ ಮನೆಗಳಿಂದ ಐಡಿವೈಗೆ ಸೇರಲು ತಮ್ಮ ಬದ್ಧತೆ ತೋರಿದ್ದಾರೆ. ಇಂಥ ಪ್ರಯತ್ನಗಳ ಮೂಲಕ ಯೋಗ ಸಮುದಾಯದವರು ದೇಶದ ವಿವಿಧೆಡೆಗಳಲ್ಲಿ ಈಗ ತಮ್ಮ ಮನೆಗಳಿಂದಲೇ ಸೇರುವ ಸಾವಿರಾರು ಕುಟುಂಬಗಳೊಂದಿಗೆ ಐಡಿವೈ ಆಚರಿಸಲು ಸಜ್ಜಾಗುತ್ತಿದೆ.

ಆಯುಷ್ ಸಚಿವಾಲಯ 2020 ಅಂತಾರಾಷ್ಟ್ರೀಯ ಯೋಗ ದಿನದಂದು ಅಂದರೆ 2020 ಜೂನ್ 21ರಂದು ಬೆಳಗ್ಗೆ 6.30ಕ್ಕೆ ತಮ್ಮ ಮನೆಗಳಿಂದಲೇ ಸೇರುವಂತೆ ವಿಶ್ವಾದ್ಯಂತದ ಯೋಗ ಅನುಸರಿಸುವವರಿಗೆ ಆಹ್ವಾನ ನೀಡಿದೆ.

ಕಾರ್ಯಕ್ರಮದ ವಿವರ ಹೀಗಿದೆ:

  • ಬೆಳಗ್ಗೆ 0615 ರಿಂದ ಬೆಳಗ್ಗೆ 0700 - ಉದ್ಘಾಟನಾ ಸಮಾರಂಭ. ಇದರಲ್ಲಿ ಆಯುಷ್ ಸಚಿವರ ಸ್ವಾಗತ ಭಾಷಣ, ಪ್ರಧಾನಮಂತ್ರಿಯರ ಸಂದೇಶ ಬಳಿಕ ಆಯುಷ್ ಕಾರ್ಯದರ್ಶಿಯವರಿಂದ ವಂದನಾರ್ಪಣೆ ಸೇರಿರುತ್ತದೆ.
  • ಬೆಳಗ್ಗೆ 0700 ರಿಂದ ಬೆಳಗ್ಗೆ 0745- ಎಂಡಿಎನ್ಐವೈ ನಿಂದ ಸಾಮಾನ್ಯ ಯೋಗ ಶಿಷ್ಟಾಚಾರದ ನೇರ ಪ್ರದರ್ಶನ.
  • ಬೆಳಗ್ಗೆ 0745ರಿಂದ ಬೆಳಗ್ಗೆ-0800 ಯೋಗ ತಜ್ಞರೊಂದಿಗೆ ಚರ್ಚೆ ಮತ್ತು ಐಡಿವೈ ಪ್ರಧಾನ ಸಮಾರಂಭದ ಸಮಾರೋಪ.

***



(Release ID: 1632559) Visitor Counter : 243