PIB Headquarters
ಕೋವಿಡ್-19: ಪಿ ಐ ಬಿ ದೈನಿಕ ವರದಿ
Posted On:
16 APR 2020 7:02PM by PIB Bengaluru
ಕೋವಿಡ್-19: ಪಿ ಐ ಬಿ ದೈನಿಕ ವರದಿ


(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)
- ದೇಶದಲ್ಲಿ ಕೋವಿಡ್-19 ಕ್ಕೆ ಸಂಬಂಧಿಸಿದಂತೆ ಇಂದಿನವರೆಗೆ, 12,380 ಪ್ರಕರಣಗಳು ದೃಢಪಟ್ಟವೆ ಮತ್ತು 414 ಸಾವುಗಳು ಸಂಭವಿಸಿವೆ.
- ಲಾಕ್ ಡೌನ್ ಅವಧಿಯಲ್ಲಿ ಕಂತು ಪಾವತಿಸಬೇಕಿದ್ದ ಆರೋಗ್ಯ ಮತ್ತು ವಾಹನಗಳ ಥರ್ಡ್ ಪಾರ್ಟಿ ವಿಮಾ ಪಾಲಿಸಿಗಳ ಕಂತಿನ ಪಾವತಿಯನ್ನು ಮೇ. 15 ರವರೆಗೆ ವಿಸ್ತರಿಸಲಾಗಿದೆ.
- ಎರಡು ವಾರಗಳ ಅವಧಿಯಲ್ಲಿ ಭಾರತವು 32 ಕೋಟಿ ಜನರಿಗೆ 3.9 ಬಿಲಿಯನ್ ಅಮೆರಿಕನ್ ಡಾಲರ್ ಹಣಕಾಸು ನೆರವನ್ನು ವಿತರಿಸಿದೆ ಎಂದು ಜಿ-20 ಸಭೆಯಲ್ಲಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
- ಕಡಿಮೆ ಅವಧಿಯಲ್ಲಿ ಔಷಧಿಗಳ ಲಭ್ಯತೆ/ ಉತ್ಪಾದನೆ ಪ್ರಮಾಣ ಹೆಚ್ಚಿಸಲು, ಪರಿಸರ ಪ್ರಭಾವ ಮೌಲ್ಯಮಾಪನ (ಇಐಎ) 2006ರ ಅಧಿಸೂಚನೆಯಲ್ಲಿ ಪ್ರಮುಖ ತಿದ್ದುಪಡಿ ಮಾಡಲಾಗಿದೆ.
- ರಂಜಾನ್ ಅವಧಿಯಲ್ಲಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯಗಳ ವಕ್ಫ್ ಮಂಡಳಿಗಳಿಗೆ ಸೂಚಿಸಲಾಗಿದೆ.
ಕೋವಿಡ್-19 ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್
ಇದುವರೆಗೆ, ದೇಶದಲ್ಲಿ 12,380 ದೃಢಪಟ್ಟ ಪ್ರಕರಣಗಳು ಮತ್ತು 414 ಸಾವುಗಳು ವರದಿಯಾಗಿವೆ. ಚೇತರಿಸಿಕೊಂಡ ನಂತರ 1489 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಸಾವಿನ ಪ್ರಮಾಣ (ಸಿಎಫ್ಆರ್) ಶೇ.3.3. ಇಲ್ಲಿಯವರೆಗೆ, ಚೇತರಿಸಿಕೊಂಡವರ ಶೇಕಡಾವಾರು 12.02 ಆಗಿದೆ. ಇದುವರೆಗೆ 325 ಜಿಲ್ಲೆಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಸಾಂಕ್ರಾಮಿಕದಿಂದಾಗಿ ಉಂಟಾಗಿರುವ ಆರೋಗ್ಯ ಸೇವೆಗಳ ಬೇಡಿಕೆಯನ್ನು ಪೂರೈಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ವಿವರವಾದ ಮಾರ್ಗಸೂಚಿಯನ್ನು ನೀಡಿದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1615049
ಲಾಕ್ ಡೌನ್ ಅವಧಿಯಲ್ಲಿ ಕಂತು ಪಾವತಿಸಬೇಕಿದ್ದ ಆರೋಗ್ಯ ಮತ್ತು ವಾಹನಗಳ ಥರ್ಡ್ ಪಾರ್ಟಿ ವಿಮಾ ಪಾಲಿಸಿಗಳ ಕಂತಿನ ಪಾವತಿಯನ್ನು ಮೇ. 15 ರವರೆಗೆ ವಿಸ್ತರಿಸಲಾಗಿದೆ
ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ನವೀಕರಣವಾಗಬೇಕಿದ್ದ ಆರೋಗ್ಯ ಮತ್ತು ವಾಹನ (ಥರ್ಡ್ ಪಾರ್ಟಿ) ವಿಮಾ ಪಾಲಿಸಿಗಳ ಪಾಲಿಸಿದಾರರಿಗೆ ತೊಂದರೆಗಳನ್ನು ತಗ್ಗಿಸುವ ಉದ್ದೇಶದಿಂದ, ಕೇಂದ್ರ ಸರ್ಕಾರವು ಅಧಿಸೂಚನೆಗಳನ್ನು ಹೊರಡಿಸಿದ್ದು, ಪಾಲಿಸಿದಾರರಿಗೆ ಮೇ 15 ರವರೆಗೆ ಪ್ರೀಮಿಯಂ ಪಾವತಿಗಳನ್ನು ಮಾಡಲು ಅವಕಾಶ ನೀಡಲಾಗಿದೆ. ಈ ಹೆಚ್ಚುವರಿ ಅವಧಿಯಲ್ಲಿ ಪಾಲಿಸಿಯ ಮುಂದುವರಿಕೆ ಮತ್ತು ಜಗಳ ಮುಕ್ತ ಕ್ಲೈಮುಗಳ ಪಾವತಿಯನ್ನು ಇದು ಖಚಿತಪಡಿಸುತ್ತದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614916
ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2 ನೇ ಜಿ 20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ ಗಳ ಸಭೆಯಲ್ಲಿ ಭಾಗವಹಿಸಿದರು
ಇಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಸ್ಥೂಲ ಆರ್ಥಿಕ ಸ್ಥಿರತೆಯನ್ನು ಸುಸ್ಥಿರ ರೀತಿಯಲ್ಲಿ ಕಾಪಾಡಿಕೊಂಡು ಜನರ ಜೀವ ಮತ್ತು ಜೀವನೋಪಾಯವನ್ನು ರಕ್ಷಿಸುವಲ್ಲಿ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ಗಳ ಪಾತ್ರದ ಮೇಲೆ ಗಮನಹರಿಸಿದರು. ದುರ್ಬಲ ವರ್ಗಗಳಿಗೆ ತ್ವರಿತ, ಸಮಯೋಚಿತ ಮತ್ತು ಉದ್ದೇಶಿತ ನೆರವು ನೀಡಲು ಭಾರತ ಸರ್ಕಾರ ಕೈಗೊಂಡ ಕ್ರಮಗಳನ್ನು ಅವರು ತಮ್ಮ ಜಿ 20 ಸಹವರ್ತಿಗಳೊಂದಿಗೆ ಹಂಚಿಕೊಂಡರು. ಇಲ್ಲಿಯವರೆಗೆ, ಒಂದೆರಡು ವಾರಗಳಲ್ಲಿಯೇ, ಭಾರತವು 320 ದಶಲಕ್ಷಕ್ಕೂ ಹೆಚ್ಚಿನ ಜನರಿಗೆ 3.9 ಶತಕೋಟಿ ಡಾಲರ್ಗಳಷ್ಟು ಹಣಕಾಸಿನ ಸಹಾಯವನ್ನು ವಿತರಿಸಿದೆ, ಡಿಜಿಟಲ್ ತಂತ್ರಜ್ಞಾನದ ಮೂಲಕ ನೇರ ಲಾಭ ವರ್ಗಾವಣೆಯ ಬಗ್ಗೆ ವಿಶೇಷ ಗಮನಹರಿಸಿದೆ, ಇದರಿಂದಾಗಿ ಫಲಾನುಭವಿಗಳು ಸಾರ್ವಜನಿಕ ಸ್ಥಳಗಳಗೆ ಬರುವುದನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿಸಿದರು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614845
ಕಡಿಮೆ ಅವಧಿಯಲ್ಲಿ ಔಷಧಿಗಳ ಲಭ್ಯತೆ/ ಉತ್ಪಾದನೆ ಪ್ರಮಾಣ ಹೆಚ್ಚಿಸಲು, ಪರಿಸರ ಪ್ರಭಾವ ಮೌಲ್ಯಮಾಪನ (ಇಐಎ) 2006ರ ಅಧಿಸೂಚನೆಯಲ್ಲಿ ಪ್ರಮುಖ ತಿದ್ದುಪಡಿ
ನೊವೆಲ್ ಕೊರೊನಾ ವೈರಸ್ (ಕೊವಿಡ್-19) ನ ಜಾಗತಿಕ ಸ್ಫೋಟದಿಂದ ಎದುರಾಗುತ್ತಿರುವ ಅನಿರೀಕ್ಷಿತ ಪರಿಸ್ಥಿತಿಯನ್ನು ಎದುರಿಸಲು ಮತ್ತು ಹಲವಾರು ಔಷಧಿಗಳ ಲಭ್ಯತೆ ಮತ್ತು ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸಲು, 2006 ರ ಇಐಎ ಅಧಿಸೂಚನೆಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, 27 ಮಾರ್ಚ್ 2020 ರಂದು ತಿದ್ದುಪಡಿ ಮಾಡಿದೆ. ವಿವಿಧ ರೋಗಗಳನ್ನು ತಡೆಗಟ್ಟಲು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ಔಷಧಿಗಳು ಮತ್ತು ಮಾರಾಟಗಾರರಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳು ಅಥವಾ ಚಟುವಟಿಕೆಗಳನ್ನು ಈಗಿರುವ ವರ್ಗ ‘ಎ’ ದಿಂದ ‘ಬಿ2’ ವರ್ಗಕ್ಕೆ ಮರುವರ್ಗೀಕರಿಸಲಾಗಿದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614813
“ನಾವು ಗೆಲ್ಲುತ್ತೇವೆ, ನಾವು ಖಂಡಿತಾ ಸೋಂಕನ್ನು ಸೋಲಿಸುತ್ತೇವೆ” – ಡಾ. ಹರ್ಷವರ್ಧನ್
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತದಲ್ಲಿ ಕೋವಿಡ್-19 ನಿಯಂತ್ರಣ ಕುರಿತಂತೆ ಕೈಗೊಂಡಿರುವ ಕ್ರಮಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಕ್ಷೇತ್ರಾಧಿಕಾರಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರೋಗ್ಯಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614833
ಮಾರ್ಚ್, 2020 ರ ವೇತನ ತಿಂಗಳ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಸಲ್ಲಿಸುವ ದಿನಾಂಕ 15.04.2020 ರಿಂದ 15.05.2020 ರವರೆಗೆ ವಿಸ್ತರಣೆ
ಕೋವಿಡ್ -19 ಸೃಷ್ಟಿಸಿರುವ ಪರಿಸ್ಥಿತಿ ಮತ್ತು ಕೋವಿಡ್ -19 ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು 24.03.2020 ರ ಮಧ್ಯರಾತ್ರಿಯಿಂದ ಘೋಷಿಸಿರುವ ಲಾಕ್ಡೌನ್ ಅನ್ನು ಪರಿಗಣಿಸಿ, ಮಾರ್ಚ್ನಲ್ಲಿ ತಮ್ಮ ಉದ್ಯೋಗಿಗಳಿಗೆ ವೇತನ ಪಾವತಿಸಿದ ಉದ್ಯೋಗದಾತರಿಗೆ 2020 ರ ಮಾರ್ಚ್ ತಿಂಗಳಿಗೆ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಸಲ್ಲಿಸುವ ದಿನಾಂಕ ವನ್ನು 15.05.2020 ರವರೆಗೆ ವಿಸ್ತರಿಸಲಾಗಿದೆ.
ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614747
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕಂಟೋನ್ಮೆಂಟ್ ಮಂಡಳಿಗಳ ಪ್ರಯತ್ನಗಳನ್ನು ಪರಿಶೀಲಿಸಿದ ರಕ್ಷಣಾ ಸಚಿವರು
ಕೊರೊನಾವೈರಸ್ (ಕೋವಿಡ್ -19) ಹರಡುವುದನ್ನು ತಡೆಗಟ್ಟಲು ದೇಶಾದ್ಯಂತ ಇರುವ 62 ಕಂಟೋನ್ಮೆಂಟ್ ಬೋರ್ಡ್ಗಳು ಕೈಗೊಂಡ ಕ್ರಮಗಳನ್ನು ರಕ್ಷಣಾ ಸಚಿವ ಶ್ರೀರಾಜನಾಥ್ ಸಿಂಗ್ ಇಂದು ಪರಿಶೀಲಿಸಿದರು. ಕಂಟೋನ್ಮೆಂಟ್ ಬೋರ್ಡ್ಗಳು ನಿರ್ದಿಷ್ಟವಾಗಿ ಜನದಟ್ಟಣೆಯ ನಾಗರಿಕ ಪ್ರದೇಶಗಳಲ್ಲಿ ನೈರ್ಮಲ್ಯ ಮತ್ತು ಸ್ವಚ್ಛತೆ ಮತ್ತು ಧೂಮೀಕರಣದ ಉನ್ನತ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಶ್ರೀ ರಾಜನಾಥ್ ಸಿಂಗ್ ಒತ್ತಿ ಹೇಳಿದರು. ವಲಸಿಗರು / ದಿನಗೂಲಿಯವರು, ದುರ್ಬಲ ವರ್ಗದವರಿಗೆ ಆಹಾರ ಮತ್ತು ಆಶ್ರಯ ಒದಗಿಸಲು ವಿಶೇಷ ಕಾಳಜಿ ವಹಿಸಬೇಕು ಎಂದು ಅವರು ಒತ್ತಿ ಹೇಳಿದರು.
ಹೆಚ್ಚಿನ ವಿವರಗಳಿಗೆ: