PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 25 MAY 2020 6:31PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.png

https://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

ಕೋವಿಡ್ -19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್; ಚೇತರಿಕೆ ದರ ಶೇ.41.57 ಕ್ಕೆ  ಗೆ ಸುಧಾರಣೆ

ಇದುವರೆಗೆ ಒಟ್ಟು 57,720 ಜನರನ್ನು ಗುಣಪಡಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 3280 ರೋಗಿಗಳು ಗುಣಮುಖರಾಗಿದ್ದಾರೆ. ಒಟ್ಟು ಚೇತರಿಕೆ ದರ ಶೇ.41.57. ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಈಗ 1,38,845. ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವ  ಸಕ್ರಿಯ ಪ್ರಕರಣಗಳ ಸಂಖ್ಯೆ 77,103.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626735

ದೇಶದ ಹೊರಗೆ ಸಿಲುಕಿರುವ ಭಾರತೀಯ ಪ್ರಜೆಗಳ ಸಂಚಾರಕ್ಕೆ ಹಾಗೂ ಭಾರತದಲ್ಲಿ ಸಿಲುಕಿರುವ ವ್ಯಕ್ತಿಗಳು ತುರ್ತು ಕಾರಣಗಳಿಗಾಗಿ ವಿದೇಶ ಪ್ರವಾಸ ಮಾಡಲು ಇಚ್ಛಿಸುವವರಿಗೆ ಗೃಹ ಸಚಿವಾಲಯದಿಂದ ಎಸ್ಒಪಿ.

ಕೇಂದ್ರ ಗೃಹ ಸಚಿವಾಲಯ (ಎಂಎಚ್) ದೇಶದ ಹೊರಗೆ ಸಿಲುಕಿರುವ ಭಾರತೀಯ ಪ್ರಜೆಗಳ ಸಂಚಾರಕ್ಕಾಗಿ ಮತ್ತು ತುರ್ತು ಕಾರಣಗಳಿಗಾಗಿ ವಿದೇಶ ಪ್ರವಾಸ ಮಾಡಲು ಬಯಸುವ ಭಾರತದಲ್ಲಿ ಸಿಲುಕಿರುವ ವ್ಯಕ್ತಿಗಳಿಗೆ ಸಾಮಾನ್ಯ ಕಾರ್ಯವಿಧಾನ ಶಿಷ್ಟಾಚಾರ (ಎಸ್ಒಪಿ) ಬಿಡುಗಡೆ ಮಾಡಿದೆ. ಎಸ್ಒಪಿಗಳು ಭೂ ಗಡಿಯ ಮೂಲಕ ಬರುವ ಪ್ರಯಾಣಿಕರಿಗೂ ಅನ್ವಯಿಸುತ್ತವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626329

ಕಟ್ಟುನಿಟ್ಟಾದ ಶಿಷ್ಟಾಚಾರಗಳ ಮೂಲಕ ಪಿಪಿಇಗಳ ಗುಣಮಟ್ಟದ ಖಾತ್ರಿ

ವೈಯಕ್ತಿಕ ರಕ್ಷಣಾ ಸಾಧನಗಳ(ಪಿಪಿಇ) ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಖರೀದಿ ಸಂಸ್ಥೆಯಾದ ಎಚ್ಎಲ್ಎಲ್ ಲೈಫ್ಕೇರ್ ಲಿಮಿಟೆಡ್ (ಎಚ್ಎಲ್ಎಲ್) ತಯಾರಕರು / ಪೂರೈಕೆದಾರರಿಂದ ಪಿಪಿಇಗಳನ್ನು ಖರೀದಿಸುತ್ತಿದೆ, ಜವಳಿ ಸಚಿವಾಲಯವು ಪರೀಕ್ಷೆಗಾಗಿ ನಾಮನಿರ್ದೇಶನ ಮಾಡಿರುವ ಎಂಟು ಪ್ರಯೋಗಾಲಯಗಳ ಪೈಕಿ ಒಂದರಲ್ಲಿ ಪರೀಕ್ಷೆಗೊಳಪಡಿಸಿ ಅಂಗೀಕಾರ ನೀಡಿದ ನಂತರವೇ ಇವುಗಳನ್ನು ಖರೀದಿಸಲಾಗುತ್ತಿದೆ.

ಭಾರತವು ಪಿಪಿಇಗಳು ಮತ್ತು ಎನ್ 95 ಮುಖಗವಸುಗಳ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಅವಶ್ಯಕತೆಗಳನ್ನು ಸಾಕಷ್ಟು ಪೂರೈಸಲಾಗುತ್ತಿದೆ. ಇಂದು, ದೇಶವು ದಿನಕ್ಕೆ 3 ಲಕ್ಷಕ್ಕೂ ಹೆಚ್ಚು ಪಿಪಿಇ ಮತ್ತು ಎನ್ 95 ಮುಖಗವಸುಗಳನ್ನು ತಯಾರಿಸುತ್ತಿದೆ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ಸುಮಾರು 111.08 ಲಕ್ಷ ಎನ್ -95 ಮುಖಗವಸುಗಳನ್ನು ಮತ್ತು ಸುಮಾರು 74.48 ಲಕ್ಷ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ಒದಗಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626699

ಎನ್ಪಿಪಿಎ ಹೊರಡಿಸಿದ ಸಲಹೆಯ ನಂತರ ಎನ್ -95 ಮುಖಗವಸುಗಳ ಆಮದುದಾರರು/ ತಯಾರಕರು/ ಪೂರೈಕೆದಾರರಿಂದ ಎನ್ -95 ಮುಖವಾಡಗಳ ಬೆಲೆಗಳಲ್ಲಿ ಕಡಿತ

ಅಗತ್ಯ ಸರಕುಗಳ ಕಾಯ್ದೆ 1955 ಅಡಿಯಲ್ಲಿ ಸರ್ಕಾರವು ಎನ್ -95 ಮುಖಗವಸುಗಳನ್ನು ಅತ್ಯಗತ್ಯ ಸರಕು ಎಂದು ಪ್ರಕಟಿಸಿದೆ. ಹೀಗಾಗಿ, ಅವುಗಳ ಸಂಗ್ರಹಣೆ, ಕಾಳ ಮಾರುಕಟ್ಟೆಯು ಶಿಕ್ಷಾರ್ಹ ಅಪರಾಧವಾಗಿದೆ. ಅವುಗಳ ಸಂಗ್ರಹ, ಕಾಳಮಾರುಕಟ್ಟೆಯನ್ನು ತಡೆಯಲು, ಗರಿಷ್ಠ ಚಿಲ್ಲರೆ ಬೆಲೆಯನ್ನು ಮೀರದ ಬೆಲೆಯಲ್ಲಿ ಶಸ್ತ್ರಚಿಕಿತ್ಸಾ ಮತ್ತು ರಕ್ಷಣಾತ್ಮಕ ಮುಖಗವಸುಗಳು, ಹ್ಯಾಂಡ್ ಸ್ಯಾನಿಟೈಜರ್ಗಳು ಮತ್ತು ಕೈಗವಸುಗಳ ಸಾಕಷ್ಟು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಎನ್ಪಿಪಿಎ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತ್ತು. ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎನ್ -95 ಮುಖಗವಸುಗಳನ್ನು ನಿರಂತರವಾಗಿ ಪೂರೈಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ, ಸರ್ಕಾರವು ಎನ್ -95 ಮುಖಗವಸುಗಳನ್ನು ತಯಾರಕರು / ಆಮದುದಾರರು / ಪೂರೈಕೆದಾರರಿಂದ ನೇರವಾಗಿ ಖರೀದಿಸುತ್ತಿದೆ. ದೇಶದಲ್ಲಿ ಕೈಗೆಟುಕುವ ಬೆಲೆಯಲ್ಲಿ ಎನ್ -95 ಮುಖಗವಸುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಎನ್ -95 ಮುಖಗವಸುಗಳ ಎಲ್ಲಾ ತಯಾರಕರು / ಆಮದುದಾರರು / ಪೂರೈಕೆದಾರರಿಗೆ ಸರ್ಕಾರೇತರ ಖರೀದಿಗಳ ಬೆಲೆಗಳಲ್ಲಿಯೂ ಸಮಾನತೆಯನ್ನು ಕಾಪಾಡಿಕೊಳ್ಳಲು ಮತ್ತು ಸಮಂಜಸವಾದ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು ಎನ್ಪಿಪಿಎ 2020 ಮೇ 21 ರಂದು ಸಲಹಾ ಸೂಚನೆ ಹೊರಡಿಸಿತ್ತು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626743

 

ನಜಫ್ಗಢದ ಚೌಧರಿ ಬ್ರಹ್ಮ ಪ್ರಕಾಶ್ ಆಯುರ್ವೇದ ಚರಕ್ ಸಂಸ್ಥಾನದ ಕೋವಿಡ್ -19 ಆರೋಗ್ಯ ಕೇಂದ್ರಕ್ಕೆ ಡಾ. ಹರ್ಷವರ್ಧನ್ ಭೇಟಿ

ನವದೆಹಲಿಯ ನಜಾಫ್ಗಢದ ಚೌಧರಿ ಬ್ರಹ್ಮ್ ಪ್ರಕಾಶ್ ಆಯುರ್ವೇದ ಚರಕ್ ಸಂಸ್ಥಾನ್ನಲ್ಲಿರುವ ಕೋವಿಡ್ -19 ಆರೋಗ್ಯ ಕೇಂದ್ರಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಭೇಟಿ ನೀಡಿದರು. "ಆಯುರ್ವೇದವು ಭಾರತದಿಂದ ಬಂದ ಸಾಂಪ್ರದಾಯಿಕ ಔಷಧೀಯ ಜ್ಞಾನ ಮೂಲವಾಗಿದೆ ಮತ್ತು ಅದರಲ್ಲಿ ದೊಡ್ಡ ಸಾಮರ್ಥ್ಯವಿದೆ. ಡಿಸಿಎಚ್ಸಿಯಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ಸಮಗ್ರ ಚಿಕಿತ್ಸೆ ಮತ್ತು ಯೋಗಕ್ಷೇಮದಲ್ಲಿ ಇದರ ಅಂತರ್ಗತ ಶಕ್ತಿಯನ್ನು ಉತ್ತಮವಾಗಿ ಬಳಕೆ ಮಾಡಲಾಗುತ್ತಿದೆ. ಜ್ಞಾನ ಮತ್ತು ಅನುಭವವು ವಿಶೇಷವಾಗಿ ಕೋವಿಡ್-19 ವಿರುದ್ಧದ ಯುದ್ಧವನ್ನು ಎದುರಿಸುವಲ್ಲಿ ಪ್ರಪಂಚದಾದ್ಯಂತದ ಜನರಿಗೆ ಖಂಡಿತವಾಗಿಯೂ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆಎಂದು ಡಾ. ಹರ್ಷವರ್ಧನ್ ಹೇಳಿದರು. ಕೋವಿಡ್ 19 ಕ್ಕೆ ಭಾರತದ ಪ್ರತಿಕ್ರಿಯೆಯ ಬಗ್ಗೆ ಪ್ರಸ್ತಾಪಿಸಿದ ಅವರು, “ನಮ್ಮಲ್ಲಿ ಇಂದು 422 ಸರ್ಕಾರಿ ಪ್ರಯೋಗಾಲಯಗಳು ಮತ್ತು 177 ಖಾಸಗಿ ಪ್ರಯೋಗಾಲಯಗಳ ಜಾಲವಿದೆ. ಪರೀಕ್ಷಾ ಸಾಮರ್ಥ್ಯವನ್ನು ಸಹ ಹೆಚ್ಚಿಸಲಾಗಿದೆ, ಪ್ರತಿದಿನ ಸುಮಾರು 1,50,000 ಪರೀಕ್ಷೆಗಳನ್ನು ನಡೆಸಬಹುದು. ನಿನ್ನೆಯೂ ನಾವು 1,10,397 ಪರೀಕ್ಷೆಗಳನ್ನು ನಡೆಸಿದ್ದೇವೆ. ನಿನ್ನೆಯ ತನಕ ನಾವು 29,44,874 ಪರೀಕ್ಷೆಗಳನ್ನು ನಡೆಸಿದ್ದೇವೆ. ” ಎಂದು ಸಚಿವರು ತಿಳಿಸಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626611

ಸರ್ಕಾರಿ ಸಂಸ್ಥೆಗಳಿಂದ ಕಳೆದ ವರ್ಷಕ್ಕಿಂತ ಹೆಚ್ಚು ಗೋಧಿ ಖರೀದಿ

ಸರ್ಕಾರಿ ಸಂಸ್ಥೆಗಳಿಂದ ಗೋಧಿ ಖರೀದಿಯು ಕಳೆದ ವರ್ಷದ ಅಂಕಿಅಂಶಗಳನ್ನು ಮೀರಿದೆ. 24.05.2020 ರಂದು ಕಳೆದ ವರ್ಷದ 341.31 ಲಕ್ಷ ಮೆಟ್ರಿಕ್ ಟನ್ ಖರಿದಿಯನ್ನು ಮೀರಿ ಅದು 341.56 ಲಕ್ಷ ಮೆಟ್ರಿಕ್ ಟನ್ ಮುಟ್ಟಿತು, ಇದು ಕೋವಿಡ್-19 ಸಾಂಕ್ರಾಮಿಕ ಮತ್ತು ದೇಶಾದ್ಯಂತದ ಲಾಕ್ಡೌನ್ನಿಂದ ಉಂಟಾದ ಎಲ್ಲಾ ಅಡೆತಡೆಗಳನ್ನು ಮೀರಿ ನಡೆದಿದೆ. ಗೋಧಿ ಕೊಯ್ಲು ಸಾಮಾನ್ಯವಾಗಿ ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗುತ್ತದೆ ಮತ್ತು ಪ್ರತಿ ವರ್ಷ ಏಪ್ರಿಲ್ ಮೊದಲ ವಾರದಲ್ಲಿ ಖರೀದಿ ಪ್ರಾರಂಭವಾಗುತ್ತದೆ. ಆದಾಗ್ಯೂ, 24.03.2020 ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ರಾಷ್ಟ್ರೀಯ ಲಾಕ್ಡೌನ್ ಹೇರಿದಾಗ, ಎಲ್ಲಾ ಕಾರ್ಯಾಚರಣೆಗಳು ಸ್ಥಗಿತಗೊಂಡವು. ಹೊತ್ತಿಗೆ ಬೆಳೆಯು ಕೊಯ್ಲಿಗೆ ಸಿದ್ಧವಾಗಿತ್ತು. ಇದನ್ನು ಪರಿಗಣಿಸಿ, ಲಾಕ್ ಡೌನ್ ಅವಧಿಯಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಪ್ರಾರಂಭಿಸಲು ಭಾರತ ಸರ್ಕಾರ ಅವಕಾಶ ನೀಡಿತು, 15.04.2020 ರಿಂದ ಹೆಚ್ಚಿನ ರಾಜ್ಯಗಳಲ್ಲಿ ಖರೀದಿ ಪ್ರಾರಂಭವಾಯಿತು. ಹರಿಯಾಣದಲ್ಲಿ ಸ್ವಲ್ಪ ತಡವಾಗಿ 20.04.2020 ರಿಂದ ಪ್ರಾರಂಭವಾಯಿತು.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626703

"ಶಾಹಿ ಲಿಚಿ" ಮತ್ತು "ಜರ್ದಾಲು ಮಾವು" ಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿರುವ ಬಿಹಾರದ ವೃತ್ತದ ಅಂಚೆ ಇಲಾಖೆ

ಕೊರೊನಾ ವೈರಸ್ ನಿಗ್ರಹಕ್ಕೆ ಲಾಕ್ಡೌನ್ ಮಾಡಿರುವುದರಿಂದ, ಲಿಚಿ ಮತ್ತು ಮಾವಿನ ಕೃಷಿಕರು ತಮ್ಮ ಹಣ್ಣುಗಳನ್ನು ಮಾರಾಟ ಮಾಡಲು, ಮಾರುಕಟ್ಟೆಗೆ ಸಾಗಿಸಲು ಕಷ್ಟಪಡುತ್ತಿದ್ದಾರೆ. ಜನರಿಗೆ ಇದರ ಪೂರೈಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಲು ಮತ್ತು ಯಾವುದೇ ಮಧ್ಯವರ್ತಿಗಳಿಲ್ಲದೆ ತಮ್ಮ ಹಣ್ಣುಗಳನ್ನು ಮಾರಾಟ ಮಾಡಲು ರೈತರಿಗೆ ನೇರವಾಗಿ ಮಾರುಕಟ್ಟೆಯನ್ನು ಒದಗಿಸಲು, ಬಿಹಾರದ ತೋಟಗಾರಿಕೆ ಇಲಾಖೆ ಮತ್ತು ಭಾರತ ಸರ್ಕಾರದ ಅಂಚೆ ಇಲಾಖೆ ಕೈಜೋಡಿಸಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1626592

ಪಿ ಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಪಂಜಾಬ್: ಯಾವುದೇ ವಲಸಿಗರು ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿನ ಮನೆಗೆ ತೆರಳಲು ಬಲವಂತವಾಗಿ ನಡೆದು ಹೋಗಬಾರದು ಅಥವಾ ಪಂಜಾಬ್ನಲ್ಲಿರುವಾಗ ಹಸಿವಿನಿಂದ ನರಳಬಾರದು ಎಂದು ಮುಖ್ಯಮಂತ್ರಿ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಯಾವುದೇ ವಲಸಿಗರನ್ನು ಕಂಡರೆ ಪೊಲೀಸರು ಬಸ್ ಮೂಲಕ ಹತ್ತಿರದ ಸ್ಥಳಕ್ಕೆ ಕಳುಹಿಸಬೇಕು, ಅಲ್ಲಿಂದ ಅವರು ತಮ್ಮ ಸ್ಥಳೀಯ ರಾಜ್ಯಕ್ಕೆ ರೈಲು ಅಥವಾ ಬಸ್ ಹತ್ತಬಹುದು ಎಂದು ಹೇಳಿದ್ದಾರೆ. ವಲಸಿಗರಿಗೆ ಆತಂಕ ಪಡಬೇಡಿ ಎಂದ ಮುಖ್ಯಮಂತ್ರಿಗಳು, ಮನೆಗೆ ಮರಳಲು ಉತ್ಸುಕರಾಗಿರುವ ಪ್ರತಿಯೊಬ್ಬ ವಲಸಿಗರಿಗೂ ಉಚಿತವಾಗಿ ತಮ್ಮ ರಾಜ್ಯಕ್ಕೆ ಪ್ರಯಾಣಿಸಲು, ಆಹಾರ ವ್ಯವಸ್ಥೆಗಳೊಂದಿಗೆ ರಾಜ್ಯವು ಸಹಾಯ ಮಾಡುತ್ತದೆ ಎಂದು ಭರವಸೆ ನೀಡಿದರು.
  • ಹರಿಯಾಣ: ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಲು ಸಹಾಯ ಮಾಡಲು ರಾಜ್ಯ ಸರ್ಕಾರವು ಪ್ರತಿದಿನ ವಿವಿಧ ರೈಲು ನಿಲ್ದಾಣಗಳಿಂದ ವಿಶೇಷ ಶ್ರಮಿಕ ರೈಲುಗಳನ್ನು ಓಡಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಅದೇ ಸರಣಿಯಲ್ಲಿ, ಐದು ವಿಶೇಷ ಶ್ರಮಿಕ ರೈಲುಗಳು 24.05.2020 ರಂದು ಹರಿಯಾಣದಿಂದ ಪ್ರಯಾಣ ಬೆಳೆಸಿದವು. ಹರಿಯಾಣ ಸರ್ಕಾರವು ಲಾಕ್ಡೌನ್ನಲ್ಲಿ ಸಿಲುಕಿರುವ ಕಾರ್ಮಿಕರನ್ನು ಮತ್ತು ತಮ್ಮ ರಾಜ್ಯಗಳಿಗೆ ಮರಳಲು ಸಿದ್ಧರಿರುವ ಕಾರ್ಮಿಕರನ್ನು ಉಚಿತವಾಗಿ ಕಳುಹಿಸಲು ಪ್ರಾರಂಭಿಸಿದೆ.
  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಭಾನುವಾರ ಒಟ್ಟು 3,041 ಹೊಸ ಕೋವಿಡ್-19 ಪ್ರಕರಣಗಳು ಮತ್ತು 58 ಸಾವುಗಳು ವರದಿಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೆ 50,231 ಪ್ರಕರಣಗಳು ಮತ್ತು 1,635 ಸಾವುಗಳು ದಾಖಲಾಗಿವೆ. ಮುಂಬೈನಲ್ಲಿ 39 ಸಾವು ಸಂಭವಿಸಿದ್ದು 1,725 ಹೊಸ ಪ್ರಕರಣಗಳು ವರದಿಯಾಗಿದ್ದರೆ, ಧಾರವಿಯ ಕೊಳೆಗೇರಿ ಕ್ಲಸ್ಟರ್ ನಲ್ಲಿ 27 ಹೊಸ ಪ್ರಕರಣಗಳು ವರದಿಯಾಗಿದ್ದು, ಇಲ್ಲಿನ ಕೋವಿಡ್ ಸೋಂಕಿತ ಪ್ರಕರಣಗಳ ಸಂಖ್ಯೆ 1,541 ಕ್ಕೆ ಏರಿದೆ. ಲಾಕ್ಡೌನ್ ನಿರ್ಬಂಧಗಳು ಸಡಿಲಗೊಂಡಿರುವ ಮಧ್ಯೆಯೇ ದೇಶೀಯ ವಾಣಿಜ್ಯ ವಿಮಾನ ಕಾರ್ಯಾಚರಣೆ ಇಂದು ಬೆಳಗ್ಗೆ ಮುಂಬೈಯಿಂದ ಕ್ಯಾಲಿಬರೇಟ್ ಮಾದರಿಯಲ್ಲಿ ಪ್ರಾರಂಭವಾಯಿತು. ಮೊದಲ ದಿನದಂದು 45 ವಿಮಾನಗಳನ್ನು ನಿರ್ವಹಿಸಲು ಪಟ್ಟಿ ಮಾಡಲಾಗಿತ್ತು, ಅದರಲ್ಲಿ 10 ವಿಮಾನಗಳು ದೆಹಲಿ- ಮುಂಬೈ ಮಾರ್ಗದಲ್ಲಿ ಕಾರ್ಯನಿರತವಾಗಿದ್ದವು.
  • ಗುಜರಾತ್: ಕಳೆದ 24 ಗಂಟೆಗಳಲ್ಲಿ 394 ಹೊಸ ಪ್ರಕರಣಗಳೊಂದಿಗೆ, ಗುಜರಾತ್ ಮಾರಕ ಕೊರೊನಾ ವೈರಸ್ ಪ್ರಕರಣಗಳು 14,000 ಗಡಿ ದಾಟಿವೆ. ರಾಜ್ಯದ ಕೋವಿಡ್ -19 ಪ್ರಕರಣಗಳ ಸಂಖ್ಯೆ 14,063 ಕ್ಕೆ ತಲುಪಿದೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 858 ಕ್ಕೆ ಏರಿದೆ.
  • ರಾಜಸ್ಥಾನ್: ರಾಜ್ಯದಲ್ಲಿ ಸೋಮವಾರ 145 ಹೊಸ ಪ್ರಕರಣ ವರದಿಯಾಗಿದ್ದು, ಒಟ್ಟು ಸೋಂಕಿನ ಪ್ರಕರಣಗಳ ಸಂಖ್ಯೆ 7,173ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಕನಿಷ್ಠ 163 ರೋಗಿಗಳು ಈವರೆಗೆ ಮಾರಣಾಂತಿಕ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಜೈಪುರ ನಗರದ ಮೇಲೆ ಇಂದು ಒಂದು ದಶಲಕ್ಷಕ್ಕೂ ಹೆಚ್ಚು ಮಿಡತೆಗಳು ದಾಳಿ ಮಾಡಿವೆ. ರಾಜಸ್ಥಾನದ 33 ಜಿಲ್ಲೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜಿಲ್ಲೆಗಳು ಕೀಟಗಳ ಆಕ್ರಮಣದಿಂದ ಬಾಧಿತವಾಗಿವೆ, ಇದು 5 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಹರಡಿರುವ ಬೆಳೆಗಳನ್ನು ನಾಶಪಡಿಸಿದೆ.
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 6,371ಕ್ಕೆ ಏರಿದೆ. 3,267 ಜನರು ಗುಣಮುಖರಾಗಿದ್ದಾರೆ, ಈವರೆಗೆ 281 ಸಾವು ವರದಿಯಾಗಿವೆ. ರಾಜ್ಯದ ಒಟ್ಟು ಪ್ರಕರಣಗಳಲ್ಲಿ ಅರ್ಧದಷ್ಟು ಇಂದೋರ್ನಲ್ಲಿ 3,064 ಪ್ರಕರಣಗಳು ವರದಿಯಾಗಿವೆ, 1,241 ಸೋಂಕಿತ ಪ್ರಕರಣಗಳು ಭೋಪಾಲ್ನಿಂದ ವರದಿಯಾಗಿವೆ.
  • ಛತ್ತೀಸಗಢ: 36 ಹೊಸ ಕೋವಿಡ್ -19 ಪ್ರಕರಣ ವರದಿಯಾಗಿದ್ದು ಇದರಲ್ಲಿ ಹೆಚ್ಚು ಪ್ರಕರಣಗಳು ವಲಸೆ ಕಾರ್ಮಿಕರು ಇತರ ರಾಜ್ಯಗಳಿಂದ ಹಿಂದಿರುಗಿದವರಲ್ಲಿ ಪತ್ತೆಯಾಗಿದೆ. ಛತ್ತೀಸ್ಗಢದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ 252ಕ್ಕೆ ಏರಿದೆ. ರಾಜ್ಯದಿಂದ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆ 185 ಆಗಿದೆ.
  • ಅಸ್ಸಾಂ: ಗುವಾಹಟಿಯ ಎಲ್‌.ಜಿಬಿಐ ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ಪ್ರಯಾಣಿಕರನ್ನು ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಗುವುದು. ಅಸ್ಸಾಂನ ಜನರನ್ನು ಪ್ರತ್ಯೇಕಿಸಿ ಆಯಾ ಜಿಲ್ಲೆಗಳಿಗೆ ಕಳುಹಿಸಲಾಗುವುದು ಎಂದು ಅಸ್ಸಾಂ ಆರೋಗ್ಯ ಸಚಿವರು ತಿಳಿಸಿದ್ದಾರೆ.
  • ಮೇಘಾಲಯ: ಹರಿಯಾಣದಿಂದ ಮೇಘಾಲಯಕ್ಕೆ 139 ಮಂದಿ ಮರಳಿದ್ದಾರೆ. ಇವರ ಪರೀಕ್ಷೆ ವರದಿ ಬಂದ ನಂತರ, ಅವರನ್ನು ಹೋಂ ಕ್ವಾರಂಟೈನ್ ಅಥವಾ ಕರೋನಾ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಶಿಲ್ಲಾಂಗ್ ಪ್ಯಾಸ್ಟೋರಲ್ ಕೇಂದ್ರ ಪ್ರಸ್ತುತ 22 ಮಂದಿ ರಾಜ್ಯಕ್ಕೆ ಮರಳಿದವರಿಗೆ ಆಶ್ರಯ ನೀಡಿದೆ. ಚೆನ್ನೈನಿಂದ ಪ್ರಯಾಣಿಸಿದ ಇನ್ನೊಬ್ಬ ವ್ಯಕ್ತಿಯಲ್ಲಿ ಸೋಂಕು ದೃಢಪಡುವುದರೊಂದಿಗೆ 14 ನೇ ಪ್ರಕರಣ ವರದಿಯಾಗಿದೆ. ಆಗಮಸಿದ ದಿನದಿಂದ ವ್ಯಕ್ತಿಯು ಪ್ರತ್ಯೇಕೀಕರಣದಲ್ಲಿದ್ದರು. ಪ್ರಸ್ತುತ ಸಾಂಸ್ಥಿಕ ಕ್ವಾರಂಟೈನ್ ಮತ್ತು ವೈದ್ಯಕೀಯ ವೀಕ್ಷಣೆಯಲ್ಲಿದ್ದಾರೆ. ರಾಜಸ್ಥಾನ ಮತ್ತು ಆಂಧ್ರದಿಂದ ವಿಶೇಷ ರೈಲುಗಳು ನಾಳೆ ಪ್ರಾರಂಭವಾಗಲಿವೆ, ಮೇಘಾಲಯದ ಸಿಲುಕಿರುವ ಜನರಿಗೆ ದೆಹಲಿ ಮತ್ತು ಕೇರಳದಿಂದ ರೈಲುಗಳು ನಾಡಿದ್ದಿನಿಂದ ಪ್ರಾರಂಭವಾಗಲಿವೆ.
  • ಮಣಿಪುರ: ಮಣಿಪುರಕ್ಕೆ ವಿಮಾನ ಪ್ರಯಾಣಿಕರಿಗೆ ಪರಿಷ್ಕೃತ ಎಸ್‌.ಒಪಿ ನೀಡಲಾಗಿದೆ; ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್, ನಿರ್ಧರಣೆ ಪ್ರಕಾರ ಪರೀಕ್ಷೆ ಮತ್ತು ಕ್ವಾರಂಟೈನ್ ಅನ್ನು ಕಡ್ಡಾಯಗೊಳಿಸಲಾಗಿದೆ.
  • ಮಿಜೋರಾಂ: ಮಿಜೋರಾಂ ವೈದ್ಯಕೀಯ ಕಾಲೇಜ್ ಪ್ರಯೋಗಾಲಯದಲ್ಲಿ ಕೋವಿಡ್ -19 ಗಾಗಿ ಆರ್ಟಿ-ಪಿಸಿಆರ್ ಪರೀಕ್ಷೆ ಪೂಲಿಂಗ್ ವಿಧಾನವನ್ನು ಮಿಜೋರಾಂ ಪ್ರಾರಂಭಿಸಲಿದೆ. ಕೋವಿಡ್ -19 ಗಾಗಿ ಪ್ರತಿದಿನ 100 ಗಂಟಲುದ್ರವ ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ.
  • ನಾಗಾಲ್ಯಾಂಡ್: ನಾಗಾಲ್ಯಾಂಡ್ನಲ್ಲಿ ಮೂರು ಕೋವಿಡ್ -19 ಪ್ರಕರಣಗಳು, ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆಯಲ್ಲಿ ಪತ್ತೆಯಾಗಿದೆ. ಎಲ್ಲರೂ ಚೆನ್ನೈನಿಂದ ಹಿಂದಿರುಗಿದವರು. ಸೋಮ ಜಿಲ್ಲೆಯ 40 ಎಸ್ಎಸ್ ಶಿಕ್ಷಕರ ಗುಂಪು ನಾಗಾಲ್ಯಾಂಡ್ ಮಾನ್ ಪಟ್ಟಣದ ಐಟಿಐನಲ್ಲಿ ಕ್ವಾರಂಟೈನ್ ಕೇಂದ್ರವನ್ನು ಸ್ಥಾಪಿಸಲು ಸಹಾಯ ಮಾಡಿದೆ.

***



(Release ID: 1626806) Visitor Counter : 264