ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಹೊಸ ಮಾಹಿತಿ
Posted On:
12 JUN 2020 4:00PM by PIB Bengaluru
ಕೋವಿಡ್-19 ಹೊಸ ಮಾಹಿತಿ
ಚೇತರಿಕೆಯ ಪ್ರಮಾಣ 49.47% ಕ್ಕೆ ಹೆಚ್ಚಳ
ಒಟ್ಟು 1,47,194 ರೋಗಿಗಳನ್ನು ಗುಣಪಡಿಸಲಾಗಿದೆ
ಕೋವಿಡ್ ಧೃಡಪಟ್ಟ ಪ್ರಕರಣಗಳ ಚೇತರಿಕೆ ಪ್ರಮಾಣವು ಹೆಚ್ಚುತ್ತಲೇ ಇದೆ ಮತ್ತು ಪ್ರಸ್ತುತ 49.47% ರಷ್ಟಿದೆ. ಒಟ್ಟು 1,47,194 ಜನರನ್ನು ಗುಣಪಡಿಸಲಾಗಿದೆ ಅಂದರೆ ಕಳೆದ 24 ಗಂಟೆಗಳಲ್ಲಿ ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವ 1,41,842 ರೋಗಿಗಳು ಮತ್ತು 6,166 ವ್ಯಕ್ತಿಗಳು ಕೋವಿಡ್-19ರಿಂದ ಚೇತರಿಸಿಕೊಂಡಿದ್ದಾರೆ.
ದ್ವಿಗುಣಗೊಳ್ಳುವ ಪ್ರಮಾಣ / ಸಮಯವು ಸುಧಾರಿಸುತ್ತಲೇ ಇದೆ ಮತ್ತು ಲಾಕ್ಡೌನ್ನ ಆರಂಭದಲ್ಲಿ ಇದ್ದ 3.4 ದಿನಗಳಿಂದ ಪ್ರಸ್ತುತ 17.4 ದಿನಗಳಿಗೆ ಹೆಚ್ಚಾಗಿದೆ.
ಕ್ಯಾಬಿನೆಟ್ ಕಾರ್ಯದರ್ಶಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಕಾರ್ಯದರ್ಶಿ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ಕೋವಿಡ್-19ರ ಪರಿಣಾಮಕಾರಿ ನಿರ್ವಹಣೆಗಾಗಿ ನಿಯಂತ್ರಣ, ಪರೀಕ್ಷೆ ಮತ್ತು ಪತ್ತೆಹಚ್ಚುವಿಕೆ, ಆರೋಗ್ಯ ಮೂಲಸೌಕರ್ಯ ಸುಧಾರಣೆ, ಕೇಸ್ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಯ ಬಗ್ಗೆ ಗಮನಹರಿಸಲು ರಾಜ್ಯಗಳಿಗೆ ಸೂಚಿಸಲಾಯಿತು.
ವೈರಸ್ ಹರಡುವಿಕೆಯನ್ನು ಪರೀಕ್ಷಿಸಲು ಮುಂದ ಕಾಣಿಸಿಕೊಳ್ಳುವ ಕೇಂದ್ರಬಿಂದುಗಳ ಬಗ್ಗೆ ವಿಶೇಷ ಗಮನ ಹರಿಸಲು ಮತ್ತು ಕಠಿಣವಾದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳನ್ನು ಕೇಳಲಾಯಿತು. ಪ್ರಕರಣಗಳನ್ನು ಮೊದಲೇ ಗುರುತಿಸಲು ನಿಯಂತ್ರಣ ವಲಯಗಳಲ್ಲಿನ ವಿಶೇಷ ತಂಡಗಳ ಮೂಲಕ ಮನೆ ಮನೆಗೆ ಸಕ್ರಿಯವಾದ ಕಣ್ಗಾವಲು ನಿರ್ಣಾಯಕವಾಗಿದೆ ಎಂದು ರಾಜ್ಯಗಳಿಗೆ ಸೂಚಿಸಲಾಯಿತು. ಸಾಕಷ್ಟು ಉಪಕರಣಗಳು (ಉದಾ. ನಾಡಿ ಆಕ್ಸಿಮೀಟರ್), ಮತ್ತು ತರಬೇತಿ ಪಡೆದ ಮಾನವ ಸಂಪನ್ಮೂಲಗಳನ್ನು (ವೈದ್ಯರು, ಸಿಬ್ಬಂದಿ ದಾದಿಯರು, ನಾನ್-ಕ್ಲಿನಿಕಲ್ ಸಿಬ್ಬಂದಿ) ಖಾತರಿಪಡಿಸುವುದರ ಜೊತೆಗೆ ಮುನ್ನೆಣಿಕೆಗಳ ಪ್ರಕಾರ ಪ್ರಕರಣಗಳನ್ನು ನಿರ್ವಹಿಸಲು ಆಸ್ಪತ್ರೆಯ ಮೂಲಸೌಕರ್ಯಗಳ ಉನ್ನತೀಕರಣವನ್ನು ತ್ವರಿತಗೊಳಿಸಲು ಅವರಿಗೆ ವಿನಂತಿಸಲಾಯಿತು.
ತಡೆಗಟ್ಟುವ ಕ್ರಮಗಳನ್ನು ಮುಂದುವರಿಸುವುದು ವಿಶೇಷವಾಗಿ ಅಪಾಯಕ್ಕೊಳಗಾಗುವ ಜನರಿಗೆ, ಅಂದರೆ ವಯಸ್ಸಾದ ಮತ್ತು ಹಲವು ಕಾಯಿಲೆಯಿರುವ ರೋಗಿಗಳಿಗೆ ಬಹಳ ಮುಖ್ಯ ಎಂದು ಒತ್ತಿಹೇಳಲಾಯಿತು. ದೆಹಲಿಯ ಏಮ್ಸ್ ಸಹಯೋಗದೊಂದಿಗೆ ಸೆಂಟರ್ಸ್ ಆಫ್ ಎಕ್ಸಲೆನ್ಸ್ ಸಹಾಯದಿಂದ ರೋಗಲಕ್ಷಣಗಳ ಆಧಾರದ ಮೇಲೆ ಮತ್ತು ಕ್ಲಿನಿಕಲ್ ಅಭ್ಯಾಸಗಳನ್ನು ಸುಧಾರಿಸುವ ಸಮಯೋಚಿತ ಉಲ್ಲೇಖಗಳ ಬಗ್ಗೆ ಒತ್ತಿಹೇಳಲಾಯಿತು. ಎಲ್ಲಾ ಸಮಯದಲ್ಲೂ ಸಮುದಾಯದಲ್ಲಿ ಸಾಮಾಜಿಕ ಅಂತರವನ್ನು ಮತ್ತು ಕೋವಿಡ್ ತಡೆಗಟ್ಟುವ ಸೂಕ್ತ ನಡವಳಿಕೆಯನ್ನು ಉತ್ತೇಜಿಸಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ವಿನಂತಿಸಲಾಯಿತು.
ಸೋಂಕಿತ ವ್ಯಕ್ತಿಗಳಲ್ಲಿ ನಾವೆಲ್ ಕೊರೊನಾವೈರಸ್ಸನ್ನು ಕಂಡುಹಿಡಿಯುವ ಪರೀಕ್ಷಾ ಸಾಮರ್ಥ್ಯವನ್ನು ಐಸಿಎಂಆರ್ ಮತ್ತಷ್ಟು ಹೆಚ್ಚಿಸಿದೆ. ದೇಶದಲ್ಲಿ ಒಟ್ಟು 877 ಪ್ರಯೋಗಾಲಯಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ (637- ಸರ್ಕಾರಿ ಪ್ರಯೋಗಾಲಯಗಳು ಮತ್ತು 240- ಖಾಸಗಿ ಪ್ರಯೋಗಾಲಯಗಳು). ಕಳೆದ 24 ಗಂಟೆಗಳಲ್ಲಿ 1,50,305 ಮಾದರಿಗಳನ್ನು ಪರೀಕ್ಷಿಸಲಾಯಿತು. ಒಟ್ಟು 53,63,445 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.
ಕೋವಿಡ್-19ಕ್ಕೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಈ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿರಿ: https://www.mohfw.gov.in
ಕೋವಿಡ್-19ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ.: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಕ್ಕೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1631632)
Visitor Counter : 215
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam