ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 14 JUN 2020 3:35PM by PIB Bengaluru

ಕೋವಿಡ್-19 ಹೊಸ ಮಾಹಿತಿ

ಚೇತರಿಕೆಯ ಪ್ರಮಾಣವು 50% ಕ್ಕಿಂತ ಹೆಚ್ಚಾಗಿದೆ

ಒಟ್ಟು 1,62,378 ರೋಗಿಗಳು ಕೋವಿಡ್-19ರಿಂದ ಗುಣಮುಖರಾಗಿದ್ದಾರೆ

 

ಕಳೆದ 24 ಗಂಟೆಗಳಲ್ಲಿ 8,049 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದು, ಚೇತರಿಕೆಯ ಪ್ರಮಾಣವು 50% ಕ್ಕಿಂತ ಹೆಚ್ಚಾಗಿದೆ. ಒಟ್ಟು 1,62,378 ರೋಗಿಗಳನ್ನು ಈವರೆಗೆ ಕೋವಿಡ್-19ರಿಂದ ಗುಣಪಡಿಸಲಾಗಿದೆ.

ಪ್ರಸ್ತುತ, ಚೇತರಿಕೆಯ ಪ್ರಮಾಣವು 50.60% ಆಗಿದೆ. ಕೋವಿಡ್-19 ಎಲ್ಲಾ ಪ್ರಕರಣಗಳಲ್ಲಿ, ಅವುಗಳಲ್ಲಿ ಅರ್ಧದಷ್ಟು ಪ್ರಮಾಣ ದಲ್ಲಿ ರೋಗದಿಂದ ಚೇತರಿಸಿಕೊಂಡಿರುವರು ಎಂದು ಇದು ಸೂಚಿಸುತ್ತದೆ. ಸಮಯೋಚಿತ ಪ್ರಕರಣ ಗುರುತಿಸುವಿಕೆ ಮತ್ತು ಸರಿಯಾದ ಕ್ಲಿನಿಕಲ್ ನಿರ್ವಹಣೆಯು ಚೇತರಿಕೆಯ ಹಾದಿಯಾಗಿದೆ.

ಪ್ರಸ್ತುತ, 1,49,348 ಸಕ್ರಿಯ ಪ್ರಕರಣಗಳು ವೈದ್ಯಕೀಯ ಮೇಲ್ವಿಚಾರಣೆಯಲ್ಲಿವೆ.

ಸೋಂಕಿತ ವ್ಯಕ್ತಿಗಳಲ್ಲಿ ನಾವೆಲ್ ಕೊರೊನಾವೈರಸ್ಸನ್ನು ಪತ್ತೆಹಚ್ಚಲು ಐಸಿಎಂಆರ್ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆಯನ್ನು 646 ಕ್ಕೆ ಮತ್ತು ಖಾಸಗಿ ಪ್ರಯೋಗಾಲಯಗಳನ್ನು 247 ಕ್ಕೆ ಹೆಚ್ಚಿಸಲಾಗಿದೆ (ಒಟ್ಟು 893). ಕಳೆದ 24 ಗಂಟೆಗಳಲ್ಲಿ 1,51,432 ಮಾದರಿಗಳನ್ನು ಪರೀಕ್ಷಿಸಲಾಯಿತು. ಇಲ್ಲಿಯವರೆಗೆ ಪರೀಕ್ಷಿಸಿದ ಒಟ್ಟು ಮಾದರಿಗಳ ಸಂಖ್ಯೆ 56,58,614 ಆಗಿದೆ.

ಇಂದು, ಕೇಂದ್ರ ಆರೋಗ್ಯ ಸಚಿವರು ಕೇಂದ್ರ ಗೃಹ ಸಚಿವರೊಂದಿಗೆ ದೆಹಲಿಯ ಎನ್ಸಿಟಿಯಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಲು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿಯ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು. ನಿಯಂತ್ರಣ ಕ್ರಮಗಳನ್ನು ಬಲಪಡಿಸುವುದು, ಪರೀಕ್ಷೆಯನ್ನು ಹೆಚ್ಚಿಸುವುದು ಮತ್ತು ಸಾಕಷ್ಟು ಆರೋಗ್ಯ ಮೂಲಸೌಕರ್ಯ ಸಿದ್ಧತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಕೋವಿಡ್-19ಕ್ಕೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿರಿ: https://www.mohfw.gov.in

ಕೋವಿಡ್-19ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ.: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಕ್ಕೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1631634) Visitor Counter : 287