PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 10 JUN 2020 6:10PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್ 19 ಕುರಿತಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ವರದಿ; ಗುಣಮುಖರಾದ ರೋಗಿಗಳ ಸಂಖ್ಯೆ ಸಕ್ರಿಯ ಪ್ರಕರಣಗಳನ್ನೂ ಮೀರಿದೆ;  ಈವರೆಗೆ ಐಸಿಎಂಆರ್ 50 ಲಕ್ಷ ಮಾದರಿ ಪರೀಕ್ಷಿಸಿದೆ;  ಕೋವಿಡ್ -19 ನಿರ್ವಹಣೆಗಾಗಿ ರಾಜ್ಯಗಳಿಗೆ ನೆರವಾಗಲು 6 ನಗರಗಳಲ್ಲಿ ಕೇಂದ್ರ ತಂಡದ ನಿಯೋಜನೆ

5991  ಕೋವಿಡ್ -19 ರೋಗಿಗಳು ಕಳೆದ 24 ಗಂಟೆಗಳ ಅವಧಿಯಲ್ಲಿ ಗುಣಮುಖರಾಗಿದ್ದಾರೆ. ಇದು ದೇಶದಲ್ಲಿ ಒಟ್ಟು ಗುಣಮುಖರಾದ ರೋಗಿಗಳ ಸಂಖ್ಯೆಯನ್ನು 1,35,205ಕ್ಕೆ ಹೆಚ್ಚಿಸಿದೆ. ಮಧ್ಯೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,33,632 ಆಗಿದೆ. ಇದೇ ಮೊದಲ ಬಾರಿಗೆ ಗುಣಮುಖರಾದ ರೋಗಿಗಳ ಸಂಖ್ಯೆ ಸಕ್ರಿಯ ಪ್ರಕರಣಕ್ಕಿಂತ ಹೆಚ್ಚಾಗಿದೆ. ಹೀಗಾಗಿ ಈಗ ಚೇತರಿಕೆ ದರ ಶೇ.8.88 ಆಗಿದೆ. ಈವರೆಗೆ ಐಸಿಎಂಆರ್  ನಡೆಸಿರುವ ಮಾದರಿ ಪರೀಕ್ಷೆಗಳ ಸಂಖ್ಯೆ 50 ಲಕ್ಷ  ದಾಟಿದ್ದು, ಇಂದಿಗೆ ಅದು 50,61,332 ಆಗಿದೆಕಳೆದ 24 ಗಂಟೆಗಳ ಅವಧಿಯಲ್ಲ ಐಸಿಎಂಆರ್ 1,45,216 ಮಾದರಿಗಳನ್ನು ಪರೀಕ್ಷಿಸಿದೆ. ಐಸಿಎಂಆರ್ ಸೋಂಕಿತ ರೋಗಿಗಳಲ್ಲಿ ಮಾರಕ ಕೊರೊನಾ ವೈರಾಣು ಪತ್ತೆಗೆ ತನ್ನ ಪರೀಕ್ಷಾ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿದೆ. ದೇಶದಲ್ಲಿ ಸರ್ಕಾರಿ ಪ್ರಯೋಗಾಲಯಗಳ ಸಂಖ್ಯೆ 590 ಆಗಿದ್ದರೆ, ಖಾಸಗಿ ಪ್ರಯೋಗಾಲಯಗಳ ಸಂಖ್ಯೆ 233 (ಒಟ್ಟು 823) ಆಗಿದೆ,

ಮುಂಬೈ, ಅಹಮದಾಬಾದ್, ಚೆನ್ನೈ, ಕೋಲ್ಕತಾ, ದೆಹಲಿ ಮತ್ತು ಬೆಂಗಳೂರು ಆರು ನಗರಗಳಲ್ಲಿ ಕೈಗೊಂಡಿರುವ ಕೋವಿಡ್ -19ಕ್ಕಾಗಿ ಕೈಗೊಳ್ಳಲಾಗಿರುವ ಕ್ರಮಗಳ ಪರಾಮರ್ಶೆ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಗಳು ಮತ್ತು ಪುರಸಭೆಯ ಆರೋಗ್ಯ ಅಧಿಕಾರಿಗಳಿಗೆ ತಾಂತ್ರಿಕ ಬೆಂಬಲ ನೀಡಲು ಕೇಂದ್ರ ತಂಡಗಳನ್ನು ನಿಯೋಜಿಸಲಾಗುತ್ತಿದೆ.

ವಿವರಗಳಿಗೆ: https://pib.gov.in/PressReleasePage.aspx?PRID=1630666

ಸಿಜಿಎಚ್.ಎಸ್. ಫಲಾನುಭವಿಗಳಿಗೆ ಚಿಕಿತ್ಸಾ ಸೌಲಭ್ಯ ಒದಗಿಸಲು ಎಲ್ಲ ಸಿಜಿಎಚ್.ಎಸ್. ಪಟ್ಟಿಯಲ್ಲಿನ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ರಾಜ್ಯ ಸರ್ಕಾರಗಳು ಅಧಿಸೂಚನೆ ಹೊರಡಿಸಿವೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಿಜಿಎಚ್.ಎಸ್. ಅಡಿಯಲ್ಲಿ ಪಟ್ಟಿಯಾಗಿರುವ ಎಲ್ಲ ಆರೋಗ್ಯ ಆರೈಕೆ ಸಂಸ್ಥೆಗಳಿಗೆ (ಎಚ್.ಸಿ..ಗಳು) ಆದೇಶ ನೀಡಿದೆ. ಸಿಜಿಎಚ್.ಎಸ್. ಫಲಾನುಭವಿಗಳಿಗೆ ಸಿಜಿಎಚ್.ಎಸ್. ನಿಯಮಗಳ ಅಡಿಯಲ್ಲಿ ಕೋವಿಡ್ ಸಂಬಂಧಿತ ಚಿಕಿತ್ಸೆ ನೀಡಲು ಎಲ್ಲ ಸಿಜಿಎಚ್ಎಸ್ ಪಟ್ಟಿಯಲ್ಲಿರುವ ಆಸ್ಪತ್ರೆಗಳನ್ನು ರಾಜ್ಯ ಸರ್ಕಾರಗಳಿಂದ ಕೋವಿಡ್ ಆಸ್ಪತ್ರೆಗಳಾಗಿ ಅಧಿಸೂಚಿಸಲಿವೆಅದೇ ರೀತಿ ಕೋವಿಡ್ ಆಸ್ಪತ್ರೆಗಳು ಎಂದು ಅಧಿಸೂಚಿಸಲಾಗದ ಎಲ್ಲ ಸಿಜಿಎಚ್ಎಸ್ ಪಟ್ಟಿಯಲ್ಲಿನ ಆಸ್ಪತ್ರೆಗಳು,ಸಹ ಸಿಜಿಎಚ್.ಎಸ್. ಫಲಾನುಭವಿಗಳಿಗೆ ದಾಖಲಾತಿ/ಚಿಕಿತ್ಸಾ ಸೌಲಭ್ಯ ನಿರಾಕರಿಸುವಂತಿಲ್ಲ ಮತ್ತು ಸಿಜಿಎಚ್.ಎಸ್. ನಿಯಮಗಳ ರೀತ್ಯ ಇತರ ಎಲ್ಲ ಚಿಕಿತ್ಸೆಗೆ ಶುಲ್ಕ ವಿಧಿಸಬೇಕು ಎಂದೂ ನಿರ್ದೇಶಿಸಲಾಗಿದೆ. ಮಾರ್ಗಸೂಚಿಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲಾಗುವುದು.

ವಿವರಗಳಿಗೆ: https://pib.gov.in/PressReleseDetail.aspx?PRID=1630602

ಲಾಕ್ಡೌನ್ ತೆರವಿನ ಜೊತೆಗೆ ರೈಲ್ವೆ ಸರಕು ಸಾಗಣೆ ಮತ್ತೆ ಮುಮ್ಮುಖವಾಗಿ ಚಲಿಸುತ್ತಿದೆ

ಭಾರತೀಯ ರೈಲ್ವೆ ಕೋವಿಡ್ -19 ಹಿನ್ನಲೆಯಲ್ಲಿ ದೇಶವ್ಯಾಪಿ ಲಾಕ್ ಡೌನ್ ಮತ್ತು ಅದರ ತೆರವಿನ ನಂತರವೂ ತನ್ನ ಸರಕು ಮತ್ತು ಪಾರ್ಸಲ್ ಸೇವೆಗಳ ಮೂಲಕ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಾತ್ರಿಪಡಿಸುವ ತನ್ನ ಪ್ರಯತ್ನ ಮುಂದುವರಿಸಿದೆ. ನಾಗರಿಕರಿಗೆ ಅವಶ್ಯಕ ವಸ್ತುಗಳು ಮತ್ತು ಇಂಧನ ಮತ್ತು ಮೂಲಸೌಕರ್ಯ ವಲಯಕ್ಕೆ ಪ್ರಮುಖವಾದ ಸರಕುಗಳ ಸಕಾಲಿಕ ಪೂರೈಕೆಯ ಖಾತ್ರಿಯ ನಿಟ್ಟಿನಲ್ಲಿ ಭಾರತೀಯ ರೈಲ್ವೆ ತನ್ನ ಸರಕು ಸಾಗಣೆ ಕಾರಿಡಾರ್ ಗಳನ್ನು ಸಂಪೂರ್ಣವಾಗಿ ಕಾರ್ಯಶೀಲವಾಗಿಟ್ಟುಕೊಂಡಿದ್ದು ಕೈಗಾರಿಕೆ ಮತ್ತು ಗೃಹಪಯೋಗಿ ವಲಯಗಳೆರಡರ ಅಗತ್ಯವನ್ನೂ ಪೂರೈಸಿದೆ. ಮೇ ತಿಂಗಳಿನಲ್ಲಿ ಭಾರತೀಯ ರೈಲ್ವೆ 82.27 ದಶಲಕ್ಷ ಟನ್ ಅವಶ್ಯಕ ವಸ್ತುಗಳನ್ನು ಸಾಗಿಸಿದೆ. ಏಪ್ರಿಲ್ 2020ರಲ್ಲಿ ಇದು 65.15 ದಶಲಕ್ಷ ಟನ್ ಆಗಿದ್ದು, ಶೇ.25ರಷ್ಟು ಹೆಚ್ಚಳವಾಗಿದೆ. 2020 ಏಪ್ರಿಲ್ 1ರಿಂದ 2020 ಜೂನ್ 9ರವರೆಗೆ ಭಾರತೀಯ ರೈಲ್ವೆ 175.46 ದಶಲಕ್ಷ ಟನ್ ಆವಶ್ಯಕ ವಸ್ತುಗಳನ್ನು ತನ್ನ  24X7 ಸರಕು ಸಾಗಣೆ ರೈಲುಗಳ ಮೂಲಕ ದೇಶದಾದ್ಯಂತ ತಡೆರಹಿತ ಕಾರ್ಯಾಚರಣೆ ಮಾಡಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1630647

ಕೇದಾರನಾಥ್ ಪುನರ್ ನಿರ್ಮಾಣ ಯೋಜನೆಯ ಪರಾಮರ್ಶೆ ನಡೆಸಿದ ಪ್ರಧಾನಿ

ಪ್ರಧಾನಮಂತ್ರಿಯವರಿಂದು ಉತ್ತರಾಖಂಡ ರಾಜ್ಯ ಸರ್ಕಾರದೊಂದಿಗೆ ಕೇದಾರನಾಥ ಧಾಮ್ ಅಭಿವೃದ್ಧಿ ಮತ್ತು ಪುನರ್ನಿರ್ಮಾಣ ಯೋಜನೆಯ ಕುರಿತಂತೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪರಾಮರ್ಶೆ ನಡೆಸಿದರು. ದೇವಾಲಯದ ಪುನರ್ನಿರ್ಮಾಣದ ಬಗ್ಗೆ ತಮ್ಮ ದೃಷ್ಟಿಕೋನವನ್ನು ತಿಳಿಸಿದ ಪ್ರಧಾನಿ, ಕೇದಾರನಾಥ ಮತ್ತು ಬದ್ರಿನಾಥ್ನಂತಹ ಪವಿತ್ರ ತಾಣಗಳಿಗೆ ಸಮಯದ ಪರೀಕ್ಷೆಗೆ ಒಳಪಡುವಂಥ ಮತ್ತು ಹೆಚ್ಚು ಪರಿಸರ ಸ್ನೇಹಿಯಾದ ಸ್ವರೂಪ ಹಾಗೂ ಮಾದರಿಯಲ್ಲಿ ಮತ್ತು ಪ್ರಕೃತಿ ಮತ್ತು ಅದರ ಸುತ್ತಲ ಸಾಮರಸ್ಯದೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ರಾಜ್ಯ ಸರ್ಕಾರವು ರೂಪಿಸಬೇಕು ಎಂದರು. ಪ್ರಸ್ತುತ ಪರಿಸ್ಥಿತಿಯನ್ನು ಮತ್ತು ಪವಿತ್ರ ಕ್ಷೇತ್ರಗಳಿಗೆ ಪ್ರವಾಸಿಗರು ಮತ್ತು ಯಾತ್ರಿಕರ ವಿಷಯದಲ್ಲಿ ತುಲನಾತ್ಮಕವಾಗಿ ಮೃದು ಒತ್ತಡವನ್ನು ಗಮನದಲ್ಲಿಟ್ಟುಕೊಂಡು, ಕಾರ್ಮಿಕರ ಪಡೆಯನ್ನು ಸರಿಯಾಗಿ ವಿತರಿಸಿ ನಿಯೋಜಿಸುವ  ಮೂಲಕ  ಮತ್ತು ವ್ಯಕ್ತಿಗತ ಅಂತರದ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಸ್ತುತ ನಿರ್ಮಾಣ ಋತುವನ್ನು ಬಳಸಿಕೊಳ್ಳಬಹುದು ಎಂದು ಸಲಹೆ ನೀಡಿದರು. ಮುಂಬರುವ ವರ್ಷಗಳಲ್ಲಿ ಸುಸ್ಥಿರ ಪ್ರವಾಸೋದ್ಯಮ ಹರಿವು ಉತ್ತಮ ಪಡಿಸಲು ಸೌಲಭ್ಯ ಮತ್ತು ಮೂಲಸೌಕರ್ಯ ಸೃಷ್ಟಿ ನೆರವಾಗಲಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1630620

ತಮ್ಮ ಸಾಮರ್ಥ್ಯ ಸುಧಾರಣೆಗಾಗಿ ಇಸ್ರೋ ಸೌಲಭ್ಯ ಮತ್ತು ಇತರ ಸೂಕ್ತ ಆಸ್ತಿಗಳನ್ನು ಬಳಸಲು ಖಾಸಗಿ ವಲಯಕ್ಕೆ ಅವಕಾಶ: ಡಾ. ಜಿತೇಂದ್ರ ಸಿಂಗ್

ಮೋದಿ ಸರ್ಕಾರದ 2ನೇ ಅವಧಿಯ ಪ್ರಥಮ ವರ್ಷದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಆಗಿರುವ ಭಾರತದ ಸಾಧನೆಯನ್ನು ವಿವರಿಸಿದ ಡಾ. ಜಿತೇಂದ್ರ ಸಿಂಗ್, ಮೋದಿ ಸರ್ಕಾರ ಹಣಕಾಸು ಸಚಿವರು ಹೇಳಿರುವಂತೆ ಆತ್ಮ ನಿರ್ಭರ ಭಾರತ ಮಾರ್ಗದರ್ಶಿಯಡಿ  ಸ್ವಾವಲಂಬಿ ಭಾರತ ಮಾಡಲು, ಬಾಹ್ಯಾಕಾಶ ಚಟುವಟಿಕೆಯಲ್ಲಿ ಖಾಸಗಿ ಪಾಲ್ಗೊಳ್ಳುವಿಕೆಗೆ ಉತ್ತೇಜನ ನೀಡಲು ಕ್ರಮ ಕೈಗೊಂಡಿದೆ ಎಂದರುಭಾರತೀಯ ಖಾಸಗಿ ವಲಯ ಭಾರತೀಯ ಬಾಹ್ಯಾಕಾಶ ವಲಯದ ಪಯಣದಲ್ಲಿ ಸಹ ಪ್ರಯಾಣಿಕರಾಗಿರುತ್ತಾರೆ. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲೂ ಇಸ್ರೋ ವಿಜ್ಞಾನಿಗಳು ಉತ್ತಮ ವೈದ್ಯಕೀಯ ಸಲಕರಣೆ, ಸುರಕ್ಷತಾ ಕಿಟ್ ಮತ್ತು ಇತರ ಸಾಧನಗಳನ್ನು ಒದಗಿಸುವ ಸಂಶೋಧನೆಯಲ್ಲಿ ತೊಡಗಿದ್ದರು.

ವಿವರಗಳಿಗೆ: https://pib.gov.in/PressReleseDetail.aspx?PRID=1630524

ಫಿಲಿಪ್ಪೀನ್ಸ್ ಅಧ್ಯಕ್ಷರು ಮತ್ತು ಪ್ರಧಾನಿ ನಡುವ  ದೂರವಾಣಿ  ಸಂಭಾಷಣೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಫಿಲಿಪ್ಪೀನ್ಸ್ ಅಧ್ಯಕ್ಷ ಘನತೆವೆತ್ತ ರೋಡ್ರಿಗೋ ದುತೇರ್ಟೆ ಅವರೊಂದಿಗೆಇಂದು ದೂರವಾಣಿ ಸಂಭಾಷಣೆ ನಡೆಸಿ, ಕೋವಿಡ್ -19 ಸಾಂಕ್ರಾಮಿಕದಿಂದ ತಲೆದೋರಿರುವ ಸವಾಲುಗಳನ್ನು ಎದುರಿಸಲು ಎರಡೂ ಸರ್ಕಾರಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು. ಆರೋಗ್ಯದ ಬಿಕ್ಕಟ್ಟಿನ ಸಂದರ್ಭದಲ್ಲಿ ಪರಸ್ಪರರ ಭೂಭಾಗದಲ್ಲಿದ್ದ ತಮ್ಮ ನಾಗರಿಕರ ಕಲ್ಯಾಣವನ್ನು ಖಾತ್ರಿಪಡಿಸಲು ಮತ್ತು ಅವರು ಮನೆಗೆ ಮರಳಲು ಸಹಕಾರ ನೀಡಿದ್ದಕ್ಕಾಗಿ ಇಬ್ಬರೂ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು. ಫಿಲಿಪ್ಪೀನ್ಸ್ ಗೆ ಅಗತ್ಯವಾದ ಔಷಧ ಉತ್ಪನ್ನಗಳ ಪೂರೈಕೆಯನ್ನು ನಿರ್ವಹಿಸಲು ಭಾರತ ಕೈಗೊಂಡ ಕ್ರಮಗಳನ್ನು ಫಿಲಿಪ್ಪೀನ್ಸ್ ಅಧ್ಯಕ್ಷರು ಶ್ಲಾಘಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1630515

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿಗಳು

  • ಚಂಡೀಗ: ಸಕ್ರಿಯ ಪ್ರಕರಣಗಳ ಸಂಖ್ಯೆ ತಗ್ಗಿಸಲು ಕರೋನದ ವಿರುದ್ಧ ಹೋರಾಟಕ್ಕೆ ಶ್ರಮಿಸಿದ ವೈದ್ಯರು, ಆರೋಗ್ಯ ಕಾರ್ಯಕರ್ತರು, ಪುರಸಭೆ, ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳಿಗೆ ಚಂಡೀಗಢದ ಆಡಳಿತಾಧಿಕಾರಿಗಳು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಆದಾಗ್ಯೂ, ಜಿಲ್ಲಾಧಿಕಾರಿಗಳು ಇತರ ರಾಜ್ಯಗಳಿಂದ ಬರುವ ವ್ಯಕ್ತಿಗಳ ಮೇಲೆ ನಿಗಾ ಇಡಬೇಕು, ಇದರಿಂದಾಗಿ ಸೋಂಕು ಬೇಗನೆ ಪತ್ತೆಯಾಗುತ್ತದೆ ಮತ್ತು ಅದನ್ನು ನಿಗ್ರಹಿಸಬಹುದು ಎಂದು ಅವರು ಒತ್ತಿ ಹೇಳಿದರು. ಗಡಿಗಳು ತೆರೆದಿರುವುದರಿಂದ ಎರಡನೇ ಹಂತದ ಸೋಂಕು ಉಲ್ಬಣವು ಕಂಡುಬಂದರೆ, ಎಲ್ಲಾ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳು ರೋಗಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಸಿದ್ಧರಾಗಿರುವಂತೆ ಆಡಳಿತಾಧಿಕಾರಿಗಳು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದರು.
  • ಹರಿಯಾಣ: ರಾಜ್ಯದಲ್ಲಿ ಕೋವಿಡ್ -19 ಹರಡುವಿಕೆ ಆಧಾರದ ಮೇಲೆ ಪ್ರಸ್ತುತ ವ್ಯವಸ್ಥೆಗಳ ಮೇಲ್ವಿಚಾರಣೆ ಮತ್ತು ಪರಿಶೀಲನೆಗಾಗಿ ಮತ್ತು ದರಗಳ ವಿಶ್ಲೇಷಣೆಗಾಗಿ ಭವಿಷ್ಯದ ವ್ಯವಸ್ಥೆಗಳನ್ನು ಜಾರಿಗೆ ತರಲು ಹಿರಿಯ ಅಧಿಕಾರಿಗಳನ್ನು ಕನಿಷ್ಠ ಎರಡು ಹಗಲು ಮತ್ತು ಸತತ ಎರಡು ರಾತ್ರಿ ಜಿಲ್ಲೆಗಳಿಗೆ ಭೇಟಿ ನೀಡಲು ಹರಿಯಾಣ ಸರ್ಕಾರ ನಿರ್ದೇಶಿಸಿದೆ. ಕೋವಿಡ್ -19 ವಿರುದ್ಧದ ಹೋರಾಟವನ್ನು ಮುಂದುವರಿಸಲು ಜಿಲ್ಲೆಯ ಪೊಲೀಸ್, ಯುಎಲ್ಬಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಇಲಾಖೆಗಳ ಎಲ್ಲಾ ಸಂಬಂಧಿತ ಅಧಿಕಾರಿಗಳು ಕಾರ್ಯರೂಪಕ್ಕೆ ಬರುವುದನ್ನು ಖಚಿತಪಡಿಸುತ್ತಾರೆ ಮತ್ತು ಪ್ರೇರೇಪಿಸುತ್ತಾರೆ.
  • ಮಹಾರಾಷ್ಟ್ರ: 2,259 ಹೊಸ ಪ್ರಕರಣಗಳ ಜೊತೆಗೆ, ಮಹಾರಾಷ್ಟ್ರದ ಕೋವಿಡ್ -19 ಒಟ್ಟು ಸಂಖ್ಯೆ 90,787 ಕ್ಕೆ ಏರಿದೆ. ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ರಾಜ್ಯದಲ್ಲಿ 120 ಸಾವುಗಳು ಸಂಭವಿಸಿದ್ದು ಒಟ್ಟು ಸಾವಿನ ಸಂಖ್ಯೆ 3289ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 1663 ರೋಗಿಘಳು ಚೇತರಿಸಿಕೊಂಡು ಬಿಡುಗಡೆಯಾಗಿದ್ದು ಒಟ್ಟು ಚೇತರಿಕೆ ಸಂಖ್ಯೆ 42,638ಆಗಿದೆ. ಮತ್ತೊಂದೆಡೆ, ಮುಂಬೈ 1,015 ಹೊಸ ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು 50,878 ಕ್ಕೆ ಏರಿದೆ. ನಗರದಲ್ಲಿ 58 ಸಾವುಗಳು ದಾಖಲಾಗಿದ್ದು, 1,758 ಮಂದಿ ಸಾವನ್ನಪ್ಪಿದಂತಾಗಿದೆ. ಕರೋನಾ ವೈರಸ್  ಮೂಲವಾದ ಚೀನಾದ ವುಹಾನ್ ಗಿಂತ ಹೆಚ್ಚು ಪ್ರಕರಣಗಳು ಮುಂಬೈಯಲ್ಲಿ ವರದಿ ಆಗುತ್ತಿವೆ. ಸಿಲ್ವರ್ ಲೈನಿಂಗ್ ಎಂದರೆ ದ್ವಿಗುಣ ದರ ಮುಂಬಯಿಯಲ್ಲಿ 23 ದಿನಗಳಿಗೆ ಏರಿದೆ ಮತ್ತು ಏಷ್ಯಾದ ಅತಿದೊಡ್ಡ ಕೊಳೆಗೇರಿಯಲ್ಲಿ ದ್ವಿಗುಣಗೊಳಿಸುವ ದರವು 48 ದಿನಗಳಿಗೆ ಏರಿದೆ. ಇದಲ್ಲದೆ, ಕಳೆದ ಏಳು ದಿನಗಳಲ್ಲಿ ಧಾರವಿ ಯಿಂದ ಯಾವುದೇ ಸಾವುಗಳು ವರದಿಯಾಗಿಲ್ಲ.
  • ಗುಜರಾತ್: 470 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ 21044 ಕ್ಕೆ ಏರಿದೆ, ಅದರಲ್ಲಿ 5336 ಸಕ್ರಿಯ ಪ್ರಕರಣಗಳಾಗಿವೆ. ಹಾಟ್ ಸ್ಪಾಟ್ ಅಹಮದಾಬಾದ್ ನಿಂದ ಹೊಸ ಪ್ರಕರಣಗಳಲ್ಲಿ 331 ವರದಿ ಆಗಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 1,313 ಕ್ಕೆ ಏರಿದ್ದು, ಮಂಗಳವಾರ 33 ಕೋವಿಡ್ -19 ರೋಗಿಗಳು ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ, 409 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಚೇತರಿಸಿಕೊಂಡ ರೋಗಿಗಳ ಸಂಖ್ಯೆಯನ್ನು 14,373 ಕ್ಕೆ ಏರಿದೆ. ಅಲ್ಲದೆ, ಅಹಮದಾಬಾದ್ನಲ್ಲಿ ಖ್ಯಾತ ಗಂಭೀರ ಕಾಯಿಲೆಗಳ ಆರೈಕೆ ತಜ್ಞ ಡಾ.ರಾಜ್ ರಾವಲ್ ಅವರು ತಜ್ಞ ವೈದ್ಯರ ಗುಂಪನ್ನು ರಚಿಸಿದ್ದಾರೆ ಮತ್ತು ಸೌಮ್ಯ ರೋಗ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಕೋವಿಡ್ ಹೋಮ್ ಕೇರ್ ಸೇವೆಯನ್ನು ಪ್ರಾರಂಭಿಸಿದ್ದಾರೆ. ಮನೆಯ ಆರೈಕೆ ಸೇವೆಯಡಿಯಲ್ಲಿ, ರೋಗಿಗಳಿಗೆ ಸಹಾಯಕ ದಾದಿ, ಆಮ್ಲಜನಕ ಮತ್ತು ಅಗತ್ಯವಿದ್ದಲ್ಲಿ ನಿಗಾ ಸೌಲಭ್ಯ ಒದಗಿಸಲಾಗುತ್ತದೆ.
  • ರಾಜಸ್ಥಾನ: ಇಂದು ಬೆಳಗ್ಗೆಯವರೆಗೆ 123 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ಮಂಗಳವಾರ 369 ಹೊಸ ಪ್ರಕರಣಗಳು ವರದಿಯಾಗಿವೆ, ರಾಜ್ಯದಲ್ಲಿ ಕೊರೊನಾವೈರಸ್  ಪ್ರಕರಣಗಳು 11,368 ಕ್ಕೆ ತಲುಪಿದೆ. ಇಲ್ಲಿಯವರೆಗೆ, ದೇಶದಲ್ಲಿ ಅತಿ ಹೆಚ್ಚು ಚೇತರಿಕೆ ಪ್ರಮಾಣವನ್ನು ಹೊಂದಿರುವ ರಾಜ್ಯದಲ್ಲಿ 8502 ರೋಗಿಗಳು ಚೇತರಿಸಿಕೊಂಡಿದ್ದಾರೆ. ಕರೋನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರ ಇಂದು ತನ್ನ ಎಲ್ಲಾ ಅಂತರ್-ರಾಜ್ಯ ಗಡಿಗಳನ್ನು ಮುಚ್ಚಿದೆ. ಇದಲ್ಲದೆ, ಅಂತಾ ರಾಜ್ಯ ಸಂಚಾರವನ್ನು ನಿಯಂತ್ರಿಸಲು ಮತ್ತು ನಿಯಂತ್ರಿಸಲು ಸರ್ಕಾರ ನಿರ್ಧರಿಸಿದೆ.
  • ಮಧ್ಯಪ್ರದೇಶ: 211 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ, ಇದು ರಾಜ್ಯದ ಕೊರೊನಾವೈರಸ್ ಪ್ರಕರಣಗಳನ್ನು 9849 ಕ್ಕೆ ಏರಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2700 ಆಗಿದ್ದರೆ, ಒಟ್ಟು 6,729 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಈವರೆಗೆ 420 ರೋಗಿಗಳು ಸಾವನ್ನಪ್ಪಿದ್ದಾರೆ. ಕರೋನಾ ಸೋಂಕಿನ ಬೆಳವಣಿಗೆಯ ದರವು  ರಾಷ್ಟ್ರೀಯ ಸರಾಸರಿ 5.4 ಕ್ಕೆ ಪ್ರತಿಯಾಗಿ  ಶೇಕಡಾ 2.74 ಕ್ಕೆ ಇಳಿದಿದೆ.
  • ಛತ್ತೀಸ್ಗಢ: ಮಂಗಳವಾರ 43 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ರಾಜ್ಯವು ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯನ್ನು 1251ಕ್ಕೆ ಏರಿಸಿದೆ, ಸಕ್ರಿಯ ಪ್ರಕರಣಗಳ ಸಂಖ್ಯೆ 859 ಆಗಿದೆ.
  • ಗೋವಾ: 29 ಹೊಸ ಕೋವಿಡ್ -19 ಪ್ರಕರಣಗಳು ಮಂಗಳವಾರ ವರದಿಯಾಗಿದ್ದು, ರಾಜ್ಯದಲ್ಲಿ ಕೊರೊನಾವೈರಸ್ ಪ್ರಕರಣಗಳನ್ನು 359 ಕ್ಕೆ ಹೆಚ್ಚಿದೆ. ಪೈಕಿ 292 ಸಕ್ರಿಯ ಪ್ರಕರಣಗಳಿದ್ದು, 67 ರೋಗಿಗಳು ರಾಜ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ರಾಜ್ಯದ ಮ್ಯಾಂಗೋರ್ ಪ್ರದೇಶವು ಗರಿಷ್ಠ ಪ್ರಕರಣಗಳು ಮುಂದುವರಿದಿವೆ, 22 ಹೊಸ ಪ್ರಕರಣಗಳು ಪ್ರದೇಶಕ್ಕೆ ಸಂಬಂಧಿಸಿವೆ.
  • ಅರುಣಾಚಲ ಪ್ರದೇಶ: ಇದುವರೆಗೆ 11,500 ಕ್ಕೂ ಹೆಚ್ಚು ಸಿಲುಕಿದ್ದ ಜನರು ರಾಜ್ಯಕ್ಕೆ ಮರಳಿದ್ದಾರೆ ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಹೇಳಿದ್ದಾರೆ. ಇನ್ನೂ ಹೆಚ್ಚು ಸಿಲುಕಿರುವ ಜನರು ರಾಜ್ಯವನ್ನು ಬರಲಿದ್ದಾರೆ ಮತ್ತು ಅವರ ತಪಾಸಣೆ ಮತ್ತು ಕ್ವಾರಂಟೈನ್ ಪರಿಶೀಲಿಸಲು ಎಸ್..ಪಿ.ಳನ್ನು ಅನುಸರಿಸಲಾಗುತ್ತಿದೆ ಎಂದು ಅವರು ಹೇಳಿದರು.
  • ಅಸ್ಸಾಂ: ಅಸ್ಸಾಂನಲ್ಲಿ 42 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು 3092, ಸಕ್ರಿಯ ಪ್ರಕರಣಗಳು 1987, ಚೇತರಿಸಿಕೊಂಡವರು 1097 ಮತ್ತು ಸಾವುಗಳು 5.
  • ಮಣಿಪುರ: ಇನ್ನೂ ಐದು ಜನರಲ್ಲಿ ಕೋವಿಡ್ -19 ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 309 ಕ್ಕೆ ಏರಿದೆ, ಹಿಂದಿರುಗಿದ  19,854 ಜನರ ಪರೀಕ್ಷೆಗಳನ್ನು ರಾಜ್ಯದಲ್ಲಿ ಈವರೆಗೆ ಮಾಡಲಾಗಿದೆ.
  • ಮಿಜೋರಾಂ: ಲಾಕ್ಡೌನ್ ಮಾರ್ಗಸೂಚಿಗಳ ಭಾಗಶಃ ಮಾರ್ಪಾಡು ಮಾಡಲಾಗಿದ್ದು,, ಮಿಜೋರಾಂನ ಲೆಂಗ್ಪುಯಿ ವಿಮಾನ ನಿಲ್ದಾಣವು ಮುಂದಿನ ಆದೇಶದವರೆಗೆ ಕಾರ್ಯನಿರ್ವಹಿಸುತ್ತಲೇ ಇರುತ್ತದೆ.
  • ನಾಗಾಲ್ಯಾಂಡ್: ನಾಗಾಲ್ಯಾಂಡ್ ಸಿವಿಲ್ ಸೊಸೈಟಿ ಆರ್ಗೈಸೇಷನ್ಸ್ ಇಂದು ಸಂಜೆ 7 ಗಂಟೆಗೆ 'ಮನೆಗಳಿಂದ ಪ್ರಾರ್ಥನೆ' ಯೋಜಿಸಿದೆ. ಮೇಣದ ಬತ್ತಿಗಳು ಅಥವಾ ಫ್ಲ್ಯಾಷ್ ಮೊಬೈಲ್ ಫೋನ್ ದೀಪಗಳನ್ನು ಬೆಳಗಿಸಲು ಮತ್ತು ಮುಂಚೂಣಿ ಯೋಧರು ಸೇರಿದಂತೆ ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುವಂತೆ ಜನರನ್ನು ಕೋರಲಾಗಿದೆ. ನಾಗಾಲ್ಯಾಂಡ್ನಲ್ಲಿ ಈವರೆಗೆ 4732 ಮಾದರಿಗಳನ್ನು ಪರೀಕ್ಷಿಸಲಾಗಿದೆ. 3518 ಫಲಿತಾಂಶಗಳನ್ನು ಸ್ವೀಕರಿಸಲಾಗಿದೆ ಮತ್ತು 5922 ಜನರು ಪ್ರಸ್ತುತ ಕ್ವಾರಂಟೈನ್ ನಲ್ಲಿದ್ದಾರೆ.
  • ಕೇರಳ: ತಿರುವನಂತಪುರ ವೈದ್ಯಕೀಯ ಕಾಲೇಜಿನಿಂದ ತಪ್ಪಿಸಿಕೊಂಡ ಕೋವಿಡ್ -19 ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ದ ನಂತರ ಇಂದು ಪ್ರತ್ಯೇಕ ವಾರ್ಡ್ ಒಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅವರ ಎರಡನೇ ಪರೀಕ್ಷೆಯು ಕೋವಿಡ್ ಸೋಂಕಿಲ್ಲ ಎಂದು ತೋರಿಸಿದೆ. ಅವರ 40 ಸ್ನೇಹಿತರು ಮತ್ತು ನಿಕಟ ಕುಟುಂಬ ಸದಸ್ಯರನ್ನು ಸಂಪರ್ಕತಡೆಯಲ್ಲಿ ಇರಿಸಲಾಗಿತ್ತು. ಕೋವಿಡ್ -19 ಸಮುದಾಯ ಹರಡುವಿಕೆಯನ್ನು ತಪ್ಪಿಸಲು ನಿಯಂತ್ರಣ ಕ್ರಮಗಳನ್ನು ಬಲಪಡಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಮುಂದಿನ ಸೋಮವಾರದಿಂದ ಮಾಸಿಕ ಪೂಜೆಯ ಸಮಯದಲ್ಲಿ ದೇವಾಲಯದಲ್ಲಿ ಭಕ್ತರಿಗೆ ಅವಕಾಶ ನೀಡದಂತೆ ಶಬರಿಮಲೆ ಬೆಟ್ಟದ ದೇಗುಲದ ಪ್ರಧಾನ ಅರ್ಚಕ ದೇವಸ್ವಂ ಮಂಡಳಿಗೆ ಪತ್ರ ಬರೆದಿದ್ದು, ಉತ್ಸವವನ್ನು ಮುಂದೂಡುವಂತೆ ಕೋರಿದ್ದಾರೆ. ನಾಲ್ಕು ಕೇರಳಿಗರು ಕೊಲ್ಲಿ ರಾಷ್ಟ್ರದಲ್ಲಿ ವೈರಸ್ಗೆ ತುತ್ತಾಗಿದ್ದಾರೆ. ಒಟ್ಟು 207 ಮಲಯಾಳಿಗಳು ಕೊಲ್ಲಿಯಲ್ಲಿ ವೈರಸ್ಗೆ ಬಲಿಯಾಗಿದ್ದಾರೆ. ಇಬ್ಬರು ಮುಂಬೈ ಮತ್ತು ಒಬ್ಬರು ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಕೇರಳದಲ್ಲಿ ಸತತ ಎರಡನೇ ದಿನ ಕೋವಿಡ್ -19 ಪ್ರಕರಣಗಳಲ್ಲಿ 91 ಹೊಸ ಪ್ರಕರಣಗಳು ದೃಢಪಟ್ಟಿದೆ. ರಾಜ್ಯದಲ್ಲಿ ಕ್ವಾರಂಟೈನ್ ಹೊಂದಿರುವವರ ಸಂಖ್ಯೆ 2 ಲಕ್ಷ ದಾಟಿದೆ.
  • ತಮಿಳುನಾಡು: ಕೋವಿಡ್ -19 ಸಾವುಗಳನ್ನು ಕಡಿಮೆ ವರದಿ ಮಾಡಿರಬಹುದೆಂಬುದನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ; ಒಂಬತ್ತು ಸದಸ್ಯರ ಸಮಿತಿ ಚೆನ್ನೈನಲ್ಲಿನ ಎಲ್ಲಾ ಕೋವಿಡ್ -19 ಸಾವುಗಳನ್ನು ಪರಿಶೋಧಿಸಲಿದೆ. ಪುದುಚೇರಿಯಲ್ಲಿ ನಿಧನರಾದ ನಿವೃತ್ತ ಶಿಕ್ಷಕರಲ್ಲಿ ಕೋವಿಡ್ -19 ದೃಢಪಟ್ಟಿದೆ, ಕೇಂದ್ರಾಡಳಿತ ಪ್ರದೇಶದಲ್ಲಿನ ಪ್ರಕರಣಗಳು 145 ಕ್ಕೆ ಏರಿದೆ. ತಮಿಳುನಾಡು ನಂತರ, ಪುದುಚೇರಿ ಆಡಳಿತವು ಮಂಗಳವಾರ ಪುದುಚೇರಿ ಮತ್ತು ಕಾರೈಕಲ್ ಪ್ರದೇಶಗಳಲ್ಲಿನ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯನ್ನು ರದ್ದುಗೊಳಿಸಿದೆ. ಡಿಎಂಕೆ ಶಾಸಕ ಜೆ.ಅನ್ಬಾ ಗನ್ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ -19 ಗೆ ಬಲಿಯಾಗಿದ್ದಾರೆ. 1685 ಹೊಸ ಪ್ರಕರಣಗಳು, 798 ಗುಣಮುಕ ಮತ್ತು 21 ಸಾವುಗಳು ನಿನ್ನೆ ವರದಿಯಾಗಿವೆ. ಚೆನ್ನೈನಿಂದ 1242 ಪ್ರಕರಣಗಳು. ಒಟ್ಟು ಪ್ರಕರಣಗಳು: 34914, ಸಕ್ರಿಯ ಪ್ರಕರಣಗಳು: 16279, ಸಾವುಗಳು: 307. ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 12570.
  • ಕರ್ನಾಟಕ: ಐಎಲ್‌. ಅಥವಾ ಸಾರಿ ರೋಗಲಕ್ಷಣಗಳ ಇತಿಹಾಸ ಹೊಂದಿರುವ ಸಾವುಗಳ ನಡುವೆ ರಾಜ್ಯವು ಕೋವಿಡ್ ಪರೀಕ್ಷೆಯನ್ನು ಮುಂದುವರೆಸಿದೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿದೆ- ಪರೀಕ್ಷೆಗಾಗಿ ಸಾವಿನ 6 ಗಂಟೆಗಳಲ್ಲಿ ಗಂಟಲು ದ್ರವ ತೆಗೆದುಕೊಳ್ಳಬೇಕು. ರಾಜ್ಯವು ಮಂಗಳವಾರ 4 ಲಕ್ಷ ಮಾದರಿ ಪರೀಕ್ಷೆಯ ಗಡಿ ದಾಟಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. 2605 ಚೇತರಿಕೆ ಮತ್ತು ಒಟ್ಟು 5921 ಪ್ರಕರಣಗಳು, ಕರ್ನಾಟಕದ ಚೇತರಿಕೆ ಪ್ರಮಾಣ ಶೇ.44ರಷ್ಟಿದೆ. ಮಹಾರಾಷ್ಟ್ರದಿಂದ ಹಿಂದಿರುಗಿದವರನ್ನು ಇನ್ನು ಮುಂದೆ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸುವುದಿಲ್ಲ ಮತ್ತು ನೇರವಾಗಿ 14 ದಿನಗಳ ಮನೆ ಕ್ವಾರಂಟೈನ್  ಗೆ ಕಳುಹಿಸಲಾಗುವುದು ಎಂದು ಆರೋಗ್ಯ ಸಚಿವ ಬಿ ಶ್ರೀರಾಮುಲು ತಿಳಿಸಿದ್ದಾರೆ.  161 ಹೊಸ ಪ್ರಕರಣಗಳು, 164 ಗುಣಮುಖ ಮತ್ತು ಎರಡು ಸಾವುಗಳು ನಿನ್ನೆ ವರದಿಯಾಗಿವೆ. ಒಟ್ಟು ಪ್ರಕರಣಗಳು: 5921, ಸಕ್ರಿಯ ಪ್ರಕರಣಗಳು: 3248, ಸಾವುಗಳು: 66.
  • ಆಂಧ್ರಪ್ರದೇಶ: ಆಂಧ್ರಪ್ರದೇಶ ಸರ್ಕಾರದ ಅರ್ಜಿಯ ಮೇಲೆ ರಾಜ್ಯ ಚುನಾವಣಾ ಆಯುಕ್ತ ಎನ್ ರಮೇಶ್ ಕುಮಾರ್ ಅವರ ಮರು ನೇಮಕ ಪ್ರಕರಣದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ತೀರ್ಪಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆಂಧ್ರದಲ್ಲಿ ಹಿಂದೆ ಘೋಷಿಸಲಾಗಿದ್ದ ವೇಳಾಪಟ್ಟಿಯ ಪ್ರಕಾರ ಹತ್ತನೇ ತರಗತಿ ಪರೀಕ್ಷೆಗಳು ನಡೆಯಲಿವೆ ಎಂದು ಸಚಿವ ಆದಿಮುಲಾಪು ಸುರೇಶ್ ಹೇಳಿದ್ದಾರೆ. ರಾಜ್ಯದಲ್ಲಿ ಮಡಿವಾಳರು, ಕ್ಷೌರಿಕರು ಮತ್ತು ದರ್ಜಿಗಳು ಸೇರಿ 2,47,040 ಫಲಾನುಭವಿಗಳಿಗೆ ತಲಾ 10,000 ರೂ. ನಗದು ಪ್ರೋತ್ಸಾಹ ಧನ ನೀಡಲು ಮುಖ್ಯಮಂತ್ರಿ ಜಗನಣ್ಣ ಚೆಡೋಡುಯೋಜನೆಯನ್ನು ಪ್ರಾರಂಭಿಸಿದ್ದಾರೆ. ಟಿಟಿಡಿ ಗುರುವಾರದಿಂದ ಭಕ್ತರಿಗಾಗಿ ತಿರುಮಲದಲ್ಲಿ ದರ್ಶನ ವ್ಯವಸ್ಥೆಗೆ ಸಜ್ಜಾಗಿದೆ. 15,384 ಮಾದರಿಗಳನ್ನು ಪರೀಕ್ಷಿಸಿದ ನಂತರ ಕಳೆದ 24 ಗಂಟೆಗಳಲ್ಲಿ 136 ಹೊಸ ಪ್ರಕರಣಗಳು, 72 ಬಿಡುಗಡೆ ಮತ್ತು ಒಂದು ಸಾವು ವರದಿಯಾಗಿದೆ. ಒಟ್ಟು ಪ್ರಕರಣಗಳು: 4126. ಸಕ್ರಿಯ: 1573, ಚೇತರಿಕೆ: 2475, ಸಾವುಗಳು: 78.
  • ತೆಲಂಗಾಣ: ನಿನ್ನೆ ವೈದ್ಯರ ಮೇಲೆ ಹಲ್ಲೆ ನಡೆದ ನಂತರ ಗಾಂಧಿ ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದವರೊಂದಿಗೆ ವೈದ್ಯರು ಒಗ್ಗಟ್ಟಿನಿಂದ ನಿಂತಿದ್ದರಿಂದ ತೆಲಂಗಾಣದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದವು. ತೆಲಂಗಾಣ ಸರ್ಕಾರ ಆಂತರಿಕ ಮೌಲ್ಯಮಾಪನಗಳಲ್ಲಿನ ಸಾಧನೆಯ ಆಧಾರದ ಮೇಲೆ ಎಲ್ಲಾ 10ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗೆ ಅರ್ಹತೆ ನೀಡುವಂತೆ ಆದೇಶ ಹೊರಡಿಸಿದೆ. ಆದೇಶಗಳನ್ನು ಅನುಸರಿಸಿ ಸುಮಾರು 7 ಲಕ್ಷ ವಿದ್ಯಾರ್ಥಿಗಳಿಗೆ ಬಡ್ತಿ ನೀಡಲಾಗಿದೆ. ದಿನಾಂಕದವರೆಗೆ 448 ವಲಸಿಗರು, ವಿದೇಶದಿಂದ ಮರಳಿದವರಲ್ಲಿ ಸೋಂಕು ದೃಢವಾಗಿದೆ.

ವಾಸ್ತವ ಪರಿಶೀಲನೆ

Image

***



(Release ID: 1630807) Visitor Counter : 276