ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್-19 ವಿರುದ್ದ ಹೋರಾಟದ ಲಾಕ್ ಡೌನ್ ಹಿನ್ನೆಲೆಯಲ್ಲಿ ಇ-ಕಾಮರ್ಸ್ ಮೂಲಕ ಜೀವನಾವಶ್ಯಕ ಅಲ್ಲದ ವಸ್ತುಗಳ ಪೂರೈಕೆಗೆ ಸರಕಾರದ ನಿರ್ಬಂಧ
Posted On:
19 APR 2020 1:00PM by PIB Bengaluru
ಕೋವಿಡ್-19 ವಿರುದ್ದ ಹೋರಾಟದ ಲಾಕ್ ಡೌನ್ ಹಿನ್ನೆಲೆಯಲ್ಲಿ ಇ-ಕಾಮರ್ಸ್ ಮೂಲಕ ಜೀವನಾವಶ್ಯಕ ಅಲ್ಲದ ವಸ್ತುಗಳ ಪೂರೈಕೆಗೆ ಸರಕಾರದ ನಿರ್ಬಂಧ
ಕೋವಿಡ್ -19 ರ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನಿಂದ , ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್.ಎ.) ವು ನಿರ್ದಿಷ್ಟ ಕಾರ್ಯಚಟುವಟಿಕೆಗಳಿಗೆ ವಿನಾಯಿತಿ ನೀಡಿದ್ದು, ಎಲ್ಲಾ ಸಚಿವಾಲಯ/ಇಲಾಖೆಗಳಿಗೆ ಸಮಗ್ರ ಪರಿಷ್ಕೃತ ಮಾರ್ಗದರ್ಶಿಗಳನ್ನು ಹೊರಡಿಸಿದೆ.(https://www.mha.gov.in/sites/default/files/MHA%20order%20dt%2015.04.2020%2C%20with%20Revised%20Consolidated%20Guidelines_compressed%20%283%29.pdf),
ಮೇಲ್ಕಾಣಿಸಿದ ಸಮಗ್ರ ಪರಿಷ್ಕೃತ ಮಾರ್ಗದರ್ಶಿಗಳ ಅಡಿಯಲ್ಲಿ ಜೀವನಾವಶ್ಯಕ ವಸ್ತುಗಳನ್ನು ಪೂರೈಸುತ್ತಿರುವ ಇ-ಕಾಮರ್ಸ್ ಕಂಪೆನಿಗಳು ಲಾಕ್ ಡೌನ್ ನಿಂದ ವಿನಾಯಿತಿ ಪಡೆದಿರುತ್ತವೆ, ಮುಂದುವರೆದು ಹೇಳುವುದಾದರೆ, ಇ-ಕಾಮರ್ಸ್ ಕಂಪೆನಿಗಳು ಜೀವನಾವಶ್ಯಕ ವಸ್ತುಗಳನ್ನು ಪೂರೈಸುವುದಕ್ಕೆ ಬಳಸುವ ವಾಹನಗಳಿಗೆ ಅವಶ್ಯ ಅನುಮತಿಗಳೊಂದಿಗೆ ಅವಕಾಶ ನೀಡಲಾಗುತ್ತದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಮೇಲ್ಕಾಣಿಸಿದ ಸಮಗ್ರ ಪರಿಷ್ಕೃತ ಮಾರ್ಗದರ್ಶಿಗಳ ಅನ್ವಯ ಸರಕಾರವು ಜೀವನವಶ್ಯಕ ಅಲ್ಲದ ವಸ್ತುಗಳನ್ನು ಇ-ಕಾಮರ್ಸ್ ಮೂಲಕ ಒದಗಿಸುವುದಕ್ಕೆ ಕೋವಿಡ್ -19 ವಿರುದ್ದದ ಹೋರಾಟಕ್ಕಾಗಿ ಜಾರಿಯಲ್ಲಿರುವ ಲಾಕ್ ಡೌನ್ ನಿರ್ಬಂಧಗಳಡಿಯಲ್ಲಿ ನಿಷೇಧ ಹೇರಿದೆ.
ಅಧಿಕೃತ ದಾಖಲೆಗಾಗಿ ಇಲ್ಲಿ ಕ್ಲಿಕ್ ಮಾಡಿ
***
(Release ID: 1616285)
Visitor Counter : 192
Read this release in:
Punjabi
,
English
,
Urdu
,
Marathi
,
Hindi
,
Manipuri
,
Bengali
,
Assamese
,
Gujarati
,
Odia
,
Tamil
,
Telugu