ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಸಿಬಿಎಸ್ಇ ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಭಾರತದಾದ್ಯಂತ 3000 ಸಿಬಿಎಸ್ಇ ಮಾನ್ಯತೆ ಪಡೆದ ಶಾಲೆಗಳಲ್ಲಿ ಮೌಲ್ಯಮಾಪನ ಕೇಂದ್ರಗಳನ್ನಾಗಿ ತೆರೆಯಲು ಅನುಮತಿ ನೀಡಿದ ಗೃಹ ಸಚಿವಾಲಯ

Posted On: 09 MAY 2020 8:11PM by PIB Bengaluru

ಸಿಬಿಎಸ್ಇ ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಭಾರತದಾದ್ಯಂತ 3000 ಸಿಬಿಎಸ್ಇ ಮಾನ್ಯತೆ ಪಡೆದ ಶಾಲೆಗಳಲ್ಲಿ ಮೌಲ್ಯಮಾಪನ ಕೇಂದ್ರಗಳನ್ನಾಗಿ ತೆರೆಯಲು ಅನುಮತಿ ನೀಡಿದ ಗೃಹ ಸಚಿವಾಲಯ

ಅನುಮತಿಯಿಂದಾಗಿ 2.5 ಕೋಟಿ ಉತ್ತರ ಪತ್ರಿಕೆಗಳನ್ನು ಶೀಘ್ರವಾಗಿ ಮಾಲ್ಯಮಾಪನ ಮಾಡಲು ಸಹಕಾರಿ: ಶ್ರೀ ರಮೇಶ್ ಪ್ರೊಖ್ರಿಯಾಲ್ ನಿಶಾಂಕ್

ಕೇಂದ್ರ ಗೃಹ ಸಚಿವಾಲಯ ಸಿಬಿಎಸ್ಇ ಬೋರ್ಡ್ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಅನುವು ಮಾಡಿಕೊಡಲು ಭಾರತದಾದ್ಯಂತ 3000 ಸಿಬಿಎಸ್ ಮಾನ್ಯತೆ ಪಡೆದ ಶಾಲೆಗಳಲ್ಲಿ ಮೌಲ್ಯಮಾಪನ ಕೇಂದ್ರಗಳನ್ನಾಗಿ ತೆರೆಯಲು ಅನುಮತಿ ನೀಡಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ , ಅನುಮತಿ ನೀಡಿದ್ದಕ್ಕಾಗಿ ಕೇಂದ್ರ ವ್ಯವಹಾರಗಳ ಸಚಿವಾಲಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಅವರು ಭಾರತದಾದ್ಯಂತ 3 ಸಾವಿರ ಸಿಬಿಎಸ್ಇ ಮಾನ್ಯತೆ ಪಡೆದ ಶಾಲೆಗಳನ್ನು ಮೌಲ್ಯಮಾಪನ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ ಮತ್ತು ಶಾಲೆಗಳಿಗೆ ಮೌಲ್ಯಮಾಪನದ ಸೀಮೀತ ಉದ್ದೇಶಕ್ಕೆ ವಿಶೇಷ ಅನುಮತಿಯನ್ನು ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

 

Dr Ramesh Pokhriyal Nishank@DrRPNishank

📢 Announcement
3000 @cbseindia29 affiliated schools across India have been identified as assessment centers. Special permission will be granted to these schools for the limited purpose of evaluation.

View image on Twitter

740

5:59 PM - May 9, 2020

Twitter Ads info and privacy

150 people are talking about this

ಶ್ರೀ ನಿಶಾಂಕ್ ಅವರು, ಇದರಿಂದಾಗಿ 2.5 ಕೋಟಿ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಹಾಯಕವಾಗಲಿದೆ ಎಂದು ಭರವಸೆ ವ್ಯಕ್ತಪಡಿದಸಿದ್ದಾರೆ. ಮಂಡಳಿ ಪರೀಕ್ಷೆ ನಂತರ (2020 ಜುಲೈ1ರಿಂದ 15ವರೆಗೆ ನಿಗದಿಯಾಗಿದೆ) ಫಲಿತಾಂಶವನ್ನು ಪ್ರಕಟಸಲಾಗುವುದು.

ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ನೀಡಿರುವ ಅನುಮತಿ ಪತ್ರಕ್ಕೆ ಇಲ್ಲಿ ಕ್ಲಿಕ್ ಮಾಡಿ

 

***


(Release ID: 1622593) Visitor Counter : 240