PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 07 JUN 2020 6:36PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

Image

ಕೋವಿಡ್ -19 ಕ್ಕೆ ಸಂಬಂಧಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ಡೇಟ್

ಕಳೆದ 24 ಗಂಟೆಗಳಲ್ಲಿ , ಒಟ್ಟು 5,220 ಕೋವಿಡ್ -19 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದ ಇದುವರೆಗೆ ಒಟ್ಟು 1,19,293 ರೋಗಿಗಳು ಕೋವಿಡ್ -19 ರಿಂದ ಗುಣಮುಖರಾದಂತಾಗಿದೆ. ಕೋವಿಡ್ -19 ರೋಗಿಗಳ ಗುಣಮುಖ ದರ 48.37 % . ಪ್ರಸ್ತುತ 1,20,406 ಆಕ್ಟಿವ್ ಪ್ರಕರಣಗಳಿದ್ದು ಎಲ್ಲವೂ ವೈದ್ಯಕೀಯ ನಿಗಾದಲ್ಲಿವೆ.

.ಸಿ.ಎಂ.ಆರ್. ಕೊರೊನಾ ಸೋಂಕಿನ ವ್ಯಕ್ತಿಗಳಲ್ಲಿ ನೊವೆಲ್ ಕೊರೊನಾವೈರಸ್ ಪತ್ತೆ ಹಚ್ಚಲು ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿದೆ. ಸರಕಾರಿ ಪ್ರಯೋಗಾಲಯಗಳ ಸಂಖ್ಯೆಯನು 531 ಕ್ಕೆ ಮತ್ತು ಖಾಸಗಿ ಪ್ರಯೋಗಾಲಯಗಳ ಸಂಖ್ಯೆಯನ್ನು 228 ಕ್ಕೆ (ಒಟ್ಟು 759) ಹೆಚ್ಚಿಸಲಾಗಿದೆ. 1,42,069 ಸ್ಯಾಂಪಲ್ ಗಳನ್ನು ಕಳೆದ 24 ಗಂಟೆಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಿಂದ ಇದುವರೆಗೆ ಪರೀಕ್ಷೆಗೆ ಒಳಪಡಿಸಲಾದ ಸ್ಯಾಂಪಲ್ ಗಳ ಸಂಖ್ಯೆ 46,66,386 ಕ್ಕೇರಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1630031

ಸಾಮೂಹಿಕ ಕ್ರಮದ ಮೂಲಕ ದೃಢವಾದ ಮುನ್ನಡೆ

ತಾಂತ್ರಿಕ ತಜ್ಞರ ವಿಸ್ತಾರವಾದ ಜ್ಞಾನವನ್ನು ಹೊರಗಿಟ್ಟು ಸರಕಾರ ಕೋವಿಡ್ -19ನ್ನು ನಿಭಾಯಿಸುತ್ತಿರುವ ಮತ್ತು ಅದರ ಹರಡುವಿಕೆಯನ್ನು ಪ್ರತಿಬಂಧಿಸುವ ಕ್ರಮಗಳನ್ನು ಅನುಷ್ಟಾನಿಸುತ್ತಿದೆ ಎಂಬುದಾಗಿ ಕೆಲವು ಮಾಧ್ಯಮಗಳಲ್ಲಿ ಕಳವಳಗಳನ್ನು ವ್ಯಕ್ತಪಡಿಸಿದ ವರದಿಗಳು ಬಂದಿವೆ.

ಆಪಾದನೆಗಳು ಆಧಾರರಹಿತವಾದವು ಮತ್ತು ಸತ್ಯಕ್ಕೆ ದೂರವಾದಂತಹವು. ಸರಕಾರವು ನಿರಂತರವಾಗಿ ತಾಂತ್ರಿಕ ಮತ್ತು ವ್ಯೂಹಾತ್ಮಕ ಮಾಹಿತಿಗಳಿಗಾಗಿ ತಜ್ಞರೊಂದಿಗೆ ಸಂಪರ್ಕದಲ್ಲಿದೆ , ವೈಜ್ಞಾನಿಕ ಸಲಹೆಗಳು ಮತ್ತು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ನಿಯಂತ್ರಣಕ್ಕೆ ಕ್ಷೇತ್ರಕ್ಕೆ ನಿರ್ದಿಷ್ಟವಾದ ಮಾರ್ಗದರ್ಶನಗಳನ್ನು ಅದು ಪಡೆಯುತ್ತಿದೆ. ಕೋವಿಡ್ -19 ಕ್ಕಾಗಿ ರಾಷ್ಟ್ರೀಯ ಕಾರ್ಯ ಪಡೆಯನ್ನು (ಎನ್.ಟಿ.ಎಫ್.) ರಚಿಸಲಾಗಿದೆ. ಡಿ.ಎಚ್.ಆರ್. ಕಾರ್ಯದರ್ಶಿ ಮತ್ತು ಡಿ.ಜಿ.-.ಸಿ.ಎಂ.ಆರ್. ಅವರು ನೀತಿ ಆಯೋಗದ ಸದಸ್ಯರು (ಆರೋಗ್ಯ) ಅಧ್ಯಕ್ಷರಾಗಿರುವ ಮತ್ತು ಕಾರ್ಯದರ್ಶಿ ( ಡಿ.. ಎಚ್.ಎಫ್. ಡಬ್ಲ್ಯು.) ಹಾಗು ಕಾರ್ಯದರ್ಶಿ ( ಡಿ.ಎಚ್.ಆರ್.) ಉಪಾಧ್ಯಕ್ಷರಾಗಿರುವ ಸಮಿತಿ ಇದಾಗಿದೆ. ಎನ್.ಟಿ.ಎಫ್. ಸರಕಾರದ ಮತ್ತು ಸರಕಾರದ ಹೊರಗಿರುವ ತಾಂತ್ರಿಕ/ ಆಯಾ ಕ್ಷೇತ್ರದ ತಜ್ಞರನ್ನು ಒಳಗೊಂಡ 21 ಸದಸ್ಯರನ್ನು ಹೊಂದಿದೆ. ಕಾರ್ಯಪಡೆಯಲ್ಲಿ ಸಾರ್ವಜನಿಕ ಆರೋಗ್ಯ ಅಥವಾ ಸಾಂಕ್ರಾಮಿಕ ರೋಗ ವಿಜ್ಞಾನಕ್ಕೆ ಸಂಬಂಧಿಸಿ ಹೆಚ್ಚಿನ ತಜ್ಞರಿದ್ದಾರೆ. ಕೋವಿಡ್ -19 ಸಂಕೀರ್ಣತೆ ಮತ್ತು ಅದರ ಪರಿಣಾಮಗಳನ್ನು ಪರಿಗಣಿಸಿ ಗುಂಪಿನಲ್ಲಿ ವೈದ್ಯಕೀಯ ಕ್ಷೇತ್ರದ ತಜ್ಞರಿದ್ದಾರೆ, ವೈರಾಣುವಿಜ್ಞಾನ, ಫಾರ್ಮಕಾಲಜಿ, ಮತ್ತು ಕಾರ್ಯಕ್ರಮ ಅನುಷ್ಟಾನಗಳ ಕ್ಷೇತ್ರದ ತಜ್ಞರೂ ಇದರಲ್ಲಿದ್ದಾರೆ.

ಸರಕಾರವು ಲಾಕ್ ಡೌನ್ ನಿಂದಾಗಿರುವ ಪರಿಣಾಮ ಮತ್ತು ಇತರ ನಿರ್ಬಂಧಗಳಿಂದ ಲಕ್ಷಾಂತರ ಸೋಂಕುಗಳ ಸಾಧ್ಯತೆಯನ್ನು ತಡೆಗಟ್ಟಿರುವ ಮತ್ತು ಸಂಭಾವ್ಯ ಸಾವಿರಾರು ಸಾವುಗಳನ್ನು ತಪ್ಪಿಸಿರುವ ಬಗ್ಗೆ ಈಗಾಗಲೇ ಮಾಹಿತಿಯನ್ನು ಹಂಚಿಕೊಂಡಿದೆ. ಜನತೆಯ ಸಿದ್ಧತಾಸ್ಥಿತಿ ಮತ್ತು ಆರೋಗ್ಯ ವ್ಯವಸ್ಥೆಗಾಗಿರುವ ಲಾಭಗಳ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ. ಲಾಕ್ ಡೌನ್ ಸುಲಭಗೊಳಿಸಿದ ಯು.ಕೆ., ಇಟೆಲಿ, ಸ್ಪೈನ್ ಮತ್ತು ಜರ್ಮನಿಗಳಿಗೆ ಹೋಲಿಸಿದರೆ ಭಾರತದಲ್ಲಿ ಒಂದು ಲಕ್ಷ ಜನತೆಗೆ ಅತ್ಯಂತ ಕಡಿಮೆ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 17.23 ಪ್ರಕರಣಗಳು ಮತ್ತು ಒಂದು ಲಕ್ಷ ಜನಸಂಖ್ಯೆಗೆ 0.49 ಸಾವುಗಳು ಸಂಭವಿಸಿವೆ. ( 2020 ಜೂನ್ 6 ರಂದು ಡಬ್ಲ್ಯು.ಎಚ್.. ಪರಿಸ್ಥಿತಿ ವರದಿ ಪ್ರಕಾರ)

ವಿವರಗಳಿಗೆhttps://pib.gov.in/PressReleseDetail.aspx?PRID=1630069

ನೇರ ತೆರಿಗೆ ಸಂಗ್ರಹದ ಬೆಳವಣಿಗೆ ರೇಖೆ ಮತ್ತು ಇತ್ತೀಚಿನ ನೇರ ತೆರಿಗೆ ಸುಧಾರಣೆಗಳು

ಹಣಕಾಸು ವರ್ಷ 2019-20 ರಲ್ಲಿ ನೇರ ತೆರಿಗೆ ಸಂಗ್ರಹ ಭಾರೀ ಪ್ರಮಾಣದಲ್ಲಿ ಕುಸಿದಿದೆ ಮತ್ತು ಜಿ.ಡಿ.ಪಿ. ಬೆಳವಣಿಗೆಯೊಂದಿಗೆ ಹೋಲಿಸಿದಾಗ ನೇರ ತೆರಿಗೆ ಸಂಗ್ರಹದ ಹಣಕಾಸು ವರ್ಷ 2019-20 ಕ್ಕೆ ಸಂಬಂಧಿಸಿ ನೇರ ತೆರಿಗೆ ಸಂಗ್ರಹದ ಬೆಳವಣಿಗೆಯಲ್ಲಿ ಭಾರೀ ಕುಸಿತವಾಗಿದೆ ಮತ್ತು ನೇರ ತೆರಿಗೆ ಸಂಗ್ರಹದ ಶಕ್ತಿ ಪ್ರಮಾಣ ಋಣಾತ್ಮಕವಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ವರದಿಗಳು ನೇರ ತೆರಿಗೆಗಳ ಬೆಳವಣಿಗೆ ಬಗ್ಗೆ ಸರಿಯಾದ ಚಿತ್ರಣ ನೀಡುತ್ತಿಲ್ಲ. 2019-20 ರಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ ಪ್ರಮಾಣವು ಹಣಕಾಸು ವರ್ಷ 2018-19 ರಲ್ಲಿ ಸಂಗ್ರಹವಾದ ನಿವ್ವಳ ನೇರ ತೆರಿಗೆ ಸಂಗ್ರಹಕ್ಕಿಂತ ಕಡಿಮೆಯಾಗಿರುವುದು ನಿಜ. ಆದರೆ ಕುಸಿತ ನಿರೀಕ್ಷಿತ ಮಟ್ಟದಲ್ಲಿದೆ. ಮತ್ತು ಅದು ಚಾರಿತ್ರಿಕ ತೆರಿಗೆ ಸುಧಾರಣೆಗಳನ್ನು ಕೈಗೆತ್ತಿಕೊಂಡ ಮತ್ತು ಹಣಕಾಸು ವರ್ಷ 2019-20 ಅವಧಿಗೆ ನೀಡಲಾದ ಹೆಚ್ಚಿನ ಮರುಪಾವತಿಯಿಂದಾಗಿರುವ ತಾತ್ಕಾಲಿಕ ಸ್ವರೂಪದ ಕುಸಿತವಾಗಿದೆ.

ಒಟ್ಟು ಸಂಗ್ರಹಕ್ಕೆ (ಇದು ವರ್ಷದಲ್ಲಿ ನೀಡಲಾದ ಮರುಪಾವತಿ ಮೊತ್ತಕ್ಕೆ ಸಂಬಂಧಿಸಿದ ವ್ಯತ್ಯಯದಿಂದಾಗಿರುವ ಕೆಲವು ದೋಷಗಳನ್ನು ನಿವಾರಿಸುತ್ತದೆ.) ಹೋಲಿಸಿದಾಗ ಧೈರ್ಯದಿಂದ ಅನುಷ್ಟಾನಿಸಿದ ತೆರಿಗೆ ಸುಧಾರಣೆಗಳಿಂದಾಗಿ ಅಂದಾಜು ಮಾಡಲಾದ ಆದಾಯ ಪ್ರಮಾಣಕ್ಕಿಂತ ಹೆಚ್ಚು ಸಂಗ್ರಹವಾಗಿರುವುದು ಹೆಚ್ಚು ಸ್ಪಷ್ಟವಾಗುತ್ತದೆ. ಇದು ಹಣಕಾಸು ವರ್ಷ 2019-20 ನೇರ ತೆರಿಗೆ ಸಂಗ್ರಹದ ಮೇಲೆ ನೇರ ಪರಿಣಾಮವನ್ನು ಬೀರಿದೆ. ಹಣಕಾಸು ವರ್ಷ 2019-20 ರಲ್ಲಿ ನೀಡಲಾದ ಮರು ಪಾವತಿ ಮೊತ್ತ 1.84 ಲಕ್ಷ ಕೋ.ರೂ.ಗಳಷ್ಟಾಗಿದೆ. ಹಣಕಾಸು ವರ್ಷ 2018-19 ರಲ್ಲಿ ಮೊತ್ತ 1.61 ಲಕ್ಷ ಕೋ.ರೂ.ಗಳಾಗಿತ್ತು. ವರ್ಷದಿಂದ ವರ್ಷಕ್ಕೆ ಇದು 14 % ಹೆಚ್ಚಳವಾಗಿದೆ ಎಂಬುದು ಇಲ್ಲಿ ಗಮನಾರ್ಹವಾಗಿದೆ.

ವಿವರಗಳಿಗೆ : https://pib.gov.in/PressReleasePage.aspx?PRID=1630018

ಕೋವಿಡ್ -19 ವಿರುದ್ದ ಹೋರಾಟದಲ್ಲಿ ಜಾಗೃತಿಯೇ ಮುಖ್ಯ ಹೊರತು ಆತಂಕವಲ್ಲ : ಡಾ. ಜಿತೇಂದ್ರ ಸಿಂಗ್

ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಂದು ಕೋವಿಡ್ ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಟಕ್ಕೆ ಜಾಗೃತಿ ಮುಖ್ಯವೇ ಹೊರತು ಆತಂಕವಲ್ಲ ಎಂದು ಹೇಳಿದ್ದಾರೆ. ಕೋವಿಡ್ ಬೀಪ್ (ನಿರಂತರ ಆಕ್ಸಿಜನೇಶನ್ ಮತ್ತು ಪ್ರಮುಖ ಮಾಹಿತಿ ಶೋಧ ವ್ಯವಸ್ಥೆ) ಕಾರ್ಯಾರಂಭಗೊಳಿಸಿ ಅವರು ಮಾತನಾಡಿದರು. ಇದು ಕೋವಿಡ್ -19 ರೋಗಿಗಳಿಗಾಗಿರುವ , ಭಾರತದ ಮೊದಲ ದೇಶೀಯ ಮತ್ತು ಕಡಿಮೆ ವೆಚ್ಚದ , ನಿಸ್ತಂತು ಅಂಗರಚನಾ ಮಾನದಂಡಗಳ ಮೇಲೆ ನಿಗಾ ಇಡುವ ವ್ಯವಸ್ಥೆಯಾಗಿದೆ. ಹೈದರಾಬಾದಿನ .ಎಸ್..ಸಿ. ವೈದ್ಯಕೀಯ ಕಾಲೇಜು, ..ಟಿ. ಹೈದರಾಬಾದ್ ಮತ್ತು ಅಣು ಶಕ್ತಿ ಇಲಾಖೆ ಸಹಯೋಗದಲ್ಲಿ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲಾಗಿದೆ. ಜಾಗತಿಕ ಸಾಂಕ್ರಾಮಿಕವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಪ್ರತಿಬಂಧಕ ಮತ್ತು ಜಾಗೃತಿಯ ಮಹತ್ವವನ್ನು ಅವರು ಒತ್ತಿ ಹೇಳಿದರು. ಸುಮಾರು ಎರಡು ತಿಂಗಳ ಸಕಾಲಿಕ ಲಾಕ್ ಡೌನ್ ಬಳಿಕ ಈಗ ಹಂತ ಹಂತವಾಗಿ ಅನ್ ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ ಎಂದರು.

ವಿವರಗಳಿಗೆ: https://pib.gov.in/PressReleasePage.aspx?PRID=1630067

ಆಧುನಿಕ ಕಲೆಯ ರಾಷ್ಟ್ರೀಯ ಗ್ಯಾಲರಿಯು ಆನ್ ಲೈನ್ ನೈಮಿಷ 2020- ಬೇಸಗೆ ಕಲಾ ಕಾರ್ಯಕ್ರಮವನ್ನು 2020 ಜೂನ್ 8 ರಿಂದ ಜುಲೈ 3 ರವರೆಗೆ ನಡೆಸಲಿದೆ

ಈಗ ಇರುವ ಜಾಗತಿಕ ಸಾಂಕ್ರಾಮಿಕದ ಮತ್ತು ಲಾಕ್ ಡೌನ್ ಪರಿಸ್ಥಿತಿಯಲ್ಲಿ ವಸ್ತುಸಂಗ್ರಹಾಲಯಗಳು ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಸಂದರ್ಶಕರು ಮತ್ತು ವೀಕ್ಷಕರಿಗೆ ಎಂದಿನಂತೆ ಸೇವೆ ಸಲ್ಲಿಸಲು ಸಾಧ್ಯವಿಲ್ಲ. ಇದರಿಂದಾಗಿ ಎನ್.ಜಿ.ಎಂ.. ಯು ತನ್ನ ವೀಕ್ಷಕರನ್ನು ತಲುಪಲು ಹೊಸ ಕ್ಷೇತ್ರಗಳನ್ನು ಮತ್ತು ವೇದಿಕೆಗಳನ್ನು ಅನ್ವೇಷಿಸಿದೆ. ಕಳೆದ ಎರಡು ತಿಂಗಳಲ್ಲಿ ಎನ್.ಜಿ.ಎಂ..ಯು ಹಲವು ಕಾರ್ಯಕ್ರಮಗಳನ್ನು ಮತ್ತು ಪ್ರದರ್ಶನಗಳನ್ನು ವರ್ಚುವಲ್ ಆಗಿ ಆಯೋಜಿಸಿದೆ. ತಾಂತ್ರಿಕ ಅಭಿವೃದ್ದಿಯು ಇಂತಹ ಕಾರ್ಯಕ್ರಮಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಸಂಘಟಿಸುವ ಅವಕಾಶವನ್ನು ನೀಡಿದೆ. ಇದರಿಂದಾಗಿ ಎನ್.ಜಿ.ಎಂ..ಯು ತನ್ನ ಜನಪ್ರಿಯ ಬೇಸಿಗೆ ಕಲಾ ಕಾರ್ಯಕ್ರಮ ನೈಮಿಷವನ್ನು ಡಿಜಿಟಲ್ ಆಗಿ ಆಯೋಜಿಸಲು ಮುಂದಡಿ ಇಟ್ಟಿದೆ. ಹೊಸದಿಲ್ಲಿಯ ಎನ್.ಜಿ.ಎಂ.. ತಿಂಗಳು ಕಾಲದ ಆನ್ ಲೈನ್ ಬೇಸಿಗೆ ಕಾರ್ಯಕ್ರಮವು ಹಿರಿಯ ಕಲಾವಿದರಿಂದ , ಅವರ ಆರೋಗ್ಯ ರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಕಲಿಯುವ ಅವಕಾಶವನ್ನು ಅದರಲ್ಲಿ ಪಾಲ್ಗೊಳ್ಳುವವರಿಗೆ ಒದಗಿಸುತ್ತದೆ.

ವಿವರಗಳಿಗೆ: https://pib.gov.in/PressReleasePage.aspx?PRID=1630020

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಪಂಜಾಬ್: ರಾಜ್ಯದ ಜನತೆಗೆ ಬಹಳ ಅವಶ್ಯ ಇರುವ ಸಮಾಧಾನವನ್ನು ಒದಗಿಸಲು ನಾಗರಿಕರಿಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಲು ಅನುಕೂಲತೆಗಳನ್ನು ಒದಗಿಸಲು ಪಂಜಾಬ್ ಸರಕಾರವು ಎಲ್ಲಾ ಖಾಸಗಿ ಸಾರಿಗೆ ಮತ್ತು ಸಾರ್ವಜನಿಕ ಸಾರಿಗೆ ವಾಹನಗಳಿಗೆ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಓಡಾಟಕ್ಕೆ ಅವಕಾಶ ಒದಗಿಸಿದೆ. ಆದರೆ ಸೂಕ್ತ ಪ್ರಾಧಿಕಾರ ಘೋಷಿಸಿದ ಕಂಟೈನ್ ಮೆಂಟ್ ವಲಯಕ್ಕೆ ಇದು ಅನ್ವಯಿಸುವುದಿಲ್ಲ. ಮತ್ತು ಮಾರಕ ಕೊರೊನಾವೈರಸ್ ಹರಡುವಿಕೆ ನಿಯಂತ್ರಣಕ್ಕಾಗಿ ಸೂಕ್ತ ಪ್ರತಿಬಂಧಕ ಕ್ರಮಗಳನ್ನೂ ಸರಕಾರ ಜಾರಿಯಲ್ಲಿಟ್ಟಿದೆ.
  • ಹರ್ಯಾಣಾ; ಹರ್ಯಾಣಾ ಸರಕಾರವು ಧಾರ್ಮಿಕ ಸ್ಥಳಗಳು, ಆರಾಧನಾ ಕೇಂದ್ರಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ತೆರೆಯಲು ಮತ್ತು ರಾಜ್ಯಾದ್ಯಂತ ಶಾಪಿಂಗ್ ಮಾಲ್ ಗಳನ್ನು 2020 ಜೂನ್ 8 ರಿಂದ ಕೆಲವು ಪ್ರತಿಬಂಧಕ ಕ್ರಮಗಳೊಂದಿಗೆ ತೆರೆಯಲು ನಿರ್ಧರಿಸಿದೆ. ಆದರೆ ಇದು ಕಳೆದ 10 ದಿನಗಳಿಂದ ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿರುವ ಗುರುಗ್ರಾಮ ಮತ್ತು ಫರೀದಾಬಾದ್ ಜಿಲ್ಲೆಗಳಿಗೆ ಅನ್ವಯಿಸುವುದಿಲ್ಲ. ಇದರ ಹೊರತಾಗಿ ಹೊಟೇಲುಗಳು, ರೆಸ್ಟೋರೆಂಟ್ ಗಳು, ಮತ್ತು ಇತರ ಆತಿಥ್ಯ ಸೇವೆಗಳು ರಾಜ್ಯಾದ್ಯಂತ ಸಾಮಾನ್ಯ ಪ್ರತಿಬಂಧಕ ಕ್ರಮಗಳೊಂದಿಗೆ ಮರು ಆರಂಭಗೊಳ್ಳಲಿವೆ. ಎಲ್ಲಾ ವ್ಯವಸ್ಥೆಗಳು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ತೆರೆದಿರಬಹುದು. ರಾತ್ರಿ ಗಂಟೆ 9 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಇರುತ್ತದೆ, ಅದನ್ನು ಇವು ಅನುಸರಿಸಬೇಕಾಗುತ್ತದೆ. ಮುಖ್ಯಮಂತ್ರಿಗಳು ಹರ್ಯಾಣದಲ್ಲಿ ಚಾಲ್ತಿಯಲ್ಲಿರುವ ಕೋವಿಡ್ -19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಚಟುವಟಿಕೆಗಳನ್ನು ಗೃಹ ವ್ಯವಹಾರಗಳ ಸಚಿವಾಲಯವು ಹೊರಡಿಸಿರುವ ಮಾರ್ಗದರ್ಶಿಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಿ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.
  • ಕೇರಳ: ರಾಜ್ಯದಲ್ಲಿ ಕೋವಿಡ್ -19 ದೃಢಪಟ್ಟ ಅತ್ಯಂತ ಕಿರಿಯ ರೋಗಿ, ಐದು ವರ್ಷದ ಮಗು ರೋಗದಿಂದ ಮುಕ್ತವಾಗಿ ಕೊಲ್ಲಂನ ಪರಿಪ್ಪಲ್ಲಿ ವೈದ್ಯಕೀಯ ಕಾಲೇಜಿನಿಂದ ಮನೆಗೆ ಮರಳಿದೆ. ಅದರ ತಾಯಿ ಇನ್ನೂ ಚಿಕಿತ್ಸೆಯಲ್ಲಿದ್ದಾರೆ. ತಿರುವನಂತಪುರಂನಲ್ಲಿರುವ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರವು ಕೋವಿಡ್ ಚಿಕಿತ್ಸಾ ಸಲಕರಣೆಗಳ ಮತ್ತು ಪರೀಕ್ಷಾ ಕಿಟ್ ಗಳ ನಿಖರತೆ ಪರೀಕ್ಷಿಸುವ ಕೇಂದ್ರವಾಗಿ ಪರಿಗಣಿಸಲ್ಪಟ್ಟಿದೆ. ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಇತರ ರಾಜ್ಯಗಳ ಭಕ್ತರಿಗೆ ಕೋವಿಡ್ ಪ್ರಮಾಣ ಪತ್ರ ಕಡ್ಡಾಯ. ಶಬರಿಮಲೆ ಮತ್ತು ಗುರುವಾಯೂರು ದೇವಾಲಯಗಳ ಎಲ್ಲಾ ಭಕ್ತರಿಗೆ ವರ್ಚುವಲ್ ಸರತಿ ಸಾಲನ್ನು ಕಡ್ದಾಯ ಮಾಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳದ ಕಾರಣಕ್ಕೆ ಕೋಝಿಕ್ಕೋಡ್ ನಲ್ಲಿ ಹೊಟೇಲುಗಳು ಜುಲೈ 15 ಬಳಿಕವೇ ತೆರೆಯಲಿವೆ. ಹೊಸದಿಲ್ಲಿಯಲ್ಲಿ ಇನ್ನೋರ್ವ ಮಲೆಯಾಳಿ, ಎಕ್ಸ್ ರೇ ತಂತ್ರಜ್ಞ ಮೃತಪಟ್ಟಿದ್ದಾರೆ. ನಿನ್ನೆ ಕೇರಳದಲ್ಲಿ 108 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ ಮತ್ತು ವಿವಿಧ ಆಸ್ಪತ್ರೆಗಳಲ್ಲಿ 1029 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
  • ತಮಿಳುನಾಡು: ಐದು ಮಂದಿ ಜೆ..ಪಿ.ಎಂ..ಆರ್. ವೈದ್ಯರು , ತಂತ್ರಜ್ಞರು ಸಹಿತ 12 ಮಂದಿ ಪುದುಚೇರಿಯಲ್ಲಿ ಪಾಸಿಟಿವ್ ಆಗಿದ್ದಾರೆ. ಇದರಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 119 ಕ್ಕೇರಿದೆ. ಆಕ್ಟಿವ್ ಪ್ರಕರಣಗಳ ಸಂಖ್ಯೆ 71. ಭಾರತೀಯ ನೌಕಾದಳದ ಹಡಗು ಜಲಾಶ್ವಪ್ರಸ್ತುತ ಚಾಲ್ತಿಯಲ್ಲಿರುವ ಸಮುದ್ರ ಸೇತುಮಿಷನ್ ಅಂಗವಾಗಿ ಮಾಲ್ದೀವ್ಸ್ ನಿಂದ 700 ಮಂದಿ ಭಾರತೀಯರನ್ನು ಎರಡನೆ ಪ್ರಯಾಣದಲ್ಲಿ ತೂತುಕುಡಿ ವಿ.. ಚಿದಂಬರನಾರ್ ಬಂದರು ಮಂಡಳಿಗೆ ಕರೆತಂದಿತು. ರಾಜ್ಯವು ರೆಸ್ಟೋರೆಂಟ್ ಗಳಿಗೆ ಎಸ್..ಪಿ. ಗಳನ್ನು ನಿಗದಿ ಮಾಡಿದೆ. ಅವುಗಳಲ್ಲಿ 65 ವರ್ಷ ಮೇಲ್ಪಟ್ಟವರಿಗೆ , ಬೇರಾವುದೇ ವ್ಯಾಧಿ/ ರೋಗಗಳಿದ್ದವರಿಗೆ , ಗರ್ಭಿಣಿ ಮಹಿಳೆಯರಿಗೆ , ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅವಕಾಶ ಇಲ್ಲ. ಕೈಗಾರಿಕೆಗಳಿಗೆ ಅನುಮೋದನೆಯನ್ನು ಸರಳಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ತಮಿಳುನಾಡಿನಲ್ಲಿ ನಿನ್ನೆ 1458 ಹೊಸ ಪ್ರಕರಣಗಳು, ಮತ್ತು 19 ಸಾವುಗಳು ವರದಿಯಾಗಿವೆ. ಚೆನ್ನೈಯಲ್ಲಿಯೇ 1146 ಪ್ರಕರಣಗಳು ವರದಿಯಾಗಿವೆ. ಈಗ ಒಟ್ಟು ಪ್ರಕರಣಗಳ ಸಂಖ್ಯೆ 30152. ಆಕ್ಟಿವ್ ಪ್ರಕರಣಗಳ ಸಂಖ್ಯೆ 13503. ಸಾವುಗಳು : 251, ಚೆನ್ನೈಯಲ್ಲಿ ಆಕ್ಟಿವ್ ಪ್ರಕರಣಗಳು :10223.
  • ಕರ್ನಾಟಕ: ಆರೋಗ್ಯ ತಪಾಸಣೆ, ಕ್ವಾರಂಟೈನ್ ಮತು ಅಂತಾರಾಜ್ಯ ಪ್ರಯಾಣಿಕರಿಗೆ ಸಂಬಂಧಿಸಿ ಅನ್ ಲಾಕ್ 1 ಅವಧಿಯಲ್ಲಿ ಆರೋಗ್ಯ ಇಲಾಖೆಯು ಪರಿಷ್ಕೃತ ಮಾರ್ಗದರ್ಶಿಗಳನ್ನು ಬಿಡುಗಡೆ ಮಾಡಿದೆ. ಹೊಟೇಲುಗಳು, ರೆಸ್ಟೋರೆಂಟ್ ಗಳು, ಲಾಡ್ಜ್ ಗಳು, ಮತ್ತು ದೇವಾಲಯಗಳು ಗೃಹ ವ್ಯವಹಾರಗಳ ಇಲಾಖೆಯು ಬಿಡುಗಡೆ ಮಾಡಿದ ಮಾರ್ಗದರ್ಶಿಗಳ ಕಟ್ಟು ನಿಟ್ಟಿನ ಅನುಸರಣೆಯನ್ವಯ ತೆರೆಯಲಿವೆ. ನಿನ್ನೆ 378 ಹೊಸ ಪ್ರಕರಣಗಳು, 280 ಬಿಡುಗಡೆಗಳು, ಮತ್ತು ಎರಡು ಸಾವುಗಳು ವರದಿಯಾಗಿವೆ. ಹೊಸ 378 ಪ್ರಕರಣಗಳಲ್ಲಿ 333 ಪ್ರಕರಣಗಳು ಅಂತಾರಾಜ್ಯ ಪ್ರಕರಣಗಳು. ಇದುವರೆಗೆ ಒಟ್ಟು ಪಾಸಿಟಿವ್ ಪ್ರಕರಣಗಳು ;5213. ಆಕ್ಟಿವ್ ಪ್ರಕರಣಗಳು: 3184. ಸಾವುಗಳು -59, ಗುಣಮುಖರಾದವರು: 1968.
  • ಆಂಧ್ರ ಪ್ರದೇಶ: ಆಂಧ್ರ ಪ್ರದೇಶ ವಿಧಾನ ಸಭೆ ಮತ್ತು ಪರಿಷತ್ತಿನ ಬಜೆಟ್ ಅಧಿವೇಶನ ಜೂನ್ 16 ರಿಂದ ಆರಂಭಗೊಳ್ಳಲಿದೆ. ಮೇ 21 ರಂದು ಕಾರ್ಯಾಚರಣೆ ಪುನರಾರಂಭಿಸಿದ ಆರ್.ಟಿ.ಸಿ. ಇದುವರೆಗೆ 29.44 ಕೋ.ರೂ. ಆದಾಯ ಗಳಿಸಿದೆ. ರಾಜ್ಯವು ಅರಣ್ಯ ಸೇವಾ ಅಧಿಕಾರಿಗಳನ್ನು ದೊಡ್ಡ ಸಂಖ್ಯೆಯಲ್ಲಿ ವರ್ಗಾ ಮಾಡಿದೆ. ಕಳೆದ 24 ಗಂಟೆಗಳಲ್ಲಿ 17,695 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗಿದೆ , 130 ಹೊಸ ಪ್ರಕರಣಗಳು ವರದಿಯಾಗಿವೆ, 30 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ, ಇಬ್ಬರು ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳು: 3718. ಆಕ್ಟಿವ್ : 1290, ಗುಣಮುಖರಾದವರು: 2353, ಮೃತಪಟ್ಟವರು: 75. ಒಟ್ಟು ಪಾಸಿಟಿವ್ ಆಗಿರುವ ವಲಸೆಗಾರರ ಸಂಖ್ಯೆ: 810. ಇವರಲ್ಲಿ 508 ಮಂದಿ ಆಕ್ಟಿವ್ ಮತ್ತು 28 ಮಂದಿ ಕಳೆದ 24 ಗಂಟೆಗಳಲ್ಲ್ಲಿ ಬಿಡುಗಡೆಯಾಗಿದ್ದಾರೆ. ವಿದೇಶಗಳಿಂದ ಬಂದವರಲ್ಲಿ ವರದಿಯಾಗಿದ್ದ 131 ಪಾಸಿಟಿವ್ ಪ್ರಕರಣಗಳಲ್ಲಿ 126 ಪ್ರಕರಣಗಳು ಆಕ್ಟಿವ್ ಆಗಿವೆ ಮತ್ತು ಓರ್ವರು ಇಂದು ಬಿಡುಗಡೆಯಾಗಿದ್ದಾರೆ.
  • ತೆಲಂಗಾಣ: ಅಧಿಕಾರಿಗಳ ವೈಯಕ್ತಿಕ ಕಾರ್ಯದರ್ಶಿ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವ ಕಾರಣಕ್ಕೆ ಮುಖ್ಯಮಂತ್ರಿಗಳ ಕಚೇರಿಯನ್ನು ಸೀಲ್ ಮಾಡಲಾಗಿದೆ. ಹೋಂ ಗಾರ್ಡ್ , ಕಾನ್ಸ್ ಟೇಬಲ್ ಗಳು, ಸಹಿತ 6 ಮಂದಿ ಪೊಲೀಸರು ತೆಲಂಗಾಣದಲ್ಲಿ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ.ವೈರಸ್ ಸಂಪೂರ್ಣವಾಗಿ ತೊಡೆದು ಹಾಕಲ್ಪಡುವವರೆಗೆ ಶಾಲೆಗಳು ಭೌತಿಕವಾಗಿ ತೆರೆಯಲ್ಪಡುತ್ತವೆಯೋ ಎಂಬ ಬಗ್ಗೆ ಗೊಂದಲ ಮುಂದುವರೆದಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಪೋಷಕರಲ್ಲಿ ಭಯ ಮತ್ತು ಆತಂಕ ಮನೆ ಮಾಡಿದೆ. ಜೂನ್ 6 ರವರೆಗೆ ತೆಲಂಗಾಣದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3496. ಇಂದಿನವರೆಗೆ 448 ವಲಸೆಗಾರರು, ವಿದೇಶಗಳಿಂದ ಮರಳಿದವರು ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ.
  • ಮಹಾರಾಷ್ಟ್ರ: ಕಳೆದ 24 ಗಂಟೆಗಳಲ್ಲಿ 2,739 ಹೊಸ ಪ್ರಕರಣಗಳು ಮಹಾರಾಷ್ಟ್ರದಲ್ಲಿ ವರದಿಯಾಗಿವೆ. ಇದರೊಂದಿಗೆ ರಾಜ್ಯದ ಒಟ್ಟು ವೈರಸ್ ಬಾಧಿತರ ಸಂಖ್ಯೆ 82,698 ಕ್ಕೇರಿದೆ. ರಾಜ್ಯದಲ್ಲಿ ಇದಕ್ಕೆ ಬಲಿಯಾದವರ ಸಂಖ್ಯೆ 2,969 ಕ್ಕೇರಿದೆ. ಕಳೆದ 24 ಗಂಟೆಗಳಲ್ಲಿ 120 ಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ಇದುವರೆಗೆ 37,390 ಜನರು ಕೋವಿಡ್ -19 ರಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಹೇಳಿದೆ. ಕಳೆದ 24 ಗಂಟೆಗಳಲ್ಲಿ 2,234 ರೋಗಿಗಳು ಬಿಡುಗಡೆಯಾಗಿದ್ದಾರೆ. ಮುಂಬಯಿಯಲ್ಲಿಯ ಖಾಸಗಿ ಆಸ್ಪತ್ರೆಗಳ ವಿರುದ್ದದ ಅವ್ಯವಹಾರ ಮತ್ತು ದೂರುಗಳ ಪರಿಹಾರಕ್ಕೆ ಮಹಾರಾಷ್ಟ್ರ ಸರಕಾರವು ಐದು ಮಂದಿ ..ಎಸ್. ಅಧಿಕಾರಿಗಳನ್ನು ನೇಮಿಸಿದೆ, ಅವರನ್ನು ದೂರುಗಳಿದ್ದಲ್ಲಿ -ಮೈಲ್ ಮೂಲಕ ತಲುಪಬಹುದು. ಒಟ್ಟು 35 ಆಸ್ಪತ್ರೆಗಳು ಅಧಿಕಾರಿಗಳ ವ್ಯಾಪ್ತಿಯಲ್ಲಿವೆ.
  • ಗುಜರಾತ್: ಗುಜರಾತಿನಲ್ಲಿ 498 ಹೊಸ ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳು, 29 ಸಾವುಗಳು ವರದಿಯಾಗಿವೆ. ಅಹ್ಮದಾಬಾದಿನಲ್ಲಿ 26 ಮಂದಿ ಮೃತಪಟ್ಟಿದ್ದಾರೆ, ಒಟ್ಟು ಪ್ರಕರಣಗಳ ಸಂಖ್ಯೆ 19,617 ಕ್ಕೇರಿದ್ದು, ಮೃತರ ಸಂಖ್ಯೆ 1,219 ಕ್ಕೇರಿದೆ. ಆಸ್ಪತ್ರೆಗಳಿಂದ 313 ರೋಗಿಗಳು ಬಿಡುಗಡೆಯಾಗುವುದರೊಂದಿಗೆ ರೋಗದಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 13,324 ಕ್ಕೇರಿದೆ. ರಾಜ್ಯದಲ್ಲಿ ಇದುವರೆಗೆ 2,45,606 ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ.
  • ರಾಜಸ್ಥಾನ: ಕಳೆದ 24 ಗಂಟೆಗಳಲ್ಲಿ ರಾಜಸ್ಥಾನದಲ್ಲಿ 247 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 10,331 ಕ್ಕೇರಿದೆ. ರಾಜ್ಯದಲ್ಲಿ ಕೋವಿಡ್ -19 ಸೋಂಕಿನಿಂದಾಗಿ 231 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 2599 ಆಕ್ಟಿವ್ ಪ್ರಕರಣಗಳು ಇದ್ದು, ಸೋಂಕಿನಿಂದ 7,501 ಜನರು ಗುಣಮುಖರಾಗಿದ್ದಾರೆ.
  • ಮಧ್ಯಪ್ರದೇಶ: ಕಳೆದ 24 ಗಂಟೆಗಳಲ್ಲಿ 232 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ , ಮಧ್ಯಪ್ರದೇಶದಲ್ಲಿ ಒಟ್ಟು ಕೋವಿಡ್ -19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಶನಿವಾರ 9,000 ಗಡಿ ದಾಟಿತು. ಒಟ್ಟು ಪ್ರಕರಣಗಳ ಸಂಖ್ಯೆ 9228 ಆಗಿದೆ. ಭೋಪಾಲದಲ್ಲಿ 51 ಪ್ರಕರಣಗಳು, ಇಂದೋರಿನಲ್ಲಿ 35 ಮತ್ತು ಶಾಜಪುರದಲ್ಲಿ 20, ನೀಮುಚ್ ನಲ್ಲಿ 18, ಬುರ್ಹಾನ್ ಪುರದಲ್ಲಿ 15, ಭಿಂಡ್ ನಲ್ಲಿ 14, ಉಜ್ಜೈನಿನಲ್ಲಿ 12 ಮತ್ತು ಗ್ವಾಲಿಯರಿನಲ್ಲಿ 10 ಪ್ರಕರಣಗಳು ವರದಿಯಾಗಿವೆ.
  • ಛತ್ತೀಸ್ ಗಢ: ಕಳೆದ 24 ಗಂಟೆಗಳಲ್ಲಿ ಛತ್ತೀಸ್ ಗಢದಲ್ಲಿ 44 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಮಾಹಿತಿ ಹೇಳುತ್ತದೆ. ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 923 ಕ್ಕೇರಿದೆ. ಮೃತಪಟ್ಟವರ ಸಂಖ್ಯೆ 4 ಕ್ಕೇರಿದೆ.
  • ಗೋವಾ: ಗೋವಾದಲ್ಲಿ 71 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 267 ಕ್ಕೇರಿದೆ. ಇದರಲ್ಲಿ 202 ಆಕ್ಟಿವ್ ಪ್ರಕರಣಗಳು, 65 ಮಂದಿ ರೋಗದಿಂದ ಚೇತರಿಸಿಕೊಂಡಿದ್ದಾರೆ.

***



(Release ID: 1630176) Visitor Counter : 241