ಗೃಹ ವ್ಯವಹಾರಗಳ ಸಚಿವಾಲಯ

ವಲಸೆ ಕಾರ್ಮಿಕರ ಸುಗಮ ಸಂಚಾರಕ್ಕಾಗಿ ಹೆಚ್ಚಿನ ರೈಲುಗಳನ್ನು ಓಡಿಸಲು ರಾಜ್ಯಗಳು ಮತ್ತು ರೈಲ್ವೆ ನಡುವೆ ಪೂರ್ವಭಾವಿ ಸಮನ್ವಯ ಅಗತ್ಯ; ಜಿಲ್ಲಾ ಪ್ರಾಧಿಕಾರಗಳು ತಮ್ಮ ಅವಶ್ಯಕತೆಗಳನ್ನು ರೈಲ್ವೆಗೆ ನೀಡಬೇಕು

Posted On: 19 MAY 2020 11:43AM by PIB Bengaluru

ವಲಸೆ ಕಾರ್ಮಿಕರ ಸುಗಮ ಸಂಚಾರಕ್ಕಾಗಿ ಹೆಚ್ಚಿನ ರೈಲುಗಳನ್ನು ಓಡಿಸಲು ರಾಜ್ಯಗಳು ಮತ್ತು ರೈಲ್ವೆ ನಡುವೆ ಪೂರ್ವಭಾವಿ ಸಮನ್ವಯ ಅಗತ್ಯ; ಜಿಲ್ಲಾ ಪ್ರಾಧಿಕಾರಗಳು ತಮ್ಮ ಅವಶ್ಯಕತೆಗಳನ್ನು ರೈಲ್ವೆಗೆ ನೀಡಬೇಕು
ಹೆಚ್ಚು ಬಸ್ ಗಳನ್ನು ಓಡಿಸಿ, ರಾಜ್ಯಾದ್ಯಂತ ಮತ್ತು ಅಂತರ ರಾಜ್ಯ ಗಡಿಗಳಲ್ಲಿ ಅವುಗಳ ಸುಗಮ ಸಂಚಾರ ಖಾತ್ರಿಪಡಿಸಿಕೊಳ್ಳಿ
ನಡೆದುಕೊಂಡೇ ಹೋಗುವ ಜನರನ್ನು ಬಸ್/ ರೈಲು ನಿಲ್ದಾಣಕ್ಕೆ ಮಾರ್ಗದರ್ಶನ ಮಾಡುವ ತನಕ ಮೂಲಸೌಕರ್ಯ ಸಹಿತವಾದ ವಿಶ್ರಾಂತ ಸ್ಥಳ ರಚಿಸಿ ಅಲ್ಲಿಗೆ ಕಳುಹಿಸಿ
ವದಂತಿಗಳನ್ನು ಬಯಲು ಮಾಡಿ, ರೈಲು/ಬಸ್ ಹೊರಡುವ ಕುರಿತಂತೆ ಸ್ಪಷ್ಟತೆ ನೀಡಿ: ರಾಜ್ಯಗಳಿಗೆ ಎಂ.ಎಚ್..

 

ಕೋವಿಡ್ 19 ಸೋಂಕಿನ ಭೀತಿ ಮತ್ತು ಜೀವನೋಪಾಯವನ್ನು ಕಳೆದುಕೊಳ್ಳುವ ಆತಂಕವೇ, ಸಿಲುಕಿರುವ ಕಾರ್ಮಿಕರು ತಮ್ಮ ಮನೆಗಳತ್ತ ತೆರಳಲು ಪ್ರಮುಖ ಕಾರಣವಾಗಿದೆ ಎಂದು ರಾಜ್ಯಗಳಿಗೆ ನೀಡಿರುವ ಸೂಚನೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್..) ಉಲ್ಲೇಖಿಸಿದೆ. ವಲಸೆ ಕಾರ್ಮಿಕರ ಸಂಕಷ್ಟವನ್ನು ತಗ್ಗಿಸುವ ನಿಟ್ಟಿನಲ್ಲಿ ಸಂವಹನವು ಕೇಂದ್ರದೊಂದಿಗೆ ಸಕ್ರಿಯ ಸಹಯೋಗದೊಂದಿಗೆ ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬಹುದಾದ ಹಲವಾರು ಕ್ರಮಗಳ ಮೇಲೆ ಒತ್ತು ನೀಡಿದೆ. ಅವುಗಳೆಂದರೆ:

  • ರಾಜ್ಯ ಮತ್ತು ರೈಲ್ವೆ ಸಚಿವಾಲಯದ ನಡುವೆ ಪೂರ್ವಭಾವಿ ಸಹಯೋಗದೊಂದಿಗೆ ಹೆಚ್ಚು ವಿಶೇಷ ರೈಲುಗಳ ಕಾರ್ಯಾಚರಣೆ;
  • ವಲಸಿಗರ ಸಾಗಾಟಕ್ಕಾಗಿ ಹೆಚಿನ ಸಂಖ್ಯೆ ಬಸ್ ಗಳು; ವಲಸಿಗರನ್ನು ಹೊತ್ತ ಬಸ್ ಗಳಿಗೆ ಅಂತರ ರಾಜ್ಯ ಗಡಿಯಲ್ಲಿ ಪ್ರವೇಶಕ್ಕೆ ಅವಕಾಶ;
  • ಬಸ್ ಮತ್ತು ರೈಲುಗಳ ನಿರ್ಗಮನದ ಬಗ್ಗೆ ಹೆಚ್ಚಿನ ಸ್ಪಷ್ಟತೆ ನೀಡಬೇಕು, ಸ್ಪಷ್ಟತೆಯ ಕೊರತೆ ಮತ್ತು ವದಂತಿಗಳು ಕಾರ್ಮಿಕರಲ್ಲಿ ಅಶಾಂತಿ ಉಂಟು ಮಾಡುತ್ತಿವೆ;
  • ವಲಸಿಗರು ಈಗಾಗಲೇ ಕಾಲ್ನಡಿಗೆಯಲ್ಲಿ ಪ್ರಯಾಣಿಸುತ್ತಿದ್ದಾರೆಂದು ತಿಳಿದುಬಂದಿರುವ ಮಾರ್ಗಗಳಲ್ಲಿ ರಾಜ್ಯಗಳಿಂದ ನೈರ್ಮಲ್ಯ, ಆಹಾರ ಮತ್ತು ಆರೋಗ್ಯ ಸೇವೆಯ ಸಾಕಷ್ಟು ಸೌಲಭ್ಯಗಳನ್ನು ಹೊಂದಿರುವ ಗೊತ್ತುಪಡಿಸಿದ ವಿಶ್ರಾಂತಿ ಸ್ಥಳಗಳ ವ್ಯವಸ್ಥೆ ಮಾಡಬೇಕು;
  • ಜಿಲ್ಲಾ ಪ್ರಾಧಿಕಾರಗಳು ಕಾಲ್ನಡಿಗೆಯಲ್ಲಿ ಸಾಗುತ್ತಿರುವ ಕಾರ್ಮಿಕರನ್ನು ವಿಶ್ರಾಂತಿ ಸ್ಥಳ, ಹತ್ತಿರದ ಬಸ್ ಅಥವಾ ರೈಲು ನಿಲ್ದಾಣಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಿ ಕಳುಹಿಸಿಕೊಡಬೇಕು,
  • ವಲಸೆ ಕಾರ್ಮಿಕರಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧಿರಿದ್ದರೆ ವಿಶೇಷ ಗಮನ ನೀಡಬೇಕು;
  • ವಿಶ್ರಾಂತಿ ಸ್ಥಳಗಳಲ್ಲಿ ದೀರ್ಘಾವಧಿಯ ಕ್ವಾರಂಟೈನ್ ಅನ್ನು ಕಲ್ಪಿಸುವುದನ್ನು ನಿವಾರಿಸಲು ಜಿಲ್ಲಾ ಪ್ರಾಧಿಕಾರಗಳು ವಿಶ್ರಾಂತಿ ಸ್ಥಳಗಳಲ್ಲಿ ಎನ್‌.ಜಿಒ ಪ್ರತಿನಿಧಿಗಳನ್ನು ಸೇರಿಸಿಕೊಂಡು, ಕಾರ್ಮಿಕರು ತಾವು ಇರುವ ಸ್ಥಳಗಳಲ್ಲೇ ಉಳಿಯಲು ಪ್ರೋತ್ಸಾಹಿಸಬಹುದು;
  • ವಲಸಿಗರನ್ನು ಅವರ ವಿಳಾಸ ಮತ್ತು ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಪಟ್ಟಿ ಮಾಡಬೇಕು. ಇದು ಮುಂದಿನ ದಿನಗಳಲ್ಲಿ ಸಂಪರ್ಕ ಪತ್ತೆಗೆ ನೆರವಾಗುತ್ತದೆ.

ಜಿಲ್ಲಾ ಪ್ರಾಧಿಕಾರಗಳು ಯಾವುದೇ ವಲಸೆ ಕಾರ್ಮಿಕರು ಆಕೆ/ಆತ ತನ್ನ ಊರು ತಲುಪಲು ರಸ್ತೆಗಳಲ್ಲಿ ಅಥವಾ ರೈಲ್ವೆ ಹಳಿಗಳ ಮೇಲೆ ನಡೆದು ಹೋಗುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಸಂವಹನ ಪುನರುಚ್ಚರಿಸಿದೆ. ಅವರು ಅಗತ್ಯಕ್ಕೆ ಅನುಗುಣವಾಗಿ ರೈಲು ಓಡಿಸಲು ರೈಲ್ವೆ ಇಲಾಖೆಗೆ ಮನವಿಯನ್ನೂ ಮಾಡಬಹುದು.

Click here to see Official Communication to States

 

***



(Release ID: 1625119) Visitor Counter : 139