PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 27 MAY 2020 6:15PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

https://ci3.googleusercontent.com/proxy/nZjbwt1J-yzvL-iJoaa1htySHXeXueBC3S7dwvz-iqpxbo7h5RNGHBl4S4SurZjAlBD9VRo8G3vmVl7LsTFiLOepB_5L-LSf0SBOKNyyexM75Pa2T3Sf=s0-d-e1-ft#https://static.pib.gov.in/WriteReadData/userfiles/image/image004GYZW.jpg

https://ci6.googleusercontent.com/proxy/WVllPrcy7RmY43mvfQXP3YATs2lXq1_UX_8vWIresfpSD0t1DoBafVdP_YnZxuhpiIUB8Li0j8LbFJezO72ZAIeFMIhNhgRnmnsS67Lf0pJ2LejH2J1P=s0-d-e1-ft#https://static.pib.gov.in/WriteReadData/userfiles/image/image0056CYC.jpg

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಚೇತರಿಕೆ ದರ ಶೇ.42.4 ಕ್ಕೆ ಸುಧಾರಣೆ; ನಿನ್ನೆ1,16,041 ಮಾದರಿಗಳ ಪರೀಕ್ಷೆ

ಲಾಕ್‌ಡೌನ್ ಅನೇಕ ಲಾಭಗಳನ್ನು ತಂದುಕೊಟ್ಟಿದೆ. ಮುಖ್ಯವಾಗಿ ಇದು ರೋಗದ ಹರಡುವಿಕೆಯ ವೇಗವನ್ನು ಕುಂಠಿತಗೊಳಿಸಿದೆ. ಅದೇ ಸಮಯದಲ್ಲಿ, ಲಾಕ್ ಡೌನ್ ಅವಧಿಯಲ್ಲಿ, ಕೋವಿಡ್-19ಕ್ಕೆ ಸಂಬಂಧಿಸಿದ ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿ; ಮಾನವ ಸಂಪನ್ಮೂಲ ಸಾಮರ್ಥ್ಯ ಅಭಿವೃದ್ಧಿ; ಪರೀಕ್ಷಾ ಸಾಮರ್ಥ್ಯ ಹೆಚ್ಚಳ; ಸಾಧನಗಳು, ಉಪಕರಣಗಳು, ಆಮ್ಲಜನಕದ ಹೆಚ್ಚಳ; ಸಂಬಂಧಿತ ಮಾರ್ಗಸೂಚಿಗಳ ಪ್ರಕಟ, ಮಾನದಂಡಗಳ ಸಿದ್ಧತೆ, ಪ್ರಸಾರ, ಅಳವಡಿಕೆ, ಅವುಗಳ ಅಭ್ಯಾಸ; ರೋಗನಿರ್ಣಯ, ಔಷಧ ಪ್ರಯೋಗಗಳು, ಲಸಿಕೆ ಸಂಶೋಧನೆ; ಮತ್ತು ತಾಂತ್ರಿಕ ಸಂಪರ್ಕ ಕಣ್ಗಾವಲು ವ್ಯವಸ್ಥೆಗಳು ಹೆಚ್ಚಿನ ಸಂಪರ್ಕ ಪತ್ತೆಹಚ್ಚುವಿಕೆಯೊಂದಿಗೆ ಬಲಗೊಂಡವು. ಮನೆ ಮನೆಯ ಸಮೀಕ್ಷೆಗಳು ಮತ್ತು ಆರೋಗ್ಯ ಸೇತುವಿನಂತಹ ಆ್ಯಪ್ ಗಳನ್ನು ಸಾಧಿಸಲಾಯಿತು.

ದೇಶದಲ್ಲಿ 435 ಸರ್ಕಾರಿ ಪ್ರಯೋಗಾಲಯಗಳು ಮತ್ತು 189 ಖಾಸಗಿ ಪ್ರಯೋಗಾಲಯಗಳ ಮೂಲಕ (ಒಟ್ಟು 624 ಪ್ರಯೋಗಾಲಯಗಳು) ಪರೀಕ್ಷಾ ಸಾಮರ್ಥ್ಯ ಹೆಚ್ಚಾಗಿದೆ. ಒಟ್ಟಾರೆಯಾಗಿ, ಕೋವಿಡ್-19 ಕ್ಕಾಗಿ ಇದುವರೆಗೆ 32,42,160 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ನಿನ್ನೆ ಒಂದೇ ದಿನ 1,16,041 ಮಾದರಿಗಳನ್ನು ಪರೀಕ್ಷಿಸಲಾಗಿದೆ. ದೇಶದಲ್ಲಿ ಒಟ್ಟು 1,51,767 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 64,426 ಜನರನ್ನು ಗುಣಪಡಿಸಲಾಗಿದೆ. ಚೇತರಿಕೆಯ ಪ್ರಮಾಣ ಶೇ.42.4 ಕ್ಕೆ ಸುಧಾರಿಸಿದೆ. ಮರಣ ಪ್ರಮಾಣ ಶೇ.2.86. ವಿಶ್ವದ ಸರಾಸರಿ ಮರಣ ಪ್ರಮಾಣ ಶೇ.6.36.

ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಮತ್ತು ನಂತರದಲ್ಲಿ ಸಂತಾನೋತ್ಪತ್ತಿ, ತಾಯಿಯ, ನವಜಾತ ಶಿಶು, ಮಗು, ಹದಿಹರೆಯದವರ ಆರೋಗ್ಯ,  ಪೌಷ್ಠಿಕಾಂಶದ ಸೇವೆಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗದರ್ಶನ ಟಿಪ್ಪಣಿ ನೀಡಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627179

ಆರೋಗ್ಯ ಸೇತು ಈಗ ಮುಕ್ತ ಮೂಲವಾಗಿದೆ

ಬ್ಲೂಟೂತ್ ಆಧಾರಿತ ಸಂಪರ್ಕ ಪತ್ತೆಹಚ್ಚುವಿಕೆ, ಸಂಭಾವ್ಯ ಹಾಟ್‌ಸ್ಪಾಟ್‌ಗಳ ಮ್ಯಾಪಿಂಗ್ ಮತ್ತು ಕೋವಿಡ್-19ಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರಸಾರ ಮಾಡುವ ಉದ್ದೇಶದಿಂದ, ಕೋವಿಡ್-19 ಹರಡುವಿಕೆಯನ್ನು ಸೀಮಿತಗೊಳಿಸುವ ಪ್ರಯತ್ನಗಳನ್ನು ಹೆಚ್ಚಿಸಲು ಭಾರತವು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಅನ್ನು ಏಪ್ರಿಲ್ 2, 2020 ರಂದು ಪ್ರಾರಂಭಿಸಿತು. ಮೇ 26 ರ ಹೊತ್ತಿಗೆ ಈ ಅಪ್ಲಿಕೇಶನ್ 114 ಮಿಲಿಯನ್ ಬಳಕೆದಾರರನ್ನು ಹೊಂದಿದೆ, ಇದು ವಿಶ್ವದ ಇತರ ಸಂಪರ್ಕ ಟ್ರೇಸಿಂಗ್ ಅಪ್ಲಿಕೇಶನ್‌ಗಳಿಗಿಂತ ಹೆಚ್ಚಾಗಿದೆ. ಅಪ್ಲಿಕೇಶನ್ 12 ಭಾಷೆಗಳಲ್ಲಿ ಮತ್ತು ಆಂಡ್ರಾಯ್ಡ್, ಐಒಎಸ್ ಮತ್ತು ಕೈಯೋಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ಆರೋಗ್ಯ ಸೇತು ಅಪ್ಲಿಕೇಶನ್ ನ ಪ್ರಮುಖ ಸ್ತಂಭಗಳೆಂದರೆ ಪಾರದರ್ಶಕತೆ, ಗೌಪ್ಯತೆ ಮತ್ತು ಸುರಕ್ಷತೆ. ಮುಕ್ತ ಮೂಲ (ಓಪನ್ ಸೋರ್ಸ್)  ಸಾಫ್ಟ್‌ವೇರ್ ಕುರಿತ ಭಾರತದ ನೀತಿಗೆ ಅನುಗುಣವಾಗಿ, ಆರೋಗ್ಯ ಸೇತು ಮೂಲ ಕೋಡ್ ಅನ್ನು ಈಗ ಮುಕ್ತ ಮೂಲವಾಗಿ ಮಾಡಲಾಗಿದೆ. ಅಪ್ಲಿಕೇಶನ್‌ನ ಆಂಡ್ರಾಯ್ಡ್ ಆವೃತ್ತಿಯ ಮೂಲ ಕೋಡ್ ವಿಮರ್ಶೆ ಮತ್ತು ಸಹಯೋಗಕ್ಕಾಗಿ ಲಭ್ಯವಿದೆ. ಅಪ್ಲಿಕೇಶನ್‌ನ ಐಒಎಸ್ ಆವೃತ್ತಿಯನ್ನು ಮುಂದಿನ ಎರಡು ವಾರಗಳಲ್ಲಿ ಮುಕ್ತ ಮೂಲವಾಗಿ ಬಿಡುಗಡೆ ಮಾಡಲಾಗುತ್ತದೆ ಮತ್ತು ನಂತರ ಸರ್ವರ್ ಕೋಡ್ ಬಿಡುಗಡೆಯಾಗುತ್ತದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626979

ಕತಾರ್ ದೇಶದ ಅಮೀರ್ ಶ್ರೀ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಡುವೆ ದೂರವಾಣಿ ಮಾತುಕತೆ

ಕತಾರ್‌ನ ಸ್ನೇಹಮಯಿ ಜನರಿಗೆ ಈದ್-ಉಲ್-ಫಿತರ್ ಶುಭಾಶಯಗಳನ್ನು ತಿಳಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕತಾರ್ ರಾಷ್ಟ್ರದ ಅಮೀರ್ ಶ್ರೀ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು. ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಕತಾರ್‌ನಲ್ಲಿ ಭಾರತೀಯ ನಾಗರಿಕರ ಯೋಗಕ್ಷೇಮವನ್ನು ಖಾತ್ರಿಪಡಿಸಿಕೊಳ್ಳಲು ಗೌರವಾನ್ವಿತ ಅಮೀರ್ ಅವರು ಕೈಗೊಂಡ ವೈಯಕ್ತಿಕ ಕಾಳಜಿಯನ್ನು ಪ್ರಧಾನಿಯವರು ಶ್ಲಾಘಿಸಿದರು. ಪ್ರತಿಯಾಗಿ, ಅಮೀರ್ ಅವರು ಕತಾರ್ ನಲ್ಲಿರುವ ಭಾರತೀಯ ಸಮುದಾಯದ ಕೊಡುಗೆಗಳನ್ನು, ವಿಶೇಷವಾಗಿ ಭಾರತೀಯ ಆರೋಗ್ಯ ಕಾರ್ಯಕರ್ತರು ವಹಿಸುತ್ತಿರುವ ಪಾತ್ರವನ್ನು ಪ್ರಶಂಸಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627048

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಈಜಿಪ್ಟ್ ಅಧ್ಯಕ್ಷ ಶ್ರೀ ಅಬ್ಡೆಲ್ ಫತ್ತಾಹ್ ಅಲ್-ಸಿಸಿ ನಡುವೆ ದೂರವಾಣಿ ಮಾತುಕತೆ

ಈಜಿಪ್ಟ್ ಅಧ್ಯಕ್ಷ ಶ್ರೀ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮತ್ತು ಅಧ್ಯಕ್ಷರಿಗೆ ಹಾಗೂ ಈಜಿಪ್ಟ್ ಜನತೆಗೆ ಈದ್-ಉಲ್-ಫಿತರ್ ಅವರಿಗೆ ಶುಭಾಶಯಗಳನ್ನು ತಿಳಿಸಿದರು. ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಈಜಿಪ್ಟ್ನಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಈಜಿಪ್ಟ್ ಅಧಿಕಾರಿಗಳು ನೀಡಿದ ಬೆಂಬಲಕ್ಕೆ ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವರ್ಷ ಈಜಿಪ್ಟ್ಗೆ ಯೋಜಿಸಿದ್ದ ಭೇಟಿಯನ್ನು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಿರುವ ಬಗ್ಗೆ ಉಲ್ಲೇಖಿಸಿದ ಪ್ರಧಾನಿಯವರು, ಪರಿಸ್ಥಿತಿ ತಿಳಿಯಾದ ಕೂಡಲೇ ಅಧ್ಯಕ್ಷ ಸಿಸಿಯವರನ್ನು ಭೇಟಿ ಮಾಡುವ ಇಚ್ಛೆಯನ್ನು ತಿಳಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627046

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರಿಯಾ ಅಧ್ಯಕ್ಷ ಗೌರವಾನ್ವಿತ (ಡಾ) ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ನಡುವೆ ದೂರವಾಣಿ ಮಾತುಕತೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಸ್ಟ್ರಿಯಾ ಅಧ್ಯಕ್ಷ ಗೌರವಾನ್ವಿತ (ಡಾ) ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ಆಂಫಾನ್ ಚಂಡಮಾರುತದಿಂದ ಭಾರತದಲ್ಲಿ ಉಂಟಾದ ಹಾನಿಯ ಬಗ್ಗೆ ಆಸ್ಟ್ರಿಯನ್ ಅಧ್ಯಕ್ಷರು ಸಂತಾಪ ಸೂಚಿಸಿದರು. ಕೋವಿಡ್-19 ಸಾಂಕ್ರಾಮಿಕ ರೋಗದ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ನಿರ್ವಹಿಸಲು ಉಭಯ ನಾಯಕರು ತಮ್ಮ ದೇಶಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಪ್ರಸ್ತುತ ಸವಾಲುಗಳನ್ನು ಎದುರಿಸಲು ಅಂತರರಾಷ್ಟ್ರೀಯ ಸಹಯೋಗದ ಮಹತ್ವವನ್ನು ಅವರು ಒಪ್ಪಿಕೊಂಡರು. ಕೋವಿಡ್ ನಂತರದ ಜಗತ್ತಿನಲ್ಲಿ ಭಾರತ-ಆಸ್ಟ್ರಿಯಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ವೈವಿಧ್ಯಗೊಳಿಸಲು ತಮ್ಮ ಬಯಕೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಮೂಲಸೌಕರ್ಯ, ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ, ಎಸ್‌ಎಂಇಗಳು ಮುಂತಾದ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಅವಕಾಶಗಳನ್ನು ಪ್ರಧಾನಿ ತಿಳಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627045

ದೇಶದ ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಶೈಕ್ಷಣಿಕ ಮೂಲಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ: ಮಾನವ ಸಂಪನ್ಮೂಲ ಸಚಿವರು

ಯಾಂಗ್ಯಾಂಗ್‌ನಲ್ಲಿ 986.47 ಕೋಟಿ ರೂ. ವೆಚ್ಚದಲ್ಲಿ ಸಿಕ್ಕಿಂ ವಿಶ್ವವಿದ್ಯಾಲಯದ (ಕೇಂದ್ರೀಯ ವಿಶ್ವವಿದ್ಯಾಲಯ) ಶಾಶ್ವತ ಕ್ಯಾಂಪಸ್ ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ. ಸಿಕ್ಕಿಂ ಸರ್ಕಾರವು 15 ಕೋಟಿ ರೂ. ಮೌಲ್ಯದ 300 ಎಕರೆ ಭೂಮಿಯನ್ನು ಒದಗಿಸಿದೆ. ಅದರಲ್ಲಿ 265.94 ಎಕರೆ ಭೂಮಿಯನ್ನು ಈಗಾಗಲೇ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವರು ತಿಳಿಸಿದ್ದಾರೆ. ಅರುಣಾಚಲ ಪ್ರದೇಶ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ದೆಹಲಿ ಮತ್ತು ಪುದುಚೇರಿಗಳ ಎನ್‌ಐಟಿಗಳಿಗೆ 4371.90 ಕೋಟಿ ರೂ.ಗಳ ಪರಿಷ್ಕೃತ ವೆಚ್ಚದ ಅಂದಾಜುಗಳನ್ನು ಸರ್ಕಾರ ಈಗಾಗಲೇ ಅನುಮೋದಿಸಿದೆ. ಈ ಎನ್‌ಐಟಿಗಳು ಆಯಾ ಶಾಶ್ವತ ಕ್ಯಾಂಪಸ್‌ಗಳಿಂದ 2022 ರ ಮಾರ್ಚ್ 31 ರೊಳಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಸಚಿವರು ತಿಳಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626950

ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಪರಿಶೀಲಿಸಿದ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್

ಹೆಚ್ಚಿನ ಸಂಖ್ಯೆಯ ಜನರು ಕೇಂದ್ರಾಡಳಿತ ಪ್ರದೇಶಕ್ಕೆ ಮರಳಿರುವುದರಿಂದ ಮತ್ತು ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿರುವುದರಿಂದ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿಯನ್ನು ಪರಿಶೀಲಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627177

ಕೋವಿಡ್-19 ಸಾಂಕ್ರಾಮಿಕವನ್ನು ಎದುರಿಸಲು, ಆರೋಗ್ಯ ರಕ್ಷಣೆಯ ಕ್ಷೇತ್ರಗಳಲ್ಲಿ ಆರ್ & ಡಿ ಉಪಕ್ರಮಗಳನ್ನು ಕೈಗೊಳ್ಳಲಿರುವ CIPET; WHO/ ISO ಮಾರ್ಗಸೂಚಿಗಳ ಪ್ರಕಾರ ಪಿಪಿಇ ಮತ್ತು ಇತರ ಸಂಬಂಧಿತ ಉತ್ಪನ್ನಗಳನ್ನು ತಯಾರಿಕೆ ಮತ್ತು ಪ್ರಮಾಣೀಕರಣ

ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಧೀನದಲ್ಲಿರುವ ಪ್ರಮುಖ ರಾಷ್ಟ್ರೀಯ ಸಂಸ್ಥೆಯಾದ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ & ಟೆಕ್ನಾಲಜಿ (CIPET) ಕೋವಿಡ್-19 ಸಾಂಕ್ರಾಮಿಕವನ್ನು ಎದುರಿಸಲು, ಆರೋಗ್ಯ ರಕ್ಷಣಾ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಉಪಕ್ರಮಗಳನ್ನು ಕೈಗೊಳ್ಳುವುದು. WHO/ ISO ಮಾರ್ಗಸೂಚಿಗಳ ಪ್ರಕಾರ ಪಿಪಿಇ ಮತ್ತು ಇತರ ಸಂಬಂಧಿತ ಉತ್ಪನ್ನಗಳ ಉತ್ಪಾದನೆ ಮತ್ತು ಪ್ರಮಾಣೀಕರಣ ಮಾಡಲಿದೆ. ಮುರುತಾಲ್, ಜೈಪುರ, ಮಧುರೈ ಮತ್ತು ಲಕ್ನೋದಲ್ಲಿನ ಸಿಪೆಟ್ ಕೇಂದ್ರಗಳು 'ಕೊರೊನಾವೈರಸ್' ವಿರುದ್ಧ ಹೋರಾಡಲು ಮುಖದ ಕವಚವನ್ನು ರಕ್ಷಣಾ ಸಾಧನವಾಗಿ ಅಭಿವೃದ್ಧಿಪಡಿಸಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627131

ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗೆ ಮಧ್ಯಾಹ್ನದ ಊಟ ಒದಗಿಸಲಿರುವ ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದ ಮತ್ತೊಂದು ಹೆಜ್ಜೆಯಲ್ಲಿ, ವಿದ್ಯುತ್ ಸಚಿವಾಲಯದ ಕೇಂದ್ರೀಯ ಪಿಎಸ್‌ಯು ಪವರ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ (ಪಿಎಫ್‌ಸಿ), ಮುಂಚೂಣಿ ಕೋವಿಡ್ ಯೋಧರಿಗೆ ಆರೋಗ್ಯಕರ ಮತ್ತು ಪೌಷ್ಠಿಕ ಆಹಾರವನ್ನು ಒದಗಿಸಲು ಏಷ್ಯಾದ ಅತಿದೊಡ್ಡ ಆಹಾರ ಕಂಪನಿಗಳಲ್ಲಿ ಒಂದಾದ ತಾಜ್‌ಸಾಟ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ, ಈ ಪ್ರಯತ್ನದ ಭಾಗವಾಗಿ, ನವದೆಹಲಿಯ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಮತ್ತು ಇತರ ಆರೋಗ್ಯ ವೈದ್ಯಕೀಯ ಸಿಬ್ಬಂದಿಗೆ ಪಿಎಫ್‌ಸಿ ಪ್ಯಾಕ್ ಮಾಡಿದ ಊಟದ ಬಾಕ್ಸ್ ಗಳನ್ನು ಒದಗಿಸುತ್ತದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627186

ಜನಪ್ರಿಯ ಕೋವಿಡ್ ಕಥಾ ವನ್ನು ಎನ್ಸಿಎಸ್ಟಿಸಿ ಹಿಂದಿಯಲ್ಲಿ ಹೊರತಂದಿದೆ

ಕೋವಿಡ್-19 ಸಾಂಕ್ರಾಮಿಕ ರೋಗದ A-to-Z ಮಾಹಿತಿಯನ್ನು ಹೊಂದಿರುವ ಸಾಮೂಹಿಕ ಜಾಗೃತಿಗಾಗಿ ಜನಪ್ರಿಯ ಮಲ್ಟಿಮೀಡಿಯಾ ಗೈಡ್‌ನ ಹಿಂದಿ ಆವೃತ್ತಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಹೊರತಂದಿದೆ. ಈ ತಿಂಗಳ ಆರಂಭದಲ್ಲಿ ಇಂಗ್ಲಿಷ್ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಕೋವಿಡ್ ಕಥಾ ಹಿಂದಿ ಆವೃತ್ತಿಗೆ ವಿಶೇಷವಾಗಿ ಹಿಂದಿ ಹೆಚ್ಚು ಮಾತನಾಡುವ ರಾಜ್ಯಗಳಿಂದ ಹೆಚ್ಚಿದ ಬೇಡಿಕೆಯನ್ನು ಈಡೇರಿಸುವ ಸಲುವಾಗಿ, ಕೋವಿಡ್ ಕಥಾ ಹಿಂದಿ ಆವೃತ್ತಿಯನ್ನು ಜನರ ಅನುಕೂಲಕ್ಕಾಗಿ ಪರಿಷ್ಕೃತ ಮಾಹಿತಿಯೊಂದಿಗೆ ತರಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1627188

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಚಂಡೀಗಢ: ಕಂಟೈನ್ಮೆಂಟ್ ವಲಯಗಳಲ್ಲಿ ತಮ್ಮ ಕರ್ತವ್ಯವನ್ನು ನಿರ್ವಹಿಸುವಾಗ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನಗರಸಭೆ, ಪೊಲೀಸ್ ಮತ್ತು ಆರೋಗ್ಯ ಅಧಿಕಾರಿಗಳು ಸೇರಿದಂತೆ ಎಲ್ಲಾ ಸರ್ಕಾರಿ ಸಿಬ್ಬಂದಿಗೆ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ನಿರ್ದೇಶನ ನೀಡಿದ್ದಾರೆ. ಕಂಟೈನ್ಮೆಂಟ್ ವಲಯಗಳಲ್ಲಿ ಸಾಕಷ್ಟು ಪಡಿತರ ಪದಾರ್ಥಗಳನ್ನು ವಿತರಿಸಲಾಗಿದೆಯೆ ಎಂದು ಆಡಳಿತಾಧಿಕಾರಿಗಳು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ. ಖಾಸಗಿ ದಾನಿಗಳು ಮತ್ತು ಎನ್‌.ಜಿಒಗಳು ಸಹ ಉದ್ದೇಶಕ್ಕಾಗಿ ಕೊಡುಗೆ ನೀಡಬೇಕು. ಕಂಟೈನ್ಮೆಂಟ್ ವಲಯಗಳಲ್ಲಿ ನಿಯಮಿತವಾಗಿ ನೈರ್ಮಲ್ಯೀಕರಣವನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಮಾದರಿ ಕೇಂದ್ರಗಳ ವೈದ್ಯಕೀಯ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಆಡಳಿತಾಧಿಕಾರಿ ಮುನ್ಸಿಪಲ್ ಕಾರ್ಪೊರೇಶನ್ಗೆ ನಿರ್ದೇಶನ ನೀಡಿದರು. ಇಂದು ಒಬ್ಬ ಗರ್ಭಿಣಿ ತನ್ನ ಪತಿ ಮತ್ತು ಒಂದು ಮಗುವಿನೊಂದಿಗೆ ಶ್ರಮಿಕ ವಿಶೇಷ ರೈಲಿನಲ್ಲಿ ಉತ್ತರ ಪ್ರದೇಶಕ್ಕೆ ಹೋಗಲು ಹೋಲ್ಡಿಂಗ್ ಕೇಂದ್ರಕ್ಕೆ ಬಂದಿದ್ದರು. ವೈದ್ಯಕೀಯ ತಪಾಸಣೆಯ ನಂತರ ಆಕೆಯನ್ನು ರೈಲು ಹತ್ತಲು ರೈಲ್ವೆ ನಿಲ್ದಾಣಕ್ಕೆ ಕಳುಹಿಸಲಾಯಿತು. ಅಲ್ಲಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು. ಆಕೆಯನ್ನು ಜಿಎಂಸಿಎಚ್ -32 ಗೆ ಕರೆದೊಯ್ಯಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ತೀವ್ರವಾದ ನೋವು ಅನುಭವಿಸುತ್ತಿರುವುದನ್ನು ಪರಿಗಣಿಸಿ ಆಕೆಯನ್ನು ಮಣಿಮಾಜ್ರಾದ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದರು. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
  • ಪಂಜಾಬ್: ಪಂಜಾಬ್ ಸರ್ಕಾರವು ವಾಯು, ರೈಲು ಮತ್ತು ರಸ್ತೆಯ ಮೂಲಕ ಬರುವ ಎಲ್ಲಾ ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರಯಾಣಿಕರಿಗೆ ಏಕೀಕೃತ ಮತ್ತು ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾಜ್ಯ ಸರ್ಕಾರದ ಪ್ರಕಾರ, ವೈರಸ್ ಹರಡುವುದನ್ನು ನಿರ್ಬಂಧಿಸುವ ಏಕೈಕ ಮಾರ್ಗವೆಂದರೆ ತೀವ್ರಗತಿಯ ಪರೀಕ್ಷೆ, ಪತ್ತೆಹಚ್ಚುವಿಕೆ ಮತ್ತು ಪ್ರತ್ಯೇಕೀಕರಣವಾಗಿದೆ. ಸಾಮಾನ್ಯ ಕಣ್ಗಾವಲು ಉದ್ದೇಶಕ್ಕಾಗಿ, ಸರ್ಕಾರವು ದೇಶೀಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಒಳಬರುವ ವ್ಯಕ್ತಿಗಳನ್ನು ರಾಂಡಮ್ ಆಧಾರದ ಮೇಲೆ ಪರೀಕ್ಷಿಸಲಿದೆ. ಉದಾಹರಣೆಗೆ ಅಮೃತಸರ ಮತ್ತು ಮೊಹಾಲಿ ವಿಮಾನ ನಿಲ್ದಾಣಗಳಲ್ಲಿ ಕೆಲವು ದೇಶೀಯ ಪ್ರಯಾಣಿಕರನ್ನು ರಾಂಡಮ್ ಆಧಾರದ ಮೇಲೆ ತಪಾಸಣೆ ಮಾಡಲಾಯಿತು.
  • ಹರಿಯಾಣ: ಲಾಕ್ ಡೌನ್ ಅವಧಿಯಲ್ಲಿನ ನಿರ್ಬಂಧಗಳ ಅನುಸರಣೆಯಲ್ಲಿ ಜನರು ತೋರಿದ ತಾಳ್ಮೆ ಮತ್ತು ಬೆಂಬಲ ಹಾಗೂ ರಾಜ್ಯ ಸರ್ಕಾರ ಮಾಡಿದ ಸಮರ್ಥ ವ್ಯವಸ್ಥೆಗಳು ಸಾಂಕ್ರಾಮಿಕ ರೋಗವನ್ನು ಎದುರಿಸಲು ಸಹಾಯ ಮಾಡಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
  • ಹಿಮಾಚಲ ಪ್ರದೇಶ: ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, 2020 ಮಾರ್ಚ್ 24 ರಿಂದ ಇಡೀ ರಾಜ್ಯದಲ್ಲಿ ಕರ್ಫ್ಯೂ ವಿಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 2020 ಮೇ 23 ರಂದು ನಡೆದ ರಾಜ್ಯ ಸಚಿವ ಸಂಪುಟವು 2020 ಮೇ 23 ರಂದು ನಡೆದ ಸಭೆಯಲ್ಲಿ ಪರಿಸ್ಥಿತಿಗೆ ಅನುಗುಣವಾಗಿ 2020 ಜೂನ್ 30 ರವರೆಗೆ ಸೆಕ್ಷನ್ 144 ಅಡಿಯಲ್ಲಿ ಕರ್ಫ್ಯೂ ವಿಸ್ತರಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲು ನಿರ್ಧರಿಸಲಾಗಿದೆ.
  • ಕೇರಳ: ವಿವಿಧ ಭಾಗಗಳಿಂದ ವ್ಯಾಪಕವಾದ ಪ್ರತಿಭಟನೆಗಳು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಾವತಿ ಸಾಂಸ್ಥಿಕ ಕ್ವಾರಂಟೈನ್ ನಿರ್ಧರಣೆಯಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ. ಜನರು ಲಾಕ್ಡೌನ್ ಸಡಿಲಗೊಳಿಸಿರುವುದನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ನಿರ್ಬಂಧಗಳನ್ನು ವ್ಯಾಪಕವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ರಾಜ್ಯ ಸಂಪುಟ ತೀರ್ಮಾನಿಸಿದೆ. ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಪ್ರಸ್ತುತ 415 ಪ್ರಕರಣಗಳಲ್ಲಿ 231 ಪ್ರಕರಣಗಳು ಕಳೆದ ನಾಲ್ಕು ದಿನಗಳಲ್ಲಿ ದಾಖಲಾಗಿವೆ, ನಿನ್ನೆ 67 ಪ್ರಕರಣಗಳು ದಾಖಲಾಗಿದ್ದವು. ಪೈಕಿ 133 ಸೋಂಕಿತರು ವಿದೇಶಗಳಿಂದ ಮತ್ತು 178 ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ವಿದೇಶದಿಂದ ಮರಳಲು ನೋಂದಾಯಿಸಿಕೊಂಡಿರುವ 1.35 ಲಕ್ಷ ಜನರಲ್ಲಿ 11,189 ಮಾತ್ರ ಈವರೆಗೆ ಮರಳಿದ್ದಾರೆ.
  • ತಮಿಳುನಾಡು: ಸುಮಾರು 47,150 ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿರುವ 15,128 ಕೋಟಿ ರೂ.ಗಳ 17 ಹೂಡಿಕೆ ಒಪ್ಪಂದಗಳಿಗೆ ರಾಜ್ಯ ಸರ್ಕಾರ ಸಹಿ ಹಾಕಿದೆ. ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡಲು ಚೆನ್ನೈ ಮೂಲದ ಬಿಲ್ರೋತ್ ಹಾಸ್ಪಿಟಲ್ಸ್ ಲಿಮಿಟೆಡ್ ಮೊದಲ ನಾಲ್ಕು ಮಹಡಿಗಳನ್ನು ಬಳಸುವಂತೆ ಸುಪ್ರೀಂಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಹೇಳಿದೆ; ಅನುಮೋದಿತ ಕಟ್ಟಡ ನಕ್ಷೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಆಸ್ಪತ್ರೆಯ ಎಂಟು ಅಂತಸ್ತಿನ ಬ್ಲಾಕ್ ಪೈಕಿ ಮೇಲಿನ ಐದು ಮಹಡಿಗಳನ್ನು ನೆಲಸಮಗೊಳಿಸುವ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸರ್ವೋನ್ನತ ನ್ಯಾಯಾಲಯ ತಡೆ ನೀಡಿದೆ. ತಿರುಚಿ ಕೇಂದ್ರ ಕಾರಾಗೃಹದ ಕೈದಿಯಲ್ಲಿ ಸೋಂಕು ದೃಢಪಟ್ಟಿದೆ.; ಅದೇ ಬ್ಲಾಕ್ನಲ್ಲಿದ್ದ ಇತರ 28 ಕೈದಿಗಳನ್ನು ಅಧಿಕಾರಿಗಳು ಪ್ರತ್ಯೇಕಿಸಿದ್ದಾರೆ. ನಿನ್ನೆ ತನಕ ಒಟ್ಟು ಪ್ರಕರಣಗಳು: 17728, ಸಕ್ರಿಯ ಪ್ರಕರಣಗಳು: 8256, ಸಾವು: 127, ಡಿಸ್ಚಾರ್ಜ್: 9342. ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 6056.
  • ಕರ್ನಾಟಕ: ಇಂದು ಮಧ್ಯಾಹ್ನ 12 ರವರೆಗೆ 122 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 14 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು ಒಂದು ಸಾವು ವರದಿಯಾಗಿದೆ; ಇಂದು ಹೊಸ ಪ್ರಕರಣಗಳು ಕಲ್ಬುರ್ಗಿ 28, ಯಾದಗಿರಿ 16, ಹಾಸನ 15, ಬೀದರ್ 12, ದಕ್ಷಿಣ ಕನ್ನಡ 11, ಉಡುಪಿ 9, ಉತ್ತರ ಕನ್ನಡ 6, ರಾಯಚೂರು 5, ಬೆಳಗಾವಿ 4, ಚಿಕ್ಕಮಗಳೂರು 3, ವಿಜಯಪುರ 2 ಮತ್ತು ಮಂಡ್ಯ, ತುಮಕೂರು ಮತ್ತು ಬಳ್ಳಾರಿಯಲ್ಲಿ ತಲಾ ಒಂದು ಪ್ರಕರಣಗಳು. ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಕರಣಗಳು 2405 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು: 1596, ಚೇತರಿಸಿಕೊಂಡವು: 762, ಸಾವುಗಳು: 45.
  • ಆಂಧ್ರಪ್ರದೇಶ: ಲಾಕ್ಡೌನ್ ನಿಯಮಗಳ ಉಲ್ಲಂಘನೆ ಕುರಿತಂತೆ ಪ್ರತಿಪಕ್ಷ ನಾಯಕ ಚಂದ್ರಬಾಬು ನಾಯ್ಡು ವಿರುದ್ಧ ಸಲ್ಲಿಸಿದ್ದ ಅರ್ಜಿಯ ಕುರಿತಂತೆ ಹೈಕೋರ್ಟ್ ವಿಚಾರಣೆ ನಡೆಸಲಿದೆ. ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಆಹಾರ ಮಳಿಗೆಗಳು, ಜವಳಿ, ಆಭರಣ ಮಳಿಗೆಗಳನ್ನು ಪುನಃ ತೆರೆಯಲು ರಾಜ್ಯವು ಅನುಮತಿ ನೀಡುತ್ತಿದೆ. ಕಳೆದ 24 ಗಂಟೆಗಳಲ್ಲಿ 9664 ಮಾದರಿಗಳನ್ನು ಪರೀಕ್ಷಿಸಿದ ನಂತರ 68 ಹೊಸ ಪ್ರಕರಣಗಳು ವರದಿಯಾಗಿದ್ದು, 10 ಮಂದಿ ಬಿಡುಗಡೆಯಾಗಿದ್ದಾರೆ, ಒಂದು ಸಾವು ವರದಿಯಾಗಿದೆ. ಒಟ್ಟು ಪ್ರಕರಣಗಳು: 2787. ಸಕ್ರಿಯ: 816, ಚೇತರಿಸಿಕೊಂಡವರು: 1913, ಸಾವು: 58. ಇತರ ರಾಜ್ಯಗಳಿಂದ ಬಂದವರ ಸೋಂಕಿನ ಪ್ರಕರಣಗಳು 219 ಅವುಗಳಲ್ಲಿ ಸಕ್ರಿಯ ಪ್ರಕರಣಗಳು 75. ವಿದೇಶದಿಂದ ಬಂದವರಲ್ಲಿ ಸೋಂಕಿನ ಪ್ರಕರಣಗಳು 111 ರಷ್ಟಿದೆ.
  • ತೆಲಂಗಾಣ: ಮಹಾರಾಷ್ಟ್ರದೊಂದಿಗಿನ ತೆಲಂಗಾಣದ ಗಡಿ ಜಿಲ್ಲೆಗಳು ಮಿಡತೆ ದಾಳಿ ವಿರುದ್ಧ ತೀವ್ರ ಎಚ್ಚರಿಕೆ ವಹಿಸಿವೆ. ಸಾಮಾಜಿಕ ಅಂತರದ ಲೋಪದಿಂದ ಹೈದರಾಬಾದ್ ಮತ್ತು ರಂಗರೆಡ್ಡಿಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಮೇ 27 ರಂದು ತೆಲಂಗಾಣದಲ್ಲಿ ಒಟ್ಟು ಸೋಂಕಿನ ಪ್ರಕರಣಗಳು 1991 ಆಗಿವೆ. ನಿನ್ನೆ 172 ವಲಸಿಗರಲ್ಲಿ ಸೋಂಕು ದೃಢಪಟ್ಟಿದೆ. ವಿದೇಶದಿಂದ ಮರಳಿದ 42ಜನರು ಕೋವಿಡ್ 19 ಗೆ ಸೋಂಕಿತರಾಗಿದ್ದಾರೆ.
  • ಮಹಾರಾಷ್ಟ್ರ: 2,091 ಹೊಸ ಪ್ರಕರಣಗಳು ವರದಿಯಾಗಿದ್ದು, ಕೋವಿಡ್-19 ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 54,758 ಕ್ಕೆ ಏರಿದೆ, 36,004 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿ ಉಳಿದಿವೆ. ಹಾಟ್ ಸ್ಪಾಟ್ ಮುಂಬೈನಲ್ಲಿ 1,002 ಪ್ರಕರಣಗಳು ವರದಿಯಾಗಿವೆ, ಇದು ಮುಂಬೈಯಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆಯನ್ನು 32,791 ಕ್ಕೆ ಹೆಚ್ಚಿಸಿದೆ. ಮಹಾರಾಷ್ಟ್ರದಲ್ಲಿ 72 ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿದ್ದು, 27 ಹೊಸ ಕೇಂದ್ರಗಳು ಶೀಘ್ರ ಕಾರ್ಯಾಚರಣೆಗೆ ಬರಲಿವೆ. ರಾಜ್ಯದಲ್ಲಿ ಕೋವಿಡ್ ಡಬ್ಲಿಂಗ್ ದರ 14 ದಿನಗಳಿಗೆ ಏರಿಕೆಯಾಗಿದೆ ಮತ್ತು ಸಾವಿನ ದರ ಶೇ.3.27ಕ್ಕೆ ಇಳಿದಿದೆ.
  • ಗುಜರಾತ್: ಸುಮಾರು 19 ಜಿಲ್ಲೆಗಳಿಂದ 361 ಹೊಸ ಪ್ರಕರಣಗಳು ವರದಿಯಾಗಿದ್ದು, ಸೋಂಕಿನ ಪ್ರಕರಣಗಳ ಸಂಖ್ಯೆ 14, 829 ಕ್ಕೆ ತಲುಪಿದೆ, ಈಗ ರಾಜ್ಯದಲ್ಲಿ 6,777 ಸಕ್ರಿಯ ಪ್ರಕರಣಗಳಿವೆ.
  • ರಾಜಸ್ಥಾನ: ಇಂದು 144 ಹೊಸ ಪ್ರಕರಣಗಳು ವರದಿಯಾಗಿದ್ದು, ಕೋವಿಡ್-19 ಸೋಂಕಿನ ಸಂಖ್ಯೆಯನ್ನು 7680 ಕ್ಕೆ ಹೆಚ್ಚಿಸಿದೆ, ರಾಜ್ಯದಲ್ಲಿ 4341 ರೋಗಿಗಳು ಚೇತರಿಸಿಕೊಂಡಿದ್ದಾರೆ. ರಾಜ್ಯದಿಂದ ಇಲ್ಲಿಯವರೆಗೆ ಒಟ್ಟು 172 ಸಾವುಗಳು ವರದಿಯಾಗಿವೆ. ಕೋವಿಡ್-19 ಸಿರೊ-ಸಮೀಕ್ಷೆ ನಡೆಯುವ ನಗರಗಳ ಐಸಿಎಂಆರ್ ಪಟ್ಟಿಯಲ್ಲಿ ಜೈಪುರವೂ ಸೇರಿದೆ.
  • ಮಧ್ಯಪ್ರದೇಶ: 165 ಹೊಸ ಪ್ರಕರಣಗಳು ವರದಿಯಾಗಿದ್ದು, ಕೋವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆಯನ್ನು 7,024 ಕ್ಕೆ ಏರಿದೆ, ಪೈಕಿ 3030 ಪ್ರಕರಣಗಳು ಸಕ್ರಿಯವಾಗಿವೆ. ಹಾಟ್ ಸ್ಪಾಟ್ ಇಂದೋರ್ ನಲ್ಲಿ ಇಲ್ಲಿಯವರೆಗೆ ಗರಿಷ್ಠ 3103 ಸೋಂಕಿನ ಪ್ರಕರಣಗಳನ್ನು ವರದಿ ಆಗಿವೆ. ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿರುವ ಭಾಗವಾಗಿ ಭೋಪಾಲ್ನಲ್ಲಿ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳು ಇಂದು ತೆರೆಯಲ್ಪಟ್ಟವು. ಬೆಳಗ್ಗೆ 11 ರಿಂದ ಸಂಜೆ 5 ರವರೆಗೆ ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ.
  • ಛತ್ತೀಸಗಢ: 50 ಹೊಸ ಕರೋನಾ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 271 ಕ್ಕೆ ಏರಿದೆ. ರಾಜ್ಯ ಸರ್ಕಾರವು ಕೊರೊನಾ ವೈರಾಣು ಪ್ರಸರಣ ತಡೆಗೆ ರಾಜ್ಯದ ಹದಿಮೂರು ಅಭಿವೃದ್ಧಿ ವಿಭಾಗಗಳನ್ನು ಕೆಂಪು ವಲಯವೆಂದು ಮತ್ತು 39ನ್ನು ಕಿತ್ತಳೆ ವಲಯ ಎಂದು ವರ್ಗೀಕರಿಸಿದೆ. ಇದಲ್ಲದೆ, ಇತ್ತೀಚೆಗೆ ರಾಜ್ಯದಲ್ಲಿ ಕೋವಿಡ್ ಪತ್ತೆಯಾಗಿರುವ 95 ಪ್ರದೇಶಗಳನ್ನು, ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ.
  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶಕ್ಕೆ ಮೇ ಮತ್ತು ಜೂನ್ಗಾಗಿ ಇದುವರೆಗೆ 313.956 ಮೆಟ್ರಿಕ್ ಟನ್ ದ್ವಿದಳ ಧಾನ್ಯಗಳನ್ನು ನಾಫೆಡ್ ತಲುಪಿಸಿದೆ.
  • ಅಸ್ಸಾಂ: ಕೋವಿಡ್ 19 ರೋಗಿಗಳ ಅನುಕೂಲಕ್ಕಾಗಿ ಸೋನಾಪುರ ಜಿಲ್ಲಾ ಹಾಸ್ಪಿಟಲ್ ಈಗ 108 ಹಾಸಿಗೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವರು ಹೇಳಿದ್ದಾರೆ. ಅಸ್ಸಾಂನಲ್ಲಿ 18 ಹೊಸ ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳು 704, ಸಕ್ರಿಯ 635, ಚೇತರಿಸಿಕೊಂಡ 62, ಸಾವು 4 ಎಂದು ರಾಜ್ಯ ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ.
  • ಮಣಿಪುರ: ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದುರ್ಬಲರಿಗೆ ನೆರವು ನೀಡಲು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ (ಐಜಿಎನ್‌.ಒಎಪಿಎಸ್), ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ವೇತನ ಪಿಂಚಣಿ ಯೋಜನೆ (ಐಜಿಎನ್‌.ಡಬ್ಲ್ಯುಪಿಎಸ್) ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ದಿವ್ಯಾಂಗರ ಪಿಂಚಣಿ ಯೋಜನೆ (ಐಜಿಎನ್‌.ಡಿಪಿಎಸ್) ಫಲಾನುಭವಿಗಳಿಗೆ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ 500 ರೂ. ಎಕ್ಸ್ ಗ್ರೇಷಿಯಾ ಪರಿಹಾರವನ್ನು ಸರ್ಕಾರ ನೀಡಲಿದೆ.
  • ಮಿಜೋರಾಂ: ಮಿಜೋರಾಂ ಶಾಲಾ ಶಿಕ್ಷಣ ಮಂಡಳಿ 2020ಜೂನ್ 16 ರಂದು 11 ಕೇಂದ್ರಗಳಲ್ಲಿ ಎಚ್‌.ಎಸ್ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಪರೀಕ್ಷೆ ಮತ್ತು ಎಚ್‌.ಎಸ್‌.ಎಲ್‌.ಸಿ ಪರೀಕ್ಷೆ (ವಿಭಾಗೀಯ) ಪುನರಾರಂಭಿಸಲು ನಿರ್ಧರಿಸಿದೆ.
  • ನಾಗಾಲ್ಯಾಂಡ್: ಸಿಲುಕಿರುವ ನಾಗರಿಕರ ಸಾಗಾಟಕ್ಕೆ ಗೋವಾ, ಆಂಧ್ರಪ್ರದೇಶ, ಬೆಂಗಳೂರು, ರಾಜಸ್ಥಾನದಿಂದ ವಿಶೇಷ ರೈಲುಗಳು ಮತ್ತು ಪಶ್ಚಿಮ ಬಂಗಾಳ, ಉತ್ತರಾಖಂಡ, ಪಂಜಾಬ್, ದಮನ್ ಮತ್ತು ಡಿಯು ಮತ್ತು ಲಕ್ನೋದಿಂದ ವಿಶೇಷ ಬಸ್ಸುಗಳನ್ನು ಸರ್ಕಾರ ವ್ಯವಸ್ಥೆ ಮಾಡಿದೆ. ಕೋವಿಡ್-19 ತೋಟಗಾರಿಕೆ ವಿಶೇಷ ಅಭಿಯಾನ ತಂಡವು "ಹೆಚ್ಚು ಬೆಳೆಯಿರಿ, ಹೆಚ್ಚು ಉತ್ಪಾದಿಸಿ, ಹೆಚ್ಚು ಸಂಪಾದಿಸಿ" ಎಂಬ ಧ್ಯೇಯದೊಂದಿಗೆ ಲಾಕ್ಡೌನ್ ಸಮಯದಲ್ಲಿ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆಗಳನ್ನು ನಡೆಸುತ್ತಿದೆ.

ಪಿ ಐ ಬಿ ವಾಸ್ತವ ಪರಿಶೀಲನೆ

***

 



(Release ID: 1627306) Visitor Counter : 280