ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್–19 ಅಪ್ ಡೇಟ್ಸ್
Posted On:
07 APR 2020 6:21PM by PIB Bengaluru
ಕೋವಿಡ್–19 ಅಪ್ ಡೇಟ್ಸ್
ದೇಶದಲ್ಲಿ ಕೋವಿಡ್-19 ತಡೆಗಟ್ಟುವಿಕೆಗೆ, ಹತೋಟಿಗಾಗಿ ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ತಡೆಗಟ್ಟುವಿಕೆಯ, ಹತೋಟಿಯಲ್ಲಿಡುವ ಮತ್ತು ಶ್ರೇಣೀಕೃತ ಕ್ರಮಗಳನ್ನು ಕೈಗೊಂಡಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕ್ಲಸ್ಟರ್ ರೀತಿಯ ನಿಯಂತ್ರಣ ಮತ್ತು ಹರಡುವಿಕೆಯ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಕಣ್ಗಾವಲು ಕೈಗೊಳ್ಳಲು ತಂತ್ರಜ್ಞಾನದ ನೆರವಿನ ಉಪಕ್ರಮಗಳು, ಕ್ಯಾರೆಂಟೈನ್ ಸೌಲಭ್ಯಗಳ ಮೇಲ್ವಿಚಾರಣೆ, ಶಂಕಿತ ರೋಗಿಗಳ ಆರೋಗ್ಯ ಮತ್ತು ಮನೆ ಕ್ವಾರಂಟೈನ್ ನಲ್ಲಿ ಇರಿಸಲಾಗಿರುವ ಅವರ ಸಂಪರ್ಕದಲ್ಲಿರುವವರನ್ನು ಪತ್ತೆಹಚ್ಚುವುದು, ನಾಗರಿಕರಿಗೆ ಆಯಾ ಕ್ಷಣದ ಮಾಹಿತಿಯನ್ನು ಒದಗಿಸುವುದು, ಹೀಟ್ ಮ್ಯಾಪ್ ಗಳನ್ನು ಬಳಸಿಕೊಂಡು ಮುನ್ಸೂಚಕ ವಿಶ್ಲೇಷಣೆ ಮಾಡುವುದು, ಆಂಬುಲೆನ್ಸ್‌ಗಳ ನೈಜ-ಸಮಯದ ಟ್ರ್ಯಾಕಿಂಗ್‌ನೊಂದಿಗೆ ಮತ್ತು ಸೋಂಕುನಿವಾರಕ ಸೇವೆಗಳು, ವೈದ್ಯರು ಮತ್ತು ಆರೋಗ್ಯ ವೃತ್ತಿಪರರಿಗೆ ವಾಸ್ತವ ತರಬೇತಿ ಮತ್ತು ಟೆಲಿ-ಕೌನ್ಸೆಲಿಂಗ್ ಅನ್ನು ವಿವಿಧ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ.
ಕೋವಿಡ್-19 ನಿರ್ವಹಣೆಗೆ ಪರಿಷ್ಕರಿಸಿದ ತರಬೇತಿ ಸಂಪನ್ಮೂಲಗಳನ್ನು ಮತ್ತು ವೀಡಿಯೊಗಳನ್ನು ಸಚಿವಾಲಯವು ಪ್ರಕಟಿಸಿದೆ. ಇದು ಈ ಕೊಂಡಿಯಲ್ಲಿ ಲಭ್ಯವಿದೆ: https://www.mohfw.gov.in/
ಕೋವಿಡ್-19 ನ ಶಂಕಿತ/ ದೃಢ ಪಡಿಸಿದ ಪ್ರಕರಣಗಳ ಸೂಕ್ತ ನಿರ್ವಹಣೆ ಕುರಿತ ಮಾರ್ಗದರ್ಶನದ ದಸ್ತಾವೇಜನ್ನು ಸಹ ನೀಡಲಾಗಿದೆ, ಇದು ಇಲ್ಲಿ ಲಭ್ಯವಿದೆ:
https://www.mohfw.gov.in/pdf/FinalGuidanceonMangaementofCovidcasesversion2.pdf
ಕೋವಿಡ್-19 ರೋಗಿಗಳ ಆರೈಕೆಗೆ ಸೂಕ್ತವಾದ ಕೋವಿಡ್-19 ಮೀಸಲಾದ ಸೌಲಭ್ಯವನ್ನು ಗುರುತಿಸಲು ಚಿಕಿತ್ಸೆಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಕಾರ್ಯವಿಧಾನವಾಗಿ ವಿವಿಧ ರೀತಿಯ ಕೋವಿಡ್-19 ಪ್ರಕರಣಗಳಿಗೆ ಮೂರು ರೀತಿಯ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು:
1. ಕೋವಿಡ್ ಕೇರ್ ಸೆಂಟರ್ (ಸಿಸಿಸಿ):
ಎ. ಸೌಮ್ಯ ಅಥವಾ ತುಂಬಾ ಸೌಮ್ಯವಾದ ಪ್ರಕರಣಗಳು ಅಥವಾ ಕೋವಿಡ್ ಶಂಕಿತ ಪ್ರಕರಣಗಳು.
ಬಿ. ತಾತ್ಕಾಲಿಕ (ಮೇಕ್ ಶಿಫ್ಟ್) ಸೌಲಭ್ಯಗಳು. ಸಾರ್ವಜನಿಕ ಮತ್ತು ಖಾಸಗಿ ವಸತಿ ನಿಲಯಗಳು, ಹೋಟೆಲ್‌ಗಳು, ಶಾಲೆಗಳು, ಕ್ರೀಡಾಂಗಣಗಳು, ವಸತಿಗೃಹಗಳಲ್ಲಿ ಇವುಗಳನ್ನು ಸ್ಥಾಪಿಸಬಹುದು.
ಸಿ. ಅಗತ್ಯವಿದ್ದರೆ, ಅಸ್ತಿತ್ವದಲ್ಲಿರುವ ಕ್ವಾರಂಟೈನ್ (ಸಂಪರ್ಕತಡೆ) ಸೌಲಭ್ಯಗಳನ್ನು ಸಹ ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತಿಸಬಹುದು
ಡಿ. ಅಗತ್ಯವಾಗಿ ಒಂದು ಅಥವಾ ಹೆಚ್ಚಿನ ನಿಯೋಜಿತ ಕೋವಿಡ್ ಆರೋಗ್ಯ ಕೇಂದ್ರಗಳಿಗೆ ಮತ್ತು ಉಲ್ಲೇಖಿತ ಉದ್ದೇಶಕ್ಕಾಗಿ ಕನಿಷ್ಠ ಒಂದು ನಿಯೋಜಿತ ಕೋವಿಡ್ ಆಸ್ಪತ್ರೆಗೆ ಜೋಡಿಸಬೇಕು
2. ನಿಯೋಜಿತ ಕೋವಿಡ್ ಆರೋಗ್ಯ ಕೇಂದ್ರ (ಡಿಸಿಹೆಚ್ ಸಿ):
ಎ. ಪ್ರಾಯೋಗಿಕವಾಗಿ ಮಧ್ಯಮ ಎಂದು ನಿಯೋಜಿಸಲಾದ ಎಲ್ಲಾ ಪ್ರಕರಣಗಳಿಗೆ ಸಂಪೂರ್ಣ ಆರೈಕೆಯನ್ನು ನೀಡಬೇಕು
ಬಿ. ಇವುಗಳು ಸಂಪೂರ್ಣ ಆಸ್ಪತ್ರೆ ಅಥವಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಪ್ರವೇಶ / ನಿರ್ಗಮನ ಹೊಂದಿರುವ ಪ್ರತ್ಯೇಕ ಭಾಗದಲ್ಲಿ ಆಗಿರಬೇಕು.
ಸಿ. ಈ ಆಸ್ಪತ್ರೆಗಳು ಸದಾ ಕಾಲ ಆಕ್ಷಿಜನ್ (ಆಮ್ಲಜನಕ) ದೊರಕುವ ಬೆಡ್ ಗಳನ್ನು ಹೊಂದಿರಬೇಕು.
3. ನಿಯೋಜಿತ ಕೋವಿಡ್ ಆಸ್ಪತ್ರೆ (ಡಿಸಿಎಚ್):
ಎ. ಪ್ರಾಥಮಿಕವಾಗಿ ತೀವ್ರವಾಗಿ ನಿಯೋಜಿಸಲ್ಪಟ್ಟವರಿಗೆ ಸಮಗ್ರ ಆರೈಕೆಯನ್ನು ನೀಡತಕ್ಕದ್ದು.
ಬಿ. ಇವುಗಳು ಸಂಪೂರ್ಣ ಆಸ್ಪತ್ರೆ ಅಥವಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಪ್ರವೇಶ / ನಿರ್ಗಮನ ಹೊಂದಿರುವ ಪ್ರತ್ಯೇಕ ಭಾಗದಲ್ಲಿ ಆಗಿರಬೇಕು.
ಸಿ. ಆಕ್ಸಿಜನ್ ಪೋರೈಕೆಯಿರುವ, ಸಂಪೂರ್ಣ ಸುಸಜ್ಜಿತ ಐಸಿಯುಗಳು, ವೆಂಟಿಲೇಟರ್ಗಳು ಮತ್ತು ಹಾಸಿಗೆಗಳು.
ಈಗ, 4421 ದೃಢಪಡಿಸಿದ ಪ್ರಕರಣಗಳು ಮತ್ತು 117 ಸಾವುಗಳು ವರದಿಯಾಗಿವೆ. ಚೇತರಿಕೆಯ ನಂತರ 326 ಜನರನ್ನು ಗುಣಪಡಿಸಲಾಗಿದೆ/ ಬಿಡುಗಡೆ ಮಾಡಲಾಗಿದೆ.
ಕೋವಿಡ್-19 ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಾರರ ಎಲ್ಲಾ ಅಧಿಕೃತ ಮತ್ತು ನವೀಕರಿಸಿದ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಈ ಜಾಲತಾಣಕ್ಕೆ ಭೇಟಿ ನೀಡಿ: https://www.mohfw.gov.in
ಕೋವಿಡ್ ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technicalquery.covid19[at]gov[dot]in ಮತ್ತು ಇತರ ಪ್ರಶ್ನೆಗಳಿಗೆ ncov2019[at]gov[dot]in ಗೆ ಇಮೇಲ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆ: + 91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19 ಸಂಬಂಧಿತ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1612107)
Visitor Counter : 230
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam