PIB Headquarters

ಕೋವಿಡ್ -19: ಪಿ ಐ ಬಿ ದೈನಿಕ ವರದಿ

Posted On: 14 APR 2020 7:07PM by PIB Bengaluru

ಕೋವಿಡ್ -19: ಪಿ ಬಿ ದೈನಿಕ ವರದಿ

Coat of arms of India PNG images free downloadhttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್ -19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಪತ್ರಿಕಾ ಪ್ರಕಟಣೆಗಳನ್ನು ಮತ್ತು ಪಿಐಬಿ ಕೈಗೊಂಡ ವಾಸ್ತವದ ಪರಿಶೀಲನೆಯನ್ನು ಒಳಗೊಂಡಿದೆ)

 

 

ಕೋವಿಡ್ 19 ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಪ್ ಡೇಟ್

ನಿನ್ನೆಯಿಂದ ಇಲ್ಲಿಯವರೆಗೆ 1211 ಕೋವಿಡ್ ಸೋಂಕಿತರ ಹೊಸ ಪ್ರಕರಣಗಳು ಹೆಚ್ಚಳವಾಗಿದ್ದು ದೇಶದಲ್ಲಿ 1036 ಜನರು ಗುಣಮುಖರಾಗಿ/ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 1,06,719 ಪ್ರತ್ಯೇಕೀಕರಣ ಹಾಸಿಗೆ ಮತ್ತು 12,024 ಐಸಿಯು ಹಾಸಿಗೆಗಳೊಂದಿಗೆ 602  ಕೋವಿಡ್ 19 ಸಮರ್ಪಿತ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗಿದೆ..

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614366

ಮೇ 3ರವರೆಗೆ ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಸ್ತರಣೆ ಘೋಷಣೆ ಮಾಡಿದ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಅವರಿಂದು ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಲಾಕ್ ಡೌನ್ ಅವಧಿಯನ್ನು 2020ರ ಮೇ 3ರವರೆಗೆ ವಿಸ್ತರಿಸುವುದಾಗಿ ಅವರು ಪ್ರಕಟಿಸಿದರು. ಕಡಿಮೆ ಅಪಾಯ ಇರುವ ಪ್ರದೇಶಗಳಲ್ಲಿ ಏಪ್ರಿಲ್ 20ರಿಂದ ಕೆಲವು ನಿರ್ಬಂಧ ಸಡಿಲಗೊಳಿಸುವುದಾಗಿ ತಿಳಿಸಿದರು. ಹಾಟ್ ಸ್ಪಾಟ್ ಗಳು ಮತ್ತು ಹೆಚ್ಚಿನ ಅಪಾಯ ಇರುವ ಪ್ರದೇಶಗಳನ್ನು ನಿರಂತರ ನಿಗಾದಲ್ಲಿ ಇಡುವುದಾಗಿ ತಿಳಿಸಿದರು. ಹಿರಿಯರ ಕಾಳಜಿ ವಹಿಸುವುದು ಮತ್ತು ಲಾಕ್ ಡೌನ್ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೂ ಸೇರಿದಂತೆ ಏಳು ವಿಚಾರಗಳಲ್ಲಿ ಜನರ ಬೆಂಬಲ ಕೋರಿದರು. ಭಾರತಕ್ಕೆ ಲಾಕ್ ಡೌನ್ ನಿಂದ ಪ್ರಯೋಜನವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆರ್ಥಿಕ ಸಂಕಷ್ಟಗಳನ್ನು ಸಹಿಸಿಕೊಂಡಿದ್ದರೂ, ನಾವು ಸಾಗುತ್ತಿರುವ ಮಾರ್ಗ ಸರಿಯಾಗಿಯೇ ಇದೆ. ಇದು ದೇಶದ ಹಲವರ ಜೀವವನ್ನು ಉಳಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614255

ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಪಠ್ಯ

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614215

ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಮೇ 3ರವರೆಗೆ ಎಲ್ಲ ಪ್ರಯಾಣಿಕರ ರೈಲು ಸೇವೆ ರದ್ದು

ಯುಟಿಎಸ್ ಮತ್ತು ಪಿಆರ್.ಎಸ್ ಸೇರಿದಂತೆ ಎಲ್ಲ ಟಿಕೆಟ್ ಕೌಂಟರ್ ಗಳನ್ನು ಮುಂದಿನ ಆದೇಶದವರೆಗೆ ರದ್ದು ಮಾಡಲಾಗಿದೆ.  ಮುಂದಿನ ಆದೇಶದವರೆಗೆ ಇ ಟಿಕೆಟ್ ಗಳು ಸೇರಿದಂತೆ ಯಾವುದೇ ರೈಲಿನ ಮುಂಗಡ ಬುಕಿಂಗ್ ಇರುವುದಿಲ್ಲ. ಆದಾಗ್ಯೂ, ಆನ್ ಲೈನ್ ಟಿಕೆಟ್ ರದ್ಧತಿ ಮಾತ್ರ ಎಂದಿನಂತೆ ಕಾರ್ಯಾರಂಭ ಮಾಡುತ್ತಿವೆ. ರೈಲಿನಲ್ಲ ಕಾಯ್ದಿರಿಸಿದ್ದ ಟೆಕೆಟ್ ರದ್ದತಿಗೆ ಸಂಪೂರ್ಣ ಹಣ ಹಿಂತಿರುಗಿಸಲಾಗುತ್ತಿದೆ. ಇನ್ನೂ ಟಿಕೆಟ್ ರದ್ದು ಮಾಡದೆ ಇದ್ದವರು ಟಿಕೆಟ್ ರದ್ದು ಮಾಡಿದರೂ ಅವರಿಗೂ ಪೂರ್ಣ ಹಣ ಹಿಂತಿರುಗಿಸಲಾಗುತ್ತದೆ. 

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614272

ಜನರ ಜೀವ ರಕ್ಷಣೆಗಾಗಿ ಮೇ 3ರವರೆಗೆ ದೇಶವ್ಯಾಪಿ ಲಾಕ್ ಡೌನ್ ಮುಂದುವರಿಕೆ ನಿರ್ಧಾರ ಕೈಗೊಳ್ಳಲಾಗಿದೆ: ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಮಂತ್ರಿಯವರ ನಿರ್ಧಾರಕ್ಕೆ ಹೃದಯಾಂತರಾಳದ ಕೃತಜ್ಞತೆ ಸಲ್ಲಿಸಿದ್ದಾರೆ, ಕೊವಿಡ್ -19 ಕೊನೆಗಾಣಿಸಲು, ದೇಶದ ಜನರ ಜೀವ ರಕ್ಷಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 3ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614300

ಲಾಕ್ ಡೌನ್ ಅವಧಿಯಲ್ಲಿ 20 ದಿನಗಳಲ್ಲಿ ಎಫ್.ಸಿ.ಐ. 1000 ರೈಲು ಲೋಡ್ ಸಾಗಾಟ ಮಾಡಿದೆ

ಭಾರತೀಯ ಆಹಾರ ನಿಗಮ 24.03.2020 ರಿಂದ ಆರಂಭವಾದ ಲಾಕ್ ಡೌನ್ ಅವಧಿಯಲ್ಲಿ ಸುಮಾರು 3 ದಶಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು 1,000 ಕ್ಕೂ ಹೆಚ್ಚು ರೈಲು ಲೋಡ್ (ರೇಕ್) ಗಳನ್ನು ಸಾಗಿಸಿ ಅಪರೂಪದ ಸಾಧನೆ ಮಾಡಿದೆ. ಅದು ಸುಮಾರು 90 ಬೋಗಿಗಳಷ್ಟು (2.7 ಎಂಎಂಟಿ) ಸರಕನ್ನು ಲಾಕ್ ಡೌನ್ ಅವಧಿಯಲ್ಲಿ ಅನ್ ಲೋಡ್ ಮಾಡಲೂ ಶಕ್ತವಾಗಿದೆ. ಸರಾಸರಿ ಎಫ್.ಸಿ.ಐ. 3 ಲಕ್ಷ ಮೆಟ್ರಿಕ್ ಟನ್ (50 ಕೆ.ಜಿ.ಯ ಸುಮಾರು 60 ಲಕ್ಷ ಚೀಲ)  ಸರಕನ್ನು ಲಾಕ್ ಡೌನ್ ಆರಂಭವಾದ ದಿನದಿಂದಲೂ ಪ್ರತಿನಿತ್ಯ ಲೋಡ್ ಮತ್ತು ಅನ್ ಲೋಡ್ ಮಾಡುತ್ತಿದೆ. ಇದು ಅದರ ಸಾಮಾನ್ಯ ಕಾರ್ಯಾಚರಣೆಗಿಂತ ದುಪ್ಪಟ್ಟಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614116

ಕಾರ್ಮಿಕರ ವೇತನ ಸಂಬಂಧಿತ ಕುಂದುಕೊರತೆಗಳ ನಿವಾರಣೆಗೆ 20 ನಿಯಂತ್ರಣ ಕೊಠಡಿ ಸ್ಥಾಪನೆ

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕೋವಿಡ್ 19 ಹಿನ್ನೆಲೆಯಲ್ಲ ಎದುರಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿ (ಸಿಎಲ್.ಸಿ.) (ಸಿ) ಅಡಿಯಲ್ಲಿ 20 ನಿಯಂತ್ರಣ ಕೊಠಡಿಗಳನ್ನು ದೇಶದಾದ್ಯಂತ ತೆರೆದಿದೆ

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614222

ಇಎಸ್ಐ ವಂತಿಕೆ ಸಲ್ಲಿಸುವ ಅವಧಿಯನ್ನು ಮತ್ತೆ ವಿಸ್ತರಿಸಿದ ಇಎಸ್ಐಸಿ

ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶ ಅತ್ಯಂತ ಸವಾಲಿನ ಸ್ಥಿತಿಯನ್ನು ಎದುರಿಸುತ್ತಿದೆ. ಹಲವಾರು ಉದ್ದಿಮೆಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ ಮತ್ತು ಕಾರ್ಮಿಕರು ಕೆಲಸ ಮಾಡದಂತಾಗಿದೆ. ಕಾರ್ಮಿಕರಿಗೆ ಮತ್ತು ವಾಣಿಜ್ಯ ಕಾಯಗಳಿಗೆ, ಸರ್ಕಾರ ಈ ಸಂದರ್ಭದಲ್ಲಿ ನೀಡಿರುವ ಪರಿಹಾರದ ಕ್ರಮಗಳ ಹಿನ್ನೆಲೆಯಲ್ಲಿ ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ತನ್ನ ಬಾಧ್ಯಸ್ಥರ ಅದರಲ್ಲೂ ಉದ್ಯೋಗದಾತರ ಮತ್ತು ವಿಮಾದಾರರಿಗಾಗಿ ಈ ಕೆಳಕಂಡ ಪರಿಹಾರ ಕ್ರಮಗಳನ್ನು ಕೈಗೊಂಡಿದೆ ಮತ್ತು ಕೋವಿಡ್ 19 ವಿರುದ್ಧ ಹೋರಾಟಲು ವೈದ್ಯಕೀಯ ಸಂಪನ್ಮೂಲವನ್ನು ಬಲಪಡಿಸಲಿದೆ

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614362

ಕೋವಿಡ್ 19 ಲಾಕ್ ಡೌನ್ ನಂತರ ಉದ್ದಿಮೆಗಳ ಪುನರಾರಂಭಕ್ಕೆ ಸರ್ಕಾರದಿಂದ ಸಂಪೂರ್ಣ ಬೆಂಬಲ ನೀಡುವ ಭರವಸೆಯನ್ನು ಕೈಗಾರಿಕಾ ಪ್ರತಿನಿಧಿಗಳಿಗೆ ನೀಡಿದ ಶ್ರೀ ಗಡ್ಕರಿ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಹಾಗೂ ಎಂಎಸ್ಎಂಇ ಸಚಿವ ನಿತಿನ್ ಗಡ್ಕರಿ ಅವರಿಂದು ಕೋವಿಡ್ 19ರ ಸಲುವಾಗಿ ವಿಧಿಸಲಾಗಿರುವ ಲಾಕ್ ಡೌನ್ ತೆರವು ಮಾಡಿದ ನಂತರ ಕೈಗಾರಿಕೆಗಳ ಪುನರಾರಂಭಕ್ಕೆ ಸರ್ಕಾರದಿಂದ ಸಂಪೂರ್ಣ ಬೆಂಬಲದ ಭರವಸೆಯನ್ನು ಕೈಗಾರಿಕೆಗಳಿಗೆ ನೀಡಿದ್ದಾರೆ. ಎಫ್.ಐ.ಸಿಸಿಐ ಪ್ರತಿನಿಧಿಗಳೊಂದಿಗೆ ವೆಬ್ ಆಧಾರಿತ ವಿಚಾರಗೋಷ್ಠಿಯಲ್ಲಿ ಸಂವಾದ ನಡೆಸಿದ ಅವರು, ಈ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ವಿವಿಧ ಆರ್ಥಿಕ ನಿರ್ಧಾರಗಳ ಕುರಿತು ವಿವರಿಸಿದರು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=16143621

ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ ಮಾಧ್ಯಮ ಪ್ರಕಟಣೆ

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614326

ಕೋವಿಡ್ 19 ವಿರುದ್ಧ ರಾಷ್ಟ್ರ ನಡೆಸುತ್ತಿರುವ ಹೋರಾಟಕ್ಕೆ ನೆರವಾಗಲು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದಿಂದ ಬಹು ಕ್ರಮಗಳು

1,75,000 ಆರೋಗ್ಯ ವಲಯದ ವೃತ್ತಿಪರರಿಗೆ ಎಂ.ಎಸ್.ಡಿ.ಇ ಕೌಶಲ್ಯ ಪರಿಸರ ವ್ಯವಸ್ಥೆ ಅಡಿ ತರಬೇತಿ ನೀಡಿ ರಾಜ್ಯಗಳಿಗೆ ಒದಗಿಸಲಾಗಿದೆ. ರಾಜ್ಯಗಳು 33 ಕ್ಷೇತ್ರೀಯ ಸಂಸ್ಥೆಗಳಲ್ಲಿ ಕ್ವಾರಂಟೈನ್ ಕೇಂದ್ರಗಳು/ಪ್ರತ್ಯೇಕೀಕರಣ ವಾರ್ಡ್ ಗಳಿಗೆ ಸೌಲಭ್ಯಗಳನ್ನು ನೀಡಿವೆ. ಸುಮಾರು 5 ಲಕ್ಷ ಮಾಸ್ಕ್ ಗಳನ್ನು ಜನ್ ಶಿಕ್ಷಣ ಸಂಸ್ಥಾನದಿಂದ ತಯಾರಿಸಲಾಗಿದೆ. ಲಾಕ್ ಡೌನ್ ಅವಧಿಯಲ್ಲಿ ತೊಡಗಿಸಿಕೊಂಡಿರುವ ಎಲ್ಲ ತರಬೇತಿಯಲ್ಲಿರುವವರಿಗೆ ಪೂರ್ಣ ಸ್ಟೈಫೆಂಡ್ ನೀಡುವಂತೆ ಎಲ್ಲ ಸ್ಥಾಪನೆಗಳಿಗೆ ತಿಳಿಸಲಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614219

ಪ್ರಸಕ್ತ ಕೋವಿಡ್ 19 ಬಿಕ್ಕಟ್ಟಿನ ತರುವಾಯ ಕೃಷಿ ವಲಯದ ರಫ್ತು ಪುನರುತ್ಥಾನಕ್ಕೆ ಸರ್ಕಾರ ಮಾತುಕತೆ ಆರಂಭಿಸಿದೆ

ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕೃಷಿ ಮತ್ತು ಪೂರಕ ಉತ್ಪನ್ನಗಳ ರಫ್ತುದಾರರ ಸಮಸ್ಯೆಗಳನ್ನು ಅರಿಯಲು ವಿಡಿಯೋ ಸಂವಾದ ನಡೆಸಿದರು ಮತ್ತು ಅರ್ಥಪೂರ್ಣ ಮಧ್ಯಸ್ಥಿಕೆಗಳೊಂದಿಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಶೀಘ್ರ ಅವರ ಸಮಸ್ಯೆ ಪರಿಹರಿಸಲು ಮತ್ತು ಪ್ರಸಕ್ತ ಕೋವಿಡ್ 19 ಬಿಕ್ಕಟ್ಟಿನಿಂದ ಉಳಿಯಲು ನೆರವು ನೀಡಲಾಗುವುದು..

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614278

ಕೋವಿಡ್-19 ಲಾಕ್‌ ಡೌನ್ ಸಮಯದಲ್ಲಿ ವಾಯು ಕಾರ್ಯಾಚರಣೆಯನ್ನು ಬೆಂಬಲಿಸಲು ಭಾರತೀಯ ನೌಕಾಪಡೆ ವಿಶಾಖಪಟ್ಟಣಂ ವಾಯು ನೆಲೆಯಿದ 24 x 7 ಕಾರ್ಯಾಚರಣೆಯನ್ನು ಖಚಿತಪಡಿಸುತ್ತಿದೆ

ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಸೋಂಕು ಪಸರಿಸುವುದನ್ನು ತಡೆಯಲು ರಾಷ್ಟ್ರವ್ಯಾಪಿ ಲಾಕ್ ಡೌನ್ ವಿಧಿಸಿರುವ ಸಂದರ್ಭದಲ್ಲಿ, ಪೂರ್ವ ನೌಕಾ ಕಮಾಂಡ್ (ಇ.ಎನ್.ಸಿ.)ಯ ಐ.ಎನ್.ಎಸ್. ದೆಗಾ ವಿಶಾಖಪಟ್ಟಣಂನಲ್ಲಿನ ಜಂಟಿ-ಬಳಕೆದಾರ ವಾಯುನೆಲೆಯನ್ನು ದಿನವಿಡೀ ತೆರೆಯುವುದನ್ನು ಖಚಿತಪಡಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614244

ಲಾಕ್ ಡೌನ್ ಅವಧಿಯಲ್ಲಿ ಐಸಿಎಆರ್ ಚಟುವಟಿಕೆ ಪರಾಮರ್ಶಿಸಿದ ಕೃಷಿ ಸಚಿವರು

ಶ್ರೀ ನರೇಂದ್ರ ಸಿಂಗ್ ಥೋಮರ್ ಕೋವಿಡ್ 19 ಬಿಕ್ಕಟ್ಟು ಮತ್ತು ಲಾಕ್ ಡೌನ್ ನಿಂದ ಎದುರಾಗಿರುವ ಸಮಸ್ಯೆಗಳಿಂದ ಹೊರಬರಲು ರೈತರಿಗೆ   ಭಾರತೀಯ ಕೃಷಿ ಸಂಶೋಧನಾ ಮಂಡಳಿ ನೀಡಿರುವ ನೆರವಿನ ಚಟುವಟಿಕೆಗಳ ಪರಾಮರ್ಶೆ ನಡೆಸಿದರು. ಮೂರು ಐಸಿಎಆರ್ ಸಂಸ್ಥೆಗಳು ಕೋವಿಡ್ 19 ಮಾನವರ ಮೇಲಿನ ಪರೀಕ್ಷೆಯನ್ನು ನಡೆಸುತ್ತಿದ್ದರೆ, ಐಸಿಎಆರ್ ಗಳು ರೈತರಿಗೆ ಲಾಕ್ ಡೌನ್ ಸಮಸ್ಯೆಯಿಂದ ಹೊರಬರಲು ಹಲವು ನೆರವು ಒದಗಿಸುತ್ತಿವೆ ಮತ್ತು ದೇಶದಾದ್ಯಂತ ಕೋಟ್ಯಂತರ ರೈತರಿಗೆ ಸಲಹೆ ನೀಡುತ್ತಿವೆ..

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614381

ಕೋವಿಡ್ 19 ಲಾಕ್ ಡೌನ್ ನ ಪ್ರಸಕ್ತ ಸನ್ನಿವೇಶದಲ್ಲಿ ಸಗಟು ಮಾರುಕಟ್ಟೆಗಳಲ್ಲಿ ಜನದಟ್ಟಣೆ ನಿವಾರಿಸಲು ಮತ್ತು ಇನಾಮ್ ಅಡಿಯಲ್ಲಿ ಪೂರೈಕೆ ಸರಪಳಿಯನ್ನು ಚುರುಕುಗೊಳಿಸಲು  ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ: ಶ್ರೀ ನರೇಂದ್ರ ಸಿಂಗ್ ಥೋಮರ್

ಹೆಚ್ಚುವರಿ 415 ಮಂಡಿಗಳನ್ನು ವ್ಯಾಪ್ತಿಗೆ ಸೇರಿಸಲು ಇ ನಾಮ್ ಅನ್ನು ವಿಸ್ತರಿಸಲಾಗಿದ್ದು, ಇದರಿಂದಾಗಿ ಇ ನಾಮ್ ಮಂಡಿಗಳ ಸಂಖ್ಯೆ ಶೀಘ್ರ 1000 ಆಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ಆನ್ ಲೈನ್ ವೇದಿಕೆ ಭಾರತದ ಕೃಷಿ ಮಾರುಕಟ್ಟೆಗಳನ್ನು ಸುಧಾರಣೆ ಮಾಡುವಲ್ಲಿ ದಾಪುಗಾಲು ಹಾಕಿದೆ ಎಂದರು. ನಾವು 1.66 ಕೋಟಿಗೂ ಹೆಚ್ಚು ರೈತರಿಗೆ ಮತ್ತು 1.28 ಲಕ್ಷ ವ್ಯಾಪಾರಿಗಳನ್ನು ಈ ಇ ನಾಮ್ ವೇದಿಕೆಯಲ್ಲಿ ನೋಂದಾಯಿಸಿದ್ದೇವೆ ಎಂದೂ ತಿಳಿಸಿದರು. 

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614110

ಲಾಕ್ ಡೌನ್ ಅವಧಿಯಲ್ಲಿ ಕ್ಷೇತ್ರ ಮಟ್ಟದಲ್ಲಿ ರೈತರಿಗೆ ಮತ್ತು ಕೃಷಿ ಚಟುವಟಿಕೆಗೆ ಅವಕಾಶ ನೀಡಲು ಹಲವು ಕ್ರಮ

ಪಿ.ಎಂ. ಕಿಸಾನ್ ಯೋಜನೆ ಅಡಿಯಲ್ಲಿ 16,621 ಕೋಟಿ ರೂ.ಗಳನ್ನು 8.31 ಕೋಟಿ ರೈತರ ಕುಟುಂಬಗಳಿಗೆ ಬಿಡುಗಡೆ ಮಾಡಲಾಗಿದೆ, 3,985 ಎಂ.ಟಿ ಬೇಳೆಕಾಳುಗಳನ್ನು ರಾಜ್ಯಗಳಿಗೆ /ಯುಟಿಗಳಿಗೆ ಪಿಎಂ ಜಿಕೆವೈ ಅಡಿ ವಿತರಣೆಗೆ ಪೂರೈಸಲಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614054

ಡ್ರಗ್ಸ್ ಮತ್ತು ಔಷಧ ಕೈಗಾರಿಕೆಗಳ ಪ್ರತಿನಿಧಿಗಳು ಮತ್ತು ಅವರ ಸಹವರ್ತಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಔಷಧ ಇಲಾಖೆ ಕಾರ್ಯದರ್ಶಿ

ಭಾರತೀಯ ಔಷಧ ಕೈಗಾರಿಕೆ ಅಗತ್ಯ ಔಷಧಗಳ ದಾಸ್ತಾನು ಉತ್ಪಾದಿಸುತ್ತಿದೆ ಅದರಲ್ಲೂ ದೇಶೀಯ ಮತ್ತು ರಫ್ತು  ಬೇಡಿಕೆ ಪೂರೈಕೆಗಾಗಿ ಎಚ್.ಸಿ.ಕ್ಯು ಉತ್ಪಾದಿಸುತ್ತಿದೆ. ಇಲಾಖೆಯು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನೆರವಿನೊಂದಿಗೆ ಉತ್ಪಾದನೆ ಮತ್ತು ಸಾಗಣೆಯನ್ನು ದೇಶದಾದ್ಯಂತ ಖಾತ್ರಿಪಡಿಸಲಾಗುತ್ತಿದೆ. ಔಷಧೀಯ ಮತ್ತು ವೈದ್ಯಕೀಯ ಸಾಧನಗಳ ಉದ್ಯಮದ ಕಾರ್ಯಾಚರಣೆಗಳು ಮತ್ತು ಸಮಸ್ಯೆಗಳನ್ನು ಪರಿಶೀಲಿಸಲು ಷಧ ವಿಭಾಗದ ಕಾರ್ಯದರ್ಶಿ ಡಾ. ಪಿ ಡಿ ವಘೇಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ವೀಡಿಯೊ ಸಮ್ಮೇಳನದ ನಂತರ ಈ ನಿರ್ಧಾರ ಹೊರಹೊಮ್ಮಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614045

ತ್ವರಿತ ಅಂಚೆಯ ಮೂಲಕ ಔಷಧಗಳ ಪೂರೈಕೆ

ಸಂವಹನ, ಕಾನೂನು ಮತ್ತು ಐಟಿ ಸಚಿವ ಶ್ರೀ ರವಿ ಶಂಕರ್ ಪ್ರಸಾದ್ ಅವರು ಅಂಚೆ  ಕಾರ್ಯದರ್ಶಿಯವರಿಗೆ ಸೂಚನೆ ನೀಡಿದ್ದು, ಲಾಕ್ ಡೌನ್ ಅವಧಿಯಲ್ಲಿ ಆದ್ಯತೆಯ ಮೇಲೆ ಸ್ಪೀಡ್ ಪೋಸ್ಟ್ ಮೂಲಕ ಔಷಧಗಳ ಪೂರೈಕೆ ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಷಧಿಗಳನ್ನು ಪಡೆಯಲು ಅಥವಾ ಕಳುಹಿಸಲು ಯಾರೂ ತೊಂದರೆ ಅನುಭವಿಸದಂತೆ ಅಂಚೆ ಇಲಾಖೆಯ ಎಲ್ಲಾ ಉದ್ಯೋಗಿಗಳು ಸಂವೇದನಾಶೀಲರಾಗಿರುವಂತೆ ಎಂದು ಅವರು ನಿರ್ದೇಶಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614037

ಲಾಕ್ ಡೌನ್ ಅವಧಿಯಲ್ಲಿ ಆಹಾರ ಧಾನ್ಯಗಳ ಪೂರೈಕೆಯ ಪರಾಮರ್ಶೆಗಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆಹಾರ ಸಚಿವರುಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಶ್ರೀ ರಾಮ್ ವಿಲಾಸ್ ಪಾಸ್ವಾನ್

ಲಾಕ್ ಡೌನ್ ವೇಳೆ ಅವಶ್ಯಕ ವಸ್ತುಗಳನ್ನು ಹಿಡಿದಿಟ್ಟುಕೊಳ್ಳುವುದನ್ನು ತಡೆಯಲು ಮತ್ತು ನ್ಯಾಯಯುತ ಬೆಲೆ ಖಾತ್ರಿಪಡಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಗೋಧಿ ದಾಸ್ತಾನು ಆರ್.ಎಂ.ಎಸ್. 2020-21 ಅವಧಿಗೆ 2020ರ ಏಪ್ರಿಲ್ 1ರಿಂದ ಆರಂಭವಾಗಲಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614097

ಕೋವಿಡ್-19 ಒಡ್ಡಿರುವ ಭೀತಿಯ ಹಿನ್ನೆಲೆಯಲ್ಲಿ ಕಂಪೆನಿಗಳ ಕಾಯ್ದೆ, 2013 ರ ಅಡಿಯಲ್ಲಿ ಕಂಪೆನಿಗಳು ಸಾಮಾನ್ಯ ಮತ್ತು ವಿಶೇಷ ನಿರ್ಣಯಗಳನ್ನು ಅಂಗೀಕಾರ ಮತ್ತು ನಂತರದ ನಿಯಮಗಳ  ಬಗ್ಗೆ ಸ್ಪಷ್ಟೀಕರಣ

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614097

ಜನದಟ್ಟಣೆಯ ಪ್ರದೇಶಗಳಲ್ಲಿ ಕೋವಿಡ್ 19 ಪ್ರಸರಣ ತಡೆ ಮತ್ತು ನಿಯಂತ್ರಣಕ್ಕೆ ಸರಳ ಮಾರ್ಗಸೂಚಿ ಹೊರಡಿಸಿದ  ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ

ಸಾಂಕ್ರಾಮಿಕ ರೋಗಗಳನ್ನು ತಡೆಯಲು ವಿಶ್ವವ್ಯಾಪಿ ಬಳಸಲಾದ ನಿಮಗೆ ನೀವೇ ಮಾಡಿ (ಡೂ ಇಟ್ ಯುವರ್ ಸೆಲ್ಫ್) - ಕೈ ತೊಳೆಯುವ ಕೇಂದ್ರಗಳನ್ನು ತ್ವರಿತವಾಗಿ ಸ್ಥಾಪಿಸಲು ಈ ಮಾರ್ಗಸೂಚಿ ಪ್ರಸ್ತಾಪಿಸುತ್ತದೆ. ಪಿಎಸ್ಎ ಕಚೇರಿಯಲ್ಲಿ ತಂಡವು ರೂಪಿಸಿದ ಕೈಪಿಡಿ, ಮಿತವ್ಯಯದ ಆದರೆ ಪರಿಣಾಮಕಾರಿ ಸಾಧನಗಳು ಹೇಗೆ  ಧನಾತ್ಮಕ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಪ್ರಕಟಿಸಿದೆ. ಇವುಗಳನ್ನು ಮತ್ತು ಇತರ ಕ್ರಮಗಳನ್ನು ಜಾರಿಗೆ ತರಲು ಸಮುದಾಯದ ಮುಖಂಡರು, ಎನ್‌.ಜಿಒಗಳು, ಸಾಂಸ್ಥಿಕ ಸಂಸ್ಥೆ ಇತ್ಯಾದಿಗಳನ್ನು ಪ್ರೊ.ರಾಘವನ್ ಕೋರಿದ್ದಾರೆ. ನೈರ್ಮಲ್ಯ ಮತ್ತು ಆರೋಗ್ಯಕರ ಅಭ್ಯಾಸಗಳಿಗೆ ಒತ್ತು ನೀಡುವುದು ಮತ್ತು ಪ್ರಮುಖ ಮಧ್ಯಸ್ಥಿಕೆಗಳನ್ನು ಸೂಚಿಸುವುದು ಉದ್ದೇಶಿತ ಕ್ರಮಗಳ ಪ್ರಮುಖ ಗುರಿಯಾಗಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614054

ಕೋವಿಡ್ 19 ಮಾದರಿ ಸಂಗ್ರಹಣೆಗೆ ಕಿಯೋಸ್ಕ್ ಅಭಿವೃದ್ಧಿಪಡಿಸಿದ ಡಿ.ಆರ್.ಡಿ.ಓ.

ಹೈದರಾಬಾದ್‌ನ ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ವೈದ್ಯರೊಂದಿಗೆ ಸಮಾಲೋಚಿಸಿ ಡಿಆರ್‌.ಡಿಎಲ್ ಈ ಘಟಕವನ್ನು ಅಭಿವೃದ್ಧಿಪಡಿಸಿದೆ. ಕೋವ್ ಸಾಕ್ ಎಂಬ ಇದು ಆರೋಗ್ಯ ಕಾರ್ಯಕರ್ತರು ಶಂಕಿತ ಸೋಂಕಿತ ರೋಗಿಗಳಿಂದ ಕೋವಿಡ್-19 ಮಾದರಿಗಳನ್ನು ತೆಗೆದುಕೊಳ್ಳಲು ಬಳಸುವ ಕಿಯೋಸ್ಕ್ ಆಗಿದೆ. ತಪಾಸಣೆಯಲ್ಲಿರುವ ರೋಗಿಯು ಕಿಯೋಸ್ಕ್ ಗೆ ಬಂದಾಗ, ಮೂಗಿನ ಅಥವಾ ಗಂಟಲ ದ್ರವವನ್ನು ಆರೋಗ್ಯ ವೃತ್ತಿಪರರು ಹೊರಗಿನಿಂದಲೇ ಒಳಗಿರುವ ಕೈಗವಸುಗಳ ಮೂಲಕ ತೆಗೆದುಕೊಳ್ಳುತ್ತಾರೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614372

ದೇಶದಲ್ಲಿ ಕೋವಿಡ್ 19 ಪ್ರಸರಣದ ತಡೆಗೆ ಗ್ರಾಮ ಪಂಚಾಯ್ತಿಗಳು ಹಲವು ಕ್ರಮಗಳನ್ನು ಕೈಗೊಂಡಿವೆ

ಅಂತರ್ಜಾಲ ತಾಣಗಳು, ಸಾಮಾಜಿಕ ಮಾಧ್ಯಮ, ಬಿತ್ತಿಪತ್ರಗಳು ಮತ್ತು ಪೋಸ್ಟರ್ ಗಳ ಮೂಲಕ ಜಾಗೃತಿ ಮೂಡಿಸುವುದು ಮತ್ತು ಸೋಂಕು ನಾಶಮಾಡುವ ಸಿಂಪರಣೆ, ಗ್ರಾಮಸ್ಥರಿಗೆ ಸ್ಥಳೀಯವಾಗಿ ತಯಾರಿಸಲಾದ ಮುನ್ನೆಚ್ಚರಿಕೆ ಸಾಧನಗಳ ವಿತರಣೆ, ಅಗತ್ಯ ಇರುವವರಿಗೆ ಉಚಿತ ಪಡಿತರ ಮತ್ತು ಆರ್ಥಿಕ ನೆರವು ಮತ್ತು ಅವಶ್ಯಕ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸುವಂಥ ಉತ್ತಮ ರೂಢಿಗಳನ್ನು ಅಳವಡಿಸಿಕೊಂಡಿವೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614379

ಕೋವಿಡ್ 19 ಸಾಂಕ್ರಾಮಿಕ ತಡೆಗಟ್ಟಲು ಪಿಸಿಎಂಸಿಯಿಂದ ಕಾರ್ಯತಂತ್ರ ಮತ್ತು ಪರಿಹಾರ

ಪಿಂಪ್ರಿ ಚಿಂಚ್‌ ವಾಡ್ ಮುನ್ಸಿಪಲ್ ಕಾರ್ಪೊರೇಷನ್ ತ್ಯಾಜ್ಯ ನಿರ್ವಹಣೆ ಮತ್ತು ನೈರ್ಮಲ್ಯ ಸೇವೆಗಳಲ್ಲಿ ಅನೂಹ್ಯ ಉತ್ತಮ ಪ್ರದರ್ಶನ ನೀಡಿದೆ. ತೀರಾ ಇತ್ತೀಚೆಗೆ, ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರತಿಕ್ರಿಯೆಯಲ್ಲಿ ಪಿಸಿಎಂಸಿ ತ್ವರಿತ ಮತ್ತು ಜಾಗರೂಕತೆಯಿಂದ ನಿರ್ವಹಣೆಯಿಂದ ಗಮನ ಸೆಳೆದಿದೆ. ವೈರಾಣು ಹರಡುವುದನ್ನು ತಡೆಯಲು ಸಿಎಂ.ಸಿ. ಹಲವಾರು ನವೀನ ಮತ್ತು ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614054

ಫಿಟ್ ಇಂಡಿಯಾ ಮತ್ತು ಸಿಬಿಎಸ್ಇ ಲಾಕ್ ಡೌನ್ 2ರ ಅವಧಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಪ್ರಥಮ ಬಾರಿಗೆ ನೇರ ಸದೃಢತೆ ತರಗತಿಯನ್ನು  ನಡೆಸುತ್ತಿದೆ

ಫಿಟ್ ಇಂಡಿಯಾ ಪ್ರಾರಂಭಿಸಿದ ಫಿಟ್ ಇಂಡಿಯಾ ಸಕ್ರಿಯ ದಿನ ಕಾರ್ಯಕ್ರಮದಡಿ ಲೈವ್ ಫಿಟ್‌ ನೆಸ್ ತರಗತಿಗಳಿಗೆ ಭಾರಿ ಪ್ರತಿಕ್ರಿಯೆ ದೊರೆತ ನಂತರ, ಭಾರತ ಸರ್ಕಾರದ ಪ್ರಮುಖ ಫಿಟ್‌ ನೆಸ್ ಆಂದೋಲನವು ಮತ್ತೆ ಹೊಸ ಫಿಟ್‌ ನೆಸ್ ತರಗತಿಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಈ ಬಾರಿ ಇದನ್ನು ದೇಶಾದ್ಯಂತದ ಶಾಲಾ ಮಕ್ಕಳಿಗೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಸಹಭಾಗಿತ್ವದಲ್ಲಿ ಆಯೋಜಿಸಲಾಗುವುದು. ಆರೋಗ್ಯವಾಗಿರಲು ಆಯುಷ್ ಸಚಿವಾಲಯದ ಕಾರ್ಯಕ್ರಮದ ಮಾರ್ಗಸೂಚಿಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಲಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614338

ತಲುಪದವರ ಮನೆ ಬಾಗಿಲಿಗೆ ಪರಿಣಾಮಕಾರಿ ಶಾಲಾ ಶಿಕ್ಷಣವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಎಚ್‌ಆರ್‌.ಡಿ ಸಚಿವಾಲಯದ ಎನ್‌ಐಒಎಸ್ ಒಂದು ವಿಶಿಷ್ಟವಾದ ವಿಧಾನವನ್ನು ಪ್ರಾರಂಭಿಸುತ್ತದೆ

ಕೋವಿಡ್ -19 ರ ಹಿನ್ನೆಲೆಯಲ್ಲಿ, ಸ್ವಯಂ ಪ್ರಭಾ ಡಿಟಿಎಚ್ ಚಾನೆಲ್‌ ಗಳ ಮೂಲಕ ಕೆವಿಎಸ್, ಎನ್‌ ವಿಎಸ್ ಮತ್ತು ಸಿಬಿಎಸ್‌ಇ ಮತ್ತು ಎನ್‌.ಸಿಇಆರ್‌ಟಿ ಸಹಯೋಗದೊಂದಿಗೆ ಸ್ಕೈಪ್ ಮೂಲಕ ನೇರ ತರಗತಿಗಳ ಪ್ರಸಾರದಲ್ಲಿ ಎನ್‌ಐಒಎಸ್ ಮಾಡಿದ ಆವಿಷ್ಕಾರಗಳು.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614299

1.10 ಲಕ್ಷ ಐಎಸ್.ಓ 3ನೇ ದರ್ಜೆಯ ನಿಲುವಂಗಿಗಳನ್ನು ಉತ್ಪಾದಿಸುತ್ತಿರುವ ಓ.ಎಫ್.ಬಿ.

ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ (ಓಎಫ್.ಬಿ.) ಐಎಸ್.ಓ. ದರ್ಜೆ 3ರ ದೃಢೀಕೃತ ಗುಣಮಟ್ಟದ ನಿಲುವಂಗಿಗಳ ಪೂರೈಕೆಯನ್ನು ಆರಂಭಿಸಿದೆ.  ಎಚ್.ಎಲ್.ಎಲ್. ಲೈಫ್ ಕೇರ್ ಲಿಮಿಟೆಡ್ 1.10 ಲಕ್ಷ ಪ್ರಾಥಮಿಕ ಬೇಡಿಕೆ ಪೂರೈಕೆಗೆ ಭರದಿಂದ ಉತ್ಪಾದನೆ ಮಾಡುತ್ತಿದೆ. ಈ ಬೇಡಿಕೆ 40 ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614292

ಪ್ರವಾಸೋದ್ಯಮ ಸಚಿವಾಲಯದಿಂದ ದೇಖೋ ಅಪ್ನಾ ದೇಶ್ ವೆಬಿನರ್ ಸರಣಿ ಇಂದಿನಿಂದ ಆರಂಭ

ಪ್ರವಾಸೋದ್ಯಮ ಸಚಿವಾಲಯ ಹಲವು ತಾಣಗಳ ಅನೂಹ್ಯ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಸಂಪೂರ್ಣ ಆಳ ಮತ್ತು ವಿಸ್ತಾರಗಳ ಬಗ್ಗೆ ಮಾಹಿತಿ ನೀಡಲು ದೇಖೋ ಆಪ್ನಾ ದೇಶ್ ವೆಬಿನರ್ ಸರಣಿಯನ್ನು ಇಂದಿನಿಂದ ಆರಂಭಿಸಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614342

ರೈತರಿಗೆ ತಡೆರಹಿತವಾಗಿ ಯೂರಿಯಾ ರಸಗೊಬ್ಬರ ಲಭ್ಯತೆಗೆ ಎನ್.ಎಫ್.ಎಲ್. ವ್ಯವಸ್ಥೆ

ಕೋವಿಡ್ -19 ರಾಷ್ಟ್ರವ್ಯಾಪಿ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ರಸಗೊಬ್ಬರ ನಿಯಮಿತ – ಎನ್.ಎಫ್.ಎಲ್ ಸೂಕ್ತ ಪ್ರಮಾಣದ ರಸಗೊಬ್ಬರವನ್ನು ರೈತ ಸಮುದಾಯಕ್ಕೆ ಸಂಪೂರ್ಣ ಸಾಮರ್ಥ್ಯದೊಂದಿಗೆ ಪೂರೈಸಲಿದೆ.

ಹೆಚ್ಚಿನ ವಿವರಗಳಿಗೆ: https://pib.gov.in/PressReleseDetail.aspx?PRID=1614318

 

ಪಿಐಬಿ ಕ್ಷೇತ್ರೀಯ ಕಚೇರಿಗಳ ವರದಿ

  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ಹೊಲೊಂಗಿ ಚೆಕ್ ಪೋಸ್ಟ್ ಪ್ರದೇಶದ ಮೂಲಕ ಅಕ್ರಮವಾಗಿ ಪ್ರವೇಶಿಸಿದ ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಗಾಗಿ ಕಳುಹಿಸಲಾಗಿದೆ ಮತ್ತು ನಂತರ ದಿಗ್ಬಂಧಿಸಲಾಗಿದೆ.
  • ಅಸ್ಸಾಂ: ಅಸ್ಸಾಂನಲ್ಲಿ, ಐಐಟಿ ಗುವಾಹಟಿಯ ತಂಡವು ಪಿಪಿಇ ಕಿಟ್‌ಗಳಿಗಾಗಿ ಆಂಟಿಮೈಕ್ರೊಬಿಯಲ್ ಸ್ಪ್ರೇ ಆಧಾರಿತ ಲೇಪನವನ್ನು ಅಭಿವೃದ್ಧಿಪಡಿಸಿದ್ದು, ಈ ಲೇಪಿತ ಪಿಪಿಇ ಮೇಲ್ಮೈಯೊಂದಿಗೆ ಸಂಪರ್ಕಕ್ಕೆ ಬಂದ ನಂತರ ಸೂಕ್ಷ್ಮಜೀವಿಗಳ ಹರಡುವಿಕೆಯನ್ನು ತಡೆಯುತ್ತವೆ.
  • ಮಣಿಪುರ: ಎಲ್ಲಾ ಜಿಲ್ಲೆಗಳಲ್ಲಿ ಪಿಎಂಜಿಕೆವೈ ಅಡಿಯಲ್ಲಿ ಸಾರ್ವಜನಿಕರಿಗೆ ಅಕ್ಕಿ ವಿತರಣೆಯನ್ನು ಮುಖ್ಯಮಂತ್ರಿ ಪರಿಶೀಲಿಸಿದರು.
  • ಮಿಜೋರಾಂ: ಐಎಎಫ್ ಡಾರ್ನಿಯರ್ ವಿಮಾನದಿಂದ 32 ಕೆಜಿ ಐಸಿಎಂಆರ್ ಪರೀಕ್ಷಾ ಕಿಟ್‌ಗಳು ಇಂದು ಆಗಮಿಸಿದ್ದು, ಮಿಜೋರಾಂನ ಐಸ್ ವಾಲ್ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಗಿದೆ.
  • ನಾಗಾಲ್ಯಾಂಡ್: ಒಂಬತ್ತು ವಿರೋಧ ಪಕ್ಷದ ಶಾಸಕರನ್ನು ನಾಗಾಲ್ಯಾಂಡ್‌ನಲ್ಲಿ ಕೋವಿಡ್-19 ಮಾನಿಟರಿಂಗ್ ತಂಡದ ಭಾಗವಾಗಿ ಮಾಡಲಾಗಿದೆ. ಸಂಪರ್ಕ ಪತ್ತೆಹಚ್ಚಲು ಅನುಕೂಲವಾಗುವಂತೆ ನಾಗಾಲ್ಯಾಂಡ್‌ ನ ಮೊದಲ ಕೋವಿಡ್-19 ರೋಗಿಯ ಗುರುತನ್ನು ಬಹಿರಂಗಪಡಿಸುವುದು ಅಗತ್ಯ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
  • ಸಿಕ್ಕಿಂ: 2020 ರ ಮೇ 3 ರವರೆಗೆ ಲಾಕ್‌ ಡೌನ್ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ, ಏಪ್ರಿಲ್ 20 ರ ನಂತರ ಅದು ವಿನಾಯಿತಿ ಬಗ್ಗೆ ಪರಿಶೀಲಿಸಬಹುದು.
  • ತ್ರಿಪುರ: ಲಾಕ್‌ ಡೌನ್ ಹಿಂತೆಗೆದುಕೊಂಡ ನಂತರ ಸರ್ಕಾರ ಮಾಡಬೇಕಾದ ಕೆಲಸಗಳ ಕುರಿತಂತೆ ಹಂಚಿಕೊಳ್ಳಲು ಜನರನ್ನು ಕೇಳಿದ್ದ ಮುಖ್ಯಮಂತ್ರಿ 6000 ಸಲಹೆಗಳನ್ನು ಸ್ವೀಕರಿಸಿದ್ದಾರೆ.
  • ಕೇರಳ: ರಾಜ್ಯ ಸರ್ಕಾರಗಳ ಆರ್ಥಿಕ ಅಗತ್ಯಗಳನ್ನು ಪೂರೈಸಲು ಆರ್‌.ಬಿಐ ಮೂಲಕ ರಾಜ್ಯಗಳಿಗೆ ಸಾಲ ಮಂಜೂರು ಮಾಡಲು ರಾಜ್ಯ ಹಣಕಾಸು ಸಚಿವರು ಕೇಂದ್ರವನ್ನು ಕೋರಿದ್ದಾರೆ. ಹೊಸ ಮಾರ್ಗಸೂಚಿಗಳನ್ನು ನೀಡುವವರೆಗೆ ಪ್ರಸ್ತುತ ನಿರ್ಬಂಧಗಳನ್ನು ಮುಂದುವರಿಸಲು ರಾಜ್ಯ ನಿರ್ಧಿರಿಸಿದೆ. ನಿನ್ನೆ ಸಂಜೆ ತನಕ, ಒಟ್ಟು 197 ಮಂದಿ ಗುಣಮುಖರಾಗಿದ್ದಾರೆ; ಚಿಕಿತ್ಸೆ ಪಡೆಯುತ್ತಿರುವವರು 178; ನಿಗಾದಲ್ಲಿರುವವರು 1,12,183.
  • ತಮಿಳುನಾಡು: ಸ್ಥಳೀಯರು ಪ್ರತಿಭಟನೆ ನಡುವೆ ಬಿಗಿ ಭದ್ರತೆಯಲ್ಲಿ ಕೋವಿಡ್‌ ನಿಂದ ಮೃತಪಟ್ಟ ನೆಲ್ಲೂರು ವೈದ್ಯರ ಮೃತದೇಹದ ಅಂತ್ಯಕ್ರಿಯೆ ಚೆನ್ನೈನಲ್ಲಿ ನಡೆಯಿತು. ಚೆನ್ನೈ ನಗರಪಾಲಿಕೆ ಬುಧವಾರದಿಂದ ನಿವಾಸಿಗಳನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಮಾಸ್ಕ್ ಧರಿಸದವರ ವಾಹನಗಳನ್ನು ಚೆನ್ನೈ ಪೊಲೀಸರು  ವಶಪಡಿಸಿಕೊಳ್ಳುತ್ತಿದ್ದಾರೆ. ಒಟ್ಟು ಸೋಂಕಿತ ಪ್ರಕರಣಗಳು ಇಲ್ಲಿಯವರೆಗೆ 1173; ಗುಣವಾದವರು 58; ಸಾವು11.
  • ಕರ್ನಾಟಕ: ಇಲ್ಲಿಯವರೆಗೆ 11 ಹೊಸ ಪ್ರಕರಣಗಳು. ಒಟ್ಟು ಕೋವಿಡ್ ಸೋಂಕಿತರು 258; ಸಾವಿನ ಸಂಖ್ಯೆ 9 ತಲುಪಿದೆ; ಗುಣವಾಗಿ ಬಿಡುಗಡೆ ಆದ ರೋಗಿಗಳ ಸಂಖ್ಯೆ 65.
  • ಆಂಧ್ರಪ್ರದೇಶ: ರಾಜ್ಯ ಹತ್ತನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ; ವಿದ್ಯಾರ್ಥಿಗಳು ಆನ್‌ ಲೈನ್ ತರಗತಿಗಳನ್ನು ಕಲಿಯಲು ಸಲಹೆ ನೀಡಲಾಗಿದೆ. ಅನಂತಪುರದ ಗೂಟಿಯಲ್ಲಿರುವ ದಿಗ್ಭಂಧನ ಕೇಂದ್ರದಲ್ಲಿ ವಲಸೆ ಕಾರ್ಮಿಕರು ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳು 473 ತಲುಪಿವೆ; ಸಾವಿನ ಸಂಖ್ಯೆ 9; ಗುಣವಾದವರು 14. ಸೋಂಕಿನ ಪ್ರಕರಣಗಳಲ್ಲಿ ಪ್ರಮುಖವಾಗಿರುವ ಜಿಲ್ಲೆಗಳು: ಗುಂಟೂರು (109), ಕರ್ನೂಲ್ (91), ನೆಲ್ಲೂರು (56), ಪ್ರಕಾಶಂ (42), ಕೃಷ್ಣ (44), ಕಡಪಾ (31).
  • ತೆಲಂಗಾಣ: ನಗರದ 126 ಬಡಾವಣೆಗಳನ್ನು ನಿಗ್ರಹ ಸಮೂಹಗಳಾಗಿ ಗುರುತಿಸಲಾಗುತ್ತಿದೆ. ಲಾಕ್‌ ಡೌನ್ ವಿಸ್ತರಿಸಿದ ನಂತರ ವಲಸೆ ಕಾರ್ಮಿಕರು ಹೈದರಾಬಾದ್ ನಗರ ತೊರೆಯಲು ಪ್ರಯತ್ನಿಸುತ್ತಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳು 592 ಕ್ಕೆ ಏರಿದೆ, ಅದರಲ್ಲಿ 103 ಜನರು ಗುಣಮುಖರಾಗಿದ್ದು, 472 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
  • ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ 121 ಹೊಸ ಕರೋನವೈರಾಣು ದೃಢಪಟ್ಟ ಪ್ರಕರಣಗಳು ವರದಿಯಾಗಿವೆ; ರಾಜ್ಯದ ಸೋಂಕಿತರ ಸಂಖ್ಯೆ 2,455 ಕ್ಕೆ ಏರಿದೆ. ಮಂಗಳವಾರ ವರದಿಯಾದ ಹೊಸ ಪ್ರಕರಣಗಳಲ್ಲಿ 92 ಮುಂಬೈ ಮೂಲದವರು, 13 ಮಂದಿ ನವೀ ಮುಂಬಯಿಯವರು, ಥಾಣೆ ನಗರದ 10 ಮಂದಿ, ವಾಸೈ-ವಿರಾರ್‌ ನ ಐದು ಮತ್ತು ಒಬ್ಬರು ರಾಯಗಡದವರಾಗಿದ್ದಾರೆ.
  • ಗುಜರಾತ್: ರಾಜ್ಯವು 45 ಹೊಸ ಕೋವಿಡ್ -19 ಸೋಂಕಿನ ಪ್ರಕರಣಗಳು ದಾಖಲಾಗಿವೆ, ಒಟ್ಟು ಸೋಂಕಿತರ ಸಂಖ್ಯೆ 617 ಕ್ಕೆ ಏರಿದೆ. ಇದರಲ್ಲಿ 31 ಅಹಮದಾಬಾದ್, ಸೂರತ್ 9, ಮೆಹಸಾನಾ 2 ಮತ್ತು ಭಾವ್ ನಗರ್, ದಹೂದ್ ಮತ್ತು ಗಾಂಧಿನಗರ್ ತಲಾ 1 (ಪ್ರಧಾನ ಕಾರ್ಯದರ್ಶಿ, ಆರೋಗ್ಯ)
  • ರಾಜಸ್ಥಾನ: ರಾಜಸ್ಥಾನದಲ್ಲಿ ಇದುವರೆಗೆ 72 ಹೊಸ ಪ್ರಕರಣಗಳು ವರದಿಯಾಗಿದ್ದು, ಜೈಪುರದಲ್ಲಿ 71 ಮತ್ತು ಜುನಿಹುನು 1 ಪ್ರಕರಣಗಳು ಸೇರಿವೆ. ರಾಜಸ್ಥಾನ ಆರೋಗ್ಯ ಇಲಾಖೆಯ ಪ್ರಕಾರ ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 969 ಕ್ಕೆ ಏರಿದೆ
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ 1171 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಒಂದೇ ದಿನ 126 ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 98 ಮಂದಿ ಇಂದೋರ್ ಮೂಲದವರು, 20 ಮಂದಿ ಭೋಪಾಲ್ ಮೂಲದವರು. ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 730 ಆಗಿದೆ.
  • ಗೋವಾ: ಗೋವಾದಲ್ಲಿ ಇಂದು ಬೆಳಗ್ಗೆ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಸಕ್ರಿಯ ಪ್ರಕರಣಗಳ ಸಂಖ್ಯೆ 2. ವರದಿಯಾದ 7 ಸೋಂಕಿನ ಪ್ರಕರಣಗಳಲ್ಲಿ ಐದು ರೋಗಿಗಳು ಈಗಾಗಲೇ ಚೇತರಿಸಿಕೊಂಡಿದ್ದಾರೆ.

 

Fact Check on #Covid19

 https://pbs.twimg.com/profile_banners/231033118/1584354869/1500x500

***


(Release ID: 1614679) Visitor Counter : 383