PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 26 APR 2020 6:16PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

http://164.100.117.97/WriteReadData/userfiles/image/image002482A.pnghttp://164.100.117.97/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

· ಇದುವರೆಗೆ 5804 ಮಂದಿ ಗುಣಮುಖರಾಗಿದ್ದಾರೆ. ಗುಣಮುಖರಾದವರ ದರ 21.90 % . ಒಟ್ಟು 24,496 ಮಂದಿಗೆ ಕೋವಿಡ್ 19 ದೃಢಪಟ್ಟಿದೆ, 824 ಮಂದಿ ಮೃತಪಟ್ಟಿದ್ದಾರೆ.

· ಭಾರತದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದೆ, ಹಾಟ್ ಸ್ಪಾಟ್ ಜಿಲ್ಲೆಗಳು ನಾನ್ ಹಾಟ್ ಸ್ಪಾಟ್ ಜಿಲ್ಲೆಗಳಾಗುವತ್ತ ಹೆಜ್ಜೆ ಇಟ್ಟಿವೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.

· ಕೊರೊನಾ ವಿರುದ್ದ ಭಾರತದ ಹೋರಾಟ ಜನತಾ ಚಾಲಿತ ಎಂದು ಪ್ರಧಾನ ಮಂತ್ರಿ. ಅತಿ ವಿಶ್ವಾಸದ ಬಲೆಗೆ ಬೀಳಬೇಡಿ ಎಂದು ದೇಶವಾಸಿಗಳಲ್ಲಿ ಮನವಿ.

· ರೈತರಿಗೆ ಮತ್ತು ಇತರರಿಗೆ ಅವರ ಉತ್ಪನ್ನಗಳನ್ನು ರಖಂ ವ್ಯಾಪಾರಿಗಳಿಗೆ ಮಾರಾಟ ಮಾಡಲು ನೇರ ಮಾರುಕಟ್ಟೆ ಉತ್ತೇಜನಕ್ಕೆ ರಾಜ್ಯಗಳಿಗೆ ಸೂಚನೆ.

 

ಕೋವಿಡ್ -19 ಕ್ಕೆ ಸಂಬಂಧಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಪ್ ಡೇಟ್

ಇದುವರೆಗೆ 5804 ಮಂದಿ ಗುಣಮುಖರಾಗಿದ್ದಾರೆ, ಗುಣಮುಖರಾಗುವವರ ದರ 21.90%.. ಜೊತೆಗೆ ಒಟ್ಟು 26,496 ಜನರಿಗೆ ಕೋವಿಡ್ -19 ಇರುವುದು ದೃಢಪಟ್ಟಿದೆ. ಭಾರತದಲ್ಲಿ ಇದುವರೆಗೆ 824 ಸಾವುಗಳು ವರದಿಯಾಗಿವೆ. ಸಂಪುಟ ಕಾರ್ಯದರ್ಶಿ ಅವರು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಡಿ.ಜಿ.ಪಿ.ಗಳ ಜೊತೆ ವಿವರವಾದ ವೀಡಿಯೋ ಕಾನ್ಫರೆನ್ಸ್ ನಡೆಸಿದರು. ಕೋವಿಡ್ -19 ಕ್ಕಾಗಿ ಮಾಡಲಾಗಿರುವ ಪ್ರತಿಕ್ರಿಯಾ ಸಿದ್ದತಾ ಸ್ಥಿತಿಯನ್ನು ಅವರು ಪರಾಮರ್ಶಿಸಿದರು. ಹೆಚ್ಚು ಪ್ರಕರಣಗಳ ಭಾರವನ್ನು ಹೊಂದಿರುವ ರಾಜ್ಯಗಳು ಲಾಕ್ ಡೌನ್ ಕ್ರಮಗಳನ್ನು ಹೆಚ್ಚು ದಕ್ಷತೆಯಿಂದ ಜಾರಿಗೆ ತರಲು ಗಮನ ಕೊಡಬೇಕು ಎಂದರಲ್ಲದೆ ಕಂಟೈನ್ ಮೆಂಟ್ ವ್ಯೂಹವನ್ನು ಕ್ರಿಯಾಶೀಲವಾಗಿ ಅನುಷ್ಟಾನಿಸಬೇಕು ಎಂದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷ ವರ್ಧನ ಅವರು ಭಾರತದಲ್ಲಿ ಪರಿಸ್ಥಿತಿ ಸುಧಾರಣೆಯಾಗುತ್ತಿದೆ, ಹಾಟ್ ಸ್ಪಾಟ್ ಜಿಲ್ಲೆಗಳು (ಎಚ್.ಎಸ್.ಡಿ.) ನಾನ್ ಹಾಟ್ ಸ್ಪಾಟ್ ಜಿಲ್ಲೆಗಳಾಗುವತ್ತ (ಎನ್.ಎಚ್.ಎಸ್.ಡಿ.) ಸಾಗುತ್ತಿವೆ ಎಂದಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618569

ಮನ್ ಕಿ ಬಾತ್  2.”, 11 ನೇ ಅಂಕದಲ್ಲಿ ಪ್ರಧಾನ ಮಂತ್ರಿ ಭಾಷಣ

’ಮನ್ ಕಿ ಬಾತ್ 2.೦” ರ 11 ನೇ ಕಂತಿನಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊರೊನಾ ವಿರುದ್ದ ಭಾರತದ ಯುದ್ದವು ಜನತಾ ಚಾಲಿತ ಮತ್ತು ಅವರ ಜೊತೆ ಸರಕಾರ ಮತ್ತು ಆಡಳಿತಗಳು ಜಾಗತಿಕ ಸಾಂಕ್ರಾಮಿಕದ ವಿರುದ್ದ ಸೆಣಸುತ್ತಿವೆ ಎಂದು ಹೇಳಿದ್ದಾರೆ . ದೇಶದ ಪ್ರತೀ ನಾಗರಿಕ ಕೂಡಾ ಯುದ್ದದಲ್ಲಿ ಸೈನಿಕ  ಮತ್ತು ಅವರು ಯುದ್ದವನ್ನು ಮುನ್ನಡೆಸುತ್ತಿದ್ದಾರೆ ಎಂದವರು ಹೇಳಿದರು. ಜನತೆ ಪರಸ್ಪರ ಸಹಾಯ ಹಸ್ತ ಚಾಚಲು ಮುಂದೆ ಬಂದಿದ್ದಾರೆ ಪ್ರತೀ ಸ್ಥಳದಲ್ಲಿಯೂ ಅವರು ಸಹಾಯ ಮಾಡಲು ಧಾವಿಸುವ ಬಗ್ಗೆ ತೆಗೆದುಕೊಂಡ ನಿರ್ಧಾರವನ್ನು ಪ್ರಧಾನ ಮಂತ್ರಿ ಅವರು ಕೊಂಡಾಡಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618570

ಪ್ರಧಾನ ಮಂತ್ರಿ ಅವರ 26.04.2020  ಮನ್ ಕಿ ಬಾತ್ 2. 11 ನೇ ಅಂಕದ ಭಾಷಣದ ಕನ್ನಡ ಅವತರಣಿಕೆ

ವಿವರಗಳಿಗೆ: https://pib.gov.in/PressReleseDetail.aspx?PRID=1618361

ನೇರ ಮಾರುಕಟ್ಟೆಯಿಂದಾಗಿ ಮಂಡಿಗಳಲ್ಲಿ ಜನಜಂಗುಳಿ ನಿಯಂತ್ರಣ ಮತ್ತು ಲಾಕ್ ಡೌನ್ ನಲ್ಲಿ ಕೃಷಿ ಉತ್ಪನ್ನಗಳ ಸಕಾಲಿಕ ಮಾರುಕಟ್ಟೆಗೆ ಅವಕಾಶ

ಕೃಷಿಕರಿಗೆ ನೇರ ಮಾರುಕಟ್ಟೆ ಒದಗಿಸಲು ಮತ್ತು ಅವರಿಗೆ ಉತ್ತಮ ಆದಾಯ ತರಲು ಭಾರತ ಸರಕಾರ ದೃಢವಾದ ಪ್ರಯತ್ನಗಳನ್ನು ಮಾಡುತ್ತಿದೆ. ಇದೇ ವೇಳೆ ಇಲಾಖೆಯು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಮಂಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯೂ ಸಲಹಾ ಸೂಚಿಗಳನ್ನು ಹೊರಡಿಸಿದೆ. ರೈತರಿಗೆ/ಎಫ್.ಪಿ.ಒ.ಗಳಿಗೆ / ಸಹಕಾರಿಗಳಿಗೆ  ಅವರ ಉತ್ಪನ್ನಗಳನ್ನು ರಖಂ ವ್ಯಾಪಾರಿಗಳಿಗೆ/ ಸಂಸ್ಕರಣಾಗಾರಗಳಿಗೆ  ಮಾರಲು ಅನುಕೂಲವಾಗುವಂತೆ ನೇರ ಮಾರುಕಟ್ಟೆ ಚಿಂತನೆಯನ್ನು ಉತ್ತೇಜಿಸುವಂತೆ ರಾಜ್ಯಗಳನ್ನು ಕೋರಲಾಗಿತ್ತು.

ವಿವರಗಳಿಗೆ: https://pib.gov.in/PressReleseDetail.aspx?PRID=1618563

ದೇಶದಲ್ಲಿ ಕೋವಿಡ್ -19 ಪ್ರಕರಣಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಅವಶ್ಯವಾದ ರಕ್ಷಾ ಕವಚಗಳ ಉತ್ಪಾದನಾ ಸಾಮರ್ಥ್ಯ ದಿನವೊಂದಕ್ಕೆ 1 ಲಕ್ಷ ಕ್ಕೂ ಅಧಿಕ ಪ್ರಮಾಣಕ್ಕೆ ಹೆಚ್ಚಳ

ಒಟ್ಟು ಉತ್ಪಾದನೆ ಇದುವರೆಗೆ ಸುಮಾರು 1 ಮಿಲಿಯನ್ ರಕ್ಷಾ ಕವಚಗಳಷ್ಟಾಗಿದೆ. ಇದು ಕೋವಿಡ್ -19 ವಿರುದ್ದ ಯುದ್ದದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಆರೋಗ್ಯ ರಕ್ಷಣಾ ಕಾರ್ಯಕರ್ತರ ರಕ್ಷಣೆಗೆ ಹೆಚ್ಚಿನ ಬಲ ತರಲಿದೆ. ರಕ್ಷಾ ಕವಚ ಉತ್ಪಾದನೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ, ತಮಿಳುನಾಡಿನ ಚೆನ್ನೈ, ಮತ್ತು ತಿರುಪುರ, ಪಂಜಾಬಿನ ಫಗ್ವಾರಾ ಮತ್ತು ಲೂಧಿಯಾನಾ, ಎನ್.ಸಿ.ಆರ್. ನಲ್ಲಿಯ ಗುರುಗ್ರಾಮ ಮತ್ತು ನೊಯಿಡಾಗಳು ಪಿ.ಪಿ.ಇ. ರಕ್ಷಾ ಕವಚಗಳ ಉತ್ಪಾದನೆಯ ತಾಣಗಳಾಗಿ ಮೂಡಿ ಬಂದಿವೆ. ಸರಕಾರವು ನಿರಂತರ ಪೂರೈಕೆಗಾಗಿ ಅಡೆ ತಡೆಗಳನ್ನು ನಿವಾರಿಸುವ  ಮತ್ತು  ಪೂರೈಕೆ ಸರಪಳಿಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ವಿವಿಧ ಕೈಗಾರಿಕಾ ಸಂಸ್ಥೆಗಳ ಜೊತೆ ಕಾರ್ಯನಿರತವಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618425

..ಟಿ. ಬಾಂಬೆ ವಿದ್ಯಾರ್ಥಿ ನೇತೃತ್ವದ ತಂಡದಿಂದ ಕಡಿಮೆ ವೆಚ್ಚದ ಯಾಂತ್ರಿಕ ವೆಂಟಿಲೇಟರ್ ರುಹದಾರ್  ಅಭಿವೃದ್ದಿ.

ಐ.ಐ.ಟಿ.ಬಾಂಬೆ , ಎನ್.ಐ.ಟಿ ಶ್ರೀನಗರ ಮತ್ತು ಜಮ್ಮು-ಕಾಶ್ಮೀರದ ಪುಲ್ವಾಮಾ, ಅವಂತಿಪುರದಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನಗಳ ಇಸ್ಲಾಮಿಕ್ ವಿಶ್ವವಿದ್ಯಾಲಯ (ಐ.ಯು.ಎಸ್.ಟಿ.) ಗಳ ಸೃಜನಾತ್ಮಕ ವ್ಯಕ್ತಿಗಳನ್ನು ಒಳಗೊಂಡ  ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವು ವೆಂಟಿಲೇಟರುಗಳ  ಆವಶ್ಯಕತೆಯ ಸಮಸ್ಯೆಯನ್ನು ಪರಿಹರಿಸಲು ಮುಂದೆ ಬಂದಿದೆ. ಈ ತಂಡವು ಸ್ಥಳೀಯವಾಗಿ ಲಭ್ಯ ಇರುವ ಸಾಮಗ್ರಿಗಳನ್ನು ಬಳಸಿ ಕಡಿಮೆ ಖರ್ಚಿನ ವೆಂಟಿಲೇಟರುಗಳನ್ನು ಅಭಿವೃದ್ದಿಪಡಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618375

ಕೊರೊನಾ ಸಹಾಯತಾ ಯೋಜನಾ ಅಡಿಯಲ್ಲಿ ರೂ.1000 ಗಳನ್ನು ಸರಕಾರ ನೀಡುತ್ತದೆ ಎಂದು ವಾಟ್ಸ್ಯಾಪ್ ನಲ್ಲಿ  ಹರಿದಾಡುತ್ತಿದೆ ಸುಳ್ಳು ಸುದ್ದಿ.

ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ವಸ್ತು ಸ್ಥಿತಿ ಶೋಧ ಘಟಕವು ಇಂದು ಕೊರೊನಾ ಸಹಾಯತಾ ಯೋಜನೆ ಎಂದು ಹೇಳಲಾಗುತ್ತಿರುವ  ಯೋಜನೆಯಲ್ಲಿ ಯಾರಿಗೂ 1000 ರೂಪಾಯಿಗಳನ್ನು ಭಾರತ ಸರಕಾರ  ವಿತರಿಸುತ್ತಿಲ್ಲ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618559

ಕೋವಿಡ್ -19 ವಿರುದ್ದ ಭಾರತದ ಯುದ್ದ ಕುರಿತಂತೆ ನಿವೃತ್ತ ಅಧಿಕಾರಿಗಳ ಜೊತೆ ಡಾ. ಜಿತೇಂದ್ರ ಸಿಂಗ್  ಅವರಿಂದ ವಿಸ್ತಾರ ವ್ಯಾಪ್ತಿಯ ಸಮಾಲೋಚನೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618336

ಪ್ರವಾಸೋದ್ಯಮ ಸಚಿವಾಲಯದ ದೇಖೋ ಅಪ್ನಾ ದೇಶ್ವೆಬಿನಾರ್ ಸರಣಿಯು ಲಕ್ನೋದ ಹೆಮ್ಮೆಯಾದ ಅವಧ್ ಕಿಸೈರ್ಮೂಲಕ ಪಾಕಶಾಲೆ  ಪ್ರವಾಸೋದ್ಯಮದ ಸಾಮರ್ಥ್ಯವನ್ನು ಅನಾವರಣ ಮಾಡಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1618358

 

ಪಿ.ಐ.ಬಿ. ಕ್ಷೇತ್ರ ಕಾರ್ಯಾಲಯಗಳಿಂದ ಮಾಹಿತಿ

 • ಅಸ್ಸಾಂ: ಅಸ್ಸಾಂನಲ್ಲಿ ಲಾಕ್ ಡೌನ್ ಬಳಿಕ 18 ಜಿಲ್ಲೆಗಳ 28 ರೈಲ್ವೇ ಬಿಂದುಗಳಲ್ಲಿ ಅವಶ್ಯಕ ಸಾಮಗ್ರಿಗಳಾದ ಅಕ್ಕಿ, ಉಪ್ಪು, ಸಕ್ಕರೆ, ಬಟಾಟೆ, ನೀರುಳ್ಳಿ ಇತ್ಯಾದಿಗಳನ್ನು ಅನ್ ಲೋಡ್ ಮಾಡಲಾಗಿದೆ. ಸರಾಸರಿಯಲ್ಲಿ ಪ್ರತೀ ದಿನ 1,500 ಟ್ರಕ್ ಗಳನ್ನು ಒಗ್ಗೂಡಿಸಲಾಗುತ್ತಿದೆ  ಮತ್ತು ಇದುವರೆಗೆ ರಾಜ್ಯದಲ್ಲಿ 44,624 ಟ್ರಕ್ ಟ್ರಿಪ್ ಗಳನ್ನು 357 ರೈಲ್ವೇ ರೇಕ್ ಗಳಿಂದ ಸರಕು ಇಳಿಸುವುದಕ್ಕಾಗಿ ಬಳಸಲಾಗಿದೆ. ಲಾಕ್ ಡೌನ್ ನಡುವೆ ಸಾಕಷ್ಟು ಆಹಾರ ಸಾಮಗ್ರಿಗಳು ಲಭ್ಯ ಇರುವಂತೆ ಖಾತ್ರಿಪಡಿಸಲು ಇಡೀಯ ಈಶಾನ್ಯಕ್ಕಾಗಿ  ಎಫ್.ಸಿ.ಐ.ಯ 179 ರೇಕ್ ಗಳನ್ನು ಅಸ್ಸಾಂ ಗೆ ತರಲಾಯಿತು ಮತ್ತು ಅದರಲ್ಲಿ 4.7 ಎಲ್.ಎಂ.ಟಿ. ಅಕ್ಕಿ ಹಾಗು 0.21 ಎಲ್.ಎಂ.ಟಿ. ಗೋಧಿ ಪೂರೈಕೆಯಾಯಿತು.  ಇದರಲ್ಲಿ 3.75 ಎಲ್.ಎಂ.ಟಿ. ಅಕ್ಕಿ ಮತ್ತು 0.14 ಎಲ್.ಎಂ.ಟಿ. ಗೋಧಿ ಅಸ್ಸಾಂಗಾಗಿತ್ತು. ಅಸ್ಸಾಂ ಆರೋಗ್ಯ ಸಚಿವ ಹಿಮಂತ ಬಿಸ್ವಾ ಸರ್ಮಾ ಅವರು ಟ್ವೀಟ್ ಮಾಡಿ ಕೋವಿಡ್ -19 ರ ಸತತ ಪರೀಕ್ಷೆಗಳು ನೆಗೆಟಿವ್ ಬಂದ ನಂತರ 8 ಮಂದಿ ರೋಗಿಗಳನ್ನು ಇಂದು ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ. ಅವರು ಮತ್ತೆ 14 ದಿನಗಳ ಕಾಲ ನಿಗಾದಲ್ಲಿ ಇರುತ್ತಾರೆ.
 • ಮಣಿಪುರ: ಮಣಿಪುರದಲ್ಲಿ ಲಾಕ್ ಡೌನ್ ತೆರವು ಮಾಡಿದ ಬಳಿಕ ಮರಳಿ ಬಂದವರ ಸಂಖ್ಯೆಯ ಜಿಲ್ಲಾವಾರು ಸಮೀಕ್ಷೆ  ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಅವರಿಗೆ ಕ್ವಾರಂಟೈನ್ ಸ್ಥಳಗಳನ್ನೂ ಗುರುತಿಸಲಾಗುತ್ತಿದೆ.
 • ಮಿಜೋರಾಂ: ರಾಜ್ಯದಲ್ಲಿ ಲಾಕ್ ಡೌನ್ ನಡುವೆ 49,598 ದಿನಗೂಲಿಗಳಿಗೆ ತಲಾ 3000 ರೂ ,ಗಳನ್ನು ರಾಜ್ಯ ಕಲ್ಯಾಣ ಮಂಡಳಿಯು ವಿತರಿಸಿದೆ.
 • ನಾಗಾಲ್ಯಾಂಡ್: ನಾಗಾಲ್ಯಾಂಡಿನಲ್ಲಿ ಲಾಕ್ ಡೌನ್ ಉಲ್ಲಂಘನೆಗಾಗಿ 469 ಜನರನ್ನು ಬಂಧಿಸಲಾಗಿದೆ. ಸಾಮಾಜಿಕ  ಮಾಧ್ಯಮ ಉಲ್ಲಂಘನೆಗಾಗಿ 5 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 335 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಗಾಲ್ಯಾಂಡ್ ಸರಕಾರ ಇದುವರೆಗೆ ಸಿಲುಕಿ ಹಾಕಿಕೊಂಡಿರುವ ನಾಗರಿಕರಿಗೆ 1.63 ಕೋ.ರೂ.ಗಳನ್ನು ವಿತರಿಸಿದೆ. ಒಟ್ಟು ಪರಿಶೀಲಿತ ಅರ್ಜಿಗಳ ಸಂಖ್ಯೆ 9,800 ತಲುಪಿದೆ.
 • ಚಂಡೀಗಢ: ಕೇಂದ್ರಾಡಳಿತ ಪ್ರದೇಶ ಚಂಡೀಗಢದಲ್ಲಿ ಬಡವರಿಗೆ ಮತ್ತು ಆವಶ್ಯಕತೆ ಇದ್ದವರಿಗೆ ಇದುವರೆಗೆ 21.5 ಲಕ್ಷ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ. ಚಂಡೀಗಢ ಆಡಳಿತಾಧಿಕಾರಿಗಳು ಇದಕ್ಕಾಗಿ ನೀಡಿದ ಸಹಕಾರಕ್ಕಾಗಿ ಎಲ್ಲಾ ಗುರುದ್ವಾರಗಳು, ಎನ್.ಜಿ.ಒ. ಗಳು, ಸ್ವ ಸಹಾಯ ಗುಂಪುಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಗರದಲ್ಲಿ ಕೋವಿಡ್ -19. ನಿಗಾ ಮತ್ತು ನಿರ್ವಹಣೆಗಾಗಿ ಹೊಸ ನಿಯಂತ್ರಣ ಮತ್ತು ಕಮಾಂಡ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಧಿಕಾರಿಗಳು ತರಕಾರಿಗಳು, ಹಣ್ಣುಗಳು, ಹಾಲು, ಬ್ರೆಡ್ ವಿತರಣೆ  ಮತ್ತು ನೈರ್ಮಲ್ಯ ಕಾರ್ಯಗಳನ್ನು ನಿಯಂತ್ರಣ ಕೊಠಡಿಯಿಂದ ಮೇಲುಸ್ತುವಾರಿ ಮಾಡಲಿದ್ದಾರೆ.
 • ಪಂಜಾಬ್: ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಸತಿ/ ವಾಣಿಜ್ಯಿಕ ಮತ್ತು ಆಸ್ಪತ್ರೆಗಳಲ್ಲಿ ಏರ್ ಕಂಡೀಶನಿಂಗ್ ಬಳಸುವ ಬಗ್ಗೆ ಸರಕಾರ ಸಲಹಾಸೂಚಿಯನ್ನು ಹೊರಡಿಸಿದೆ. ಪಂಜಾಬ್ ಸರಕಾರ ಸಿ-ಡಾಕ್ ಮೊಹಲಿ ಅಭಿವೃದ್ದಿ ಮಾಡಿದ ಸಮಗ್ರ ಟೆಲಿ ಮೆಡಿಸಿನ್ ಪರಿಹಾರವಾದ ಇ-ಸಂಜೀವಿನಿ - ಆನ್ ಲೈನ್ ಹೊರ ರೋಗಿ ವಿಭಾಗವನ್ನು (ವೈದ್ಯರಿಂದ ರೋಗಿಗೆ) ಆರಂಭಿಸಿದೆ. ಇದರಿಂದ ಗ್ರಾಮೀಣ ಮತ್ತು ನಗರ ಭಾಗಗಳಲಿರುವ ಅಥವಾ ಪ್ರತ್ಯೇಕ ಸ್ಥಳಗಳಲ್ಲಿರುವ ಜನಸಮುದಾಯಕ್ಕೆ ವಿಶೇಷ ಆರೋಗ್ಯ ರಕ್ಷಣಾ ಸೇವೆಗಳನ್ನು ಒದಗಿಸುವುದಕ್ಕೆ ಸಾಧ್ಯವಾಗಲಿದೆ. . ಇದು ನಾಗರಿಕರಿಗೆ ವಿಶೇಷ ತಜ್ಞ ವೈದ್ಯರೊಂದಿಗೆ ವೀಡಿಯೋ ಕಾನ್ಫರೆನ್ಸಿಂಗ್ ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ಮತ್ತು ಮನೆಯಲ್ಲಿ ಕುಳಿತಾಗ ಆಗುವ ಸಾಮಾನ್ಯ ಆರೋಗ್ಯ ಸಂಬಂಧಿ ಕಳವಳಗಳ ಬಗ್ಗೆ ಸಲಹೆಗಳನ್ನು ಪಡೆಯಲು  ಜಾಲವನ್ನು ಒದಗಿಸುತ್ತದೆ.
 • ರಿಯಾಣ: ಟೆಲಿ ವೈದ್ಯಕೀಯ , ಚಲನ ವಲನ ಪಾಸುಗಳು , ಖರೀದಿಯಲ್ಲಿ ಸಹಾಯ, ಪಡಿತರ  ಪೂರೈಕೆ, ಮತ್ತು ಬೇಯಿಸಿದ ಆಹಾರ ಪೂರೈಕೆ , ಶಿಕ್ಷಣ ಸಾಮಗ್ರಿ ಇತ್ಯಾದಿ ಸಹಿತ ವಿವಿಧ ಅವಶ್ಯಕ ಸೇವೆಗಳನ್ನು ಒಂದೇ ಅರ್ಜಿಯಲ್ಲಿ  ಒದಗಿಸುವ ಮೊಬೈಲ್ ಅಪ್ಲಿಕೇಶನ್ ’ಹೆಲ್ಪ್ ಮಿ’ ಗೆ ಮುಖ್ಯಮಂತ್ರಿ ಚಾಲನೆ ನೀಡಿದರು. ರಾಜ್ಯದಲ್ಲಿ ಕಳೆದ ಐದು ದಿನಗಳಲ್ಲಿ 130707 ರೈತರಿಂದ ಒಟ್ಟು 19.26 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಲಾಗಿದೆ.
 • ಹಿಮಾಚಲ ಪ್ರದೇಶ: ಸರಕಾರವು 26.04.2020 ರ ಬಳಿಕ ಹಿರಿಯ ನಾಗರಿಕರು ಮತ್ತು ಸಾರ್ವಜನಿಕರಿಗೆ ಬೆಳಗ್ಗಿನ ವಾಕಿಂಗ್ ಗೆ ಅವಕಾಶ ಒದಗಿಸಿಕೊಡಲು ದಿನನಿತ್ಯ ಬೆಳಿಗ್ಗೆ 5.30 ರಿಂದ ಬೆಳಿಗ್ಗೆ  7 ಗಂಟೆ ವರೆಗೆ ಕರ್ಫ್ಯೂ ಸಡಿಲಿಕೆ ಮಾಡಲು ನಿರ್ಧರಿಸಿದೆ. ಸೋಮವಾರದಿಂದ ಈಗಿರುವ ಮೂರು ಗಂಟೆಗಳ ಅವಧಿಯ ಕರ್ಫ್ಯೂ ಸಡಿಲಿಕೆಯನ್ನು ನಾಲ್ಕು ಗಂಟೆಗೆ ವಿಸ್ತರಿಸಲೂ ರಾಜ್ಯ ಸರಕಾರ ನಿರ್ಧರಿಸಿದೆ. ಇದರಿಂದ ಅಂಗಡಿಗಳಲ್ಲಿ ಕನಿಷ್ಟ ಜನರ ಗುಂಪು ಮತ್ತು ಸಾಮಾಜಿಕ ಅಂತರ ಇರುವಂತೆ ಖಾತ್ರಿಪಡಿಸುತ್ತದೆ. ಗಣಿಗಾರಿಕೆ ಕ್ಷೇತ್ರದಿಂದ ಯೋಜನಾ ಪ್ರದೇಶಗಳಿಗೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಟ್ರಕ್ ಗಳಿಗೆ ಅಂತರ ಜಿಲ್ಲಾ ಸಾಗಾಟಕ್ಕೆ ಅವಕಾಶ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಸರಕಾರವು ಅಂತರ್ಜಿಲ್ಲಾ ರಸ್ತೆ ನಿರ್ಮಾಣ ಯಂತ್ರಗಳನ್ನು ನಿರ್ಮಾಣ ಕಾಮಗಾರಿ ಸ್ಥಳಗಳಿಗೆ  ಸಾಗಾಟ ಮಾಡುವುದಕ್ಕೂ ಅವಕಾಶ ನೀಡಿದೆ.
 • ಕೇರಳ: ಅಂತರ ರಾಜ್ಯ ಗಡಿಗಳಲ್ಲಿ ಲಾಕ್ ಡೌನ್ ಕಟ್ಟು ನಿಟ್ಟಾಗಿ ಅನುಷ್ಟಾನಿಸುವಂತೆ ಮುಖ್ಯಮಂತ್ರಿ ನಿರ್ದೇಶನ. ರಾಜ್ಯದಲ್ಲಿ ಮಾಡಲಾಗುತ್ತಿರುವ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು.ಈ ಸಂಖ್ಯೆ ಈಗ ಸರಾಸರಿ 500 ಕ್ಕಿಂತ ಕೆಳಗಿದೆ. ಸರಕಾರಿ ಅಧೀನ ಸಂಸ್ಥೆಯಾದ ಎನ್.ಒ.ಆರ್.ಕೆ.ಎ.(ಅನಿವಾಸಿ ಕೇರಳೀಯರ ವ್ಯವಹಾರಗಳು) ರೂಟ್ಸ್ ವಿದೇಶಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಮತ್ತು ರಾಜ್ಯಕ್ಕೆ ಮರಳಿ ಬರಲು ಉದ್ದೇಶಿಸಿರುವವರ ನೊಂದಾವಣೆಯನ್ನು ಆರಂಭಿಸಲಿದೆ. ಅವರಿಗಾಗಿ ಇನ್ನಷ್ಟು ಕ್ವಾರಂಟೈನ್ ಸೌಲಭ್ಯಗಳನ್ನು ರಾಜ್ಯವು ಅನ್ವೇಷಿಸಲಿದೆ. ಒಟ್ಟು ದೃಢೀಕೃತ ಪ್ರಕರಣಗಳು 457 . ಆಕ್ಟಿವ್  ಪ್ರಕರಣಗಳು: 116, ಗುಣಮುಖರಾದವರು : 338, ನಿಗಾದಲ್ಲಿರುವವರು ; 21044 ಪರೀಕ್ಷೆಗೊಳಪಟ್ಟ ಮಾದರಿಗಳು; 22360
 • ತಮಿಳುನಾಡು: ವೈರಸ್ ಹರಡುವಿಕೆ ನಿಯಂತ್ರಿಸಲು ತಮಿಳುನಾಡಿನ 5 ನಗರಗಳಲ್ಲಿ ಇಂದಿನಿಂದ ಸಂಪೂರ್ಣ ಲಾಕ್ ಡೌನ್ . ಆರು ಸಿಬ್ಬಂದಿಗಳು ಪಾಸಿಟಿವ್ ಆಗಿರುವುದರಿಂದ ತಮಿಳು ನಾಡಿನ ಕೊಯಮುತ್ತೂರಿನ ಎರಡು ಪೊಲಿಸ್ ಠಾಣೆಗಳನ್ನು ಮುಚ್ಚಲಾಗಿದೆ. ಚೆನ್ನೈ ಮಹಾನಗರ ಪಾಲಿಕೆಯು ಕೊಯಂಬೇಡು ಮಾರುಕಟ್ತೆಯಲ್ಲಿ ಕೋವಿಡ್ ಪ್ರಕರಣಗಳು ವರದಿಯಾದ ಬಳಿಕ ಅಲ್ಲಿಯ ಮಾರಾಟಗಾರರಿಗೆ ರೋಗ ಪರೀಕ್ಷೆಯನ್ನು ತ್ವರಿತಗೊಳಿಸಿದೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 1821, ಆಕ್ಟಿವ್ ಪ್ರಕರಣಗಳು 835 , ಸಾವಿನ ಸಂಖ್ಯೆ 23. ಬಿಡುಗಡೆಯಾದವರು 960. ಗರಿಷ್ಟ ಸಂಖ್ಯೆಯ ಪ್ರಕರಣಗಳು ಚೆನ್ನೈಯಿಂದ ವರದಿಯಾಗಿವೆ, ಅವುಗಳ ಸಂಖ್ಯೆ 495
 • ಕರ್ನಾಟಕ: ಬೆಂಗಳೂರಿನ 45 ವರ್ಷದ ಗರ್ಭಿಣಿ ಮಹಿಳೆ ಕೋವಿಡ್ ಗೆ ಬಲಿಯಾಗುವುದರೊಂದಿಗೆ ಕರ್ನಾಟಕದಲ್ಲಿ ರೋಗಕ್ಕೆ ಬಲಿಯಾದವರ ಸಂಖ್ಯೆ 19 ಆಗಿದೆ. ರಾಜ್ಯ ಸರಕಾರದ ದತ್ತಾಂಶಗಳು ಹೊಸ ಕೋವಿಡ್ ಪ್ರಕರಣಗಳು ಸೋಂಕು ಸೂಚನೆಯೊಂದಿಗೆ ಪತ್ತೆಯಾಗಿವೆ ಎಂದು ಹೇಳುತ್ತವೆ. .ಒಟ್ಟು ಪ್ರಕರಣಗಳು: 501, ಸಾವುಗಳು: 19. ಗುಣಮುಖರಾದವರು : 177.
 • ಆಂಧ್ರ ಪ್ರದೇಶ: ಕಳೆದ 24 ಗಂಟೆಗಳಲ್ಲಿ 81 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 1097 ಕ್ಕೇರಿದೆ.ಆಕ್ಟಿವ್ ಪ್ರಕರಣಗಳು;835. ಗುಣಮುಖರಾದವರು :231, ಸಾವಿನ ಸಂಖ್ಯೆ :31. ಕರ್ನೂಲು, ಗುಂಟೂರು, ಕೃಷ್ಣಾ ಜಿಲ್ಲೆಗಳಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರು ಗತಿಯಲ್ಲಿದ್ದು, ಅಲ್ಲಿ ಕಠಿಣ ಲಾಕ್ ಡೌನ್ ಕ್ರಮಗಳನ್ನು ಜಾರಿ ಮಾಡಲಾಗಿದೆ. ಶ್ರೀಕಾಕುಲಂ ಜಿಲ್ಲೆಯ ಪಥಪಟ್ಟಣಂ ಪಟ್ಟಣವನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದೆ. ; ಮೂರು ಪಾಸಿಟಿವ್ ಪ್ರಕರಣಗಳ ಎಲ್ಲಾ ಪ್ರಾಥಮಿಕ ಸಂಪರ್ಕಗಳನ್ನು ಗುರುತಿಸಲಾಗಿದೆ. ಪಾಸಿಟಿವ್ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳೆಂದರೆ ಕರ್ನೂಲು (279 ) ಗುಂಟೂರು (214 ) ಕೃಷ್ಣಾ (177)
 • ತೆಲಂಗಾಣ: ರಾಜ್ಯವು ಪಿ.ಪಿ.ಇ. ಕಿಟ್ ಗಳ ಕೊರತೆಯನ್ನು ಎದುರಿಸುತ್ತಿದೆ. ಆಟದ ಸಾಮಾನುಗಳ ತಯಾರಕರು ಈಗ ವಿಶಾಖಪಟ್ಟಣಂ ಎಸ್.ಇ.ಝಡ್. ನಲ್ಲಿ ಅವುಗಳನ್ನು ತಯಾರಿಸಲು ನಿರ್ಧರಿಸಿದ್ದಾರೆ. 7 ಲಕ್ಷ ಜನಸಂಖ್ಯೆಯ ಗಡ್ ವಾಲ ಜಿಲ್ಲೆಯು ಕೋವಿಡ್ ಹೊಸ ಹಾಟ್ ಸ್ಪಾಟ್ ಆಗಿ ಮೂಡಿ ಬಂದಿದೆ. ಈ ಜಿಲ್ಲೆಯಿಂದ 45 ಪ್ರಕರಣಗಳು ವರದಿಯಾಗಿವೆ ಮತ್ತು ದಿನನಿತ್ಯ ಒಂದು ಅಥವಾ ಎರಡು ಪ್ರಕರಣಗಳು ಸೇರ್ಪಡೆಯಾಗುತ್ತಿವೆ. ರಾಜ್ಯದಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಸಂಖ್ಯೆ 990.

 

ಪಿ.ಐ.ಬಿ. ವಾಸ್ತವ ಪರಿಶೀಲನೆ

 

***(Release ID: 1618603) Visitor Counter : 42