ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪುರಸಭೆ ಆಯುಕ್ತರು, ಮುಖ್ಯ ವೈದ್ಯಕೀಯ ಅಧಿಕಾರಿಗಳೊಂದಿಗೆ ಆರೋಗ್ಯ ಕಾರ್ಯದರ್ಶಿಯವರ ಸಂವಾದ

Posted On: 08 JUN 2020 2:06PM by PIB Bengaluru

ಕೋವಿಡ್-19 ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ

ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪುರಸಭೆ ಆಯುಕ್ತರು, ಮುಖ್ಯ ವೈದ್ಯಕೀಯ ಅಧಿಕಾರಿಗಳೊಂದಿಗೆ ಆರೋಗ್ಯ ಕಾರ್ಯದರ್ಶಿಯವರ ಸಂವಾದ

ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆಯ ಕ್ರಮಗಳ ಪರಿಶೀಲನೆ

 

ಆರೋಗ್ಯ ಕಾರ್ಯದರ್ಶಿ ಎಂ.ಎಸ್.ಪ್ರೀತಿ ಸೂದನ್ ಮತ್ತು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳಾದ ಶ್ರೀ ರಾಜೇಶ್ ಭೂಷಣ್ ಮತ್ತು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು, ಕೋವಿಡ್-19 ಪ್ರಕರಣಗಳು ಹೆಚ್ಚಾಗಿರುವ ಹತ್ತು ರಾಜ್ಯಗಳ 38 ಜಿಲ್ಲೆಗಳಲ್ಲಿನ 45 ಪುರಸಭೆಗಳು ಮತ್ತು ಪುರಸಭೆ ಪಾಲಿಕೆಗಳ ಜಿಲ್ಲಾಧಿಕಾರಿಗಳು, ಪುರಸಭೆ ಆಯುಕ್ತರು, ಮುಖ್ಯ ವೈದ್ಯಕೀಯ ಅಧಿಕಾರಿಗಳು, ಜಿಲ್ಲಾ ಆಸ್ಪತ್ರೆಗಳ ಅಧೀಕ್ಷಕರು, ವೈದ್ಯಕೀಯ ಕಾಲೇಜುಗಳ ಪ್ರಿನ್ಸಿಪಾಲರುಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ (ವಿಡಿಯೋ ಸಂವಾದದ ಮೂಲಕ) ನಡೆಸಿದರು.,

ಜಿಲ್ಲೆಗಳು ಕೆಳಗಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದವು: ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ರಾಜಸ್ಥಾನ, ಹರಿಯಾಣ, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಉತ್ತರಾಖಂಡ್ ಮತ್ತು ಮಧ್ಯಪ್ರದೇಶ.

ಚರ್ಚಿಸಲ್ಪಟ್ಟ ಮುಖ್ಯ ವಿಷಯಗಳೆಂದರೆ ಜನನಿಬಿಡ ನಗರ ಪ್ರದೇಶಗಳಲ್ಲಿ ವ್ಯಾಪಕವಾದ ಸೋಂಕು, ಸಾರ್ವಜನಿಕ ಸೌಲಭ್ಯಗಳನ್ನು ಹಂಚಿಕೊಳ್ಳುವ ಪ್ರದೇಶಗಳು; ಮನೆ ಮನೆ ಸಮೀಕ್ಷೆಗಳ ಪ್ರಾಮುಖ್ಯತೆ; ಪರೀಕ್ಷೆಯ ನಂತರ ಸರಿಯಾದ ಸಮಯಕ್ಕೆ ಪ್ರತ್ಯೇಕತೆ ಮತ್ತು ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆ ಮತ್ತು ಕಾರ್ಯಗತಗೊಳಿಸುವ ತಂತ್ರ.

ಪ್ರಕರಣ ನಿರ್ವಹಣೆ ಮತ್ತು ಬಫರ್ ವಲಯಗಳ ಕಣ್ಗಾವಲು ಚಟುವಟಿಕೆಗಳು ಮತ್ತು ಕೋವಿಡ್ ಎದುರಿಸಲು ಸೂಕ್ತ ನಡವಳಿಕೆಯನ್ನು ಉತ್ತೇಜಿಸಲು ನಿಯಂತ್ರಣ ವಲಯಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಜ್ಯದ ಅಧಿಕಾರಿಗಳಿಗೆ ಸೂಚಿಸಲಾಯಿತು. ಸೋಂಕಿನ ಪ್ರಕರಣದ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು, ವಯಸ್ಸಾದವರು ಮತ್ತು ಬಹು ಕಾಯಿಲೆಯನ್ನು ಹೊಂದಿರುವ ಜನರಂತಹ ಹೆಚ್ಚಿನ ಅಪಾಯಕ್ಕೊಳಗಾಗುವ ಮತ್ತು ದುರ್ಬಲ ಜನರಿಗೆ ಆದ್ಯತೆ ನೀಡುವಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ವಿವರಿಸಲಾಯಿತು; ಸಕ್ರಿಯ ಕಣ್ಗಾವಲು ಕ್ರಮಗಳು, ಸಾಕಷ್ಟು ಪರೀಕ್ಷೆಗಳನ್ನು ಮತ್ತು ಪ್ರಕರಣಗಳನ್ನು ಸಮಯೋಚಿತವಾಗಿ ಪತ್ತೆಹಚ್ಚಲು ಸ್ವಯಂ ಬಯಸುವ ನಡವಳಿಕೆಯನ್ನು ಉತ್ತೇಜಿಸುವುದು; ರೋಗಲಕ್ಷಣಗಳನ್ನು ಹೆಚ್ಚಿಸದೆ ರೋಗಿಗಳ ಸಮಯೋಚಿತ ವರ್ಗಾವಣೆಯನ್ನು ಖಾತ್ರಿಪಡಿಸುವುದು.

ಕೋವಿಡ್-19ಅನ್ನು ನಿಯಂತ್ರಿಸಲು ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ನಿರ್ವಹಣೆಗೆ ಸಂಬಂಧಿಸಿದಂತೆ, ಆರೋಗ್ಯ ಮೂಲಸೌಕರ್ಯಕ್ಕಾಗಿ ಸಾಕಷ್ಟು ಯೋಜನೆಯನ್ನು ಕೈಗೊಳ್ಳಬೇಕೆಂದು ಸೂಚಿಸಲಾಯಿತು; ಸಾಕಷ್ಟು ಸಂಖ್ಯೆಯ ಕಣ್ಗಾವಲು ತಂಡಗಳನ್ನು ಒದಗಿಸಬೇಕು; ಹಾಸಿಗೆ ಲಭ್ಯತೆ ನಿರ್ವಹಣೆಗಾಗಿ ಒಂದು ವ್ಯವಸ್ಥೆಯನ್ನು ಜಾರಿಗೆ ತರಬೇಕು; ನಾಗರಿಕರಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ಆರೋಗ್ಯ ಸೇವೆಗಳನ್ನು ಹುಡುಕಲು ಸಹಾಯ ಮಾಡಲು ಆಸ್ಪತ್ರೆಗಳಿಗೆ ನಿಯೋಜಿಸಬೇಕಾದ ವೈದ್ಯಕೀಯ ವೃತ್ತಿಪರರು ಮತ್ತು ಹಿರಿಯ ಅಧಿಕಾರಿಗಳಿಗೆ ಉನ್ನತ ಕೇಂದ್ರಗಳಿಂದ ತರಬೇತಿ ನೀಡುವುದು

ಕ್ಷೇತ್ರದ ಆಡಳಿತದ ಕುರಿತು ಮಾತನಾಡುವಾಗ, ಪುರಸಭೆ ಅಧಿಕಾರಿಗಳಿಗೆ ನಾಯಕತ್ವವನ್ನು ವಹಿಸಲು ಮತ್ತು ಇಡೀ ಪುರಸಭೆಯ ಮೂಲಸೌಕರ್ಯಗಳನ್ನು ಇಡೀ ಸರ್ಕಾರದ ವಿಧಾನವನ್ನುಬಳಸಿಕೊಂಡು ನಿಯಂತ್ರಣದ ಕ್ರಮಗಳಿಗಾಗಿ ಉಪಯೋಗಿಸುವಂತೆ ಸೂಚಿಸಲಾಯಿತು. ಕೋವಿಡ್-19 ನಿರ್ವಹಣಾ ಪ್ರಯತ್ನಗಳ ಜೊತೆಗೆ, ನಾಗರಿಕರಿಗೆ ಸಹ ಲಭ್ಯವಿರುವ ನಿಯಮಿತ ಮತ್ತು ಅಗತ್ಯ ಆರೋಗ್ಯ ಸೇವೆಗಳಿಗೆ ಕಾಳಜಿಯನ್ನು ನೀಡಬೇಕಾಗಿದೆ ಎಂದು ಎತ್ತಿ ತೋರಿಸಲಾಯಿತು.

ನಿರಂತರ ಗಮನಹರಿಸುವ ಅಗತ್ಯವಿರುವ ಪ್ರದೇಶಗಳ ಸಮಯೋಚಿತ ಪತ್ತೆಗಾಗಿ ಸಕ್ರಿಯ ಮನೆ ಮನೆಗೆ ಸಮೀಕ್ಷೆಯನ್ನು ಒಳಗೊಂಡಿವೆ; ಸಮೀಕ್ಷಾ ತಂಡಗಳ ಹೆಚ್ಚಿಸುವಿಕೆ; ದಕ್ಷ ಆಂಬ್ಯುಲೆನ್ಸ್ ನಿರ್ವಹಣೆ; ಆಸ್ಪತ್ರೆಗಳಲ್ಲಿ ರೋಗಿಗಳ ಪರಿಣಾಮಕಾರಿ ಪರೀಕ್ಷೆ ಮತ್ತು ಹಾಸಿಗೆ ನಿರ್ವಹಣೆ; ಮರಣದ ಪ್ರಮಾಣವನ್ನು ಕಡಿಮೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಆವರ್ತಕ 24X7 ತಂಡಗಳ ಮೂಲಕ ಆಸ್ಪತ್ರೆಗೆ ದಾಖಲಾದ ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆ, ಆರಂಭಿಕ ಗುರುತಿಸುವಿಕೆ ಮತ್ತು ಸಮಯೋಚಿತ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಪರೀಕ್ಷಾ ಫಲಿತಾಂಶಗಳನ್ನು ಪ್ರಯೋಗಾಲಯಗಳಿಂದ ಸಮಯಕ್ಕೆ ಸರಿಯಾಗಿ ಹಿಂದಿರುಗಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಅವರಿಗೆ ಸೂಚಿಸಲಾಯಿತು. ವಿಶ್ವಾಸಾರ್ಹತೆ ಮತ್ತು ಲಭ್ಯವಿರುವ ಆರೋಗ್ಯ ಸೇವೆಗಳನ್ನು ಸಕಾಲಿಕವಾಗಿ ದೊರಕಲು ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಸಹಕರಿಸಲು ಗ್ರಾಮೀಣ ಪ್ರದೇಶದ ಚುನಾಯಿತ ಪ್ರತಿನಿಧಿಗಳನ್ನು ಒಳಗೊಳ್ಳುವಂತೆ ಸೂಚಿಸಲಾಯಿತು. ಬಫರ್ ವಲಯಗಳಲ್ಲಿ ಎಸ್ ಆರ್ / ಐಎಲ್ ಪ್ರಕರಣಗಳನ್ನು ಪತ್ತೆಹಚ್ಚಲು ಜ್ವರ ಚಿಕಿತ್ಸಾಲಯಗಳನ್ನು ಸಕ್ರಿಯಗೊಳಿಸಲು ರಾಜ್ಯಗಳಿಗೆ ನೆನಪಿಸಲಾಯಿತು. ಲಾಕ್ಡೌನ್ ಸಡಿಲವಾಗುತ್ತಿರುವ ಮತ್ತು ನಿರ್ಬಂಧಗಳನ್ನು ತೆಗೆದುಹಾಕುವ ದೃಷ್ಟಿಯಿಂದ, ಮುಂಬರುವ ತಿಂಗಳುಗಳಲ್ಲಿ ಜಿಲ್ಲಾವಾರು ನಿರೀಕ್ಷಿತ ಯೋಜನೆಯನ್ನು ರೂಪಿಸುವಂತೆ ರಾಜ್ಯಗಳಿಗೆ ಸೂಚಿಸಲಾಯಿತು.

ಈವರೆಗೆ ಒಟ್ಟು 1,24,430 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 5,137 ರೋಗಿಗಳನ್ನು ಗುಣಪಡಿಸಲಾಗಿದೆ. ಇದರಿಂದ ಒಟ್ಟು ಚೇತರಿಕೆಯ ಪ್ರಮಾಣವು 48.49% ರಷ್ಟು ಆಗಿದೆ. ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ ಈಗ 1,24,981 ಆಗಿದೆ.

ಕೋವಿಡ್-19ಕ್ಕೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿರಿ: https://www.mohfw.gov.in

ಕೋವಿಡ್-19ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ.: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಕ್ಕೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***



(Release ID: 1630370) Visitor Counter : 227