ಪ್ರಧಾನ ಮಂತ್ರಿಯವರ ಕಛೇರಿ

ಕತಾರ್ ದೇಶದ ಅಮೀರ್ ಶ್ರೀ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಡುವೆ ದೂರವಾಣಿ ಮಾತುಕತೆ

Posted On: 26 MAY 2020 7:51PM by PIB Bengaluru

ಕತಾರ್ ದೇಶದ ಅಮೀರ್ ಶ್ರೀ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಮತ್ತು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಡುವೆ ದೂರವಾಣಿ ಮಾತುಕತೆ

 

ಕತಾರ್ ಸ್ನೇಹಮಯಿ ಜನರಿಗೆ ಈದ್-ಉಲ್-ಫಿತರ್ ಶುಭಾಶಯಗಳನ್ನು ತಿಳಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಕತಾರ್ ರಾಷ್ಟ್ರದ ಅಮೀರ್ ಶ್ರೀ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.

ಕೋವಿಡ್ -19 ಸಾಂಕ್ರಾಮಿಕ ಸಂದರ್ಭದಲ್ಲಿ ಕತಾರ್ನಲ್ಲಿ ಭಾರತೀಯ ನಾಗರಿಕರ ಯೋಗಕ್ಷೇಮವನ್ನು ಖಾತ್ರಿಪಡಿಸಿಕೊಳ್ಳಲು ಗೌರವಾನ್ವಿತ ಅಮೀರ್ ಅವರು ಕೈಗೊಂಡ ವೈಯಕ್ತಿಕ ಕಾಳಜಿಯನ್ನು ಪ್ರಧಾನಿಯವರು ಶ್ಲಾಘಿಸಿದರು. ಪ್ರತಿಯಾಗಿ, ಅಮೀರ್ ಅವರು ಕತಾರ್ ನಲ್ಲಿರುವ ಭಾರತೀಯ ಸಮುದಾಯದ ಕೊಡುಗೆಗಳನ್ನು, ವಿಶೇಷವಾಗಿ ಭಾರತೀಯ ಆರೋಗ್ಯ ಕಾರ್ಯಕರ್ತರು ವಹಿಸುತ್ತಿರುವ ಪಾತ್ರವನ್ನು ಪ್ರಶಂಸಿಸಿದರು.

ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದಿಂದ ಕತಾರ್ಗೆ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ಯಾವುದೇ ಅಡ್ಡಿ ಉಂಟಾಗದಂತೆ ಭಾರತೀಯ ಅಧಿಕಾರಿಗಳು ಗಮನ ಹರಿಸುತ್ತಿರುವ ಬಗ್ಗೆ ಪ್ರಧಾನಿಯವರು ತಿಳಿಸಿದರು.

ಗೌರವಾನ್ವಿತ ಅಮೀರ್ ಅವರ ಮುಂಬರುವ 40 ನೇ ಜನ್ಮದಿನಕ್ಕೆ ಪ್ರಧಾನಿಯವರು ಶುಭಾಶಯಗಳನ್ನು ತಿಳಿಸಿದರು ಮತ್ತು ಅವರ ಉತ್ತಮ ಆರೋಗ್ಯ ಮತ್ತು ಯಶಸ್ಸಿಗೆ ಶುಭ ಹಾರೈಸಿದರು.

***


(Release ID: 1627048) Visitor Counter : 257