PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 22 APR 2020 6:45PM by PIB Bengaluru

ಕೋವಿಡ್-19: ಪಿ  ಬಿ ದೈನಿಕ ವರದಿ

Coat of arms of India PNG images free downloadhttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

  • ಭಾರತದಲ್ಲಿ  ಈಗಿನವರೆಗೆ 19,984 ದೃಢೀಕೃತ ಕೋವಿಡ್ -19 ಪಕರಣಗಳಿವೆ; ಸರಿ ಸುಮಾರು  20 % ಜನರು ಗುಣಮುಖರಾಗಿದ್ದಾರೆ.
  • ತ್ವರಿತ ಪ್ರತಿಕಾಯ (ಅಂಟಿ ಬಾಡಿ) ಪರೀಕ್ಷೆ ಬಳಸಲು ರಾಜ್ಯಗಳಿಗೆ .ಸಿ.ಎಂ.ಆರ್. ನಿಂದ ಶಿಷ್ಟಾಚಾರ ರವಾನೆ.
  • ಕೋವಿಡ್ -19 ಕುರಿತು ಹಿಮ್ಮಾಹಿತಿ ಪಡೆಯಲು ಸರಕಾರದಿಂದ ದೂರವಾಣಿ ಸಂಖ್ಯೆ 1921 ಮೂಲಕ  ದೂರವಾಣಿ ಸಮೀಕ್ಷೆ.
  • ಭಾರತ ಕೋವಿಡ್ -19 ತುರ್ತು ಪ್ರತಿಕ್ರಿಯಾ ಮತ್ತು ಆರೋಗ್ಯ ಸಿದ್ದತಾ ಪ್ಯಾಕೇಜ್ಗಾಗಿ 15,000 ಕೋ.ರೂ. ಗಳಿಗೆ ಸಂಪುಟದ ಅನುಮೋದನೆ.
  • ಇನ್ನಷ್ಟು ಕೃಷಿ, ಅರಣ್ಯ ಉತ್ಪನ್ನಗಳು, ವಿದ್ಯಾರ್ಥಿಗಳ ಶಿಕ್ಷಣ ಪುಸ್ತಕಗಳ ಅಂಗಡಿಗಳು, ವಿದ್ಯುತ್ ಫ್ಯಾನುಗಳ ಅಂಗಡಿಗಳಿಗೆ ಲಾಕ್ ಡೌನ್  ನಿರ್ಬಂಧಗಳಿಂದ ವಿನಾಯಿತಿ.
  • ಹಿರಿಯ ನಾಗರಿಕರಿಗೆ ಮನೆಯೊಳಗೆ ಆರೈಕೆ ಮಾಡುವವರಿಗೆ, ಪ್ರಿಪೈಡ್ ಮೊಬೈಲ್ ರೀಚಾರ್ಜ್ ಸೌಲಭ್ಯಗಳಿಗೆ, ನಗರ ಪ್ರದೇಶದಲ್ಲಿರುವ ಆಹಾರ ಸಂಸ್ಕರಣಾ ಘಟಕಗಳಿಗೆ ಕೂಡಾ ನಿರ್ಬಂಧದಿಂದ ವಿನಾಯಿತಿ.
  • ಕೋವಿಡ್ -19 ವಿರುದ್ದದ ಹೋರಾಟದಲ್ಲಿ ವೈದ್ಯರಿಗೆ ಗೃಹ ಸಚಿವರಿಂದ ಭದ್ರತೆಯ ಭರವಸೆ.
  • ಕೋವಿಡ್ -19 ಕಾರ್ಯಕ್ರಮಗಳನ್ನು ವರದಿ ಮಾಡುವ ಪತ್ರಕರ್ತರಿಗೆ ಅವಶ್ಯ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸಲಹೆ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಕುರಿತ ಅಪ್ ಡೇಟ್

ಇದುವರೆಗೆ 3870 ಜನರು ಗುಣಮುಖರಾಗುವುದರೊಂದಿಗೆ ಗುಣಮುಖರಾದವರ ದರ 19.36 % ಆಗಿದೆ. ನಿನ್ನೆಯಿಂದೀಚೆಗೆ 1383 ಹೊಸ ಪ್ರಕರಣಗಳು ವರದಿಯಾಗಿವೆ. ಜೊತೆಗೆ ಭಾರತದಲ್ಲಿ ಒಟ್ಟು 19,984  ಜನರಿಗೆ ಕೋವಿಡ್ 19 ಇರುವುದು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 50 ಹೊಸ ಸಾವುಗಳು ವರದಿಯಾಗಿವೆ. ಸಂಪುಟವು ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ 1897 ಅಡಿಯಲ್ಲಿ ವೈದ್ಯರ ಸುರಕ್ಷೆಯನ್ನು ಖಾತ್ರಿಪಡಿಸಲು ಸುಗ್ರೀವಾಜ್ಞೆ ಹೊರಡಿಸಲು ಶಿಫಾರಸು ಮಾಡಿದೆ. .ಸಿ.ಎಂ.ಆರ್. ತ್ವರಿತ ಪ್ರತಿಕಾಯ (ಆಂಟಿ ಬಾಡಿ) ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿ ಶಿಷ್ಟಾಚಾರವನ್ನು ಎಲ್ಲಾ ರಾಜ್ಯಗಳಿಗೂ ಕಳುಹಿಸಿಕೊಟ್ಟಿದೆ. ಆಂಟಿ ಬಾಡಿ ತ್ವರಿತ ಪರೀಕ್ಷೆಗಳನ್ನು ವ್ಯಾಪಕವಾಗಿ ಸರ್ವೇಕ್ಷಣೆಗಾಗಿ ಬಳಸಲಾಗುತ್ತದೆ ಎಂದು ಪುನರುಚ್ಚರಿಸಲಾಗಿದೆ. ಭಾರತ ಸರಕಾರವು ದೂರವಾಣಿ ಸಂಖ್ಯೆ 1921 ರಿಂದ ನಾಗರಿಕರಿಗೆ ಅವರ ಮೊಬೈಲ್ ಫೋನ್ ಗಳಿಗೆ ಎನ್..ಸಿ.  ಮೂಲಕ ಸಂಪರ್ಕಿಸಿ ದೂರವಾಣಿ ಸಮೀಕ್ಷೆ ನಡೆಸಲಿದೆ. ಇದು ವಿಶ್ವಾಸಾರ್ಹ ಸಮೀಕ್ಷೆಯಾಗಿದೆ. ಕೋವಿಡ್ -19 ಲಕ್ಷಣಗಳು ಮತ್ತು ಅದು ಹರಡಿರುವ ವ್ಯಾಪ್ತಿಗೆ ಸಂಬಂಧಿಸಿ ಸೂಕ್ತ ಹಿಮ್ಮಾಹಿತಿ ಪಡೆಯಲು ಸಹಕಾರ ನೀಡಬೇಕು ಎಂದು ಎಲ್ಲಾ ನಾಗರಿಕರನ್ನು ಕೋರಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617097

ಹೆಚ್ಚುವರಿ ಕೃಷಿ ಮತ್ತು ಅರಣ್ಯ ವಸ್ತುಗಳು, ವಿದ್ಯಾರ್ಥಿಗಳ ಶಿಕ್ಷಣದ ಪುಸ್ತಕಗಳ ಅಂಗಡಿಗಳು, ಮತ್ತು ವಿದ್ಯುತ್ ಫ್ಯಾನ್ ಗಳ ಅಂಗಡಿಗಳಿಗೆ ಕೋವಿಡ್ -19 ವಿರುದ್ದ ಹೋರಾಟಕ್ಕಾಗಿ ವಿಧಿಸಲಾಗಿರುವ ಲಾಕ್ ಡೌನ್ ನಿರ್ಬಂಧಗಳಿಂದ ವಿನಾಯಿತಿ

ಸಮಗ್ರ ಪರಿಷ್ಕೃತ ಮಾರ್ಗದರ್ಶಿಗಳ ಅಡಿಯಲ್ಲಿ ಕೆಲವು ನಿರ್ದಿಷ್ಟ ಚಟುವಟಿಕೆಗಳಿಗೆ  ವಿನಾಯಿತಿ ನೀಡಿ ಗೃಹ ವ್ಯವಹಾರಗಳ ಸಚಿವಾಲಯವು ಆದೇಶ ಹೊರಡಿಸಿದೆ. ಮೆಲ್ಕಾಣಿಸಿದ ವಸ್ತುಗಳಿಗೆ ವಿನಾಯಿತಿಗಳು ಹಾಟ್ ಸ್ಪಾಟ್ ಗಳು/ ಸೋಂಕು ತಡೆ ವಲಯಗಳಿಗೆ ಅನ್ವಯಿಸುವುದಿಲ್ಲ. ಚಟುವಟಿಕೆಗಳನ್ನು ಇಂತಹ ವಲಯಗಳಲ್ಲಿ ನಡೆಸುವುದಕ್ಕೆ ಅನುಮತಿ ಇಲ್ಲ.

ವಿವರಗಳಿಗೆ: https://pib.gov.in/PressReleseDetail.aspx?PRID=1616915

ಹಿರಿಯ ನಾಗರಿಕರಿಗೆ ಅವರಿರುವ ಸ್ಥಳದಲ್ಲಿ ಸೇವೆ ಒದಗಿಸುವ , ಪೂರ್ವ ಪಾವತಿ ಮೊಬೈಲ್ ಮರುಪೂರಣ ಸೌಲಭ್ಯಗಳಿಗೆ, ನಗರ ಪ್ರದೇಶಗಳಲ್ಲಿಯ ಆಹಾರ  ಸಂಸ್ಕ್ರರಣಾ ಘಟಕಗಳಿಗೆ ಕೋವಿಡ್ -19 ವಿರುದ್ದದ ಹೋರಾಟದ ಲಾಕ್ ಡೌನ್ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ

ಗೃಹ ವ್ಯವಹಾರಗಳ ಸಚಿವಾಲಯವು ಕೆಲವು ನಿರ್ದಿಷ್ಟ ಕಾರ್ಯಚಟುವಟಿಕೆಗಳನ್ನು ಕೋವಿಡ್ -19 ವಿರುದ್ದ ಹೋರಾಟಕ್ಕಾಗಿ ಜಾರಿಯಲ್ಲಿರುವ ರಾಷ್ಟ್ರವ್ಯಾಪ್ತಿ ಲಾಕ್ ಡೌನ್ ಹಿನ್ನೆಲೆಯಲ್ಲಿ  ಸಮಗ್ರ ಪರಿಷ್ಖೃತ ಮಾರ್ಗದರ್ಶಿಗಳ ಅನ್ವಯ  ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ವಿವಿಧ ವರ್ಗಗಳ ಅಡಿಯಲ್ಲಿ ನಿರ್ದಿಷ್ಟ ಸೇವೆಗಳು/ ಕಾರ್ಯ ಚಟುವಟಿಕೆಗಳಿಗೆ ವಿನಾಯಿತಿ ನೀಡಿರುವ ಬಗ್ಗೆ ಕೆಲವು ಸಂಶಯಗಳು/ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ಎಂ.ಎಚ್..ಯು ಈಗ ಸ್ಪಷ್ಟೀಕರಣಗಳನ್ನು ನೀಡಿದೆ ಮತ್ತು ಕೆಲವು ನಿರ್ದಿಷ್ತ ಸೇವೆಗಳನ್ನು ವಿನಾಯಿತಿ ವರ್ಗದಲ್ಲಿ ಸೇರಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1616883

.ಎಂ.. ಹಿರಿಯ ಪ್ರತಿನಿಧಿಗಳು ಮತ್ತು ವೈದ್ಯರೊಂದಿಗೆ ಕೇಂದ್ರ ಗೃಹ ಸಚಿವರ ಸಂವಾದ: ಕೋವಿಡ್ -19 ವಿರುದ್ದದ ಹೋರಾಟದಲ್ಲಿ  ಅವರಿಗೆ ಭದ್ರತೆಯ ಭರವಸೆ

ಕೊರೊನಾವೈರಸ್ ವಿರುದ್ದದ ಹೋರಾಟದಲ್ಲಿ ನಿರ್ದಿಷ್ಟವಾಗಿ ಮತ್ತು ಸಾಮಾನ್ಯವಾಗಿ ವೈದ್ಯರ ಪಾತ್ರವನ್ನು ಕೊಂಡಾಡಿದ ಗೃಹ ಸಚಿವರು , ಹೋರಾಟದಲ್ಲಿ ವೈದ್ಯರು ಇದುವರೆಗೆ ಮಾಡಿರುವಂತೆ ಅರ್ಪಣಾಭಾವದಿಂದ ದುಡಿಯುವುದನ್ನು ಮುಂದುವರೆಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಮಾರಕ ಕೋವಿಡ್ -19 ರೋಗದಿಂದ ಜನರನ್ನು ಸುರಕ್ಷಿತವಾಗಿಡಲು ವೈದ್ಯರು ಮಾಡುತ್ತಿರುವ ತ್ಯಾಗವನ್ನು ಅವರು ಉಲ್ಲೇಖಿಸಿ  ಅದಕ್ಕೆ ವಂದನೆ ಸಲ್ಲಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1616965

ಆರೋಗ್ಯ ರಕ್ಷಣೆ ವೃತ್ತಿಪರರಿಗೆ , ವೈದ್ಯಕೀಯ ಸಿಬ್ಬಂದಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಅವರ ವಿರುದ್ದ ಹಿಂಸಾಚಾರ ತಡೆಯಲು ಸಾಕಷ್ಟು ಭದ್ರತೆಯನ್ನು ಖಾತ್ರಿಪಡಿಸಿ: ಕೇಂದ್ರ ಗೃಹ ಸಚಿವರು

ಆರೋಗ್ಯ ರಕ್ಷಣೆ ವೃತ್ತಿಪರರಿಗೆ , ವೈದ್ಯಕೀಯ ಸಿಬ್ಬಂದಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಅವರ ವಿರುದ್ದ ಹಿಂಸಾಚಾರ ತಡೆಯಲು ಸಾಕಷ್ಟು ಭದ್ರತೆಯನ್ನು ಖಾತ್ರಿಪಡಿಸಬೇಕು ಎಂದು ಎಂ.ಎಚ್..ಯು ಮತ್ತೊಮ್ಮೆ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ನಿರ್ದೇಶನ ನೀಡಿದೆ. ಕರ್ತವ್ಯ  ನಿರ್ವಹಿಸುವಾಗ ಕೋವಿಡ್ -19 ಕ್ಕೆ ಬಲಿಯಾದ ವೈದ್ಯಕೀಯ ವೃತ್ತಿಪರರ ಅಥವಾ ಮುಂಚೂಣಿ ಆರೋಗ್ಯ ರಕ್ಷಣಾ ಕಾರ್ಯಕರ್ತರ ಅಂತಿಮ ವಿಧಿಗಳನ್ನು ನಡೆಸುವುದಕ್ಕೆ ಅಡ್ದಿ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು .

ವಿವರಗಳಿಗೆ: https://pib.gov.in/PressReleseDetail.aspx?PRID=1617162

 “ಇಂಡಿಯಾ ಕೋವಿಡ್ -19 ತುರ್ತು ಪ್ರತಿಕ್ರಿಯಾ ಮತ್ತು ಆರೋಗ್ಯ ವ್ಯವಸ್ಥೆ ಸಿದ್ದತಾ ಪ್ಯಾಕೇಜ್ಗಾಗಿ 15,000 ಕೋ.ರೂ.ಗಳಿಗೆ ಸಂಪುಟ ಅನುಮೋದನೆ

ಇಂಡಿಯಾ ಕೋವಿಡ್ -19 ತುರ್ತು ಪ್ರತಿಕ್ರಿಯಾ ಮತ್ತು ಆರೋಗ್ಯ ವ್ಯವಸ್ಥೆ ಸಿದ್ದತಾ ಪ್ಯಾಕೇಜ್ಗಾಗಿ 15,000 ಕೋ.ರೂ.ಗಳವರೆಗಿನ ಹೂಡಿಕೆಗಾಗಿ ಕೇಂದ್ರ ಸಂಪುಟವು ಅನುಮೋದನೆ ನೀಡಿತು. ಮಂಜೂರಾದ ಹಣವನ್ನು 3 ಹಂತಗಳಲ್ಲಿ ಬಳಸಲಾಗುವುದು ಮತ್ತು ತಕ್ಷಣದ ಕೋವಿಡ್ -19 ತುರ್ತು ಪ್ರತಿಕ್ರಿಯಾ ವ್ಯವಸ್ಥೆಗಾಗಿ (ಮೊತ್ತ ರೂಪಾಯಿ 7,774  ಕೋ.ರೂ.ಗಳನ್ನು ) ಹಣಕಾಸನ್ನು ತೆಗೆದಿಡಲಾಗಿದೆ ಹಾಗು ಮಧ್ಯಮಾವಧಿಯ ಬೆಂಬಲ (1-4 ವರ್ಷಗಳು) ವನ್ನು ಮಿಷನ್ ಮಾದರಿ ಧೋರಣೆಯಡಿ ಒದಗಿಸಲಾಗುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617070

ಸ್ವಯಂ ರಕ್ತದಾನ ಮಾಡುವವರನ್ನು ಒಗ್ಗೂಡಿಸಿ ರಕ್ತ ವರ್ಗಾವಣೆಗಾಗಿ ಸಾಕಷ್ಟು ರಕ್ತದ ದಾಸ್ತಾನನ್ನು ಮಾಡಿಡಲು ಮತ್ತು ಸಂಚಾರಿ ರಕ್ತ ಸಂಗ್ರಹಣಾ ವ್ಯಾನುಗಳನ್ನು ಹಾಗು ಕರೆದುಕೊಂಡು ಹೋಗುವ ಮತ್ತು ಹಿಂದೆ ಕರೆ ತಂದು ಬಿಡುವ ಸೌಲಭ್ಯ ಸಹಿತ ವಿವಿಧ ಸೌಲಭ್ಯಗಳನ್ನು ಒದಗಿಸಿ

ಕೇಂದ್ರ ಸಚಿವರಾದ ಡಾ. ಹರ್ಷ ವರ್ಧನ ಅವರು ದೇಶಾದ್ಯಂತದ ರೆಡ್ ಕ್ರಾಸ್ ವಾರಿಯರ್ ಗಳನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಸ್ವಾಗತಿಸಿದರು. ಸ್ವಯಂ ಸೇವಾ ರಕ್ತ ದಾನ ಉತ್ತೇಜಿಸುವ ಮೂಲಕ ರಕ್ತ ವರ್ಗಾವಣೆಗೆ ಸಾಕಷ್ಟು ರಕ್ತದ ದಾಸ್ತಾನು ಇರುವಂತೆ ನೋಡಿಕೊಳ್ಳುವಂತೆ ಮತ್ತು ರಕ್ತದಾನಿಗಳನ್ನು ಕರೆದುಕೊಂಡು ಹೋಗುವ ಹಾಗು ಕರೆ ತಂದು ಬಿಡುವ ಸೌಲಭ್ಯಗಳನ್ನು ಒದಗಿಸುವಂತೆಯೂ ತಿಳಿಸಿದರು.  ಗುಣಮುಖರಾದ ಕೋವಿಡ್ -19 ರೋಗಿಗಳಿಗೆ ರಕ್ತ ದಾನಕ್ಕೆ ಮುಂದೆ ಬರುವಂತೆ ಮಾಡಲು ಅವರನ್ನು ಸಂಪರ್ಕಿಸುವಂತೆ ಸಚಿವರು .ಆರ್.ಸಿ.ಎಸ್. ಗೆ ಕರೆ ನೀಡಿದರು.ಅವರಿಂದ ಪ್ಲಾಸ್ಮಾ ಪಡೆದು ಕೊರೊನಾ ಸಂತ್ರಸ್ತ ರೋಗಿಗಳಿಗೆ ನೀಡಿ ಅವರು ಬೇಗ ಗುಣಮುಖರಾಗುವಂತೆ ಮಾಡಲು ಅದನ್ನು ಬಳಸಬಹುದು ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1616886

ಭೂಮಿತಾಯಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನ ಮಂತ್ರಿ ಶ್ರೀ ಮೋದಿ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಭೂಮಿಯ ದಿನದಂದು ಭೂತಾಯಿಗೆ ಕೃತಜ್ಞತೆ ಸಲ್ಲಿಸಿದರು. “ಭೂಮಿ ತಾಯಿಯ ಅಂತಾರಾಷ್ಟ್ರೀಯ ದಿನದಂದು ನಾವೆಲ್ಲರೂ ನಮ್ಮ ಭೂಗ್ರಹಕ್ಕೆ  ಸಂರಕ್ಷಣೆ ಮತ್ತು ಅನುಭೂತಿಗಾಗಿ ಕೃತಜ್ಞತೆ ಸಲ್ಲಿಸುತ್ತೇವೆ, ನಾವೆಲ್ಲರೂ ಸ್ವಚ್ಚ, ಆರೋಗ್ಯಪೂರ್ಣ , ಮತ್ತು ಇನ್ನಷ್ಟು ಸಮೃದ್ದ ಭೂಗ್ರಹವನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗೋಣ. ಕೋವಿಡ್ -19ನ್ನು ಸೋಲಿಸಲು ಮುಂಚೂಣಿಯಲ್ಲಿ ನಿಂತು ಕಾರ್ಯನಿರತರಾಗಿರುವವರೆಲ್ಲರಿಗೂ ಒಂದು ಘೋಷ ಹಾಕೋಣ ಎಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.

For details: https://pib.gov.in/PressReleseDetail.aspx?PRID=1616958

ಕೋವಿಡ್ ಜಾಗತಿಕ ಸಾಂಕ್ರಾಮಿಕ ಅವಧಿಯಲ್ಲಿ ಸರಕು ಸಾಗಾಣಿಕೆಗಾಗಿ ಪ್ರೋತ್ಸಾಹಧನ ಘೋಷಿಸಿದ ಭಾರತೀಯ ರೈಲ್ವೇ

ಖಾಲಿ ಕಂಟೈನರ್ ಗಳಿಗೆ ಮತ್ತು ಖಾಲಿ ಸಮತಟ್ಟು ವ್ಯಾಗನುಗಳಿಗೆ 24.03.2020 ರಿಂದ 30.04.2020 ರವರೆಗೆ   ಸಾಗಾಟ ಶುಲ್ಕ ಇಲ್ಲ. ಇನ್ನಷ್ಟು ಗ್ರಾಹಕರು ತಮ್ಮ ಬೇಡಿಕೆಗಳನ್ನು ನೊಂದಾಯಿಸಿಕೊಳ್ಳಬಹುದು ಮತ್ತು ರೈಲ್ವೇ ರಸೀದಿಯನ್ನು ಇಲೆಕ್ತ್ರಾನಿಕ್ ಮಾಧ್ಯಮದ ಮೂಲಕ ಪಡೆಯಬಹುದು, ದೈಹಿಕವಾಗಿ ಗೂಡ್ಸ್ ಶೆಡ್ ಗಳಿಗೆ ಭೇಟಿ ನೀಡುವ ಆವಶ್ಯಕತೆ ಇಲ್ಲ. ಒಂದು ವೇಳೆ ಗ್ರಾಹಕರು ಇಲೆಕ್ಟ್ರಾನಿಕ್ ರಸೀದಿ ಪಡೆಯದೇ ಇದ್ದರೆ , ಅವರು ಸರಕುಗಳ ಡೆಲಿವರಿಯನ್ನು ಸ್ಥಳದಲ್ಲಿ  ರೈಲ್ವೇ ಇನ್ವೊಯಿಸ್ ಸಲ್ಲಿಸದೆಯೇ ಪರ್ಯಾಯ ಪ್ರಕ್ರಿಯೆಯನ್ನು ಬಳಸಿ ಪಡೆದುಕೊಳ್ಳಬಹುದು. ರೈಲು ಲೋಡುಗಳ ದರಗಳನ್ನು  ಪ್ರಸ್ತುತ 57 ರಿಂದ 42 ವ್ಯಾಗನುಗಳಿಗೆ ಇಳಿಸಿರುವುದರಿಂದ  ಕನಿಷ್ಟ ಸಂಖ್ಯೆಯ ಬಿ.ಸಿ.ಎನ್.ಎಚ್.ಎಲ್.ಗಳು ಅವಶ್ಯಕ. ಮಿನಿ ರೇಕ್ ಗೆ ಸಂಬಂಧಿಸಿ ಇರುವ ದೂರ ಸಂಬಂಧಿ ಶರತ್ತುಗಳನ್ನು ಕೈಗಾರಿಕೆಗಳಿಗೆ ಉತ್ತೇಜನ ನೀಡುವುದಕ್ಕಾಗಿ ಸಡಿಲಿಕೆ ಮಾಡಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617136

ದೇಶಾದ್ಯಂತ ಮತ್ತು ರಾಜ್ಯಗಳಿಗೆ ವಿವಿಧ ರೈಲ್ವೇ ಅಡುಗೆ ಮನೆಗಳ ಮೂಲಕ ದಿನನಿತ್ಯ 2.6 ಲಕ್ಷ ಊಟ ಪೂರೈಕೆ ಕೊಡುಗೆ ನೀಡಿದ  ರೈಲ್ವೇ

ಆವಶ್ಯಕತೆ  ಇರುವವರಿಗೆ ವಿತರಿಸಲು ಬೇಯಿಸಿದ ಆಹಾರವನ್ನು ಜಿಲ್ಲಾಡಳಿತಗಳು ವಿವಿಧ ರೈಲ್ವೇ ಅಡುಗೆ ಮನೆಗಳಿಂದ ಕೊಂಡೊಯ್ಯಲು ಸಿದ್ದರಿದ್ದರೆ ದಿನ ನಿತ್ಯ 2.6 ಲಕ್ಷ ಊಟಗಳನ್ನು  ಪೂರೈಸಲು ಸಿದ್ದವಿರುವುದಾಗಿ ರೈಲ್ವೇ ಸಚಿವಾಲಯ ಕೊಡುಗೆ ಪ್ರಸ್ತಾಪವನ್ನು ನೀಡಿದೆ. ಕೊಡುಗೆಯು ಆರಂಭಿಕ ಗುರುತು ಮಾಡಲ್ಪಟ್ಟ ಅಡುಗೆ ಮನೆಗಳ ಸಾಮರ್ಥ್ಯವನ್ನಾಧರಿಸಿರುತ್ತದೆಆವಶ್ಯಕತೆ ಬಂದರೆ ಪೂರೈಕೆಯನ್ನು ಇನ್ನಷ್ಟು ಹೆಚ್ಚಿಸಲು ಇಂತಹ ಇನ್ನಷ್ಟು ಸ್ಥಳಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಮತ್ತು ಊಟಗಳು ಖರ್ಚು ಆಧಾರದಲ್ಲಿ ಬರೇ ತಲಾ 15 ರೂಪಾಯಿಗೆ ಲಭಿಸುತ್ತವೆ.

ವಿವರಗಳಿಗೆ: https://pib.gov.in/PressReleseDetail.aspx?PRID=1616985

ಭಾರತೀಯ ಸಮುದ್ರಯಾನಿಗಳಿಗೆ ಭಾರತದ ಬಂದರುಗಳಲ್ಲಿ ಮತ್ತು ಅವರ ಚಲನ ವಲನಕ್ಕಾಗಿ ಸೈನ್ ಆನ್ ಮತ್ತು ಸೈನ್ ಆಫ್ ಎಸ್..ಪಿ.ಗಳನ್ನು ಹೊರಡಿಸಲಾಗಿದೆ

ಕೇಂದ್ರ ಶಿಪ್ಪಿಂಗ್ ಖಾತೆ ಸಹಾಯಕ ಸಚಿವ ( /ಸಿ) ಶ್ರೀ ಮನ್ ಸುಖ್ ಮಾಂಡವೀಯ ಅವರು ಭಾರತೀಯ ಸಮುದ್ರಯಾನಿಗಳಿಗೆ ಭಾರತದ ಬಂದರುಗಳಲ್ಲಿ ಸೈನ್ ಆನ್ ಮತ್ತು ಸೈನ್ ಆಫ್ ಎಸ್..ಪಿ.ಗಳನ್ನು ಹೊರಡಿಸಿರುವುದನ್ನು ಸ್ವಾಗತಿಸಿದ್ದಾರೆ. ಟ್ವೀಟೊಂದರಲ್ಲಿ ಅವರು ಸಮುದ್ರ ಬಂದರುಗಳಲ್ಲಿ ಸಿಬ್ಬಂದಿ ಬದಲಾವಣೆಗೆ ಅವಕಾಶ ಮಾಡಿಕೊಡುವ ಗೃಹ ಸಚಿವರ ಆದೇಶಕ್ಕೆ  ಕೃತಜ್ಞತೆ ಸಲ್ಲಿಸಿದ್ದಾರೆ. ಇದು ಸಾವಿರಾರು ಸಮುದ್ರಯಾನಿಗಳು ಎದುರಿಸುತ್ತಿರುವ ಕಷ್ಟವನ್ನು ಕೊನೆಗಾಣಿಸುತ್ತದೆ ಎಂದವರು ಹೇಳಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1616999

ಮುದ್ರಣ ಮತ್ತು ಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸಲಹಾ ಸೂಚಿ

ದೇಶದ ವಿವಿಧೆಡೆ ಕೋವಿಡ್ -19 ಘಟನೆಗಳನ್ನು ವರದಿ ಮಾಡುತ್ತಿರುವ, ಇತರ ಪ್ರದೇಶಗಳಿಗೆ ಓಡಾಡುತ್ತಿರುವ , ಹಾಟ್ ಸ್ಪಾಟ್, ಸೋಂಕು ತಡೆ ವಲಯಗಳಿಗೆ , ಕೋವಿಡ್ ಬಾಧಿತ ಪ್ರದೇಶಗಳಿಗೆ ಹೋಗುವ  ವರದಿಗಾರರು, ಕ್ಯಾಮರಾಮನ್ ಗಳು, ಛಾಯಾ ಚಿತ್ರಗ್ರಾಹಕರು ಇತ್ಯಾದಿ ಸಹಿತ ಮಾಧ್ಯಮ ಮಂದಿ ಆವರ ಕರ್ತವ್ಯವನ್ನು ನಿಭಾಯಿಸುತ್ತಿರುವಾಗ ಆರೋಗ್ಯ ಮತ್ತು ಸಂಬಂಧಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸಲಹೆ ಮಾಡಿದೆ.  ಮಾಧ್ಯಮಗಳ ಆಡಳಿತ ವರ್ಗಕ್ಕೂ ಅದು ಕ್ಷೇತ್ರ ಸಿಬ್ಬಂದಿ ಮತ್ತು ಕಚೇರಿ ಸಿಬ್ಬಂದಿ ಗಳ ಬಗ್ಗೆ ಅವಶ್ಯ ರಕ್ಷಣಾ ಕ್ರಮ ಕೈಗೊಳ್ಳುವಂತೆ ಕೋರಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617020

ಪಿ.ಎಂ.ಜಿ.ಕೆ.ವೈ ಅಡಿಯಲ್ಲಿ ಕೋವಿಡ್ -19 6.06 ಲಕ್ಷ  ಕ್ಲೇಮುಗಳ ಸಹಿತ ಒಟ್ಟು 10.02 ಕ್ಲೇಮುಗಳನ್ನು 15 ದಿನಗಳಲ್ಲಿ ಇತ್ಯರ್ಥಪಡಿಸಿದ .ಪಿ.ಎಫ್..

ಇದರಲ್ಲಿ ಒಟ್ಟು ಮೊತ್ತವಾದ ರೂ. 3600.85 ಕೋ.ರೂ ವಿತರಣೆಯೂ ಸೇರಿದೆ. ಇದರಲ್ಲಿ 1954  ಕೋ.ರೂ. ಪಿ.ಎಂ.ಜಿ.ಕೆ.ವೈ. ಪ್ಯಾಕೇಜಿನಡಿಯ ಕೋವಿಡ್ -19 ಕ್ಲೇಮುಗಳಿವೆ. ಲಾಕ್ ಡೌನ್ ಕಾರಣದಿಂದಾಗಿ ಬರೇ ಮೂರನೇ ಒಂದರಷ್ಟು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದರೂ 90 % ನಷ್ಟು ಕೋವಿಡ್ -19 ಕ್ಲೇಮುಗಳು 3 ಕೆಲಸದ ದಿನಗಳಲ್ಲಿ ಇತ್ಯರ್ಥಗೊಳ್ಳುವ ಮೂಲಕ ತ್ವರಿತ ಇತ್ಯರ್ಥಕ್ಕಾಗಿ ವಿನ್ಯಾಸಗೊಳಿಸಲಾದ ವಿಶೇಷ ಸಾಪ್ಟ್ ವೇರ್ ಮೂಲಕ ಸೇವಾ ಪೂರೈಕೆಯಲ್ಲಿ ಹೊಸ ಮಾನದಂಡಗಳು ನಿರ್ಮಾಣವಾದಂತಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617159

ಸಚಿವಾಲಯಗಳನ್ನು ಮುಚ್ಚಲು ಯಾವುದೇ ಸರಕಾರದ ಆದೇಶ ಇಲ್ಲ, ಪಿ..ಬಿ. ವಸ್ತು ಸ್ಥಿತಿ ತಪಾಸಣೆಯಲ್ಲಿ ಸುಳ್ಳು ಸುದ್ದಿ ಬಯಲು: ’ಸೇ ನಮಸ್ತೆಹೆಸರಿನ ಯಾವುದೇ ವೀಡಿಯೋ ಕಾನ್ ಫರೆನ್ಸಿಂಗ್ ವೀಡಿಯೋ ಆಪ್ ಸರಕಾರದ ಬೆಂಬಲದಲ್ಲಿ ಕಾರ್ಯಾರಂಭ ಮಾಡಿಲ್ಲ

ವಿವರಗಳಿಗೆ: https://pib.gov.in/PressReleseDetail.aspx?PRID=1616896

ವಿ.ಸಿ.ಮೂಲಕ ಎಲ್.ಪಿ.ಜಿ. ವಿತರಕರ ಜೊತೆ ಶ್ರೀ ಧರ್ಮೇಂದ್ರ ಪ್ರಧಾನ್ ಸಂವಾದ; ಬಡವರ ಪ್ರಯೋಜನಕ್ಕಾಗಿ ಉಚಿತ ಉಜ್ವಲ ಮರುಪೂರಣಗಳನ್ನು ಗರಿಷ್ಟ ಪ್ರಮಾಣಕ್ಕೊಯ್ಯಲು ಕರೆ

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗು ಉಕ್ಕು ಖಾತೆ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ವರು ವೀಡಿಯೋ ಕಾನ್ಫರೆನ್ಸ್ ಮೂಲಕ ದೇಶಾದ್ಯಂತದಿಂದ 1000 ಕ್ಕೂ ಅಧಿಕ ಎಲ್.ಪಿ.ಜಿ. ವಿತರಕರ ಜೊತೆ ಸಂವಾದ ನಡೆಸಿದರು. ಲಾಕ್ ಡೌನ್ ಅವಧಿಯಲ್ಲಿ ಎಲ್.ಪಿ.ಜಿ.ಸಿಲಿಂಡರುಗಳನ್ನು ಮನೆ ಬಾಗಿಲಿಗೆ ಪೂರೈಸುವಿಕೆಯನ್ನು ಖಾತ್ರಿಗೊಳಿಸಿದ ಆವರ ಉತ್ತಮ ಕೆಲಸವನ್ನು ಶ್ಲಾಘಿಸಿದ ಸಚಿವರು ಬಡವರಿಗಾಗಿ ಘೋಷಣೆಯಾದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿಯಲ್ಲಿ  ಪಿ.ಎಂ.ಯು.ವೈ. ಫಲಾನುಭವಿಗಳಿಗೆ ಮೂರು ಉಚಿತ ಸಿಲಿಂಡರುಗಳನ್ನು ಪೂರೈಸುವುದನ್ನು ಗರಿಷ್ಟ ಪ್ರಮಾಣದಲ್ಲಿ ನಡೆಸುವಂತೆಯೂ ಮನವಿ ಮಾಡಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1616614

ರಾಷ್ಟ್ರಪತಿಗಳ ಎಸ್ಟೇಟಿನಲ್ಲಿ ಕೋವಿಡ್ -19 ಪಾಸಿಟಿವ್ ಪ್ರಕರಣ ಪತ್ತೆಯಾದ ಬಗ್ಗೆ ಮಾಹಿತಿ

ರಾಷ್ಟ್ರಪತಿಗಳ ಎಸ್ಟೇಟಿನಲ್ಲಿ ಕೋವಿಡ್ 19 ಪಾಸಿಟಿವ್ ಪ್ರಕರಣ ಪತ್ತೆಯಾದ ಬಗ್ಗೆ ಮಾದ್ಯಮ ವರದಿಗಳ ಹಿನ್ನೆಲೆಯಲ್ಲಿ  ಮತ್ತು ವ್ಯಕ್ತವಾಗಿರುವ ಸಂಶಯದ ಬಗ್ಗೆ , ಪರಿಸ್ಥಿತಿಯ ವಸ್ತು ಸ್ಥಿತಿಯನ್ನು ವಿವರಿಸಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1616940

-ಕಲಿಕಾ ಸಾಮಗ್ರಿ ಒದಗಣೆಗೆ ಆಹ್ವಾನ ನೀಡುವ ರಾಷ್ತ್ರೀಯ ಕಾರ್ಯಕ್ರಮ ವಿದ್ಯಾದಾನ್ 2.0 ಕ್ಕೆ  ಎಚ್.ಆರ್.ಡಿ. ಸಚಿವರಿಂದ ಚಾಲನೆ

-ಕಲಿಕಾ ಸಾಮಗ್ರಿ ಒದಗಣೆಗೆ ಆಹ್ವಾನ ನೀಡುವ ವಿದ್ಯಾದಾನ್ 2.0 ಕಾರ್ಯಕ್ರಮವನ್ನು ಶ್ರೀ ರಮೇಶ್ ಪೋಖ್ರಿಯಾಲ್ -ಕಾರ್ಯಾರಂಭ ಮಾಡಿದರು. ವಿದ್ಯಾರ್ಥಿಗಳ (ಶಾಲೆಗಳು ಮತ್ತು ಉನ್ನತ ಶಿಕ್ಷಣ ) -ಕಲಿಕಾ ಸಾಮಗ್ರಿಗಳ ಆವಶ್ಯಕತೆ ಹೆಚ್ಚುತ್ತಿರುವ ಕಾರಣದಿಂದ ಕಾರ್ಯಕ್ರಮವನ್ನು ಕಾರ್ಯಾರಂಭ ಮಾಡಲಾಗಿದೆ. ಕೋವಿಡ್ -19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬೇಡಿಕೆ ಉದ್ಭವಿಸಿದೆ. ಮತ್ತು ಡಿಜಿಟಲ್ ಶಿಕ್ಷಣವನ್ನು ಶಾಲೆಯೊಂದಿಗೆ ಸಮೀಕರಣಗೊಳಿಸುವ ಅಗತ್ಯದ ಹಿನ್ನೆಲೆಯಲ್ಲಿ  ಕಲಿಕೆಯನ್ನು ಒಗ್ಗೂಡಿಸಲು  ಇದು ತುರ್ತು ಅಗತ್ಯವೂ ಆಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617143

ಹಸಿರುಮಯ, ಸ್ವಚ್ಚ ಭೂಗ್ರಹ ನಿರ್ಮಿಸಲು ಉಪ ರಾಷ್ತ್ರಪತಿ ಕರೆ

ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯಿಡು  ಅವರು ಹಸಿರುಮಯ ಮತ್ತು ಸ್ವಚ್ಚ ಭೂಗ್ರಹವನ್ನು ನಿರ್ಮಾಣ ಮಾಡಲು ಎಲ್ಲಾ ನಾಗರಿಕರು ಒಗ್ಗೂಡಿ ಕೆಲಸ ಮಾಡಬೇಕು ಎಂದು ಕರೆ ನೀಡಿರುವರಲ್ಲದೆ ಪರಿಸರ ರಕ್ಷಣೆ ಎಲ್ಲರ ನಾಗರಿಕ ಕರ್ತವ್ಯವಾಗಿದೆ ಎಂದೂ ಹೇಳಿದ್ದಾರೆ. ವಿಶ್ವ ಭೂ ದಿನದ ಅಂಗವಾಗಿ ಸಂದೇಶ ನೀಡಿರುವ ಅವರು ಭೂತಾಯಿಯನ್ನು ರಕ್ಷಿಸಲು ನಾವು ಪ್ರಥಮಾದ್ಯತೆಯನ್ನು ನೀಡೋಣ, ಅಭಿವೃದ್ದಿಯ ಮಾದರಿಗಳನ್ನು ಪುನರ್ ವಿಮರ್ಶೆ ಮಾಡೋಣ, ಬಳಕೆದಾರ ಚಾಲಿತ ಜೀವನ ವಿಧಾನವನ್ನು ಬದಲಾಯಿಸಿಕೊಳ್ಳೋಣಎಂದಿದ್ದಾರೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಮ್ಮ ಅಭಿವೃದ್ದಿ ಮತ್ತು ಆರ್ಥಿಕ ವ್ಯೂಹಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1616763

ಆಹಾರ ಭದ್ರತೆ, ಸುರಕ್ಷೆ ಮತ್ತು ಪೋಷಣೆ ಮೇಲೆ ಕೋವಿಡ್ ಪರಿಣಾಮ ಕುರಿತ  ಜಿ-20  ಕೃಷಿ ಸಚಿವರ ವಿಶೇಷ ಸಭೆಯಲ್ಲಿ ಶ್ರೀ ನರೇಂದ್ರ ಸಿಂಗ್ ತೋಮರ್ ಭಾಗಿ

ಕೇಂದ್ರ ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಆಹಾರ ಭದ್ರತೆ , ಸುರಕ್ಷೆ ಮತ್ತು ಪೋಷಣೆ ಮೇಲೆ ಕೋವಿಡ್ ಪರಿಣಾಮ ಕುರಿತ  ಜಿ-20 ಕೃಷಿ ಸಚಿವರ ವಿಶೇಷ  ವರ್ಚುವಲ್ ಸಭೆಯಲ್ಲಿ ಭಾಗವಹಿಸಿದರು. ಅವರು ಭಾರತ ಸರಕಾರ ಲಾಕ್ ಡೌನ್ ಅವಧಿಯಲ್ಲಿ ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ನೀಡಿದ ನಿರ್ಧಾರವನ್ನು ಹಂಚಿಕೊಂಡರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ , ಆರೋಗ್ಯ ಮತ್ತು ಸ್ವಚ್ಚತೆಯ ಶಿಷ್ಟಾಚಾರಗಳನ್ನು ಕಾಯ್ದುಕೊಂಡು ಅವಶ್ಯಕ ಕೃಷಿ ಉತ್ಪನ್ನಗಳ ಲಭ್ಯತೆ ಮತ್ತು ಪೂರೈಕೆಯನ್ನು ಖಾತ್ರಿಪಡಿಸಿದ ಬಗ್ಗೆ ಅವರು ಪ್ರಸ್ತಾಪಿಸಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1616889

ಕೋವಿಡ್ -19 ಅಂಗವಾಗಿ ದೇಶದಲ್ಲಿ  ಜಾರಿಯಲ್ಲಿರುವ ಲಾಕ್ ಡೌನ್ ಅವಧಿಯಲ್ಲಿ ಜೀವನಾವಶ್ಯಕ ಸರಕುಗಳನ್ನು ಯಾವುದೇ ಅಡೆ ತಡೆ ಇಲ್ಲದೆ ಪೂರೈಸಲು ಸಕಾಲದಲ್ಲಿ ಮಧ್ಯಪ್ರವೇಶ ಮಾಡಿದ ಸರಕಾರ

ಕೋವಿಡ್ -19  ಜಾಗತಿಕ ಸಾಂಕ್ರಾಮಿಕದಿಂದಾಗಿ ಉದ್ಭವಿಸಿರುವ ಲಾಕ್ ಡೌನ್ ಪರಿಸ್ಥಿತಿಯಲ್ಲಿ ರಖಂ ಮಾರುಕಟ್ಟೆಗಳಲ್ಲಿ ಜನಜಂಗುಳಿಯನ್ನು ತಡೆಯಲು ಮತ್ತು ಪೂರೈಕೆ ಸರಪಳಿಯನ್ನು ಉತ್ತೇಜಿಸಲು ಕೃಷಿ ಸಚಿವಾಲಯವು ಹಲವಾರು ಕ್ರಮಗಳನ್ನು ಆರಂಭಿಸಿತ್ತು . ರಾಷ್ಟ್ರೀಯ ಕೃಷಿ ಮಾರುಕಟ್ಟೆ (-ನಾಮ್ ) ಪೋರ್ಟಲನ್ನು ಇನ್ನೆರಡು ಮಾದರಿಗಳಾದ () ದಾಸ್ತಾನು ಆಧಾರಿತ ವ್ಯಾಪಾರ ಮಾದರಿ ಮತ್ತು (ಬಿ) ರೈತರ ಉತ್ಪಾದನಾ ಸಂಘಟನೆಗಳ ಮಾದರಿ (ಎಫ್.ಪಿ..) ಗಳನ್ನು ಸೇರಿಸುವ ಮೂಲಕ ಅದಕ್ಕೆ ಪುನಶ್ಚೇತನ ನೀಡಲಾಗಿದೆ.

ವಿವರಗಳಿಗೆ:   https://pib.gov.in/PressReleseDetail.aspx?PRID=1616771

ದೇಶದಲ್ಲಿ ರಾಸಾಯನಿಕಗಳು, ರಸಗೊಬ್ಬರಗಳು, ಮತ್ತು ಔಷಧಿಗಳ ಲಭ್ಯತೆಯನ್ನು ಸುಧಾರಿಸಲು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಹೋರಾಟದ  ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ: ಸದಾನಂದ ಗೌಡ

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದ ಎದುರಾಗಿರುವ ಸವಾಲುಗಳನ್ನು ಎದುರಿಸಲು ತಮ್ಮ ಸಚಿವಾಲಯವು ಔಷಧಿಗಳು, ರಸಗೊಬ್ಬರಗಳು, ಮತ್ತು ಕ್ರಿಮಿನಾಶಕ ರಾಸಾಯನಿಕಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯ ಇರುವಂತೆ ಮಾಡಲು ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವರಾದ ಶ್ರೀ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ.

ವಿವರಗಳಿಗೆ: https://pib.gov.in/PressReleseDetail.aspx?PRID=1616771

ಮಾರ್ಗದರ್ಶಿಗಳನ್ನು ಅನುಸರಿಸಿ ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಅವಶ್ಯಕ ಸೇವೆಗಳ ಅಗತ್ಯಗಳನ್ನು ಪೂರೈಸಲು 900  ಮಂದಿ ಪ್ರಮಾಣೀಕೃತ ಪ್ಲಂಬರುಗಳ ವಿಳಾಸವನ್ನು ಸ್ಕಿಲ್ ಇಂಡಿಯಾ ಒದಗಿಸಿದೆ

ಚಾಲ್ತಿಯಲ್ಲಿರುವ ಕೋವಿಡ್-19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ಲಂಬಿಂಗ್ ನಂತಹ ಅವಶ್ಯಕ ಸೇವೆಗಳ ಅಗತ್ಯವನ್ನು  ಪೂರೈಸುವ ಅನಿವಾರ್ಯತೆಯನ್ನು ಮನಗಂಡ ಭಾರತೀಯ ಪ್ಲಂಬಿಂಗ್ ಕೌಶಲ್ಯ ಮಂಡಳಿಯು ಕೌಶಲ್ಯ ಅಭಿವೃದ್ದಿ ಮತ್ತು ಉದ್ಯಮಶೀಲತಾ ಸಚಿವಾಲಯದ ಆಶ್ರಯದಲ್ಲಿ ಲಾಕ್ ಡೌನ್ ಅವಧಿಯಲ್ಲಿ ತಮ್ಮ ಸೇವೆ ನೀಡಲು ಸಿದ್ದರಿರುವ ದೇಶವ್ಯಾಪ್ತಿಯಲ್ಲಿ 900 ಕ್ಕೂ ಅಧಿಕ ಪ್ಲಂಬರುಗಳ ದತ್ತಾಂಶವನ್ನು ತಯಾರಿಸಿದೆ. .ಪಿ.ಎಸ್.ಸಿ.ಯು ತನ್ನ ಸಂಲಗ್ನ ತರಬೇತಿ ಸಹಭಾಗಿಗಳನ್ನು ಆಹಾರ ಮತ್ತು ಅವಶ್ಯಕ ಪೂರೈಕೆಗಳನ್ನು ಅವಶ್ಯಕತೆ ಇರುವವರಿಗೆ ವಿತರಿಸುವ ಕಾರ್ಯ ನಡೆಸಲು ಕೋರಿದೆ ಮತ್ತು ವಿತರಣಾ ಚಟುವಟಿಕೆಗಳಲ್ಲಿ ಮತ್ತು ತಯಾರಿಯಲ್ಲಿ ಅವಶ್ಯ ಬೆಂಬಲ ನೀಡಲೂ ಮುಂದೆ ಬಂದಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1616886

ಕೊರೊನಾ ವೈರಸ್ ಸ್ಪೋಟದ ಕಾರಣಕ್ಕಾಗಿ ಪ್ರವಾಸೋದ್ಯಮ ಸಚಿವಾಲಯವು 2020 ಅಕ್ಟೋಬರ್ 15 ರವರೆಗೆ ಹೊಟೇಲುಗಳನ್ನು/ ರೆಸ್ಟೋರೆಂಟ್ ಗಳನ್ನು ಮುಚ್ಚಲು ಯಾವುದೇ ಪತ್ರ ಹೊರಡಿಸಿಲ್ಲ

ವಿವರಗಳಿಗೆ: https://pib.gov.in/PressReleseDetail.aspx?PRID=1617014

ಕೋವಿಡ್ -19  ಗಾಗಿ  ಟ್ರೈಫೆಡ್ ನಿಂದ ಧನಾತ್ಮಕ ಉಪಕ್ರಮಗಳು

ಕೋವಿಡ್ -19 ಲಾಕ್ ಡೌನ್ ಅವಧಿಯಲ್ಲಿ  (ಮತ್ತು ಬಳಿಕದ ಅವಧಿಯಲ್ಲಿ ) ಬುಡಕಟ್ಟು ಜನರ ಹಿತಾಸಕ್ತಿಗಳನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅವುಗಳನ್ನು ಕೆಳಗಿನ ಮೂರು ಶೀರ್ಷಿಕೆಗಳಲ್ಲಿ ಪ್ರಚಾರ ಮತ್ತು ಜಾಗೃತಿ ಮೂಡಿಸುವಿಕೆ ; ವೈಯಕ್ತಿಕ ಆರೋಗ್ಯ ರಕ್ಷಣೆ, ಎನ್.ಟಿ.ಎಫ್. ಪಿ. ಖರೀದಿ ವರ್ಗೀಕರಿಸಬಹುದು.

ವಿವರಗಳಿಗೆ: https://pib.gov.in/PressReleseDetail.aspx?PRID=1617038

ಡಿ.ಎಸ್.ಟಿ. ಬೆಂಬಲಿತ ಎನ್.ಜಿ.. ಜಾಲದಿಂದ ಎಸ್. ಮತು ಟಿ ಮಧ್ಯಪ್ರವೇಶಗಳ ಮೂಲಕ ಸಮುದಾಯ ಮಟ್ಟದಲ್ಲಿ ಕೋವಿಡ್ -19 ನಿಭಾವಣೆ

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿ.ಎಸ್.ಟಿ.) ಸಮಾನ ಸಶಕ್ತೀಕರಣ ಮತ್ತು ಅಭಿವೃದ್ದಿಗಾಗಿರುವ ವಿಜ್ಞಾನ ಬೆಂಬಲಿತ , ಭಾರತದ 22 ರಾಜ್ಯಗಳಲ್ಲಿ ಎಸ್. ಆಂಡ್ ಟಿ ಸಾಮರ್ಥ್ಯದ ಎನ್.ಜಿ.. ಜಾಲವು ವಿವಿಧ ಎಸ್ ಮತ್ತು ಟಿ ಮಧ್ಯಪ್ರವೇಶದ ಮೂಲಕ ಕೋವಿಡ್ 19 ನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ತೋರಿಸಿದೆ ಮತ್ತು ವಿವಿಧ ರಾಜ್ಯಗಳಲ್ಲಿ ಹಾಗು ಅದಕ್ಕಿಂತ ತಳ ಮಟ್ಟದಲ್ಲಿ ಪೂರಕ ಪ್ರಯತ್ನಗಳನ್ನು ಮಾಡಿದೆ .

ವಿವರಗಳಿಗೆ: https://pib.gov.in/PressReleseDetail.aspx?PRID=1617176

ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ಅವಧಿಯಲ್ಲಿ ಸಿಬ್ಬಂದಿಗಳನ್ನು ಸುರಕ್ಷಿತವಾಗಿಡಲು ಉತ್ತರ ಡಿ.ಎಂ.ಸಿ.ಯಿಂದ ಸಮಗ್ರ ಕ್ರಮಗಳು

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಪರೀಕ್ಷಾ ಸಮಯದಲ್ಲಿ , ಉತ್ತರ ದಿಲ್ಲಿ ಮುನ್ಸಿಪಲ್ ಕಾರ್ಪೋರೇಶನ್ ತನ್ನೆಲ್ಲಾ ಸಿಬ್ಬಂದಿಗಳ ಸುರಕ್ಷೆಯನ್ನು ಖಾತ್ರಿಪಡಿಸಲು ಸಾದ್ಯ ಇರುವ ಎಲ್ಲಾ ಸರಣಿ ಕ್ರಮಗಳನ್ನು ಕೈಗೊಂಡಿದೆ. ಉತ್ತರ ಡಿ.ಎಂ.ಸಿ.ಯು ಪ್ರತೀ ಸೋಂಕು ತಡೆ ವಲಯದ ಹೊರಗೆ ತಂಗುವಿಕೆಗೆ ನಿಲ್ದಾಣವನ್ನು ಸ್ಥಾಪಿಸಿದೆ. ನೈರ್ಮಲ್ಯ ವಿಭಾಗದ ಸಿಬ್ಬಂದಿಗಳಿರಲಿ, ಇಂಜಿನಿಯರಿಂಗ್, ಸಾರ್ವಜನಿಕ ಆರೋಗ್ಯ ಅಥವಾ ಯಾವುದೇ ಇಲಾಖೆಗಳ ಸಿಬ್ಬಂದಿಗಳಿರಲಿ ಅವರು ತಂಗುದಾಣಗಳ ಮೂಲಕವೇ ತಮ ಕರ್ತವ್ಯವನ್ನುಆರಂಭಿಸುತ್ತಾರೆ. ಅವರು ಇಲ್ಲಿಗೆ ವರದಿ ಮಾಡಿಕೊಳ್ಳುತ್ತಾರೆ  ಮತ್ತು ಅವರಿಗೆ ಸೂಕ್ತ ಪಿ.ಪಿ.. ಕಿಟ್ ಗಳನ್ನು ಒದಗಿಸಲಾಗುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617007

 

ಪಿ.ಐ.ಬಿ. ಕ್ಷೇತ್ರ ಕಾರ್ಯಾಲಯಗಳ ಮಾಹಿತಿ

  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 5,218 ಕ್ಕೇರಿದೆ, ಮಂಗಳವಾರದಂದು ಮತ್ತೆ 552 ರೋಗಿಗಳು ಪತ್ತೆಯಾಗಿದ್ದಾರೆ. ಮುಂಬಯಿಯಲ್ಲಿ 355 ಹೊಸ ಪ್ರಕರಣಗಳು ವರದಿಯಾಗಿವೆ. ಅಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,445 ಕ್ಕೇರಿದೆ.ಮತ್ತು ಅದು ಭಾರತದ ಯಾವುದೇ ನಗರಗಳಿಗಿಂತ ಅಧಿಕ. ಇದುವರೆಗೆ 779 ಜನರು ಗುಣಮುಖರಾಗಿದ್ದಾರೆ. ಮುಂಬಯಿಯ 53 ಪತ್ರಕರ್ತರಿಗೆ  ಕೋವಿಡ್ -19 ದೃಢಪಟ್ಟಿರುವುದರಿಂದ ವಾರ್ತಾ  ಮತ್ತು ಪ್ರಸಾರ ಸಚಿವಾಲಯ ಮುದ್ರಣ ಮತ್ತು ಇಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಸಲಹಾಸೂಚಿಯನ್ನು ಹೊರಡಿಸಿದ್ದು, ಪತ್ರಕರ್ತರು ಅವಶ್ಯ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆ ಹೇಳಿದೆ ಮತ್ತು ಅವರ ಆಡಳಿತಕ್ಕೂ ಕ್ಷೇತ್ರ ಹಾಗು ಕಚೇರಿ ಸಿಬ್ಬಂದಿಗಳ ಯೋಗಕ್ಷೇಮದ ಬಗ್ಗೆ ಜಾಗ್ರತೆ ವಹಿಸುವಂತೆ ತಿಳಿಸಿದೆ. ಅಂತರ ಸಚಿವಾಲಯದ ಕೇಂದ್ರೀಯ ತಂಡ ಹೆಚ್ಚುವರಿ ಕಾರ್ಯದರ್ಶಿ ಮನೋಜ್ ಜೋಶಿ ನೇತೃತ್ವದಲ್ಲಿ ಇಂದು ಧಾರಾವಿ ಪ್ರದೇಶಕ್ಕೆ ಭೇಟಿ ನೀಡಿತು ಮತ್ತು ಟ್ರಾನ್ಸಿಟ್ ಶಿಬಿರಗಳು, ಕ್ವಾರಂಟೈನ್ ಸವಲತ್ತುಗಳು ಸಹಿತ ಇತರ ವಿಷಯಗಳನ್ನು ಪರಿಶೀಲಿಸಿತು. ಅವರ ಜೊತೆ ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೋಪೆ ಇದ್ದರು. .ಎಂ.ಸಿ.ಟಿ ತಂಡವು ಮುಖ್ಯಮಂತ್ರಿ , ಮುನ್ಸಿಪಲ್ ಕಮಿಷನರ್, ಪೋಲಿಸ್ ಕಮಿಶನರ್ಮತ್ತು ಮಹಾರಾಷ್ಟ್ರ ಸರಕಾರದ ಇತರ ಹಿರಿಯ ಅಧಿಕಾರಿಗಳ ಜೊತೆ ವಿಸ್ತಾರವಾದ ಮತುಕತೆ ನಡೆಸಿತು.
  • ಗುಜರಾತ್: 112 ಹೊಸ ಕೊರೊನಾವೈರಸ್ ಪ್ರಕರಣಗಳು ಗುಜರಾತಿನಲ್ಲಿ ವರದಿಯಾಗಿವೆ. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 2,178 ಕ್ಕೇರಿದೆ. ಇದುವರೆಗೆ ಸೋಂಕಿತರಲ್ಲಿ 139 ಮಂದಿ ಗುಣಮುಖರಾಗಿದ್ದಾರೆ ಮತ್ತು 90 ಮಂದಿ ಮೃತಪಟ್ಟಿದ್ದಾರೆ. ಗುಜರಾತಿನ ಪ್ರಕರಣಗಳ  ಸಂಖ್ಯೆ ಅದನ್ನು ಮಹಾರಾಷ್ಟ್ರದ ಬಳಿಕದ ಎರಡನೆ ಸ್ಥಾನದಲ್ಲಿಟ್ಟಿದೆ.
  • ರಾಜಸ್ಥಾನ: ಬುಧವಾರದಂದು ರಾಜ್ಯದಲ್ಲಿ 64 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,799 ಕ್ಕೇರಿದೆ. ಬಾಕಿ ಉಳಿದಿದ್ದ 4000 ಮಾದರಿಗಳನ್ನು ದಿಲ್ಲಿಯ ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರ ಫಲಿತಾಂಶಗಳು ಬರಲಾರಂಭಿಸಿವೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ. , ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿವೆ ಎಂದವರು ತಿಳಿಸಿದ್ದಾರೆ.
  • ಚಂಡೀಗಢ: ಕೊರೊನಾ ಸ್ಪೋಟ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾಗಿರುವ ಪ್ರದೇಶಗಳಲ್ಲಿ ಪಡಿತರ ಮತ್ತು ತರಕಾರಿಗಳನ್ನು ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಚಂಡೀಗಢ ಆಡಳಿತಾಧಿಕಾರಿ ಹೇಳಿದ್ದಾರೆ. ಇದರಿಂದಾಗಿ ಜನರು ತಮ್ಮ  ಮನೆಯಿಂದ ಹೊರ ಬರುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ನಿವಾಸಿಗಳ ಅನುಕೂಲಕ್ಕಾಗಿ ಪ್ಲಂಬರ್, ಇಲೆಕ್ಟ್ರಿಶಿಯನ್ ಮತ್ತು .ಸಿ. ಮೆಕ್ಯಾನಿಕ್ ಗಳ ಪಟ್ಟಿಯನ್ನು ತಯಾರಿಸಿ ಅದನ್ನು ಪ್ರಕಟಿಸಲಾಗಿದೆ. ಹಣ ಪಾವತಿ ಮಾಡುವ ಮೂಲಕ ಜನರು ಅವರ ಸೇವೆಯನ್ನು ಪಡೆಯಬಹುದು.
  • ಪಂಜಾಬ್: ಕೋವಿಡ್ -19 ನಿರ್ಬಂಧಗಳ ನಡುವೆಯೂ ಗೋಧಿಯನ್ನು ಯಾವುದೇ ಅಡೆ ತಡೆ ಇಲ್ಲದೆ ಖರೀದಿಸಲು ಪಂಜಾಬ್ ಮಂಡಿ ಮಂಡಳಿ 409 ಹೆಚ್ಚುವರಿ ಅಕ್ಕಿ ಕೊಠಡಿಗಳನ್ನು 2020-21 ರಾಬಿ ಅವಧಿಯ ಮಾರುಕಟ್ಟೆಗಾಗಿ ಉಪ ಮಂಡಿ ಯಾರ್ಡುಗಳನ್ನಾಗಿ ಪರಿವರ್ತಿಸಿದೆ. ಕೋವಿಡ್ -19   ನಡುವೆಯೂ ಖರೀದಿಗಾಗಿ ಮಾಡಲಾದ ದಕ್ಷ ವ್ಯವಸ್ಥೆಗಳು 8.95 ಎಲ್.ಎಂ.ಟಿ . ಗೋಧಿ ಬರುವಂತೆ ಮಾಡಿವೆ ಅದರಲ್ಲಿ  7.54 ಎಲ್.ಎಂ.ಟಿ.ಯಷ್ಟನ್ನು ಸರಕಾರದ ವಿವಿಧ ಏಜೆನ್ಸಿಗಳೇ ಖರೀದಿ ಮಾಡಿವೆ. ಎಂ.ಎಚ್.. ನೀಡಿರುವ ಮಾರ್ಗದರ್ಶಿಗಳ ಮತ್ತು ಪಂಜಾಬ್ ಸರಕಾರ ಕಳೆದ ವಾರ ಹೊರಡಿಸಿದ ಮಾರ್ಗದರ್ಶಿಗಳಲ್ಲಿ ಸಲಹೆ ಮಾಡಲಾದ  ಸಾಮಾನ್ಯ ಕಾರ್ಯಾಚರಣಾ ಪ್ರಕ್ರಿಯೆಗಳಿಗೆ ಬದ್ದರಾಗಿ ಕಾರ್ಯಾಚರಣೆ ಆರಂಭ ಮಾಡಲಿರುವ ಕೈಗಾರಿಕಾ ಘಟಕಗಳು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ  ತಾಣಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಕಾರ್ಯಾಚರಣೆ ಆರಂಭಿಸಬಹುದಾಗಿದೆ
  • ಹರ್ಯಾಣ: ಲಾಕ್ ಡೌನ್ ಅಡಿಯಲ್ಲಿ ರಾಜ್ಯದಲ್ಲಿ  ಸರಕಾರವು ಒದಗಿಸಿರುವ ಸಡಿಲಿಕೆಗಳ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಮತ್ತು ಇತರ ಸಂಸ್ಥೆಗಳು ಅವುಗಳ ಕಾರ್ಯಾಚರಣೆ ಆರಂಭಿಸಲು ಸರಳ ಹರ್ಯಾಣ (“saralharyana.gov.in”) ಪೋರ್ಟಲ್ ನಲ್ಲಿ ಪಾಸಿಗಾಗಿ ಅರ್ಜಿ ಸಲ್ಲಿಸಬಹುದು. ಅಂತರ ರಾಜ್ಯ ಸಾರಿಗೆಗಾಗಿ ವಾಹನಗಳು -ಪಾಸ್ ಗಳನ್ನು “covidpass.egovernments.org/requester-dashboard ನಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದು.
  • ಹಿಮಾಚಲ ಪ್ರದೇಶ: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕರ್ಫ್ಯೂ 2020 ಮೇ 3 ವರೆಗೆ ಮುಂದುವರೆಯುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದನ್ನು ಪ್ರಸ್ತುತ ಕೊರೊನಾ ವೈರಸ್ ಮುಕ್ತವಾಗಿರುವ ಪ್ರದೇಶಗಳಿಗೆ ಕೊರೊನಾವೈರಸ್ ಹರಡದಂತೆ ಖಾತ್ರಿಪಡಿಸಲು ಕೈಗೊಳ್ಳಲಾಗಿದೆ.ಭಾರತದ ಗೌರವಾನ್ವಿತ  ರಾಷ್ಟ್ರಪತಿಗಳು ರಾಜ್ಯಕ್ಕೆ ಎನ್-95 ಮುಖಗವಸುಗಳನ್ನು ಒದಗಿಸಿರುವುದಕ್ಕೆ ಮುಖ್ಯಮಂತ್ರಿ ತಮ್ಮ ಕೃತಜ್ಞತೆ  ವ್ಯಕ್ತಪಡಿಸಿದ್ದಾರೆ. ಇಂತಹ ಮನೋಭಾವ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ ಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದವರು ಹೇಳಿದ್ದಾರೆ.
  • ಜಮ್ಮು ಮತ್ತು ಕಾಶ್ಮೀರ: ಇಂದು 27 ಹೊಸ ಪ್ರಕರಣಗಳು ವರದಿಯಾಗಿವೆ. ಎಲ್ಲವೂ ಕಾಶ್ಮೀರ ವಿಭಾಗಕ್ಕೆ ಸೇರಿದವು. ಒಟ್ಟು ಸಂಖ್ಯೆ ಈಗ 407. ಜಮ್ಮು 56 ಮತ್ತು ಕಾಶ್ಮೀರ 351. ಸೇನೆಯು ಶ್ರೀನಗರದಲ್ಲಿ 1 ಮತ್ತು ಜಮ್ಮುವಿನಲ್ಲಿ 1 ಸೇರಿದಂತೆ  ಎರಡು ಕೋವಿಡ್ -19 ಆಸ್ಪತ್ರೆಗಳನ್ನು ಸ್ಥಾಪಿಸುತ್ತಿದೆ. ಅದು ನಾಗರಿಕ ಆಡಳಿತಕ್ಕೆ ಜಾಗತಿಕ ಸಾಂಕ್ರಾಮಿಕ ಎದುರಿಸುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರದ ಭರವಸೆ  ನೀಡಿದೆ.
  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದಲ್ಲಿ ಇದುವರೆಗೆ  12,366 ಬಳಕೆದಾರರು ಉಚಿತ ಎಲ್.ಪಿ.ಜಿ.ಸಿಲಿಂಡರ್ ಪಡೆದಿದ್ದಾರೆ. ..ಎಫ್. ಹೆಲಿಕಾಪ್ಟರುಗಳು ಚಾಂಗ್ಲಾಂಗ್ ಜಿಲ್ಲೆಯಲ್ಲಿಯ ದುರ್ಗಮ ಪ್ರದೇಶಗಳಿಗೆ ಅವಶ್ಯಕ ಸಾಮಗ್ರಿ ಮತ್ತು ವೈದ್ಯಕೀಯ ಸಲಕರಣೆಗಳನ್ನು ಸಾಗಿಸಿವೆ.
  • ಅಸ್ಸಾಂ: ಅಸ್ಸಾಂನಲ್ಲಿಯ ಖಾಸಗಿ ಶಾಲೆಗಳು ಲಾಕ್ ಡೌನ್ ಅವಧಿಯಲ್ಲಿ ವಿದ್ಯಾರ್ಥಿಗಳ ಪೋಷಕರಿಗೆ ಪರಿಹಾರ ಒದಗಿಸಲು ಖಾಸಗಿ ಶಾಲೆಗಳು ಏಪ್ರಿಲ್ ತಿಂಗಳಲ್ಲಿ 50% ನಷ್ಟು ಶಾಲಾ ಶುಲ್ಕವನ್ನು ಮನ್ನಾ ಮಾಡಲಿವೆ ಎಂದು ಆರೋಗ್ಯ ಸಚಿವ ಹಿಮಂತ ಬಿಸ್ವಾ ಸರ್ಮಾ ಟ್ವೀಟ್ ಮಾಡಿದ್ದಾರೆ. ಅಸ್ಸಾಂನ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ದಿ ಇಲಾಖೆಯು ಪಿ.ಎಂ.ಜಿ.ಕೆ.ವೈ. ಅಡಿಯಲ್ಲಿ ಡಿ.ಬಿ.ಟಿ. ಮೂಲಕ  8,51,642 ಫಲಾನುಭವಿಗಳಿಗೆ ತಲಾ 500 ರೂ ಗಳ ಹಣಕಾಸು ನೆರವನ್ನು ಬಿಡುಗಡೆ ಮಾಡಿದೆ
  • ಮಿಜೋರಾಂ: ಮಿಜೋರಾಂತ್ರಿಪುರಾ ಗಡಿಯಲ್ಲಿ ಗುಂಪುಗೂಡಿ ಬಂದು ಮಮಿಟ್ ಜಿಲ್ಲೆಯಲ್ಲಿ ಗಡಿ ಮುಚ್ಚುವ ಪ್ರಕ್ರಿಯೆಯಲ್ಲಿ ತೊಡಗಿದ್ದ ಇಬ್ಬರು ಪೊಲಿಸರ ಮೇಲೆ ದೈಹಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ದಿ.ಜಿ.ಪಿ.ಆದೇಶ.
  • ನಾಗಾಲ್ಯಾಂಡ್: ರಾಜ್ಯದಲ್ಲಿ ಪಿ.ಪಿ.. ಗಳ ಖರೀದಿ ಮತ್ತು ಗುಣಮಟ್ಟ ನಿಯಂತ್ರಣಕ್ಕೆ 2 ಸಮಿತಿಗಳನ್ನು ರಚಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವರು ತಿಳಿಸಿದ್ದಾರೆ.  
  • ಸಿಕ್ಕಿಂ: ಸಿಕ್ಕಿಂನ ಉತ್ತರ ಜಿಲ್ಲಾ ಆಡಳಿತ ಪಿ.ಎಂ.ಜಿ.ಕೆ.ವೈ. ಅಡಿಯಲ್ಲಿ ಅಕ್ಕಿ ಮತ್ತು ದಾಲ್ (ಬೇಳೆ) ಯನ್ನು 2020 ಏಪ್ರಿಲ್ 23 ರಿಂದ ಪಡಿತರ ಅಂಗಡಿಗಳಲ್ಲಿ ಮಾನದಂಡಗಳ ಅನ್ವಯ ವಿತರಿಸಲಾಗುವುದು ಎಂದು ತಿಳಿಸಿದೆ.
  • ತ್ರಿಪುರಾ: ತ್ರಿಪುರಾದ ಖೊವೈ ಜಿಲ್ಲಾ ಆಡಳಿತ ಇಟ್ಟಿಗೆ ಗೂಡು ಕಾರ್ಮಿಕರಿಗೆ ರಾಜ್ಯ ಸರಕಾರ ವಲಸೆ ಕಾರ್ಮಿಕರಿಗಾಗಿ ಘೋಷಿಸಿದ ಕೋವಿಡ್ 19 ಪ್ಯಾಕೇಜ್ ಅಡಿಯಲ್ಲಿ ತಲಾ 1000 ರೂಪಾಯಿಗಳನ್ನು ನೀಡಿದೆ. ಒಟ್ಟು 157 ಇಂತಹ ವಲಸೆ ಕಾರ್ಮಿಕರಿಗೆ ಇದರಿಂದ ಪ್ರಯೋಜನವಾಗಿದೆ.
  • ಕೇರಳ: 43 ದಿನಗಳ ಬಳಿಕ 62 ಹರೆಯದ ಪಟ್ಟಣಂತಿಟ್ಟದ ಮಹಿಳೆ ಕೋವಿಡ್ ನೆಗೆಟಿವ್ ಆಗಿದ್ದಾರೆ. ಕೋಝಿಕ್ಕೋಡ್ ಎಂ.ಸಿ. ಇಬ್ಬರು ಹೌಸ್ ಸರ್ಜನ್ ಗಳು ಕೋವಿಡ್ ಪಾಸಿಟಿವ್ ಆಗಿದ್ದಾರೆ. ರೈಲಿನಲ್ಲಿ ಬಂದ ಡೆಲ್ಲಿ ಟಿ.ಜೆ. ಗಳ ಶುಶ್ರೂಷಾ ಸಂಪರ್ಕದಿಂದ ಇದು ಬಂದಿರಬಹುದು ಎನ್ನುವ ಸಂಶಯವಿದೆ. ಪಾಸಿಟಿವ್ ರೋಗಿಗಳ ಇನ್ನಷ್ಟು ಸಂಪರ್ಕಗಳು ಪತ್ತೆಯಾಗುತ್ತಿರುವಂತೆ ತಮಿಳುನಾಡಿನೊಂದಿಗಿನ  ಕೊಲ್ಲಂ ಗಡಿ ಗ್ರಾಮದಲ್ಲಿ ಕಾವಲನ್ನು ಹೆಚ್ಚಿಸಲಾಗಿದೆಸಿ.ಎಂ.ಡಿ.ಆರ್.ಎಫ್. ಗಾಗಿ  ಸರಕಾರಿ ಸಿಬ್ಬಂದಿಗಳ 5 ತಿಂಗಳಿಗೆ 6 ದಿನಗಳ ವೇತನ ಕಡಿತ ಮಾಡಲು ಸರಕಾರವು ನಿರ್ಧರಿಸಿದೆ. ಒಟ್ಟು ದೃಢೀಕೃತ ಪ್ರಕರಣಗಳು;  426, ಆಕ್ಟಿವ್ ಪ್ರಕರಣಗಳು  117
  • ತಮಿಳುನಾಡು: ಕೋವಿಡ್ ನಿಂದಾಗಿ ಮೃತಪಡುವ ಮುಂಚೂಣಿ ಕಾರ್ಯಕರ್ತರ ಮಕ್ಕಳಿಗೆ ಉದ್ಯೋಗ ಮತ್ತು 50 ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.ಕೋವಿಡ್ ನಿಂದ ಮೃತಪಟ್ಟ ವೈದ್ಯರ ಅಂತ್ಯ ಸಂಸ್ಕಾರಕ್ಕೆ ಅಡ್ಡಿ ಪಡಿಸಿದ, ದಾಳಿ ಮಾಡಿದ  69 ಮಂದಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
  • ಪುದುಚೇರಿ: ಸುರಕ್ಷಾ ಕ್ರಮದ ಅಂಗವಾಗಿ ಮುಖ್ಯಮಂತ್ರಿ, ಸಚಿವರು, ಶಾಸಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ತಮಿಳುನಾಡಿನಲ್ಲಿ ಇಂದಿನವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 1596. ಆಕ್ಟಿವ್ ಪ್ರಕರಣಗಳು -940 , ಸಾವುಗಳು 18, ಬಿಡುಗಡೆಯಾದವರು 635 , ಗರಿಷ್ಟ ಪ್ರಕರಣಗಳ ಸಂಖ್ಯೆ ಚೆನ್ನೈಯಿಂದ 358 ಮತ್ತು ಕೊಯಮುತ್ತೂರಿನಲ್ಲಿ 134.
  • ಕರ್ನಾಟಕ: ಒಟ್ಟು ಪ್ರಕರಣಗಳು 425. ಇಂದು ಹೊಸ ದೃಢೀಕೃತ ಪ್ರಕರಣಗಳು 7. ಕಲಬುರ್ಗಿ 5, ಮತ್ತು ಬೆಂಗಳೂರು 2 . ಇದುವರೆಗೆ 129 ಮಂದಿ ಬಿಡುಗಡೆಯಾಗಿದ್ದಾರೆ.
  • ಆಂಧ್ರಪ್ರದೇಶ: ಕಳೆದ 24 ಗಂಟೆಗಳಲ್ಲಿ 56 ಹೊಸ ಪ್ರಕರಣಗಳು ವರದಿಯಾಗಿವೆ. ಒಟ್ಟು ಪಾಸಿಟಿವ್ ಪ್ರಕರಣಗಳು 813. ಸಾವುಗಳು 24. ಗುಣಮುಖರಾಗಿ ಬಿಡುಗಡೆಯಾದವರು 120. ಆಕ್ಟಿವ್ ಪ್ರಕರಣಗಳು 669.ರಾಜ್ಯವು ಪ್ರತೀ ಕೆಂಪು ವಲಯಕ್ಕೆ ವಿಶೇಷ ಅಧಿಕಾರಿಗಳನ್ನು ನೇಮಿಸಿದೆ. ರಾಜ್ಯ ಸರಕಾರವು  ಎಲ್ಲಾ ಜಿಲ್ಲೆಗಳಲ್ಲೂ ಕೌಟುಂಬಿಕ ಹಿಂಸೆ ಸಹಾಯವಾಣಿಗಳನ್ನು  ಆರಂಭಿಸಿದೆ. ಸಂಕಷ್ಟದಲ್ಲಿರುವ ಮಹಿಳೆಯರ ದೂರುಗಳಿಗೆ ಸ್ಪಂದಿಸಲು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪಾಸಿಟಿವ್ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳೆಂದರೆ  ಕರ್ನೂಲು (203) ಗುಂಟೂರು (177) ಕೃಷ್ಣ (86) ನೆಲ್ಲೂರು (67) ಚಿತ್ತೂರು (59) ಕಡಪ (51)
  • ತೆಲಂಗಾಣ: ಹೈದರಾಬಾದಿನಿಂದ  135  ಕಿಲೋ ಮೀಟರ್ ದೂರದಲ್ಲಿರುವ ಸೂರ್ಯಪೇಟ್ ನಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ರಾಜ್ಯದ ಆರೋಗ್ಯಾಧಿಕಾರಿಗಳು ಕಳವಳಗೊಂಡಿದ್ದಾರೆ.ಮಂಗಳವಾರ ಇಲ್ಲಿ 26 ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ಸೋಮವಾರದ ಅಂಕಿಅಂಶಗಳು 56 ಕ್ಕೇರಿವೆ. ಇದುವರೆಗೆ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 928.

 

ಕೋವಿಡ್-19 ಕುರಿತ ವಾಸ್ತವದ ಪರಿಶೀಲನೆ

 

***



(Release ID: 1617400) Visitor Counter : 928