ರಕ್ಷಣಾ ಸಚಿವಾಲಯ

ನೋವೆಲ್ ಕೊರೊನಾವೈರಸ್ ಅನ್ನು ವಿಭಜಿಸಲು ಮೈಕ್ರೊವೇವ್ ಸ್ಟೆರಿಲೈಸರ್ ಅಭಿವೃದ್ಧಿ

Posted On: 30 APR 2020 6:22PM by PIB Bengaluru

ನೋವೆಲ್ ಕೊರೊನಾವೈರಸ್ ಅನ್ನು ವಿಭಜಿಸಲು ಮೈಕ್ರೊವೇವ್ ಸ್ಟೆರಿಲೈಸರ್ ಅಭಿವೃದ್ಧಿ

 

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್) ಬೆಂಬಲಿಸುವ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ, ಪುಣೆ, ಎಂಬ ಡೀಮ್ಡ್ ವಿಶ್ವವಿದ್ಯಾಲಯವು ಕೊವಿಡ್-19 ವೈರಸ್ ವಿಭಜಿಸಿ ನಾಶ ಮಾಡಲು ಅತುಲ್ಯಎಂಬ ಮೈಕ್ರೊವೇವ್ ಸ್ಟೆರಿಲೈಸರ್ ಅನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ 560 ರಿಂದ 600 ಸೆಲ್ಸಿಯಸ್ ತಾಪಮಾನದ ವ್ಯಾಪ್ತಿಯಲ್ಲಿ ಭೇದಾತ್ಮಕ ತಾಪನದಿಂದ ವೈರಸ್ ವಿಭಜನೆಯಾಗುತ್ತದೆ.

ಉತ್ಪನ್ನವು ಕಡಿಮೆವೆಚ್ಚದಾಯಕ ಪರಿಹಾರವಾಗಿದೆ. ಇದನ್ನು ಸಾಗಾಟ ಅಥವಾ ಸ್ಥಿರ ಸ್ಥಾಪನೆಗಳಲ್ಲಿ ಸುಲಭವಾಗಿ ನಿರ್ವಹಿಸಬಹುದು. ಈ ವ್ಯವಸ್ಥೆಯನ್ನು ಮಾನವ / ಆಪರೇಟರ್ ಸುರಕ್ಷತೆಗಾಗಿ ಪರೀಕ್ಷಿಸಲಾಯಿತು ಮತ್ತು ಇದು ಸುರಕ್ಷಿತವಾಗಿದೆ ಎಂದು ಕಂಡುಬಂದಿದೆ. ವಿವಿಧ ವಸ್ತುಗಳ ಗಾತ್ರ ಮತ್ತು ಆಕಾರವನ್ನು ಅವಲಂಬಿಸಿ, ಸ್ಟೆರಿಲೈಸರ್ /ಕ್ರಿಮಿನಾಶಕ ಸಮಯವು 30 ಸೆಕೆಂಡುಗಳಿಂದ ಒಂದು ನಿಮಿಷದವರೆಗೆ ಇರುತ್ತದೆ.ಅತುಲ್ಯಎಂಬ ಮೈಕ್ರೊವೇವ್ ಸ್ಟೆರಿಲೈಸರ್ ವ್ಯವಸ್ಥೆಯ ಅಂದಾಜು ತೂಕವು ಮೂರು ಕಿಲೋಗ್ರಾಂಗಳಷ್ಟಿದೆ ಮತ್ತು ಇದನ್ನು ಲೋಹವಲ್ಲದ ವಸ್ತುಗಳಿಗೆ ಮಾತ್ರ ಬಳಸಬಹುದು.

 

https://ci4.googleusercontent.com/proxy/KtOFYgjq8QsAzlz8DMxtpJ988ILRSfVLhqzadYmPqAEtq7jGFhHn0-1YzdUkiCgNOIeD-XdbAAgifSJY73WaIeaPj7dHZm66vTJ0rs4MlsakGU-v8Db3=s0-d-e1-ft#https://static.pib.gov.in/WriteReadData/userfiles/image/image001WUBB.pnghttps://ci5.googleusercontent.com/proxy/I20ldJ0y4R6YvWmWRbJUjy2XOrBoaKZWGa017Z8kEQlIeydgNYHOXh5T9O-MKfC2h8DN4TcL7741qZg_8HqvB8JvckLSCgadSW6xRTa0t-aKeggIkd1P=s0-d-e1-ft#https://static.pib.gov.in/WriteReadData/userfiles/image/image0020YCV.png

 

***


(Release ID: 1619931)