PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 01 JUN 2020 6:23PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಅಪ್ಡೇಟ್ ಗುಣಮುಖ ದರ 48.19 %ಕ್ಕೆ ಏರಿಕೆ

ಕಳೆದ 24 ಗಂಟೆಗಳಲ್ಲಿ 4,835 ಕೋವಿಡ್ -19 ರೋಗಿಗಳು ಚೇತರಿಸಿಕೊಂಡಿದ್ದಾರೆ. ಮೂಲಕ ಇದುವರೆಗೆ 91,818 ರೋಗಿಗಳು ಕೋವಿಡ್ -19 ರಿಂದ ಚೇತರಿಸಿಕೊಂಡಂತಾಗಿದೆ. ದೇಶದಲ್ಲಿ ಚೇತರಿಕೆ ದರವು ಪ್ರಗತಿಯಲ್ಲಿದ್ದು, ಅದೀಗ 48.19% ಗೆ ತಲುಪಿದೆ. ಮೇ 18 ರಂದು ಚೇತರಿಕೆ ದರವು 38.29% ನಷ್ಟಿತ್ತು ಮತ್ತು ಮೇ 3 ರಂದು ಇದು 26.59 % ನಷ್ಟಿತ್ತು. ಏಪ್ರಿಲ್ 15 ರಂದು ಇದು 11.42% ಆಗಿತ್ತು.

ಪ್ರಸ್ತುತ ದೇಶದಲ್ಲಿ 93,322 ಸಕ್ರಿಯ (ಆಕ್ಟಿವ್) ಪ್ರಕರಣಗಳಿವೆ ಮತ್ತು ಅವು ವೈದ್ಯಕೀಯ ನಿಗಾದಲ್ಲಿವೆ. ಮರಣ ದರ 2.83 % . ಮೇ 18 ರಂದು ಇದು 3.15 % ಇತ್ತು. ಮೇ 3 ರಲ್ಲಿ 3.25 % ಆಗಿತ್ತು. ಏಪ್ರಿಲ್ 15 ರಂದು ಇದು 3.30 % ಆಗಿತ್ತು. ದೇಶದಲ್ಲಿ ಪ್ರಕರಣಗಳಲ್ಲಿ ಮರಣದ ದರ ಸತತ ಇಳಿಮುಖವಾಗಿರುವುದನ್ನು ಇದರಲ್ಲಿ ಕಾಣಬಹುದು. ತುಲನಾತ್ಮಕವಾಗಿ ಮರಣದ ದರವು ಕಡಿಮೆಯಾಗಲು ಸತತ ಕಣ್ಗಾವಲು, ಸಕಾಲದಲ್ಲಿ ಪ್ರಕರಣಗಳ ಗುರುತಿಸುವಿಕೆ ಮತ್ತು ಪ್ರಕರಣಗಳ ಕ್ಲಿನಿಕಲ್ ನಿರ್ವಹಣೆ ಕಾರಣವಾಗಿದೆ.  

ದೇಶದಲ್ಲಿ ಪರೀಕ್ಷಾ ಸಾಮರ್ಥ್ಯವನ್ನು 472 ಸರಕಾರಿ ಮತ್ತು 204 ಖಾಸಗಿ ಪ್ರಯೋಗಾಲಯಗಳ ಮೂಲಕ (ಒಟ್ಟು 676 ಪ್ರಯೋಗಾಲಯಗಳು) ಹೆಚ್ಚಿಸಲಾಗಿದೆ. ಒಟ್ಟು 38,37,207 ಮಾದರಿಗಳನ್ನು ಇದುವರೆಗೆ ಕೋವಿಡ್ -19 ಕ್ಕಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ, ಇದರಲ್ಲಿ 1,00,180 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ.

https://static.pib.gov.in/WriteReadData/userfiles/image/image004OVRK.jpg

ವಿವರಗಳಿಗೆ: https://pib.gov.in/PressReleseDetail.aspx?PRID=1628057

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 25 ನೇ ಸ್ಥಾಪನಾ ದಿನದಂದು ಪ್ರಧಾನ ಮಂತ್ರಿ ಭಾಷಣ: ಕೋವಿಡ್ -19 ವಿರುದ್ದದ ಹೋರಾಟದಲ್ಲಿ ಆರೋಗ್ಯ ರಕ್ಷಣಾ ಕಾರ್ಯಕರ್ತರು ಮತ್ತು ವೈದ್ಯರ ಪಾತ್ರ ಅಜೇಯ ಎಂದು ಶ್ಲಾಘನೆ

ಎರಡು ಜಾಗತಿಕ ಯುದ್ದಗಳ ಬಳಿಕ ಅತ್ಯಂತ ದೊಡ್ಡ ಬಿಕ್ಕಟ್ಟನ್ನು ವಿಶ್ವವಿಂದು ಎದುರಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ. ಜಾಗತಿಕ ಯುದ್ದಗಳ ಪೂರ್ವದಿಂದ ಯುದ್ದಾನಂತರಕ್ಕೆ ಜಗತ್ತು ಬದಲಾದಂತೆ, ಅದೇ ರೀತಿಯಲ್ಲಿ ಕೋವಿಡ್ ಪೂರ್ವ ಮತ್ತು ಕೋವಿಡ್ ನಂತರ ಜಗತ್ತು ಬದಲಾಗಿರುತ್ತದೆ ಎಂದರು. ಕೋವಿಡ್ -19 ವಿರುದ್ದದ ಭಾರತದ ಧೈರ್ಯದ ಹೋರಾಟದಲ್ಲಿ ವೈದ್ಯಕೀಯ ಸಮುದಾಯದ ಮತ್ತು ನಮ್ಮ ಕೊರೊನಾ ವಾರಿಯರ್ಸ್ ಗಳ ಕಠಿಣ ದುಡಿಮೆ ಅಡಗಿದೆ ಎಂದರು. ಅವರು ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರನ್ನು ಸೈನಿಕರು ಎಂದು ಬಣ್ನಿಸಿದರಲ್ಲದೆ ಅವರನ್ನು ಸಮವಸ್ತ್ರ ಇಲ್ಲದೆ ಸೈನಿಕರು ಎಂದೂ ಹೇಳಿದರು.

ವೈರಸ್ ಕಣ್ಣಿಗೆ ಕಾಣದ ವೈರಿ, ಆದರೆ ನಮ್ಮ ಕೊರೊನಾ ವಾರಿಯರ್ಸ್ ಗಳು ಅಜೇಯರು ಮತ್ತು ಕಣ್ಣಿಗೆ ಕಾಣದ ಹಾಗು ಅಜೇಯರ ನಡುವಣ ಯುದ್ದದಲ್ಲಿ ನಮ ವೈದ್ಯಕೀಯ ಕಾರ್ಯಕರ್ತರು ಖಚಿತವಾಗಿ ಜಯ ಸಾಧಿಸುತ್ತಾರೆ ಎಂದು ಪ್ರಧಾನ ಮಂತ್ರಿ ಅವರು ಹೇಳಿದರು. ಮುಂಚೂಣಿ ಕಾರ್ಯಕರ್ತರ ವಿರುದ್ದ ಸಮೂಹ ಮಾನಸಿಕತೆಯ ಹಿಂಸಾ ಕೃತ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಇವುಗಳನ್ನು ನಿಯಂತ್ರಿಸಲು ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದೂ ಹೇಳಿದರು.ಮುಂಚೂಣಿಯಲ್ಲಿರುವವರಿಗಾಗಿ ಸರಕಾರವು 50  ಲಕ್ಷ ರೂಪಾಯಿಗಳ ವಿಮಾ ಸುರಕ್ಷೆಯನ್ನು ಒದಗಿಸಿದೆ ಎಂದು ಹೇಳಿದ ಅವರು ಆರೋಗ್ಯ ರಕ್ಷಣೆ ವಿಷಯದಲ್ಲಿ ಮುಂದುವರೆದ ರಾಷ್ಟ್ರಗಳು ಹೆಚ್ಚು ಕಾಳಜಿ ವಹಿಸುತ್ತಿವೆ  ಮತು ಸರಕಾರ ಕೂಡಾ ಆರೋಗ್ಯ ರಕ್ಷಣೆ ವಿಷಯದಲ್ಲಿ ಹಲವು ಉಪಕ್ರಮಗಳನ್ನು ಕೈಗೊಂಡಿದೆ . ಕಳೆದ 6 ವರ್ಷಗಳಲ್ಲಿ ವೈದ್ಯ ಶಿಕ್ಷಣದಲ್ಲಿಯೂ ಬದಲಾವಣೆಗಳಾಗಿ ಎಂದ ಪ್ರಧಾನ ಮಂತ್ರಿಗಳು ಆರೋಗ್ಯ ರಕ್ಷಣೆ ಸುಧಾರಣೆ , ಅದರ ಮೂಲಸೌಕರ್ಯ ಮತ್ತು ಎಲ್ಲರಿಗೂ ಅದರ ಲಭ್ಯತೆಯನ್ನು ಒಳಗೊಂಡ ವ್ಯೂಹವನ್ನು ಪ್ರತಿಪಾದಿಸಿದರು

ವಿವರಗಳಿಗೆ: https://pib.gov.in/PressReleseDetail.aspx?PRID=1628270

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಾದ್ 25 ನೇ ಸ್ಥಾಪನಾ ದಿನದಂದು ಪ್ರಧಾನ ಮಂತ್ರಿ ಅವರು ಮಾಡಿದ ಭಾಷಣದ ಪಠ್ಯ

ವಿವರಗಳಿಗೆ: https://pib.gov.in/PressReleseDetail.aspx?PRID=1628263

ಎರಡನೆ ವರ್ಷದ ಅಧಿಕಾರಾವಧಿಯ ಮೊದಲ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನ ಮಂತ್ರಿ; ಎಂ.ಎಸ್.ಎಂ.. ವಲಯ, ಬೀದಿ ವ್ಯಾಪಾರಿಗಳು ಮತ್ತು ರೈತರಿಗಾಗಿ ಚಾರಿತ್ರಿಕ ನಿರ್ಧಾರಗಳು

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಂಪುಟ ಸಭೆ 2020 ಜೂನ್ 1 ಸೋಮವಾರದಂದು ನಡೆಯಿತು. ಕೇಂದ್ರ ಸರಕಾರವು ಅಧಿಕಾರದಲ್ಲಿ ಎರಡನೆ ವರ್ಷಕ್ಕೆ ಪದಾರ್ಪಣೆ ಮಾಡಿದ ನಂತರದ ಮೊದಲ ಸಂಪುಟ ಸಭೆ ಇದಾಗಿದೆ. ಸಭೆಯಲ್ಲಿ ಭಾರತದ ಪರಿಶ್ರಮಿ ರೈತರ ಬದುಕಿನಲ್ಲಿ , ಎಂ.ಎಸ್.ಎಂ.. ವಲಯದಲ್ಲಿ  ಮತ್ತು ಬೀದಿ ವ್ಯಾಪಾರಿಗಳ ಜೀವನದಲ್ಲಿ ಪರಿವರ್ತನಾಶೀಲ ಪರಿಣಾಮ ಬೀರುವ ಚಾರಿತ್ರಿಕ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಅವುಗಳಲ್ಲಿ 14 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಎಂ.ಎಸ್.ಎಂ.. ವ್ಯಾಖ್ಯೆಯ ಪರಿಷ್ಕರಣೆಮಧ್ಯಮ ಘಟಕಗಳ ವ್ಯಾಖ್ಯೆಯನ್ನು 50 ಕೋ.ರೂ.ಗಳ ಹೂಡಿಕೆ  ಮತ್ತು 250 ಕೋ.ರೂ . ವಹಿವಾಟಿನವರೆಗೆ  ಇನ್ನಷ್ಟು ವಿಸ್ತರಣೆ, ಬೀದಿ ವ್ಯಾಪಾರಿಗಳಿಗೆ ಕೈಗೆಟಕುವ ದರದಲ್ಲಿ ಸಾಲ ಒದಗಿಸಲು ವಿಶೇಷ ಕಿರು ಸಾಲ ಯೋಜನೆ ಪ್ರಧಾನ ಮಂತ್ರಿ ಸ್ವ ನಿಧಿಆರಂಭ, ಉತ್ಪಾದನಾ ವೆಚ್ಚಕ್ಕಿಂತ 1.5 ಪಟ್ಟು ಹೆಚ್ಚು ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವ ಸರಕಾರದ ಭರವಸೆ  ಈಡೇರಿಕೆ , ಕೃಷಿಗಾಗಿ ಮತ್ತು ಪೂರಕ ಚಟುವಟಿಕೆಗಳಿಗಾಗಿ ಅಲ್ಪಾವಧಿ ಸಾಲ ಮರುಪಾವತಿ ದಿನಾಂಕಗಳ ವಿಸ್ತರಣೆ, ರೈತರಿಗೆ ಬಡ್ಡಿ ರಿಯಾಯತಿ ಮತ್ತು ಸಕಾಲದಲ್ಲಿ ಮರುಪಾವತಿ ಪ್ರೋತ್ಸಾಹಧನ ಲಭ್ಯತೆ ಒಳಗೊಂಡಿವೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628329

ಕೃಷಿ ಮತ್ತು ಪೂರಕ ಕಾರ್ಯಚಟುವಟಿಕೆಗಳಿಗಾಗಿ ಬ್ಯಾಂಕುಗಳಿಂದ ಪಡೆದ ಅಲ್ಪಾವಧಿ ಸಾಲದ ಮರುಪಾವತಿ ದಿನಾಂಕಗಳ ವಿಸ್ತರಣೆಗೆ ಸಂಪುಟ ಅನುಮೋದನೆ. ಬ್ಯಾಂಕುಗಳಿಂದ ಪಡೆದ ಸಾಲ ಮರುಪಾವತಿ ಅವಧಿ 2020 ಮಾರ್ಚ್ 1ಮತ್ತು 2020 ಆಗಸ್ಟ್ 31 ನಡುವೆ ಇದ್ದರೆ ಸವಲತ್ತು ಅನ್ವಯ

ಕೇಂದ್ರ ಸಂಪುಟವು ಕೃಷಿ ವಲಯಕ್ಕೆ ಮತ್ತು ಪೂರಕ ಚಟುವಟಿಕೆಗಳಿಗೆ ಬ್ಯಾಂಕುಗಳಿಂದ ನೀಡಲಾದ 3 ಲಕ್ಷ ರೂಪಾಯಿಗಳವರೆಗಿನ ಅಲ್ಪಾವಧಿ ಸಾಲದ ಮರುಪಾವತಿ ಅವಧಿಯನ್ನು 31.08.2020 ರವರೆಗೆ ವಿಸ್ತರಿಸಲು ಕೇಂದ್ರ ಸಂಪುಟವು ತನ್ನ ಅನುಮೋದನೆ ನೀಡಿದೆ. 2020 ಮಾರ್ಚ್  1 ರಿಂದ 2020 ಆಗಸ್ಟ್ 31 ನಡುವೆ ಅವಧಿ ಮುಕ್ತಾಯಗೊಳ್ಳುವ ಸಾಲಗಳಿಗೆ ಬ್ಯಾಂಕುಗಳಿಗೆ 2 % ಬಡ್ಡಿ ರಿಯಾಯತಿ (.ಎಸ್.) ಪಾವತಿ ಮತ್ತು ಸಕಾಲದಲ್ಲಿ ಮರುಪಾವತಿಗಾಗಿ ರೈತರಿಗೆ ಲಭಿಸುವ 3% ಪ್ರೋತ್ಸಾಹ ಧನ (ಪಿ.ಆರ್..) ಸವಲತ್ತುಗಳು ಮುಂದುವರೆಯಲಿವೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628341

ಎಂ.ಎಸ್.ಎಂ.. ವ್ಯಾಖ್ಯೆಯ ಮೇಲ್ಮುಖ ಪರಿಷ್ಕರಣೆ ಮತ್ತು ಎಂ.ಎಸ್.ಎಂ.. ಗಳಿಗಾಗಿರುವ ಇತರ ಎರಡು ಪ್ಯಾಕೇಜುಗಳಾದ (a) ಒತ್ತಡದಲ್ಲಿರುವ ಎಂ.ಎಸ್.ಎಂ.. ಗಳಿಗೆ 20,000 ಕೋ.ರೂ.ಪ್ಯಾಕೇಜು, ಮತ್ತು (b) ನಿಧಿಗಳ ನಿಧಿಯ ಮೂಲಕ 50,000 ಕೋ.ರೂ.ಗಳ ಈಕ್ವಿಟಿ ಸೇರ್ಪಡೆಗಾಗಿ ಅನುಷ್ಟಾನಿಸಬೇಕಾದ ಕ್ರಮಗಳು ಮತ್ತು ಮಾರ್ಗಸೂಚಿಗಳಿಗೆ ಸಂಪುಟದ ಒಪ್ಪಿಗೆ

ದೇಶದಲ್ಲಿ ಎಂ.ಎಸ್.ಎಂ.. ಗಳಿಗೆ ಶಕ್ತಿ ನೀಡುವ ಭಾರತ ಸರಕಾರದ ಆದ್ಯತೆಯ  ಅನ್ವಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ (ಸಿ.ಸಿ...)  ವಿಶೇಷ ಸಭೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಆಯೋಜಿಸಲಾಗಿದ್ದು, ಅದು ಎಂ.ಎಸ್.ಎಂ.. ವ್ಯಾಖ್ಯೆಯ ಮೇಲ್ಮುಖ ಪರಿಷ್ಖರಣೆ ಮತ್ತು ಆತ್ಮನಿರ್ಭರ ಭಾರತ ಪ್ಯಾಕೇಜಿನಡಿಯಲ್ಲಿ ಘೋಷಿಸಲಾದ ಇತರ ಎರಡು ಪ್ಯಾಕೇಜುಗಳ ಸಮರ್ಪಕ ಅನುಷ್ಟಾನಕ್ಕಾಗಿ ಮಾರ್ಗಸೂಚಿಗಳನ್ನು ಅನುಮೋದಿಸಿತು. ಇದು ಎಂ.ಎಸ್.ಎಂ.. ವಲಯವನ್ನು ಆತ್ಮ ನಿರ್ಭರ ಭಾರತ್ ಪ್ಯಾಕೇಜ್ ಮೂಲಕ ಬಲಿಷ್ಟಗೊಳಿಸಲು ಹಾದಿ ಮಾಡಿಕೊಡಲಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628344

ಖಾರೀಫ್ ಬೆಳೆಗಳ 2020 -21   ಮಾರುಕಟ್ಟೆ ಋತುವಿಗೆ  ಕನಿಷ್ಟ ಬೆಂಬಲ ಬೆಲೆ (ಎಂ.ಎಸ್.ಪಿ.) ನಿಗದಿ.

ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು (ಸಿ.ಸಿ...) ಎಲ್ಲಾ ಖಾರೀಫ್ ಬೆಳೆಗಳ 2020-21 ಮಾರುಕಟ್ಟೆ ಅವಧಿಯ ಕನಿಷ್ಟ ಬೆಂಬಲ ಬೆಲೆಗಳನ್ನು (ಎಂ.ಎಸ್.ಪಿ.)  ಹೆಚ್ಚಿಸುವುದಕ್ಕೆ ಅನುಮೋದನೆ ನೀಡಿದೆ. ಸರಕಾರವು 2020-21 ಅವಧಿಯ ಖಾರೀಫ್ ಋತುವಿನ ಎಂ.ಎಸ್.ಪಿ.ಯನ್ನು ಹೆಚ್ಚಿಸಿದೆ .  ಮತ್ತು ಅದು ಬೆಳೆಗಾರರಿಗೆ ಗೌರವಯುತ ದರ ದೊರೆಯುವಂತೆ ಖಾತ್ರಿಪಡಿಸಿದೆ. ಎಂ.ಎಸ್.ಪಿ.ಯಲ್ಲಿ ಗರಿಷ್ಟ ಹೆಚ್ಚಳ (ಕ್ವಿಂಟಾಲೊಂದಕ್ಕೆ 755 ರೂಪಾಯಿ) ವನ್ನು   ಗುರೆಳ್ಳುವಿಗೆ ನೀಡಲಾಗಿದ್ದರೆ ಬಳಿಕ ಎಳ್ಳಿಗೆ  (ಕ್ವಿಂಟಾಲೊಂದಕ್ಕೆ 370 ರೂ.) ಉದ್ದು (ಕ್ವಿಂಟಾಲೊಂದಕ್ಕೆ 300 ರೂ.) ಮತ್ತು ಹತ್ತಿ (ಕ್ವಿಂಟಾಲೊಂದಕ್ಕೆ 275 ರೂ. ) ಹೆಚ್ಚಳವನ್ನು ಪ್ರಸ್ತಾಪಿಸಲಾಗಿದೆ. ವಿಭಿನ್ನ ಪ್ರತಿಫಲಬೆಳೆ ಪದ್ದತಿಯ ವೈವಿಧ್ಯೀಕರಣವನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628348

ಪ್ರಧಾನ ಮಂತ್ರಿ ಅವರಿಂದ ಚಾಂಪಿಯನ್ಸ್ ಆರಂಭ: ಎಂ.ಎಸ್.ಎಂ.. ಗಳನ್ನು ಸಶಕ್ತೀಕರಣಗೊಳಿಸುವ ತಾಂತ್ರಿಕ ವೇದಿಕೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ಪಾದನೆ ಹೆಚ್ಚಿಸುವ ಮತ್ತು ರಾಷ್ಟ್ರೀಯ  ಬಲವರ್ಧನೆಯ ಆಧುನಿಕ ಪ್ರಕ್ರಿಯೆಯ ಚಾಂಪಿಯನ್ ( ಕ್ರಿಯೇಶನ್ ಆಂಡ್ ಹಾರ್ಮೋನಿಯಸ್ ಅಪ್ಲಿಕೇಶನ ಆಫ್ ಮಾಡರ್ನ್ ಪ್ರಾಸೆಸ್ ಫಾರ್ ಇನ್ಕ್ರೀಸಿಂಗ್ ಔಟ್ ಪುಟ್ ಆಂಡ್ ನ್ಯಾಶನಲ್ ಸ್ಟ್ರೆಂತ್ ) ತಾಂತ್ರಿಕ ವೇದಿಕೆಯನ್ನು ಕಾರ್ಯಾರಂಭಗೊಳಿಸಿದರು. ಪೋರ್ಟಲ್ ಮೂಲತಹ ಸಣ್ಣ ಘಟಕಗಳನ್ನು ಅವುಗಳ ಕುಂದು ಕೊರತೆಯನ್ನು ನಿವಾರಿಸುವ ಮೂಲಕ , ಪ್ರೋತ್ಸಾಹಿಸುವ ಮೂಲಕ , ಬೆಂಬಲಿಸುವ ಮೂಲಕ , ಸಹಾಯ ಮಾಡುವ ಮತ್ತು ಕೈ ಹಿಡಿದು ಮುನ್ನಡೆಸುವ ಮೂಲಕ ದೊಡ್ಡದಾಗಿ ಬೆಳೆಸುವ ಇರಾದೆಯನ್ನು ಹೊಂದಿದೆ. ಇದು  ನಿಜವಾಗಿಯೂ ಎಂ.ಎಸ್.ಎಂ.. ಸಚಿವಾಲಯದ ಒಂದೇ ನೆಲೆಯಲ್ಲಿ ಪರಿಹಾರಗಳನ್ನು ಒದಗಿಸುವ ನೈಜ ವ್ಯವಸ್ಥೆ. .ಸಿ.ಟಿ. ಆಧಾರಿತ ವ್ಯವಸ್ಥೆಯು  ಈಗಿನ ಕಠಿಣ ಸಂದರ್ಭಗಳಲ್ಲಿ ಎಂ.ಎಸ್.ಎಂ..ಗಳಿಗೆ  ಸಹಾಯ ಮಾಡಲು ಮತ್ತು ಅವುಗಳನ್ನು ರಾಷ್ಟ್ರೀಯ , ಅಂತಾರಾಷ್ಟ್ರೀಯ ಚಾಂಪಿಯನ್ ಗಳಾಗುವಂತೆ ಕೈಹಿಡಿದು ಮುನ್ನಡೆಸಲು ನೆರವೀಯುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628317

ಮಿಷನ್ ಸಾಗರ: ಕೊಮೊರೋಸ್ ಮೊರೋನಿ ಬಂದರಿನಲ್ಲಿ .ಎನ್.ಎಸ್. ಕೇಸರಿ 

ಮಿಷನ್ ಸಾಗರದ ಭಾಗವಾಗಿ ಭಾರತೀಯ ನೌಕಾ ಹಡಗು ಕೇಸರಿ 2020 ಮೇ 31 ರಂದು ಕೊಮೊರೋಸ್ ಮೊರೊನಿ ಬಂದರನ್ನು ಪ್ರವೇಶಿಸಿದೆ. ಭಾರತ ಸರಕಾರವು ಕಠಿಣ ಸಂದರ್ಭದಲ್ಲಿ ಕೋವಿಡ್ -19 ನಿಭಾವಣೆಗಾಗಿ ವಿದೇಶಿ ಮಿತ್ರ ರಾಷ್ಟ್ರಗಳಿಗೆ ನೆರವನ್ನು ಒಅದಗಿಸುತ್ತಿದೆ. ಮತ್ತು ಆದರಂಗವಾಗಿ .ಎನ್.ಎಸ್. ಕೇಸರಿಯು ಕೋವಿಡ್ ಸಂಬಂಧಿ ಅವಶ್ಯಕ ವೈದ್ಯಕೀಯ ಸಾಮಗ್ರಿಗಳನ್ನು ಕೊಮೊರೋಸ್ ನಾಗರಿಕರಿಗೆ ಪೂರೈಕೆ ಮಾಡಲು ಕೊಂಡೊಯ್ದಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628250

2020 ಜೂನ್ 1 ರಿಂದ ದೇಶದ ವಿವಿಧೆಡೆ 200 ವಿಶೇಷ ರೈಲುಗಳ ಓಡಾಟ ಆರಂಭ

ಭಾರತೀಯ ರೈಲ್ವೇಯಲ್ಲಿ 2020 ಜೂನ್ 1 ರಿಂದ ಜಾರಿಗೆ ಬರುವಂತೆ ರೈಲು ಸೇವೆಗಳನ್ನು ಇನ್ನಷ್ಟು ಆಂಶಿಕವಾಗಿ ಮರುಸ್ಥಾಪನೆ ಮಾಡಲಾಗುತ್ತಿದೆ. ಜೂನ್ 1 ರಂದು 200 ರೈಲುಗಳು  ಆರಂಭಗೊಳ್ಳಲಿರುವ ಮೊದಲ ದಿನದಂದು 1.45 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣ ಬೆಳೆಸಲಿದ್ದಾರೆ. ಭಾರತೀಯ ರೈಲ್ವೇಯು 200 ಪ್ರಯಾಣಿಕ ರೈಲುಗಳ ಓಡಾಟವನ್ನು ಆರಂಭಿಸಲಿದ್ದು, ರೈಲುಗಳು ಸಾಮಾನ್ಯ ನಿಗದಿತ ರೀತಿಯಲ್ಲಿರುತ್ತವೆ. ಇವು ಪೂರ್ಣವಾಗಿ ಮುಂಗಡ ಕಾಯ್ದಿರಿಸುವ ರೈಲುಗಳಾಗಿದ್ದು ಹವಾನಿಯಂತ್ರಿತ , ಹವಾನಿಯಂತ್ರಿತವಲ್ಲದ ಬೋಗಿಗಳನ್ನು ಹೊಂದಿರುತ್ತವೆ ಮತ್ತು ಸಾಮಾನ್ಯ (ಜಿ.ಎಸ್.) ಬೋಗಿಗಳನ್ನು ಕುಳಿತುಕೊಳ್ಳುವ ವ್ಯವಸ್ಥೆಗನುಗುಣವಾಗಿ ಮುಂಗಡ ಕಾಯ್ದಿರಿಸಲಾಗುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628161

ಪಿ.ಎಂ.ಬಿ.ಜೆ.ಕೆ. ಗಳಲ್ಲಿ 2020-21 ವರ್ಷದ ಮೊದಲ ಎರಡು ತಿಂಗಳಲ್ಲಿ 100 ಕೋ.ರೂ.ಗಳಿಗೂ ಅಧಿಕ ವಹಿವಾಟು, 2019-20 ರಲ್ಲಿ ಇದೇ ಅವಧಿಯಲ್ಲಿ ಪ್ರಮಾಣ 40 ಕೋ.ರೂ.ಗಳಷ್ಟಾಗಿತ್ತು

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಗಳು -ಪಿ.ಎಂ.ಬಿ.ಜೆ.ಕೆ. ಗಳು 2020-21 ಮೊದಲ ಎರಡು  ತಿಂಗಳಲ್ಲಿ 100.40  ಕೋ.ರೂ ಗಳ ಮಾರಾಟವನ್ನು ನಡೆಸಿವೆ, 2019-20 ಇದೇ ಅವಧಿಯಲ್ಲಿ ವಹಿವಾಟು 44.60 ಕೋ.ರೂ. ಆಗಿತ್ತು. ಇದಕ್ಕೆ ಹೋಲಿಸಿದಾಗ ವರ್ಷದ ವಹಿವಾಟು ಗಮನಾರ್ಹವಾದುದಾಗಿದೆ. ಕೇಂದ್ರಗಳು 2020 ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ  ತಿಂಗಳಲ್ಲಿ ಸುಮಾರು 144 ಕೋ.ರೂ. ಮೌಲ್ಯದ ಕೈಗೆಟಕುವ ದರದ ಮತ್ತು ಗುಣಮಟ್ಟದ ಔಷಧಿಗಳನ್ನು ಮಾರಾಟ ಮಾಡಿದ್ದು, ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಇಡೀ ದೇಶವನ್ನು ತಲ್ಲಣಗೊಳಿಸುತ್ತಿರುವ ಸಂದರ್ಭದಲ್ಲಿ ನಾಗರಿಕರಿಗೆ ಇದರಿಂದ ಸುಮಾರು 800 ಕೋ.ರೂ.ಗಳಷ್ಟು ಉಳಿತಾಯವಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628291

ಒಂದು  ರಾಷ್ಟ್ರ ಒಂದು ಕಾರ್ಡ್ ಯೋಜನೆಗೆ ಇನ್ನೂ ಮೂರು ರಾಜ್ಯಗಳು ಸೇರ್ಪಡೆ

ಕೇಂದ್ರ ಗ್ರಾಹಕ ವ್ಯವಹಾರಗಳು , ಆಹಾರ  ಮತ್ತು ನಾಗರಿಕ ಪೂರೈಕೆ ಸಚಿವರಾದ ಶ್ರೀ ರಾಂ ವಿಲಾಸ್ ಪಾಸ್ವಾನ್ ಅವರಿಂದು ಮೂರು ರಾಜ್ಯಗಳಾದ ಒಡಿಶಾ, ಸಿಕ್ಕಿಂ ಮತ್ತು ಮಿಜೋರಾಂಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಮಗ್ರ ನಿರ್ವಹಣೆ ವ್ಯವಸ್ಥೆ”  (.ಎಂ.-ಪಿ.ಡಿ.ಎಸ್.) ಗೆ ಸೇರ್ಪಡೆಯಾಗಿರುವುದನ್ನು ಘೋಷಿಸಿದರು. ಯೋಜನೆ ಅಡಿಯಲ್ಲಿ ಎನ್.ಎಫ್.ಎಸ್.. ರಾಷ್ಟ್ರ ವ್ಯಾಪ್ತೀ ಪ್ರಯೋಜನಗಳು ಒಂದು ರಾಷ್ಟ್ರ ಒಂದು ರೇಶನ್ ಕಾರ್ಡ್ ಯೋಜನೆ ಮೂಲಕ ಜಾರಿಗೆ ಬರುತ್ತವೆ. ಇದರಿಂದ ಎನ್.ಎಫ್.ಎಸ್.. ರೇಶನ್ ಕಾರ್ಡುದಾರರು ಅವರ ಕೋಟಾದ ಆಹಾರ ಧಾನ್ಯಗಳನ್ನು ಅವರ ಆಯ್ಕೆಯ ಯಾವುದೇ .ಪಿ..ಎಸ್. ವ್ಯವಸ್ಥೆ ಇರುವ ಎಫ್.ಪಿ.ಎಸ್. ಗಳಿಂದ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ಪಡೆಯಬಹುದು. ಈಗಿರುವ ರೇಶನ್ ಕಾರ್ಡುಗಳನ್ನೇ ಆಧಾರ ಜೋಡಣೆ ಬಳಿಕ .ಪಿ..ಎಸ್. ಉಪಕರಣದಲ್ಲಿ ದೃಢೀಕರಣಕ್ಕೆ ಬಳಸಬಹುದು ಸೌಲಭ್ಯ ಇದುವರೆಗೆ 17 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಲಭ್ಯ ಇತ್ತು.

ವಿವರಗಳಿಗೆ: https://pib.gov.in/PressReleseDetail.aspx?PRID=1628288

ಪಿ.ಪಿ.. ಗಳು ಮತ್ತು ಇತರ ಸಲಕರಣೆಗಳನ್ನು ಕ್ರಿಮಿನಾಶಕಗೊಳಿಸಲು ಅಲ್ಟ್ರಾ ಸ್ವಚ್ಚ ಅಭಿವೃದ್ದಿಗೊಳಿಸಿದ ಡಿ.ಆರ್.ಡಿ..

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆಯು ಅಲ್ಟ್ರಾ ಸ್ವಚ್ಚ್  ಹೆಸರಿನ ಕ್ರಿಮಿನಾಶಕ ಘಟಕವನ್ನು ಅಭಿವೃದ್ದಿಪಡಿಸಿದೆ. ಇದು ವೈಯಕ್ತಿಕ ರಕ್ಷಣಾ ಸಲಕರಣೆಗಳು (ಪಿ.ಪಿ..) ಸಹಿತ ಇಲೆಕ್ಟ್ರಾನಿಕ್ ವಸ್ತುಗಳು , ಫ್ಯಾಬ್ರಿಕ್ ಗಳು, ಇತ್ಯಾದಿ ಸೇರಿದಂತೆ ವೈವಿಧ್ಯಮಯ ವ್ಯಾಪ್ತಿಯ ವಸ್ತುಗಳನ್ನು ಕ್ರಿಮಿನಾಶಕಗೊಳಿಸುತ್ತದೆ. ವ್ಯವಸ್ಥೆಯನ್ನು ಅಣು ವೈದ್ಯಕೀಯ ಮತ್ತು ಪೂರಕ ವಿಜ್ಞಾನಗಳ ಸಂಸ್ಥೆಯು ( .ಎನ್.ಎಂ..ಎಸ್. ) ಅಭಿವೃದ್ದಿಪಡಿಸಿದೆ. ಇದು ಓಜೋನ್ ಯುಕ್ತ ಅವಕಾಶ ತಂತ್ರಜ್ಞಾನವನ್ನು ಕ್ರಿಮಿನಾಶಕ ಪ್ರಕ್ರಿಯೆಗೆ ಬಳಸಿಕೊಳ್ಳುತ್ತದೆ. ಇದು ಆಧುನಿಕ ಆಕ್ಸಿಡೇಟಿವ್ ಪ್ರಕ್ರಿಯೆಯನ್ನೂ ಒಳಗೊಂಡಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628288

ಲಾಕ್ ಡೌನ್ ಅವಧಿಯಲ್ಲಿ ಎನ್.ಟಿ.ಪಿ.ಸಿ.ಯು ತನ್ನ 19,000 ಸಿಬ್ಬಂದಿಗಳಿಗೆ ಮತ್ತು ಅವರ ಕುಟುಂಬದವರಿಗೆ ಕಲಿಕಾ ಮತ್ತು ಅಭಿವೃದ್ದಿ ಅವಕಾಶಗಳನ್ನು ವರ್ಧಿಸಿದೆ

ಎನ್.ಟಿ.ಪಿಸಿ.ಯು ತನ್ನ 19,000 ಕ್ಕೂ ಅಧಿಕ ಸಿಬ್ಬಂದಿಗಳಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಕಲಿಕಾ ಅವಕಾಶಗಳನ್ನು ಒದಗಿಸಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಅಂಗವಾಗಿ ಜಾರಿ ಮಾಡಲಾದ ಲಾಕ್ ಡೌನ್ ಆವಶ್ಯಕತೆಗಳನ್ನು ಈಡೇರಿಸಲು ಎನ್.ಟಿ.ಪಿ.ಸಿ. ಕಲಿಕೆ ಮತ್ತು ಅಭಿವೃದ್ದಿ (ಎಲ್ ಆಂಡ್  ಡಿ) ವ್ಯೂಹವನ್ನು ರೂಪಿಸಿತ್ತು.  ಡಿಜಿಟೈಸೇಶನ್ ಮತ್ತು ಆನ್ ಲೈನ್ ತರಬೇತಿಯ ಮೂಲಕ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ಮೂಲಕ ಸೇವೆಗಳನ್ನು ಎಲ್ಲಿ ಬೇಕಾದರೂ ಪಡೆಯುವಂತೆ ಇದನ್ನು ರೂಪಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1628283

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಪಂಜಾಬ್ : ಮುಖ್ಯಮಂತ್ರಿ ಅವರು ಸೂಕ್ತ ಮುಂಜಾಗರೂಕತೆ ವಹಿಸದೇ ಇರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಮೇ 17 ರಿಂದ ಮೇ 28 ನಡುವೆ ಮುಖಗವಸು ಧರಿಸದೇ ಇರುವ ಕಾರಣಕ್ಕೆ 36,820 ಜನರಿಗೆ ದಂಡ ವಿಧಿಸಲಾಗಿದೆ, 4,032 ಮಂದಿಗೆ ರಸ್ತೆಯಲ್ಲಿ ಉಗುಳಿದುದಕ್ಕಾಗಿ ದಂಡ ಹಾಕಲಾಗಿದೆ ಮತ್ತು 503 ಎಫ್..ಆರ್. ಗಳನ್ನು ದಾಖಲು ಮಾಡಲಾಗಿದೆ
  • ಹರಿಯಾಣ: ಜಾಗತಿಕ ಸಾಂಕ್ರಾಮಿಕ ಕೋವಿಡ್ -19 ವಿರುದ್ದ ಹೋರಾಡಲು ರಾಜ್ಯ ಸರಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದಾಗ್ಯೂ ಹೋರಾಟದಲ್ಲಿ ಅಗತ್ಯ ಇರುವ ಎಲ್ಲರಿಗೂ ರೇಶನ್ ಒದಗಿಸುವುದಲ್ಲದೆ , ಯಾರೊಬ್ಬರೂ ಹಸಿವೆಯಿಂದ ಇರದಂತೆ ನೋಡಿಕೊಳ್ಳುವುದು ರಾಜ್ಯ ಸರಕಾರದ ಪ್ರಥಮಾಧ್ಯತೆಯಾಗಿದೆ ಎಂದಿದ್ದಾರೆ. ರೇಶನ್ ಕಾರ್ಡುದಾರರು ಮತ್ತು ಯಾವುದೇ ಕಾರ್ಡು ಹೊಂದಿಲ್ಲದವರಿಗೆ  ಡಿಸ್ಟ್ರೆಸ್ ಟೋಕನ್ ಮೂಲಕ ರೇಶನ್ ಒದಗಿಸಲಾಗುತ್ತಿದೆ. ಸೌಲಭ್ಯವನ್ನು ರಾಜ್ಯದಲ್ಲಿ 486000 ಜನರಿಗೆ ಒದಗಿಸಲಾಗಿದೆ. ಸಾಂಕ್ರಾಮಿಕಕ್ಕೆ ಚಿಕಿತ್ಸೆ ನೀಡಲು ಯಾವುದೇ ಲಸಿಕೆ ಲಭ್ಯ ಇಲ್ಲ ಎಂದು ಹೇಳಿರುವ ಮುಖ್ಯಮಂತ್ರಿ ಅವರು , ಆದುದರಿಂದ ನಾವೆಲ್ಲರೂ ಮುಖಗವಸು ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಪಾಲಿಸುವುದು ಮತ್ತಿತರ ಮುಂಜಾಗರೂಕತಾ ಅಂಶಗಳನ್ನು ನಮ್ಮ ಜೀವನ ವಿಧಾನದಲ್ಲಿ ಅಳವಡಿಸಿಕೊಳ್ಳುವುದು ಬಹಳ ಅವಶ್ಯ ಎಂದೂ ಹೇಳಿದ್ದಾರೆ.
  • ಹಿಮಾಚಲ ಪ್ರದೇಶ: ಸಾಮಾನ್ಯ ಜನರಿಗೆ ಅನುಕೂಲತೆಗಳನ್ನು ಮಾಡಿಕೊಡಲು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕರ್ಫ್ಯೂನಲ್ಲಿ ಸಡಿಲಿಕೆ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಅಂತರ ಜಿಲ್ಲಾ ಬಸ್ಸುಗಳ ಓಡಾಟ ಜೂನ್ 1 ರಿಂದ ಆರಂಭವಾಗಿರುವುದರಿಂದ ಅಲ್ಲಿ ಬಸ್ಸುಗಳಲ್ಲಿ  ಸಾಮಾಜಿಕ ಅಂತರ ಪಾಲನೆಯನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಅದು ಬಸ್ಸು ನಿಲ್ದಾಣಗಳಲ್ಲಿಯೂ ಅನುಷ್ಟಾನಗೊಳ್ಳಬೇಕು ಎಂದು ಮುಖ್ಯಮತ್ರಿ ಅವರು ಹೇಳಿದ್ದಾರೆ. . ಗುಂಪು ನಿರ್ವಹಣೆಗೆ ಮತ್ತು ಎಲ್ಲಾ ಬಸ್ಸು ನಿಲ್ದಾಣಗಳಲ್ಲಿ  ಕಾನೂನು ಸುವ್ಯವಸ್ಥೆ ನಿಭಾಯಿಸಲು ಜಿಲ್ಲಾ ಮ್ಯಾಜಿಸ್ಟ್ರೇಟರು ಮತ್ತು ಜಿಲ್ಲಾ ಪೊಲೀಸ್ ವರಿಷ್ಟರು ಸಾಕಷ್ಟು ಪೊಲಿಸ್ ಪಡೆಯನ್ನು ಒದಗಿಸುತ್ತಾರೆ ಎಂದರು. ಬಸ್ಸುಗಳಲ್ಲಿ ಪ್ರಯಾಣಿಕರ  ಸಂಖ್ಯೆ  60  % ಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕು  ಎಂದು ಸೂಚಿಸಲಾಗಿದೆ. ಚಾಲಕರು, ಕಂಡೆಕ್ಟರುಗಳು ಮತ್ತು ಪ್ರಯಾಣಿಕರು ಆರೋಗ್ಯ ಇಲಾಖೆಯ ಎಲ್ಲಾ ಸುರಕ್ಷಾ ಶಿಷ್ಟಾಚಾರವನ್ನು ಪಾಲಿಸಬೇಕಾಗುತ್ತದೆ. ರಾಜ್ಯದೊಳಗೆ ಜನತೆಯ ಅಂತರಜಿಲ್ಲಾ ಸಂಚಾರಕ್ಕೆ ಪಾಸ್ ಗಳಿಲ್ಲದೆ ಅವಕಾಶ ನೀಡಲಾಗುತ್ತದೆ, ಆದರೆ ಅಂತರ್ ರಾಜ್ಯ ಚಲನವಲನಕ್ಕೆ ಪಾಸ್ ಗಳ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ದೇಶದ ಇತರ ಭಾಗಗಳಿಂದ ಬರುವವರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದ ಅವರು ಕೆಂಪು ವಲಯದಿಂದ ಬರುವವರನ್ನು ಸಾಂಸ್ಥಿಕ ಕ್ವಾರಂಟೈನ್  ನಲ್ಲಿಡಲಾಗುತ್ತದೆ ಮತ್ತು ಇತರ ಪ್ರದೇಶಗಳಿಂದ ಬರುವವರನ್ನು ಗೃಹ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತದೆ ಎಂದೂ ತಿಳಿಸಿದರು. ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವವರಿಗೆ ಅವರ ಕೋವಿಡ್ -19 ಪರೀಕ್ಷೆ ನೆಗೆಟಿವ್ ಬಂದ ಬಳಿಕವಷ್ಟೇ ಮನೆಗೆ ತೆರಳಲು ಬಿಡಲಾಗುವುದು ಎಂದರು.
  • ಮಹಾರಾಷ್ಟ್ರ: 2,487 ಹೊಸ ಪ್ರಕರಣಗಳೊಂದಿಗೆ ಮಹಾರಾಷ್ಟ್ರದ ಕೋವಿಡ್ -19 ಪ್ರಕರಣಗಳ ಒಟ್ಟು ಸಂಖ್ಯೆ 67,655 ಕ್ಕೇರಿದೆ. ಇವರಲ್ಲಿ 29,329 ಮಂದಿ ಪೂರ್ಣವಾಗಿ ಗುಣಮುಖರಾಗಿದ್ದಾರೆ. ಮತ್ತು 2,286 ಮಂದಿ ಮೃತಪಟ್ಟಿದ್ದಾರೆ. ಏತನ್ಮಧ್ಯೆ ಕೋವಿಡ್ -19 ಪರೀಕ್ಷೆಯಲ್ಲಿ ಮಹಾರಾಷ್ಟ್ರ ಪೊಲೀಸ್ ಪಡೆಯ 8 ಮಂದಿ ಅಧಿಕಾರಿಗಳು ಸಹಿತ ಮತ್ತೆ 93 ಮಂದಿ ಪೊಲೀಸರು ಪಾಸಿಟಿವ್ ಆಗಿದ್ದಾರೆ. ರಾಜ್ಯದಲ್ಲಿ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿರುವ ರಾಜ್ಯದ ಒಟ್ಟು ಪೊಲೀಸರ ಸಂಖ್ಯೆ ಇದುವರೆಗೆ 2,509 ಆಗಿದೆ. ಇವರಲ್ಲಿ ಇದುವರೆಗೆ 27 ಮಂದಿ ಪೊಲೀಸರು ಕೊರೊನಾವೈರಸ್ಸಿಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಿಂದ ರಸ್ತೆ  ಮೂಲಕವಾಗಲೀ, ವಿಮಾನದ ಮೂಲಕವಾಗಲೀ ಅಥವಾ ರೈಲು ಮೂಲಕವಾಗಲೀ ಅಂತಾರಾಜ್ಯ ಸಂಚಾರಕ್ಕೆ ಇತ್ತೀಚಿನ ಲಾಕ್ ಡೌನ್ ನಲ್ಲಿ ನಿಷೇಧ ಹೇರಲಾಗಿದೆ. ಆದರೆ  ಶ್ರಮಿಕ ವಿಶೇಷ ರೈಲುಗಳಲ್ಲಿ ಇತ್ತೀಚಿನ ಮಾರ್ಗದರ್ಶಿಗಳ ಪ್ರಕಾರ ವಲಸೆ ಕಾರ್ಮಿಕರು, ವಿವಿಧೆಡೆಗಳಲ್ಲಿ ಸಿಲುಕಿ ಹಾಕಿ ಕೊಂಡಿರುವ ನಾಗರಿಕರಿಗೆ ತೆರಳಲು ರಾಜ್ಯ ಸರಕಾರದ ಇತೀಚಿನ ಮಾರ್ಗದರ್ಶಿಗಳಲ್ಲಿ ಅವಕಾಶವಿದೆ.
  • ಗುಜರಾತ್: ರಾಜ್ಯದಲ್ಲಿ  438 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ. ಮತ್ತು 31 ಮಂದಿ ಮೃತಪಟ್ಟಿದ್ದಾರೆ, ಇವರಲ್ಲಿ 20 ಸಾವುಗಳು  ಕೊರೊನಾದಿಂದ ತೀವ್ರವಾಗಿ ಪೀಡಿತವಾಗಿರುವ ಅಹ್ಮದಾಬಾದಿನಲ್ಲಿ ಸಂಭವಿಸಿವೆ. ಇದರಿಂದ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 16,794 ಮತ್ತು ಮೃತರ ಒಟ್ಟು ಸಂಖ್ಯೆ 1,038. 
  • ರಾಜಸ್ಥಾನ: 149  ಮಂದಿ ಸೋಂಕು  ಪರೀಕ್ಷೆಯಲ್ಲಿ ಪಾಸಿಟಿವ್ ಆಗುವುದರೊಂದಿಗೆ ರಾಜಸ್ಥಾನದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 8,980 ಕ್ಕೇರಿದೆ. ಹೊಸದಾಗಿ ಪತ್ತೆಯಾಗಿರುವ 149 ಪ್ರಕರಣಗಳಲ್ಲಿ ಗರಿಷ್ಟ 44 ಪ್ರಕರಣಗಳು ಭಾರತ್ ಪುರದವು. 32 ಜೈಪುರದವು  ಮತ್ತು 27 ಪ್ರಕರಣಗಳು ಬರಾನ್  ನವು. ಮತ್ತು ಪಾಲಿಯಿಂದ 21. ಎಲ್ಲಾ ಧಾರ್ಮಿಕ ಸ್ಥಳಗಳು, ಶಾಪಿಂಗ್ ಮಾಲ್ ಗಳು, ಮತ್ತು ಹೊಟೇಲುಗಳು ಮುಚ್ಚಲ್ಪಟ್ಟಿವೆ , ರಾಜಸ್ಥಾನ ಸರಕಾರವು ಎಲ್ಲಾ ಸರಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡಲು ಅನುಮತಿ ನೀಡಿದೆ.
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಕೋವಿಡ್ -19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಭಾನುವಾರದಂದು 8,000 ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 198 ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಕೋವಿಡ್ -19 ಒಟ್ಟು ಪ್ರಕರಣಗಳ ಸಂಖ್ಯೆ ಈಗ 8,089. ಆದರೆ ಧನಾತ್ಮಕ ಬೆಳವಣಿಗೆಯೊಂದರಲ್ಲಿ 398 ಮಂದಿ ರೋಗಿಗಳು ವರದಿ ನೆಗೆಟಿವ್ ಬಂದಿರುವುದರಿಂದ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದು ರೋಗದಿಂದ ಚೇತರಿಸಿಕೊಂಡು ಒಂದೇ ದಿನದಲ್ಲಿ ರಾಜ್ಯದಲ್ಲಿ ಆಸ್ಪತ್ರೆಗಳಿಂದ ಬಿಡುಗಡೆಯಾದ ಗರಿಷ್ಟ ಪ್ರಮಾಣದ ರೋಗಿಗಳ ಸಂಖ್ಯೆ.
  • ಛತ್ತೀಸ್ ಗಢ: ಛತ್ತೀಸ್ ಗಢದಲ್ಲಿ ಮತ್ತೆ 5 ಕೋವಿಡ್ -19 ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ 503 ಕ್ಕೇರಿದೆ. ಆಕ್ಟಿವ್ ಪ್ರಕರಣಗಳ ಸಂಖ್ಯೆ 388, ರಾಜ್ಯದಲ್ಲಿ ಕೋವಿಡ್ ನಿಂದ ಇದುವರೆಗೆ ಓರ್ವರು ಮೃತಪಟ್ಟಿದ್ದಾರೆ
  • ಕೇರಳ: ಕೇರಳದಲ್ಲಿ ಅಂತರ ಜಿಲ್ಲಾ ಬಸ್ಸು ಸೇವೆಗಳು ನಾಳೆಯಿಂದ ಆರಂಭಗೊಳ್ಳಲಿವೆ. ಇದುವರೆಗೆ ಅಂತಾರಾಜ್ಯ ಬಸ್ಸು ಪ್ರಯಾಣಕ್ಕೆ ಅನುಮತಿ ನೀಡಲಾಗಿಲ್ಲ. ಹೊಟೇಲುಗಳು ಮತ್ತು ರೆಸ್ಟೋರೆಂಟುಗಳಿಗೆ ಜೂನ್ 8 ರಿಂದ  ಮರು ತೆರೆಯುವ ಅವಕಾಶ ಲಭಿಸಲಿದೆ. ಆರಾಧನಾ ಕೇಂದ್ರಗಳನ್ನು ತೆರೆಯುವುದಕ್ಕ ಸಂಬಂಧಿಸಿ ಧಾರ್ಮಿಕ ನಾಯಕರ ಜೊತೆ ಚರ್ಚಿಸಿದ ಬಳಿಕವಷ್ಟೇ ನಿರ್ಧಾರ ಕೈಗೊಳ್ಳಲಾಗುವುದು. ಹೊಸ ಶೈಕ್ಷಣಿಕ ವರ್ಷ ಇಂದು ಆರಂಭಗೊಂಡಿದ್ದು, ತರಗತಿ 1 ರಿಂದ 12 ನೇ ತರಗತಿವರೆಗೆ 41 ಲಕ್ಷ ವಿದ್ಯಾರ್ಥಿಗಳು 12,000 ಶಾಲೆಗಳಲ್ಲಿ ರಾಜ್ಯ ನಡೆಸುತ್ತಿರುವ ಶಿಕ್ಷಣ ವಾಹಿನಿ ವಿಕ್ಟರ್ಸ್ ಮೂಲಕ ವರ್ಚುವಲ್ ತರಗತಿಗಳಲ್ಲಿ ಪಾಲ್ಗೊಳ್ಲಲಿದ್ದಾರೆ. ತಿರುವನಂತಪುರಂನಲ್ಲಿ ಮತ್ತೆ 4 ಮಂದಿ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. ಅವರಲ್ಲಿ ಮೂರು ಮಂದಿ ಕುವೈಟಿನಿಂದ ಮರಳಿದವರು ಮತ್ತು ಇನ್ನೋರ್ವರು ತಮಿಳುನಾಡಿನಿಂದ ಮರಳಿದ ಪೈಂಟರ್ . ನಿನ್ನೆ ಮತ್ತು ಇಂದು ಒಟ್ಟು 12 ಮಂದಿ ಕೇರಳೀಯರು ಕೊಲ್ಲಿ ರಾಷ್ಟ್ರಗಳಲ್ಲಿ ವೈರಸ್ಸಿಗೆ ಬಲಿಯಾಗಿದ್ದಾರೆ. ಇದರಿಂದ ಕೊಲ್ಲಿ ರಾಷ್ಟ್ರಗಳಲ್ಲಿ ಮೃತಪಟ್ಟ ಕೇರಳೀಯರ ಸಂಖ್ಯೆ 150 ಕ್ಕೇರಿದೆ. ನಿನ್ನೆ ರಾಜ್ಯದಲ್ಲಿ ಓರ್ವರು ಮೃತಪಟ್ಟಿದ್ದಾರೆ ಮತ್ತು 61 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. 670 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ.
  • ತಮಿಳುನಾಡು: ಪುದುಚೇರಿ ವಿಧಾನಸಭಾ ಸಂಕೀರ್ಣದಲ್ಲಿ ಓರ್ವರಿಗೆ ಕೋವಿಡ್ -19 ಸೋಂಕು ತಗಲಿದೆ. ಮುಖ್ಯಮಂತ್ರಿ ಕಚೇರಿಯನ್ನು ಕ್ರಿಮಿನಾಶಕಗೊಳಿಸಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಮತ್ತೆ ಮೂವರು ಪಾಸಿಟಿವ್ ಆಗಿದ್ದಾರೆ. ಈಗ ಪುದುಚೇರಿಯಲ್ಲಿ 49 ಆಕ್ಟಿವ್ ಪ್ರಕರಣಗಳಿವೆ. ತಮಿಳುನಾಡಿನಲ್ಲಿ ಎರಡು ತಿಂಗಳಿಗೂ ಅಧಿಕ ಸಮಯದ  ಬಳಿಕ  ಬಸ್ಸುಗಳು ಮರಳಿ ರಸ್ತೆಗೆ ಇಳಿದಿವೆ. ಚೆನ್ನೈಯಿಂದ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹಾಟ್ ಸ್ಪಾಟ್ ಗಳಿಂದ ತಮಿಳುನಾಡಿಗೆ ಬರುವವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.. ನಿನ್ನೆ ಇದೇ ಮೊದಲ ಬಾರಿಗೆ ರಾಜ್ಯದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 1000 ದಾಟಿದೆ. ನಿನ್ನೆ 1149 ಹೊಸ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 804 ಪ್ರಕರಣಗಳು ಚೆನ್ನೈಯವು  . ಒಟ್ಟು ಪ್ರಕರಣಗಳು ಈಗ : 22,333. ಆಕ್ಟಿವ್ ಪ್ರಕರಣಗಳು: 9,400, ಸಾವುಗಳು: 173, ಚೇತರಿಸಿಕೊಂಡು ಬಿಡುಗಡೆಯಾದವರು 12,757. ಚೆನ್ನೈಯಲ್ಲಿ ಆಕ್ಟಿವ್ ಪ್ರಕರಣಗಳು 6781 
  • ಕರ್ನಾಟಕ: ಕರ್ನಾಟಕದಾದ್ಯಂತ ದೇವಾಲಯಗಳು ಜೂನ್ 8 ರಂದು ತೆರೆಯಲಿವೆ. ಮಹಾರಾಷ್ಟ್ರದಿಂದ ಆಗಮಿಸುವವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್  ಕಡ್ದಾಯ. ಕಿತ್ತಳೆ ಮತ್ತು ಕೆಂಪು ವಲಯಗಳಲ್ಲಿ ಆರ್.ಟಿ.. ಚಾಲನಾ ಪರವಾನಗಿ ನೀಡಿಕೆಯನ್ನು ಆರಂಭ ಮಾಡಲಿದ್ದಾರೆ. ಕೋಳಿ ಸಾಕಾಣಿಕೆ ಉದ್ಯಮಕ್ಕೆ ಪರಿಹಾರ ಎಂಬಂತೆ ಕೋಳಿ ದರ ಬಳಕೆ ಪ್ರಮಾಣ ಹೆಚ್ಚಿದಂತೆ ಏರತೊಡಗಿದೆ. ನಿನ್ನೆ ರಾಜ್ಯದಲ್ಲಿ 299 ಹೊಸ ಪ್ರಕರಣಗಳು ವರದಿಯಾಗಿವೆ. ಇವರಲ್ಲಿ 255 ಹೊರರಾಜ್ಯಗಳ ಪ್ರಯಾಣಿಕರು ಮತ್ತು 7 ಮಂದಿ ವಿದೇಶಗಳಿಂದ ಬಂದವರು. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇದುವರೆಗೆ 3221, ಆಕ್ಟಿವ್ ಪ್ರಕರಣಗಳ ಸಂಖ್ಯೆ ;1950. ಸಾವುಗಳು: 51, ಗುಣಮುಖರಾದವರು : 1218.
  • ಆಂಧ್ರ ಪ್ರದೇಶ: “ಮುಂದಿನ ಸಲಹೆವರೆಗೆಆಂಧ್ರ ಪ್ರದೇಶದೊಳಗೆ ರೈಲುಮೂಲಕ ಪ್ರಯಾಣವನ್ನು ನಿರಬಂಧಿಸಲಾಗಿದೆ. ಇತರ ರಾಜ್ಯಗಳಿಂದ ರೈಲ್ವೇ ನಿಲ್ದಾಣಗಳಿಗೆ ಬರುವ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುವುದು ಮತ್ತು ಅವರನ್ನು 14 ದಿನಗಳ ಗೃಹ ಕ್ವಾರಂಟೈನ್ ಗೆ ಒಳಪಡಿಸಲಾಗುವುದು. ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಮಧ್ಯ ಪ್ರದೇಶ, ದಿಲ್ಲಿ ಮತ್ತು ಚೆನ್ನೈ ಗಳಿಂದ ಬರುವ ಪ್ರಯಾಣಿಕರು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮತ್ತು ಬಳಿಕ 7 ದಿನಗಳ ಗೃಹ ಕ್ವಾರಂಟೈನ್ ಪೂರೈಸಬೇಕಾಗುತ್ತದೆ. 76 ಹೊಸ ಪ್ರಕರಣಗಳು, ಎರಡು ಸಾವುಗಳು ಕಳೆದ 24 ಗಂಟೆಗಳಲ್ಲಿ ವರದಿಯಾಗಿವೆ. ಮತ್ತು ಇದೇ ಅವಧಿಯಲ್ಲಿ 10,567  ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ , 34 ಮಂದಿ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. .ಒಟ್ಟು ಪ್ರಕರಣಗಳ ಸಂಖ್ಯೆ : 3118.ಆಕ್ಟಿವ್ ಪ್ರಕರಣಗಳು: 885. ಗುಣಮುಖರಾದವರು : 2169. ಸಾವುಗಳು : 64.  ರಾಜ್ಯಕ್ಕೆ ಬಂದ ವಲಸೆಗಾರರಲ್ಲಿ ಪಾಸಿಟಿವ್ ಆದವರ ಸಂಖ್ಯೆ 446, ಇದರಲ್ಲಿ ಆಕ್ಟಿವ್ ಪ್ರಕರಣಗಳು 249. ವಿದೇಶಗಳಿಂದ ಬಂದವರಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 112.
  • ತೆಲಂಗಾಣ: ರೈಲ್ವೇ ಸಚಿವಾಲಯವು ಇಂದಿನಿಂದ ಪ್ರಯಾಣಿಕ ರೈಲುಗಳ ಸಂಚಾರವನ್ನು ಪುನರಾರಂಭ ಮಾಡಿರುವುದರಿಂದ ಸಿಕಂದರಾಬಾದಿನಲ್ಲಿ ಬೃಹತ್ ಸರತಿ ಸಾಲುಗಳಿದ್ದವು. 7 ರೈಲುಗಳಲ್ಲಿ ಸುಮಾರು 10 ಸಾವಿರದಿಂದ 12 ಸಾವಿರ ಪ್ರಯಾಣಿಕರು ತಮ ಊರುಗಳಿಗೆ ತೆರಳಲು ಸಿದ್ದರಾಗಿದ್ದಾರೆ.7 ರೈಲುಗಳ ಪೈಕೆ 4 ರೈಲುಗಳು ಸಿಕಂದರಾಬಾದಿನಿಂದ  ಹೊರಡುತ್ತವೆ ಮತ್ತು 3 ರೈಲುಗಳು ನಾಂಪಲ್ಲಿಯಿಂದ ಹೊರಡುತ್ತವೆ. ಬೃಹತ್ ಹೈದರಾಬಾದ್ ಮಹಾನಗರ ಪಾಲಿಕೆ  ವ್ಯಾಪ್ತಿಯಲ್ಲಿ ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಕಳೆದ ತಿಂಗಳು ಇಲ್ಲಿ ಲಾಕ್ ಡೌನ್ ಸಡಿಲಿಕೆ ಬಳಿಕ  ಯಾವುದೇ ಪ್ರಕರಣ ಇರಲಿಲ್ಲ. ತೆಲಂಗಾಣದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 2020 ಮೇ 31ಕ್ಕೆ 2,698 ಇದ್ದಿತ್ತು. ಇದುವರೆಗೆ 434 ವಲಸೆಗಾರರು , ವಿದೇಶಗಳಿಂದ ಬಂದವರು ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದಾರೆ. . 
  • ಅರುಣಾಚಲ ಪ್ರದೇಶ: ಸುಮಾರು 8000 ಮಂದಿ ಇದುವರೆಗೆ ರಾಜ್ಯಕ್ಕೆ ವಾಪಾಸು ಬಂದಿದ್ದಾರೆ. ಕ್ವಾರಂಟೈನ್ ಮತ್ತು ಆರೋಗ್ಯ ತಪಾಸಣೆಗಳಿಗೆ ಸಂಬಂಧಿಸಿ ಎಸ್..ಪಿ.ಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಲಾಗುತ್ತಿದೆ. ರಾಜ್ಯವು ಇನ್ನೂ ಲಾಕ್ ಡೌನ್ ನಲ್ಲಿದೆ ಎಂದು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಹೇಳಿದ್ದಾರೆ. ರಾಜ್ಯದಿಂದ ಹೊರಗೆ ನೆಲೆಸಿರುವ ರಾಜ್ಯದ ಎಲ್ಲಾ ಜನರೂ ಮರಳಿದ ಬಳಿಕವಷ್ಟೇ ಹೊಸ ಸಡಿಲಿಕೆಯನ್ನು ನಿರ್ಧರಿಸಲಾಗುವುದು ಎಂದವರು ಹೇಳಿದ್ದಾರೆ.
  • ಅಸ್ಸಾಂ: ಕೋವಿಡ್ -19 ರಿಂದಾಗಿ ಹದಗೆಟ್ಟಿರುವ ರಾಜ್ಯದ ಆರ್ಥಿಕತೆಗೆ ಪುನಶ್ಚೇತನ ನೀಡಲು ಸಲಹಾ ಸಮಿತಿ ನೀಡಿದ ಸಲಹೆಗಳ ಅನುಷ್ಟಾನಕ್ಕಾಗಿ ಮಾರ್ಗಸೂಚಿಗಳನ್ನು ಆರೋಗ್ಯ ಸಚಿವ ಹಿಮಂತ ಬಿಸ್ವಾ ಸರ್ಮಾ, ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾದ ಸಿ.ಎಂ. ಪಟೋವರಿ  ಮತ್ತು ಕೃಷಿ ಸಚಿವರಾದ ಅತುಲ್ ಬೋರಾ ಅವರನ್ನು ಒಳಗೊಂದ ಮೂವರು ಸದಸ್ಯರ ಸಮಿತಿಯು ತಯಾರಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅಸ್ಸಾಂನಲ್ಲಿ 6 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 1390 ಕ್ಕೇರಿದೆ . ಸಕ್ರಿಯ (ಆಕ್ಟಿವ್ ) ಪ್ರಕರಣಗಳು 1198. ಗುಣಮುಖರಾಗಿ ಚೇತರಿಸಿಕೊಂಡವರು 185, ಮೃತಪಟ್ಟವರು 4.
  • ಮಣಿಪುರಿ: ಮಣಿಪುರದಲ್ಲಿ 7 ಹೊಸ ಕೋವಿಡ್-19  ಪ್ರಕರಣಗಳೊಂದಿಗೆ , ರಾಜ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 78 ಕ್ಕೇರಿದೆ. ಆಕ್ಟಿವ್ ಪ್ರಕರಣಗಳು: 67 ಮತ್ತು ಗುಣಮುಖರಾದವರು 11. ಹೆಚ್ಚಿನವರೆಲ್ಲರೂ ಇತರ ರಾಜ್ಯಗಳಿಂದ ಮರಳಿದವರು
  • ಮಿಜೋರಾಂ: ವಿವಿಧೆಡೆ ಸಿಲುಕಿ ಹಾಕಿಕೊಂಡಿದ್ದ ಪ್ರಯಾಣಿಕರನ್ನು ಗೋವಾದಿಂದ ಮಿಜೋರಾಂನ ಭೈರಾಬಿಗೆ ಕರೆತರಲಾಗಿದ್ದು, ಅವರು ತಮ್ಮ  ಉಳಿತಾಯದ 54140 ರೂ.ಗಳನ್ನು ಭೈರಾಬಿಯ ಸಮುದಾಯ ಸಂಘಟನೆಗಳಿಗೆ ದೇಣಿಗೆ ನೀಡಿದ್ದಾರೆ. ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಸಂಘಟನೆಗಳು ಸ್ವಾರ್ಥರಹಿತವಾಗಿ ಎಲ್ಲಾ ಅವಶ್ಯ ಸಹಾಯವನ್ನು ನೀಡುತ್ತವೆ
  • ನಾಗಾಲ್ಯಾಂಡ್: ದಿಮಾಪುರ ಕೋವಿಡ್ -19 ಉಸ್ತುವಾರಿ ಕಾರ್ಯಪಡೆಯು ಲಿವಿಂಗ್ ಸ್ಟೋನ್ ಅಂತಾರಾಷ್ಟ್ರೀಯ ಪ್ರತಿಷ್ಟಾನದ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿತು. ನಾಗರಿಕ ಸ್ವಯಂ ಸೇವಾ ಸಂಘಟನೆಗಳು ಇದನ್ನು ನಿರ್ವಹಿಸುತ್ತಿವೆ. ನಾಗಾ ಕಾರ್ಯಪಡೆಯ ಸ್ವಯಂ ಸೇವಕರು ಬೆಂಗಳೂರಿನಲ್ಲಿ ಸ್ಥಳೀಯ ಅಧಿಕಾರಿಗಳಿಗೆ ವಲಸೆ ಕಾರ್ಮಿಕರು ಮತ್ತು ಕೊಳೆಗೇರಿ ವಾಸಿಗಳಿಗೆ ಪಡಿತರ ವಿತರಿಸುವಲ್ಲಿ ಸಹಾಯ ಮಾಡುತ್ತಿದ್ದಾರೆ.

 

ಪಿ ಬಿ ವಾಸ್ತವ ಪರಿಶೀಲನೆ

https://static.pib.gov.in/WriteReadData/userfiles/image/image005I43L.png

***



(Release ID: 1628919) Visitor Counter : 251