PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 07 MAY 2020 6:28PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

ಉತ್ತರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕೋವಿಡ್-19 ನಿರ್ವಹಣೆಗೆ ಕೈಗೊಂಡ ಸಿದ್ಧತೆ ಮತ್ತು ನಿಗ್ರಹ ಕ್ರಮಗಳನ್ನು ಪರಿಶೀಲಿಸಿದ ಡಾ. ಹರ್ಷವರ್ಧನ್

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಇಂದು ಉತ್ತರ ಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಆರೋಗ್ಯ ಸಚಿವರು ಮತ್ತು ಕೇಂದ್ರ ಮತ್ತು ರಾಜ್ಯಗಳ ಹಿರಿಯ ಅಧಿಕಾರಿಗಳೊಂದಿಗೆ ಮೂರು ರಾಜ್ಯಗಳಲ್ಲಿ ಕೋವಿಡ್-19 ಸದ್ಯದ ಪರಿಸ್ಥಿತಿ, ಕೈಗೊಳ್ಳುತ್ತಿರುವ ಕ್ರಮಗಳು ಮತ್ತು ನಿರ್ವಹಣೆ ಕುರಿತು ಸಭೆ ನಡೆಸಿದರು. 2020 ಮೇ 7 ಹೊತ್ತಿಗೆ ದೇಶದಲ್ಲಿ ಒಟ್ಟು 52,952 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 15,266 ಜನರನ್ನು ಗುಣಪಡಿಸಲಾಗಿದೆ ಮತ್ತು 1,783 ಸಾವುಗಳು ಸಂಭವಿಸಿವೆ ಎಮದು ಅವರು ತಿಳಿಸಿದರು. ಇತರ ದೇಶಗಳಿಗೆ ಹೋಲಿಸಿದರೆ, ಭಾರತವು ಉತ್ತಮ ಸ್ಥಿತಿಯಲ್ಲಿದೆ, ಏಕೆಂದರೆ ಇಲ್ಲಿ ಸಾವಿನ ಪ್ರಮಾಣ ಶೇ.3.3 ಮತ್ತು ಚೇತರಿಕೆಯ ಪ್ರಮಾಣ ಶೇ.28.83 ಇದೆ. ತೀವ್ರ ನಿಗಾ ಘಟಕಗಳಲ್ಲಿ ಶೇ.4.8, ವೆಂಟಿಲೇಟರ್ಗಳಲ್ಲಿ ಶೇ.1.1 ಮತ್ತು ಸಕ್ರಿಯ ಪ್ರಕರಣಗಳ ಆಮ್ಲಜನಕದ ಬೆಂಬಲದ ಮೇಲೆ ಶೇ.3.3 ರೋಗಿಗಳಿದ್ದಾರೆ ಎಂದು ಅವರು ಹೇಳಿದರು. ದೇಶದಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಾಗಿದ್ದು, ದಿನಕ್ಕೆ 95,000 ಪರೀಕ್ಷೆಗಳು ನಡೆಯುತ್ತಿವೆ. ಈವರೆಗೆ ಒಟ್ಟು 13,57,442 ಕೋವಿಡ್-19 ಪರೀಕ್ಷೆಗಳನ್ನು ಮಾಡಲಾಗಿದೆ. ಇವತ್ತಿನವರೆಗೆ, 7 ದಿನಗಳಿಂದೀಚೆಗೆ 180 ಜಿಲ್ಲೆಗಳಲ್ಲಿ ಹೊಸ ಜಿಲ್ಲೆ ಪ್ರಕರಣಗಳು ವರದಿಯಾಗಿಲ್ಲ.  7-13 ದಿನಗಳಲ್ಲಿ 180 ಜಿಲ್ಲೆಗಳಲ್ಲಿ ಹಾಗೂ 14-20 ದಿನಗಳಲ್ಲಿ 164 ಜಿಲ್ಲೆಗಳಲ್ಲಿ ಮತ್ತು 21-28 ದಿನಗಳಿಂದ 136 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಮುಂಬರುವ ದಿನಗಳಲ್ಲಿ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಗಳನ್ನು ತಲುಪುವುದರಿಂದ ಇದನ್ನು ಗಮನದಲ್ಲಿಟ್ಟುಕೊಂಡು, ಅವರ ಪರೀಕ್ಷೆ, ಕ್ವಾರಂಟೈನ್ ಮತ್ತು ಪಾಸಿಟಿವ್ ಪ್ರಕರಣಗಳ ಚಿಕಿತ್ಸೆಗಾಗಿ ಸೂಕ್ತ ಕಾರ್ಯತಂತ್ರ ಮತ್ತು ಕಾರ್ಯವಿಧಾನವನ್ನು ರೂಪಿಸಬೇಕಾಗಿದೆ ಎಂದು ಡಾ. ಹರ್ಷವರ್ಧನ್ ಅವರು ರಾಜ್ಯಗಳಿಗೆ ಸೂಚಿಸಿದರು. ಅಗತ್ಯವಿದ್ದರೆ ಅವರ ಪರೀಕ್ಷೆ, ಸಾಂಸ್ಥಿಕ ಕ್ವಾರಂಟೈನ್ ಮತ್ತು ಚಿಕಿತ್ಸೆಗಾಗಿ ಪರಿಣಾಮಕಾರಿಯಾದ ಕಾರ್ಯತಂತ್ರವನ್ನು ಸಹ ರೂಪಿಸಬೇಕಾಗಿದೆ ಎಂದರು. ಸಹಾಯವಾಣಿ ಸಂಖ್ಯೆ 1075 ಜೊತೆಗೆ 104 ಅನ್ನು ಸಹ ಕೋವಿಡ್ ಯೇತರ ಅಗತ್ಯ ಸೇವೆಗಳ ಕುಂದುಕೊರತೆ ಪರಿಹಾರಕ್ಕಾಗಿ ಬಳಸಬಹುದು ಎಂದು ತಿಳಿಸಲಾಯಿತು.

ವಿವರಗಳಿಗೆ: https://pib.gov.in/PressReleseDetail.aspx?PRID=1621823

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಬುದ್ಧ ಪೂರ್ಣಿಮೆಯ ಅಂಗವಾಗಿ ವರ್ಚುವಲ್ಜಾಗತಿಕ ವೈಶಾಖ ಆಚರಣೆಉದ್ದೇಶಿಸಿ  ಮಾತನಾಡಿದರು

ವರ್ಚುವಲ್ ಪ್ರಾರ್ಥನಾ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತದ ಬೌದ್ಧ ಸಂಘಗಳ ಮುಖ್ಯಸ್ಥರ ಭಾಗವಹಿಸಿದ್ದರು. ಕೋವಿಡ್-19 ಸಂತ್ರಸ್ತರು ಮತ್ತು ಮುಂಚೂಣಿ ಯೋಧರ ಗೌರವಾರ್ಥವಾಗಿ ಕಾರ್ಯಕ್ರಮವನ್ನು ಜಾಗತಿಕ ಪ್ರಾರ್ಥನಾ ವಾರವಾಗಿ ಸಮರ್ಪಿಸಲಾಯಿತು. ಪ್ರಧಾನಿ ಶ್ರೀನರೇಂದ್ರ ಮೋದಿಯವರು ಬುದ್ಧ ಪೂರ್ಣಿಮೆಯ ಅಂಗವಾಗಿ ವರ್ಚುವಲ್ಜಾಗತಿಕ ವೈಶಾಖ ಆಚರಣೆಉದ್ದೇಶಿಸಿ  ಮಾತನಾಡಿದರು. ಸಂಸ್ಕೃತಿ ರಾಜ್ಯ ಸಚಿವ (ಸ್ವತಂತ್ರ) ಮತ್ತು ಪ್ರವಾಸೋದ್ಯಮ ಸಚಿವ (ಸ್ವತಂತ್ರ) ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವ (ಸ್ವತಂತ್ರ) ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಕಿರೇನ್ ರಿಜಿಜು ಸಹ ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿವರಗಳಿಗೆ: https://pib.gov.in/PressReleseDetail.aspx?PRID=1621823

ವೈಶಾಖ-ಬುದ್ಧ ಪೂರ್ಣಿಮೆಯ ಸಂದರ್ಭದಲ್ಲಿ ಪ್ರಧಾನಿಯವರ ಭಾಷಣದ ಪಠ್ಯ

ಸ್ನೇಹಿತರೇ, ಭಗವಾನ್ ಬುದ್ಧನ ಪ್ರತಿಯೊಂದು ನುಡಿ, ಪ್ರತಿಯೊಂದು ಪ್ರವಚನವು ಮನುಕುಲದ ಸೇವೆ ಮಾಡುವ ಭಾರತದ ಬದ್ಧತೆಯನ್ನು ಬಲಪಡಿಸುತ್ತದೆ. ಬುದ್ಧ ಭಾರತದ ಜ್ಞಾನೋದಯ ಮತ್ತು ಆತ್ಮಸಾಕ್ಷಾತ್ಕಾರ ಸಂಕೇತ. ಆತ್ಮ-ಸಾಕ್ಷಾತ್ಕಾರದೊಂದಿಗೆ, ಭಾರತವು ಇಡೀ ಮನುಕುಲದ, ಇಡೀ ಜಗತ್ತಿನ ಹಿತಕ್ಕಾಗಿ ಕೆಲಸ ಮಾಡುತ್ತದೆ. ವಿಶ್ವದ ಪ್ರಗತಿಗೆ ಭಾರತದ ಪ್ರಗತಿ ಯಾವಾಗಲೂ ಸಹಾಯಕವಾಗಿರುತ್ತದೆ.”

ವಿವರಗಳಿಗೆ: https://pib.gov.in/PressReleseDetail.aspx?PRID=1621877

ಕೋವಿಡ್ -19ಕ್ಕೆ ಆಯುಷ್ ಮಧ್ಯಸ್ಥಿಕೆಗಳನ್ನು ಒಳಗೊಂಡ ಅಂತರ-ಶಿಸ್ತೀಯ ಅಧ್ಯಯನಗಳಿಗೆ ಆರೋಗ್ಯ ಮತ್ತು ಆಯುಷ್ ಸಚಿವರಿಂದ ಔಪಚಾರಿಕ ಚಾಲನೆ 

ಕೋವಿಡ್-19 ಪರಿಸ್ಥಿತಿಗೆ ಸಾಮಾನ್ಯ ಆರೈಕೆಗೆ ಹೆಚ್ಚುವರಿಯಾಗಿ ಆಯುರ್ವೇದ ಮಧ್ಯಸ್ಥಿಕೆಗಳ ಕುರಿತು ಕ್ಲಿನಿಕಲ್ ಸಂಶೋಧನಾ ಅಧ್ಯಯನಗಳು ಮತ್ತು ಆಯುಷ್ ಸಂಜೀವನಿ ಅಪ್ಲಿಕೇಶನ್ಗೆ ಆರೋಗ್ಯ ಸಚಿವ ಶ್ರೀ ಹರ್ಷವರ್ಧನ್ ಮತ್ತು ಆಯುಷ್ ರಾಜ್ಯ ಸಚಿವ ಶ್ರೀ. ಶ್ರೀಪಾದ್ ಯೆಸ್ಸೊ ನಾಯಕ್ ಅವರು ಜಂಟಿಯಾಗಿ ಚಾಲನೆ ನೀಡಿದರು.. ಸಂದರ್ಭದಲ್ಲಿ ಮಾತನಾಡಿದ ಡಾ.ಹರ್ಷವರ್ಧನ್, “ಭಾರತವು ಸಾಂಪ್ರದಾಯಿಕ ಔಷಧದ ಇತಿಹಾಸವನ್ನು ಬಹಳ ಹಿಂದಿನಿಂದಲೂ ಹೊಂದಿದೆ ಮತ್ತು ಆಯುರ್ವೇದ ಕ್ಷೇತ್ರದಲ್ಲಿ ಪ್ರವರ್ತಕವಾಗಿರುವ ಆಯುಷ್ ಸಚಿವಾಲಯವು ಆಯುಷ್ ವೈದ್ಯಕೀಯ ಅಧ್ಯಯನಗಳ ಮೂಲಕ ದೇಶದಲ್ಲಿನ ಕೋವಿಡ್-19 ಸಾಂಕ್ರಾಮಿಕ ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದೆ ಎಂದರು. ಸಮಸ್ಯೆಗೆ ಉತ್ತಮ ಪರಿಹಾರವನ್ನು ಕಂಡುಹಿಡಿಯಲು ಮತ್ತು ರೋಗವನ್ನು ತಡೆಗಟ್ಟಲು ಆಯುಷ್ ಪಾತ್ರವನ್ನು ನಿರ್ಣಯಿಸಲು ಆಯುಷ್ ಸಚಿವಾಲಯವು ನಾಲ್ಕು ಕ್ಲಿನಿಕಲ್ ಮತ್ತು ಜನಸಂಖ್ಯೆ ಆಧಾರಿತ ಅಧ್ಯಯನಗಳನ್ನು ಕೈಗೊಂಡಿದೆ ಎಂದು ಶ್ರೀಪಾದ್ ನಾಯಕ್ ಮಾಹಿತಿ ನೀಡಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1621769

ರಾಜ್ಯಗಳ ಆಡಳಿತಗಳಿಗೆ ಕೋವಿಡ್ ಆರೈಕೆ ಕೇಂದ್ರಗಳನ್ನು ಒದಗಿಸಲು ಸಜ್ಜಾಗಿರುವ ಭಾರತೀಯ ರೈಲ್ವೆ

ರೈಲ್ವೆ ಸಚಿವಾಲಯವು ತನ್ನ 5231 ಬೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಅತ್ಯಂತ ಸೌಮ್ಯ ಪ್ರಕರಣಗಳಿಗೆ ಕೋವಿಡ್ ಆರೈಕೆ ಕೇಂದ್ರಗಳನ್ನು ಬಳಸಬಹುದು. ಶಂಕಿತ ಮತ್ತು ದೃಢಪಟ್ಟ ಕೋವಿಡ್ ಪ್ರಕರಣಗಳ  ಪ್ರತ್ಯೇಕತಾ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯವಿರುವಲ್ಲಿ ಆಸ್ಪತ್ರೆ ಸೌಲಭ್ಯಗಳು ಖಾಲಿಯಾಗಿರುವ ಪ್ರದೇಶಗಳಲ್ಲಿ ಬೋಗಿಗಳನ್ನು ರಾಜ್ಯಗಳು ಬಳಸಬಹುದು. ರೈಲ್ವೆ ಆರೈಕೆ ಕೇಂದ್ರಗಳಿಗೆ ಭಾರತೀಯ ರೈಲ್ವೆ 158 ನಿಲ್ದಾಣಗಳನ್ನು ನೀರು ಮತ್ತು ಚಾರ್ಜಿಂಗ್ ಸೌಲಭ್ಯದೊಂದಿಗೆ ಮತ್ತು 58 ನಿಲ್ದಾಣಗಳನ್ನು ನೀರಿನ ಸೌಲಭ್ಯದೊಂದಿಗೆ ಸಿದ್ಧಪಡಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621776

ದೇಶದಲ್ಲಿ ಸಂಶೋಧನೆಯನ್ನು ಹೆಚ್ಚಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವರು ಪಿಎಂಆರ್ಎಫ್ ಯೋಜನೆಯಲ್ಲಿ ಮಾರ್ಪಾಡುಗಳನ್ನು ಪ್ರಕಟಿಸಿದ್ದಾರೆ

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಲ್ 'ನಿಶಾಂಕ್' ಅವರು ಇಂದು ದೇಶದಲ್ಲಿ ಸಂಶೋಧನೆ ಹೆಚ್ಚಿಸಲು ಪ್ರಧಾನ ಮಂತ್ರಿಗಳ ಸಂಶೋಧನಾ ಫೆಲೋಶಿಪ್ ಯೋಜನೆಯಲ್ಲಿ ವಿವಿಧ ತಿದ್ದುಪಡಿಗಳನ್ನು ಮಾಡಲಾಗಿದೆ ಎಂದು ಘೋಷಿಸಿದರು. ತಿದ್ದುಪಡಿಗಳ ನಂತರ, ಈಗ ಯಾವುದೇ ಮಾನ್ಯತೆ ಪಡೆದ ಸಂಸ್ಥೆ / ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ (ಐಐಎಸ್ಸಿ / ಐಐಟಿಗಳು / ಎನ್ಐಟಿಗಳು / ಐಐಎಸ್ಇಆರ್ಗಳು / ಐಐಇಎಸ್ಟಿ / ಸಿಎಫ್ ಐಐಐಟಿಗಳನ್ನು ಹೊರತುಪಡಿಸಿ), ಕನಿಷ್ಠ ಸಿಜಿಪಿಎ 8 ಅಥವಾ ಅದಕ್ಕೆ ಸಮಾನವಾದದ್ದನ್ನು ಹೊರತುಪಡಿಸಿ GATE ಸ್ಕೋರ್ ಅಗತ್ಯವನ್ನು 750 ರಿಂದ 650 ಕ್ಕೆ ಇಳಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621794

ರಾಜ್ಯ ಸಭೆ ಸಭಾಪತಿ  ಮತ್ತು ಲೋಕಸಭೆಯ ಅಧ್ಯಕ್ಷರು ಕೋವಿಡ್ ಮತ್ತು ಸಂಸದೀಯ ಸಮಿತಿಗಳ ಸಭೆಗಳನ್ನು ಕುರಿತು  ಚರ್ಚಿಸಿದರು.

ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ ಶ್ರೀ ಎಂ.ವೆಂಕಯ್ಯ ನಾಯ್ಡು ಅವರು ಲೋಕಸಭೆಯ ಅಧ್ಯಕ್ಷ ಶ್ರೀ ಓಂ ಬಿರ್ಲಾ ಅವರೊಂದಿಗೆ ಸಭೆ ನಡೆಸಿ, ದೇಶದಲ್ಲಿ ಕೋವಿಡ್-19 ರೋಗದ ಪರಿಸ್ಥಿತಿ, ಸಂಸತ್ ಸದಸ್ಯರು ವಹಿಸುವ ಪಾತ್ರ ಮತ್ತು ಸಂಸದೀಯ ಸಮಿತಿಗಳ ಸಭೆಗಳನ್ನು ನಡೆಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು. ಶ್ರೀ ನಾಯ್ಡು ಮತ್ತು ಶ್ರೀ ಬಿರ್ಲಾ ಅವರು ಸದ್ಯದ ಪರಿಸ್ಥಿತಿಯಲ್ಲಿ ಮತ್ತು ದೇಶಾದ್ಯಂತ ಪ್ರಯಾಣದ ನಿರ್ಬಂಧಗಳ ಹಿನ್ನೆಲೆಯಲ್ಲಿ ವಿವಿಧ ಸಂಸದೀಯ ಸಮಿತಿಗಳು ತಮ್ಮ ಸಭೆಗಳನ್ನು ನಡೆಸುವ ಕಾರ್ಯಸಾಧ್ಯತೆಯ ಬಗ್ಗೆ ಚರ್ಚಿಸಿದರು. ಮುಂದಿನ ದಿನಗಳಲ್ಲಿ ಸಮಿತಿಗಳ ನಿಯಮಿತ ಸಾಂಪ್ರದಾಯಿಕ ಸಭೆಗಳನ್ನು ನಡೆಸಲು ಪರಿಸ್ಥಿತಿ ಅನುಕೂಲವಾಗದಿದ್ದರೆ, ಅಂತಹ ಸಭೆಗಳನ್ನು ನಡೆಸಲು ಪರ್ಯಾಯ ಮಾರ್ಗಗಳನ್ನು ಹುಡುಕಬಹುದು ಎಂದು ಅವರು ಅಭಿಪ್ರಾಯಪಟ್ಟರು.

ವಿವರಗಳಿಗೆ: https://pib.gov.in/PressReleseDetail.aspx?PRID=1621827

ಭಾರತೀಯ ಪ್ರಜೆಗಳನ್ನು ವಿದೇಶದಿಂದ ಸ್ಥಳಾಂತರಿಸಲು ಸಹಾಯ ಮಾಡಲು ಹಡಗುಗಳನ್ನು ರವಾನಿಸಿದ ಭಾರತೀಯ ನೌಕಾಪಡೆ ಮತ್ತು ಸಶಸ್ತ್ರ ಪಡೆಗಳಿಂದ ಕ್ಯಾರೆಂಟೈನ್ ಸೌಲಭ್ಯಗಳು

ಭಾರತೀಯ ಸಶಸ್ತ್ರ ಪಡೆಗಳು ಐಒಆರ್ ಪ್ರದೇಶದ ಹಲವಾರು ದೇಶಗಳಿಗೆ ವೈದ್ಯಕೀಯ ತಂಡಗಳು ಮತ್ತು ನೆರವು ಸಾಮಗ್ರಿಗಳೊಂದಿಗೆ ನೌಕಾಪಡೆಯ ಹಡಗುಗಳನ್ನು ರವಾನಿಸಿವೆ. ಹಡಗುಗಳು ಹಿಂದಿರುಗುವಾಗ, ಪ್ರದೇಶದಿಂದ ಭಾರತೀಯರನ್ನು ಮರಳಿ ಕರೆತರುತ್ತವೆ. ಇದಲ್ಲದೆ, ಸಶಸ್ತ್ರ ಪಡೆಗಳು ಆರು ಕ್ವಾರಂಟೈನ್ ಸೌಲಭ್ಯಗಳನ್ನು ಸಜ್ಜುಗೊಳಿಸಿದ್ದು, ವಿದೇಶಾಂಗ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಸಹಯೋಗದೊಂದಿಗೆ ಹಲವಾರು ದೇಶಗಳಿಂದ ಸ್ಥಳಾಂತರವಾಗುವ ಭಾರತೀಯರಲ್ಲಿ ಸುಮಾರು 2,100 ಮಂದಿಯನ್ನು ಇಲ್ಲಿ ಇರಿಸಬಹುದಾಗಿದೆ. ಕೋವಿಡ್-19 ಕಾರಣದಿಂದಾಗಿ ಸೌದಿ ಅರೇಬಿಯಾ, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್, ಬಹ್ರೇನ್ ಮತ್ತು ಮಲೇಷ್ಯಾದಲ್ಲಿ ಸಿಲುಕಿರುವ ಹಾಘೂ ಈಗ ಸ್ಥಳಾಂತರಗೊಳ್ಳುವ ಭಾರತೀಯರನ್ನು ಭಾರತೀಯ ಸೇನೆ, ಭಾರತೀಯ ನೌಕಾಪಡೆ ಮತ್ತು ಭಾರತೀಯ ವಾಯುಪಡೆ ನಿರ್ವಹಿಸುತ್ತಿರುವ ಜೋಧಪುರ, ಜೈಸಲ್ಮೇರ್, ಭೋಪಾಲ್, ಕೊಚ್ಚಿ, ವಿಶಾಖಪಟ್ಟಣಂ ಮತ್ತು ಚೆನ್ನೈನ ಕ್ವಾರಂಟೈನ್ ಸೌಲಭ್ಯಗಳಲ್ಲಿ ಇರಿಸಲಾಗುವುದು.

ವಿವರಗಳಿಗೆ: https://pib.gov.in/PressReleseDetail.aspx?PRID=1621827

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಇಥಿಯೋಪಿಯಾ ಪ್ರಧಾನಿ ಡಾ. ಅಬಿ ಅಹ್ಮದ್ ಅಲಿ ದೂರವಾಣಿ ಮಾತುಕತೆ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಥಿಯೋಪಿಯಾದ ಪ್ರಧಾನ ಮಂತ್ರಿ ಡಾ. ಅಬಿ ಅಹ್ಮದ್ ಅಲಿ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ಇಬ್ಬರು ನಾಯಕರು ಕೋವಿಡ್-19 ಸಾಂಕ್ರಾಮಿಕದಿಂದ ಉಂಟಾಗಿರುವ ದೇಶೀಯ, ಪ್ರಾದೇಶಿಕ ಮತ್ತು ಜಾಗತಿಕ ಸವಾಲುಗಳನ್ನು ಚರ್ಚಿಸಿದರು. ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ಪರಸ್ಪರ ಒಗ್ಗಟ್ಟನ್ನು ವ್ಯಕ್ತಪಡಿಸಿದರು. ಅಗತ್ಯ ಔಷಧಿಗಳ ಸರಬರಾಜನ್ನು ಖಾತ್ರಿಪಡಿಸಿಕೊಳ್ಳಲು ಮತ್ತು ಸಾಂಕ್ರಾಮಿಕ ರೋಗದ ಆರ್ಥಿಕ ಪರಿಣಾಮವನ್ನು ಸುಧಾರಿಸಲು ಇಥಿಯೋಪಿಯಾಗೆ ಭಾರತ ಬೆಂಬಲ ನೀಡುತ್ತದೆ ಎಂದು ಡಾ. ಅಬಿ ಅಹ್ಮದ್ ಅಲಿಯವರಿಗೆ ಪ್ರಧಾನಿ ಭರವಸೆ ನೀಡಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1621634

ಕೈಗಾರಿಕೆಗಳು ಸಕಾರಾತ್ಮಕ ಮಾರ್ಗವನ್ನು ಹಿಡಿಯಬೇಕು ಮತ್ತು ಕೋವಿಡ್ -19 ಬಿಕ್ಕಟ್ಟು ಸೃಷ್ಟಿಸಿರುವ  ಅವಕಾಶಗಳನ್ನು ಬಳಸಿಕೊಳ್ಳಬೇಕು: ಶ್ರೀ ಗಡ್ಕರಿ

ಕೈಗಾರಿಕೆಗಳು ಸಕಾರಾತ್ಮಕ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು ಮತ್ತು ಕೋವಿಡ್ ಸಾಂಕ್ರಾಮಿಕ ರೋಗ ಮುಗಿದ ನಂತರ ಉಂಟಾಗಬಹುದಾದ ಅದು ಸೃಷ್ಟಿರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಶ್ರೀ ನಿತಿನ್ ಗಡ್ಕರಿ ಹೇಳಿದ್ದಾರೆ. ಕೋವಿಡ್-19 ಹರಡುವುದನ್ನು ತಡೆಗಟ್ಟಲು ಅಗತ್ಯವಾದ ನಿಗ್ರಹ ಕ್ರಮಗಳನ್ನು ಕೈಗಾರಿಕೆಗಳು ಖಚಿತಪಡಿಸಿಕೊಳ್ಳಬೇಕು ಎಂದು ಶ್ರೀ ಗಡ್ಕರಿ ಉದ್ಯಮಕ್ಕೆ ಕರೆ ನೀಡಿದರು. ಸಂಸ್ಥೆಗಳು ತಮ್ಮ ಕಾರ್ಮಿಕರು ಮತ್ತು ಕಾರ್ಯನಿರ್ವಾಹಕರಿಗೆ ಆಹಾರ, ಆಶ್ರಯ ಮತ್ತು ಸಾಮಾಜಿಕ ಅಂತರದ ಮಾನದಂಡಗಳನ್ನು ಕಾಪಾಡಿಕೊಳ್ಳುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1621829

ಮುಂದಿನ ಎರಡು ವರ್ಷಗಳಲ್ಲಿ 15 ಲಕ್ಷ ಕೋಟಿ ರೂ.ಗಳಲ್ಲಿ  ರಸ್ತೆ ನಿರ್ಮಾಣದ ಗುರಿ: ಶ್ರೀ ಗಡ್ಕರಿ

ಆಟೋ ಸ್ಕ್ರ್ಯಾಪಿಂಗ್ ನೀತಿಯನ್ನು ತ್ವರಿತವಾಗಿ ಅಂತಿಮಗೊಳಿಸುವಂತೆ ಸಚಿವಾಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಹೇಳಿದ ಸಚಿವರು, ವೆಚ್ಚ ಕಡಿತದಲ್ಲಿ ಇದು ಬಹಳ ಅನುಕೂಲವಾಗಲಿದೆ ಎಂದು ಹೇಳಿದರು. ಆಟೋಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ದ್ರವ್ಯತೆಯನ್ನುಹಣದ ಹರಿವನ್ನು ಹೆಚ್ಚಿಸಲು ವಿದೇಶಿ ಬಂಡವಾಳ ಸೇರಿದಂತೆ ಅಗ್ಗದ ಸಾಲಗಳನ್ನು ಅನ್ವೇಷಿಸಲು ಅವರು ಸಲಹೆ ನೀಡಿದರು. ಬಿಎಸ್ 4 ವಾಹನಗಳನ್ನು ಕುರಿತಂತೆ ಸರ್ಕಾರವು ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧವಾಗಿದೆ ಎಂದು ಅವರು ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1621779

ಮಣ್ಣಿನ ಆರೋಗ್ಯ ಕಾರ್ಡ್ ಆಧಾರಿತ ಮಣ್ಣಿನ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ರೈತರ ಆಂದೋಲನಕ್ಕೆ ಕೇಂದ್ರ ಕೃಷಿ ಸಚಿವರ ಕರೆ

ಮಣ್ಣಿನ ಸಮಗ್ರ ಪೋಷಕಾಂಶ ನಿರ್ವಹಣೆಯನ್ನು ರೈತರ ಆಂದೋಲನವನ್ನಾಗಿ ಮಾಡಲು ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಕರೆ ನೀಡಿದ್ದಾರೆ. ಮಣ್ಣಿನ ಆರೋಗ್ಯ ಕಾರ್ಯಕ್ರಮದ ಪ್ರಗತಿಯನ್ನು ಪರಿಶೀಲಿಸಿದ ಅವರು, ಜೈವಿಕ ಮತ್ತು ಸಾವಯವ ಗೊಬ್ಬರಗಳ ಬಳಕೆಯನ್ನು ಹೆಚ್ಚಿಸುವುದು ಮತ್ತು ರಾಸಾಯನಿಕ ಗೊಬ್ಬರಗಳನ್ನು ಮಣ್ಣಿನ ಆರೋಗ್ಯ ಕಾರ್ಡ್ ಶಿಫಾರಸುಗಳ ಆಧಾರದ ಮೇಲೆ ಕಟ್ಟುನಿಟ್ಟಾಗಿ ಕಡಿಮೆ ಮಾಡುವ ಬಗ್ಗೆ ಜಾಗೃತಿ ಅಭಿಯಾನಗಳನ್ನು ನಡೆಸುವಂತೆ ನಿರ್ದೇಶಿಸಿದರು. 2020-21 ಅವಧಿಯಲ್ಲಿ, ದೇಶದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡ 1 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿನ ರೈತರಿಗೆ ಸಾಮೂಹಿಕ ಜಾಗೃತಿ ಕಾರ್ಯಕ್ರಮದ ಮೇಲೆ ಪ್ರಮುಖವಾಗಿ ಗಮನಹರಿಸಲಾಗುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621542

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಆಹಾರ ಧಾನ್ಯಗಳ ವಿತರಣೆ ಕುರಿತಂತೆ 24 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಆಹಾರ ಕಾರ್ಯದರ್ಶಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಆಹಾರ ಮತ್ತು ಪಡಿತರ ವಿತರಣಾ ಕಾರ್ಯದರ್ಶಿ

ಯೋಜನೆಯಡಿ, ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ದೇಶದ ಎಲ್ಲಾ ದುರ್ಬಲ ವರ್ಗಗಳಿಗೆ ಸುಮಾರು 120 ಲಕ್ಷ ಮೆಟ್ರಿಕ್ ಟನ್ (ಎಂಎಂಟಿ) ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. ಸರ್ಕಾರವು ಎನ್ಎಫ್ಎಸ್ ಅಡಿಯಲ್ಲಿ ಎಲ್ಲಾ ಆದ್ಯತಾ ಕುಟುಂಬಗಳಿಗೆ (ಪಿಪಿಎಚ್ಗಳು) ಏಪ್ರಿಲ್, ಮೇ ಮತ್ತು ಜೂನ್ 2020 ಸಾಮಾನ್ಯ ಹಂಚಿಕೆಗಿಂತ ಎರಡು ಪಟ್ಟು, ಜೊತೆಗೆ ಆಧಾಯ ಅಕ್ಕಿ ಯೋಜನೆ (ಎಎವೈ) ಅಡಿಯಲ್ಲಿ ತಿಂಗಳಿಗೆ 5 ಕೆಜಿ, ಪ್ರತಿ ಕಾರ್ಡ್ಗೆ 35 ಕೆಜಿ ನೀಡುತ್ತಿದೆ. ಈಗಾಗಲೇ 06.05.2020 ವೇಳೆಗೆ 69.28 ಲಕ್ಷ ಮೆ.ಟನ್ ಸಂಗ್ರಹಿಸಿರುವ ಯೋಜನೆಗೆ ರಾಜ್ಯ ಸರ್ಕಾರಗಳಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. 06.05.2020 ರವೆರೆಗೆ 69.28 ಲಕ್ಷ ಮೆಟ್ರಿಕ್ ಟನ್ ಎತ್ತುವಳಿ ಮಾಡಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621642

ಕೋವಿಡ್-19 ಸಾಂಕ್ರಾಮಿಕ ರೋಗದ ಅನಿಶ್ಚಿತತೆಯ ಸಮಯದಲ್ಲಿ ಸಂಯೋಜಿತ ಕೋಲ್ಡ್ ಚೈನ್ ನೆಟ್ವರ್ಕ್ ಮಹತ್ವವನ್ನು ಶ್ರೀಮತಿ ಹರ್ಸಿಮ್ರತ್ಕೌರ್ ಬಾದಲ್ ಒತ್ತಿ ಹೇಳಿದ್ದಾರೆ

ಆಹಾರ ಸಂಸ್ಕರಣಾ ಉದ್ಯಮ ಸಚಿವಾಲಯವು ನೆರವು ನೀಡುತ್ತಿರುವ ಕೋಲ್ಡ್ ಚೈನ್ ನೆಟ್ವರ್ಕ್ಪ್ರವರ್ತಕರೊಂದಿಗಿನ ವೀಡಿಯೊ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಕೇಂದ್ರ ಸಚಿವರು, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಪ್ರಸ್ತುತ ಅನಿಶ್ಚಿತತೆಯ ಸಂದರ್ಭದಲ್ಲಿ, ಆಹಾರ ಸಂಸ್ಕರಣಾ ಉದ್ಯಮಗಳ, ಅದರಲ್ಲೂ ವಿಶೇಷವಾಗಿ ಸಂಯೋಜಿತ ಕೋಲ್ಡ್ ಚೈನ್ ನೆಟ್ವರ್ಕ್ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಆಹಾರ ಸಂಸ್ಕರಣಾ ಉದ್ಯಮವು ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದು ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅದೇ ಸಮಯದಲ್ಲಿ, ಬೆಳೆನ್ನು ಮೌಲ್ಯವರ್ಧಿತ ಸಂಸ್ಕರಿಸಿದ ಉತ್ಪನ್ನವಾಗಿ ಪರಿವರ್ತಿಸಿ, ದೇಶೀಯ ಮತ್ತು ಜಾಗತಿಕ ಬೇಡಿಕೆಯನ್ನು ಪೂರೈಸುತ್ತದೆ ಎಂದು ಅವರು ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1621532

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ಕುರಿತು ಕಾರ್ಮಿಕ ಸಚಿವರಿಂದ CTU ಪ್ರತಿನಿಧಿಗಳೊಂದಿಗೆ ಮಾತುಕತೆ

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಪರಿಸ್ಥಿತಿಯ ಮತ್ತು ಕಾರ್ಮಿಕರು ಹಾಗೂ ಆರ್ಥಿಕತೆಯ ಮೇಲೆ ಅದರ ಪರಿಣಾಮವನ್ನು ಕಡಿಮೆ ಮಾಡುವ ಬಗ್ಗೆ ಚರ್ಚಿಸಲು ಕಾರ್ಮಿಕ ಮತ್ತು ಉದ್ಯೋಗ ಖಾತೆ (ಸ್ವತಂತ್ರ) ರಾಜ್ಯ ಸಚಿವ ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಅವರು ಕೇಂದ್ರ ಟ್ರೇಡ್ ಯೂನಿಯನ್ ಸಂಸ್ಥೆಗಳೊಂದಿಗೆ (ಸಿಟಿಯುಒ) ವೆಬಿನಾರ್ ನಡೆಸಿದರು. (i) ಕೋವಿಡ್-19 ದೃಷ್ಟಿಯಿಂದ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರ ಹಿತಾಸಕ್ತಿ ಸಂರಕ್ಷಣೆ, (ii) ಉದ್ಯೋಗ ಸೃಷ್ಟಿ ಕ್ರಮಗಳು, (iii) ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ತೆಗೆದುಕೊಳ್ಳಬೇಕಾದ ಕ್ರಮಗಳು ಮತ್ತು (iv) ಎಂಎಸ್ಎಂಇಗಳು ಕಾರ್ಮಿಕ ಕಾನೂನುಗಳ ಅಡಿಯಲ್ಲಿ ತಮ್ಮ ಹೊಣೆಗಾರಿಕೆಗಳನ್ನು ನಿಭಾಯಿಸಲು ಪರಿಸ್ಥಿತಿಯನ್ನು ಸುಧಾರಿಸುವ ಕ್ರಮಗಳು ಚರ್ಚೆಯ ವಿಷಯಗಳಾಗಿದ್ದವು.

ವಿವರಗಳಿಗೆ: https://pib.gov.in/PressReleseDetail.aspx?PRID=1621639

ದೇಶೀಯ ಉತ್ಪಾದನೆ ಮತ್ತು ಆಮದು ಪರ್ಯಾಯದತ್ತ ಗಮನಹರಿಸುವಂತೆ ಶ್ರೀ ಗಡ್ಕರಿ ಅವರು ಭಾರತೀಯ ಸುಗಂಧ ಮತ್ತು ಪರಿಮಳ ಸಂಘಟನೆಯನ್ನು ಕೋರಿದ್ದಾರೆ

ಸ್ಟಾರ್ಟ್ ಅಪ್ ಮತ್ತು ಎಂಎಸ್ಎಂಇಗಳ ಮೇಲೆ ಕೋವಿಡ್-19 ಪ್ರಭಾವದ ಕುರಿತು ಕೇಂದ್ರ ಎಂಎಸ್ಎಂಇ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ಶ್ರೀ ನಿತಿನ್ ಗಡ್ಕರಿ ಅವರು ಭಾರತೀಯ ಸುಗಂಧ ಮತ್ತು ಪರಿಮಳ ಸಂಘಟನೆಯ ಸದಸ್ಯರೊಂದಿಗೆ ಸಭೆ ನಡೆಸಿದರು. ಆಮದು ಮಾಡಿದ ಉತ್ಪನ್ನಗಳನ್ನು ಬಳಸುವ ಬದಲು ದೇಶೀಯ ಉತ್ಪನ್ನಗಳ ಉತ್ಪಾದನೆಯತ್ತ ಗಮನಹರಿಸುವಂತೆ ಮತ್ತು ಬಿದಿರಿನ ದೇಶೀಯ ಉತ್ಪಾದನೆಗೆ ಒತ್ತು ನೀಡುವಂತೆ ಸುಗಂಧ ಮತ್ತು ಪರಿಮಳ ಉದ್ಯಮಕ್ಕೆ ಶ್ರೀ ಗಡ್ಕರಿ ಅವರು ಸೂಚಿಸಿದರು ನೀಡಿದರು. ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಲು ಉದ್ಯಮವು ನಾವೀನ್ಯತೆ, ತಂತ್ರಜ್ಞಾನ ಮತ್ತು ಸಂಶೋಧನಾ ಕೌಶಲ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಅವರು ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1621553

ಕೋವಿಡ್-19  ಎದುರಿಸಲು ಭಾರತೀಯ ತಂತ್ರಜ್ಞಾನಗಳ ಸಂಕಲನಕ್ಕೆ ಚಾಲನೆ ನೀಡಿದ ಸಿಎಸ್ಐಆರ್ ಮಹಾನಿರ್ದೇಶಕ

ರಾಷ್ಟ್ರೀಯ ಸಂಶೋಧನಾ ಅಭಿವೃದ್ಧಿ ನಿಗಮವು ಸಿದ್ಧಪಡಿಸಿದಕೋವಿಡ್-19 (ಪತ್ತೆಹಚ್ಚುವಿಕೆ, ಪರೀಕ್ಷೆ ಮತ್ತು ಚಿಕಿತ್ಸೆ) ಯನ್ನು ಎದುರಿಸಲು ಭಾರತೀಯ ತಂತ್ರಜ್ಞಾನಗಳ ಸಂಕಲನಕ್ಕೆ ಸಿಎಸ್ಐಆರ್ ಮಹಾನಿರ್ದೇಶಕ ಡಾ. ಶೇಖರ್ ಸಿ. ಮಾಂಡೆ ಚಾಲನೆ ನೀಡಿದರು. ಸಂಕಲನವು ಕೋವಿಡ್-19 ಸಂಬಂಧಿತ ಭಾರತೀಯ ತಂತ್ರಜ್ಞಾನಗಳು, ಸಂಶೋಧನಾ ಚಟುವಟಿಕೆಗಳು, ವಾಣಿಜ್ಯೀಕರಣಕ್ಕೆ ಲಭ್ಯವಿರುವ ತಂತ್ರಜ್ಞಾನಗಳು, ಭಾರತ ಸರ್ಕಾರವು ಕೈಗೊಂಡ ಉಪಕ್ರಮಗಳು ಮತ್ತು ಪ್ರಯತ್ನಗಳು, ಟ್ರ್ಯಾಕಿಂಗ್, ಪರೀಕ್ಷೆ ಮತ್ತು ಚಿಕಿತ್ಸೆಯ 3 ಟಿಗಳ ವರ್ಗೀಕರಣ ಮುಂತಾದ 200 ಮಾಹಿತಿಯನ್ನು ಹೊಂದಿದೆ. ತಂತ್ರಜ್ಞಾನಗಳಲ್ಲಿ ಹೆಚ್ಚಿನವು ಪ್ರೂಫ್-ಆಫ್-ಕಾನ್ಸೆಪ್ಟ್ ಪರೀಕ್ಷಿಸಲ್ಪಟ್ಟಿವೆ. ಆದ್ದರಿಂದ ಉದ್ಯಮಿಗಳು ಉತ್ಪನ್ನವನ್ನು ವೇಗವಾಗಿ ಮಾರುಕಟ್ಟೆಗೆ ಕೊಂಡೊಯ್ಯಲು ಸಹಾಯ ಮಾಡುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621458

ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆ ಕರಡು (ಇಐಎ), 2020 ನೋಟೀಸ್ ಅವಧಿ ಜೂನ್ 30 ರವರೆಗೆ ವಿಸ್ತರಣೆ

ಕೇಂದ್ರ ಸರ್ಕಾರವು, ಪರಿಸರ ಪರಿಣಾಮದ ಮೌಲ್ಯಮಾಪನ ಅಧಿಸೂಚನೆ, 2020 S.O. 1199 () 2020 ಮಾರ್ಚ್ 23ನ್ನು 11, ಏಪ್ರಿಲ್ 2020 ಅಧಿಕೃತ ಗೆಜೆಟ್ನಲ್ಲಿ ಕರಡು ಅಧಿಸೂಚನೆಯನ್ನು ಪರಿಣಾಮ ಎದುರಿಸುವ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿತ್ತು ಮತ್ತು ಅರವತ್ತು ದಿನಗಳಲ್ಲಿ ಕರಡು ಅಧಿಸೂಚನೆಯಲ್ಲಿರುವ ಪ್ರಸ್ತಾವನೆಯ ಕುರಿತು ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸಲ್ಲಿಸಲು ಸೂಚಿಸಲಾಗಿತ್ತು. ಈಗ ಸಚಿವಾಲಯವು ನೋಟಿಸ್ ಅವಧಿಯನ್ನು 2020 ಜೂನ್ 30 ರವರೆಗೆ ವಿಸ್ತರಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621800

ಪ್ರವಾಸೋದ್ಯಮ ಸಚಿವಾಲಯವು ದೇಖೋ ಅಪ್ನಾ ದೇಶ್ ಲೋಗೋ ವಿನ್ಯಾಸ ಸ್ಪರ್ಧೆಯನ್ನು ಏರ್ಪಡಿಸಿದೆ

ಪ್ರವಾಸೋದ್ಯಮ ಸಚಿವಾಲಯವು MyGov ಪ್ಲಾಟ್ಫಾರ್ಮ್ನಲ್ಲಿದೇಖೋ ಅಪ್ನಾ ದೇಶ್ಲೋಗೋ ವಿನ್ಯಾಸ ಸ್ಪರ್ಧೆಯನ್ನು ಏರ್ಪಡಿಸಿದೆ. ದೇಶದ ನಾಗರಿಕರ ಸೃಜನಶೀಲ ಆಲೋಚನೆಗಳಿಂದ ಹೊರಬರುವದೇಖೋ ಅಪ್ನಾ ದೇಶ್ಅಭಿಯಾನಕ್ಕೆ ಲೋಗೊವನ್ನು ಹೊಂದುವುದು ಸ್ಪರ್ಧೆಯ ಉದ್ದೇಶವಾಗಿದೆ. ಲಾಕ್ಡೌನ್ ನಂತರ ಮತ್ತು ಸಾಂಕ್ರಾಮಿಕ ರೋಗದ ಹರಡುವಿಕೆಯ ಮೇಲೆ ನಿಯಂತ್ರಣವನ್ನು ಸಾಧಿಸಿದ ನಂತರ, ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕಿಂತ ದೇಶೀಯ ಪ್ರವಾಸೋದ್ಯಮವು ವ್ಯಾಪಕವಾಗಿ ಹಾಗೂ ವೇಗವಾಗಿ ಚೇತರಿಸಿಕೊಳ್ಳಲಿದೆ ಎಂದು ನಂಬಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621587

ಐಸಿಎಆರ್ ಸಂಸ್ಥೆಗಳು ಮೀನುಗಾರಿಕೆ ಕ್ಷೇತ್ರಕ್ಕೆ ಸಲಹೆಗಳನ್ನು 12 ಭಾಷೆಗಳಲ್ಲಿ ಬಿಡುಗಡೆ ಮಾಡಿವೆ

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಪಾಲುದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ತನ್ನ ಸಂಶೋಧನಾ ಸಂಸ್ಥೆಗಳ ಮೂಲಕ ವಿವಿಧ ಉಪ-ಕ್ಷೇತ್ರಗಳಲ್ಲಿ ಸಂಬಂಧಪಟ್ಟ ಎಲ್ಲರಿಗೂ ಮಾಹಿತಿ ನೀಡಲು ಹಲವಾರು ನವೀನ ಕ್ರಮಗಳನ್ನು ಕೈಗೊಂಡಿದೆ. ಪ್ರಯತ್ನದಲ್ಲಿ, ಕೊಚ್ಚಿಯ ಐಸಿಎಆರ್-ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಫಿಷರೀಸ್ ಟೆಕ್ನಾಲಜಿ, ಮೀನುಗಾರರು, ಮೀನುಗಾರಿಕೆ ದೋಣಿ ಮಾಲೀಕರು, ಮೀನುಗಾರಿಕೆ ಬಂದರು, ಮೀನು ಮಾರುಕಟ್ಟೆ ಮತ್ತು ಸಮುದ್ರಾಹಾರ ಸಂಸ್ಕರಣಾ ಘಟಕಗಳ ಅನುಕೂಲಕ್ಕಾಗಿ ಇಂಗ್ಲಿಷ್ ಮತ್ತು ಹಿಂದಿಯಲ್ಲದೆ 10 ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಸಲಹೆಗಳನ್ನು ಸಿದ್ಧಪಡಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1621745

ನಾಸಿಕ್ ಸ್ಮಾರ್ಟ್ ಸಿಟಿಯ ಮೊಬೈಲ್ ಅಪ್ಲಿಕೇಶನ್ಗಳು ಮತ್ತು ದೇಹ ಸ್ಯಾನಿಟೈಸೇಶನ್ ಯಂತ್ರಗಳಂತಹ ಉಪಕ್ರಮಗಳು ಕೋವಿಡ್ -19 ವಿರುದ್ಧ ನಗರದ ಹೋರಾಟವನ್ನು ಬಲಪಡಿಸಿವೆ

ವಿವರಗಳಿಗೆ: https://pib.gov.in/PressReleseDetail.aspx?PRID=1621809

 

ಪಿ ಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

  • ಚಂಡಿಗಢ: ಚಂಡಿಗಢ ಆಡಳಿತ ಎಲ್ಲ ಜವಾಬ್ದಾರಿಯುತ ನಾಯಕರಿಗೆ ತಮಗೇನಾದರೂ ಅನಾರೋಗ್ಯ ಇದ್ದರೆ ಬಗ್ಗೆ ಸಮೀಪದ ಡಿಸ್ಪೆನ್ಸರಿಗೆ ತಿಳಿಸುವಂತೆ ನಿರ್ದೇಶನ ನೀಡಿದೆ. ಕೋವಿಡ್-19 ಸೋಂಕು ಹೊಂದಿರುವ ವ್ಯಕ್ತಿ ಯಾವುದೇ ಪ್ರದೇಶದಲ್ಲಿದ್ದರೂ ಬಗ್ಗೆ ಆಡಳಿತಕ್ಕೆ ಮಾಹಿತಿ ನೀಡುವಂತೆ ಸ್ಥಳೀಯ ನಾಯಕರು ಹಾಗೂ ನೆರೆಹೊರೆಯವರಿಗೆ ಮನವಿ ಮಾಡಿದೆ. ಈವರೆಗೆ 38,44,867 ಸಿದ್ಧಪಡಿಸಿದ ಆಹಾರದ ಪೊಟ್ಟಣಗಳನ್ನು ಚಂಡಿಗಢ ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಗತ್ಯವಿರುವ ವ್ಯಕ್ತಿಗಳು ಮತ್ತು ನಿರಾಶ್ರಿತರಿಗೆ ವಿತರಿಸಲಾಗಿದೆ.
  • ಪಂಜಾಬ್: ವಿದೇಶಗಳಲ್ಲಿ ಸಿಲುಕಿರುವ ಅನಿವಾಸಿ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆತರುವ ಪ್ರಯತ್ನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮುಖ್ಯಮಂತ್ರಿಗಳು ಕೋವಿಡ್-19 ಮಾರಕ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸರಣಿ ನಿರ್ದೇಶನಗಳನ್ನು ನೀಡಿದ್ದಾರೆ. ಅವುಗಳಲ್ಲಿ ವಾಪಸ್ಸಾದ ಎಲ್ಲರನ್ನೂ ಆರೋಗ್ಯ ಇಲಾಖೆ ಕಡ್ಡಾಯವಾಗಿ ತಪಾಸಣೆಗೊಳಪಡಿಸುವುದು. ಭಾರತಕ್ಕೆ ಅತಿ ಹೆಚ್ಚಿನ ಅಪಾಯವಿರುವ ಪ್ರದೇಶಗಳಿಂದ ಬಂದಿರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಒದಗಿಸುವುದು ಮತ್ತು ಎನ್ಆರ್ ಐಗಳಿಗೆ ಹೊಟೇಲ್/ಗೃಹ ಕ್ವಾರಂಟೈನ್ ಗೆ ಒಳಪಡಿಸುವುದು ಸೇರಿದೆ.
  • ಹರಿಯಾಣ: ಹರಿಯಾಣ ನಗರ ಸ್ಥಳೀಯ ಸಂಸ್ಥೆಗಳ ಇಲಾಖೆ ನಗರ ಪಾಲಿಕೆಗಳ ವ್ಯಾಪ್ತಿಯ ಮಾರುಕಟ್ಟೆ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲು ನಿರ್ದೇಶನಗಳನ್ನು ನೀಡಿದೆ. ಹರಿಯಾಣ ಸರ್ಕಾರ ರಾಜ್ಯದ ಆರ್ಥಿಕತೆ ಉತ್ತೇಜನಕ್ಕೆ ತ್ವರಿತವಾಗಿ ಉದ್ಯೋಗಾವಕಾಶಗಳನ್ನು ಒದಗಿಸುತ್ತಿದೆ. ಅದಕ್ಕಾಗಿ ಪೋರ್ಟಲ್ https://saralharyana.gov.in/ ಮೂಲಕ ಸ್ವಯಂಚಾಲಿತ ಅನುಮೋದನೆಗಳನ್ನು ನೀಡಲಾಗುತ್ತಿದೆ ಮತ್ತು ಈವರೆಗೆ 19,626 ಘಟಕಗಳಿಗೆ ಅನುಮೋದನೆ ನೀಡಲಾಗಿದ್ದು, 11,21,287 ಕೆಲಸಗಾರರಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ.
  • ಕೇರಳ: ಐತಿಹಾಸಿಕ ವಂದೇ ಮಾತರಂ ಮಿಷನ್ ಯೋಜನೆ ಆರಂಭದ ಭಾಗವಾಗಿ 177 ವಯಸ್ಕರು ಮತ್ತು ನಾಲ್ವರು ಮಕ್ಕಳು ಇರುವ ಮೊದಲ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಬುದಾಬಿಯಿಂದ ಇಂದು ರಾತ್ರಿ 9.40ಕ್ಕೆ ಕೊಚ್ಚಿಗೆ ಬಂದಿಳಿಯಲಿದೆ. ದುಬೈನಿಂದ ಹೊರಟಿರುವ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಇಂದು ರಾತ್ರಿ 10.30ಕ್ಕೆ ಕೋಯಿಕೋಡ್ ಗೆ ಬಂದಿಳಿಯಲಿದೆ. ಎಂಎಚ್ಎ ಮಾರ್ಗಸೂಚಿಯಂತೆ ಆಗಮಿಸುವವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುವುದು. ಕ್ವಾರಂಟೈನ್ ನಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಬೇರೆ ರಾಜ್ಯಗಳಿಂದ ಕೇರಳಕ್ಕೆ ವಾಪಸ್ಸಾಗುತ್ತಿದ್ದವರಿಗೆ ವಿತರಿಸುತ್ತಿದ್ದ ಪ್ರಯಾಣ ಪಾಸ್ ಗಳನ್ನು ಸ್ಥಗಿತಗೊಳಿಸಿದೆ. ವಲಸೆ ಕಾರ್ಮಿಕರು ಇಂದು ತಮ್ಮ ಸ್ವಂತ ಊರುಗಳಿಗೆ ತೆರಳಲು ಅವಕಾಶ ನೀಡಬೇಕೆನ್ನುವ ಬೇಡಿಕೆ ಮುಂದಿಟ್ಟುಕೊಂಡು ಕನ್ನೂರು ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದರು. ಬ್ರಿಟನ್, ಅಮೆರಿಕ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಕೋವಿಡ್-19ಗೆ 6 ಮಂದಿ ಕೇರಳದವರು ಬಲಿಯಾಗಿದ್ದಾರೆ. 8 ಜಿಲ್ಲೆಗಳು ಕೋವಿಡ್ ಮುಕ್ತವಾಗಿದ್ದು, ರಾಜ್ಯದಲ್ಲಿ 30 ಪ್ರಕರಣಗಳು ಕ್ರಿಯಾಶೀಲವಾಗಿವೆ.
  • ತಮಿಳುನಾಡು: ಸಂಕಷ್ಟದಲ್ಲಿ ಸಿಲುಕಿದ್ದ 1,136 ಪ್ರಯಾಣಿಕರನ್ನೊತ್ತ ವಿಶೇಷ ರೈಲು ತಮಿಳುನಾಡಿನಿಂದ ರಾಂಚಿಗೆ ಪ್ರಯಾಣ ಬೆಳೆಸಿದೆ. ಕೊಯಮತ್ತೂರಿನ 32,000 ವಲಸೆ ಕಾರ್ಮಿಕರು ಸೇರಿದಂತೆ, ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದ ಲಕ್ಷಾಂತರ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು ಅವರು ತಮ್ಮ ಗ್ರಾಮಗಳಿಗೆ ತೆರಳಲು ಆಸಕ್ತಿ ತೋರಿದ್ದಾರೆ. ಲಾಕ್ ಡೌನ್ ಮಧ್ಯೆಯೇ ಮಧುರೈನಲ್ಲಿ ಅತ್ಯವಶ್ಯಕ ವಸ್ತುಗಳು, ಮದ್ಯ, ಖರೀದಿಗೆ ಟ್ರಾನ್ಸಿಟ್ ಪಾಸ್ ಗಳನ್ನು ಕಡ್ಡಾಯಗೊಳಿಸಲಾಗಿದೆ. ಮದ್ಯ ಮಾರಾಟಕ್ಕೆ ಟಿಎಎಸ್ಎಂಎಸಿ ಮಳಿಗೆಗಳನ್ನು ತೆರೆಯಬಾರದು ಎಂಬ ಪ್ರತಿಪಕ್ಷಗಳ ಬೇಡಿಕೆ ನಡುವೆಯೇ ಸರ್ಕಾರ ಗುರುವಾರದಿಂದ ಕೆಲವು ಜಿಲ್ಲೆಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ರಾಜ್ಯದಲ್ಲಿ ಈವರೆಗೆ 4829 ಪ್ರಕರಣಗಳು ದೃಢಪಟ್ಟಿವೆ; ಕ್ರಿಯಾಶೀಲ ಪ್ರಕರಣಗಳು 3275; ಸಾವು 35; ಗುಣಮುಖರಾದವರು 1516.
  • ಕರ್ನಾಟಕ: ಇಂದು 8 ಹೊಸ ಪ್ರಕರಣಗಳು ದೃಢಪಟ್ಟಿವೆ. ದಾವಣಗೆರೆ ಮತ್ತು ಕಲಬುರಗಿಗಳಲ್ಲಿ ತಲಾ 3 ಪ್ರಕರಣ ಮತ್ತು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ. ಇಂದು ದಾವಣಗೆರೆಯಲ್ಲಿ ಕೋವಿಡ್-19ಗೆ 55 ವರ್ಷದ ಮಹಿಳಾ ಸೋಂಕಿತೆ ಮೃತಪಟ್ಟಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 701, ಈವರೆಗೆ 30 ಮಂದಿ ಮೃತಪಟ್ಟಿದ್ದಾರೆ ಮತ್ತು 363 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
  • ಆಂಧ್ರಪ್ರದೇಶ : ಇಂದು ಮುಂಜಾನೆ ವೈಝಾಗ್ ಎಲ್ ಜಿ ಪಾಲಿಮರ್ಸ್ ರಾಸಾಯನಿಕ ಘಟಕದಲ್ಲಿ ನಡೆದ ಅನಿಲ ಸೋರಿಕೆ ದುರಂತದಲ್ಲಿ 9 ಮಂದಿ ಮೃತಪಟ್ಟು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪ್ರಧಾನಮಂತ್ರಿಗಳು, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರಿಗೆ ಕರೆ ಮಾಡಿ, ಅನಿಲ ದುರಂತದ ಬಗ್ಗೆ ಮಾಹಿತಿ ಪಡೆದು, ಕೇಂದ್ರದ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಹಸಿರು ವಲಯದಲ್ಲಿರುವ ವಿಜಯನಗರಂ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ 3 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 8087 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವುಗಳಲ್ಲಿ 56 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 51 ಮಂದಿ ಬಿಡುಗಡೆಯಾಗಿದ್ದಾರೆ ಮತ್ತು ಇಬ್ಬರು ಸಾವನ್ನಪ್ಪಿದ್ದಾರೆ ಒಟ್ಟು ಪ್ರಕರಣಗಳ ಸಂಖ್ಯೆ 1833ಕ್ಕೆ ಏರಿಕೆಯಾಗಿದೆ. ಕ್ರಿಯಾಶೀಲ ಪ್ರಕರಣಗಳು: 1015, ಚೇತರಿಸಿಕೊಂಡವರು: 780, ಸಾವು: 38. ಪಾಸಿಟಿವ್ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳು: ಕರ್ನೂಲ್(540), ಗುಂಟೂರು(373), ಕೃಷ್ಣ(316).
  • ಬುಧವಾರ ತೆಲಂಗಾಣದಿಂದ ಸಂಕಷ್ಟಕ್ಕೆ ಸಿಲುಕಿದ್ದ 2,803 ಮಂದಿ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಮರಳಿದ್ದಾರೆ. ತೆಲಂಗಾಣ ಹೈಕೋರ್ಟ್ ಬುಧವಾರ ತುರ್ತು ಆರೋಗ್ಯ ಸಂದರ್ಭದಲ್ಲಿ ಕೈಗೊಂಡಿರುವ ರಕ್ಷಣಾ ಕಾರ್ಯಗಳ ಬಗ್ಗೆ ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ರಾಜ್ಯ ಸರ್ಕಾರ ಶೇ.33ರಷ್ಟು ಸಿಬ್ಬಂದಿಯೊಂದಿಗೆ ಖಾಸಗಿ ಕಚೇರಿಗಳಿಗೆ ಕಾರ್ಯ ನಿರ್ವಹಣೆಗೆ ಅವಕಾಶ ನೀಡಿದ್ದರೂ ಐಟಿ ಮತ್ತು ಐಟಿಇಎಸ್ ವಲಯ ತಮ್ಮ ಕಚೇರಿಗಳ ಪುನರಾರಂಭ ಕಾರ್ಯತಂತ್ರಕ್ಕೆ ಇನ್ನು ಸ್ಪಷ್ಟತೆಗಾಗಿ ಕಾಯುತ್ತಿವೆ ಈವರೆಗಿನ ಒಟ್ಟು ಪ್ರಕರಣಗಳು : 1107, ಕ್ರಿಯಾಶೀಲ ಪ್ರಕರಣಗಳು: 430, ಸಾವು 29; ಗುಣಮುಖರಾದವರು: 648.
  • ಅರುಣಾಚಲ ಪ್ರದೇಶ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಈವರೆಗೂ 19.89 ಕೋಟಿ ರೂ.ಗಳನ್ನು ಸ್ವೀಕರಿಸಲಾಗಿದೆ ಮತ್ತು ಕೋವಿಡ್ ಸಂಬಂಧಿ ಪರಿಹಾರ ಕಾರ್ಯಗಳಿಗಾಗಿ ದಿನಾಂಕದವರೆಗೆ 9.49 ಕೋಟಿ ರೂ. ವ್ಯಯ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅರುಣಾಚಲಪ್ರದೇಶದಲ್ಲಿ ಪಿಎಂಜಿಕೆವೈ ಅಡಿಯಲ್ಲಿ ಒಟ್ಟು 32,751 ಉಚಿತ ಎಲ್ ಪಿಜಿ ಸಿಲಿಂಡರ್ ಗಳನ್ನು ವಿತರಿಸಲಾಗಿದೆ.
  • ಅಸ್ಸಾಂ: ಕೊರೊನಾ ಸೋಂಕಿನಿಂದಾಗಿ ರಾಜ್ಯದ ಆರ್ಥಿಕತೆಯ ಪುನರುಜ್ಜೀವನಕ್ಕೆ ರಚಿಸಲಾಗಿರುವ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿದರು.
  • ಮೇಘಾಲಯ: ಮೇಘಾಲಯದ ಐಐಎಂ ಉಮ್ ಸ್ವಾಲಿಯನ್ನು ರಾಜ್ಯದ ಅತಿದೊಡ್ಡ ಕೊರೊನಾ ಆರೈಕೆ ಕೇಂದ್ರವನ್ನಾಗಿ ಪರಿವರ್ತಿಸಲಾಗಿದ್ದು, ಅಲ್ಲಿ 258 ಹಾಸಿಗೆಗಳು, ಶಂಕಿತ ಪ್ರಕರಣಗಳು ಹಾಗೂ ರೋಗಿಗಳ ಆರೈಕೆಗೆ ಪ್ರತ್ಯೇಕ ಸಿಬ್ಬಂದಿ ಹಾಗೂ ಮಹಡಿಗಳನ್ನು ಪ್ರತ್ಯೇಕಗೊಳಿಸಿ ಸನ್ನದ್ಧವಾಗಿಡಲಾಗಿದೆ.
  • ಮಣಿಪುರ: ಸರ್ಕಾರ, ಗ್ರಾಮೀಣ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮದೊಂದಿಗೆ ಮನ್ರೇಗಾ ಚಟುವಟಿಕೆಗಳಿಗೆ ಅವಕಾಶ ನೀಡಿದೆ. ರಾಜ್ಯದ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಆನ್ ಲೈನ್ ಬೋಧನೆ ಮೂಲಕ ಶೈಕ್ಷಣಿಕ ವೇಳಾಪಟ್ಟಿ ಕಾಯ್ದುಕೊಳ್ಳುವಂತೆ ಆದೇಶಿಸಲಾಗಿದೆ.
  • ಮಿಝೋರಾಂ: ಮಿಝೋರಾಂನ ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಇಲಾಖೆಯ ಮಸ್ಟರ್ ರೋಲ್ ಉದ್ಯೋಗಿಗಳು ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ.
  • ನಾಗಾಲ್ಯಾಂಡ್: ಮುಖ್ಯಮಂತ್ರಿಗಳು ತೇನ್ ಸಂಗ್ ಜಿಲ್ಲೆಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು ಮತ್ತು ದಿನಗೂಲಿ ನೌಕರರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು. ಉಪಮುಖ್ಯಮಂತ್ರಿಗಳು ತೇನ್ ಸಂಗ್, ಲಾಂಗ್ ಲೆಂಗ್, ಕಿಫೇರೆ ಮತ್ತು ಶಾಮ್ಮಟೋರ್ ಗ್ರಾಮ ಸಮಿತಿಗಳಿಗೆ ವಾಕಿ-ಟಾಕಿ ಉಪಕರಣಗಳನ್ನು ದೇಣಿಗೆಯಾಗಿ ನೀಡಿದರು.
  • ಮಹಾರಾಷ್ಟ್ರ: ರಾಜ್ಯದಲ್ಲಿ ಒಂದೇ ದಿನ ಅತಿ ಹೆಚ್ಚಿನ ಅಂದರೆ 1,233 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 16,758ಕ್ಕೆ ಏರಿಕೆಯಾಗಿದೆ. 34 ಮಂದಿ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 651ಕ್ಕೆ ಏರಿಕೆಯಾಗಿದೆ. ಮುಂಬೈವೊಂದರಲ್ಲೇ 10,500ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಮುಂಬೈನಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದರೂ ಒಂದು ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಿದ ಏಕೈಕ ನಗರ ಇದಾಗಿದೆ. ಪ್ರತಿ ದಿನ 6 ಸಾರ್ವಜನಿಕ ಮತ್ತು 11 ಖಾಸಗಿ ಪ್ರಯೋಗಾಲಯಗಳಲ್ಲಿ 4,500 ಪರೀಕ್ಷೆತಗಳನ್ನು ನಡೆಸಲಾಗುತ್ತಿದೆ. ಆದರೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏಪ್ರಿಲ್ ಆರಂಭದಲ್ಲಿ ಶೇ.3ರಷ್ಟು ಇದ್ದದ್ದು, ಇದೀಗ ಶೇ.10ಕ್ಕೇ ಏರಿಕೆಯಾಗಿರುವುದು ಸೋಂಕು ಕ್ಷಿಪ್ರವಾಗಿ ವ್ಯಾಪಿಸುತ್ತಿರುವ ಮುನ್ಸೂಚನೆಯಾಗಿದೆ. ಮಹಾರಾಷ್ಟ್ರ ಸರ್ಕಾರ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂಬೈನ 25,000 ಖಾಸಗಿ ವೈದ್ಯರಿಗೆ ತಕ್ಷಣವೇ ಆಸ್ಪತ್ರೆಗಳಿಗೆ ತೆರಳಿ ಕಾರ್ಯಾರಂಭ ಮಾಡುವಂತೆ ಸೂಚಿಸಿದೆ. ವೈದ್ಯರಿಗೆ ರಕ್ಷಣಾ ಉಪಕರಣ ನೀಡುವುದಲ್ಲದೆ, ತುರ್ತು ಸಂದರ್ಭದಲ್ಲಿ ಕೆಲಸ ನಿರ್ವಹಿಸುವುದಕ್ಕಾಗಿ ವೇತನ ನೀಡಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಕ್ರಮದಿಂದ 55 ವರ್ಷ ಮೇಲ್ಪಟ್ಟ ವೈದ್ಯರಿಗೆ ವಿನಾಯಿತಿ ನೀಡಲಾಗಿದೆ.
  • ಗುಜರಾತ್: ರಾಜ್ಯದಲ್ಲಿ 380 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 6,625ಕ್ಕೆ ಏರಿಕೆಯಾಗಿದೆ. ಅಂತೆಯೇ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಬಲಿಯಾದವರ ಸಂಖ್ಯೆ 396ಕ್ಕೆ ಏರಿಕೆಯಾಗಿದೆ. 380 ಹೊಸ ಪ್ರಕರಣಗಳಲ್ಲಿ 291 ಅಹಮದಾಬಾದ್ ನಲ್ಲಿ ವರದಿಯಾಗಿದೆ.
  • ರಾಜಸ್ಥಾನ: ರಾಜಸ್ಥಾನ ಸರ್ಕಾರ ರಾಜ್ಯದಲ್ಲಿ ಕೋವಿಡ್-19 ಹರಡುವುದನ್ನು ತಡೆಯಲು ಅನಧಿಕೃತ ವ್ಯಕ್ತಿಗಳು ರಾಜ್ಯ ಪ್ರವೇಶಿಸುವುದನ್ನು ನಿರ್ಬಂಧಿಸಲು ಅಂತರ್ ರಾಜ್ಯ ಗಡಿಗಳನ್ನು ಸಂಪೂರ್ಣ ಬಂದ್ ಮಾಡಿದೆ. ರಾಜ್ಯದಲ್ಲಿ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 3355ರಲ್ಲಿದೆ. ರಾಜಸ್ಥಾನದಲ್ಲಿ ಸೋಂಕಿನ ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 46.98ಇದ್ದು, ಇದು ಎಲ್ಲ ರಾಜ್ಯಗಳಿಗಿಂತ ಅತ್ಯಧಿಕವಾಗಿದೆ.
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ಕೋವಿಡ್-19 ಸೋಂಕು ದೃಢಪಟ್ಟವರ ಸಂಖ್ಯೆ 3,138ಕ್ಕೆ ಏರಿದೆ. ರಾಜ್ಯದಲ್ಲಿ 1,099 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಸರಾಸರಿ ಗುಣಮುಖರಾಗುತ್ತಿರುವವರ ಪ್ರಮಾಣ ಅಂದಾಜು ಶೇ. 33ರಷ್ಟಿದೆ.

***



(Release ID: 1621916) Visitor Counter : 509