ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಹೊಸ ಮಾಹಿತಿ

Posted On: 30 MAY 2020 5:14PM by PIB Bengaluru

ಕೋವಿಡ್ -19 ಹೊಸ ಮಾಹಿತಿ

24 ಗಂಟೆಗಳಲ್ಲಿ, ಒಟ್ಟು 11,264 ಕೊವಿಡ್-19 ರೋಗಿಗಳನ್ನು ಗುಣಪಡಿಸಲಾಗಿದೆ

ಚೇತರಿಕೆಯ ಪ್ರಮಾಣವು 47.40% ಏರಿದ್ದು, 24 ಗಂಟೆಗಳಲ್ಲಿ 4.51%ರಷ್ಟು ಹೆಚ್ಚಳ

ಸಕ್ರಿಯ ರೋಗಿಗಳ ಸಂಖ್ಯೆಯು 89,987 ರಿಂದ 86,422 ಕ್ಕೆ ಇಳಿದಿದೆ

ನಿನ್ನೆ, 1,26,842 ಮಾದರಿಗಳ ಪರೀಕ್ಷೆ

 

ಕಳೆದ 24 ಗಂಟೆಗಳಲ್ಲಿ ಒಟ್ಟು 11,264 ಕೋವಿಡ್-19 ರೋಗಿಗಳನ್ನು ಗುಣಪಡಿಸಲಾಗಿದೆ. ಇದು ಒಂದು ದಿನದಲ್ಲಿ ದಾಖಲಾದ ಅತಿ ಹೆಚ್ಚು ಚೇತರಿಸಿಕೊಂಡ ರೋಗಿಗಳ ಸಂಖ್ಯೆಯಾಗಿದೆ. ಹೀಗಾಗಿ, ಈವರೆಗೆ ಒಟ್ಟು 82,369 ರೋಗಿಗಳನ್ನು ಕೋವಿಡ್-19ರಿಂದ ಗುಣಪಡಿಸಲಾಗಿದೆ.

ಇದು ಕೋವಿಡ್-19 ರೋಗಿಗಳಲ್ಲಿ 47.40% ನಷ್ಟು ಚೇತರಿಕೆಯ ಪ್ರಮಾಣಕ್ಕೆ ಕಾರಣವಾಗಿದೆ, ಹಿಂದಿನ ದಿನದ ಚೇತರಿಕೆಯ ಪ್ರಮಾಣದ 42.89% ರಿಂದ ಚೇತರಿಕೆ ಪ್ರಮಾಣದಲ್ಲಿ 4.51%ರಷ್ಟು ಹೆಚ್ಚಾಗಿದೆ.

ಚೇತರಿಸಿಕೊಂಡ ರೋಗಿಗಳ ಸಂಖ್ಯೆಯಿಂದಾಗಿ, ಸಕ್ರಿಯ ರೋಗಿಗಳ ಸಂಖ್ಯೆಯು ಮೇ 29 ರಂತೆ 89,987 ರೋಗಿಗಳಿಂದ ಪ್ರಸ್ತುತ 86,422 ಸಕ್ರಿಯ ಪ್ರಕರಣಗಳಿಗೆ ಇಳಿದಿದೆ. ಎಲ್ಲಾ ಸಕ್ರಿಯ ಪ್ರಕರಣಗಳು ಸಕ್ರಿಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿವೆ.

30 ಮೇ 2020 ರಂತೆ, ಕಳೆದ 14 ದಿನಗಳಲ್ಲಿ ದ್ವಿಗುಣಗೊಳ್ಳುವ ಸಮಯವು 13.3 ಆಗಿದ್ದು, ಕಳೆದ ಮೂರು ದಿನಗಳಲ್ಲಿ ಇದು 15.4ಕ್ಕೆ ಸುಧಾರಿಸಿದೆ. ಸಾವಿನ ಪ್ರಮಾಣವು 2.86%ರಷ್ಟಾಗಿದೆ. 29 ಮೇ 2020 ಹೊತ್ತಿಗೆ, ಐಸಿಯುನಲ್ಲಿ 2.55% ಸಕ್ರಿಯ ಕೋವಿಡ್-19 ರೋಗಿಗಳು, ವೆಂಟಿಲೇಟರ್ಗಳಲ್ಲಿ 0.48% ಮತ್ತು ಆಮ್ಲಜನಕದ ಆಸರೆಯಲ್ಲಿ 1.96% ರೋಗಿಗಳಿದ್ದಾರೆ. 462 ಸರ್ಕಾರಿ ಪ್ರಯೋಗಾಲಯಗಳು ಮತ್ತು 200 ಖಾಸಗಿ ಪ್ರಯೋಗಾಲಯಗಳ ಮೂಲಕ ದೇಶದಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಾಗಿದೆ. ಒಟ್ಟಾರೆಯಾಗಿ, ಕೋವಿಡ್-19ಗಾಗಿ ಇದುವರೆಗೆ 36,12,242 ಪರೀಕ್ಷೆಗಳನ್ನು ಮಾಡಲಾಗಿದ್ದು, 1,26,842 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ.

ಕೋವಿಡ್-19 ನಿರ್ವಹಣೆಗಾಗಿ ದೇಶದ ಆರೋಗ್ಯ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ, ಈಗಿನಂತೆ, 1,58,908 ಪ್ರತ್ಯೇಕ ಹಾಸಿಗೆಗಳು, 20,608 ಐಸಿಯು ಹಾಸಿಗೆಗಳು ಮತ್ತು 69,384 ಆಮ್ಲಜನಕ ಸೌಲಭ್ಯ ಹೊಂದಿರುವ ಹಾಸಿಗೆಗಳನ್ನು ಹೊಂದಿರುವ 942 ಮೀಸಲಾದ ಕೋವಿಡ್ ಆಸ್ಪತ್ರೆಗಳು ಲಭ್ಯವಿದೆ. 1,33,678 ಪ್ರತ್ಯೇಕ ಹಾಸಿಗೆಗಳೊಂದಿಗೆ 2,380 ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳು; 10,916 ಐಸಿಯು ಹಾಸಿಗೆಗಳು ಮತ್ತು 45,750 ಆಕ್ಸಿಜನ್ ಸೌಲಭ್ಯವಿರುವ ಹಾಸಿಗೆಗಳನ್ನು ಕಾರ್ಯಗತಗೊಳಿಸಲಾಗಿದೆ. ದೇಶದಲ್ಲಿ ಕೋವಿಡ್-19ಅನ್ನು ಎದುರಿಸಲು 10,541 ಸಂಪರ್ಕತಡೆ ಕೇಂದ್ರಗಳು ಮತ್ತು 6,64,330 ಹಾಸಿಗೆಗಳನ್ನು ಹೊಂದಿರುವ 7,304 ಕೋವಿಡ್ ಆರೈಕೆ ಕೇಂದ್ರಗಳು ಈಗ ಲಭ್ಯವಿದೆ. ಕೇಂದ್ರವು 119.88 ಲಕ್ಷ ಎನ್ 95 ಮುಖಗವಸುಗಳು ಮತ್ತು 96.14 ಲಕ್ಷ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ ಒದಗಿಸಿದೆ.

ಕೋವಿಡ್-19 ಹೊಸ ಸಾಮಾನ್ಯಜೀವನದೊಂದಿಗೆ ಬದುಕುವಾಗ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಪುನರುಚ್ಚರಿಸಲಾಗಿದೆ. ಸಾರ್ವಜನಿಕ ಸ್ಥಳಗಳು ಮತ್ತು ಕೆಲಸದ ಸ್ಥಳಗಳಲ್ಲಿ ದೈಹಿಕ ಅಂತರದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ; ಆಗಾಗ್ಗೆ ಕೈ ತೊಳೆಯುವುದು ಮತ್ತು ಉಸಿರಾಟದ ನೈರ್ಮಲ್ಯ ಸೇರಿದಂತೆ ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ; ಮುಖಗವಸು ಅಥವಾ ಮುಖದ ಕವರ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಳಸಬೇಕಾಗುತ್ತದೆ; ಮತ್ತು ಕೆಮ್ಮು / ಉಸಿರಾಟದ ಶಿಷ್ಟಾಚಾರಗಳನ್ನು ಅನುಸರಿಸಬೇಕು. ಪರಿಸ್ಥಿತಿಯನ್ನು ಮತ್ತು ಲಾಕ್ಡೌನ್ ಪರಿಸ್ಥಿತಿಯ ಸಡಿಲಿಕೆಯನ್ನು ಲಘುವಾಗಿ ಪರಿಗಣಿಸದೆ ಎಲ್ಲರೂ ಸರಿಯಾದ ಕಾಳಜಿಯನ್ನು ವಹಿಸಿಕೊಂಡಾಗ ಮಾತ್ರ ಕೋವಿಡ್-19 ನಿರ್ವಹಣೆ ಸಾಧ್ಯ ಎಂದು ಅತಿ ಮುಖ್ಯವಾಗಿ ಹೇಳಲಾಗಿದೆ.

ಕೋವಿಡ್-19ಕ್ಕೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿರಿ: https://www.mohfw.gov.in

ಕೋವಿಡ್-19ಕ್ಕೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ.: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಕ್ಕೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***



(Release ID: 1628057) Visitor Counter : 298