PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 16 JUN 2020 6:22PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

No photo description available.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೋವಿಡ್-19 ತಾಜಾ ಮಾಹಿತಿ:

ಗುಣಮುಖರಾಗುತ್ತಿರುವವರ ಪ್ರಮಾಣ ಸುಧಾರಣೆಯಾಗಿ ಶೇ.52.47 ತಲುಪಿದೆ; ಎಂಒಎಚ್ಎಫ್ ಡಬ್ಲ್ಯೂಯಿಂದ ಕೋವಿಡ್-19ಗೆ ಸಂಬಂಧಿಸಿದ ವದಂತಿಗಳನ್ನು ಹೋಗಲಾಡಿಸಲು ಮಾರ್ಗಸೂಚಿ ಬಿಡುಗಡೆ

ಕಳೆದ 24 ಗಂಟೆಗಳಲ್ಲಿ ಒಟ್ಟು 10,215 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದಾಗಿ ಈವರೆಗೆ ಒಟ್ಟು 1,80,012 ರೋಗಿಗಳು ಕೋವಿಡ್-19 ನಿಂದ ಗುಣಮುಖರಾಗಿದ್ದಾರೆ. ಕೋವಿಡ್-19 ರೋಗಿಗಳಲ್ಲಿ ಗುಣಮುಖರಾದವರ ಪ್ರಮಾಣ ಶೇ. 52.47ರಷ್ಟಿದೆ. ಇದು ಶೇಕಡ ಅರ್ಧಕ್ಕೂ ಅಧಿಕ ಸೋಂಕಿತರು ಗುಣಮುಖರಾಗಿರುವ ಸೂಚನೆಯಾಗಿದೆ. ಭಾರತದಲ್ಲಿ ಸದ್ಯ 1,53,178 ಪ್ರಕರಣಗಳು ಸಕ್ರಿಯವಾಗಿದ್ದು, ಅವುಗಳು ವೈದ್ಯಕೀಯ ನಿಗಾದಲ್ಲಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೋವಿಡ್-19ಗೆ ತುತ್ತಾದ ರೋಗಿಗಳು, ಕೋವಿಡ್-19ನಿಂದ ಗುಣಮುಖರಾದ ರೋಗಿಗಳು ಮತ್ತು ಆರೋಗ್ಯ ರಕ್ಷಣಾ ಮುಂಚೂಣಿ ಕಾರ್ಯಕರ್ತರು ಮತ್ತು ಅವರ ಕುಟುಂಬದವರು  ಎದುರಿಸುತ್ತಿರುವ ಮಿಥ್ಯಗಳ ಕುರಿತಂತೆ ವಿಸ್ತೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಪರೀಕ್ಷಾ ಸಾಮರ್ಥ್ಯವೃದ್ಧಿ, ಪ್ರತಿ ದಿನ 3 ಲಕ್ಷ ಪರೀಕ್ಷೆಗಳು

ದೇಶದಲ್ಲಿ ಕೊರೊನಾ ಸೋಂಕಿನಿಂದ ಬಾಧಿತರಾದ ವ್ಯಕ್ತಿಗಳ ಪರೀಕ್ಷಾ ಸಾಮರ್ಥ್ಯ ಒಟ್ಟಾರೆ ವೃದ್ಧಿಯಾಗಿದ್ದು, ಅದರ ಮೇಲೆ ನಿರಂತರ ನಿಗಾವಹಿಸಲಾಗುತ್ತಿದೆ. ದೇಶ ಪ್ರಸ್ತುತ ದಿನಕ್ಕೆ 3 ಲಕ್ಷ ಮಾದರಿ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ತಲುಪಿದೆ. ಈವರೆಗೆ 59,21,069 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದ್ದು, ಕಳೆದ 24 ಗಂಟೆಗಳಿಂದೀಚೆಗೆ 1,54,935 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದೆ. ಈವರೆಗೆ ದೇಶಾದ್ಯಂತ 907 ಪ್ರಯೋಗಾಲಯಗಳ ಜಾಲ ಸೃಷ್ಟಿಸಲಾಗಿದೆ. ಇವುಗಳಲ್ಲಿ 659 ಸರ್ಕಾರಿ ವಲಯದ ಪ್ರಯೋಗಾಲಯಗಳು ಮತ್ತು 248 ಖಾಸಗಿ ವಲಯದ ಪ್ರಯೋಗಾಲಯಗಳು ಅವುಗಳ ವಿವರ ಕೆಳಗಿನಂತಿದೆ:

  • ರಿಯಲ್-ಟೈಮ್ ಆರ್ ಟಿಪಿಸಿಆರ್ ಆಧರಿತ ಪರೀಕ್ಷಾ ಪ್ರಯೋಗಾಲಯಗಳು: 534 (ಸರ್ಕಾರಿ: 347+ಖಾಸಗಿ: 187)
  • ಟ್ರೂನಾಟ್ ಆಧಾರಿತ ಪರೀಕ್ಷಾ ಲ್ಯಾಬ್ ಗಳು: 302(ಸರ್ಕಾರಿ: 287+ಖಾಸಗಿ: 15)
  • ಸಿಬಿನಾಟ್ ಆಧಾರಿತ ಪರೀಕ್ಷಾ ಲ್ಯಾಬ್ ಗಳು: 71 (ಸರ್ಕಾರಿ: 25 + ಖಾಸಗಿ: 46)

ದೆಹಲಿಯಲ್ಲಿ ಪರೀಕ್ಷಾ ಸಾಮರ್ಥ್ಯ ವೃದ್ಧಿಸುವ ಸಲುವಾಗಿ 11 ಜಿಲ್ಲೆಗಳಲ್ಲೂ ಇದೀಗ ಪ್ರತ್ಯೇಕ ಲ್ಯಾಬ್ ಗಳನ್ನು ನಿಯೋಜಿಸಲಾಗಿದ್ದು, ಅವುಗಳನ್ನು ಆಯಾ ಜಿಲ್ಲೆಗಳಲ್ಲಿ ವಿಶೇಷವಾಗಿ ಮಾದರಿಗಳ ಪರೀಕ್ಷೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಜಿಲ್ಲೆಗಳ ಮಾದರಿಗಳನ್ನು ಲ್ಯಾಬ್ ಗಳಿಗೆ ಕಳುಹಿಸಿ, ಸಕಾಲದಲ್ಲಿ ಪರೀಕ್ಷೆ ಮತ್ತು ವಿಳಂಬವಾಗದಂತೆ ಫಲಿತಾಂಶ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸದ್ಯ ದೆಹಲಿಯಲ್ಲಿ 42 ಪ್ರಯೋಗಾಲಯಗಳಿದ್ದು, ಪ್ರತಿ ದಿನದ ಪರೀಕ್ಷಾ ಸಾಮರ್ಥ್ಯ 17,000 ಇದೆ.

ಅನ್ ಲಾಕ್ 1.0 ನಂತರ ಪರಿಸ್ಥಿತಿಯ ಬಗ್ಗೆ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳೊಂದಿಗೆ ಸಂವಾದ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಅನ್ ಲಾಕ್ 1.0 ನಂತರದ ಸ್ಥಿತಿಗತಿ ಕುರಿತು ಹಾಗೂ ಕೋವಿಡ್-19 ಸಾಂಕ್ರಾಮಿಕ ಎದುರಿಸುವ ಮುಂದಿನ ಯೋಜನೆಯ ಬಗ್ಗೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದರು. ಪ್ರಧಾನಮಂತ್ರಿ ಅವರು, ದೇಶದಲ್ಲಿ ಸಕಾಲದಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಂಡ ಪರಿಣಾಮ ಅದು ಹರಡುವುದನ್ನು ಪರಿಣಾಮಕಾರಿ ನಿಯಂತ್ರಿಸಲಾಗಿದೆ ಎಂದು ಹೇಳಿದರು. ನಾವು ಒಮ್ಮೆ ಹಿಂತಿರುಗಿ ನೋಡಿದರೆ ಜನರು ಇಡೀ ವಿಶ್ವಕ್ಕೆ ಸಹಕಾರ ಒಕ್ಕೂಟ ವ್ಯವಸ್ಥೆಯ ಉದಾಹರಣೆಯನ್ನು ನೀಡಿದ್ದೇವೆ ಎಂದು ನೆನಪು ಮಾಡಿಕೊಳ್ಳುತ್ತಾರೆ ಎಂದು ಹೇಳಿದರು. ಪ್ರಧಾನಮಂತ್ರಿ ಅವರು  ಕಳೆದ ಒಂದು ವಾರದ ಪ್ರಯತ್ನಗಳ ಕುರಿತಂತೆ ಉಲ್ಲೇಖಿಸಿದ ಅವರು, ಆರ್ಥಿಕತೆಯಲ್ಲಿನ ಹಸಿರು ಗುರುತುಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ ಎಂದರು. ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಎಂಎಸ್ಎಂಇಗಳಿಗೆ ರಾಜ್ಯಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಮತ್ತು ಅದಕ್ಕಾಗಿ ಆತ್ಮನಿರ್ಭರ ಭಾರತ ಅಭಿಯಾನದಡಿ ಅಗತ್ಯ ಅಂಶಗಳನ್ನು ಸೇರ್ಪಡೆ ಮಾಡಲಾಗಿದೆ  ಎಂದು ಹೇಳಿದರು.

ಎರಡು ದಿನಗಳ ಸಂವಾದದಲ್ಲಿ ಮೊದಲ ದಿನವಾದ ಇಂದು ಪಂಜಾಬ್, ಅಸ್ಸಾಂ, ಕೇರಳ, ಉತ್ತರಾಖಂಡ, ಜಾರ್ಖಂಡ್, ಚತ್ತೀಸ್ ಗಢ, ತ್ರಿಪುರಾ, ಹಿಮಾಚಲಪ್ರದೇಶ, ಚಂಡಿಗಢ, ಗೋವಾ, ಮಣಿಪುರ, ನಾಗಾಲ್ಯಾಂಡ್, ಲಡಾಖ್, ಪುದುಚೆರಿ, ಅರುಣಾಚಲಪ್ರದೇಶ, ಮೇಘಾಲಯ, ಮಿಝೋರಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ದಾದ್ರ ನಗರ್ ಹವೇಲಿ ಮತ್ತು ದಾಮನ್ ದಿಯು, ಸಿಕ್ಕಿಂ ಮತ್ತು ಲಕ್ಷದ್ವೀಪ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭಾಗಿಯಾಗಿದ್ದವು.

ಆರೋಗ್ಯ ರಕ್ಷಣಾ ಮೂಲಸೌಕರ್ಯವೃದ್ಧಿ ಮತ್ತು ರಿಯಾಯಿತಿ ದರದಲ್ಲಿ ಗಂಭೀರ ಆರೋಗ್ಯ ರಕ್ಷಣಾ ಸೇವೆ ಒದಗಿಸಲು ಖಾಸಗಿ ವಲಯದ ಜೊತೆ ಸಹಭಾಗಿತ್ವ ಸಾಧಿಸುವಂತೆ ರಾಜ್ಯಗಳಿಗೆ ಕೇಂದ್ರ ಕರೆ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಸಿಗೆಗಳ ಲಭ್ಯತೆ ಸಾಮರ್ಥವೃದ್ಧಿ, ಗಂಭೀರ ಕಾಯಿಲೆಗಳ ಆರೋಗ್ಯ ಸೌಕರ್ಯವೃದ್ಧಿ ಮತ್ತು ಒದಗಿಸಿದ ಸೇವೆಗಳಿಗೆ ನ್ಯಾಯಯುತ ಹಾಗೂ ಪಾರದರ್ಶಕ ಶುಲ್ಕ ನೀಡುವ ಕುರಿತು ಖಾಸಗಿ ವಲಯದ ಆರೋಗ್ಯ ರಕ್ಷಣಾ ಪೂರೈಕೆದಾರರ ಜೊತೆ ಸಹಭಾಗಿತ್ವ ಸಾಧಿಸುವಂತೆ ಕರೆ ನೀಡಿದೆ. ರೋಗಿಗಳಿಗೆ ಸೂಕ್ತ ದರದಲ್ಲಿ ಪ್ರಾಮಾಣಿಕ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸಲು ರಾಜ್ಯಗಳು ಸ್ಥಳೀಯ ಖಾಸಗಿ ಆರೋಗ್ಯ ರಕ್ಷಣಾ ಪೂರೈಕೆದಾರರ ಜೊತೆ ಸಮಾಲೋಚನೆಗಳನ್ನು ನಡೆಸಿ, ಸೂಕ್ತ ದರಗಳ ನಿಗದಿಗೆ ಮುಂದಾಗಬೇಕು, ವೇಳೆ ಆರೋಗ್ಯ ರಕ್ಷಣಾ ಪೂರೈಕೆದಾರರ ವೈಯಕ್ತಿಕ ರಕ್ಷಣಾ ಉಪಕರಣದ ವೆಚ್ಚ ಮತ್ತಿತರ ಅಂಶಗಳನ್ನು ಪರಿಗಣಿಸಬೇಕು ಎಂದು ಹೇಳಿದೆ. ದರಗಳು ಒಮ್ಮೆ ನಿಗದಿಯಾದ ನಂತರ ಕುರಿತು ವ್ಯಾಪಕ ಪ್ರಚಾರ ನೀಡಬೇಕು ಮತ್ತು ಬಗ್ಗೆ ರೋಗಿಗಳು ಮತ್ತು ಸೇವಾ ಪೂರೈಕೆದಾರರಿಗೆ ಸಂಪೂರ್ಣ ಮಾಹಿತಿ ಇರಬೇಕು ಹಾಗೂ ಬಳಕೆ ಮಾಡಿಕೊಳ್ಳುವ ಸಾಮರ್ಥ್ಯಗಳ ಅರಿವಿರಬೇಕು ಎಂದು ಸಲಹೆ ನೀಡಲಾಗಿದೆ.

ಕೋವಿಡ್-19 ಸಂಬಂಧಿಸಿದ ವ್ಯವಸ್ಥೆಗಳ ಪರಿಶೀಲನೆಗೆ ಲೋಕನಾಯಕ್ ಜಯಪ್ರಕಾಶ ನಾರಾಯಣ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಷಾ ಅವರು ಕೋವಿಡ್-19ಗೆ ಸಂಬಂಧಿಸಿದ ವ್ಯವಸ್ಥೆಗಳ ಪರಿಶೀಲನೆಗೆ ಸೋಮವಾರ ಲೋಕನಾಯಕ್ ಜಯಪ್ರಕಾಶ್ ನಾರಾಯಣ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ ನೀಡಿದರು. ಶ್ರೀ ಅಮಿತ್ ಷಾ ಅವರು, ಪ್ರತಿಯೊಂದು ಕೊರೊನಾ ಆಸ್ಪತ್ರೆಯ ಕೊರೊನಾ ವಾರ್ಡ್ ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವಂತೆ ದೆಹಲಿ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದರು. ಮೂಲಕ ರೋಗಿಗಳ ಸಮಸ್ಯೆಗಳು ಮತ್ತು ಸೂಕ್ತ ನಿರ್ವಹಣೆ ಸುಲಭವಾಗುತ್ತದೆ ಎಂದರು. ಅಲ್ಲದೆ ಆಹಾರ ಪೂರೈಕೆಗೆ ಹೆಚ್ಚುವರಿ ಕ್ಯಾಂಟೀನ್ ಗಳ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಒಂದು ಕ್ಯಾಂಟೀನ್ ನಲ್ಲಿ ಸೋಂಕು ಕಾಣಿಸಿಕೊಂಡರೆ ರೋಗಿಗಳು ಇನ್ನೊಂದು ಕ್ಯಾಂಟೀನ್ ನಿಂದ ಯಾವುದೇ ತೊಂದರೆ ಇಲ್ಲದೆ ಆಹಾರ ಪಡೆಯಬಹುದಾಗಿದೆ ಎಂದು ಅವರು ನಿರ್ದೇಶನ ನೀಡಿದರು. ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಮತ್ತು ನರ್ಸ್ ಗಳಿಗೆ ಮಾನಸಿಕ ಆಪ್ತ ಸಮಾಲೋಚನೆ ನಡೆಸುವಂತೆ ಅಮಿತ್ ಷಾ ನಿರ್ದೇಶನ ನೀಡಿದರು.

ಪ್ರಧಾನಮಂತ್ರಿಗಳ ವನ ಧನ ಯೋಜನೆ ವ್ಯಾಪ್ತಿಯನ್ನು ಪ್ರಸಕ್ತ 18,000 ಎಸ್ಎಚ್ ಜಿಎಸ್ ಗಳಿಂದ 50,000 ವನಧನ ಎಸ್ಎಚ್ ಜಿಎಸ್ ಗಳಿಗೆ ವಿಸ್ತರಿಸಲು ಉದ್ದೇಶ, ಬುಡಕಟ್ಟು ಜನರ ವ್ಯಾಪ್ತಿ ಮೂರು ಪಟ್ಟು ಹೆಚ್ಚಾಗಿ 10 ಲಕ್ಷಕ್ಕೆ ಏರಿಕೆ

ಕೋವಿಡ್-19 ಸಾಂಕ್ರಾಮಿಕ ಒಡ್ಡಿರುವ ಸವಾಲು ಎದುರಿಸಲು ಮತ್ತು ಪ್ರಕೃತಿಯ ಅನಿರೀಕ್ಷಿತ ಬಿಕ್ಕಟ್ಟುಗಳನ್ನು ಎದುರಿಸಲು ವಿಭಿನ್ನ ಹಾಗೂ ನಾವಿನ್ಯ ಕಾರ್ಯತಂತ್ರಗಳು ಅಗತ್ಯವಿದೆ. ಬುಡಕಟ್ಟು ಜನಸಂಖ್ಯೆ ಪ್ರಸಕ್ತ ಬಿಕ್ಕಟ್ಟಿನಿಂದ ಗಂಭೀರ ತೊಂದರೆಯಲ್ಲಿ ಸಿಲುಕಿದೆ. ಇಂತಹ ಸಮಯದಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದಡಿ ಬರುವ ಟ್ರೈಫೆಡ್ ಆರಂಭಿಸಿರುವ ಯೋಜನೆಯಲ್ಲಿ ವನಧನ ನವೋದ್ಯಮಗಳನ್ನು ಸ್ಥಾಪಿಸಲಾಗಿದೆ.  ಇವು ಬುಡಕಟ್ಟು ಸಮುದಾಯಕ್ಕೆ ಮತ್ತು ಅರಣ್ಯವಾಸಿಗಳಿಗೆ ಉದ್ಯೋಗ ಸೃಷ್ಟಿಯ ಮೂಲಗಳಾಗಿರುವುದಷ್ಟೇ ಅಲ್ಲದೆ, ಮನೆಯಿಂದಲೇ  ಕೆಲಸ ಮಾಡುವ ಉದ್ಯೋಗ ಮತ್ತು ಕರಕುಶಲಕರ್ಮಿಗಳಿಗೆ ಅವಕಾಶ ಕಲ್ಪಿಸಿದೆ. 1205 ಬುಡಕಟ್ಟು ಉದ್ಯಮಗಳು ಸ್ಥಾಪನೆಯಾಗಿದ್ದು, ಅವುಗಳಲ್ಲಿ 3.6 ಲಕ್ಷ ಬುಡಕಟ್ಟು ವಾಸಿಗಳಿಗೆ ಹಾಗೂ 22 ರಾಜ್ಯಗಳಲ್ಲಿ 18000 ಸ್ವಸಹಾಯ ಗುಂಪುಗಳಿಗೆ ಉದ್ಯೋಗಾವಕಾಶ ಸೃಷ್ಟಿಸಲಾಗಿದೆ.

ಮನೆಯಲ್ಲೇ ಯೋಗ, ಕುಟುಂಬದೊಂದಿಗೆ ಯೋಗಅಭಿಯಾನದ ಮೂಲಕ 2020 ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಆಯುಷ್ ಸಚಿವಾಲಯ ಸಜ್ಜು

ಪ್ರಸಕ್ತ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಜನತೆಯ ಸಂಚಾರದ ಮೇಲೆ ನಿರ್ಬಂಧಗಳಿದ್ದು,  ಅವರ ದೈನಂದಿನ ಚಟುವಟಿಕೆಗಳು ನಿಧಾನಗೊಂಡಿವೆ. ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗದಿಂದ ಆರೋಗ್ಯವೃದ್ಧಿ ಮತ್ತು ಒತ್ತಡ ನಿವಾರಣೆ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲು ಉದ್ದೇಶಿಸಲಾಗಿದೆ. ಇದನ್ನು ಉತ್ತೇಜಿಸಲು ಆಯುಷ್ ಸಚಿವಾಲಯ ತರಬೇತುದಾರರ ಮೂಲಕ ಇದೇ ಜೂನ್ 21ರಂದು ಬೆಳಗ್ಗೆ 6.30ಕ್ಕೆ ದೂರದರ್ಶನದ ಮೂಲಕ ಯೋಗಾಭ್ಯಾಸದ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದು, ಅದನ್ನು ಜನರು ಅನುಕರಿಸಿ ಐಕ್ಯತೆಯಿಂದ ಅಭ್ಯಾಸ ಮಾಡಬಹುದಾಗಿದೆ.

ಪಿ ಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

  • ಚಂಡಿಗಢ: ಚಂಡಿಗಢ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಹೊರಗಿನಿಂದ ಬರುವ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾವಹಿಸುವಂತೆ ಮತ್ತು ಅನಾರೋಗ್ಯ ಪೀಡಿತರ ಪ್ರಕರಣಗಳಲ್ಲಿ ವಿಶೇಷ ಎಚ್ಚರ ವಹಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಅವರು ಸಾರ್ವಜನಿಕರಿಗೆ ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಮನವಿ ಮಾಡಿದ್ದಾರೆ.
  • ಪಂಜಾಬ್ : ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರೀ ಪ್ರಮಾಣದ ಅನಾಹುತ ಮತ್ತು ಸಂಕಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ  ಅವರು, ರಾಜ್ಯದಲ್ಲಿ ಜೀವಗಳನ್ನು ಉಳಿಸಲು ಮತ್ತು ಜೀವನೋಪಾಯಗಳ ರಕ್ಷಣೆಗೆ ನಾನಾ ಬಾಬ್ತುಗಳಡಿ ಭಾರತ ಸರ್ಕಾರದಿಂದ 80,845 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ  ಪ್ರಧಾನಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.  
  • ಹರಿಯಾಣ: ಮುಖ್ಯಮಂತ್ರಿಗಳು ಕೋವಿಡ್-19 ಕುರಿತಂತೆ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು ಮತ್ತು ಸೋಂಕಿನಿಂದ ಸಾರ್ವಜನಿಕರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಮಾರ್ಗೋಪಾಯಗಳನ್ನು ಸಾರ್ವಜನಿಕರಿಗೆ ತಿಳಿಸಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯಮಂತ್ರಿಗಳು ಕೋವಿಡ್-19ನಿಂದ ರಕ್ಷಿಸುವ ಸಂಬಂಧ ಸಾರ್ವಜನಿಕರಿಗೆ ಉಚಿತವಾಗಿ ಮುಖಗವಸುಗಳನ್ನು ವಿತರಿಸಬೇಕು ಎಂದು ಹೇಳಿದರು ಹಾಗೂ ಮುಖಗವಸು ಧರಿಸದೇ ಇರುವ ವ್ಯಕ್ತಿಗಳಿಂದ ಸಂಗ್ರಹಿಸಿದ ದಂಡದ ಮೊತ್ತವನ್ನು ಅಗತ್ಯವಿರುವವರಿಗೆ ವಿತರಿಸಲು ಹೊಸ ಮಾಸ್ಕ್ ಗಳ ಖರೀದಿಗೆ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು. ಜನರಿಗೆ ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಉತ್ತೇಜನ ನೀಡಬೇಕು ಎಂದು ಅವರು ಹೇಳಿದರು. ಆಯುರ್ವೇದಿಕ್ ಮತ್ತು ಹೋಮಿಯೋಪತಿ ಔಷಧಗಳಿಂದ ಯಾವುದೇ ಅಡ್ಡಪರಿಣಾಮವಿಲ್ಲ ಮತ್ತು ಸಾಮಾನ್ಯವಾಗಿ ಔಷಧಗಳನ್ನು ಜನರು ಬಳಸಿದರೆ ಯಾವುದೇ ಹಾನಿ ಇಲ್ಲ ಎಂದು ಹೇಳಿದರು.
  • ಮಹಾರಾಷ್ಟ್ರ: ರಾಜ್ಯದಲ್ಲಿ ಹೊಸದಾಗಿ 2,786 ರೋಗಿಗಳಲ್ಲಿ ಪಾಸಿಟಿವ್  ಪತ್ತೆಯಾಗಿದ್ದು, ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1,10,744ಕ್ಕೆ ಏರಿಕೆಯಾಗಿದೆ. ಪೈಕಿ ಒಟ್ಟು ಕ್ರಿಯಾಶೀಲ ಪ್ರಕರಣಗಳ ಸಂಖ್ಯೆ 50,554. ಹಾಟ್ ಸ್ಪಾಟ್ ಮುಂಬೈನಲ್ಲಿ 1,066 ಹೊಸ ಪ್ರಕರಣಗಳು ವರದಿಯಾಗಿವೆ.
  • ಗುಜರಾತ್: ರಾಜ್ಯದಲ್ಲಿ 5,886 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 24,055ಕ್ಕೆ ಏರಿಕೆಯಾಗಿದೆ.
  • ರಾಜಸ್ಥಾನ: ಇಂದು 115 ಹೊಸ ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ ಬಹುತೇಕ ಭರತ್ ಪುರ್ ಜಿಲ್ಲೆಯವು. ಒಟ್ಟು ಕೋವಿಡ್-19 ಪಾಸಿಟಿವ್ ಸೋಂಕಿತರ ಸಂಖ್ಯೆ 13,096ಕ್ಕೆ ಏರಿಕೆಯಾಗಿದ್ದು, ಪೈಕಿ 9794 ಮಂದಿ ಗುಣಮುಖರಾಗಿದ್ದಾರೆ ಮತ್ತು ಈವರೆಗೆ ಸೋಂಕಿಗೆ 302 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೋವಿಡ್-19 ಗುಣಮುಖರಾಗುತ್ತಿರುವವರ ಪ್ರಮಾಣ ಶೇ.75ಕ್ಕೆ ಏರಿಕೆಯಾಗಿದ್ದು, ಪ್ರಮಾಣ ದೇಶದಲ್ಲೇ ಅತ್ಯಧಿಕ. ಕೋವಿಡ್-19 ಕುರಿತಂತೆ ಜಾಗೃತಿ ಮೂಡಿಸಲು ಜೂನ್ 21ರಿಂದ ರಾಜಸ್ಥಾನದಾದ್ಯಂತ ಹತ್ತು ದಿನಗಳ ರಾಜ್ಯವ್ಯಾಪಿ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ. ರಾಜ್ಯ ಆರೋಗ್ಯ ಇಲಾಖೆ ಮನೆ ಮನೆ ಸಮೀಕ್ಷೆಯನ್ನು ನಡೆಸಲಿದೆ ಮತ್ತು ಕೋವಿಡ್-19 ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕ್ರಮಗಳನ್ನು ಕೈಗೊಂಡಿದೆ.
  • ಮಧ್ಯಪ್ರದೇಶ: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 133 ಹೊಸ ರೋಗಿಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ10,935ಕ್ಕೆ ಏರಿಕೆಯಾಗಿದೆ. ಅವಧಿಯಲ್ಲಿ ಆರು ಕೋವಿಡ್-19 ರೋಗಿಗಳು ಮೃತಪಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 465ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಪ್ರಕರಣಗಳು ದುಪ್ಪಟ್ಟಾಗುವ ಸಮಯ 34.1 ದಿನಕ್ಕೆ ಹೆಚ್ಚಳವಾಗಿದ್ದು, ಗುಣಮುಖರಾಗುತ್ತಿರುವವರ ಪ್ರಮಾಣ ಶೇ.71.1ಕ್ಕೆ ಏರಿಕೆಯಾಗಿದೆ. ಗುಣಮುಖರಾಗುತ್ತಿರುವವರ ಪ್ರಮಾಣ ರಾಜಸ್ಥಾನ ಹೊರತುಪಡಿಸಿದರೆ,  ಮಧ್ಯಪ್ರದೇಶ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ.
  • ಛತ್ತೀಸ್ ಗಢ: 44 ಹೊಸ ಪ್ರಕರಣಗಳೊಂದಿಗೆ ಒಟ್ಟು ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,715ಕ್ಕೆ ಏರಿಕೆಯಾಗಿದ್ದು, ಪೈಕಿ 875 ಪ್ರಕರಣ ಸಕ್ರಿಯವಾಗಿದೆ.
  • ಗೋವಾ: ರಾಜ್ಯದಲ್ಲಿ ಸೋಮವಾರ 28 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 592ಕ್ಕೆ ಏರಿದೆ. ಅವುಗಳಲ್ಲಿ 507 ಸಕ್ರಿಯ ಪ್ರಕರಣಗಳಾಗಿವೆ. ಗೋವಾದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಿರುವ ಸ್ಥಳಗಳೆಂದರೆ ಮಂಗೋರ್ ಹಲ್, ನ್ಯೂ ವದ್ದೆಮ್, ಮೊರ್ಲೆಮ್, ಬೈನಾ, ಚಿಂಬಲ್ ಮತ್ತು ಸದಾ.
  • ಅರುಣಾಚಲಪ್ರದೇಶ: ಅರುಣಾಚಲಪ್ರದೇಶದಲ್ಲಿ ಅಸ್ಸಾಂನ ಧೇಮ್ ಜಿಯಿಂದ ಟ್ರಕ್ ಗಳನ್ನು ಪೂರ್ವ ಸಿಯಾಂಗ್ ಮತ್ತು ಇತರೆ ಜಿಲ್ಲೆಗಳಿಗೆ ಅತ್ಯವಶ್ಯಕ ವಸ್ತುಗಳ ಪೂರೈಕೆಗೆ ಅವಕಾಶ ಕಲ್ಪಿಸಲಾಗಿದೆ. ಟ್ರಕ್ ಗಳಿಗೆ ಎಸ್ಒಪಿಗಳನ್ನು ಪಾಲನೆ ಮಾಡದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದ ಹಿಂದೆ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
  • ಅಸ್ಸಾಂ: ಅಸ್ಸಾಂನಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೊಸ 10 ಪ್ರಕರಣಗಳಿಂದಾಗಿ ಒಟ್ಟು 4319ಕ್ಕೆ ಏರಿಕೆಯಾಗಿದೆ. ಅವುಗಳಲ್ಲಿ 2103 ಸಕ್ರಿಯ ಪ್ರಕರಣಗಳು, 2205 ಚೇತರಿಸಿಕೊಂಡಿರುವವರು ಮತ್ತು 8 ಸಾವು.
  • ಮಣಿಪುರ:  ಆತ್ಮನಿರ್ಭರ ಭಾರತ ಅಭಿಯಾನದಡಿ ಇಮಾ ಕೈಥೆಲ್ ಮತ್ತು ಇತರೆಡೆಗಳಲ್ಲಿನ ನೂರಾರು ಬೀದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಒದಗಿಸುವ ಕುರಿತು ಮಣಿಪುರ ಮುಖ್ಯಮಂತ್ರಿ ಸಾರ್ವಜನಿಕ ವಲಯದ ಬ್ಯಾಂಕ್ ಅಧಿಕಾರಿಗಳನ್ನು ಭೇಟಿ ಮಾಡಿದರು.
  • ಮಿಝೋರಾಂ: ಮೀಝೋರಾಂನಲ್ಲಿ ಪ್ರಸ್ತುತ 8884 ಮಂದಿಯನ್ನು ಕ್ವಾರಂಟೈನ್ ನಲ್ಲಿಡಲಾಗಿದೆ. ರಾಜ್ಯದಲ್ಲಿ ಪರೀಕ್ಷಾ ಪ್ರಮಾಣ ಹೆಚ್ಚಳಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ರಾಜ್ಯ ಆರೋಗ್ಯ ಸಚಿವರು ತಿಳಿಸಿದ್ದಾರೆ.
  • ನಾಗಾಲ್ಯಾಂಡ್: ದಿಮಾಪುರ್ ನಲ್ಲಿ ಪರಿಷ್ಕೃತ ಲಾಕ್ ಡೌನ್ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಜೂನ್ 30 ವರೆಗೆ ಪ್ರಯಾಣಿಕರ ವಾಹನಗಳು ರಸ್ತೆಗಿಳಿಯುವಂತಿಲ್ಲ. ಸಲೂನ್ ಗಳನ್ನು ಮುಚ್ಚಿರಬೇಕು. ಮಾರುಕಟ್ಟೆ ಮತ್ತು ಮಾಲ್ ಗಳು ಹಂತ ಹಂತವಾಗಿ ಪುನರಾರಂಭವಾಗಬೇಕು. ನಾಗಾಲ್ಯಾಂಡ್ ಪೆರೇನ್ ನಲ್ಲಿ ಜಿಲ್ಲಾ ಕಾರ್ಯಪಡೆ ತಂಡ ಕೋವಿಡ್ ಆಸ್ಪತ್ರೆಗಳು, ಸಿಎಚ್ ಸಿ ಜಲುಕಿ ಮತ್ತು ಪರೇನ್ ಜಿಲ್ಲಾ ಆಸ್ಪತ್ರೆಗೆ ನೀರು ಸಂಗ್ರಹ ಟ್ಯಾಂಕ್ ಗಳನ್ನು ದಾನವಾಗಿ ನೀಡಲಾಗಿದೆ.
  • ಕೇರಳ: ವಂದೇ ಭಾರತ್ ಮಿಷನ್ ಅಡಿಯಲ್ಲಿ ಕೋವಿಡ್ ನೆಗಿಟಿವ್ ಪ್ರಮಾಣಪತ್ರ ಕಡ್ಡಾಯಗೊಳಿಸುವಂತೆ ಕೇರಳ, ಕೇಂದ್ರ ಸರ್ಕಾರವನ್ನು ಕೇಳಿದೆ. ರಾಜ್ಯ ಕೈಗಾರಿಕಾ ಸಚಿವ .ಪಿ. ಜಯರಾಜನ್, ಕೋವಿಡ್ ನಿಂದ ತೊಂದರೆಗೆ ಸಿಲುಕಿರುವ ವಲಸಿಗರನ್ನು ವಿಶೇಷ ವಿಮಾನದ ಮೂಲಕ ಕರೆತರಬೇಕು ಎಂದು ಹೇಳಿದ್ದಾರೆ. ಸೌದಿ ಅರೆಬಿಯಾದಲ್ಲಿನ ಭಾರತೀಯ ರಾಯಭಾರ ಕಚೇರಿ ಕೇರಳಕ್ಕೆ ಚಾರ್ಟೆಡ್ ಫ್ಲೈಟ್ ಗಳ ಮೂಲಕ ತೆರಳುವ  ವಲಸಿಗರಿಗೆ ಜೂನ್ 20 ನಂತರ ಕೋವಿಡ್ ಸರ್ಟಿಫಿಕೇಟ್ ಗಳನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿದೆ. ರಾಜ್ಯ ಆರೋಗ್ಯ ಇಲಾಖೆ ಕೋವಿಡ್-19 ಪ್ರಾಥಮಿಕ ಪರೀಕ್ಷಾ ಕೇಂದ್ರಗಳಿಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆರಂಭಿಕ ಹಂತದಲ್ಲಿ ಸ್ವಲ್ಪ ಮಟ್ಟಿನ ಸೋಂಕು ಇರುವವರು ಮತ್ತು ಸೋಂಕಿನ ಗುಣಲಕ್ಷಣಗಳಿರುವವರನ್ನು ಪ್ರಾಥಮಿಕ ಕೇಂದ್ರಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು. ಮೆಕ್ಸಿಕೋದಲ್ಲಿ ಓರ್ವ ಕ್ರೈಸ್ತ ಸನ್ಯಾಸಿನಿ ಸೇರಿದಂತೆ ನಾಲ್ಕು ಕೇರಳದವರು ಕೋವಿಡ್-19ಗೆ ಬಲಿಯಾಗಿದ್ದಾರೆ ರಾಜ್ಯದಲ್ಲಿ ಒಂದು ಸಾವು, 82 ಹೊಸ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, 73 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 1,348 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ನಾನಾ ಜಿಲ್ಲೆಗಳಲ್ಲಿ ಒಟ್ಟು 1,20,727 ಮಂದಿ ತೀವ್ರ ನಿಗಾದಲ್ಲಿದ್ದಾರೆ.
  • ತಮಿಳುನಾಡು: ಪ್ರಸಕ್ತ ಲಾಕ್ ಡೌನ್ ಹಂತದಲ್ಲಿ ತಮಿಳುನಾಡಿನ ಸುಮಾರು 13 ಲಕ್ಷ ವಿಶೇಷಚೇತನರಿಗೆ ತಲಾ 1,000 ರೂ. ನಗದು ಪರಿಹಾರವನ್ನು ಪಡೆಯಲಿದ್ದಾರೆ. ಇದಕ್ಕೂ ಮುನ್ನ ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಪಡಿತರಧಾನ್ಯ ಕಾರ್ಡ್ ಹೊಂದಿರುವವರಿಗೂ ಸಹ ರಾಜ್ಯ ಸರ್ಕಾರ ಇಂತಹುದೇ ಪರಿಹಾರವನ್ನು ಪ್ರಕಟಿಸಿತ್ತು. ಜೆಐಪಿಎಂಇಆರ್ ಮೈಕ್ರೋ ಬಯಾಲಜಿಸ್ಟ್ ಸೇರಿದಂತೆ 14 ಹೊಸ ಕೋವಿಡ್-19 ಪ್ರಕರಣಗಳು ಪುದುಚೆರಿಯಲ್ಲಿ ಪತ್ತೆಯಾಗಿವೆ. ಇದರೊಂದಿಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 216ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ನಿನ್ನೆ 1843 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 797 ಮಂದಿ ಗುಣಮುಖರಾಗಿದ್ದಾರೆ, 44 ಸಾವು ಸಂಭವಿಸಿವೆ. ಚೆನ್ನೈನಲ್ಲಿ 1257 ಹೊಸ ಪ್ರಕರಣಗಳು, ಒಟ್ಟು ಪ್ರಕರಣಗಳು: 46504, ಸಕ್ರಿಯ ಪ್ರಕರಣಗಳು: 20678, ಸಾವು: 479, ಗುಣಮುಖರಾದವರು: 24547, ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು: 15385.
  • ಕರ್ನಾಟಕ: ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ರೈತರಿಗೆ ನೆರವಾಗಲು ಸುಮಾರು 50 ಲಕ್ಷ ರೈತರಿಗೆ ತಲಾ 2,000 ರೂ. ನೀಡಲು ಒಂದು ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಮುಖ್ಯಮಂತ್ರಿ ಬೆಂಗಳೂರಿನಲ್ಲಿಂದು ತಿಳಿಸಿದ್ದಾರೆ. ಕೆಎಸ್ಆರ್ ಟಿಸಿಯಿಂದ ಅಂತಾರಾಜ್ಯ ಬಸ್ ಸೇವೆ ನಾಳೆಯಿಂದ ಪುನರಾರಂಭವಾಗಲಿದ್ದು, ಆರಂಭಿಕವಾಗಿ ಆಂಧ್ರಪ್ರದೇಶಕ್ಕೆ ಬಸ್ ಗಳು ಸಂಚರಿಸಲಿವೆ. ಕಡ್ಡಾಯವಾಗಿ ಮಾಸ್ಕ್ ಧರಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಬೆಂಗಳೂರು ಐಐಎಸ್ ಸಿ ದುಡಿಯುವ ಸ್ಥಳಗಳಿಗಾಗಿ ಆನ್ ಲೈನ್ ಸ್ವಯಂ ಮೌಲ್ಯಮಾಪನ ಉಪಕರಣವನ್ನು ಅಭಿವೃದ್ಧಿಪಡಿಸಿದೆ. ಇದು ಸಾಂಕ್ರಾಮಿಕ ಸಂದರ್ಭಗಳಲ್ಲಿ ನಿರ್ದಿಷ್ಟ ನೀತಿ ಹಾಗೂ ಪದ್ಧತಿಗಳನ್ನು ಹೊಂದಲು ಸಂಸ್ಥೆಗಳಿಗೆ ನೆರವಾಗಲಿದೆ. ರಾಜ್ಯದಲ್ಲಿ ನಿನ್ನೆ 213 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 180 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಬ್ಬರು ಸಾವನ್ನಪ್ಪಿದ್ದಾರೆ. ಒಟ್ಟು ಪಾಸಿಟಿವ್ ಪ್ರಕರಣಗಳು 7213, ಸಕ್ರಿಯ ಪ್ರಕರಣಗಳು: 2987, ಸಾವು: 88, ಗುಣಮುಖರಾದವರು: 4135.
  • ಆಂಧ್ರಪ್ರದೇಶ: 2020-21ನೇ ಹಣಕಾಸು ವರ್ಷಕ್ಕೆ ಆಂಧ್ರಪ್ರದೇಶದ ಹಣಕಾಸು ಸಚಿವರು ಬಜೆಟ್ ಅನ್ನು ಮಂಡಿಸಿದರು. 2,24,789.18 ಕೋಟಿ ರೂ. ವೆಚ್ಚ ಮಾಡುವ ಮತ್ತು  1,80,392.65 ಅಂದಾಜು ಆದಾಯದ ಹಾಗೂ ಸಾಲ ಮರುಪಾವತಿ ಸೇರಿದಂತೆ ಒಟ್ಟು ಬಂಡವಾಳ ವೆಚ್ಚ ಹಾಗೂ ಇತರೆ ಬಂಡವಾಳ ವಿತರಣೆಗೆ  44,396.54 ಕೋಟಿ ರೂ. ಅಂದಾಜಿಸಲಾಗಿದೆ. 2020-21ನೇ ಸಾಲಿನಲ್ಲಿ ಒಟ್ಟಾರೆ ಬಜೆಟ್ ಅಂದಾಜುಗಳು 2019-20ನೇ ಸಾಲಿನ ಬಜೆಟ್ ಗೆ ಹೋಲಿಸಿದರೆ ಶೇ.1.4ರಷ್ಟು ಕಡಿಮೆಯಾಗಿದೆ. ಇದಕ್ಕೆ ಕಾರಣ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉಂಟಾದ ಆರ್ಥಿಕ ಹಿಂಜರಿತವಾಗಿದೆ. ಕಳೆದ 24 ಗಂಟೆಗಳಿಂದೀಚೆಗೆ 193 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 15,911 ಮಾದರಿಗಳನ್ನು ಪರೀಕ್ಷೆ ನಡೆಸಲಾಗಿ. 193 ಹೊಸ ಪ್ರಕರಣಗಳು ಪತ್ತೆಯಾಗಿವೆ ಮತ್ತು ಇಬ್ಬರು ಸಾವನ್ನಪ್ಪಿದ್ದಾರೆ. 81 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಪ್ರಕರಣಗಳು: 5280, ಸಕ್ರಿಯ: 2341, ಗುಣಮುಖರಾದವರು: 2851, ಸಾವು: 88.
  • ತೆಲಂಗಾಣ: ಕೋವಿಡ್-19 ಯೋಜನೆಯನ್ನು ಮರು ರೂಪಿಸಬೇಕು ಎಂದು ತಜ್ಞರು ತೆಲಂಗಾಣ ಸರ್ಕಾರಕ್ಕೆ ತಿಳಿಸಿದ್ದಾರೆ. ತೆಲಂಗಾಣದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯತಂತ್ರಗಳನ್ನು ರೂಪಿಸಲು ಸಾರ್ವಜನಿಕ ಆರೋಗ್ಯ ತಜ್ಞರ ಸಮಿತಿಯನ್ನು ರಚಿಸುವ ಅಗತ್ಯವಿದೆ ಎಂದು ತಜ್ಞರು ಹೇಳಿದ್ದಾರೆ. ಜೂನ್ 16 ವರೆಗೆ ರಾಜ್ಯದಲ್ಲಿ 5,193 ಪ್ರಕರಣಗಳು ವರದಿಯಾಗಿವೆ. 2766 ಮಂದಿ ಗುಣಮುಖರಾಗಿದ್ದಾರೆ, 2240 ಸಕ್ರಿಯ ಪ್ರಕರಣಗಳು ಮತ್ತು187 ಸಾವು ವರದಿಯಾಗಿವೆ.

ವಾಸ್ತವ ಪರಿಶೀಲನೆ

https://static.pib.gov.in/WriteReadData/userfiles/image/image006EIY7.jpg

https://static.pib.gov.in/WriteReadData/userfiles/image/image008QA4Z.jpg

***

 

 



(Release ID: 1632028) Visitor Counter : 220