ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಕೋವಿಡ್-19ನಿಂದಾಗಿ ಲಾಕ್ ಡೌನ್ ಆಗಿರುವ ಸಮಯದಲ್ಲಿ ಹಿರಿಯ ನಾಗರಿಕರು ಮತ್ತು ಅವರ ಆರೈಕೆಯಲ್ಲಿ ತೊಡಗಿರುವವರಿಗೆ ಮಾರ್ಗಸೂಚಿ

Posted On: 16 APR 2020 4:25PM by PIB Bengaluru

ಕೋವಿಡ್-19ನಿಂದಾಗಿ ಲಾಕ್ ಡೌನ್ ಆಗಿರುವ ಸಮಯದಲ್ಲಿ ಹಿರಿಯ ನಾಗರಿಕರು ಮತ್ತು ಅವರ ಆರೈಕೆಯಲ್ಲಿ ತೊಡಗಿರುವವರಿಗೆ ಮಾರ್ಗಸೂಚಿ

 

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ನವ ದೆಹಲಿಯ ಏಮ್ಸ್ ನ ವೃದ್ಧಾಪ್ಯ ಔಷಧ ವಿಭಾಗದ ಜೊತೆಗೂಡಿ ಕೋವಿಡ್-19ನಿಂದಾಗಿ ಲಾಕ್ ಡೌನ್ ಆಗಿರುವ ಸಮಯದಲ್ಲಿ ಎಲ್ಲ ಹಿರಿಯ ನಾಗರಿಕರು ಮತ್ತು ಅವರ ಆರೈಕೆಯಲ್ಲಿ ತೊಡಗಿರುವವರು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಎಲ್ಲ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಕಾರ್ಯದರ್ಶಿ ಶ್ರೀ ಆರ್. ಸುಬ್ರಮಣ್ಯಂ ಅವರು ಈ ಕುರಿತು ಪತ್ರ ಬರೆದು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ವಿಶೇಷವಾಗಿ ಸೋಂಕಿಗೆ ತುತ್ತಾಗುವಂತಹ ಸಾಧ್ಯತೆ ಇರುವ ವೈದ್ಯಕೀಯ ಸ್ಥಿತಿಗತಿ ಹೊಂದಿರುವವರು ಕೋವಿಡ್-19ನ ಸಮಯದಲ್ಲಿ ಈ ಸಲಹೆಗಳನ್ನು ಪಾಲಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ. ಈ ಕುರಿತು ಎಲ್ಲ ಜಿಲ್ಲೆಗಳಲ್ಲಿ ವ್ಯಾಪಕ ಪ್ರಚಾರ ನೀಡುವಂತೆ ಕರೆ ನೀಡಿರುವ ಅವರು, ಹಿರಿಯ ನಾಗರಿಕರಿಗಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳು ಮತ್ತು ಆಯಾ ಪ್ರದೇಶಗಳಲ್ಲಿನ ಸರ್ಕಾರೇತರ ಸಂಸ್ಥೆಗಳ ಮೂಲಕವೂ ಮಾರ್ಗಸೂಚಿಗಳ ಬಗ್ಗೆ ತಿಳಿಸಿ ಕೊಡುವಂತೆ ಕೋರಿದ್ದಾರೆ.

ಮಾರ್ಗಸೂಚಿಯ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

***


(Release ID: 1615245) Visitor Counter : 215