ಗೃಹ ವ್ಯವಹಾರಗಳ ಸಚಿವಾಲಯ

ಏಕ ಮತ್ತು ಬಹು ಬ್ರಾಂಡ್ ಮಾಲ್ ಗಳನ್ನು ಹೊರತುಪಡಿಸಿ ಕೆಲವು ನಿರ್ದಿಷ್ಟ ವರ್ಗದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ರಾಜ್ಯಗಳಿಗೆ/ ಕೇಂದ್ರಾಡಳಿತ ಪ್ರದೇಶಗಳಿಗೆ ಎಂ.ಎಚ್.ಎ. ಆದೇಶ

Posted On: 25 APR 2020 12:47AM by PIB Bengaluru

ಏಕ ಮತ್ತು ಬಹು ಬ್ರಾಂಡ್ ಮಾಲ್ ಗಳನ್ನು ಹೊರತುಪಡಿಸಿ ಕೆಲವು ನಿರ್ದಿಷ್ಟ ವರ್ಗದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡುವಂತೆ ರಾಜ್ಯಗಳಿಗೆ/ ಕೇಂದ್ರಾಡಳಿತ ಪ್ರದೇಶಗಳಿಗೆ ಎಂ.ಎಚ್.. ಆದೇಶ

ಲಾಕ್ ಡೌನ್ ನಲ್ಲಿಯ ನಿರ್ಬಂಧಗಳ ಸಡಿಲಿಕೆ ಹಾಟ್ ಸ್ಪಾಟ್ ಗಳಿಗೆ/ ಕಂಟೈನ್ ಮೆಂಟ್ ವಲಯಗಳಿಗೆ ಅನ್ವಯಿಸುವುದಿಲ್ಲ

 

ಗೃಹ ವ್ಯವಹಾರಗಳ ಸಚಿವಾಲಯವು (ಎಂ.ಎಚ್..) ದಿನಾಂಕ 15.04.2020 ರಂದು ಹೊರಡಿಸಿರುವ ಆದೇಶದಲ್ಲಿ ಕೋವಿಡ್ -19 ವಿರುದ್ದ ಹೋರಾಟದ ಸಮಗ್ರ ಪರಿಷ್ಖೃತ ಮಾರ್ಗದರ್ಶಿಗಳಡಿಯಲ್ಲಿ ಕೆಲವು ನಿರ್ದಿಷ್ಟ ಕಾರ್ಯಚಟುವಟಿಕೆಗಳಿಗೆ ವಿನಾಯಿತಿ ನೀಡಿದೆ. ಆದರೆ ಇದು ಹಾಟ್ ಸ್ಪಾಟ್ ಗಳಿಗೆ/ ಕಂಟೈನ್ಮೆಂಟ್ ವಲಯಗಳಿಗೆ ಅನ್ವಯಿಸುವುದಿಲ್ಲ.

(https://www.mha.gov.in/sites/default/files/MHA%20order%20dt%2015.04.2020%2C%20with%20Revised%20Consolidated%20Guidelines_compressed%20%283%29.pdf)

ವಾಣಿಜ್ಯಿಕ ಮತ್ತು ಖಾಸಗಿ ಸಂಸ್ಥೆಗಳ ವರ್ಗಗಳಲ್ಲಿ ವಿನಾಯಿತಿಗಳನ್ನು ನೀಡಿರುವ , ಎಂ.ಎಚ್..ಯು ಆಯಾ ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ ಅಂಗಡಿಗಳು ಮತ್ತು ಎಸ್ಟ್ಯಾಬ್ಲಿಶ್ ಮೆಂಟ್ ಕಾಯ್ದೆ ಅಡಿಯಲ್ಲಿ ನೊಂದಾವಣೆಗೊಂಡಿರುವ ಎಲ್ಲಾ ಅಂಗಡಿಗಳು, ನಿವಾಸಿ ಸಂಕೀರ್ಣಗಳಲ್ಲಿರುವವುಗಳು, ನೆರೆ ಹೊರೆಯಲ್ಲಿರುವಂತಹವು ಮತ್ತು ಪ್ರತ್ಯೇಕವಾಗಿರುವಂತಹವು ಸೇರಿದಂತೆ ತೆರೆಯಲು ಅನುಮತಿಸುವಂತೆ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿದೆ.

ಮುನ್ಸಿಪಲ್ ಕಾರ್ಪೋರೇಶನ್ ಮತ್ತು ಮುನ್ಸಿಪಾಲ್ಟಿ ವ್ಯಾಪ್ತಿಗಳಲ್ಲಿರುವವುಗಳನ್ನು ಹೊರತುಪಡಿಸಿ ಮಾರುಕಟ್ಟೆ ಸಂಕೀರ್ಣದಲ್ಲಿರುವ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಏಕ ಮತ್ತು ಬಹು ಬ್ರಾಂಡ್ ಮಾಲ್ ಗಳಿಗೆ ತೆರೆಯಲು ಎಲ್ಲೂ ಅವಕಾಶ ಒದಗಿಸಲಾಗಿಲ್ಲ.

ಅನುಮತಿಸಲ್ಪಟ್ಟ ಎಲ್ಲಾ ಅಂಗಡಿಗಳೂ ಕೆಲಸಗಾರರ 50% ಬಲದೊಂದಿಗಷ್ಟೇ ಕಾರ್ಯ ನಿರ್ವಹಿಸಬೇಕು ಮತ್ತು ಮುಖಗವಸುಗಳನ್ನು ಧರಿಸುವುದು ಕಡ್ಡಾಯವಾಗಿರುತ್ತದೆ ಹಾಗು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿರುತ್ತದೆ.

ಲಾಕ್ ಡೌನ್ ನಿರ್ಬಂಧಗಳಲ್ಲಿಯ ಸಡಿಲಿಕೆಗಳು ಹಾಟ್ ಸ್ಪಾಟ್ ಗಳು/ ಕಂಟೈನ್ ಮೆಂಟ್ ವಲಯಗಳಿಗೆ ಅನ್ವಯವಾಗುವುದಿಲ್ಲ.

ಅಧಿಕೃತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

***



(Release ID: 1618092) Visitor Counter : 253