ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಅಪ್ ಡೇಟ್ಸ್

Posted On: 12 APR 2020 6:38PM by PIB Bengaluru

ಕೋವಿಡ್-19 ಅಪ್ ಡೇಟ್ಸ್
 

ಕೋವಿಡ್ – 19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ, ದೇಶದಲ್ಲಿ ಕೋವಿಡ್ – 19 ವಿರುದ್ಧ ಹೋರಾಡಲು ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳ ಜೊತೆಗೂಡಿ ಭಾರತ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಮತ್ತು  ಅತಿ ಹೆಚ್ಚಿನ ನಿಗಾ ಇರಿಸಲಾಗಿದೆ.  

ತುರ್ತಾಗಿ ದೇಶದ ಎಲ್ಲ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ  ಕೋವಿಡ್ – 19 ರ ಪರೀಕ್ಷೆ ಸಾಮರ್ಥ್ಯ ಹೆಚ್ಚಿಸಲು, ದೇಶಾದ್ಯಂತದ ಎಲ್ಲ ಶ್ರೇಷ್ಠ ಸಂಸ್ಥೆಗಳಿಗೆ ಜವಾಬ್ದಾರಿಯನ್ನು ಸಮನಾಗಿ ವಿತರಿಸಲು ನಿರ್ದೇಶಿಸಲಾಗಿದೆ.  ಈ ಸಂಸ್ಥೆಗಳು ನಿಗದಿತ ಪ್ರದೇಶದ ವೈದ್ಯಕೀಯ ಕಾಲೇಜುಗಳಿಗೆ ಮಾರ್ಗದರ್ಶಕರಂತೆ ಕಾರ್ಯನಿರ್ವಹಿಸುವುದಾಗಿಯೂ ಮತ್ತು ಆಯಾ ರಾಜ್ಯಗಳಲ್ಲಿ ಕೋವಿಡ್ – 19 ಪರೀಕ್ಷಾ ಸೌಲಭ್ಯಗಳ ಆರಂಭಕ್ಕೆ ನೆರವಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಈ ಎಲ್ಲ ಸಂಸ್ಥೆಗಳಿಗೆ ರಾಜ್ಯ ಸರ್ಕಾರಗಳೊಂದಿಗೆ ಸಮನ್ಯಯತೆಯಿಂದ  ಕಾರ್ಯನಿರ್ವಹಿಸುವಂತೆ ನಿರ್ದೇಶಿಸಲಾಗಿದೆ.      

ನಿನ್ನೆಯಿಂದ ದೇಶದಲ್ಲಿ ಕೋವಿಡ್ – 19 ಖಚಿತಗೊಂಡ ಪ್ರಕರಣಗಳಲ್ಲಿ 909 ರಷ್ಟು ಏರಿಕೆ ಕಂಡುಬಂದಿದೆ. ಇಂದಿನವರೆಗೆ 716 ಜನರು ಗುಣಮುಖರಾಗಿದ್ದಾರೆ/ ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಮತ್ತು ಒಟ್ಟು 273 ಜನರು ಮೃತಪಟ್ಟಿದ್ದಾರೆ.   

ಪ್ರಾಥಮಿಕ ವೈದ್ಯಕೀಯ ಮೂಲ ಸೌಲಭ್ಯಗಳ ಸಾಮರ್ಥ್ಯಹೆಚ್ಚಿಸುವತ್ತ ಸರ್ಕಾರ ಗಮನ ಕೇಂದ್ರೀಕರಿಸಿದೆ. ಇದು ಸಮರ್ಪಿತ ಆಸ್ಪತ್ರೆಗಳು, ಐಸೊಲೇಶನ್ ಹಾಸಿಗೆಗಳು, ಐಸಿಯು ಹಾಸಿಗೆಗಳು ಮತ್ತು ಕ್ವಾರಂಟೈನ್ ಸೌಲಭ್ಯಗಳನ್ನು ಒಳಗೊಂಡಿರುತ್ತದೆ12.04.2020 ರಂದು 8356  ಪ್ರಕರಣಗಳಲ್ಲಿ 1671  (ಮಧ್ಯಮ ಮತ್ತು ತೀವ್ರ/ನಿರ್ಣಾಯಕ ಚಿಕಿತ್ಸಾ ಲಕ್ಷಣಗಳನ್ನು ಹೊಂದಿದ 20% ರಷ್ಟು ಖಚಿತಪಡಿಸಲಾದ ಪ್ರಕರಣಗಳು)ಗೆ ಹಾಸಿಗೆಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ದೇಶಾದ್ಯಂತ ಕೋವಿಡ್ – 19 ಕ್ಕೆ ಸೀಮಿತವಾದ 601 ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಸಂಖ್ಯೆ 1,05,980.  ದೇಶಾದ್ಯಂತ ಕೋವಿಡ್ – 19 ಕ್ಕೆ ಸೀಮಿತವಾದ ಆಸ್ಪತ್ರೆಗಳಲ್ಲಿ ಐಸೊಲೇಶನ್ ಹಾಸಿಗೆಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಲಾಗುತ್ತಿದೆ.   

ದೇಶಾದ್ಯಂತ ಕೋವಿಡ್ – 19 ರೋಗಿಗಳ ನಿರ್ವಹಣೆಗಾಗಿ ಮೀಸಲಾದ ಆಸ್ಪತ್ರೆಗಳ ಹೆಚ್ಚೆಚ್ಚು ಸ್ಥಾಪಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳ ಜೊತೆಗೆ ಹಲವಾರು ಖಾಸಗಿ ವಲಯದ ಆಸ್ಪತ್ರೆಗಳು, ಸಾರ್ವಜನಿಕ ವಲಯದ ಘಟಕಗಳು, ಸೇನಾ ಆಸ್ಪತ್ರೆಗಳು, ಭಾರತೀಯ ರೈಲ್ವೇ ಈ ಪ್ರಯತ್ನಗಳಿಗೆ ಕೈಜೋಡಿಸಿವೆ. ದೂರದ ಪ್ರದೇಶಗಳಲ್ಲಿ ವೈದ್ಯಕೀಯ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ಯುದ್ಧೋಪಕರಣಗಳ ಕಾರ್ಖಾನೆ ಮಂಡಳಿ ವಿಶಿಷ್ಟ ಟೆಂಟ್ ಗಳ ನಿರ್ಮಾಣ ಮಾಡಿದೆ

 

ಎಐಐಎಂಎಸ್, ನಿಮ್ಹಾನ್ಸ್ ನಂತಹ ರಾಷ್ಟ್ರೀಯ ಮಹತ್ವವುಳ್ಳ ಸಂಸ್ಥೆಗಳ ಮೂಲಕ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡುವುದು ಕೂಡಾ ಸನ್ನದ್ಧತೆಯ ಒಂದು ಪ್ರಮುಖ ಭಾಗವಾಗಿದೆ. ವೆಂಟಿಲೇಟರ್ ನಿರ್ವಹಣೆ, ಚಿಕಿತ್ಸಕ ನಿರ್ವಹಣೆ, ಸೋಂಕು ತಡೆಗಟ್ಟುವಿಕೆ ನಿಯಂತ್ರಣ, ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ, ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಕ್ಕಾಗಿ ಆನ್‌ಲೈನ್ ತರಬೇತಿ ಮಾಡ್ಯೂಲ್‌ಗಳು ಮತ್ತು ವೆಬಿನಾರ್‌ಗಳನ್ನು ಈ ಸಂಸ್ಥೆಗಳು ಆಯೋಜಿಸಿವೆ. ಮುಂಚೂಣಿಯ ವೈದ್ಯಕೀಯ ಕಾರ್ಯಕರ್ತರನ್ನು ಸಿದ್ಧಪಡಿಸುವುದು, ಅಣಕು ಕಾರ್ಯಾಚರಣೆಗಳನ್ನು ಸಹ ಈ ಸಂಸ್ಥೆಗಳಿಂದ ಆಯೋಜಿಸಲಾಗಿದೆ.  

ಕೋವಿಡ್ – 19 ಕುರಿತಾದ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಕುರಿತು ಎಲ್ಲಾ ಅಧಿಕೃತ ಮತ್ತು ನವೀಕೃತ ಮಾಹಿತಿಗಾಗಿ ದಯವಿಟ್ಟುನಿಯಮಿತವಾಗಿ https://www.mohfw.gov.in/ ಗೆ ಭೇಟಿ ನೀಡಿ.  

ಕೋವಿಡ್ – 19 ಕುರಿತಾದ ತಾಂತ್ರಿಕ ಸಂದೇಹಗಳಿಗೆ technicalquery.covid19[at]gov[dot]in ಗೆ ಈ ಮೇಲ್ ಮಾಡಬಹುದು ಮತ್ತು ಇತರ ಸಂದೇಹಗಳಿಗೆ  ncov2019[at]gov[dot]in ಗೆ ಈ ಮೇಲ್ ಕಳುಹಿಸಬಹುದು.

ಕೋವಿಡ್ – 19 ಕುರಿತಾದ ಯಾವುದೇ ಸಂದೇಹಗಳಿದ್ದಲ್ಲಿ ದಯಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಿಲಾಖೆ ಸಹಾಯವಾಣಿ ಸಂಖ್ಯೆ : +91-11-23978046 ಅಥವಾ 1075 (ಟೋಲ್ ಫ್ರೀ) ಗೆ ಕರೆ ಮಾಡಿ. https://www.mohfw.gov.in/pdf/coronvavirushelplinenumber.pdf ನಲ್ಲಿ ರಾಜ್ಯಗಳ/ ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆಗಳು ಲಭ್ಯ.

*****

 



(Release ID: 1613793) Visitor Counter : 169