ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ರಾಜ್ಯ ಸರ್ಕಾರಗಳು ಕೋವಿಡ್ ಆಸ್ಪತ್ರೆಗಳು ಅಧಿಸೂಚನೆ ಹೊರಡಿಸಿರುವ ಎಲ್ಲ ಸಿಜಿಎಸ್ ಎಚ್ ನೋಂದಾಯಿತ ಆಸ್ಪತ್ರೆಗಳಲ್ಲಿ ಸಿಜಿಎಸ್ ಎಚ್ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಆದೇಶ
Posted On:
10 JUN 2020 11:30AM by PIB Bengaluru
ರಾಜ್ಯ ಸರ್ಕಾರಗಳು ಕೋವಿಡ್ ಆಸ್ಪತ್ರೆಗಳು ಅಧಿಸೂಚನೆ ಹೊರಡಿಸಿರುವ
ಎಲ್ಲ ಸಿಜಿಎಸ್ ಎಚ್ ನೋಂದಾಯಿತ ಆಸ್ಪತ್ರೆಗಳಲ್ಲಿ ಸಿಜಿಎಸ್ ಎಚ್ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಆದೇಶ
ಸಿಜಿಎಚ್ ಎಸ್ ಅಡಿ ನೋಂದಣಿಯಾಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಡಯಾಗ್ನಾಸ್ಟಿಕ್ ಕೇಂದ್ರಗಳಲ್ಲಿ ತಮಗೆ ಚಿಕಿತ್ಸಾ ಸೌಲಭ್ಯ ದೊರಕುವಲ್ಲಿ ತೊಂದರೆ ಎದುರಾಗುತ್ತಿರುವೆ ಎಂದು ಸಿಜಿಎಚ್ ಎಸ್ ಎಚ್ ಫಲಾನುಭವಿಗಳು ನೀಡಿರುವ ಮನವಿಗಳ ಹಿನ್ನೆಲೆಯಲ್ಲಿ ಅವುಗಳನ್ನು ಪರಿಗಣಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಸಿಜಿಎಚ್ ಎಸ್ ಅಡಿ ನೋಂದಾಯಿಸಿಕೊಂಡಿರುವ ಎಲ್ಲ ಆರೋಗ್ಯ ರಕ್ಷಣಾ ಸಂಸ್ಥೆ(ಎಚ್ ಸಿಒಎಸ್ )ಗಳಿಗೆ ಆದೇಶವನ್ನು ಹೊರಡಿಸಿದೆ.
ಸಚಿವಾಲಯದ ಆದೇಶದಂತೆ, ರಾಜ್ಯ ಸರ್ಕಾರಗಳು ಕೋವಿಡ್ ಆಸ್ಪತ್ರೆಗಳೆಂದು ಘೋಷಿಸಿರುವ ಎಲ್ಲ ಸಿಜಿಎಚ್ ಎಸ್ ನೋಂದಾಯಿತ ಆಸ್ಪತ್ರೆಗಳು, ಎಲ್ಲ ಸಿಜಿಎಚ್ ಎಸ್ ಫಲಾನುಭವಿಗಳಿಗೆ ಸಿಜಿಎಚ್ ಎಸ್ ನಿಯಮಗಳಂತೆ ಕೋವಿಡ್ ಸಂಬಂಧಿ ಚಿಕಿತ್ಸೆಗಳನ್ನು ಹಾಗೂ ಇನ್ನಿತರ ಚಿಕಿತ್ಸೆಗಳನ್ನು ನೀಡಬೇಕೆಂದು ಸೂಚಿಸಲಾಗಿದೆ. ಅಂತೆಯೇ, ಕೋವಿಡ್ ಆಸ್ಪತ್ರೆಗಳೆಂದು ಘೋಷಿಸಿದೇ ಇರುವ ಸಿಜಿಎಚ್ ಎಸ್ ನೋಂದಾಯಿತ ಆಸ್ಪತ್ರೆಗಳೂ ಸಹ ಯಾವುದೇ ರೀತಿಯ ಚಿಕಿತ್ಸಾ ಸೌಕರ್ಯಗಳನ್ನು/ ಸಿಜಿಎಚ್ ಎಸ್ ಫಲಾನುಭವಿಗಳನ್ನು ಪ್ರವೇಶ ಮಾಡಿಕೊಳ್ಳುವುದನ್ನು ನಿರಾಕರಿಸಬಾರದು ಮತ್ತು ಎಲ್ಲ ಚಿಕಿತ್ಸೆಗಳಿಗೆ ಸಿಜಿಎಚ್ ಎಸ್ ನಿಯಮದಂತೆ ಶುಲ್ಕ ವಿಧಿಸಬೇಕು ಎಂದು ಆದೇಶಿಸಲಾಗಿದೆ. ಒಂದು ವೇಳೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು.
ಕೋವಿಡ್-19 ಕುರಿತ ಎಲ್ಲ ಅಧಿಕೃತ ಮತ್ತು ತಾಜಾ ಮಾಹಿತಿಗೆ, ತಾಂತ್ರಿಕ ವಿಷಯಗಳಿಗೆ, ಮಾರ್ಗಸೂಚಿಗಳಿಗೆ ಮತ್ತು ಸಲಹಾ ಸೂಚಿಗಳಿಗೆ, ನಿರಂತರವಾಗಿ ಇಲ್ಲಿ ಭೇಟಿ ನೀಡಬಹುದು. https://www.mohfw.gov.in/ ಮತ್ತು @MoHFW_INDIA .
ಕೋವಿಡ್-19 ಕುರಿತ ತಾಂತ್ರಿಕ ಸಂಬಂಧಿ ಪ್ರಶ್ನೆಗಳನ್ನು ಇ-ಮೇಲ್ ಮಾಡಬಹುದು. technicalquery.covid19[at]gov[dot]in ಮತ್ತು ಇತರೆ ಪ್ರಶ್ನೆಗಳನ್ನು ncov2019[at]gov[dot]in ಇಲ್ಲಿಗೆ ಕಳುಹಿಸಬಹುದು ಮತ್ತು ಟ್ವೀಟ್ ಮೂಲಕ ಕೇಳಲು @CovidIndiaSeva.
ಕೋವಿಡ್-19 ಕುರಿತಂತೆ ಯಾವುದೇ ದೂರುಗಳಿದ್ದರೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆ +91-11-23978046 ಅಥವಾ 1075 (ಉಚಿತ ಕರೆಗೆ). ಕೋವಿಡ್-19 ಕುರಿತಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆ ಇಲ್ಲಿ ಲಭ್ಯ. https://www.mohfw.gov.in/pdf/coronvavirushelplinenumber.pdf .
***
(Release ID: 1630661)
Visitor Counter : 256
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam