ಗೃಹ ವ್ಯವಹಾರಗಳ ಸಚಿವಾಲಯ

ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು ತಮ್ಮ ಸ್ವಂತ ಊರುಗಳನ್ನು ತಲುಪಲು ತ್ವರಿತ ಸಂಚಾರಕ್ಕೆ ನೆರವು ನೀಡಲು ಶ್ರಮಿಕ್ ವಿಶೇಷ ರೈಲುಗಳ ಕಾರ್ಯಾಚರಣೆ ಕುರಿತು ಎಂಎಚ್ಎ ಮತ್ತು ರೈಲ್ವೆಯಿಂದ ರಾಜ್ಯಗಳ ನೋಡಲ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ

Posted On: 11 MAY 2020 2:00PM by PIB Bengaluru

ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರು ತಮ್ಮ ಸ್ವಂತ ಊರುಗಳನ್ನು ತಲುಪಲು ತ್ವರಿತ ಸಂಚಾರಕ್ಕೆ ನೆರವು ನೀಡಲು ಶ್ರಮಿಕ್ ವಿಶೇಷ ರೈಲುಗಳ ಕಾರ್ಯಾಚರಣೆ ಕುರಿತು ಎಂಎಚ್ಎ ಮತ್ತು ರೈಲ್ವೆಯಿಂದ ರಾಜ್ಯಗಳ ನೋಡಲ್ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ

ಈವರೆಗೆ 450ಕ್ಕೂ ಅಧಿಕ ರೈಲುಗಳಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರ ಪ್ರಯಾಣ; ತಮ್ಮ ತವರು ಸೇರಲು ಬಯಸುವ ವಲಸೆ ಕಾರ್ಮಿಕರನ್ನು ಕರೆದೊಯ್ಯಲು ಪ್ರತಿ ದಿನ ಸುಮಾರು 100 ರೈಲುಗಳ ಓಡಾಟ

 

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) ಮತ್ತು ರೈಲ್ವೆ ಸಚಿವಾಲಯ ಇಂದು ಬೆಳಗ್ಗೆ ವಲಸೆ ಕಾರ್ಮಿಕರ ಪ್ರಯಾಣಕ್ಕೆ ಶ್ರಮಿಕ್ ವಿಶೇಷ ರೈಲುಗಳ ಸಂಚಾರ ಕುರಿತು ವಿಡಿಯೋ ಕಾನ್ಫರೆನ್ಸ್ ಆಯೋಜಿಸಿತ್ತು. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನೋಡಲ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ನಿನ್ನೆಯ 101 ರೈಲುಗಳು ಸೇರಿದಂತೆ ಈವರೆಗೆ 450ಕ್ಕೂ ಅಧಿಕ ರೈಲುಗಳಲ್ಲಿ ಲಕ್ಷಾಂತರ ವಲಸೆ ಕಾರ್ಮಿಕರನ್ನು ಕರೆದೊಯ್ದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ವಿಡಿಯೋ ಕಾನ್ಫರೆನ್ಸ್ ನಲ್ಲಿ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು ಮತ್ತು ಅವುಗಳನ್ನು ಬಗೆಹರಿಸಲಾಯಿತು ಮತ್ತು ಯಾವ್ಯಾವ ವಲಸೆ ಕಾರ್ಮಿಕರು ತಮ್ಮ ತವರು ಸೇರಲು ಬಯಸಿದ್ದಾರೋ ಅಂತಹವರಿಗಾಗಿ ಅಗತ್ಯ ಸಂಖ್ಯೆಯ ರೈಲು ಸೇವೆ ಒದಗಿಸುವುದನ್ನು ಖಾತ್ರಿಪಡಿಸಲಾಯಿತು. ಸಂಕಷ್ಟದಲ್ಲಿ ಸಿಲುಕಿರುವ ಕಾರ್ಮಿಕರು ಜರೂರಾಗಿ ತಮ್ಮ ಸ್ವಂತ ಊರುಗಳನ್ನು ತಲುಪಲು ಅನುಕೂಲವಾಗುವಂತೆ ಮುಂದಿನ ಕೆಲವು ವಾರಗಳ ಕಾಲ ನೂರಕ್ಕೂ ಅಧಿಕ ರೈಲುಗಳು ಸಂಚಾರ ಕೈಗೊಳ್ಳುವ ನಿರೀಕ್ಷೆ ಇದೆ.

***



(Release ID: 1622922) Visitor Counter : 177