ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ – 19 ಅಪ್ ಡೇಟ್ಸ್

Posted On: 14 APR 2020 5:02PM by PIB Bengaluru

ಕೋವಿಡ್ – 19 ಅಪ್ ಡೇಟ್ಸ್

 

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗಿನ ಸಾಮೂಹಿಕ ಪ್ರಯತ್ನದ ಮೂಲಕ ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಇಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ಏಳು ಅಂಶಗಳನ್ನು ಅನುಸರಿಸಲು ನಾಗರಿಕರ ಬೆಂಬಲ ಕೋರಿದ್ದಾರೆ:

  1. ನಿಮ್ಮ ಮನೆಯಲ್ಲಿ ವಯಸ್ಸಾದವರ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಿ, ವಿಶೇಷವಾಗಿ ದೀರ್ಘಕಾಲದಿಂದ ಖಾಯಿಲೆ ಇರುವವರು.
  2. ಲಾಕ್ಡೌನ್ ಕ್ರಮಗಳು ಮತ್ತು ಸಾಮಾಜಿಕ ಅಂತರವನ್ನು ಸಂಪೂರ್ಣವಾಗಿ ಅನುಸರಿಸಿ. ಮನೆಯಲ್ಲಿ ತಯಾರಿಸಿದ ಮುಖಗವಸುಗಳನ್ನು ಮರೆಯದೇ ಬಳಸಿ.
  3. ಬೆಚ್ಚಗಿನ ನೀರಿನಕಧಾಕಷಾಯ ಸೇವಿಸುವ ಮೂಲಕ ಆಯುಷ್ ಸಚಿವಾಲಯ ಸೂಚಿಸಿದ ಕ್ರಮಗಳ ಪ್ರಕಾರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
  4. ಕೊರೊನಾ ಸೋಂಕಿನ ಹರಡುವಿಕೆಯನ್ನು ತಡೆಯಲು ಆರೋಗ್ಯ ಸೇತು ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿರಿ.
  5. ಬಡ ಕುಟುಂಬಗಳ ಆಹಾರದ ಅವಶ್ಯಕತೆಗಳು ಪೂರೈಕೆಯಾಗುವುದನ್ನು ನೋಡಿಕೊಳ್ಳಿ.
  6. ನಿಮ್ಮ ವ್ಯಾಪಾರ ಅಥವಾ ಉದ್ಯಮದಲ್ಲಿ ಕೆಲಸ ಮಾಡುವ ಜನರು ಜೀವನೋಪಾಯವನ್ನು ಕಳೆದುಕೊಳ್ಳದಂತೆ ಸಹಾನುಭೂತಿ ಹೊಂದಿರಿ
  7. ನಮ್ಮ ರಾಷ್ಟ್ರದ ಕೊರೊನಾ ಯೋದ್ಧರು - ವೈದ್ಯರು, ದಾದಿಯರು, ಪೌರ ಕಾರ್ಮಿಕರು ಮತ್ತು ಪೊಲೀಸರಿಗೆ ಅತ್ಯಂತ ಗೌರವ ನೀಡಿ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿರಂತರವಾಗಿ ಮತ್ತು ಸತತವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ, 1,06,719 ಪ್ರತ್ಯೇಕ ಹಾಸಿಗೆಗಳು ಮತ್ತು 12,024 ಐಸಿಯು ಹಾಸಿಗೆಗಳನ್ನು ಹೊಂದಿರುವ ಒಟ್ಟು 602 ಮೀಸಲಾದ ಕೋವಿಡ್-19 ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಜನನಿಬಿಡ ಪ್ರದೇಶಗಳಲ್ಲಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಲು ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಮುದಾಯದ ಶೌಚಾಲಯಗಳು, ತೊಳೆಯುವ ಅಥವಾ ಸ್ನಾನದ ಸೌಲಭ್ಯಗಳನ್ನು ಕೇಂದ್ರೀಕರಿಸಿ ಮಿತವ್ಯಯದ ನೈರ್ಮಲ್ಯ ಮತ್ತು ನೈರ್ಮಲ್ಯ ಪರಿಹಾರಗಳನ್ನು ಮತ್ತು ಕ್ರಮಗಳನ್ನು ತರುವುದು ಈ ಕೈಪಿಡಿಯ ಮುಖ್ಯ ಉದ್ದೇಶ.

ನಿನ್ನೆಯಿಂದ 1211 ಹೆಚ್ಚುವರಿ ಹೊಸ ಪ್ರಕರಣಗಳು ಮತ್ತು 31 ಸಾವುಗಳು ವರದಿಯಾಗಿವೆ. 1036 ಜನರನ್ನು ಗುಣಪಡಿಸಲಾಗಿದೆ/ ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ.

ಕೋವಿಡ್-19 ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.

ಕೋವಿಡ್-19ರ ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1614401) Visitor Counter : 247