ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ರುವಾಂಡಾ ಅಧ್ಯಕ್ಷ ಶ್ರೀ ಪಾಲ್ ಕಗಾಮೆ ನಡುವೆ ದೂರವಾಣಿ ಮಾತುಕತೆ
Posted On:
05 JUN 2020 7:05PM by PIB Bengaluru
ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ರುವಾಂಡಾ ಅಧ್ಯಕ್ಷ ಶ್ರೀ ಪಾಲ್ ಕಗಾಮೆ ನಡುವೆ ದೂರವಾಣಿ ಮಾತುಕತೆ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ರುವಾಂಡಾದ ಅಧ್ಯಕ್ಷ ಶ್ರೀ ಪಾಲ್ ಕಗಾಮೆ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.
2018 ರಲ್ಲಿ ರುವಾಂಡಾಗೆ ತಾವು ನೀಡಿದ ಭೇಟಿಯ ನಂತರ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ತಮ್ಮ 2018 ರ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿಯವರು 200 ಭಾರತೀಯ ಹಸುಗಳನ್ನು ಉಡುಗೊರೆಯಾಗಿ ನೀಡಿದ್ದನ್ನು ರುವಾಂಡಾ ಅಧ್ಯಕ್ಷರು ಪ್ರೀತಿಯಿಂದ ಸ್ಮರಿಸಿಕೊಂಡರು. ಈ ಹಸುಗಳು ರುವಾಂಡದ ಮಕ್ಕಳಿಗೆ ಹಾಲಿನ ಲಭ್ಯತೆಯನ್ನು ಸುಧಾರಿಸುವಲ್ಲಿ ನೆರವಾಗಿವೆ ಮತ್ತು ರೈತರ ಆದಾಯವನ್ನೂ ಹೆಚ್ಚಿಸಿವೆ ಎಂದು ಅವರು ಹೇಳಿದರು.
ಕೋವಿಡ್-19 ಸಾಂಕ್ರಾಮಿಕದಿಂದ ಆರೋಗ್ಯ ವ್ಯವಸ್ಥೆಗಳು ಮತ್ತು ಆರ್ಥಿಕತೆಗಳಿಗೆ ಎದುರಾಗಿರುವ ಸವಾಲುಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಬಿಕ್ಕಟ್ಟನ್ನು ನಿರ್ವಹಿಸಲು ಮತ್ತು ನಾಗರಿಕರ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಆಯಾ ದೇಶದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಅವರು ಮಾಹಿತಿಯನ್ನು ಹಂಚಿಕೊಂಡರು. ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಪರಸ್ಪರ ದೇಶಗಳ ವಲಸಿಗ ನಾಗರಿಕರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ನಾಯಕರು ಒಪ್ಪಿದರು.
ಕೊರೊನಾವೈರಸ್ ವಿರುದ್ಧ ಹೋರಾಡಲು ರುವಾಂಡಾಕ್ಕೆ ವೈದ್ಯಕೀಯ ಸಹಾಯವೂ ಸೇರಿದಂತೆ ಭಾರತದ ಅಚಲ ಬೆಂಬಲದ ಬಗ್ಗೆ ರುವಾಂಡಾದ ಅಧ್ಯಕ್ಷರಿಗೆ ಪ್ರಧಾನಿ ಭರವಸೆ ನೀಡಿದರು. ಈ ಸವಾಲನ್ನು ಎದುರಿಸುವಲ್ಲಿ ಅಧ್ಯಕ್ಷ ಕಗಾಮೆಯವರ ನಾಯಕತ್ವ ಹಾಗೂ ರುವಾಂಡಾದ ಜನರ ದೃಢ ಸಂಕಲ್ಪವನ್ನು ಪ್ರಧಾನಿ ಶ್ಲಾಘಿಸಿದರು.
ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ರುವಾಂಡಾದ ಜನರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಧಾನಿಯವರು ಹಾರೈಸಿದರು.
***
(Release ID: 1629983)
Visitor Counter : 267
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam