ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

ಕೊರೊನಾ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ಪವಿತ್ರ ರಮಜಾನ್‌ ಮಾಸದಲ್ಲಿ ಲಾಕ್‌ಡೌನ್‌, ಕರ್ಫ್ಯೂ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು 30 ರಾಜ್ಯಗಳ ವಕ್ಫ್‌ ಮಂಡಳಿಗಳ ಹಿರಿಯ ಅಧಿಕಾರಿಗಳಿಗೆ ನಿರ್ದೇಶಿಸಿದ ಕೇಂದ್ರ ಸಚಿವ ಶ್ರೀ ಮುಕ್ತಾರ್‌ ಅಬ್ಬಾಸ್‌ ನಖ್ವಿ

Posted On: 16 APR 2020 2:03PM by PIB Bengaluru

ಕೊರೊನಾ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ಪವಿತ್ರ ರಮಜಾನ್ಮಾಸದಲ್ಲಿ ಲಾಕ್ಡೌನ್‌, ಕರ್ಫ್ಯೂ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು 30 ರಾಜ್ಯಗಳ ವಕ್ಫ್ಮಂಡಳಿಗಳ ಹಿರಿಯ ಅಧಿಕಾರಿಗಳಿಗೆ ನಿರ್ದೇಶಿಸಿದ ಕೇಂದ್ರ ಸಚಿವ ಶ್ರೀ ಮುಕ್ತಾರ್ಅಬ್ಬಾಸ್ನಖ್ವಿ

ವಿಡಿಯೊ ಕಾನ್ಫೆರೆನ್ಸ್ಮೂಲಕ 30ಕ್ಕೂ ಹೆಚ್ಚು ರಾಜ್ಯಗಳ ವಕ್ಫ್ಮಂಡಳಿಗಳ ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ

ದೇಶದಾದ್ಯಂತ ಏಳು ಲಕ್ಷಕ್ಕೂ ಹೆಚ್ಚು ನೋಂದಾಯಿತ ಮಸೀದಿಗಳು, ಈದ್ಗಾ, ಇಮಾಮಬಾದಾ, ದರ್ಗಾ ಮತ್ತು ಇತರ ಧಾರ್ಮಿಕ, ಸಾಮಾಜಿಕ ಸಂಸ್ಥೆಗಳು ರಾಜ್ಯಗಳ ವಕ್ಫ್ಮಂಡಳಿಗಳ ವ್ಯಾಪ್ತಿಯಲ್ಲಿವೆ

ಜಾಗೃತಿ ಮೂಡಿಸುವ ಮೂಲಕ ಕ್ವಾರಂಟೈನ್ಮತ್ತು ಐಸೋಲೇಷನ್ಬಗ್ಗೆ ವದಂತಿಗಳು ಮತ್ತು ತಪ್ಪು ಮಾಹಿತಿಗಳು ಹಬ್ಬುವುದನ್ನು ತಡೆಯಬೇಕು ಎಂದು ಶ್ರೀ ಮುಕ್ತಾರ್ಅಬ್ಬಾಸ್ನಖ್ವಿ ತಿಳಿಸಿದರು

ವದಂತಿ, ತಪ್ಪು ಮಾಹಿತಿ ಮತ್ತು ಸಂಚು ನಡೆಸುವುದನ್ನು ಸೋಲಿಸಿ ಕೊರೊನಾ ವಿರುದ್ಧ ಹೋರಾಟ ನಡೆಸಬೇಕುಎಂದು ಹೇಳಿದರು
 

ಅಲ್ಪಸಂಖ್ಯಾತ ವ್ಯವಹಾರಗಳ ಕೇಂದ್ರ ಸಚಿವರು ಮತ್ತು ಕೇಂದ್ರೀಯ ವಕ್ಫ್ಮಂಡಳಿಯ ಅಧ್ಯಕ್ಷರಾಗಿರುವ ಶ್ರೀ ಮುಕ್ತಾರ್ಅಬ್ಬಾಸ್ನಖ್ವಿ ಅವರು 30ಕ್ಕೂ ಹೆಚ್ಚು ರಾಜ್ಯಗಳ ವಕ್ಫ್ಮಂಡಳಿಗಳ ಹಿರಿಯ ಅಧಿಕಾರಿಗಳ ಜತೆ ವಿಡಿಯೊ ಕಾನ್ಫೆರೆನ್ಸ್ಮೂಲಕ ಸಮಾಲೋಚನೆ ನಡೆಸಿದರು. ಕೊರೊನಾ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ಪವಿತ್ರ ರಮಜಾನ್ಮಾಸದಲ್ಲಿ ಲಾಕ್ಡೌನ್‌, ಕರ್ಫ್ಯೂ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಅವರು ಸಂದರ್ಭದಲ್ಲಿ ನಿರ್ದೇಶನ ನೀಡಿದರು. ಏಪ್ರಿಲ್‌ 24ರಿಂದ ರಮಜಾನ್ಮಾಸ ಆರಂಭವಾಗಲಿದೆ.

ರಮಜಾನ್ಮಾಸದಲ್ಲಿ ಜನರು ಮನೆಯಲ್ಲೇ ಉಳಿದು ಪ್ರಾರ್ಥನೆ ಸಲ್ಲಿಸಬೇಕು ಮತ್ತು ಇತರ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಬೇಕು. ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ರಾಜ್ಯಗಳ ವಕ್ಫ್ಮಂಡಳಿಗಳ ಅಧಿಕಾರಿಗಳಿಗೆ ಶ್ರೀ ನಕ್ವಿ ನಿರ್ದೇಶನ ನೀಡಿದರು.

ದೇಶಾದ್ಯಂತ ಏಳು ಲಕ್ಷಕ್ಕೂ ಹೆಚ್ಚು ನೋಂದಾಯಿತಿ ಮಸೀದಿಗಳು, ಈದ್ಗಾ, ಇಮಾಮಬಾದಾ, ದರ್ಗಾ ಮತ್ತು ಇತರ ಧಾರ್ಮಿಕ, ಸಾಮಾಜಿಕ ಸಂಸ್ಥೆಗಳು ರಾಜ್ಯಗಳ ವಕ್ಫ್ಮಂಡಳಿಗಳ ವ್ಯಾಪ್ತಿಯಲ್ಲಿವೆ. ಕೇಂದ್ರೀಯ ವಕ್ಫ್ಮಂಡಳಿಯು ದೇಶದಲ್ಲಿನ ರಾಜ್ಯ ವಕ್ಫ್ಮಂಡಳಿಯ ನಿಯಂತ್ರಣ ಸಂಸ್ಥೆಯಾಗಿದೆ.

ನಾವು ಆರೋಗ್ಯ ಕಾರ್ಯಕರ್ತರು, ಭದ್ರತಾ ಪಡೆಗಳು, ಆಡಳಿತಾಧಿಕಾರಿಗಳು, ಪೌರಕಾರ್ಮಿಕರು ಜತೆ ಸಹಕರಿಸಬೇಕು. ಅವರೆಲ್ಲರೂ ನಮ್ಮ ಸುರಕ್ಷತೆ ಮತ್ತು ಕ್ಷೇಮಕ್ಕಾಗಿ ತಮ್ಮ ಜೀವವನ್ನು ಅಪಾಯದಲ್ಲಿ ಸಿಲುಕಿಸಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ರೀ ನಕ್ವಿ ಅವರು ಸಂದರ್ಭದಲ್ಲಿ ಹೇಳಿದರು. ಜಾಗೃತಿ ಮೂಡಿಸುವ ಮೂಲಕ ಕ್ವಾರಂಟೈನ್ಮತ್ತು ಐಸೋಲೇಷನ್ಬಗ್ಗೆ ವದಂತಿಗಳು ಮತ್ತು ತಪ್ಪು ಮಾಹಿತಿಗಳು ಹಬ್ಬುವುದನ್ನು ತಡೆಯಬೇಕು. ಕೇಂದ್ರಗಳು ಜನರ ರಕ್ಷಣೆಗಾಗಿ ಮತ್ತು ಅವರ ಕುಟುಂಬಗಳಿಗಾಗಿ ಹಾಗೂ ಸಮಾಜದ ಸುರಕ್ಷತೆಗಾಗಿ ಮಾಡಲಾಗಿದೆ ಎನ್ನುವುದನ್ನು ತಿಳಿಸಬೇಕು ಎಂದು ಸಚಿವರು ತಿಳಿಸಿದರು.

ಸುಳ್ಳು ಸುದ್ದಿಗಳು ಮತ್ತು ಸಂಚು ರೂಪಿಸುವ ಉದ್ದೇಶದಿಂದ ಹಬ್ಬಿಸಲಾಗುವು ತಪ್ಪು ಮಾಹಿತಿಗಳ ಬಗ್ಗೆ ಎಚ್ಚರವಹಿಸಬೇಕು. ಬಗ್ಗೆ ಎಲ್ಲ ರಾಜ್ಯಗಳ ವಕ್ಫ್ಮಂಡಳಿಗಳು ಅರಿವು ಮೂಡಿಸಬೇಕು. ಯಾವುದೇ ರೀತಿಯ ತಾರತಮ್ಯ ಇಲ್ಲದೆಯೇ ಅಧಿಕಾರಿಗಳು ದೇಶದ ಜನರ ಸುರಕ್ಷತೆಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವದಂತಿಗಳು ಮತ್ತು ಷಡ್ಯಂತ್ರಗಳಿಂದ ಕೊರೊನಾ ವೈರಸ್ವಿರುದ್ಧ ಹೋರಾಟಕ್ಕೆ ಹಿನ್ನಡೆಯಾಗುತ್ತದೆ. ಹೀಗಾಗಿ, ವದಂತಿಗಳು, ತಪ್ಪು ಮಾಹಿತಿ ಹಾಗೂ ಷಡ್ಯಂತ್ರಗಳನ್ನು ಸೋಲಿಸುವ ಮೂಲಕ ಕೊರಾನೊ ವಿರುದ್ಧ ಜಯಿಸಬೇಕಾಗಿದೆ ಎಂದು ಶ್ರೀ ನಕ್ವಿ ತಿಳಿಸಿದರು.

ಎಲ್ಲ ರಾಜ್ಯಗಳ ವಕ್ಫ್ಮಂಡಳಿಯ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರೀಯ ವಕ್ಫ್ಮಂಡಳಿಗಳು ಹೊರಡಿಸುವ ಸುತ್ತೋಲೆಗಳು ಮತ್ತು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಜತೆಗೆ, ಮನೆಯಲ್ಲೇ ಉಳಿದು ಪವಿತ್ರ ರಮಜಾನ್ಸಂದರ್ಭದಲ್ಲಿ ಧಾರ್ಮಿಕ ಕಾರ್ಯಗಳನ್ನು ಜವಾಬ್ದಾರಿಯಿಂದ ಪೂರೈಸಬೇಕು ಎಂದು ಶ್ರೀ ನಕ್ವಿ ಸೂಚಿಸಿದರು.

ಕೊರೊನಾ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ಎದುರಾಗಿರುವ ಸವಾಲುಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಎಲ್ಲ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಎಲ್ಲ ದೇವಾಲಯಗಳು, ಗುರುದ್ವಾರಗಳು, ಚರ್ಚ್ಗಳು, ಧಾರ್ಮಿಕ ಮತ್ತು ಸಾಮಾಜಿಕ ಸ್ಥಳಗಳಲ್ಲಿ ಎಲ್ಲ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದೇ ರೀತಿ, ದೇಶದ ಎಲ್ಲ ಮಸೀದಿಗಳಲ್ಲಿ ಮತ್ತು ಇತರ ಮುಸ್ಲಿಂ ಧಾರ್ಮಿಕ ಸ್ಥಳಗಳಲ್ಲಿ ಜನರು ಸೇರುವುದನ್ನು ನಿಲ್ಲಿಸಲಾಗಿದೆ ಎಂದು ಶ್ರೀ ನಕ್ವಿ ತಿಳಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಪವಿತ್ರ ರಮಜಾನ್ಮಾಸದಲ್ಲಿ ಮನೆಯಲ್ಲಿ ಉಳಿದು ಪ್ರಾರ್ಥನೆ ಸಲ್ಲಿಸಬೇಕು ಮತ್ತು ಧಾರ್ಮಿಕ ಕಾರ್ಯಗಳ ಜವಾಬ್ದಾರಿಯನ್ನು ಪೂರೈಸಬೇಕು ಎಂದು ದೇಶದ ಎಲ್ಲ ಧರ್ಮಗಳ ನಾಯಕರು ಮತ್ತು ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳ ಮುಖಂಡರು ಕರೆ ನೀಡಿದ್ದಾರೆ. ಜತೆಗೆ, ಲಾಕ್ಡೌನ್ಮತ್ತು ಸಾಮಾಜಿಕ ಅಂತರವನ್ನು ಕಾಪಾಡಬೇಕು. ಬಗ್ಗೆ ಹೊರಡಿಸಲಾಗಿರುವ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ಸೂಚಿಸಿದ್ದಾರೆ. ಜಗತ್ತಿನ ಬಹುತೇಕ ಮುಸ್ಲಿಂ ರಾಷ್ಟ್ರಗಳು ಸಹ ರಮಜಾನ್ಸಂದರ್ಭದಲ್ಲಿ ಮಸೀದಿಗಳಲ್ಲಿ ಮತ್ತು ಇತರ ಧಾರ್ಮಿಕ ಸ್ಥಳಗಳಲ್ಲಿ ಜನರು ಸೇರುವುದನ್ನು ನಿಷೇಧಿಸಲಾಗಿದೆ ಎಂದು ಶ್ರೀ ನಕ್ವಿ ತಿಳಿಸಿದ್ದಾರೆ.

ಜನರ ಸುರಕ್ಷತೆ ಮತ್ತು ಕ್ಷೇಮಕ್ಕಾಗಿ ಎಲ್ಲ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಜನರ ಸಹಕಾರ ಮುಖ್ಯವಾಗಿದೆ. ಇದರಿಂದ ಮಾತ್ರ ದೇಶದಿಂದ ಕಾಯಿಲೆಯನ್ನು ಹೊಡೆದೊಡಿಸಬಹುದು. ಆದರೆ, ಇನ್ನೂ ಹಲವು ಸವಾಲುಗಳನ್ನು ದೇಶ ಎದುರಿಸಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ನಿಯಮಾವಳಿಗಳು ಮತ್ತು ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಮತ್ತು ಪ್ರಾಮಾಣಿಕವಾಗಿ ಪಾಲಿಸುವ ಮೂಲಕ ಸವಾಲುಗಳನ್ನು ಎದುರಿಸಲು ಸಾಧ್ಯವಿದೆ ಎಂದು ಶ್ರೀ ನಕ್ವಿ ಹೇಳಿದರು.

ಲಾಕ್ಡೌನ್ಮತ್ತು ಸಾಮಾಜಿಕ ಅಂತರದ ಕುರಿತು ನಿಯಮಾವಳಿಗಳನ್ನು ಪಾಲಿಸುವ ಮೂಲಕ ಮನೆಯಲ್ಲಿಯೇ ಉಳಿದು ರಮಜಾನ್ತಿಂಗಳದ ಧಾರ್ಮಿಕ ಸಂಪ್ರದಾಯಗಳನ್ನು ನಿರ್ವಹಿಸಬೇಕು ಎಂದು ಶ್ರೀ ನಕ್ವಿ ಅವರು ಸಾರ್ವಜನಿಕರಿಗೆ ಕರೆ ನೀಡಿದರು. ಭಾರತ ಮತ್ತು ಜಗತ್ತಿನಿಂದ ಕೊರೊನಾ ಮುಕ್ತವಾಗಬೇಕು ಎಂದು ನಾವೆಲ್ಲರೂ ಪ್ರಾರ್ಥಿಸೋಣ ಎಂದು ಎಂದು ಹೇಳಿದರು.

ಉತ್ತರಪ್ರದೇಶ (ಶಿಯಾ ಮತ್ತು ಸುನ್ನಿ), ಆಂಧ್ರಪ್ರದೇಶ, ಬಿಹಾರ (ಶಿಯಾ ಮತ್ತು ಸುನ್ನಿ), ದಾದ್ರಾ ಮತ್ತು ನಗರ ಹವೇಲಿ, ಹರಿಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಪಂಜಾಬ್‌, ಪಶ್ಚಿಮ ಬಂಗಾಳ, ಅಂಡಮಾನ್ಮತ್ತು ನಿಕೋಬಾರ್‌, ಅಸ್ಸಾಂ, ಮಣಿಪುರ, ರಾಜಸ್ಥಾನ, ತೆಲಂಗಾಣ, ದೆಹಲಿ, ಛತ್ತೀಸಗಡ, ಗುಜರಾತ್‌, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ಮಹಾರಾಷ್ಟ್ರ, ಒಡಿಶಾ, ಪುದುಚೇರಿ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ ರಾಜ್ಯಗಳ ವಕ್ಫ್ಮಂಡಳಿಗಳ ಹಿರಿಯ ಅಧಿಕಾರಿಗಳು ಹಾಗೂ ಇತರರು ವಿಡಿಯೊ ಕಾನ್ಫೆರನ್ಸ್ನಲ್ಲಿ ಪಾಲ್ಗೊಂಡಿದ್ದರು.

***

 



(Release ID: 1615314) Visitor Counter : 219