PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 11 MAY 2020 6:15PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ಇದುವರೆಗೆ ಒಟ್ಟು 20,917 ಜನರು ಗುಣಮುಖರಾಗಿದ್ದಾರೆ. ಇದು ಒಟ್ಟು ಚೇತರಿಕೆಯ ದರವನ್ನು ಶೇ.31.15ಕ್ಕೆ ಏರಿಸಿದೆ. ದೃಢಪಟ್ಟ ಒಟ್ಟು ಪ್ರಕರಣಗಳ ಸಂಖ್ಯೆ ಈಗ 67,152 ಆಗಿದೆ. ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢಪಟ್ಟ ಪ್ರಕರಣಗಳ ಸಂಖ್ಯೆಯಲ್ಲಿ 4,213 ಹೆಚ್ಚಳವಾಗಿದೆ. ವಿವಿಧ ವೈದ್ಯಕೀಯ ವೃತ್ತಿಪರರ ಕಾರ್ಯವನ್ನು ಶ್ಲಾಘಿಸಿರುವ ಡಾ.ಹರ್ಷವರ್ಧನ್ ಅವರು, ಕೋವಿಡ್-19 ರ ನಿರ್ವಹಣೆಯಲ್ಲಿ ವಿಶೇಷವಾಗಿ ಕಳೆದ ಮೂರು ತಿಂಗಳುಗಳಲ್ಲಿ ವೈದ್ಯಕೀಯ ವೃತ್ತಿಪರರು ತೋರುತ್ತಿರುವ ಸ್ಥಿತಿಸ್ಥಾಪಕತ್ವದ ಬಗ್ಗೆ ದೇಶವು ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಬಹಿಷ್ಕರಿಸಬಾರದು ಅಥವಾ ಅವರ ಮೇಲೆ ದೌರ್ಜನ್ಯ ನಡೆಸಬಾರದು ಗುರಿಯಾಗಿಸಬಾರದು, ಬದಲಾಗಿ ಸಾರ್ವಜನಿಕರಿಗೆ ಹೆಚ್ಚಿನ ಸಹಾಯ ಮಾಡುವಲ್ಲಿ ಅವರು ಮಾಡುತ್ತಿರುವ ಪ್ರಯತ್ನವನ್ನು ಶ್ಲಾಘಿಸಬೇಕು ಎಂದು ಅವರು ಮತ್ತೆ ರಾಷ್ಟ್ರಕ್ಕೆ ಮನವಿ ಮಾಡಿದರು. ಕೋವಿಡ್-19 ವಿರುದ್ಧದ ಹೋರಾಟವನ್ನು ಮುಂದುವರಿಸಲು ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ನಮ್ಮ ಗೌರವ, ಬೆಂಬಲ ಮತ್ತು ಸಹಕಾರಕ್ಕೆ ಅರ್ಹರು ಎಂದು ಅವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623117

ಪ್ರತಿಕಾಯ ಪತ್ತೆಗಾಗಿ ಪುಣೆಯ ಐಸಿಎಂಆರ್-ಎನ್ಐವಿ ಅಭಿವೃದ್ಧಿಪಡಿಸಿರುವ ದೇಶೀಯ IgG ELISA ಪರೀಕ್ಷೆಯು, ಕೋವಿಡ್ -19 ಕಣ್ಗಾವಲಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ: ಡಾ. ಹರ್ಷವರ್ಧನ್

ಕೋವಿಡ್-19 ಪ್ರತಿಕಾಯ ಪತ್ತೆಗಾಗಿ ದೇಶೀಯ IgG ELISA ಪರೀಕ್ಷೆ “COVID KAVACH ELISA” ವನ್ನು ಪುಣೆಯ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಅಭಿವೃದ್ಧಿಪಡಿಸಿ, ಮೌಲ್ಯೀಕರಿಸಿದೆ. ವೈಜ್ಞಾನಿಕ ತಂಡವು ಭಾರತದಲ್ಲಿ ಪ್ರಯೋಗಾಲಯ ದೃಢಪಡಿಸಿದ ರೋಗಿಗಳಿಂದ SARS-CoV-2 ವೈರಸ್ ಅನ್ನು ಯಶಸ್ವಿಯಾಗಿ ಪ್ರತ್ಯೇಕಿಸಿತು. ಇದು SARS-CoV-2 ಗಾಗಿ ದೇಶೀಯ ರೋಗನಿರ್ಣಯದ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟಿದೆ. ಇದು ನೈಜ ಸಮಯದಲ್ಲಿ ಆರ್ಟಿ-ಪಿಸಿಆರ್ ಎಸ್ಎಆರ್ಎಸ್-ಕೋವಿ -2 ನ ಕ್ಲಿನಿಕಲ್ ರೋಗನಿರ್ಣಯಕ್ಕೆ ಮುಂಚೂಣಿಯ ಪರೀಕ್ಷೆಯಾಗಿದ್ದರೆ, ಸೋಂಕಿತರ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಹಾಗೂ ಅದರ ಕಣ್ಗಾವಲಿಗೆ ಪ್ರತಿಕಾಯ ಪರೀಕ್ಷೆಗಳು ನಿರ್ಣಾಯಕವಾಗಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622766

ಕೋವಿಡ್-19 ನಿರ್ವಹಣೆಯ ಪರಿಸ್ಥಿತಿಯನ್ನು ಪರಿಶೀಲಿಸಲು ಡಾ. ಹರ್ಷವರ್ಧನ್ ಅವರು ಮಂಡೋಲಿ ಕೋವಿಡ್-19 ಆರೈಕೆ ಕೇಂದ್ರಕ್ಕೆ ಭೇಟಿ ನೀಡಿದರು

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರು, ನವದೆಹಲಿಯ ಮಂಡೋಲಿ ಜೈಲಿನಲ್ಲಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ (ಸಿಸಿಸಿ) ಭೇಟಿ ನೀಡಿ ಕೋವಿಡ್-19 ನಿರ್ವಹಣೆಯ ಪರಿಸ್ಥಿತಿಯನ್ನು ಪರಿಶೀಲಿಸಿದರು. ಆಸ್ಪತ್ರೆಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ಮಂಡೋಲಿ ಪೊಲೀಸ್ ವಸತಿ ಸಂಕೀರ್ಣವನ್ನು ಕೋವಿಡ್-19 ಮೀಸಲು ಕೇಂದ್ರವಾಗಿ ಮಾರ್ಪಡಿಸಲಾಗಿದೆ. ಇದು ಸೌಮ್ಯ / ಅತ್ಯಂತ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ಕೋವಿಡ್-19 ರೋಗಿಗಳಿಗೆ ಪ್ರತ್ಯೇಕ ಕೊಠಡಿಗಳು ಮತ್ತು ಹಾಸಿಗೆಗಳನ್ನು ಒಳಗೊಂಡಿದೆ. ವೈಯಕ್ತಿಕ ಮತ್ತು ಉಸಿರಾಟದ ಸದಾಚಾರ, ಸಾಮಾಜಿಕ ಅಂತರಗಳನ್ನು ನಿರಂತರವಾಗಿ ಪಾಲಿಸುವುದರಿಂದ, ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ನಮಗೆ  ಲಾಭ ದೊರೆಯುತ್ತದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622740

ಕೋವಿಡ್ ಮತ್ತು ಕೋವಿಡೇತರ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ವೈದ್ಯಕೀಯ ವೃತ್ತಿಪರರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳ ಸುಗಮ ಸಂಚಾರ ಮತ್ತು ಎಲ್ಲಾ ಖಾಸಗಿ ಚಿಕಿತ್ಸಾಲಯಗಳು, ನರ್ಸಿಂಗ್ ಹೋಂಗಳು ಮತ್ತು ಲ್ಯಾಬ್ಗಳನ್ನು ತೆರೆಯುವುದನ್ನು ಖಚಿತಪಡಿಸಿಕೊಳ್ಳಿ; ರಾಜ್ಯಗಳಿಗೆ ಗೃಹ ಸಚಿವಾಲಯದ ಸೂಚನೆ

ಸಂಪುಟ ಕಾರ್ಯದರ್ಶಿ 2020 ರ ಮೇ 10 ರಂದು ನಡೆದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯಲ್ಲಿ ಕೆಲವು ರಾಜ್ಯಗಳು / ಯುಟಿಗಳು ವೈದ್ಯಕೀಯ ವೃತ್ತಿಪರರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳ ಚಲನವಲನಕ್ಕೆ ನಿರ್ಬಂಧ ಹೇರಿರುವ ವಿಷಯವನ್ನು ಚರ್ಚಿಸಲಾಯಿತು. ಈ ಸಭೆಯ ಅನುಸಾರವಾಗಿ, ಗೃಹ ಸಚಿವಾಲಯವು ಸಾರ್ವಜನಿಕ ಆರೋಗ್ಯ ಅಗತ್ಯತೆಗಳನ್ನು ಪೂರೈಸಲು ಮತ್ತು ಅಮೂಲ್ಯವಾದ ಮಾನವ ಜೀವಗಳನ್ನು ಉಳಿಸಲು ಎಲ್ಲಾ ವೈದ್ಯಕೀಯ ವೃತ್ತಿಪರರ ಅಡೆತಡೆಯಿಲ್ಲದ ಸಂಚಾರ ಅತ್ಯಗತ್ಯ ಎಂದು ಎಲ್ಲಾ ರಾಜ್ಯಗಳು / ಯುಟಿಗಳಿಗೆ ಪತ್ರ ಬರೆದು ಸೂಚನೆ ನೀಡಿದೆ. ವೈದ್ಯಕೀಯ ವೃತ್ತಿಪರರು ಮತ್ತು ಅರೆ-ವೈದ್ಯಕೀಯ ಸಿಬ್ಬಂದಿಯ ಸಂಚಾರಕ್ಕೆ ಯಾವುದೇ ನಿರ್ಬಂಧವು ಕೋವಿಡ್ ಮತ್ತು ಕೋವಿಡೇತರ ವೈದ್ಯಕೀಯ ಸೇವೆಗಳಿಗೆ ತೀವ್ರ ತೊಂದರೆಯಾಗಬಹುದು ಎಂದು ಅದು ಹೇಳಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622887

ವಲಸೆ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ತ್ವರಿತವಾಗಿ ಸಾಗಿಸಲು ಅನುಕೂಲವಾಗುವಂತೆಶ್ರಮಿಕ್ ವಿಶೇಷರೈಲುಗಳನ್ನು ಯಾವುದೇ ಅಡೆತಡೆಯಿಲ್ಲದೆ ಓಡಿಸಲು ರೈಲ್ವೆಗೆ ಸಹಕರಿಸಿ: ರಾಜ್ಯಗಳಿಗೆ ಗೃಹಸಚಿವಾಲಯದ ಸೂಚನೆ

ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ಬಸ್ಸುಗಳು ಮತ್ತು ಶ್ರಮಿಕ್ ವಿಶೇಷ ರೈಲುಗಳಲ್ಲಿ ವಲಸೆ ಕಾರ್ಮಿಕರ ಸಂಚಾರಕ್ಕೆ ನೀಡಿದ ಸಹಾಯವನ್ನು ಪರಿಶೀಲಿಸಲು ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ  2020 ರ ಮೇ 10 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಯಿತು. ಈ ಸಭೆಯ ಅನುಸಾರವಾಗಿ, ಗೃಹ ಸಚಿವಾಲಯವು ಎಲ್ಲ ರಾಜ್ಯಗಳು / ಯುಟಿಗಳಿಗೆ ಪತ್ರ ಬರೆದು, ವಲಸೆ ಕಾರ್ಮಿಕರು ತಮ್ಮ ಸ್ವಂತ ಸ್ಥಳಗಳನ್ನು ತಲುಪಲು ರಸ್ತೆ ಮತ್ತು ರೈಲ್ವೆ ಹಳಿಗಳ ಮೇಲೆ ನಡೆಯುವುದನ್ನು ತಡೆಯುವಂತೆ ಸೂಚಿಸಿದೆ. ‘ಶ್ರಮಿಕ್’ವಿಶೇಷ ರೈಲುಗಳು ಮತ್ತು ಬಸ್‌ಗಳಲ್ಲಿ ಪ್ರಯಾಣ ಮಾಡಲು ಈಗಾಗಲೇ ಅವಕಾಶ ನೀಡಲಾಗಿದೆ. ಆದ್ದರಿಂದ, ಅವರು ತಮ್ಮ ಸ್ವಂತ ಸ್ಥಳಗಳಿಗೆ ತೆರಳಲು ‘ಶ್ರಮಿಕ್’ ವಿಶೇಷ ರೈಲುಗಳು ಅಥವಾ ಬಸ್ಸುಗಳನ್ನು ಹತ್ತಲು ಅನುಕೂಲ ಕಲ್ಪಿಸಬೇಕು. ಅಲ್ಲಿಯವರೆಗೆ ವಲಸಿಗರಿಗೆ ಸಲಹೆ ನೀಡಿ ಹತ್ತಿರದ ಆಶ್ರಯದಾಣಗಳಲ್ಲಿ ಇರಿಸಬಹುದು ಎಂದು ಹೇಳಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622885

ಮೇ 12, 2020 ರಿಂದ ಭಾರತೀಯ ರೈಲ್ವೆಯಿಂದ ಆಯ್ದ ಪ್ರಯಾಣಿಕ ಸೇವೆಗಳ ಭಾಗಶಃ ಪುನರಾರಂಭ

ಮೇ 12, 2020 ರಿಂದ ಭಾರತೀಯ ರೈಲ್ವೆಯ ರೈಲು ಸೇವೆಗಳನ್ನು ಭಾಗಶಃ ಪುನರಾರಂಭಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಹದಿನೈದು ಜೋಡಿ ವಿಶೇಷ ರೈಲುಗಳನ್ನು (ಮೂವತ್ತು ರೈಲುಗಳು) ಓಡಿಸಲಾಗುತ್ತದೆ. ಈ ಸೇವೆಗಳು ಇತರೆಡೆ ಸಿಲುಕಿರುವ ವ್ಯಕ್ತಿಗಳನ್ನು ಸಾಗಿಸಲು ಮೇ 1 ರಿಂದ ಸಂಚರಿಸುತ್ತಿರುವ ಶ್ರಮಿಕ್ ವಿಶೇಷ ರೈಲುಗಳಿಗೆ ಹೆಚ್ಚುವರಿಯಾಗಿರುತ್ತವೆ. ಎಲ್ಲಾ ಮೇಲ್ / ಎಕ್ಸ್‌ಪ್ರೆಸ್, ಪ್ರಯಾಣಿಕ ಮತ್ತು ಉಪನಗರ ಸೇವೆಗಳನ್ನು ಒಳಗೊಂಡಂತೆ ಇತರ ಸಾಮಾನ್ಯ ಪ್ರಯಾಣಿಕರ ಸೇವೆಗಳು ಮುಂದಿನ ಆದೇಶವರೆಗೆ ರದ್ದಾಗಿರುತ್ತವೆ. ಈ ವಿಶೇಷ ರೈಲುಗಳು ಹವಾನಿಯಂತ್ರಿತವಾಗಿರುತ್ತವೆ. ಐಆರ್ಸಿಟಿಸಿ ವೆಬ್‌ಸೈಟ್ ಮೂಲಕ ಅಥವಾ ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್ ಇ-ಟಿಕೆಟಿಂಗ್ ಮಾತ್ರ ಮಾಡಲಾಗುತ್ತದೆ. ಯಾವುದೇ ರೈಲ್ವೆ ನಿಲ್ದಾಣದಲ್ಲಿ, ಕೌಂಟರ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಲಾಗುವುದಿಲ್ಲ. ‘ಏಜೆಂಟರು’ ಮೂಲಕವೂ ಟಿಕೆಟ್ ಕಾಯ್ದಿರಿಸಲು ಅನುಮತಿ ಇಲ್ಲ. ಮುಂಗಡ ಕಾಯ್ದಿರಿಸುವ ಗರಿಷ್ಠ ಅವಧಿ 7 ದಿನಗಳು. ಯಾವುದೇ ಮುಂಗಡ ಕಾಯ್ದಿರಿಸದ ಟಿಕೆಟ್‌ಗಳನ್ನು ಅನುಮತಿಸಲಾಗುವುದಿಲ್ಲ. ಯಾವುದೇ ಆಹಾರ ಶುಲ್ಕವನ್ನು ಟಿಕೆಟ್ ಶುಲ್ಕದಲ್ಲಿ ಸೇರಿಸಲಾಗುವುದಿಲ್ಲ. ಎಲ್ಲಾ ಪ್ರಯಾಣಿಕರನ್ನು ಕಡ್ಡಾಯವಾಗಿ ಪರೀಕ್ಷಿಸಲಾಗುವುದು ಮತ್ತು ರೋಗ ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರ ರೈಲು ಪ್ರವೇಶಿಸಲು / ಪ್ರಯಾಣಿಸಲು ಅವಕಾಶ ನೀಡಲಾಗುವುದು.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623080

ಭಾರತೀಯ ರೈಲ್ವೆ ಹದಿನೈದು ಜೋಡಿ ವಿಶೇಷ ರೈಲುಗಳ ವೇಳಾಪಟ್ಟಿ ಪ್ರಕಟಿಸಿದೆ

ರೈಲ್ವೆ ಸಚಿವಾಲಯವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂಒಹೆಚ್‌ಡಬ್ಲ್ಯು) ಮತ್ತು ಗೃಹ ವ್ಯವಹಾರಗಳ ಸಚಿವಾಲಯದೊಂದಿಗೆ ಸಮಾಲೋಚಿಸಿ ಮೇ 12, 2020 ರಿಂದ ಆಯ್ದ ರೈಲು ಸೇವೆಗಳನ್ನು ಭಾಗಶಃ ಪುನರಾರಂಭಿಸಲು ನಿರ್ಧರಿಸಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623014

ದೇಶಾದ್ಯಂತ ಮೇ 11, 2020 (10:00 ಗಂಟೆ) ವರೆಗೆ ಭಾರತೀಯ ರೈಲ್ವೇ 468 “ಶ್ರಮಿಕ್ ವಿಶೇಷರೈಲುಗಳ ಸಂಚಾರವನ್ನು ಕೈಗೊಂಡಿದೆ

ಮೇ 11, 2020 ರಂತೆ, ದೇಶದ ವಿವಿಧ ರಾಜ್ಯಗಳಿಂದ 468 “ಶ್ರಮಿಕ್ ವಿಶೇಷ” ರೈಲುಗಳು ಪ್ರಯಾಣ ಬೆಳೆಸಿದವು, ಅವುಗಳಲ್ಲಿ 363 ರೈಲುಗಳು ತಮ್ಮ ಗಮ್ಯಸ್ಥಾನವನ್ನು ತಲುಪಿದ್ದು, ಉಳಿದ 105 ರೈಲುಗಳು ಪ್ರಯಾಣ ಮಾರ್ಗದಲ್ಲಿವೆ. ಈ 363 ರೈಲುಗಳು – ಆಂಧ್ರ ಪ್ರದೇಶ (1), ಬಿಹಾರ (100 ರೈಲುಗಳು), ಹಿಮಾಚಲ ಪ್ರದೇಶ (1 ರೈಲು), ಜಾರ್ಖಂಡ್ (22 ರೈಲುಗಳು), ಮಧ್ಯ ಪ್ರದೇಶ (30 ರೈಲುಗಳು), ಮಹಾರಾಷ್ಟ್ರ (3 ರೈಲುಗಳು), ಒಡಿಶಾ (25 ರೈಲುಗಳು), ರಾಜಸ್ಥಾನ (4 ರೈಲುಗಳು), ತೆಲಂಗಾಣ (2 ರೈಲುಗಳು), ಉತ್ತರ ಪ್ರದೇಶ (172 ರೈಲುಗಳು), ಪಶ್ಚಿಮ ಬಂಗಾಳ (2 ರೈಲುಗಳು), ತಮಿಳುನಾಡು (1 ರೈಲು) ಮುಂತಾದ ರಾಜ್ಯಗಳನ್ನು ತಲುಪಿದವು. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಗರಿಷ್ಠ 1200 ಪ್ರಯಾಣಿಕರು ಶ್ರಮಿಕ್ ವಿಶೇಷ ರೈಲುಗಳಲ್ಲಿ ಪ್ರಯಾಣಿಸಬಹುದು. ರೈಲು ಹತ್ತುವ ಮುನ್ನ ವ್ಯವಸ್ಥಿತವಾಗಿ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ರಯಾಣದ ವೇಳೆ, ಪ್ರಯಾಣಿಕರಿಗೆ ಉಚಿತ ಊಟ ಮತ್ತು ನೀರು ಒದಗಿಸಲಾಗುತ್ತದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622884

ವಲಸೆ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ವೇಗವಾಗಿ ಸಾಗಿಸಲು ಅನುಕೂಲವಾಗುವಂತೆ ಶ್ರಮಿಕ್ ವಿಶೇಷರೈಲುಗಳ ಕಾರ್ಯಾಚರಣೆಯನ್ನು ಪರಿಶೀಲಿಸಲು, ಗೃಹ ಸಚಿವಾಲಯ ಮತ್ತು ರೈಲ್ವೆಯಿಂದ ರಾಜ್ಯಗಳ ನೋಡಲ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ

ಕೇಂದ್ರ ಗೃಹ ಸಚಿವಾಲಯ ಮತ್ತು ರೈಲ್ವೆ ಸಚಿವಾಲಯವು ಇಂದು ಬೆಳಿಗ್ಗೆ ಶ್ರಮಿಕ್ ವಿಶೇಷ ರೈಲುಗಳ ಮೂಲಕ ವಲಸೆ ಕಾರ್ಮಿಕರ ಸಂಚಾರ ಕುರಿತು ವಿಡಿಯೋ ಕಾನ್ಫರೆನ್ಸ್ ಆಯೋಜಿಸಿತ್ತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನೋಡಲ್ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ನಿನ್ನೆ 101 ರೈಲು ಸೇರಿದಂತೆ 450 ಕ್ಕೂ ಹೆಚ್ಚು ರೈಲುಗಳು ಲಕ್ಷಾಂತರ ವಲಸೆ ಕಾರ್ಮಿಕರನ್ನು ಹೊತ್ತುಕೊಂಡು ಹೊರಟಿರುವುದನ್ನು ಪ್ರಶಂಸಿಸಲಾಯಿತು. ಸಭೆಯಲ್ಲಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಅವುಗಳಿಗೆ ಪರಿಹಾರ ಸೂಚಿಸಲಾಯಿತು. ಸ್ವಂತ ಊರುಗಳಿಗೆ ಹೋಗಲು ಬಯಸುವ ಎಲ್ಲರ ಪ್ರಯಾಣಕ್ಕಾಗಿ ಸಾಕಷ್ಟು ಸಂಖ್ಯೆಯ ರೈಲುಗಳನ್ನು ಓಡಿಸಲಾಗುತ್ತದೆ ಎಂದು ವಲಸೆ ಕಾರ್ಮಿಕರಿಗೆ ಧೈರ್ಯ ನೀಡಬೇಕು ಎಂದು ಒತ್ತಿಹೇಳಲಾಯಿತು. ವಲಸೆ ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ವೇಗವಾಗಿ ಸಾಗಿಸಲು ಅನುಕೂಲವಾಗುವಂತೆ ಮುಂದಿನ ಕೆಲವು ವಾರಗಳವರೆಗೆ ಪ್ರತಿದಿನ ನೂರಕ್ಕೂ ಹೆಚ್ಚು ರೈಲುಗಳು ಸಂಚರಿಸುವ ನಿರೀಕ್ಷೆಯಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622922

ಕೇಂದ್ರ ಗೃಹ ಸಚಿವಾಲಯದಿಂದ ರೈಲುಗಳ ಮೂಲಕ ಜನರ ಪ್ರಯಾಣಕ್ಕೆ ಸಹಕರಿಸಲು ನಿರ್ದಿಷ್ಟ ಕಾರ್ಯಾನುಷ್ಠಾನ ಮಾನದಂಡಗಳ ಬಿಡುಗಡೆ

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ರೈಲುಗಳ ಮೂಲಕ ಜನರ ಪ್ರಯಾಣಕ್ಕೆ ಸಹಕರಿಸಲು ನಿರ್ದಿಷ್ಟ ಕಾರ್ಯಾನುಷ್ಠಾನ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಖಚಿತಪಡಿಸಿದ -ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ರೈಲು ನಿಲ್ದಾಣಗಳಿಗೆ ಪ್ರವೇಶಿಸಲು, ನಿಲ್ದಾಣಗಳಿಗೆ ಬರಲು ಮತ್ತು ಹೋಗಲು ಅವಕಾಶ ನೀಡಲಾಗುವುದು. ಪ್ರತಿಯೊಬ್ಬ ಪ್ರಯಾಣಿಕರ ವೈದ್ಯಕೀಯ ತಪಾಸಣೆ ಕಡ್ಡಾಯವಾಗಿದೆ. ಸೋಂಕಿನ ಲಕ್ಷಣಗಳು ಇಲ್ಲದಿರುವವರಿಗೆ ಮಾತ್ರ ರೈಲುಗಳನ್ನು ಹತ್ತಲು ಅವಕಾಶ ಮಾಡಿಕೊಡಲಾಗುವುದು. ಪ್ರಯಾಣದ ವೇಳೆ ಮತ್ತು ರೈಲು ನಿಲ್ದಾಣಗಳಲ್ಲಿ, ಆರೋಗ್ತ ಮತ್ತು ಶುಚಿತ್ವದಶಿಷ್ಟಾಚಾರಗಳನ್ನು ಮತ್ತು ಸಾಮಾಜಿಕ ಅಂತರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲಾಗುವುದು.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622998

ಲಾಕ್ಡೌನ್  ನಂತರ ಉತ್ಪಾದನಾ ಕೈಗಾರಿಕೆಗಳನ್ನು ಪುನಾರಂಭಿಸಲು ಎನ್ಡಿಎಂಎ (ಎಂಹೆಚ್) ಮಾರ್ಗಸೂಚಿ ಬಿಡುಗಡೆ ಮಾಡಿದೆ

ಲಾಕ್ ಡೌನ್ ಅವಧಿಯ ನಂತರ ಉತ್ಪಾದನಾ ಕೈಗಾರಿಕೆಗಳನ್ನು ಪುನರಾರಂಭಿಸುವ ಕುರಿತು ಕೇಂದ್ರ ಗೃಹ ಸಚಿವಾಲಯವು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ವಿವರವಾದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆಯಾ ಪ್ರಮುಖ ಅಪಘಾತ ಅಪಾಯ (ಎಂಎಹೆಚ್) ಘಟಕಗಳ ಆಫ್-ಸೈಟ್ ವಿಪತ್ತು ನಿರ್ವಹಣಾ ಯೋಜನೆ ಅಪ್ ಡೇಟ್ ಆಗಿರುವುದು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಸಿದ್ಧವಾಗಿರುವುದನ್ನು ರಾಜ್ಯ ಸರ್ಕಾರಗಳು ಖಚಿತಪಡಿಸಿಕೊಳ್ಳಬೇಕು. ಜಿಲ್ಲೆಯ ಎಲ್ಲಾ ಜವಾಬ್ದಾರಿಯುತ ಅಧಿಕಾರಿಗಳು ಕೈಗಾರಿಕಾ ಆನ್-ಸೈಟ್ ವಿಪತ್ತು ನಿರ್ವಹಣಾ ಯೋಜನೆಗಳು ಜಾರಿಯಲ್ಲಿರುವುದನ್ನು ಮತ್ತು ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಮತ್ತು ನಂತರ ಕೈಗಾರಿಕೆಗಳನ್ನು ಸುರಕ್ಷಿತವಾಗಿ ಪುನರಾರಂಭಿಸಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಒಳಗೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622874

ವೈಜಾಗ್ ಅನಿಲ ಸೋರಿಕೆಯನ್ನು ನಿಭಾಯಿಸಲು ರಾಜ್ಯ ಸರ್ಕಾರಕ್ಕೆ ನೆರವಾಗಲು ಭಾರತೀಯ ವಾಯುಪಡೆಯು ಅಗತ್ಯ ರಾಸಾಯನಿಕಗಳನ್ನು ಸಾಗಿಸಿದೆ

ಆಂಧ್ರಪ್ರದೇಶ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕೋರಿಕೆಯ ಮೇರೆಗೆ, ಆಂಧ್ರಪ್ರದೇಶದ ವೈಜಾಗ್‌ನಲ್ಲಿರುವ ಎಲ್‌ಜಿ ಪಾಲಿಮರ್ಸ್‌ನ ಸ್ಟೈರೀನ್ ಮೊನೊಮರ್ ಶೇಖರಣಾ ತೊಟ್ಟಿಯಲ್ಲಿ ಸಂಭವಿಸಿದ ಅನಿಲ ಸೋರಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅಗತ್ಯವಾದ 8.3 ಟನ್ ಅಗತ್ಯ ರಾಸಾಯನಿಕಗಳನ್ನು ಐಎಎಫ್ ವಿಮಾನದಲ್ಲಿ ಸಾಗಿಸಲಾಗಿದೆ. ಅಲ್ಲದೆ, ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತ ಸರ್ಕಾರದ ಅವಶ್ಯಕತೆಗಳನ್ನು ಪೂರೈಸುವ ಭಾಗವಾಗಿ, ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ಎದುರಿಸಲು ರಾಜ್ಯ ಸರ್ಕಾರಗಳು ಮತ್ತು ಪೋಷಕ ಏಜೆನ್ಸಿಗಳನ್ನು ಸಜ್ಜುಗೊಳಿಸಲು ಅಗತ್ಯ ವಸ್ತುಗಳ ಸಾಗಣೆಯನ್ನು ಐಎಎಫ್ ಮುಂದುವರೆಸಿದೆ.. ಐಎಎಫ್ ತನ್ನ ಕಾರ್ಯಾಚರಣೆಯನ್ನು 25 ಮಾರ್ಚ್ 20 ರಂದು ಭಾರತ ಸರ್ಕಾರಕ್ಕೆ ಸಹಾಯ ಮಾಡಲು ಪ್ರಾರಂಭಿಸಿದಾಗಿನಿಂದ ಒಟ್ಟು 703 ಟನ್ ಸಾಮಗ್ರಿಯನ್ನು ವಿಮಾನಗಳ ಮೂಲಕ ಸಾಗಿಸಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623119

ಮಾಲ್ಡೀವ್ಸ್ ನಲ್ಲಿ ಸಂಕಷ್ಟದಲ್ಲಿದ್ದ ಭಾರತೀಯರು ಭಾರತೀಯ ನೌಕಾಪಡೆಯ ಸಮರ ನೌಕೆ ಐಎನ್ಎಸ್ ಜಲಾಶ್ವ ಮೂಲಕ ಕೊಚ್ಚಿಗೆ ಆಗಮನ

ಮಾಲ್ಡೀವ್ಸ್ ನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಸೇರಿದಂತೆ ಒಟ್ಟು 698 ಭಾರತೀಯ ನಾಗರಿಕರನ್ನು ಹೊತ್ತ. “ಆಪರೇಷನ್ ಸಮುದ್ರಸೇತು” ಗಾಗಿ ನಿಯೋಜಿಸಲಾಗಿರುವ ಐಎನ್‌ಎಸ್ ಜಲಾಶ್ವ, ಮೇ 10 ರಂದು ಬೆಳಿಗ್ಗೆ 10:00 ಗಂಟೆಗೆ ಕೊಚ್ಚಿ ಬಂದರಿಗೆ ತಲುಪಿತು.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622830

ಆಪರೇಷನ್ ಸಮುದ್ರಸೇತು - ಐಎನ್ಎಸ್ ಮಗರ್ ಭಾರತೀಯ ನಾಗರಿಕರೊಂದಿಗೆ ಮಾಲೆಯಿಂದ ನಿರ್ಗಮನ

ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಮಾಲ್ಡೀವ್ಸ್ ಮಾಲೆ ತಲುಪಿದ್ದ ಎರಡನೇ ಭಾರತೀಯ ನೌಕಾ ಹಡಗು ಐಎನ್ಎಸ್ ಮಗರ್, ಮಾಲೆಯಿಂದ ಹೊರಟಿದೆ. ವಂದೇ ಭಾರತ್ ಮಿಷನ್‌ನಡಿಯಲ್ಲಿ ಆಪರೇಷನ್ ಸಮುದ್ರಸೇತು ಭಾಗವಾಗಿ ಭಾರತೀಯ ನೌಕಾಪಡೆಯು ಮಾಲ್ಡೀವ್ಸ್ ನಿಂದ ಭಾರತೀಯ ನಾಗರಿಕರನ್ನು ಎರಡನೇ ಹಂತದಲ್ಲಿ ಕರೆತರಲು ಐಎನ್‌ಎಸ್ ಮಗರ್ ಅನ್ನು ನಿಯೋಜಿಸಿದೆ. ಮೊದಲ ಹಂತದಲ್ಲಿ, ಐಎನ್ಎಸ್ ಜಲಾಶ್ವ ಮೂಲಕ ಮೇ 10 ರಂದು ಮಾಲ್ಡೀವ್ಸ್ ನಲ್ಲಿ ಸಿಕ್ಕಿಬಿದ್ದ ಒಟ್ಟು 698 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲಾಗಿತ್ತು.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622776

ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 177 ಹೊಸ ಮಾರುಕಟ್ಟೆಗಳು -ನ್ಯಾಮ್ ಪ್ಲಾಟ್ಫಾರ್ಮ್ನೊಂದಿಗೆ ಸಂಯೋಜನೆ

ಕೃಷಿ ಮಾರುಕಟ್ಟೆಯನ್ನು ಬಲಪಡಿಸಲು ಮತ್ತು ರೈತರು ತಮ್ಮ ಕೊಯ್ಲು ಮಾಡಿದ ಉತ್ಪನ್ನಗಳನ್ನು ಆನ್‌ಲೈನ್ ಪೋರ್ಟಲ್ ಮೂಲಕ ಮಾರಾಟ ಮಾಡಲು ಅನುಕೂಲವಾಗುವಂತೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶ್ರೀನರೇಂದ್ರ ಸಿಂಗ್ ತೋಮರ್ ಅವರು ಇಂದು ರಾಷ್ಟ್ರೀಯ ಕೃಷಿ ಮಾರುಕಟ್ಟೆ (ಇ-ನ್ಯಾಮ್) ನೊಂದಿಗೆ 177 ಹೊಸ ಮಾರುಕಟ್ಟೆಗಳ ಸಂಯೋಜನೆಗೆ ಚಾಲನೆ ನೀಡಿದರು. ಇಂದು ಸಂಯೋಜಿಸಲಾದ ಮಾರುಕಟ್ಟೆಗಳು ಹೀಗಿವೆ: ಗುಜರಾತ್ (17), ಹರಿಯಾಣ (26), ಜಮ್ಮು ಮತ್ತು ಕಾಶ್ಮೀರ (1), ಕೇರಳ (5), ಮಹಾರಾಷ್ಟ್ರ (54), ಒಡಿಶಾ (15), ಪಂಜಾಬ್ (17), ರಾಜಸ್ಥಾನ (25), ತಮಿಳುನಾಡು (13) ಮತ್ತು ಪಶ್ಚಿಮ ಬಂಗಾಳ (1). 177 ಹೆಚ್ಚುವರಿ ಮಾರುಕಟ್ಟೆಗಳನ್ನು ಪ್ರಾರಂಭಿಸುವುದರೊಂದಿಗೆ, ದೇಶಾದ್ಯಂತ ಒಟ್ಟು ಇ-ನ್ಯಾಮ್ ಮಾರುಕಟ್ಟೆಗಳ ಸಂಖ್ಯೆ 962 ಆಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623067

ಲಾಕ್ ಡೌನ್ ಸಮಯದಲ್ಲಿ ಬೇಳೆಕಾಳುಗಳು ಮತ್ತು ಎಣ್ಣೆಕಾಳುಗಳ ಸಂಗ್ರಹ ಸ್ಥಿರ

9 ರಾಜ್ಯಗಳಿಂದ 2.74 ಲಕ್ಷ ಮೆಟ್ರಿಕ್ ಟನ್ ಕಡಲೆ ಕಾಳು ಸಂಗ್ರಹಿಸಲಾಗಿದೆ. 5 ರಾಜ್ಯಗಳಿಂದ 3.40 ಲಕ್ಷ ಮೆಟ್ರಿಕ್ ಟನ್ ಸಾಸಿವೆ ಸಂಗ್ರಹಿಸಲಾಗಿದೆ. ತೆಲಂಗಾಣದಿಂದ 1700 ಮೆ.ಟನ್ ಸೂರ್ಯಕಾಂತಿ ಸಂಗ್ರಹಿಸಲಾಗಿದೆ. 1.71 ಲಕ್ಷ ಮೆಟ್ರಿಕ್ ಟನ್ ಬೇಳೆಯನ್ನು 8 ರಾಜ್ಯಗಳಿಂದ ಸಂಗ್ರಹಿಸಲಾಗಿದೆ. ಬೇಸಿಗೆಯ ಭತ್ತದ ಬೆಳೆಯಲ್ಲಿ ಕಳೆದ ವರ್ಷದ ಇದೇ ಅವಧಿಯಲ್ಲಿ ಆಗಿದ್ದ ಬಿತ್ತನೆಯ 25.29 ಲಕ್ಷ ಹೆಕ್ಟೇರ್‌ಗೆ ಹೋಲಿಸಿದರೆ ವರ್ಷ ಸುಮಾರು 34.87 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ದ್ವಿದಳ ಧಾನ್ಯಗಳ ಅಡಿಯಲ್ಲಿ ಕಳೆದ ವರ್ಷದ ಇದೇ ಅವಧಿಯಲ್ಲಿ 5.92 ಲಕ್ಷ ಹೆಕ್ಟೇರ್‌ಗೆ ಹೋಲಿಸಿದರೆ ವರ್ಷ 10.35 ಲಕ್ಷ ಹೆಕ್ಟೇರ್ ಪ್ರದೇಶದ ವ್ಯಾಪ್ತಿ ಇದೆ. ಒರಟು ಸಿರಿಧಾನ್ಯಗಳ ಅಡಿಯಲ್ಲಿ ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 6.20 ಲಕ್ಷ ಹೆಕ್ಟೇರ್‌ಗೆ ಹೋಲಿಸಿದರೆ 9.57 ಲಕ್ಷ ಹೆಕ್ಟೇರ್ ಪ್ರದೇಶದ ವ್ಯಾಪ್ತಿಯಲ್ಲಿದೆ. ಎಣ್ಣೆಬೀಜಗಳ ಅಡಿಯಲ್ಲಿ ಕಳೆದ ವರ್ಷದ ಅನುಗುಣವಾದ ಅವಧಿಯಲ್ಲಿ 7.09 ಲಕ್ಷ ಹೆಕ್ಟೇರ್‌ಗೆ ಹೋಲಿಸಿದರೆ 9.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ರಾಬಿ ಮಾರುಕಟ್ಟೆ ಋತು 2020-21ರಲ್ಲಿ ಭಾರತ ಆಹಾರ ನಿಗಮಕ್ಕೆ ಒಟ್ಟು 241.36 ಲಕ್ಷ ಮೆಟ್ರಿಕ್ ಟನ್ ಗೋಧಿ ಬಂದಿದ್ದು, ಅದರಲ್ಲಿ 233.51 ಲಕ್ಷ ಮೆ.ಟನ್ ಖರೀದಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622787

ರಾಷ್ಟ್ರೀಯ ತಂತ್ರಜ್ಞಾನ ದಿನದ ಅಂಗವಾಗಿ ಪ್ರಧಾನಿಯವರಿಂದ ವಿಜ್ಞಾನಿಗಳಿಗೆ ಗೌರವ ಸಲ್ಲಿಕೆ

ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಇತರರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಶ್ರಮಿಸುತ್ತಿರುವ ದೇಶದ ಎಲ್ಲ ವಿಜ್ಞಾನಿಗಳಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಇಂದು ಗೌರವ ಸಲ್ಲಿಸಿದ್ದಾರೆ.

ರಾಷ್ಟ್ರೀಯ ತಂತ್ರಜ್ಞಾನ ದಿನದ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಶ್ರೀ ಮೋದಿ, “ಇಂದು, ಕೋವಿಡ್-19 ರಿಂದ ಜಗತ್ತನ್ನು ಮುಕ್ತಗೊಳಿಸುವ ಪ್ರಯತ್ನಗಳಲ್ಲಿ ತಂತ್ರಜ್ಞಾನವು ನೆರವಾಗುತ್ತಿದೆ. ಕೊರೊನಾವೈರಸ್ ಅನ್ನು ಮಣಿಸುವ ಮಾರ್ಗಗಳ ಬಗ್ಗೆ ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಮುಂಚೂಣಿಯಲ್ಲಿರುವ ಎಲ್ಲರಿಗೂ ನಾನು ವಂದಿಸುತ್ತೇನೆ. ಆರೋಗ್ಯಕರ ಮತ್ತು ಉತ್ತಮ ಗ್ರಹಕ್ಕಾಗಿ ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತೇವೆ ” ಎಂದು ಹೇಳಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623061

ಡಿಆರ್ಡಿಒದಿಂದ ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರಣೆ; ಭಾರತವು ತಂತ್ರಜ್ಞಾನದ ನಿವ್ವಳ ರಫ್ತುದಾರನಾಗಬೇಕು; ರಕ್ಷಣಾ ಸಚಿವರ ಕರೆ

ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯ (ಎನ್‌ಟಿಡಿ) ಸಂದರ್ಭದಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡಿದ ಶ್ರೀ ರಾಜನಾಥ್ ಸಿಂಗ್, ಭಾರತವನ್ನು ತಾಂತ್ರಿಕ ಶಕ್ತಿಶಾಲಿಯನ್ನಾಗಿ ಮಾಡಲು ಕೊಡುಗೆ ನೀಡುವಂತೆ ದೇಶದ ತಜ್ಞರ ಗುಂಪಿಗೆ ಕರೆ ನೀಡಿದರು. ಕೋವಿಡ್-19 ಒಡ್ಡಿರುವ ಸವಾಲುಗಳನ್ನು ರಕ್ಷಣಾ ಸಂಘಟನೆಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಎದುರಿಸುತ್ತಿವೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು. ಈ ಅದೃಶ್ಯ ಶತ್ರು ಒಡ್ಡಿರುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತದ ರಕ್ಷಣಾ ಪಡೆಗಳು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಯತ್ನಗಳು ಗಮನಾರ್ಹವಾಗಿ ಕೊಡುಗೆ ನೀಡಿವೆ ಎಂದು ಅವರು ಹೇಳಿದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622958

ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಆರ್ಥಿಕತೆಯನ್ನು ಪುನಃಸಿದ್ಧಗೊಳಿಸಲು ಭಾರತ ಸನ್ನದ್ಧವಾಗಿದೆ: ಡಾ. ಹರ್ಷವರ್ಧನ್

ಕೋವಿಡ್ -19 ವಿರುದ್ಧ ಭಾರತದ ಹೋರಾಟವು ಬಲವಾಗಿ ಮತ್ತು ಸ್ಥಿರವಾಗಿ ಸಾಗುತ್ತಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಇಂದು ಹೇಳಿದ್ದಾರೆ. ರಾಷ್ಟ್ರೀಯ ತಂತ್ರಜ್ಞಾನ ದಿನ ಆಚರಿಸಲು ಆಯೋಜಿಸಲಾಗಿದ್ದ RE-START – ‘ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಅನುವಾದಗಳ ಮೂಲಕ ಆರ್ಥಿಕತೆಯನ್ನು ರೀಬೂಟ್ ಮಾಡಿ’ ಎಂಬ ಡಿಜಿಟಲ್ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622992

ಕೋವಿಡ್-19 ಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳ ಕುಂದುಕೊರತೆಗಳು, ಪ್ರಶ್ನೆಗಳು ಮತ್ತು ಇತರ ಶೈಕ್ಷಣಿಕ ವಿಚಾರಗಳ ಮೇಲ್ವಿಚಾರಣೆಗೆ ಯುಜಿಸಿ ಹಲವಾರು ಕ್ರಮಗಳನ್ನು ಕೈಗೊಂಡಿದೆ

29 ಏಪ್ರಿಲ್ 2020 ರಂದು ಸಾಂಕ್ರಾಮಿಕ ಬಿಕ್ಕಟ್ಟಿನ ದೃಷ್ಟಿಯಿಂದ ಯುಜಿಸಿ ಪರೀಕ್ಷೆಗಳು ಮತ್ತು ಶೈಕ್ಷಣಿಕ ಕ್ಯಾಲೆಂಡರ್ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅದರಂತೆ ಎಲ್ಲ ವಿಶ್ವ ವಿದ್ಯಾಲಯಗಳು, ಎಲ್ಲ ಶೈಕ್ಷಣಿಕ ಹೂಡಿಕೆದಾರರ ಸುರಕ್ಷತೆ ಮತ್ತು ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತಮ್ಮ ಶೈಕ್ಷಣಿಕ ಚಟುವಟಿಕೆಯನ್ನು ಯೋಜಿಸಲು ಸೂಚಿಸಲಾಗಿದೆ. ಸಂಬಂಧಪಟ್ಟವರ ಎಲ್ಲರ ಆರೋಗ್ಯ ಸಂರಕ್ಷಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಆದರೆ ಮರ್ಗಸೂಚಿಗಳನ್ನು ಅಳವಡಿಸಿಕೊಂಡು ಇದನ್ನು ಕಾರ್ಯಗತಗೊಳಿಸಬೇಕಾಗುತ್ತದೆ. ಸಾಂಕ್ರಾಮಿಕ ಬಿಕ್ಕಟ್ಟಿನಿಂದ ಉದ್ಭವಿಸಬಹುದಾದ ಪರೀಕ್ಷೆಗಳು ಮತ್ತು ಇತರ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ನಿಯಂತ್ರಿಸಲು ಒಂದು ಘಟಕವನ್ನು ಸ್ಥಾಪಿಸಲು ವಿಶ್ವ ವಿದ್ಯಾಲಯಗಳಿಗೆ ಮನವಿ ಮಾಡಿಕೊಳ್ಳಲಾಗಿದೆ ಮತ್ತು ವಿದ್ಯಾರ್ಥಿಗಳಿಗೂ ಕುರಿತು ಸೂಚಿಸಬೇಕಾಗಿ ತಿಳಿಸಲಾಗಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622921

ಮಾನವ ಸಂಪನ್ಮೂಲ ಸಚಿವಾಲಯವು ಒಡಿಶಾದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಭಾವನಾತ್ಮಕ ಪುನರ್ವಸತಿ ಸೇವೆಗಳ ಕುರಿತು ಒಡಿಶಾದ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಭರೋಸಾಸಹಾಯವಾಣಿಯನ್ನು ಪ್ರಾರಂಭಿಸಿದೆ

ಕೋವಿಡ್-19 ಸಾಂಕ್ರಾಮಿಕದ ಸಂಕಷ್ಟದ ಸಮಯದಲ್ಲಿ ವಿದ್ಯಾರ್ಥಿ ಸಮುದಾಯದ ಸಂಕಷ್ಟವನ್ನು ನಿವಾರಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಇಂದು ವರ್ಚುವಲ್ ಪ್ಲಾಟ್‌ಫಾರ್ಮ್ ಮೂಲಕ ಒಡಿಶಾ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯವಾಣಿ “ಭರೋಸಾ” ಮತ್ತು ಅದರ ಸಹಾಯವಾಣಿ ಸಂಖ್ಯೆಗೆ- 08046801010- ಚಾಲನೆ ನೀಡಿದರು. ಸಂದರ್ಭದಲ್ಲಿ ಮಾತನಾಡಿದ ಶ್ರೀ ರಮೇಶ್ ಪೋಖ್ರಿಯಲ್ ನಿಶಾಂಕ್ ಅವರು ಕೋವಿಡ್-19 ಸಾಂಕ್ರಾಮಿಕ ರೋಗದ ದಾಳಿಯಿಂದ ರಾಷ್ಟ್ರವು ಕಠಿಣ ಸಮದರ್ಭವನ್ನು ಎದುರಿಸುತ್ತಿದೆ ಎಂದರು.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622126

ಲಸಿಕೆಗಳು, ರೋಗನಿರ್ಣಯ, ಚಿಕಿತ್ಸಕ ಮತ್ತು ಇತರ ತಂತ್ರಜ್ಞಾನಗಳಲ್ಲಿ ಧನಸಹಾಯಕ್ಕಾಗಿ DBT-BIRAC ಕೋವಿಡ್ -19 ಸಂಶೋಧನಾ ಒಕ್ಕೂಟವು 70 ಪ್ರಸ್ತಾಪಗಳನ್ನು ಶಿಫಾರಸು ಮಾಡಿದೆ

SARS CoV-2 ವಿರುದ್ಧ ಸುರಕ್ಷಿತ ಮತ್ತು ಪರಿಣಾಮಕಾರಿ ಬಯೋಮೆಡಿಕಲ್ ಪರಿಹಾರಗಳನ್ನು ತುರ್ತಾಗಿ ಅಭಿವೃದ್ಧಿಪಡಿಸಲು, ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಜೈವಿಕ ತಂತ್ರಜ್ಞಾನ ಕೈಗಾರಿಕಾ ಸಂಶೋಧನಾ ನೆರವು ಮಂಡಳಿ (BIRAC) ಕೋವಿಡ್-19 ಸಂಶೋಧನಾ ಒಕ್ಕೂಟಕ್ಕೆ ಅರ್ಜಿಗಳನ್ನು ಆಹ್ವಾನಿಸಿತ್ತು. ಹಲವು ವಿಧದದ ಪರಿಶೀಲನೆಯ ನಂತರ, ಸಾಧನಗಳು, ಡಯಾಗ್ನೋಸ್ಟಿಕ್ಸ್, ಲಸಿಕೆ, ಚಿಕಿತ್ಸಕರು ಮತ್ತು ಇತರ ಮಧ್ಯಸ್ಥಿಕೆಗಳಲ್ಲಿ ಹಣಕಾಸಿನ ನೆರವು ಪಡೆಯಲು 70 ಪ್ರಸ್ತಾಪಗಳನ್ನು ಶಿಫಾರಸು ಮಾಡಲಾಗಿದೆ. ಆಯ್ದಪಟ್ಟಿಯಲ್ಲಿ ಮಾಡಿದ ಪ್ರಸ್ತಾಪಗಳಲ್ಲಿ 10 ಲಸಿಕೆಗಳು, 34 ಡಯಾಗ್ನೋಸ್ಟಿಕ್ಸ್ ಉತ್ಪನ್ನಗಳು ಅಥವಾ ಸ್ಕೇಲ್-ಅಪ್ ಸೌಲಭ್ಯಗಳು, 10 ಚಿಕಿತ್ಸಕ ಆಯ್ಕೆಗಳು, ಔಷಧ ಮರುಬಳಕೆ ಕುರಿತು 02 ಪ್ರಸ್ತಾಪಗಳು ಮತ್ತು ತಡೆಗಟ್ಟುವ ಮಧ್ಯಸ್ಥಿಕೆ ಎಂದು ವರ್ಗೀಕರಿಸಲಾದ 14 ಯೋಜನೆಗಳು ಸೇರಿವೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622757

ಕೊರೊನಾ ವೈರಸ್ ನಿಯಂತರಿಸಲು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಕುಂಬಾರರಿಂದ ಹೊಸ ವಿಧಾನ

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಣ್ಣದೊಂದು ಪ್ರಯತ್ನದಹೆಜ್ಜೆ ಕೂಡ ದೊಡ್ಡಭರವಸೆಯನ್ನು ಮೂಡಿಸುವ ಸಮಯದಲ್ಲಿ, ರಾಜಸ್ಥಾನದ ಹಳ್ಳಿಯೊಂದರಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ(ಕೆವಿಐಸಿ)ದ ಹಲವಾರು ಕುಂಬಾರರು ಕರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ವಿಶಿಷ್ಟ ಅಭಿಯಾನ ಪ್ರಾರಂಭಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ರಾಜಸ್ಥಾನದ ಬರಾನ್ ಜಿಲ್ಲೆಯ ಕಿಶಂಗಂಜ್ ಗ್ರಾಮದ ಕುಂಬಾರರು, ತಾವು ತಯಾರಿಸಿದ ಪ್ರತಿಯೊಂದು ಮಣ್ಣಿನ ಮಡಕೆ, ವಿಶೇಷವಾಗಿ ನೀರಿನ ಹೂಜಿಗಳಲ್ಲಿ ಕರೋನಾ ವಿರುದ್ಧ ಹೋರಾಡುವ ಮಾರ್ಗವಿಧಾನಗಳ ಬಗ್ಗೆ ಸಂದೇಶ ಸಾರಿದ್ದಾರೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1623071

ಪ್ರವಾಸೋದ್ಯಮ ಸಚಿವಾಲಯವುದೇಖೋ ಅಪ್ನಾ ದೇಶ್ವೆಬಿನಾರ್ ಸರಣಿಯ 17 ನೇ ಅಧಿವೇಶನವನ್ನುಎಕ್ಸ್ಪ್ಲೋರಿಂಗ್ ರಿವರ್ ನೀಲಾಕುರಿತು ಆಯೋಜಿಸಿದೆ

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622761

ಕೋವಿಡ್-19ನ್ನು ಎದುರಿಸಲು ಡೆಹ್ರಾಡೂನ್ ಸ್ಮಾರ್ಟ್ ಸಿಟಿಯು ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್, ಸಿಸಿಟಿವಿಗಳು ಮತ್ತು ಲಾಕ್ಡೌನ್ ಪಾಸ್ಗಳನ್ನು ಒಳಗೊಂಡಂತೆ ಹಲವಾರು ಕ್ರಮಗಳನ್ನು ಕೈಗೊಂಡಿದೆ

ವಿವರಗಳಿಗಾಗಿ: https://pib.gov.in/PressReleseDetail.aspx?PRID= 1622892

 

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

 • ಹಿಮಾಚಲ ಪ್ರದೇಶ: ದೇಶದ ವಿವಿಧ ಭಾಗಗಳಲ್ಲಿ ಸಿಲುಕಿರುವ ಹಿಮಾಚಲ ಪ್ರದೇಶದ ಎಲ್ಲಾ ನಾಗರಿಕರು ರಾಜ್ಯಕ್ಕೆ ಮರಳಲು ಸಿದ್ಧರಿದ್ದರೆ ಅವರು ಸಂಪೂರ್ಣವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಟ್ಟು ತಮ್ಮ ಸ್ವಂತ ಸ್ಥಳಕ್ಕೆ ಹೋಗುವ ಮೊದಲು ಸಾಂಸ್ಥಿಕ ಕ್ಯಾರೆಂಟೈನ್ ಅಡಿಯಲ್ಲಿ ಉಳಿಯಬೇಕಾಗುತ್ತದೆ. ಅನ್ಯ ರಾಜ್ಯದಲ್ಲಿ ಸಿಲುಕಿರುವ ಹಿಮಾಚಲಿಯರನ್ನು ಮರಳಿ ಕರೆತರುವ ಕುರಿತಂತೆ ಆಯಾ ರಾಜ್ಯ ಸರ್ಕಾರಗಳು ನಿಯುಕ್ತಿಗೊಳಿಸಿರುವ ನೋಡಲ್ ಅಧಿಕಾರಿಗಳೊಂದಿಗೆ ಆಪ್ತ ಸಂಪರ್ಕ ಹೊಂದಿ ಪ್ರಕ್ರಿಯೆ ಖಾತ್ರಿ ಪಡಿಸುವಂತೆ ನೋಡಲ್ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ, ಶೀಘ್ರ ಈ ವಿಚಾರದ ಬಗ್ಗೆ ಆಯಾ ರಾಜ್ಯಗಳೊಂದಿಗೆ ಚರ್ಚಿಸಲಾಗುವುದೆಂದರು. ವಿದ್ಯಾರ್ಥಿಗಳು ಅತ್ಯಂತ ದುರ್ಬಲ ವಿಭಾಗದವರಾಗಿದ್ದು, ಅವರನ್ನು ಮತ್ತೆ ರಾಜ್ಯಕ್ಕೆ ಕರೆತರಲು ಆದ್ಯತೆ ನೀಡಲಾಗುವುದು ಎಂದು ಹೇಳಿದರು.
 • ಪಂಜಾಬ್: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದ ಸಂದರ್ಭದಲ್ಲಿ ಸಾವನ್ನಪ್ಪುವ ಕರ್ತವ್ಯನಿರತ ಸರ್ಕಾರಿ ನೌಕರರ ಅವಲಂಬಿತ ಸದಸ್ಯರು / ನೌಕರರ ಕಾನೂನು ಬದ್ಧ ಉತ್ತರಾಧಿಕಾರಿಗಳಿಗೆ 50 ಲಕ್ಷ ರೂ. ಎಕ್ಸ್-ಗ್ರೇಷಿಯಾ ಪರಿಹಾರವನ್ನು ನೀಡುವ ಬಗ್ಗೆ ಹಣಕಾಸು ಇಲಾಖೆ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೋವಿಡ್ -19 ರ ಸಾಂಕ್ರಾಮಿಕ ರೋಗಕ್ಕೆ ಮಾತ್ರ ಪರಿಹಾರ ಸೀಮಿತವಾಗಿದ್ದು, ಇದು 2020 ರ ಏಪ್ರಿಲ್ 1 ರಿಂದ 2020 ರ ಜುಲೈ 31 ರವರೆಗೆ ಜಾರಿಯಲ್ಲಿರುತ್ತದೆ, ಆ ನಂತರ ಪರಿಶೀಲನೆಗೆ ಒಳಪಟ್ಟಿರುತ್ತದೆ.
 • ಹರಿಯಾಣ: ಹರಿಯಾಣದಲ್ಲಿ ತರಕಾರಿ ವ್ಯಾಪಾರಿಗಳು, ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿ, ಔಷಧ ಮಾರಾಟಗಾರರು, ಡಿಪೋ ಹೊಂದಿರುವವರು, ನೈರ್ಮಲ್ಯ ಕಾರ್ಯಕರ್ತರು ಮೊದಲಾದವರುಗಳಿಗೆ ಯಾದೃಚ್ಛಿಕವಾಗಿ (ರಾಂಡಮ್) ಕೋವಿಡ್ ಮಾದರಿ ಪರೀಕ್ಷೆಯ ವಿಶೇಷ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಸಮರ್ಪಿತ ಕೋವಿಡ್ ಆರೈಕೆ ಕೇಂದ್ರದಲ್ಲಿ 26,125 ಕ್ವಾರಂಟೈನ್ ಸೌಲಭ್ಯದ ಹಾಸಿಗೆಗಳು ಮತ್ತು ಸಮರ್ಪಿತ ಕೋವಿಡ್ ಆಸ್ಪತ್ರೆಗಳಲ್ಲಿ ಮತ್ತು ಸಮರ್ಪಿತ ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ 8,751 ಹಾಸಿಗೆಗಳು ಲಭ್ಯವಿದೆ.
 • ಕೇರಳ: ಕೇರಳ ಮತ್ತು ನವದೆಹಲಿ ನಡುವೆ ಒಂದು ವಾರದಲ್ಲಿ ಆರು ರಾಜಧಾನಿ ರೈಲುಗಳನ್ನು ರೈಲ್ವೆ ಇಲಾಖೆ ಮಂಗಳವಾರದಿಂದ ಪ್ರಾರಂಭಿಸಲಿದೆ. ರೈಲುಗಳು ಕೋಳಿಕೋಡ್ ಮತ್ತು ಎರ್ನಾಕುಲಂ ರೈಲ್ವೆ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಲಿದ್ದು, ಕೊಂಕಣ ಮಾರ್ಗದ ಮೂಲಕ ಸಾಗುತ್ತವೆ. ಅಗತ್ಯವಾದ ಪಾಸ್ ಇಲ್ಲದೆ ಕೇರಳಕ್ಕೆ ಬರುವ ಜನರನ್ನು ಗಡಿಯಲ್ಲಿ ತಮಿಳುನಾಡು ಪೊಲೀಸರು ನಿಲ್ಲಿಸಬೇಕು ಎಂದು ಕೇರಳ ಮತ್ತು ತಮಿಳುನಾಡಿನ ಡಿಜಿಪಿಗಳು ನಿರ್ಧರಿಸಿದ್ದಾರೆ. ಪ್ರಸಕ್ತ ಚಾಲ್ತಿಯಲ್ಲಿರುವ ವಂದೇ ಭಾರತ್ ಅಭಿಯಾನದಡಿ ದುಬೈನಿಂದ ಕೊಚ್ಚಿಗೆ ಹಾಗೂ ಬಹ್ರೇನ್‌ ನಿಂದ ಕೋಳಿಕೋಡ್‌ಗೆ ಎರಡು ವಿಮಾನಗಳು ಇಂದು ರಾತ್ರಿ ಆಗಮಿಸಲಿವೆ. ಲಾಕ್ ಡೌನ್ ನಂತರ ಮದ್ಯದಂಗಡಿಗಳನ್ನು ತೆರೆದಾಗ ಆಗಬಹುದಾದ ದಟ್ಟಣೆ ನಿಯಂತ್ರಿಸಲು ಆನ್‌ ಲೈನ್ ಕ್ಯೂ ಸೌಲಭ್ಯವನ್ನು ವ್ಯವಸ್ಥೆ ಮಾಡಲು ಕೇರಳ ರಾಜ್ಯ ಪಾನೀಯಗಳ ನಿಗಮ ಸಿದ್ಧತೆ ನಡೆಸಿದೆ.
 • ತಮಿಳುನಾಡು: ಎಲ್ಲಾ ವಲಸೆ ಕಾರ್ಮಿಕರನ್ನು ಒಂದು ವಾರದೊಳಗೆ ಮನೆಗೆ ಕಳುಹಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ; ಇಲ್ಲಿಯವರೆಗೆ ವಿಶೇಷ ರೈಲುಗಳಲ್ಲಿ 9000 ಕ್ಕೂ ಹೆಚ್ಚು ಜನರನ್ನು ಕಳುಹಿಸಲಾಗಿದೆ. 47 ದಿನಗಳ ನಂತರ ರಾಜ್ಯದಲ್ಲಿ ಹೆಚ್ಚಿನ ಚಿಲ್ಲರೆ ವ್ಯಾಪಾರ ಮಳಿಗೆಗಳು ಮತ್ತೆ ತೆರೆಯಲಿವೆ, ರಸ್ತೆ ಸಂಚಾರ ಹೆಚ್ಚಾಗಲಿದೆ. ಚೆನ್ನೈನ ಎರಡು ಸರ್ಕಾರಿ ಆಸ್ಪತ್ರೆಗಳು ಕೋವಿಡ್ -19 ಕ್ಕೆ ಪರಿಣಾಮಕಾರಿ ಚಿಕಿತ್ಸೆಯನ್ನು ಕಂಡುಹಿಡಿಯಲು ಸಹಾಯ ಮಾಡಲು ಡಬ್ಲ್ಯುಎಚ್‌ಒ ಪ್ರಾರಂಭಿಸಿರುವ ಅಂತಾರಾಷ್ಟ್ರೀಯ ಕ್ಲಿನಿಕಲ್ ಪ್ರಯೋಗಏಕಮತ್ಯ ಪ್ರಯೋಗಉಪಕ್ರಮಕ್ಕಾಗಿ ಆಯ್ಕೆಯಾಗಿವೆ. ಕೋವಿಡ್ ಹರಡುವಿಕೆಯಿಂದಾಗಿ ಕೊಯೆಂಬೆಡು ಮಾರುಕಟ್ಟೆ ಮುಚ್ಚಿದ ನಂತರ ತಿರುಮಾಜೈಸೈನಲ್ಲಿ ಹೊಸ ಸಗಟು ತರಕಾರಿ ಮತ್ತು ಹಣ್ಣುಗಳ ಮಾರುಕಟ್ಟೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಇಲ್ಲಿಯವರೆಗೆ ಒಟ್ಟು ಪ್ರಕರಣಗಳು: 7204, ಸಕ್ರಿಯ ಪ್ರಕರಣಗಳು: 5195, ಸಾವು: 47, ಗುಣಮುಖರಾದವರು: 1959. ಚೆನ್ನೈನಲ್ಲಿ ಸಕ್ರಿಯ ಪ್ರಕರಣಗಳು 3839.
 • ಕರ್ನಾಟಕ: ಇಂದು 10 ಹೊಸ ಪ್ರಕರಣಗಳು ವರದಿಯಾಗಿವೆ: ದಾವಣಗೆರೆ 3, ಬೀದರ್ ಮತ್ತು ಬಾಗಲಕೋಟೆ ತಲಾ 2, ಕಲ್ಬುರ್ಗಿ, ಹಾವೇರಿ ಮತ್ತು ವಿಜಯಪುರ ತಲಾ ಒಂದು. ಇಲ್ಲಿಯವರೆಗೆ ಒಟ್ಟು ಪ್ರಕರಣಗಳು: 858, ಸಾವು: 31; ಚೇತರಿಸಿಕೊಂಡವರು: 422. ವಂದೇ ಭಾರತ್ ಮಿಷನ್‌ ನ ಅಂಗವಾಗಿ ಲಂಡನ್‌ ನಲ್ಲಿ ಸಿಲುಕಿಕೊಂಡಿದ್ದ ಸುಮಾರು 200 ಕನ್ನಡಿಗರು ಇಂದು ಬೆಳಗ್ಗೆ ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದರು. ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು ಮತ್ತು ಎಲ್ಲಾ ಪ್ರಯಾಣಿಕರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಕೋವಿಡ್ ಬಿಕ್ಕಟ್ಟಿನ ಮಧ್ಯೆ ಹೂಡಿಕೆಗಳನ್ನು ಆಕರ್ಷಿಸಲು ರಾಜ್ಯ ಸರ್ಕಾರ ವಿಶೇಷ ಕಾರ್ಯಪಡೆ ರಚಿಸುತ್ತದೆ.
 • ಆಂಧ್ರಪ್ರದೇಶ: ಕೋವಿಡ್ -19 ರ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹೈಕೋರ್ಟ್ ನಡೆಸಿದೆ; ವಿಚಾರಣೆಯನ್ನು ನ್ಯಾಯಾಲಯವು ಶುಕ್ರವಾರಕ್ಕೆ ಮುಂದೂಡಿದೆ. ಏತನ್ಮಧ್ಯೆ, ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಕರ್ನೂಲ್ ಜಿಲ್ಲೆಯಲ್ಲಿ ಕೇಂದ್ರ ತಂಡದ ಭೇಟಿ ಎರಡನೇ ದಿನವೂ ಮುಂದುವರೆದಿದೆ. ಕೋವಿಡ್ - 19 38 ಹೊಸ ಪ್ರಕರಣಗಳು ವರದಿಯಾಗಿವೆ; 7409 ಮಾದರಿಗಳನ್ನು ಪರೀಕ್ಷಿಸಿದ ನಂತರ ಕಳೆದ 24 ಗಂಟೆಗಳಲ್ಲಿ 73 ಜನರನ್ನು ಬಿಡುಗಡೆ ಮಾಡಲಾಗಿದೆ ಮತ್ತು ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಪ್ರಕರಣಗಳು 2018 ಕ್ಕೆ ಏರಿವೆ. ಸಕ್ರಿಯ ಪ್ರಕರಣಗಳು: 975, ಚೇತರಿಸಿಕೊಂಡವರು: 998, ಸಾವು: 45. ಚಿತ್ತೂರಿನಿಂದ ವರದಿಯಾದ ಒಂಬತ್ತು ಪ್ರಕರಣಗಳಲ್ಲಿ ಎಂಟು ಪ್ರಕರಣಗಳು ಚೆನ್ನೈನ ಕೊಯೆಂಬೆಡುಗೆ ಸಂಪರ್ಕ ಹೊಂದಿವೆ. ಸೋಂಕು ದೃಢವಾದ ಪ್ರಕರಣಗಳಲ್ಲಿ ಪ್ರಮುಖವಾಗಿರುವ ಜಿಲ್ಲೆಗಳು: ಕರ್ನೂಲ್ (575), ಗುಂಟೂರು (387) ಮತ್ತು ಕೃಷ್ಣ (342).
 • ತೆಲಂಗಾಣ: ಯುಎಸ್.ಎನಲ್ಲಿ ಸಿಲುಕಿದ್ದ 118 ಜನರು ವಂದೇ ಭಾರತ್ ಮಿಷನ್‌ ನ ಅಂಗವಾಗಿ ಇಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಏರ್ ಇಂಡಿಯಾ ವಿಮಾನದ ಮೂಲಕ ಅಬುಧಾಬಿ (ಯುಎಇ) ಯ ಮತ್ತೊಂದು ತಂಡದಲ್ಲಿ ಭಾರತೀಯರು ಸೋಮವಾರ ರಾತ್ರಿ 9.30 ರ ಸುಮಾರಿಗೆ ಆಗಮಿಸುವ ನಿರೀಕ್ಷೆಯಿದೆ. ಇತರ ರಾಜ್ಯಗಳಿಂದ ಹಿಂದಿರುಗಿದ ವಲಸೆ ಕಾರ್ಮಿಕರು ಕೋವಿಡ್ -19 ಪರೀಕ್ಷೆ ನಡೆಸುತ್ತಿರುವುದರಿಂದ ರಾಜ್ಯ ಸರ್ಕಾರ ಒಟ್ಟು ಸೋಂಕಿನ ಸಂಖ್ಯೆ ಹೆಚ್ಚುತ್ತಿದೆ. ಲಾಕ್ ಡೌನ್ ಬಳಿಕ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳನ್ನು ತಮ್ಮ ನಿಯಮಿತ ಕೆಲಸದ ಸಮಯವನ್ನು ಮೀರಿ ತೆರೆಯುವ ಪ್ರಸ್ತಾಪವು ಪರಿಗಣನೆಯಲ್ಲಿದೆ. ನಿನ್ನೆವರೆ ಒಟ್ಟು ಸೋಂಕಿತ ಪ್ರಕರಣಗಳು 1196, ಸಕ್ರಿಯ ಪ್ರಕರಣಗಳು 415, ಬಿಡುಗಡೆಯಾದವರು 751, ಸಾವು 30.
 • ಅರುಣಾಚಲ ಪ್ರದೇಶ: IMAIndiaOrg ನ ಅರುಣಾಚಲ್ ಅಧ್ಯಾಯದೊಂದಿಗೆ ರಾಜ್ಯದ ಕೋವಿಡ್ -19 ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಮುಖ್ಯಮಂತ್ರಿ ಚರ್ಚಿಸಿದ್ದಾರೆ.
 • ಅಸ್ಸಾಂ: ಗುವಾಹಟಿಯ ಸಾರುಸಜೈ ಕ್ರೀಡಾಂಗಣದ ರೀತಿಯಲ್ಲಿಯೇ ಸ್ಥಾಪಿಸಲಾಗುತ್ತಿರುವ ಕ್ವಾರಂಟೈನ್ ಸೌಲಭ್ಯಗಳನ್ನು ಪರಿಶೀಲಿಸಲು ಆರೋಗ್ಯ ಸಚಿವರು ಇಂದು ಜೋರ್ಹತ್‌ ನ ಕಾಜಿರಂಗ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು.
 • ಮಣಿಪುರ: ರೈಲುಗಳ ಮೂಲಕ ರಾಜ್ಯಕ್ಕೆ ಮರಳುವ ಜನರಿಗೆ ಗೃಹ ಇಲಾಖೆ ಎಸ್‌ಒಪಿಗಳನ್ನು ನೀಡಿದೆ. ವೈದ್ಯಕೀಯವಾಗಿ ಸದೃಢ ವ್ಯಕ್ತಿಗಳಿಗೆ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ. ಮಣಿಪುರದ ಜಿರಿಬಮ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರನ್ನು ವೈದ್ಯಕೀಯ ತಪಾಸಣೆಯ ಬಳಿಕ ಸರ್ಕಾರಿ ಬಸ್ ಗಳಲ್ಲಿ ಕ್ವಾರಂಟೈನ್ ಕೇಂದ್ರಗಳಿಗೆ ತೆಗೆದುಕೊಂಡು ಹೋಗಲಾಯಿತು.
 • ಮಿಜೋರಾಂ: ಮಿಜೋರಾಂ ಮುಖ್ಯಮಂತ್ರಿ ಜೋರಾಂತಂಗಾ ರಾಜ್ಯ ಕೋವಿಡ್ 19 ಮುಕ್ತವಾಗಿರುವ ಶ್ರೇಯಸ್ಸನ್ನು ಜನತೆಯ ಶಿಸ್ತಿಗೆ ಸಮರ್ಪಿಸಿದ್ದಾರೆ.
 • ನಾಗಾಲ್ಯಾಂಡ್ : ನಾಗಾಲ್ಯಾಂಡ್ ಡಿಆರ್.ಡಿ.ಎ. ಮಾನ್ ಜಿಲ್ಲೆ ಮತ್ತು ಸುತ್ತಮುತ್ತಲಿನ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ತೀವ್ರ ಕೃಷಿ ಚಟುವಟಿಕೆಗಳನ್ನು ಕೈಗೊಂಡಿದೆ. ಮೆರೆಮಾ ಗ್ರಾಮದಲ್ಲಿ 545 ಹಾಸಿಗೆಗಳು ಮತ್ತು ಕೆ ಬ್ಯಾಡ್ಜೆ ಕೊಹಿಮಾ ಗ್ರಾಮದಲ್ಲಿ 254 ಹಾಸಿಗೆಗಳ ಕ್ವಾರಂಟೈನ್ ಕೇಂದ್ರವನ್ನು ರಾಜ್ಯಕ್ಕೆ ಮರಳುವ ವ್ಯಕ್ತಿಗಳಿಗಾಗಿ ಸಿದ್ಧಪಡಿಸಲಾಗಿದೆ.
 • ಸಿಕ್ಕಿಂ: ಸಿಕ್ಕಿಂ ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆ (ಕೋವಿಡ್ -19) ನಿಯಮಗಳು, 2020 ನ್ನು ತಕ್ಷಣದಿಂದ ಅನುಷ್ಠಾನಗೊಳಿಸಲಾಗಿದ್ದು, ಸಾರ್ವಜನಿಕ ಅಥವಾ ಕೆಲಸದ ಸ್ಥಳಗಳಲ್ಲಿ ಮಾಸ್ಕ್ ಧರಿಸದ ಯಾವುದೇ ವ್ಯಕ್ತಿ ಕಂಡುಬಂದಲ್ಲಿ 300ರೂ ದಂಡ ಹಾಕುವ ಅಧಿಕಾರವನ್ನು ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಗೆ ನೀಡಿದೆ; ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ ಮತ್ತು ಸಾಮಾಜಿಕ ಅಂತರದ ಮಾನದಂಡಗಳ ಕಟ್ಟುನಿಟ್ಟಿನ ಪಾಲನೆಗೆ ಆದೇಶಿಸಲಾಗಿದೆ.
 • ತ್ರಿಪುರಾ: ಮಹಾರಾಷ್ಟ್ರದಿಂದ ಸಿಲುಕಿರುವ ಜನರನ್ನು ಕರೆತರಲು ಮುಂಬೈಯಿಂದ ಅಗರ್ತಲಾಕ್ಕೆ ಶ್ರಮಿಕ ವಿಶೇಷ ರೈಲು ಓಡಿಸಲು ಸರ್ಕಾರ ನಿರ್ಧರಿಸಿದೆ; ಇಚ್ಛಿಸುವ ಪ್ರಯಾಣಿಕರು covid19.tripura.gov.in ನಲ್ಲಿ ನೋಂದಾಯಿಸಿಕೊಳ್ಳಬಹುದು.
 • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಭಾನುವಾರ 1,278 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳ ಸಂಖ್ಯೆ 22,171 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯವು 53 ವೈರಸ್ ಸಂಬಂಧಿತ ಸಾವುಗಳಿಗೆ ಸಾಕ್ಷಿಯಾಗಿದೆ ಮತ್ತು ಒಟ್ಟು ಸಾವಿನ ಸಂಖ್ಯೆ 832 ಕ್ಕೆ ತಲುಪಿದೆ. ನಿನ್ನೆ ರಾಜ್ಯ ರಾಜಧಾನಿಯಾದ ಮುಂಬೈನಲ್ಲಿ 875ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣ ವರದಿಯಾಗಿದ್ದು, ಒಟ್ಟು ಸಂಖ್ಯೆ 13,564 ಕ್ಕೆ ಏರಿದೆ ಮತ್ತು ಇನ್ನೂ 19 ಸಾವುಗಳು ಸಂಭವಿಸಿವೆ, ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 508 ಆಗಿದೆ. ಸುಮಾರು 6 ಲಕ್ಷ ಕಾರ್ಮಿಕರು ಕೆಲಸ ಮಾಡುವ ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಸುಮಾರು 25 ಸಾವಿರ ಕಂಪನಿಗಳು ಪುನರಾರಂಭಿಸಿವೆ ಎಂದು ಮಹಾರಾಷ್ಟ್ರ ಕೈಗಾರಿಕಾ ಸಚಿವ ಶ್ರೀ ಸುಭಾಷ್ ದೇಸಾಯಿ ಹೇಳಿದ್ದಾರೆ. ಹೆಚ್ಚು ಕೈಗಾರಿಕೆಗಳಿರುವ ಮುಂಬೈ- ಥಾಣೆ - ಪಿಂಪ್ರಿ-ಚಿಂಚ್‌ವಾಡ್ - ಪುಣೆಯ ಉತ್ಪಾದನಾ ಘಟಕಗಳು ಕೆಂಪು ವಲಯದ ಅಡಿಯಲ್ಲಿ ಬರುತ್ತವೆ ಹೀಗಾಗಿ ಅವು ಕಾರ್ಯನಿರ್ವಹಿಸುವುದಿಲ್ಲ.
 • ಗುಜರಾತ್: 398 ಹೊಸ ಕೋವಿಡ್ 19 ಪ್ರಕರಣಗಳು ಗುಜರಾತ್ ನಲ್ಲಿ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8195ಕ್ಕೆ ಏರಿದೆ. ಒಟ್ಟು ಸಾವಿನ ಸಂಖ್ಯೆ 493ಕ್ಕೆ ಏರಿದೆ. 21 ಸಾವಿ ನಿನ್ನೆ ಒಂದೇ ದಿನ ವರದಿಯಾಗಿದೆ. ಈ ಪೈಕಿ 18 ಸಾವು ಅಹಮದಾಬಾದ್ ನಲ್ಲಿ ವರದಿಯಾಗಿದೆ 454 ರೋಗಿಗಳು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಗುಣಮುಖರಾದವರ ಒಟ್ಟು ಸಂಖ್ಯೆ ಗುಜರಾತ್ ನಲ್ಲಿ 2545 ಆಗಿದೆ.
 • ರಾಜಾಸ್ಥಾನ: ರಾಜಾಸ್ಥಾನದಲ್ಲಿ 3940 ಸೋಂಕಿನ ಪ್ರಕರಣಗಳು ಈದಿನಾಂಕದವರೆಗೆ ವರದಿಯಾಗಿವೆ. ಈ ಪೈಕಿ 2264 ಮಂದಿ ಗುಣಮುಖರಾಗಿದ್ದು, 110 ಜನರು ಸಾವಿಗೀಡಾಗಿದ್ದಾರೆ. 126 ಹೊಸ ಸೋಂಕಿನ ಪ್ರಕರಣಗಲು ಇಂದು ಮಧ್ಯಾಹ್ನ 1 ಗಂಟೆ ವರೆಗೆ ವರದಿಯಾಗಿವೆ. ಈ ಪೈಕಿ 46 ಪ್ರಕರಣಗಳು ಉದೈಪುರದಿಂದ ವರದಿಯಾಗಿವೆ. ಈ ಮಧ್ಯೆ 22 ಲಕ್ಷ ಕಾರ್ಮಿಕರು ಮನ್ರೆಗಾ ಕೆಲಸದಲ್ಲಿ ತೊಡಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ತಿಳಿಸಿದ್ದಾರೆ.
 • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ 172 ಹೊಸ ಕೋವಿಡ್ ಪ್ರಕರಣ ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3650ಕ್ಕೆ ಏರಿದೆ. ನಗರಗಳ ಪೈಕಿ ಇಂದೋರ್ ನಲ್ಲಿ 77, ಭೋಪಾಲ್ ನಲ್ಲಿ 30 ಪ್ರಕರಣ ವರದಿಯಾಗಿದೆ. ಮಾಜಿ ಶಾಸಕ ಜಿತಂದ್ರ ಡಾಗಾ ಮತ್ತು ನಾಲ್ವರು ಕಿರಿಯ ವೈದ್ಯರೂ ಸೋಂಕಿತರಾಗಿದ್ದಾರೆ.
 • ಗೋವಾ: ದೇಶದ ಹೊರಗೆ ಉಳಿದಿರುವ ಮತ್ತು ಗೋವಾಕ್ಕೆ ಮರಳಲು ಇಚ್ಛಿಸುವವರು ಪರೀಕ್ಷೆಯಲ್ಲಿ ಸೋಂಕಿಲ್ಲ ಎಂದು ಬಂದರೂ, ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಬೇಕು ಎಂದು ಉತ್ತರ ಗೋವಾ ಜಿಲ್ಲೆಯ ಆಡಳಿತ ತಿಳಿಸಿದೆ. ಕಡಲತೀರದವರ ವಿಷಯದಲ್ಲಿ, ವೆಚ್ಚವನ್ನು ಅವರ ಕಂಪನಿಯು ಭರಿಸಬೇಕಾಗುತ್ತದೆ, ಇತರರು ತಮ್ಮ ಸ್ವಂತ ವೆಚ್ಚದಲ್ಲಿ ಕ್ವಾರಂಟೈನ್ ಅನ್ನು ಮಾಡಬೇಕಾಗುತ್ತದೆ. ಯುಎಇಯಲ್ಲಿ ಸುಮಾರು 100 ಗೋವಾದವರು ಭಾರತಕ್ಕೆ ಮರಳಲು ನೋಂದಾಯಿಸಿಕೊಂಡಿದ್ದಾರೆ.

 

ಪಿ ಐ ಬಿ ವಾಸ್ತವ ಪರೀಶೀಲನೆ

***(Release ID: 1623073) Visitor Counter : 35