ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಹೊಸ ಮಾಹಿತಿ
Posted On:
04 MAY 2020 6:21PM by PIB Bengaluru
ಕೋವಿಡ್-19 ಹೊಸ ಮಾಹಿತಿ
ಇಲ್ಲಿಯವರೆಗೆ 11,706 ಜನರನ್ನು ಗುಣಪಡಿಸಲಾಗಿದೆ
ಶ್ರೇಣೀಕೃತ, ಹತೋಟಿಯಲ್ಲಿಡುವ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19ರ ತಡೆಗಟ್ಟುವಿಕೆಗೆ ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಹರ್ಷ್ ವರ್ಧನ್ ರವರು ಇಂದು ಮಧ್ಯಪ್ರದೇಶದ ಆರೋಗ್ಯ ಸಚಿವ ಶ್ರೀ ನರೋತ್ತಮ್ ಮಿಶ್ರಾ ಅವರೊಂದಿಗೆ ಕುಟುಂಬ ಕಲ್ಯಾಣ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಸಭೆ ಕೇಂದ್ರ ಮತ್ತು ರಾಜ್ಯದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಕೋವಿಡ್-19ನ ನಿಯಂತ್ರಣ ಮತ್ತು ನಿರ್ವಹಣೆಯನ್ನು ಪರಿಶೀಲಿಸಲು ಸಭೆ ನಡೆಸಿದರು. ರಾಜ್ಯದಲ್ಲಿ ಸಂಪರ್ಕ ವ್ಯಕ್ತಿಗಳ ಪತ್ತೆಹಚ್ಚುವಿಕೆ, ಕಣ್ಗಾವಲು, ಮನೆ-ಮನೆಯಲ್ಲಿ ಸಕ್ರಿಯ ಪ್ರಕರಣಗಳ ಪತ್ತೆಹಚ್ಚುವಿಕೆಯನ್ನು ಬಲಪಡಿಸುವುದು, ಕೋವಿಡ್ ಅಲ್ಲದ ರೋಗ ನಿರ್ವಹಣೆಗೆ ಚಿಕಿತ್ಸೆ ಪಡೆಯುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇತ್ಯಾದಿಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು.
ಎಲ್ಲಾ ಮುಗಿದ ಪ್ರಕರಣಗಳಿಗೆ ಫಲಿತಾಂಶ ಅನುಪಾತ (ಚೇತರಿಸಿಕೊಂಡ ಮತ್ತು ಮರಣದ ಸಂಖ್ಯೆ ನಡುವೆ) ವು , ಆಸ್ಪತ್ರೆಗಳಲ್ಲಿನ ಕ್ಲಿನಿಕಲ್ ಮ್ಯಾನೇಜ್ಮೆಂಟ್ ಸ್ಥಿತಿಯನ್ನು ಏಪ್ರಿಲ್ 17 ರಿಂದ ವಿಶ್ಲೇಷಿಸಲಾಗಿದೆ ಎಂದು ಸೂಚಿಸುತ್ತದೆ ಹಾಗು 17 ಏಪ್ರಿಲ್ 2020ರ ಮೊದಲಿಗೆ ಹೋಲಿಸಿದರೆ (ಫಲಿತಾಂಶ ಅನುಪಾತ 80:20) ದೇಶದಲ್ಲಿ ಸುಧಾರಣೆ ಕಂಡುಬಂದಿದೆ ಪ್ರಸ್ತುತ ಅದು 90:10 ಆಗಿದೆ.
ಈವರೆಗೆ ಒಟ್ಟು 11,706 ಜನರನ್ನು ಗುಣಪಡಿಸಲಾಗಿದೆ. ಇದು ನಮ್ಮ ಒಟ್ಟು ಚೇತರಿಕೆ ಪ್ರಮಾಣವನ್ನು 27.52% ರಷ್ಟನ್ನಾಗಿ ಮಾಡಿದೆ. ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 42,533 ಆಗಿದೆ. ನಿನ್ನೆಯಿಂದ, ಭಾರತದಲ್ಲಿ ಕೋವಿಡ್-19 ದೃಢಪಡಿಸಿದ ಪ್ರಕರಣಗಳ ಸಂಖ್ಯೆಯಲ್ಲಿ 2,553 ಹೆಚ್ಚಳವಾಗಿರುವುದು ಕಂಡುಬಂದಿದೆ.
ಪ್ರಕರಣಗಳ ಸಂಖ್ಯೆಯು ಕಡಿಮೆಯಾಗಿಯೇ ಇರಲು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕಠಿಣವಾದ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮತ್ತೊಮ್ಮೆ ಪುನರುಚ್ಚರಿಸಲಾಗಿದೆ, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಮೇಲೆ ಸಮಾನಾಂತರವಾಗಿ ಕೇಂದ್ರೀಕರಿಸುವಾಗ ಆಡಳಿತವು ಪರಿಣಾಮಕಾರಿ ಕೇಸ್ ಕ್ಲಿನಿಕಲ್ ನಿರ್ವಹಣೆಯನ್ನು ಸಹ ಖಚಿತಪಡಿಸಿಕೊಳ್ಳಬೇಕು.
ಲಾಕ್ ಡೌನ್ ಸಡಿಲವಾಗುತ್ತಿದ್ದಂತೆ, ನಾವು ದೈಹಿಕ ಅಂತರಕ್ಕೆ ಸಂಬಂಧಿಸಿದ ಶಿಷ್ಟಾಚಾರ ಮತ್ತು ಮಾರ್ಗಸೂಚಿಗಳನ್ನು ಅನುಸರಿಸಬೇಕು, ಕೈ ನೈರ್ಮಲ್ಯ ಮತ್ತು ಪರಿಸರ ನೈರ್ಮಲ್ಯದಂತಹ ತಡೆಗಟ್ಟುವ ಕ್ರಮಗಳನ್ನು ಅನುಸರಿಸಬೇಕು ಮತ್ತು ಎಚ್ಚರಿಕೆಯಿಂದ, ಜಾಗೃತರಾಗಿ ಮತ್ತು ಜಾಗರೂಕರಾಗಿ ಕೋವಿಡ್-19 ಅನ್ನು ನಿಭಾಯಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಯಾವಾಗಲೂ ಮುಖದ ಕವರ್/ ಮುಖಗವಸುಗಳನ್ನು ಧರಿಸಿ. ತಡೆಗಟ್ಟುವ ಕ್ರಮಗಳ ಕುರಿತು ಸರ್ಕಾರವು ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿ. ಅಗತ್ಯ ವಸ್ತುಗಳನ್ನು ಖರೀದಿಸುವಾಗ ಅಥವಾ ಸಾಮಾನ್ಯ ಪ್ರದೇಶಗಳಲ್ಲಿ ಸಭೆ ನಡೆಸುವಾಗ ಜನದಟ್ಟಣೆಯನ್ನು ತಪ್ಪಿಸಿ.
ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in , ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1621000)
Visitor Counter : 256
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam