PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 26 MAY 2020 6:36PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

ಕೋವಿಡ್ -19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಭಾರತದಲ್ಲಿ ಈಗ ದಿನಕ್ಕೆ ಅಂದಾಜು 1.1 ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ. ಪ್ರಯೋಗಾಲಯಗಳು, ಪಾಳಿಗಳು, ಆರ್ಟಿ-ಪಿಸಿಆರ್ ಯಂತ್ರಗಳು ಮತ್ತು ಮಾನವಶಕ್ತಿಯ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಕೋವಿಡ್-19 ಸೋಂಕಿನ ಪರೀಕ್ಷೆಗಾಗಿ ಇದುವರೆಗೆ, ಭಾರತವು ಒಟ್ಟು 612 ಪ್ರಯೋಗಾಲಯಗಳನ್ನು ಹೊಂದಿದ್ದು, ಇವುಗಳಲ್ಲಿ 430 ಪ್ರಯೋಗಾಲಯಗಳನ್ನು ಐಸಿಎಂಆರ್ ನಡೆಸುತ್ತಿದೆ ಮತ್ತು 182 ಖಾಸಗಿ ವಲಯದವುಗಳಾಗಿವೆ. ಕೋವಿಡ್-19 ಪರೀಕ್ಷೆಗೆ TrueNAT ಯಂತ್ರಗಳನ್ನು ನಿಯೋಜಿಸಲು ಬಹುತೇಕ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮದೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಆರ್ಟಿ-ಪಿಸಿಆರ್-ಕಿಟ್ಗಳು, ವಿಟಿಎಂ, ಸ್ವ್ಯಾಬ್ಗಳು ಮತ್ತು ಆರ್ಎನ್ ಪ್ರತ್ಯೇಕತಾ ಕಿಟ್ಗಳ ಸ್ಥಳೀಯ ತಯಾರಕರನ್ನು ಗುರುತಿಸಲಾಗಿದೆ ಮತ್ತು ಕಳೆದ ಕೆಲವು ತಿಂಗಳುಗಳಲ್ಲಿ ಅವುಗಳ ಉತ್ಪಾದನೆಗೆ ಅನುಕೂಲ ಕಲ್ಪಿಸಲಾಗಿದೆ.

ದೇಶದಲ್ಲಿ ಚೇತರಿಕೆ ದರವು ಸುಧಾರಣೆಯಾಗುತ್ತಿದೆ ಮತ್ತು ಪ್ರಸ್ತುತ ಇದು ಶೇ.41.61 ಆಗಿದೆ. ಕೋವಿಡ್-19 ರಿಂದ ಈವರೆಗೆ ಒಟ್ಟು 60,490 ರೋಗಿಗಳು ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಸಾವಿನ ಪ್ರಮಾಣವು ಶೇ.3.30 ರಿಂದ (ಏಪ್ರಿಲ್ 15 ರಲ್ಲಿ) ಪ್ರಸ್ತುತ ಶೇ.2.87 ಕ್ಕೆ ಇಳಿದಿದೆ. ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಮರಣ ಪ್ರಮಾಣವಾಗಿದೆ. ಕೋವಿಡ್ ಪ್ರಕರಣಗಳ ಸಾವಿನ ಜಾಗತಿಕ ಸರಾಸರಿ ಪ್ರಸ್ತುತ ಶೇ.6.45 ರಷ್ಟಿದೆ. ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಸುಮಾರು 0.3 ಸಾವುಗಳು ಸಂಭವಿಸಿವೆ. ವಿಶ್ವದಲ್ಲಿ  ಒಂದು ಲಕ್ಷ ಜನಸಂಖ್ಯೆಗೆ 4.4 ಸಾವುಗಳಾಗಿವೆ. ಪ್ರತಿ ಲಕ್ಷ ಜನಸಂಖ್ಯೆ ಮತ್ತು ಪ್ರಕರಣಗಳ ಸಾವಿನ ಪ್ರಮಾಣಕ್ಕೆ ಅನುಗುಣವಾಗಿ ತುಲನಾತ್ಮಕವಾಗಿ ಕಡಿಮೆ ಸಾವಿನ ಪ್ರಮಾಣದ ಅಂಕಿಅಂಶಗಳು, ಪ್ರಕರಣಗಳ ಸಮಯೋಚಿತ ಪತ್ತೆಹಚ್ಚುವಿಕೆ ಮತ್ತು ಕ್ಲಿನಿಕಲ್ ನಿರ್ವಹಣೆಯನ್ನು ಸಾಬೀತುಪಡಿಸುತ್ತವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626926

ಒಳಬರುವ ವಲಸೆ ಕಾರ್ಮಿಕರಲ್ಲಿ ಏರಿಕೆ ಕಾಣುತ್ತಿರುವ 5 ರಾಜ್ಯಗಳೊಂದಿಗೆ ಆರೋಗ್ಯ ಕಾರ್ಯದರ್ಶಿ ಸಭೆ

ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಸುಡಾನ್, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಚತ್ತೀಸ್ಗಢ ಮತ್ತು ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಕಾರ್ಯದರ್ಶಿಗಳು ಮತ್ತು ಎನ್ಎಚ್ಎಂ ನಿರ್ದೇಶಕರೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದರು. ಲಾಕ್ಡೌನ್ ನಿಯಮಗಳನ್ನು ಸಡಿಲಿಸಲಿಕೆ ಮತ್ತು ಅಂತರ-ರಾಜ್ಯ ವಲಸೆಯಿಂದಾಗಿ ರಾಜ್ಯಗಳಲ್ಲಿ ಕಳೆದ ಮೂರು ವಾರಗಳಿಂದ ಕೋವಿಡ್-19 ಪ್ರಕರಣಗಳು ಉಲ್ಬಣಗೊಳ್ಳುತ್ತಿವೆ, ಕ್ವಾರಂಟೈನ್ ಕೇಂದ್ರಗಳು, ಐಸಿಯು / ವೆಂಟಿಲೇಟರ್ / ಆಮ್ಲಜನಕ ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಗಳು ಮತ್ತು ಮುಂದಿನ ಎರಡು ತಿಂಗಳುಗಳ ಅಗತ್ಯತೆಗೆ ಅನುಗುಣವಾಗಿ ಅವುಗಳನ್ನು ಬಲಪಡಿಸಲು ರಾಜ್ಯಗಳು ಗಮನ ಹರಿಸಬೇಕು ಎಂದು ಪುನರುಚ್ಚರಿಸಲಾಯಿತು. ಕೋವಿಡೇತರ ಅಗತ್ಯ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದಂತೆ, ಟಿಬಿ, ಕುಷ್ಠರೋಗ, ಸಿಒಪಿಡಿ, ಸಾಂಕ್ರಾಮಿಕವಲ್ಲದ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಅಪಘಾತಗಳ ಚಿಕಿತ್ಸೆಗಳಿಗೆ ಅಗತ್ಯವಾದ ಆರೋಗ್ಯ ಕಾರ್ಯಕ್ರಮಗಳನ್ನು ಮುಂದುವರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ರಾಜ್ಯಗಳಿಗೆ ಸೂಚಿಸಲಾಯಿತು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626886

ಭಾರತೀಯ ರೈಲ್ವೆಯು ದೇಶಾದ್ಯಂತ 3274 “ಶ್ರಮಿಕ್ ವಿಶೇಷರೈಲುಗಳನ್ನು ಓಡಿಸಿದೆ ಮತ್ತು 44 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಅವರ ರಾಜ್ಯಗಳಿಗೆ ತಲುಪಿಸಿದೆ

ಮೇ 25, 2020 ಹೊತ್ತಿಗೆ, ದೇಶಾದ್ಯಂತ ವಿವಿಧ ರಾಜ್ಯಗಳಿಂದ ಒಟ್ಟು 3274 “ಶ್ರಮಿಕ್ ವಿಶೇಷರೈಲುಗಳನ್ನು ಓಡಿಸಲಾಗಿದೆ. ಶ್ರಮಿಕ್ ವಿಶೇಷರೈಲುಗಳಿಂದ 44 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ರಾಜ್ಯಗಳನ್ನು ತಲುಪಿದ್ದಾರೆ. 25.05.2020 ರಂದು 223 ಶ್ರಮಿಕ್ ವಿಶೇಷ ರೈಲುಗಳು 2.8 ಲಕ್ಷ ಪ್ರಯಾಣಿಕರನ್ನು ಸಾಗಿಸಿದವು. ಐಆರ್ಸಿಟಿಸಿ 74 ಲಕ್ಷಕ್ಕೂ ಹೆಚ್ಚು ಉಚಿತ ಊಟ ಮತ್ತು 1 ಕೋಟಿಗೂ ಹೆಚ್ಚು ನೀರಿನ ಬಾಟಲಿಗಳನ್ನು ಪ್ರಯಾಣಿಕರಿಗೆ ವಿತರಿಸಿದೆ. ಇಂದು ಸಂಚರಿಸುತ್ತಿರುವ ರೈಲುಗಳಲ್ಲಿ ಯಾವುದೇ ದಟ್ಟಣೆ ಇಲ್ಲ ಎಂಬುದು ಗಮನಾರ್ಹವಾದುದು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626922

ಭಾರತೀಯ ರೈಲ್ವೆಯು 2020 ಮೇ 25 ರವರೆಗೆ (10:00 ಗಂಟೆ) 3060 “ಶ್ರಮಿಕ್ ವಿಶೇಷರೈಲುಗಳನ್ನು ದೇಶಾದ್ಯಂತ ಓಡಿಸಿದೆ ಮತ್ತು 25 ದಿನಗಳಲ್ಲಿ ಶ್ರಮಿಕ್ ವಿಶೇಷರೈಲುಗಳ ಮೂಲಕ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಅವರ ರಾಜ್ಯಗಳಿಗೆ ತಲುಪಿಸಿದೆ

ಮೇ 25, 2020 ಹೊತ್ತಿಗೆ (10:00 ಗಂಟೆಯವರೆಗೆ), ದೇಶದ ವಿವಿಧ ರಾಜ್ಯಗಳಿಂದ ಒಟ್ಟು 3060 “ಶ್ರಮಿಕ್ ವಿಶೇಷರೈಲುಗಳನ್ನು ಓಡಿಸಲಾಗಿದೆ. ಶ್ರಮಿಕ್ ವಿಶೇಷರೈಲುಗಳಿಂದ 40 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ತಮ್ಮ ಸ್ಥಳಗಳನ್ನು ತಲುಪಿದ್ದಾರೆ. 2020 ಮೇ 23/24 ರಂದು ಕಂಡುಬಂದ ರೈಲು ಮಾರ್ಗ ದಟ್ಟಣೆ ಮುಗಿದಿದೆ. ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಹೋಗುವ ಮಾರ್ಗಗಳಲ್ಲಿ ಮೂರನೇ ಎರಡರಷ್ಟು ರೈಲು ಸಂಚಾರ ಮತ್ತು ಆರೋಗ್ಯ ಶಿಷ್ಟಾಚಾರಗಳ ಕಾರಣದಿಂದಾಗಿ ಟರ್ಮಿನಲ್ಗಳನ್ನು ರಾಜ್ಯಾಡಳಿತಗಳು ತಡವಾಗಿ ತೆರವುಗೊಳಿಸಿದ್ದರಿಂದ ದಟ್ಟಣೆ ಕಂಡುಬಂದಿತ್ತು. ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ಮತ್ತು ಪ್ರಯಾಣಕ್ಕಾಗಿ ಇತರ ಕಾರ್ಯಸಾಧ್ಯವಾದ ಮಾರ್ಗಗಳನ್ನು ಕಂಡುಕೊಳ್ಳುವ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626773

ಹೋಟೆಲ್ಗಳು ಮತ್ತು ಇತರ ವಸತಿ ಸೌಕರ್ಯಗಳ ಅನುಮೋದನೆ / ವರ್ಗೀಕರಣದ ಮಾನ್ಯತೆಯ ಅವಧಿಯನ್ನು 2020 ಜೂನ್ 30 ರವರೆಗೆ ವಿಸ್ತರಿಸಿದ ಪ್ರವಾಸೋದ್ಯಮ ಸಚಿವಾಲಯ

ಪ್ರವಾಸೋದ್ಯಮ ಸಚಿವಾಲಯವು ವಿವಿಧ ವರ್ಗದ ಪ್ರವಾಸಿಗರಿಗೆ ನಿರೀಕ್ಷಿತ ಮಾನದಂಡಗಳಿಗೆ ಅನುಗುಣವಾಗಿ ಸ್ಟಾರ್ ರೇಟಿಂಗ್ ವ್ಯವಸ್ಥೆಯಡಿ ಹೋಟೆಲ್ಗಳನ್ನು ವರ್ಗೀಕರಿಸುತ್ತದೆ. ವರ್ಗೀಕರಣ / ಪ್ರಮಾಣೀಕರಣವು ಐದು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಅವಧಿ ಮೀರಿರುವ / ಅವಧಿ ಮುಗಿಯಲಿರುವ (24.03.2020 ರಿಂದ 29.6.2020 ರವರೆಗೆ) ಹೋಟೆಲ್ಗಳು ಮತ್ತು ಇತರ ವಸತಿ ಸೌಕರ್ಯಗಳ ಅನುಮೋದನೆ ಅಥವಾ ಪ್ರಮಾಣೀಕರಣದ ಮಾನ್ಯತೆಯು ಯೋಜನೆಯ ಅನುಮೋದನೆಗಳು / ಮರು ಅನುಮೋದನೆಗಳು ಮತ್ತು ವರ್ಗೀಕರಣ / ಪುನರ್ ವರ್ಗೀಕರಣವನ್ನು 30.06.2020 ರವರೆಗೆ ವಿಸ್ತರಿಸಲಾಗಿದೆ. ಅಂತೆಯೇ, ಟ್ರಾವೆಲ್ ಏಜೆಂಟ್ಸ್, ಪ್ರವಾಸ ನಿರ್ವಾಹಕರು, ಸಾಹಸ ಪ್ರವಾಸ ನಿರ್ವಾಹಕರು, ದೇಶೀಯ ಪ್ರವಾಸ ನಿರ್ವಾಹಕರು ಮತ್ತು ಪ್ರವಾಸಿಗರ ಸಾರಿಗೆ ನಿರ್ವಾಹಕರನ್ನು ಅನುಮೋದಿಸುವ ಯೋಜನೆಯನ್ನು ಸಚಿವಾಲಯವು ಹೊಂದಿದೆ. ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ 2020 ಮಾರ್ಚ್ ನಿಂದ ಲಾಕ್ ಡೌನ್ ಅವಧಿಯಲ್ಲಿ ತಪಾಸಣೆ ಕಾರ್ಯ ಮತ್ತು ಅರ್ಜಿ ಪರಿಶೀಲನೆಯನ್ನು ಮುಂದೂಡಲಾಗಿದೆ. ಕೆಲವು ಷರತ್ತುಗಳಿಗೆ ಒಳಪಟ್ಟು ಎಲ್ಲಾ ವರ್ಗದ ಟೂರ್ ಆಪರೇಟರ್ಗಳಿಗೆ (ಒಳಬರುವ, ದೇಶೀಯ, ಸಾಹಸ) ಪ್ರಯಾಣ ಏಜೆಂಟರು ಮತ್ತು ಪ್ರವಾಸಿ ಸಾರಿಗೆ ನಿರ್ವಾಹಕರಿಗೆ ಪ್ರವಾಸೋದ್ಯಮ ಸಚಿವಾಲಯದ ಅನುಮೋದನೆಗಾಗಿ ಆರು ತಿಂಗಳ ರಿಯಾಯ್ತಿ ಅಥವಾ ವಿಸ್ತರಣೆಯನ್ನು ಒದಗಿಸಲು ಪ್ರವಾಸೋದ್ಯಮ ಸಚಿವಾಲಯ ನಿರ್ಧರಿಸಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626879

ಅಬುಧಾಬಿ ರಾಜಕುಮಾರ ಹಾಗೂ ಪ್ರಧಾನಿ ಮೋದಿ ನಡುವೆ ದೂರವಾಣಿ ಮಾತುಕತೆ

ಅಬುಧಾಬಿಯ ರಾಜಕುಮಾರ ಶ್ರೀ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಮಾತುಕತೆ ನಡೆಸಿ ಸರ್ಕಾರ ಮತ್ತು ಯುಎಇ ಜನತೆಗೆ ಈದ್-ಉಲ್-ಫಿತರ್ ಶುಭಾಶಯಗಳನ್ನು ತಿಳಿಸಿದರು.

ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಉಭಯ ದೇಶಗಳ ನಡುವಿನ ಪರಿಣಾಮಕಾರಿ ಸಹಕಾರದ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಯುಎಇಯಲ್ಲಿ ಭಾರತೀಯ ನಾಗರಿಕರಿಗೆ ನೀಡಿದ ಬೆಂಬಲಕ್ಕಾಗಿ ಪ್ರಧಾನಿ ಮೋದಿ ರಾಜಕುಮಾರರಿಗೆ ಧನ್ಯವಾದ ತಿಳಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626784

ಕೋವಿಡ್-19 ನಿಗ್ರಹ ಕುರಿತು ಆಸ್ಟ್ರೇಲಿಯಾದ ರಕ್ಷಣಾ ಸಚಿವರೊಂದಿಗೆ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ದೂರವಾಣಿ ಮಾತುಕತೆ

ಶ್ರೀ ರಾಜನಾಥ್ ಸಿಂಗ್ ಅವರು ಇಂದು ಆಸ್ಟ್ರೇಲಿಯಾದ ರಕ್ಷಣಾ ಸಚಿವೆ ಶ್ರೀಮತಿ ಲಿಂಡಾ ರೆನಾಲ್ಡ್ಸ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ಇಬ್ಬರೂ ರಕ್ಷಣಾ ಮಂತ್ರಿಗಳು ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ತಮ್ಮ ಪ್ರತಿಕ್ರಿಯೆಗಳ ಕುರಿತು ಚರ್ಚೆ ನಡೆಸಿದರು. ಕೋವಿಡ್ -19 ವಿರುದ್ಧದ ಅಂತರರಾಷ್ಟ್ರೀಯ ಪ್ರಯತ್ನಗಳಿಗೆ ಭಾರತದ ಕೊಡುಗೆ ಕುರಿತು ಶ್ರೀ ರಾಜನಾಥ್ ಸಿಂಗ್ ಶ್ರೀಮತಿ ಲಿಂಡಾ ರೆನಾಲ್ಡ್ಸ್ಅವರಿಗೆ ಮಾಹಿತಿ ನೀಡಿದರು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧದ ಜಾಗತಿಕ ಹೋರಾಟದಲ್ಲಿ ಪರಸ್ಪರ ಸಹಕಾರದ ಕ್ಷೇತ್ರಗಳ ಬಗ್ಗೆ ಚರ್ಚಿಸಿದರು. ಕೋವಿಡ್ -19 ನಂತರದ ಸವಾಲುಗಳನ್ನು ಎದುರಿಸಲು ಭಾರತ-ಆಸ್ಟ್ರೇಲಿಯಾ ಕಾರ್ಯತಂತ್ರದ ಸಹಭಾಗಿತ್ವವು ಇತರ ದೇಶಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಮುಖ್ಯವಾಗಿದೆ ಎಂದು ಅವರು ಸಮ್ಮತಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626905

ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ಗಳ ಮೊದಲ ಮಾದರಿಗಳನ್ನು ಈಗ ಒಂಬತ್ತು ಅಧಿಕೃತ ಪ್ರಯೋಗಾಲಯಗಳು ಪರೀಕ್ಷಿಸಿ ಪ್ರಮಾಣೀಕರಿಸುತ್ತಿವೆ

ಭಾರತದಲ್ಲಿನ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ಗಳನ್ನು ಆರೋಗ್ಯ ವೃತ್ತಿಪರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸೂಚಿಸಿರುವ ತಾಂತ್ರಿಕ ವಿಶೇಷಣಗಳ ಪ್ರಕಾರ ವೈಯಕ್ತಿಕ ಸುರಕ್ಷಾ ಸಾಧನಗಳ ಮೊದಲ ಮಾದರಿಗಳನ್ನು ಒಂಬತ್ತು ಅಧಿಕೃತ ಪ್ರಯೋಗಾಲಯಗಳು ಪರೀಕ್ಷಿಸಿ ಪ್ರಮಾಣೀಕರಿಸುತ್ತಿವೆ. ಪರೀಕ್ಷಾ ಮಾನದಂಡಗಳು ಕೋವಿಡ್-19 ಕುರಿತು WHO ಮಾರ್ಗಸೂಚಿಗಳಿಗೆ ಅನುಗುಣವಾಗಿರುತ್ತವೆ ಮತ್ತು ಐಎಸ್ಒ 16603 ಕ್ಲಾಸ್ 3 ಮತ್ತು ಅದಕ್ಕಿಂತ ಹೆಚ್ಚಿನವುಗಳಿಗೆ ಅನುಗುಣವಾಗಿಸಿಂಥೆಟಿಕ್ ಬ್ಲಡ್ ಪೆನೆಟರೇಶನ್ ರೆಸಿಸ್ಟೆನ್ಸ್ ಟೆಸ್ಟ್ಗಾಗಿ ಪರೀಕ್ಷಿಸಲ್ಪಡುತ್ತವೆ. ಬಳಕೆದಾರರ ಸಂಪೂರ್ಣ ರಕ್ಷಣೆಗಾಗಿ ಯಾವುದೇ ದ್ರವ ಅಥವಾ ಏರೋಸಾಲ್ ಕಣವು ಹಾದುಹೋಗದಂತೆ ನಿರೋಧಕವಾಗಿ ಪಿಪಿಇ ಗಳನ್ನು ವಿನ್ಯಾಸಗೊಳಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626932

ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆರ್. ಕೆ. ಮಾಥುರ್ ಮತ್ತು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರಿಂದ ಕೇಂದ್ರಾಡಳಿತ ಪ್ರದೇಶದ ಕೋವಿಡ್ ಪರಿಸ್ಥಿತಿ ಮತ್ತು ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ಚರ್ಚೆ

ಲಡಾಖ್ ಲೆಫ್ಟಿನೆಂಟ್ ಗವರ್ನರ್ ಶ್ರೀ ಆರ್ ಕೆ ಮಾಥುರ್ ಅವರು ಇಂದು ಡಾ.ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿ ಕೋವಿಡ್ ಪರಿಸ್ಥಿತಿ ಮತ್ತು ಹೊಸದಾಗಿ ರಚಿಸಲಾದ ಕೇಂದ್ರಾಡಳಿತ ಪ್ರದೇಶದಲ್ಲಿನ ಅಭಿವೃದ್ಧಿ ಚಟುವಟಿಕೆಗಳ ಪುನಶ್ಚೇತನ ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚಿಸಿದರು. ಕೇಂದ್ರಾಡಳಿತ ಪ್ರದೇಶದ ಆಡಳಿತವು ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸಿದ ಮತ್ತು ಅದನ್ನು ನಿಗ್ರಹಿಸುವಲ್ಲಿ ಪಟ್ಟ ಪರಿಶ್ರಮಕ್ಕೆ ಸರ್ಕಾರದ ಮೆಚ್ಚುಗೆಯನ್ನು ಡಾ. ಜಿತೇಂದ್ರ ಸಿಂಗ್ ಅವರು ಔಪಚಾರಿಕವಾಗಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ತಿಳಿಸಿದರು,. ಇರಾನ್ ಯಾತ್ರೆಯಿಂದ ಮರಳಿದವರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾದಾಗ ಅದು ಇಡೀ ದೇಶಕ್ಕೆ ಆರಂಭಿಕ ಎಚ್ಚರಿಕೆಯನ್ನು ನೀಡಿತು ಎಂದು ಸಚಿವರು ತಿಳಿಸಿದರು. ಆದರೆ ಕೊರೊನಾ ದಾಳಿಯಿಂದ ಕ್ರಮೇಣ ಹೊರಬಂದ ಲಡಾಖ್ ಮೊದಲಿಗನಾಗಿದ್ದು, ಇದರ ಶ್ರೇಯ ಆಡಳಿತ ಮತ್ತು ನಾಗರಿಕ ಸಮಾಜಕ್ಕೆ ಸಲ್ಲುತ್ತದೆ ಎಮದು ಅವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626929

ಸಣ್ಣ ಉದ್ಯಮಗಳನ್ನು ಬೆಂಬಲಿಸಲು ಸರ್ಕಾರವು ಹಣಕಾಸು ಒದಗಿಸುವ  ಹೊಸ ಸಂಸ್ಥೆಗಳನ್ನು ಅನ್ವೇಷಿಸುತ್ತಿದೆ - ಶ್ರೀ ನಿತಿನ್ ಗಡ್ಕರಿ

ಹಣಕಾಸಿನ ನೆರವಿನ ದೃಷ್ಟಿಯಿಂದ ಸಣ್ಣ ಉದ್ಯಮಗಳನ್ನು ಬೆಂಬಲಿಸಲು ಸರ್ಕಾರವು ಹಣಕಾಸು ಸಾಲ ನೀಡುವ ಹೊಸ ಸಂಸ್ಥೆಗಳನ್ನು ಅನ್ವೇಷಿಸುತ್ತಿದೆ ಎಂದು ಎಂಎಸ್ಎಂಇ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಸಣ್ಣ ಉದ್ಯಮಗಳಿಗೆ ಸುಲಭ ಸಾಲ ಪಡೆಯಲು ಸಹಾಯ ಮಾಡುವ ಎನ್ಬಿಎಫ್ಸಿಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಶ್ರೀ ಗಡ್ಕರಿ ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626778

ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಪೌಷ್ಠಿಕ ಆಹಾರವನ್ನು ಒದಗಿಸಲು ಆರ್ಇಸಿ ಲಿಮಿಟೆಡ್ ತಾಜ್ಸಾಟ್ಸ್ನೊಂದಿಗೆ ಕೈಜೋಡಿಸಿದೆ

ಆರ್ಇಸಿ ಲಿಮಿಟೆಡ್ ಸಾಮಾಜಿಕ ಹೊಣೆಗಾರಿಕೆ ಅಂಗವಾದ ಆರ್ಇಸಿ ಫೌಂಡೇಶನ್ ನವದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿಗೆ ವಿಶೇಷವಾಗಿ ತಯಾರಿಸಿದ ಪೌಷ್ಟಿಕ ಆಹಾರ ಪ್ಯಾಕೆಟ್ಗಳನ್ನು ವಿತರಿಸಲು ತಾಜ್ಸಾಟ್ಸ್ (ಐಎಚ್ಸಿಎಲ್ ಮತ್ತು ಎಸ್ಎಟಿಎಸ್ ಲಿಮಿಟೆಡ್ ಜಂಟಿ ಉದ್ಯಮ) ನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ನವದೆಹಲಿಯ ಮುಂಚೂಣಿ ಆರೋಗ್ಯ ಯೋಧರಿಗೆ ಕೃತಜ್ಞತೆಯ ಸೂಚಕವಾಗಿ ಪ್ರತಿದಿನ 300 ಆಹಾರ ಪ್ಯಾಕೆಟ್ಗಳನ್ನು ವಿತರಿಸಲಾಗುತ್ತಿದೆ. ಉಪಕ್ರಮದ ಮೂಲಕ ನವದೆಹಲಿಯಲ್ಲಿ 18,000 ಕ್ಕೂ ಹೆಚ್ಚು ಊಟವನ್ನು ಒದಗಿಸಲಾಗುವುದು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626872

ಸಿಎಸ್ಐಆರ್ -ಐಐಐಎಂ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಕೊರೊನಾವೈರಸ್ ಪತ್ತೆಗೆ RT-LAMP ಆಧಾರಿತ ಪರೀಕ್ಷೆಯನ್ನು ಅಭಿವೃದ್ಧಿಪಡಿಸಲಿವೆ

RT-LAMP, ದೇಶೀಯ ಬಿಡಿಭಾಗಗಳೊಂದಿಗೆ ತ್ವರಿತ, ನಿಖರ ಮತ್ತು ವೆಚ್ಚ-ಪರಿಣಾಮಕಾರಿ ಪರೀಕ್ಷೆಯಾಗಿದೆ ಮತ್ತು ಕನಿಷ್ಠ ಪರಿಣತಿ ಮತ್ತು ಸಲಕರಣೆಗಳೊಂದಿಗೆ ಇದನ್ನು ಸ್ಥಾಪಿಸಬಹುದಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626931

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಕೇರಳ: ಇತರ ರಾಜ್ಯಗಳು ಮತ್ತು ವಿದೇಶಗಳಿಂದ ಹಿಂದಿರುಗಿದವರಲ್ಲಿ ಹೆಚ್ಚಿನ ಪ್ರಕರಣಗಳು ಹೊರಬರುತ್ತಿರುವುದರಿಂದ ಕೋವಿಡ್ ವಿರುದ್ಧದ ಹೋರಾಟದಲ್ಲಿ ರಾಜ್ಯವನ್ನು ಸಂಪೂರ್ಣವಾಗಿ ಬೆಂಬಲಿಸುವಂತೆ ರಾಜ್ಯದ ಸಂಸದರು ಮತ್ತು ಶಾಸಕರೊಂದಿಗೆ ನಡೆದ ವಿಸಿಯಲ್ಲಿ ಮುಖ್ಯಮಂತ್ರಿ ಒತ್ತಾಯಿಸಿದರು. ಮುಂದೂಡಲಾಗಿದ್ದ ಎಸ್‌.ಎಸ್‌.ಎಲ್‌.ಸಿ ಮತ್ತು ಪ್ರೌಢ ಶಿಕ್ಷಣ ಪರೀಕ್ಷೆಗಳು ಕಟ್ಟುನಿಟ್ಟಾದ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳಿಗೆ ಬದ್ಧವಾಗಿ ಇಂದು ರಾಜ್ಯದಲ್ಲಿ ಪುನರಾರಂಭಗೊಂಡಿವೆ. ಮದ್ಯ ಮಾರಾಟಕ್ಕಾಗಿ BevQ ವರ್ಚುವಲ್ ಕ್ಯೂ ಮ್ಯಾನೇಜ್ಮೆಂಟ್ ಅಪ್ಲಿಕೇಶನ್ಗೆ ಗೂಗಲ್ ಅನುಮತಿ ನೀಡಿದೆ; ಮದ್ಯ ಮಾರಾಟ ವಾರ ಪುನಾರಂಭಗೊಳ್ಳಲಿದೆ. ಏತನ್ಮಧ್ಯೆ, ಇನ್ನೂ ಮೂರು ಕೇರಳಿಗರು ಕೊಲ್ಲಿಯಲ್ಲಿ ಕೋವಿಡ್ – 19ರಿಂದ ಮೃತಪಟ್ಟಿದ್ದು, ಸಾವಿನ ಸಂಖ್ಯೆ 120 ದಾಟಿದೆ. ರಾಜ್ಯವು ತನ್ನ ಆರನೇ ಕೋವಿಡ್ ಸಾವು ಮತ್ತು 49 ಹೊಸ ಪ್ರಕರಣಗಳನ್ನು ನಿನ್ನೆ ದಾಖಲಿಸಿದೆ.
  • ತಮಿಳುನಾಡು: ಪುದುಚೇರಿಯಲ್ಲಿ ಇನ್ನೂ ಎರಡು ಕೋವಿಡ್ -19 ಪ್ರಕರಣಗಳು ವರದಿಯಾಗಿವೆ, ಒಟ್ಟು ಪ್ರಕರಣಗಳ ಸಂಖ್ಯೆ 34 ಕ್ಕೆ ಏರಿದೆ. ತಮಿಳುನಾಡು ಮೀನುಗಾರರಿಗೆ ಪರಿಹಾರವಾಗಿ, 14 ದಿನಗಳ ಮುಂಚಿತವಾಗಿ ಮೇ 31ರಂದು ವಾರ್ಷಿಕ ಪ್ರಯಾಣ ನಿಷೇಧವನ್ನು ತೆಗೆದುಹಾಕಲಾಗುತ್ತಿದೆ. ಕೋವಿಡ್-19 ದೃಢಪಟ್ಟ 118 ಜನರು ರಾಜ್ಯದಲ್ಲಿ ಮೃತಪಟ್ಟಿದ್ದು, ಶೇ. 84ರಷ್ಟು ಜನರಲ್ಲಿ ಸಹ-ಅಸ್ವಸ್ಥತೆ ಇತ್ತು ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಒಂದೇ ದಿನದ ಅತಿ ಹೆಚ್ಚು ಪ್ರಕರಣ, 805 ನಿನ್ನೆ ವರದಿಯಾಗಿದೆ. ನಿನ್ನೆ ತನಕ ಒಟ್ಟು ಪ್ರಕರಣಗಳು: 17082, ಸಕ್ರಿಯ ಪ್ರಕರಣಗಳು: 8230, ಸಾವು: 118, ಬಿಡುಗಡೆ: 8731. ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 5911.
  • ಕರ್ನಾಟಕ: ಇಂದು ಮಧ್ಯಾಹ್ನ 12ರವರೆಗೆ 100 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು 17ಮಂದಿ ಬಿಡುಗಡೆಯಾಗಿದ್ದಾರೆ; ಚಿತ್ರದುರ್ಗ 20, ಯಾದಗಿರಿ 14, ಹಾಸನ 13, ಬೆಳಗಾವಿ 13, ದಾವಣಗೆರೆ 11, ಬೀದರ್ 10, ಬೆಂಗಳೂರು 7, ವಿಜಯಪುರ 5, ಉಡುಪಿ ಮತ್ತು ಕೋಲಾರದಲ್ಲಿ ತಲಾ ಎರಡು ಮತ್ತು ಬಳ್ಳಾರಿ, ಕೊಪ್ಪಳ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ ಒಂದು. ರಾಜ್ಯದಲ್ಲಿ ಒಟ್ಟು ಸೋಂಕಿನ ಪ್ರಕರಣಗಳು 2282 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳು: 1514, ಚೇತರಿಸಿಕೊಂಡವರು: 722, ಸಾವು: 44, ಸಕ್ರಿಯ ಪ್ರಕರಣಗಳು 1433. ಮುಖ್ಯಮಂತ್ರಿಯವರು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಪರಿಶೀಲನಾ ಸಭೆ ನಡೆಸಿ ವಿದ್ಯಾರ್ಥಿಗಳಿಗೆ ಕಲಿಸಲು ಆನ್ಲೈನ್ ವೇದಿಕೆಗಳ ಗರಿಷ್ಠ ಬಳಕೆಗೆ ನಿರ್ದೇಶಿಸಿದರು. ಏತನ್ಮಧ್ಯೆ, ಆಯುಷ್ ವೈದ್ಯರ ಬೇಡಿಕೆಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗುತ್ತಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
  • ಆಂಧ್ರಪ್ರದೇಶ: ರೈತರನ್ನು ಎಲ್ಲಾ ಕಷ್ಟಗಳಿಂದ ಪಾರುಮಾಡುವ ಗುರಿ ಹೊಂದಲಾಗಿದ್ದು - ರೈತು ಭರೋಸಾ ಅಡಿಯಲ್ಲಿ ರೈತನಿಗೆ ರೂ .13,500 ಆರ್ಥಿಕ ನೆರವು ನೀಡಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ದೇಶೀಯ ವಿಮಾನಗಳ ಸಂಚಾರ ಪುನರಾರಂಭಗೊಂಡಿದ್ದು, ಬೆಂಗಳೂರಿನಿಂದ 79 ಪ್ರಯಾಣಿಕರು ವಿಜಯವಾಡಕ್ಕೆ ಆಗಮಿಸಿದರು. ಆರು ಸ್ಥಳಗಳಿಂದ ವಿಮಾನದಲ್ಲಿ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ. ಕಳೆದ 24 ಗಂಟೆಗಳಲ್ಲಿ 8148 ಮಾದರಿಗಳ ಪರೀಕ್ಷೆ ನಂತರ 48 ಹೊಸ ಪ್ರಕರಣಗಳು ವರದಿಯಾಗಿದ್ದು, 55 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ಪ್ರಕರಣಗಳು: 2719. ಸಕ್ರಿಯ: 759, ಚೇತರಿಸಿಕೊಂಡವರು: 1903, ಸಾವು: 57. ಇತರ ರಾಜ್ಯಗಳಿಂದ ಆಗಮಿಸಿದವರಲ್ಲಿ ಸೋಂಕಿತ ಪ್ರಕರಣಗಳು 153 ಪೈಕಿ 47ಸಕ್ರಿಯವಾಗಿವೆ. ವಿದೇಶದಿಂದ ಆಗಮಿಸಿದವರಲ್ಲಿನ ಪ್ರಕರಣಗಳು 111.
  • ತೆಲಂಗಾಣ: ತಿಂಗಳು ಸರ್ಕಾರಿ ನೌಕರರಿಗೆ ಪೂರ್ಣ ವೇತನ ನೀಡುವ ಬಗ್ಗೆ ಸ್ಪಷ್ಟತೆ ಇಲ್ಲ. ಶಾಲೆಗಳು ಪುನಃ ತೆರೆಯುವ ದಿನಾಂಕವನ್ನು ರಾಜ್ಯ ಇನ್ನೂ ನಿರ್ಧರಿಸಿಲ್ಲ. ಮೇ 26 ರಂದು ತೆಲಂಗಾಣದಲ್ಲಿ ಒಟ್ಟು ಸೋಂಕಿನ ಪ್ರಕರಣಗಳು 1920. ನಿನ್ನೆ 159 ವಲಸಿಗರಲ್ಲಿ ಸೋಂಕು ದೃಢಪಟ್ಟಿದೆ. ವಿದೇಶದಿಂದ ಮರಳಿದ 38ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ.
  • ಪಂಜಾಬ್: ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಕ್ಷೌರಿಕರ ಅಂಗಡಿಗಳು / ಕೂದಲು ಕತ್ತರಿಸುವ ಸಲೂನ್ಗಳ ನೈರ್ಮಲ್ಯ ಮತ್ತು ಸ್ವಚ್ಛತೆಯವನ್ನು ಕಾಪಾಡಿಕೊಳ್ಳಲು ಪಂಜಾಬ್ ಆರೋಗ್ಯ ಇಲಾಖೆ ವಿವರವಾದ ಸಲಹೆಯನ್ನು ನೀಡಿದೆ. ಕ್ಷೌರಿಕನ ಅಂಗಡಿಗಳು / ಕೂದಲು ಕತ್ತರಿಸುವ ಸಲೂನ್ಗಳ ಮಾಲೀಕರು ಕೋವಿಡ್-19 ಲಕ್ಷಣ (ಜ್ವರ, ಒಣ ಕೆಮ್ಮು, ಉಸಿರಾಟದ ತೊಂದರೆ ಇತ್ಯಾದಿ) ಇರುವವರನ್ನು ಕೆಲಸಕ್ಕೆ ನಿಯೋಜಿಸಿಲ್ಲ ಮತ್ತು ಅನಾರೋಗ್ಯದ ಕಾರಣಕ್ಕೆ ವೈದ್ಯಕೀಯ ಸಲಹೆಯ ಮೇರೆಗೆ ಮನೆಯಲ್ಲಿಯೇ ಇರುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಅದೇ ರೀತಿ ಅಂತಹ ರೋಗಲಕ್ಷಣಗಳನ್ನು ಹೊಂದಿರುವ ಯಾವುದೇ ಗ್ರಾಹಕರಿಗೆ ಸೇವೆ ಒದಗಿಸಬಾರದು.
  • ಹರಿಯಾಣ: ಕೋವಿಡ್-19 ಜಾಗತಿಕ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಹರಿಯಾಣ ರಾಜ್ಯ ಸರ್ಕಾರವು ವಲಸೆ ಬಂದ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಲು ಪ್ರತಿದಿನ ರಾಜ್ಯದ ವಿವಿಧ ರೈಲು ನಿಲ್ದಾಣಗಳಿಂದ ವಿಶೇಷ ಶ್ರಮಿಕ ರೈಲುಗಳನ್ನು ಓಡಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈವರೆಗೆ 2.90 ಲಕ್ಷ ವಲಸೆ ಕಾರ್ಮಿಕರನ್ನು ಹರಿಯಾಣದಿಂದ 77 ವಿಶೇಷ ಶ್ರಮಿಕ ರೈಲುಗಳು ಮತ್ತು 5,500 ಬಸ್ಗಳ ಮೂಲಕ ಅವರವರ ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು. ಇದರ ಜೊತೆಗೆ, ಒಟ್ಟು 11,534 ಜನರು ವಿವಿಧ ರಾಜ್ಯಗಳಿಂದ ಹರಿಯಾಣಕ್ಕೆ ಮರಳಿದ್ದಾರೆ. ವಲಸೆ ಕಾರ್ಮಿಕರ ಕಷ್ಟಗಳನ್ನು ಮನಗಂಡ ಹರಿಯಾಣ ಸರ್ಕಾರವು ಅವರನ್ನು ತಮ್ಮ ರಾಜ್ಯಗಳಿಗೆ ಉಚಿತವಾಗಿ ಕಳುಹಿಸಲು ವ್ಯವಸ್ಥೆ ಮಾಡಿದೆ ಎಂದು ಅವರು ಹೇಳಿದರು.
  • ಹಿಮಾಚಲ ಪ್ರದೇಶ: ಕೋವಿಡ್-19 ಪ್ರಸರಣವನ್ನು ತಡೆಯುವ ಸಲುವಾಗಿ, ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಮುಖ್ಯಮಂತ್ರಿ ರಾಜ್ಯದ ನಿವಾಸಿಗಳಿಗೆ ಮನವಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ಯಾವುದೇ ಕೋವಿಡ್ ಸಂಬಂಧಿತ ಸುದ್ದಿಗಳನ್ನು ಫಾರ್ವರ್ಡ್ ಮಾಡುವ ಮೊದಲು ಅದನ್ನು ಮೊದಲು ಪರಿಶೀಲಿಸುವಂತೆ ಅವರು ಎಲ್ಲರಿಗೂ ತಿಳಿಸಿದ್ದಾರೆ.
  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ 2,436 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಕೋವಿಡ್-19 ಸೋಂಕಿತ ರೋಗಿಗಳ ಸಂಖ್ಯೆ 52,667 ಕ್ಕೆ ತಲುಪಿದೆ. ಈಗ ರಾಜ್ಯದಲ್ಲಿ ಸಕ್ರಿಯ 35,178 ಸಕ್ರಿಯ ಪ್ರಕರಣಗಳಿವೆ; ಪೂರ್ಣ ಚೇತರಿಕೆಯ ನಂತರ ಇಲ್ಲಿಯವರೆಗೆ 15,786 ರೋಗಿಗಳನ್ನು ಬಿಡುಗಡೆ ಮಾಡಲಾಗಿದೆ. ಹಾಟ್ ಸ್ಪಾಟ್ ಮುಂಬೈನಲ್ಲಿ 1430 ಹೊಸ ಪ್ರಕರಣಗಳು ವರದಿ ಆಗಿವೆ. ಧಾರವಿಯ ಕೊಳೆಗೇರಿ ಕ್ಲಸ್ಟರ್ನಲ್ಲಿ ದ್ವಿಗುಣತೆಯ ಪ್ರಮಾಣವು ಹಿಂದಿನ 3 ದಿನಗಳಿಂದ 19 ದಿನಗಳಿಗೆ ಏರಿದೆ ಎಂಬುದು ಸಂತಸದ ಸುದ್ದಿ, ಇದು ಸರ್ಕಾರವು ಅಳವಡಿಸಿಕೊಂಡಿರುವ ಕಂಟೈನ್ಮೆಂಟ್ ತಂತ್ರ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ.
  • ಗುಜರಾತ್: ಇತ್ತೀಚಿನ ವರದಿಯ ಪ್ರಕಾರ, 20 ಜಿಲ್ಲೆಗಳಿಂದ 405 ಹೊಸ ಪ್ರಕರಣಗಳು ವರದಿಯಾಗಿದ್ದು ಒಟ್ಟು ಕೋವಿಡ್- 19 ಪ್ರಕರಣಗಳ ಸಂಖ್ಯೆ 14,468 ಕ್ಕೆ ತಲುಪಿದೆ. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ, 109 ರೋಗಿಗಳು, ಗಂಭೀರ ಸ್ಥಿತಿಯಲ್ಲಿದ್ದು, ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. ಏತನ್ಮಧ್ಯೆ, ಲಾಕ್ ಡೌನ್ ಮಧ್ಯೆ ರಾಜ್ಯದಾದ್ಯಂತ ಮನ್ರೇಗಾ ಯೋಜನೆಯಡಿ ಸುಮಾರು 29,000 ಕ್ಕೂ ಹೆಚ್ಚು ಅಭಿವೃದ್ಧಿ ಕಾರ್ಯಗಳಲ್ಲಿ ಸುಮಾರು 6.80 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಮನ್ರೇಗಾ ಅಡಿಯಲ್ಲಿ ಸುಮಾರು 1.06 ಲಕ್ಷ ಜನರಿಗೆ ಉದ್ಯೋಗ ನೀಡುವಲ್ಲಿ ಬುಡಕಟ್ಟು ಪ್ರಾಬಲ್ಯದ ದಾಹೋಡ್ ಜಿಲ್ಲೆ ಅಗ್ರಸ್ಥಾನದಲ್ಲಿದೆ.
  • ರಾಜಸ್ಥಾನ: ರಾಜ್ಯದಲ್ಲಿ ಇಂದು 75 ಹೊಸ ಕರೋನಾ ರೋಗಿಗಳು ಪತ್ತೆಯಾದ ನಂತರ, ಕೋವಿಡ್-19 ಸೋಂಕಿತರ ಸಂಖ್ಯೆ 7,376 ಕ್ಕೆ ಏರಿದೆ. ಪೈಕಿ 1,844 ಜನರು ಇತ್ತೀಚೆಗೆ ಇತರ ರಾಜ್ಯಗಳಿಂದ ಮರಳಿದ ವಲಸಿಗರಾಗಿದ್ದಾರೆ. ಇದುವರೆಗೆ ಜೈಪುರದಲ್ಲಿ ಅತಿ ಹೆಚ್ಚು 1,844 ಪ್ರಕರಣಗಳು ವರದಿಯಾಗಿದ್ದು, 1,271 ಪ್ರಕರಣಗಳು ಜೋದ್ಪುರದಿಂದ ಮತ್ತು 505 ಪ್ರಕರಣಗಳು ಉದಯಪುರದಿಂದ ವರದಿಯಾಗಿವೆ. ಇಂದಿನಿಂದ ಜಾರಿಗೆ ಬರುವಂತೆ ಕೆಂಪು ವಲಯ ಪ್ರದೇಶಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಟ್ಯಾಕ್ಸಿಗಳು ಮತ್ತು ಆಟೋರಿಕ್ಷಾಗಳ ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಮತ್ತು ಆಸ್ಪತ್ರೆಗಳಿಂದ ಮಾತ್ರ ಇವುಗಳನ್ನು ನಿರ್ವಹಿಸಲಾಗುತ್ತಿದೆ.
  • ಮಧ್ಯಪ್ರದೇಶ: ಕಳೆದ 24 ಗಂಟೆಗಳಲ್ಲಿ 194 ಹೊಸ ಪ್ರಕರಣಗಳು ವರದಿಯಾಗಿವೆ. ಇದರ ಪರಿಣಾಮವಾಗಿ, ಕರೋನಾ ವೈರಸ್ ಸೋಂಕಿತರ ಸಂಖ್ಯೆ 6,859 ಕ್ಕೆ ಏರಿದೆ.
  • ಛತ್ತೀಸಗಢ: ರಾಜ್ಯದಲ್ಲಿ ಸೋಮವಾರ 40 ಹೊಸ ಕರೋನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 220 ಕ್ಕೆ ಏರಿದೆ. ಮುಂಗೇಲಿಯೊಂದರಲ್ಲೇ 30 ಹೊಸ ಪ್ರಕರಣಗಳನ್ನು ದಾಖಲಾಗಿವೆ.
  • ಗೋವಾ: ಒಂದು ಹೊಸ ಪ್ರಕರಣ ವರದಿಯಾಗಿದೆ, ಇದುವರೆಗೆ ವರದಿಯಾಗಿರುವ 67 ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 48 ಆಗಿದೆ.
  • ಅಸ್ಸಾಂ: ಅಸ್ಸಾಂನಲ್ಲಿ, ಹೊರಗಿನಿಂದ ಬರುವ ಜನರಿಗೆ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದೆ, ಕೋವಿಡ್ 19 ವಿರುದ್ಧ ತಡೆಗಟ್ಟುವ ಕ್ರಮವಾಗಿ ಯಾವುದೇ ಹೋಂ ಕ್ಯಾರೆಂಟೈನ್ ಅನ್ನು ಅನುಮತಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಂತ್ರಿ ಪರಿಷತ್ತಿನ ಸಭೆಯಲ್ಲಿ ನಿರ್ಧರಿಸಲಾಗಿದೆ. 2020 ಏಪ್ರಿಲ್ ನಿಂದ ಜೂನ್ ವರೆಗೆ ಪ್ರತಿ ತಿಂಗಳು ಹೊರಗೆ ಸಿಲುಕಿರುವ ಅಸ್ಸಾಂನ 3.6 ಲಕ್ಷ ಜನರಿಗೆ 'ಅಸ್ಸಾಂ ಕೇರ್' ಅಡಿಯಲ್ಲಿ ರೂ.2000 ಆರ್ಥಿಕ ನೆರವು ನೀಡಲು ಅಸ್ಸಾಂ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಮಂತ್ರಿ ಪರಿಷತ್ತಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ.
  • ಮಣಿಪುರ: ಮಣಿಪುರದಲ್ಲಿ ಇಂಫಾಲ್ ಪಶ್ಚಿಮದಲ್ಲಿ ಮೂವರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಒಟ್ಟು ಪ್ರಕರಣಗಳ ಸಂಖ್ಯೆ 39 ಕ್ಕೆ ಏರಿದೆ, ಮತ್ತು 35 ಸಕ್ರಿಯ ಪ್ರಕರಣಗಳಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಮಿಜೋರಾಂ: ಕೋವಿಡ್ 19 ಕಾರಣದಿಂದಾಗಿ ಮಿಜೋರಾಂನಲ್ಲಿ ಸಿಲುಕಿರುವ ರಾಜಸ್ಥಾನ, ಕೇರಳ, ಅರುಣಾಚಲ ಪ್ರದೇಶ, ಉತ್ತರ ಪ್ರದೇಶ ಮತ್ತು ಹರಿಯಾಣದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದಾಗಿ ತಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮಿಜೋರಾಂ ರಾಜ್ಯಪಾಲರು ಭರವಸೆ ನೀಡಿದ್ದಾರೆ.
  • ನಾಗಾಲ್ಯಾಂಡ್: ನಾಗಾಲ್ಯಾಂಡ್ನಲ್ಲಿ ಶಾಲೆಗಳನ್ನು ಪುನಃ ತೆರೆಯಲು ತಕ್ಷಣದ ಯೋಜನೆ ರೂಪಿಸಿಲ್ಲ. ಟಿವಿಗಳು ಮತ್ತು ಡಿಜಿಟಲ್ ವೇದಿಕೆಗಳ ಮೂಲಕ ವಿದ್ಯಾರ್ಥಿಗಳು ಕಲಿಕೆಯನ್ನು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಆಗಮನದ ಮೊದಲ ದಿನದಿಂದಲೇ ರಾಜ್ಯಕ್ಕೆ ಪ್ರವೇಶಿಸುವ ಎಲ್ಲರಿಗೂ ನಾಗಾಲ್ಯಾಂಡ್ ಸರ್ಕಾರ ತಪಾಸಣೆಯನ್ನು ಕಡ್ಡಾಯಗೊಳಿಸಿದೆ.
  • ಸಿಕ್ಕಿಂ: ಕೇರಳದಿಂದ ವಿಶೇಷ ಶ್ರಮಿಕ ರೈಲಿನ ಮೂಲಕ 79 ಸಿಕ್ಕಿಮಿಗರು ನ್ಯೂ ಜಲ್ಪೈಗುರಿ ನಿಲ್ದಾಣಕ್ಕೆ ಆಗಮಿಸಿದರು. ಆಗಮನದ ನಂತರ ಅವರನ್ನು ಸಿಕ್ಕಿಂ ರಾಷ್ಟ್ರೀಕೃತ ಸಾರಿಗೆ ಬಸ್ಗಳು ಆಯಾ ಜಿಲ್ಲೆಗಳಿಗೆ ಮರಳಿಸಿದವು.

ಪಿ ಐ ಬಿ ವಾಸ್ತವ ಪರಿಶೀಲನೆ

***



(Release ID: 1627031) Visitor Counter : 357