ನೌಕಾ ಸಚಿವಾಲಯ

ಕೊವಿಡ್ -19 ನಿಂದಾಗಿ ಪ್ರಾಣಹಾನಿ ಸಂಭವಿಸಿದಲ್ಲಿ ಬಂದರು ನೌಕರರು/ ಕಾರ್ಮಿಕರಿಗೆ ರೂ. 50 ಲಕ್ಷ ಪರಿಹಾರ

Posted On: 28 APR 2020 3:04PM by PIB Bengaluru

ಕೊವಿಡ್ -19 ನಿಂದಾಗಿ ಪ್ರಾಣಹಾನಿ ಸಂಭವಿಸಿದಲ್ಲಿ ಬಂದರು ನೌಕರರು/ ಕಾರ್ಮಿಕರಿಗೆ ರೂ. 50 ಲಕ್ಷ ಪರಿಹಾರ

ಬಂದರು ನೇರವಾಗಿ ನೇಮಕ ಮಾಡಿದ ಗುತ್ತಿಗೆ ಕಾರ್ಮಿಕರುಸೇರಿದಂತೆ ಬಂದರು ವ್ಯಾಪ್ತಿಗೆ ಬರುವ ಎಲ್ಲಾ ನೌಕರರು ಮತ್ತು ಇತರೇ ಗುತ್ತಿಗೆ ನೌಕರರು ಸೇರಿದಂತೆ ಎಲ್ಲರೂ ಪರಿಹಾರ ವ್ಯಾಪ್ತಿಯಲ್ಲಿ ಬರುತ್ತಾರೆ

 

ಕೊವಿಡ್-19 ನಿಂದಾಗಿ ಪ್ರಾಣಹಾನಿ ಸಂಭವಿಸಿದಾಗ ಪರಿಹಾರ/ ಮಾಜಿ-ಗ್ರೇಟಿಯಾವನ್ನು ಬಂದರು ನೌಕರರ ಅವಲಂಬಿತ ಸದಸ್ಯರು/ ಬಂದರು ನೌಕರರ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಎಲ್ಲಾ ಪ್ರಮುಖ ಬಂದರುಗಳು ಈ ಕೆಳಗಿನಂತೆ ನೀಡಬಹುದು ಎಂದು ಹಡಗು ಸಚಿವಾಲಯ ನಿರ್ಧರಿಸಿದೆ:

 

ವರ್ಗ

ಪರಿಹಾರದ ಮೊತ್ತ/ ಮಾಜಿ-ಗ್ರೇಟಿಯಾ (ರೂ.)

ಬಂದರಿನಿಂದ ನೇರವಾಗಿ ನೇಮಿಸಲ್ಪಟ್ಟ ಗುತ್ತಿಗೆ ಕಾರ್ಮಿಕರು ಸೇರಿದಂತೆ ಬಂದರುಗಳ ಎಲ್ಲಾ ನೌಕರರು

ರೂ. 50.00 ಲಕ್ಷ

ಇತರ ಗುತ್ತಿಗೆ ಕಾರ್ಮಿಕರು

ರೂ. 50.00 ಲಕ್ಷ

ಬಂದರು ಸಂಬಂಧಿತ ಕರ್ತವ್ಯವನ್ನು ನಿರ್ವಹಿಸುವಾಗ ಕೊವಿಡ್-19 ಸೋಂಕಿನಿಂದಾಗಿ ಸಂಭವಿಸಿದ ಜೀವ ಅಪಾಯವನ್ನು ಸರಿದೂಗಿಸಲು ಹಣಕಾಸು ಪರಿಹಾರವನ್ನು ಘೋಷಿಸಲಾಗಿದೆ. ಕೊವಿಡ್-19 ನಿಂದ ಸಾವಿಗೆ ಕಾರಣವನ್ನು ಪರಿಶೀಲಿಸುವ ಮತ್ತು ಪರಿಹಾರ/ ಎಕ್ಸ್-ಗ್ರೇಟಿಯಾವನ್ನು ಇತ್ಯರ್ಥ ಪಡಿಸುವ/ ವಿತರಿಸುವ ಸಂಪೂರ್ಣ ಅಧಿಕಾರವನ್ನು ಪೋರ್ಟ್ ಚೇರ್ಮನ್ ಹೊಂದಿದ್ದಾರೆ. ಈ ಪರಿಹಾರವು ಕೊವಿಡ್-19 ಸಾಂಕ್ರಾಮಿಕ ರೋಗಕ್ಕೆ ಮಾತ್ರ ಅನ್ವಯಿಸುತ್ತದೆ ಮತ್ತು ಇದು 30.09.2020 ರವರೆಗೆ ಜಾರಿಯಲ್ಲಿರುತ್ತದೆ, ಆನಂತರ ಪುನಃ ಪರಿಶೀಲನೆಗೆ ಒಳಪಟ್ಟಿರುತ್ತದೆ.

***


(Release ID: 1619079)