ರಕ್ಷಣಾ ಸಚಿವಾಲಯ

ಕೋವಿಡ್-19 ಯೋಧರನ್ನು ಅಭಿನಂದಿಸಲು ರಾಷ್ಟ್ರದೊಂದಿಗೆ ಕೈಜೋಡಿಸಿದ ಭಾರತೀಯ ಸಮುದ್ರ ರಕ್ಷಣಾ ಪಡೆ

Posted On: 02 MAY 2020 5:33PM by PIB Bengaluru

ಕೋವಿಡ್-19 ಯೋಧರನ್ನು ಅಭಿನಂದಿಸಲು ರಾಷ್ಟ್ರದೊಂದಿಗೆ ಕೈಜೋಡಿಸಿದ ಭಾರತೀಯ ಸಮುದ್ರ ರಕ್ಷಣಾ ಪಡೆ

 

ಕೊರೊನಾ ವೈರಾಣು (ಕೋವಿಡ್ -19)  ಹರಡುವಿಕೆಯನ್ನು ತಡೆಯಲು ಸರ್ಕಾರದ ಪ್ರಯತ್ನಗಳಿಗೆ ಭಾರತೀಯ ಸಮುದ್ರ ರಕ್ಷಣಾ ಪಡೆ (ಐಸಿಜಿ) ಸ್ವಪ್ರೇರಣೆಯಿಂದ ಕೈಜೋಡಿಸಿದೆ. ನೌಕಾಪಡೆಗೆ, ಅದರಲ್ಲೂ ವಿಶೇಷವಾಗಿ ಮೀನುಗಾರ ಸಮುದಾಯ, ಬಂದರುಗಳು ಮತ್ತು ಇತರ ಏಜೆನ್ಸಿಗಳಿಗೆ, ಅವರು ಅಳವಡಿಸಿಕೊಳ್ಳಬಹುದಾದ ಮುನ್ನೆಚ್ಚಿಕೆ ಕ್ರಮಗಳ ಕುರಿತು ಅರಿವು ಮೂಡಿಸಲು ಸಮುದಾಯ ಸಂವಹನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ತಮ್ಮ ಪ್ರದೇಶಗಳಲ್ಲಿ ಬಡವರಿಗೆ ಮತ್ತು ವಲಸೆ ಕಾರ್ಮಿಕರಿಗೆ ಪಡಿತರ/ ಆಹಾರ ವಿತರಣೆಯಲ್ಲೂ ಐಸಿಜಿ ಘಟಕಗಳು ಸ್ಥಳೀಯ ಆಡಳಿತಕ್ಕೆ ನೆರವು ನೀಡುತ್ತಿವೆ. ಜೊತೆಗೆ ಕೋವಿಡ್ – 19 ಯೋಧರ ಪ್ರಯತ್ನಗಳನ್ನು ಅಭಿನಂದಿಸುವಲ್ಲಿ ರಕ್ಷಣಾ ಸಚಿವಾಲಯದ ಉಪಕ್ರಮಗಳಲ್ಲಿಯೂ ಐಸಿಜಿ ಮುಂಚೂಣಿಯಲ್ಲಿದೆ.   

ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಲ್ಲಿ ಹೂ ಮಳೆ ಸುರಿಸುವುದು ಮತ್ತು ಹಡಗುಗಳನ್ನು ಬೆಳಗಿಸುವ ‘ಇಂಡಿಯಾ ಥ್ಯಾಂಕ್ಸ್ ಕೋವಿಡ್ -19 ವಾರಿಯರ್ಸ್’ ಉಪಕ್ರಮದಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಮೇ 3. 2020 ರಂದು ದೂರದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪ ಮತ್ತು ಮಿನಿಕೋಯ್ ದ್ವೀಪಗಳ ಸಮುದ್ರ ತಟಗಳೂ ಸೇರಿದಂತೆ ಸಂಪೂರ್ಣ ದೇಶದ ಸಮುದ್ರ ತಟಗಳನ್ನು ಒಳಗೊಳ್ಳುವಂತೆ 25 ಸ್ಥಳಗಳಲ್ಲಿ ಹಡಗುಗಳನ್ನು ಬೆಳಗುವ ಮೂಲಕ ಕೋವಿಡ್ – 19 ಯೋಧರ ಪ್ರಯತ್ನಗಳನ್ನು ಹಡಗುಗಳು ಅಭಿನಂದಿಸಲಿವೆ. ಜೊತೆಗೆ ಐಸಿಜಿ ಹೆಲಿಕಾಪ್ಟರ್ ಗಳು 5 ಸ್ಥಳಗಳಲ್ಲಿ ಕೋವಿಡ್ – 19 ಆಸ್ಪತ್ರೆಗಳ ಮೇಲೆ ಪುಷ್ಪ ವೃಷ್ಟಿಗೈಯ್ಯಲಿವೆ.     

ಒಟ್ಟು 46 ಐಸಿಜಿ ಹಡಗುಗಳು ಮತ್ತು ಸುಮಾರು 10 ಹೆಲಿಕಾಪ್ಟರ್ ಗಳು ಈ ಉಪಕ್ರಮದಲ್ಲಿ ಪಾಲ್ಗೊಳ್ಳಲಿವೆ. ಐಸಿಜಿ ಹಡಗುಗಳು ಮತ್ತು ಹೆಲಿಕಾಪ್ಟರ್ ಗಳು ಭಾಗವಹಿಸಲಿರುವ ಸ್ಥಳಗಳು ಈ ಕೆಳಗಿನಂತಿವೆ: 

 

ಕ್ರಮ ಸಂಖ್ಯೆ

ಸ್ಥಳ

ಹಡಗು

ಹೆಲಿಕಾಪ್ಟರ್

01

ಪೋರಬಂದರ್

ದಮನ್

02

ಓಖಾ

ಮುಂಬೈ

03

ರತ್ನಾಗಿರಿ

ಗೋವಾ

04

ದಹನು

ಚೆನ್ನೈ

05

ಮುರುಡ್

ಪೋರ್ಟ್ ಬ್ಲೇರ್

06

ಗೋವಾ

 

07

ಹೊಸ ಮಂಗಳೂರು

 

08

ಕವ್ರತ್ತಿ

 

09

ಟ್ಯೂಟಿಕಾರಿನ್ (ತೂಂತುಕುಡಿ)

 

10

ಕನ್ಯಾಕುಮಾರಿ

 

11

ಚೆನ್ನೈ

 

12

ಕೃಷ್ಣಪಟ್ಟಣಂ

 

13

ನಿಝಾಂಪಟ್ನಂ

 

14

ಪುದುಚೆರಿ

 

15

ಕಾಕಿನಾಡ

 

16

ಪಾರಾದೀಪ್

 

17

ಗೋಪಾಲ್ ಪುರ /ಪುರಿ

 

18

ಸಾಗರ ದ್ವೀಪ

 

19

ಪೋರ್ಟ್ ಬ್ಲೇರ್

 

20

ದಿಗ್ಲಿಪುರ್

 

21

ಮಾಯಾಬುಂದುರ್

 

22

ಹಾಟ್ ಬೆ

 

23

ಕ್ಯಾಂಪ್ ಬೆಲ್ ಬೆ

 

ಐಸಿಜಿ ಹಡಗುಗಳು ಮತ್ತು ಹೆಲಿಕಾಪ್ಟರ್ ಗಳು ಸಮುದ್ರದಲ್ಲಿ ಕಟ್ಟುನಿಟ್ಟಿನ ಕಾವಲನ್ನು ಮುಂದುವರಿಸಲಿವೆ ಮತ್ತು ಭಾರತೀಯ ಉಪಖಂಡದ ಸುತ್ತಲೂ ಭದ್ರ ಮತ್ತು ಸುರಕ್ಷಿತ ಸಮುದ್ರವನ್ನು ಖಚಿತಪಡಿಸಲು ಬದ್ಧವಾಗಿವೆ. ಕೋಸ್ಟಲ್ ಸರ್ವಿಲೆನ್ಸ್ ರಡಾರ್ ನೆಟ್ ವರ್ಕ್ (ಕರಾವಳಿ ನಿಗಾ ರಡಾರ್ ಜಾಲ) ಮೂಲಕ ನಮ್ಮ ಕರಾವಳಿಯ ಮೇಲೆ 24x7 ಎಲೆಕ್ಟ್ರಾನಿಕ್ ನಿಗಾ ಇಡುವುದನ್ನೂ ನಿರ್ವಹಿಸುತ್ತಿದೆ.

https://ci3.googleusercontent.com/proxy/KVZS9bidrptV3cU7PCGjCoYepL01fUjYVvP7nsbxzb0ST5aZGHhfO0w55x0kmgCMOhhRjbQkvPMy2ix4dX-23iYb3lRbv8Aq6DhlBguwR7Fy7Xhr06zk=s0-d-e1-ft#https://static.pib.gov.in/WriteReadData/userfiles/image/image0013N81.png

https://ci6.googleusercontent.com/proxy/K41Uq3P7DExIen-7RrnS0hP9ehFnlysexitHfIQv6HvmZrMXBbMLVJCxcDcvIpa3di90TStc3_Ga_DJrg13p5ZLnhI-lFAlEEqzMCV5gd_CeGzRm6E_G=s0-d-e1-ft#https://static.pib.gov.in/WriteReadData/userfiles/image/image0025XVL.jpg

***



(Release ID: 1620530) Visitor Counter : 164