ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಪಿ ಎಂ ಜಿ ಕೆ ವೈ ಅಡಿಯಲ್ಲಿ ಪಿ ಎಫ್ ವಿಶ್ವಸ್ಥ ಮಂಡಳಿಗಳಿಂದ ವಿನಾಯ್ತಿ ಪಡೆದ 40,826 ಸದಸ್ಯರಿಗೆ ರೂ. 481.63 ಕೋಟಿ ವಿತರಿಸಲಾಗಿದೆ

Posted On: 20 APR 2020 6:57PM by PIB Bengaluru

ಪಿ ಎಂ ಜಿ ಕೆ ವೈ ಅಡಿಯಲ್ಲಿ ಪಿ ಎಫ್ ವಿಶ್ವಸ್ಥ ಮಂಡಳಿಗಳಿಂದ ವಿನಾಯ್ತಿ ಪಡೆದ 40,826 ಸದಸ್ಯರಿಗೆ ರೂ. 481.63 ಕೋಟಿ ವಿತರಿಸಲಾಗಿದೆ
 

ಕೊವಿಡ್-19 ಸಾಂಕ್ರಾಮಿಕ ರೋಗದ ಎದುರಿಸಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿ ಎಂ ಜಿ ಕೆ ವೈ) ಮತ್ತು ಈ ಉದ್ದೇಶಕ್ಕಾಗಿ ಇಪಿಎಫ್ ಯೋಜನೆಯ ಪ್ಯಾರಾ 68-ಎಲ್ (3) ರನ್ನು ತುರ್ತು ಅಧಿಸೂಚನೆಯಾಗಿ ಪರಿಚಯಿಸಿದುದರ ಅಡಿಯಲ್ಲಿ ಇಪಿಎಫ್ ಯೋಜನೆಯಿಂದ ವಿಶೇಷ ಹಣ ಹಿಂಪಡೆಯುವಿಕೆಯ ಅವಕಾಶವನ್ನು 28 ಮಾರ್ಚ್ 2020 ರಂದು ಸರ್ಕಾರ ಘೋಷಿಸಿದೆ. ಈ ನಿಬಂಧನೆಯಡಿಯಲ್ಲಿ ಸದಸ್ಯರ ಮೂರು ತಿಂಗಳ ವೇತನ ಮತ್ತು ತುಟ್ಟಿ ಭತ್ಯೆಯನ್ನು ಅಥವಾ ಇಪಿಎಫ್ ಖಾತೆಯಲ್ಲಿರುವ 75% ರಷ್ಟು ಮೊತ್ತ, ಇವೆರಡರಲ್ಲಿ ಯಾವುದು ಕಡಿಮೆ ಇರುತ್ತದೋ ಅಷ್ಟನ್ನು ಮರುಪಾವತಿಸಲಾಗದ ಹಿಂಪಡೆಯುವಿಕೆಯಾಗಿ ಒದಗಿಸಲಾಗುತ್ತದೆ. ಸದಸ್ಯರು ಕಡಿಮೆ ಮೊತ್ತಕ್ಕೂ ಅರ್ಜಿ ಸಲ್ಲಿಸಬಹುದಾಗಿದೆ.

ಕೊವಿಡ್-19 ಮಧ್ಯೆಯೂ ವಿನಾಯ್ತಿ ಪಡೆದ ಪಿ ಎಫ್ ವಿಶ್ವಸ್ಥ ಮಂಡಳಿಗಳೂ ಸಹ ಸ್ಪಂದಿಸಿವೆ ಎಂದು ಹೇಳಲು ಸಂತೋಷವಾಗುತ್ತದೆ. 17-04-2020 ರ ಮಧ್ಯಾಹ್ನ ವಿನಾಯತಿ ಪಡೆದ ಪಿ ಎಫ್ ವಿಶ್ವಸ್ಥ ಮಂಡಳಿಗಳು ರೂ. 481.63 ಕೋಟಿ (ರೂ. 481,63,76,714) ಯನ್ನು 40,826 ಪಿ ಎಫ್ ಸದಸ್ಯರಿಗೆ ಕೊವಿಡ್-19 ಕ್ಕಾಗಿ ಪ್ಯಾರಾ 68-ಎಲ್ ಅಡಿಯಲ್ಲಿ ವಿತರಿಸಿದವು.

ವಿನಾಯ್ತಿ ಪಡೆದ 10 ಪ್ರಮುಖ ಸಂಸ್ಥೆಗಳು:

ಈ ನಿಟ್ಟಿನಲ್ಲಿ ವಿನಾಯ್ತಿ ಪಡೆದ ಕೆಲವು ಸಂಸ್ಥೆಗಳು ಆದರ್ಶಪ್ರಾಯ ಕೆಲಸವನ್ನು ಮಾಡಿವೆ. 17-04-2020 ರಂತೆ 10 ವಿನಾಯ್ತಿ ಪಡೆದ ಪ್ರಮುಖ ಸಂಸ್ಥೆಗಳು ಕೊವಿಡ್-19 ರ ಕ್ಲೈಮ್ ಗಳಿಗೆ ಹಣವನ್ನು ವಿತರಿಸಿರುವ ಮಾಹಿತಿ ಈ ಕೆಳಗಿನಂತಿದೆ:

 

ಕ್ರಮ ಸಂಖ್ಯೆ

ಸಂಸ್ಥೆಯ ಹೆಸರು

ಕೊವಿಡ್-19 ಕ್ಲೈಮ್ ಗಳಿಗೆ ಸಂಬಂಧಿಸಿದಂತೆ ಸ್ವೀಕರಿಸಿದ ಅರ್ಜಿ ಸಂಖ್ಯೆ

ಇತ್ಯರ್ಥಗೊಂಡ ಕೊವಿಡ್-19 ಕ್ಲೈಮ್ ಗಳು

ವಿತರಿಸಿದ ಮೊತ್ತ

1

ನೆಯ್ ವೆಲಿ ಲಿಗ್ ನೈಟ್ ನಿಗಮ, ನೆಯ್ ವೆಲಿ, 701 – ಕಡಲೋರ್, 607802

3255

3255

84,44,00,000

2

ಟಾಟಾ ಕನ್ಸ ಲ್ಟೆನ್ಸಿ ಸರ್ವಿಸ ಸ್ ನಿಯಮಿತ, ಮುಂಬೈ

9373

9373

43,34,04,641

3

ವಿಶಾಖಪಟ್ನಂ ಉಕ್ಕಿನ ಕಾರ್ಖಾನೆ, ವೈಜಾಗ್

1708

1708

40,99,37,800

4

ಎನ್ ಟಿ ಪಿ ಸಿ ನಿಯಮಿತ, ದೆಹಲಿ

925

925

28,74,21,531

5

ಹೆಚ್ ಸಿ ಎಲ್ ಟೆಕ್ನಲಾಜಿಸ್ ನಿಯಮಿತ / ಹಿಂದುಸ್ಥಾನ್ ಇನ್ಸ್ ಟ್ರುಮೆಂಟ್ ನಿಯಮಿತ
ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಸಂಸ್ಥೆ, ಗುರ್ ಗಾಂವ್

6938

4415

27,14,03,862

6

ಭಾರತೀಯ ವಿದ್ಯುತ್ ಉತ್ಪಾದನಾ ನಿಗಮ ನಿಯಮಿತ. ದೆಹಲಿ

1263

1089

26,17,32,403

7

ಒ ಎನ್ ಜಿ ಸಿ, ಡೆಹರಾಡೂನ್

2297

1723

24,17,00,000

8

ಬಿ ಎಚ್ ಇ ಎಲ್, ಆರ್ ಸಿ ಪುರಂ

1367

1199

22,22,15,000

9

ಎಮ್/ಎಸ್ ಬಿ ಎಚ್ ಇ ಎಲ್, ಭೋಪಾಲ್

1758

926

16,42,00,001

10

ಹಿಂದೂಸ್ತಾನ್ ಪೆಟ್ರೋಲಿಯಂ ನಿಗಮ ನಿಯಮಿತ., ಮುಂಬೈ

461

461

14,33,10,000

 

***



(Release ID: 1616557) Visitor Counter : 223