ಹಣಕಾಸು ಸಚಿವಾಲಯ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್: ಇದುವರೆಗಿನ ಪ್ರಗತಿ

Posted On: 13 APR 2020 4:11PM by PIB Bengaluru

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್: ಇದುವರೆಗಿನ ಪ್ರಗತಿ

 

  • ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ 32 ಕೋಟಿಗಿಂತಲೂ ಹೆಚ್ಚು ಬಡ ಜನರಿಗೆ 29,352 ಕೋಟಿ ರೂ.ಹಣಕಾಸು ನೆರವು
  • 5.29 ಕೋಟಿ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಆಹಾರ ಧಾನ್ಯಗಳ ಉಚಿತ ಪಡಿತರ ವಿತರಣೆ
  • 97.8 ಲಕ್ಷ ಉಚಿತ ಉಜ್ವಲಾ ಸಿಲಿಂಡರ್ಗಳ ವಿತರಣೆ
  • 2.1 ಲಕ್ಷ ಇಪಿಎಫ್ ಸದಸ್ಯರು ತಮ್ಮಖಾತೆಯಿಂದ ಆನ್ಲೈನ್ನಲ್ಲಿ ಮರುಪಾವತಿಸಲಾಗದ ಮುಂಗಡವನ್ನು ಹಿಂತೆಗೆದುಕೊಳ್ಳುವ ಪ್ರಯೋಜನ ಪಡೆದು 510 ಕೋಟಿ ರೂ.ಪಡೆದಿದ್ದಾರೆ.
  • ಪಿಎಂ-ಕಿಸಾನ್ ಮೊದಲ ಕಂತು: ರೂ .14,946 ಕೋಟಿ ರೂ.ಗಳನ್ನು 7.47 ಕೋಟಿ ರೈತರಿಗೆ ವರ್ಗಾಯಿಸಲಾಗಿದೆ
  • 19.86 ಕೋಟಿ ಮಹಿಳಾ ಜನ ಧನ್ ಖಾತೆದಾರರಿಗೆ 9930 ಕೋಟಿ ರೂ. ವಿತರಿಸಲಾಗಿದೆ
  • ಸುಮಾರು 2.82 ಕೋಟಿ ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ 1400 ಕೋಟಿ ರೂ.ವಿತರಣೆ
  • 2.17 ಕೋಟಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ 3071 ಕೋಟಿ ರೂ.ವಿತರಣೆ

 

ಕೋವಿಡ್-19 ಕಾರಣದಿಂದಾಗಿ ಲಾಕ್ ಡೌನ್ ಅವಧಿಯಲ್ಲಿ ಸಮಾಜದ ದುರ್ಬಲ ವರ್ಗದವರು ಅಗತ್ಯ ಮೂಲ ಸೌಕರ್ಯಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಾರ್ಚ್ 26, 2020 ರಂದು 1.70 ಲಕ್ಷ ಕೋಟಿರೂ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ಘೋಷಿಸಿದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಭಾಗವಾಗಿ, ಮಹಿಳೆಯರು ಮತ್ತು ಬಡ ಹಿರಿಯ ನಾಗರಿಕರು ಹಾಗೂ ರೈತರಿಗೆ ಉಚಿತ ಆಹಾರ ಧಾನ್ಯಗಳು ಮತ್ತು ನಗದು ಪಾವತಿಯನ್ನು ಸರ್ಕಾರ ಘೋಷಿಸಿತು. ಪ್ಯಾಕೇಜ್ ತ್ವರಿತ ಅನುಷ್ಠಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರವಾಗಿ ಗಮನಿಸುತ್ತಿವೆ. ಹಣಕಾಸು ಸಚಿವಾಲಯ, ಸಂಬಂಧಪಟ್ಟ ಸಚಿವಾಲಯಗಳು, ಸಂಪುಟ ಕಾರ್ಯದರ್ಶಿಯವರ ಕಚೇರಿ ಮತ್ತು ಪ್ರಧಾನ ಮಂತ್ರಿಯವರ ಕಾರ್ಯಾಲಯಗಳು ಪರಿಹಾರ ಕ್ರಮಗಳು ಅಗತ್ಯವಿರುವವರನ್ನು ಶೀಘ್ರವಾಗಿ ತಲುಪುವಂತೆ ಮತ್ತು ಲಾಕ್ ಡೌನ್ ಮಾಡುವ ಉದ್ದೇಶಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತಿವೆ.

ಫಿಂಟೆಕ್ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಫಲಾನುಭವಿಗೆ ಸೌಲಭ್ಯವು ತ್ವರಿತ ಮತ್ತು ಪರಿಣಾಮಕಾರಿ ವರ್ಗಾವಣೆ ಮಾಡಲು ಬಳಸಿಕೊಳ್ಳಲಾಗಿದೆ. ನೇರ ಲಾಭ ವರ್ಗಾವಣೆ, ಅಂದರೆ ನಗದನ್ನು ನೇರವಾಗಿ ಫಲಾನುಭವಿಯ ಖಾತೆಗೆ ಜಮಾ ಮಾಡಲಾಗಿದೆಯೇ ಎಂಬುದನ್ನು ವರ್ಗಾವಣೆಯು ಖಚಿತಪಡಿಸುತ್ತದೆ, ಸೋರಿಕೆಯನ್ನು ನಿವಾರಿಸುತ್ತದೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. ಫಲಾನುಭವಿಯು ಭೌತಿಕವಾಗಿ ಬ್ಯಾಂಕ್ ಶಾಖೆಗೆ ಹೋಗಬೇಕಾದ ಅಗತ್ಯವಿಲ್ಲದೆ, ಫಲಾನುಭವಿಯ ಖಾತೆಗೆ ಪಾವತಿಯನ್ನು ಖಾತ್ರಿಪಡಿಸುತ್ತದೆ.

 

 

 

 

 

 

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್

ಇದುವರೆಗಿನ ಪ್ರಗತಿ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ 32 ಕೋಟಿಗಿಂತಲೂ ಹೆಚ್ಚು ಬಡ ಜನರಿಗೆ 29,352 ಕೋಟಿ ರೂ.ಹಣಕಾಸು ನೆರವು

5.29

ಕೋಟಿ

 

ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಆಹಾರ ಧಾನ್ಯಗಳ ಉಚಿತ ಪಡಿತರ ವಿತರಣೆ

 

97.8

ಲಕ್ಷ

 

ಉಚಿತ ಉಜ್ವಲಾ ಸಿಲಿಂಡರ್ಗಳ ವಿತರಣೆ

 

2.1

ಲಕ್ಷ

 

ಇಪಿಎಫ್ ಸದಸ್ಯರು ತಮ್ಮಖಾತೆಯಿಂದ ಆನ್ಲೈನ್ನಲ್ಲಿ ಮರುಪಾವತಿಸಲಾಗದ ಮುಂಗಡವನ್ನು ಹಿಂತೆಗೆದುಕೊಳ್ಳುವ ಪ್ರಯೋಜನ ಪಡೆದು 510 ಕೋಟಿ ರೂ.ಪಡೆದಿದ್ದಾರೆ.

14,946 ಕೋ.ರೂ.

 

ಪಿಎಂ-ಕಿಸಾನ್ ಮೊದಲ ಕಂತು: 7.47 ಕೋಟಿ ರೈತರಿಗೆ ವರ್ಗಾವಣೆ

 

 

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್

ಇದುವರೆಗಿನ ಪ್ರಗತಿ

 

9930

ಕೋ. ರೂ

 

 

19.86 ಕೋಟಿ ಮಹಿಳಾ ಜನ ಧನ್ ಖಾತೆದಾರರಿಗೆ ವಿತರಣೆ

 

1400

ಕೋ.ರೂ.

 

ಸುಮಾರು 2.82 ಕೋಟಿ ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ವಿತರಣೆ

 

2.17

ಕೋಟಿ

 

 

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ

3071 ಕೋಟಿ ರೂ.ವಿತರಣೆ

 

 

 

 

 

ಏಪ್ರಿಲ್ 13, 2020 ಹೊತ್ತಿಗೆ, 32.32 ಕೋಟಿ ಫಲಾನುಭವಿಗಳಿಗೆ ಪ್ಯಾಕೇಜ್ ಅಡಿಯಲ್ಲಿ ರೂ .29,352 ಕೋಟಿ ರೂ. ಮೊತ್ತವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ನೀಡಲಾಗಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ:

ಇದುವರೆಗೆ 40 ಲಕ್ಷ ಮೆ.ಟನ್.ಗಳಲ್ಲಿ, ಏಪ್ರಿಲ್ತಿಂಗಳಿಗಾಗಿ 20.11 ಲಕ್ಷ ಮೆ.ಟನ್ ಆಹಾರ ಧಾನ್ಯಗಳನ್ನು 31 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಪಡೆದಿವೆ. 16 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು 1.19 ಕೋಟಿ ರೇಷನ್ ಕಾರ್ಡ್ಗಳ 5.29 ಕೋಟಿ ಫಲಾನುಭವಿಗಳಿಗೆ 2.65 ಲಕ್ಷ ಮೆ.ಟನ್ ಆಹಾರ ಧಾನ್ಯ ವಿತರಿಸಿವೆ.  3985 ಮೆ.ಟನ್ ದ್ವಿದಳ ಧಾನ್ಯಗಳನ್ನು ವಿವಿಧ ರಾಜ್ಯಗಳು / ಯುಟಿಗಳಿಗೆ ರವಾನಿಸಲಾಗಿದೆ.

ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ಗಳು:

ಪಿಎಂಯುವೈ ಯೋಜನೆಯಡಿ ಒಟ್ಟು 1.39 ಕೋಟಿ ಸಿಲಿಂಡರ್ಗಳನ್ನು ಕಾಯ್ದಿರಿಸಲಾಗಿದೆ ಮತ್ತು 97.8 ಲಕ್ಷ ಉಚಿತ ಸಿಲಿಂಡರ್ಗಳನ್ನು ಈಗಾಗಲೇ ಪಿಎಂಯುವೈ ಫಲಾನುಭವಿಗಳಿಗೆ ತಲುಪಿಸಲಾಗಿದೆ.

ಬಾಕಿಯಲ್ಲಿ ಶೇ.75 ಅಥವಾ 3 ತಿಂಗಳ ವೇತನದ ಮರುಪಾವತಿಸಲಾಗದ ಮುಂಗಡವನ್ನು (ಯಾವುದು ಕಡಿಮೆಯೋ ಅದನ್ನು) ಪಡೆದುಕೊಳ್ಳಲು  ಇಪಿಎಫ್ ಸದಸ್ಯರಿಗೆ ಅನುಮತಿಸಲಾಗಿದೆ:

ಇಪಿಎಫ್ಓದ 2.1 ಲಕ್ಷ ಸದಸ್ಯರು ಆನ್ಲೈನ್ನಲ್ಲಿ 510 ಕೋಟಿ ರೂ.ಗಳನ್ನು ಹಿಂಪಡೆದಿದ್ದಾರೆ.

3 ತಿಂಗಳವರೆಗೆ ಇಪಿಎಫ್ ಕೊಡುಗೆ - 100 ಕಾರ್ಮಿಕರವರೆಗೆ ಇರುವ ಕಂಪನಿಗಳಲ್ಲಿ ತಿಂಗಳಿಗೆ 15000 ರೂ.ಗಿಂತ ಕಡಿಮೆ ವೇತನವನ್ನು ಪಡೆಯುವ ಇಪಿಎಫ್ ಸದಸ್ಯರಿಗೆ ವೇತನದ ಶೇ.24 ರಷ್ಟನ್ನು ಕೊಡುಗೆಯಾಗಿ ಪಾವತಿಸುವುದು.

2020 ಏಪ್ರಿಲ್ ತಿಂಗಳಿನ ಯೋಜನೆಗಾಗಿ ಈಗಾಗಲೇ 1000 ಕೋಟಿ ರೂ.ಗಳನ್ನು ಇಪಿಎಫ್ಒಗೆ ಬಿಡುಗಡೆ ಮಾಡಲಾಗಿದೆ. 78.74 ಲಕ್ಷ ಫಲಾನುಭವಿಗಳು ಮತ್ತು ಸಂಬಂಧಪಟ್ಟ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. ಪ್ರಕಟಣೆಯನ್ನು ಕಾರ್ಯಗತಗೊಳಿಸುವ ಯೋಜನೆ ಅಂತಿಮಗೊಂಡಿದೆ. ಇದಕ್ಕೆ ಸಂಬಂದಧಿಸಿದ FAQ ಅನ್ನು ವೆಬ್ಸೈಟ್ನಲ್ಲಿ ನೀಡಲಾಗಿದೆ.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MNREGA):

01-04-2020 ರಿಂದ ಅನ್ವಯವಾಗುವಂತೆ ಹೆಚ್ಚಿದ ದರವನ್ನು ಪ್ರಕಟಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, 19.56 ಲಕ್ಷ ವ್ಯಕ್ತಿಗಳ ಮಾನವ-ದಿನಗಳ ಕೆಲಸ ನಡೆಸಲಾಗಿದೆ. ಇದಲ್ಲದೆ, ವೇತನ ಮತ್ತು ಸಾಮಗ್ರಿಗಳ ಬಾಕಿ ಪಾವತಿಗಾಗಿ ರಾಜ್ಯಗಳಿಗೆ 7100 ಕೋಟಿ ರೂ.ಬಿಡುಗಡೆ ಮಾಡಲಾಗಿದೆ.

ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳ ಆರೋಗ್ಯ ಕಾರ್ಯಕರ್ತರಿಗೆ ವಿಮಾ ಯೋಜನೆ:

ಯೋಜನೆಯನ್ನು ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯು ಅನುಷ್ಠಾನಗೊಳಿಸುತ್ತಿದೆ. ಇದು 22.12 ಲಕ್ಷ ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡಿದೆ.

ರೈತರಿಗೆ ಬೆಂಬಲ:

ಒಟ್ಟು ವಿತರಣೆಯಲ್ಲಿ, 14,946 ಕೋಟಿ ರೂ. ಪಿಎಂ-ಕಿಸಾನ್ ಮೊದಲ ಕಂತಿನ ಪಾವತಿಯಾಗಿದೆ. ಯೋಜನೆಯಡಿಯಲ್ಲಿ, ಗುರುತಿಸಲ್ಪಟ್ಟ 8 ಕೋಟಿ ಫಲಾನುಭವಿಗಳಲ್ಲಿ ಸುಮಾರು 7.47 ಕೋಟಿ ಫಲಾನುಭವಿಗಳು ನೇರವಾಗಿ ತಮ್ಮ ಖಾತೆಯಲ್ಲಿ 2,000 ರೂ.ಪಡೆದಿದ್ದಾರೆ.

ಪಿಎಂಜೆಡಿವೈ ಮಹಿಳಾ ಖಾತೆದಾರರಿಗೆ ಬೆಂಬಲ:

ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಕುಟುಂಬಗಳನ್ನು ಮಹಿಳೆಯರೇ ನಿರ್ವಹಿಸುತ್ತಿರುವುದರಿಂದ, ಪ್ಯಾಕೇಜ್ ಅಡಿಯಲ್ಲಿ, 19.86 ಕೋಟಿ ಮಹಿಳಾ ಜನ ಧನ್ ಖಾತೆದಾರರು ತಮ್ಮ ಖಾತೆಯಲ್ಲಿ ತಲಾ 500 ರೂ.ಪಡೆದಿದ್ದಾರೆ. 2020 ಏಪ್ರಿಲ್ 13 ಹೊತ್ತಿಗೆ, ಒಟ್ಟು ವಿತರಣೆ, 9 9,930 ಕೋಟಿ.ರೂ.ಗಳು.

ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಬೆಂಬಲ:

ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (ಎನ್ಎಸ್ಎಪಿ)   ಅಡಿಯಲ್ಲಿ ಸುಮಾರು 4 1,400 ಕೋಟಿ ರೂ.ಗಳನ್ನು ಸುಮಾರು 2.82 ಕೋಟಿ ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ವಿತರಿಸಲಾಗಿದೆ. ಪ್ರತಿ ಫಲಾನುಭವಿಯು ಯೋಜನೆಯಡಿ ಮೊದಲ ಕಂತಿನ 500 ರೂ. ಪಡೆದಿದ್ದು, ಇವರಿಗೆ ಮುಂದಿನ ತಿಂಗಳಲ್ಲಿ ತಲಾ 500 ರೂ.ಗಳ ಮತ್ತೊಂದು ಕಂತು ಪಾವತಿಸಲಾಗುವುದು.

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಬೆಂಬಲ:

ರಾಜ್ಯ ಸರ್ಕಾರಗಳು ನಿರ್ವಹಿಸುವ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ನಿಧಿಯಿಂದ 2.17 ಕೋಟಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಹಣಕಾಸಿನ ನೆರವು ಪಡೆದಿದ್ದಾರೆ. ಇದರ ಅಡಿಯಲ್ಲಿ 3,071 ಕೋಟಿ ರೂ.ಗಳನ್ನು ವಿತರಿಸಲಾಗಿದೆ.

 

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್

13/04/2020 ರವರೆಗೆ ಒಟ್ಟು ನೇರ ಲಾಭ ವರ್ಗಾವಣೆ

ಯೋಜನೆ

ಫಲಾನುಭವಿಗಳ ಸಂಖ್ಯೆ

ಮೊತ್ತ

ಪಿಎಂಜೆಡಿವೈ ಮಹಿಳಾ ಖಾತೆದಾರರಿಗೆ ಬೆಂಬಲ

19.86 ಕೋಟಿ (97%)

9930 ಕೋ.ರೂ.

ಎನ್ಎಸ್ಎಪಿ ಬೆಂಬಲ (ವಿಧವೆಯರು, ದಿವ್ಯಾಂಗರು, ಹಿರಿಯ ನಾಗರಿಕರು)

2.82 ಕೋಟಿ (100%)

1405 ಕೋ.ರೂ.

ಪಿಎಂ-ಕಿಸಾನ್ ಅಡಿ ರೈತರಿಗೆ ಪಾವತಿ

7.47 ಕೋಟಿ

(8 ಕೋಟಿಯಲ್ಲಿ)

14,946 ಕೋ.ರೂ.

ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಬೆಂಬಲ

2.17 ಕೋಟಿ

3071 ಕೋ.ರೂ.

ಒಟ್ಟು

32.32 ಕೋಟಿ

29,352 ಕೋ.ರೂ.

 

***(Release ID: 1614150) Visitor Counter : 341